• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ ರಘುನಾಥ ಅಂಕಣ; ರಾತ್ರಿಯ ನಿಚ್ಚಳ ಆಕಾಶದಲ್ಲಿ ಚುಕ್ಕಿಗಳು, ಬೆಳದಿಂಗಳು, ತಂಗಾಳಿ ಬರುತ್ತೆ ಕಂದ...

By ಸ ರಘುನಾಥ, ಕೋಲಾರ
|

ಮಾತು ಜಾರಿತೇನೋ ಬೋಡ ಅಂದ ಪಿಲ್ಲಣ್ಣ. ಜಾರದ್ದು ಅಂತ ಏಕಂತಿ, ಬಂದಿದ್ದು ಅನ್ನು. ಬರಬೇಕಿತ್ತು ಬಂತು. ನೀನು ಕೊಂಚ ತಡ ಮಾಡಿದ್ದರೆ ನಾನೋ ಮುನೆಕ್ಕನೋ ಆಡುತ್ತಿದ್ದುದ್ದು ಅದನ್ನೇ. ಅಪ್ಪಯ್ಯ ಕಿವಿಗೆ ಬಿದ್ದಿದ್ದಂತೂ ಒಳ್ಳೆಯದೇ ಅಂದ ಬೋಡೆಪ್ಪ. ಅಪ್ಪಯ್ಯ ರಾತ್ರಿಗೆ ಬಾ ಅಂದಿದ್ದಾನಲ್ಲ ಹೇಗೆ? ಅಂದ ಪಿಲ್ಲಣ್ಣ. ಹೋಗಾಣ. ಕದ್ದಿದೇವ, ಕೊಂದಿದ್ದೆವ? ಆದರೆ ನಾವಾಗೇ ಯಾವ ಮಾತೂ ತೆಗೆಯೋದೂ ಬೇಡ. ಅಲ್ಲಿ ಬರೋ ಮಾತನ್ನ ನೋಡಿಕೊಂಡು ಮಾತಾಡಾಣ ಅಂದ ಬೋಡೆಪ್ಪ.

   Corona count : Stats of the country in last 24 hours | Oneindia Kannada

   ಹೊಲದ ಕಡೆ ಹೋಗಿದ್ದು ಸಾಯಂಕಾಲಕ್ಕೆ ಗುಡಿ ಹತ್ತಿರ ಸಿಕ್ಕುತ್ತೇನೆ. ಅಲ್ಲಿಂದ ನಿಮ್ಮನೆಗೆ ಅಂದ ಮೋಟಪ್ಪ ತನ್ನ ಹೊಲದ ದಾರಗೆ ಹೊರಳಿದ. ನರಸಿಂಗ, ಸುನಂದಾ ಪ್ರೀತಿಸಿದ್ದರೆ ತಪ್ಪೇನಿಲ್ಲ. ಅಪ್ಪಯ್ಯ, ಅಮ್ಮಯ್ಯ ಮದುವೆಗೆ ಅಡ್ಡವಾಗೋರೇನಲ್ಲ. ಮುನೆಕ್ಕನಿಗೂ ಸಂತೋಷಾನೆ. ಆದರೆ ಪಿಲ್ಲಣ, ಸೋಮೇಶನಿಗೆ ಪಾತ್ರ ಕೊಡೋದಕ್ಕು, ಸುನಂದಾಳಿಗೂ ಥಳುಕು ಹಾಕಿದದ್ದರ ಮರ್ಮವೇನು? ಮರ್ಮವೇನೂ ಕಾಣಿಸಲಿಲ್ಲ. ಸಿಟ್ಟಿನ ಭರದಲ್ಲಿ ಬಂದಿರಬಹುದು. ಆದರೆ ಅವರೊಂದಿಗೆ ಮುನೆಕ್ಕನೆದ್ದಳಲ್ಲ. ಅದರ ಅರ್ಥ? ಹುಡುಗರ ಮನಸ್ಥಿಯೇ ಅವಳದೂ ಇದ್ದೀತೆ?

   ಸ ರಘುನಾಥ ಅಂಕಣ; ಅವನಿಗೆ ಪಾರ್ಟೂ ಕೊಡು, ಸುನಂದಾಳನ್ನೂ ಕೊಟ್ಟುಬಿಡು...

   ಅಪ್ಪಯ್ಯ ಮನೆಗೆ ಹೋಗಿ ನಡೆದದ್ದನ್ನು ಅಮ್ಮಯ್ಯನಿಗೆ ಹೇಳುವವನೆ. ಆಗ ಅವಳ ಪ್ರತಿಕ್ರಿಯೆಯೇನು? ಇವನ ಪ್ರತಿಕ್ರಿಯೆಯನು? ನರಸಿಂಗ ಮನೆಗೆ ಹೋದಾಗ ಇಬ್ಬರ ಪ್ರತಿಕ್ರಿಯೆ ಏನು? ಪಾತ್ರ ಹಂಚಿಕೆಯಲ್ಲಿ ಸುನಂದಾಳ ಪ್ರಸ್ತಾಪ ಹೇಗಾದೀತು? ಮುನೆಕ್ಕ ಹೋಗಿ ಹೇಳಿದ ಮೇಲೆ ಅವಳ ಮನಸ್ಸು ಹೇಗೆಲ್ಲ ಯೋಚಿಸೀತು? ಸಂಜೆಗೆ ಇದಾವುದರ ನೆರಳಿಲ್ಲದೆ ಪಾರ್ಟು ಹಂಚಿಕೆ ಕ್ರಿಯೆ ಸುಸೂತ್ರ ನಡೆದೀತೆ?

   ಅಪ್ಪಯ್ಯ ಮಾತಿಲ್ಲದೆ ಮುಂದೆ ಹೆಜ್ಜೆ ಹಾಕುತ್ತಿದ್ದ. ಅವನ ಹಿಂದೆ ಮುನೆಕ್ಕ. ಪಿಲ್ಲಣ್ಣ ಸುನಂದಾ, ನರಸಿಂಗರಾಯನನ್ನು ಕುರಿತು ಹೇಳಿದ್ದರಲ್ಲಿ ಅಂತಹ ದೊಡ್ಡದಾದ ತಪ್ಪೇನು ಹುಡುಕುವವನಲ್ಲ. ಅವನನ್ನು ತಾನು ಬಲ್ಲೆ. ಅದು ಮನೆಯೊಳಗಿನಿಂದ ಬಂದಿರಬೇಕಿತ್ತು. ಹೊರಗಿನಿಂದ ಬಂದಿತು ಎಂಬ ಅಸಮಾಧಾನ, ಕೊಂಚ ಗೊಂದಲವೀದ್ದೀತಷ್ಟೆ.

   'ಪಾರ್ಟನ್ನೂ ಕೊಡು, ಸುನಂದಾಳನ್ನೂ ಕೊಟ್ಡುಬಿಡು' ಎಂದು ಪಿಲ್ಲಣ್ಣ ಹಾಕಿದ ಗಂಟು ಅವನನ್ನು ನೋಯಿಸಿರುವುದಂತೂ ನಿಜ. ಪಿಲ್ಲಣ್ಣನ ಮಾತನ್ನು ಬೋಡೆಪ್ಪ ಬೆಂಬಲಿದ್ದರಲ್ಲಿ ಒಂದು ಅರ್ಥವಿದೆ. ಆದರೆ ನಾನು ಬೆಂಬಲಿಸಿದ್ದು ತೀರಾ ದುಡುಕು. ಇದು ಅಪ್ಪಯ್ಯನನ್ನು ಹೆಚ್ಚು ಚುಚ್ಚಿರುತ್ತೆ. ಅವನಲ್ಲಿ ಕ್ಷಮೆ ಕೇಳಬೇಕೆಂದುಕೊಂಡು ಬಿರಬಿರ ಹೆಜ್ಜೆ ಹಾಕಿ ಅವನ ಮುಂದೆ ಕೈಮುಗಿದು ಕ್ಷಮಿಸು ಅಪ್ಪಯ್ಯ. ಆವೇಶಕ್ಕೆ ಸಿಕ್ಕಿ ಹುಡುಗರ ಜೊತೆ ಸೇರಿಬಿಟ್ಟೆ ಅಂದಳು. ಕ್ಷಮೆಯ ಮಾತೇಕೆ? ಇದಾವುದನ್ನೂ ಸುನಂದಾಳಿಗೆ ತಿಳಿಸೋದು ಬೇಡ. ಆ ಎರಡು ಮಂಗಗಳಿಗೂ ಹೀಗೆಂದೇ ಹೇಳು. ಸಾಯಂಕಾಲ ಆಗಿ ರಾತ್ರಿ ಹುಟ್ಟಬೇಕು ಅಂದ.

   ಸ ರಘುನಾಥ ಅಂಕಣ; ಆ ಒಂದು ಸಂಜೆ, ಗುಡಿಯ ಮುಂದೆ...

   ನೆಲ ತಾನು ಏಳದಂತೆ ಹಿಡಿದುಬಿಟ್ಟಿದೆಯೇನೊ ಅನ್ನುವಂತೆ ಕೂತುಬಿಟ್ಟಿದ್ದ ನರಸಿಂಗರಾಯ. ಪಿಲ್ಲಣನ ಮಾತು, ಬೋಡೆಪ್ಪ ಬೆಂಬಲಿಸಿ ಮೇಲೆದ್ದಿದ್ದು ಅವನಿಗೆ ದೊಡ್ಡದಾಗಿರಲಿಲ್ಲ. ಅಪ್ಪ ನನ್ನನ್ನು ಬಲ್ಲ, ನಾನು ಅವನನ್ನು ಬಲ್ಲೆ. ಅವನೂ ಹೀಗೆಯೆ. ಆದರೆ ಎಲ್ಲ ಬಲ್ಲ ಮುನೆಕ್ಕ? ಅದೇ ನೋವು. ಒಬ್ಬರ ಹೃದಯವನ್ನು ಒಬ್ಬರು ಬಲ್ಲ ಗೆಳೆಯರು. ಅವರು ಸುನಂದಾಳನ್ನು, ಅದೂ ಹೀಗೆ ಎಳೆದದ್ದು ಅತೀವ ನೋವು ತಂದಿತು. ಹೊಡೆಯಲು ಎದ್ದಿದ್ದು ಸಣ್ಣತನ ಅನ್ನಿಸಿತು. ಇದಾವುದೂ ಸುನಂದಾಳಿಗೆ ತಿಳಿಯುವುದು ಬೇಡ. ಸಾಯಂಕಾಲ ಯಾವ ವಕ್ರವೂ ಇಲ್ಲದೆ ನಾಟಕದ ಮಾತು ನಿರ್ವಿಘ್ನ ಸಾಗಲಿ ಅಂದುಕೊಂಡ.

   ಹಸಿವೆಯ ಬೆಕ್ಕು ಮಿಯಾವ್ ಅಂದರೂ ಮೇಲೇಳುವ ಮನಸ್ಸಾಗಲಿಲ್ಲ. ಹಸಿವೆ, ದಣಿವು ಕಣ್ಣಿಗೆ ಕವಿಯಿತು. ಯಾರೋ ತಲೆಗೂದಲಲ್ಲಿ ಬೆರಳಾಡಿಸುತ್ತಿದ್ದಾರೆ ಅನ್ನಿಸಿ ಕಣ್ಣು ತರೆದ. ಅಮ್ಮ ನಕ್ಕಳು. ಹುಚ್ಚುಮುಂಡೇದೆ, ಇಷ್ಟಕ್ಕೆಲ್ಲ ಹಿಂಜರಿತಾರ? ಪಿಲ್ಲಿಗನು, ಬೋಡನು ಹೀಗೆ ಆಡೋದೇನು ನಿನಗೆ ಹೊಸದ? ಸಾಯಂಕಾಲಕ್ಕೆ ಆಗಬೇಕಾದ್ದನ್ನು ನೋಡು. ರಾತ್ರಿಗೆ ನಿಚ್ಚಳ ಆಕಾಶದಲ್ಲಿ ಚುಕ್ಕಿಗಳು, ಬೆಳದಿಂಗಳು, ತಂಗಾಳಿ ಬರುತ್ತೆ ಕಂದ. ಎದ್ದು ಬಾ. ಹೊಟ್ಟೆಗೊಂದು ತುತ್ತು ಹಾಕಿಕೊ ಎಂದ ಅಮ್ಮಯ್ಯ ಕೈಹಿಡಿದು ಕರೆದುಕೊಂಡು ಮನೆಯತ್ತ ಹೆಜ್ಜೆ ಹಾಕಿದಳು.

   English summary
   Narasingaraya depressed by the words of his friends while sharing drama parts,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X