ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದುವೆಗಿನ್ನು ಸಮಯವಿದೆಯೆಂದು ಅಪ್ಪ-ಅಮ್ಮನೂ ರೇಗಿಸುವರು ವಸಂತ

By ಸ.ರಘುನಾಥ, ಕೋಲಾರ
|
Google Oneindia Kannada News

ಗಂಧ ಸುಗಂಧರಾಜ ವಸಂತ

ಕುಶಲವೆ?

ಕಾಗದ ಮುಗಿಯದೋ ಅನ್ನಿಸುವಂತಿದೆ. ಓದಿ, ಓದುತ್ತಲೇ ಇದ್ದೇನೆ. ಇನ್ನೆಷ್ಟು ದಿನ ಮಗಳು ಈ ಮನೆಯಲ್ಲಿ ಎಂದು ಅಮ್ಮ ಒಂದೂ ಕೆಲಸ ಹೇಳುತ್ತಿಲ್ಲ: ಮಾಡಲಂತೂ ಬಿಡುತ್ತಿಲ್ಲ. ಅಪ್ಪನದಂತೂ ಬರೀ ಉಪಚಾರವೇ. ನಡುನಡುವೆ ನಿನ್ನ ಮಾತೇ. ನಮ್ಮ ಅಳಿಯನಂತೂ ಚೊಕ್ಕಟ ಬಂಗಾರ ಅನ್ನುತ್ತಲೇ ಇರುವ. ನನಗಾಗ ಕೋಪ. ನಾನೇನು ಹಿತ್ತಾಳೆಯೆ ಅನ್ನುವೆ.

ಆಗ ಬಳಿ ಬಂದು ಮುಡಿ ಮೂಸಿ, ತಲೆ ನೇವರಿಸಿ, ನೀನು ಆ ಬಂಗಾರಕ್ಕೆ ಮೆರುಗು ಮಗಳೇ ಎಂದು ಕಣ್ಣು ತುಂಬಿಕೊಳ್ಳುವ. ನಿನ್ನ ಬಿಟ್ಟಿರಲಾರೆ, ಇವರ ಅಗಲಲಾರೆ ಅನ್ನಿಸುವುದು. ಎಂಥ ಸಂದಿಗ್ಧತೆ ಹೆಣ್ಣ ಬಾಳಿನಲ್ಲಿ? ಆದರೂ ಆಯ್ಕೆ ನಿನ್ನತ್ತಲೇ. ತವರಿನವರ ಪ್ರೀತಿ ಸದಾ ಹಸುರೇ ಎಂಬ ಸಮಾಧಾನದಲ್ಲಿ ಎಷ್ಟು ಸುಖ!

ಓ ಮಂಚವೇ ಮೊದಲ ರಾತ್ರಿ ಕಳೆದವರ ಅದೆಷ್ಟು ಮಂದಿಯ ಕಂಡಿರುವೆ, ಹೇಳುಓ ಮಂಚವೇ ಮೊದಲ ರಾತ್ರಿ ಕಳೆದವರ ಅದೆಷ್ಟು ಮಂದಿಯ ಕಂಡಿರುವೆ, ಹೇಳು

ಪ್ರೀತಿ, ತುಂಟತನ ತುಂಬಿದ ನಿನ್ನ ನುಡಿಗಳು ನನ್ನ ಮನಸಿನಲ್ಲಿ ಉಕ್ಕಿಸಿದ ಭಾವನೆಗಳನ್ನು ಮಾತುಗಳಲ್ಲಿ ಹೇಳಲಾಗದೆ ಸೋಲುತ್ತಿರುವೆ. ನೀನಿದ್ದಿದ್ದರೆ ಎದುರಲ್ಲಿ ಅಪ್ಪಿ ಮುದ್ದಿಸಿ, ನನ್ನ ಭಾವನೆಗಳಿಗೆ ಅರ್ಥ ತುಂಬುತ್ತಿದ್ದೆ. ಎಲ್ಲಿ ಹೋದಾವು ಎದೆಯಿಂದ ದೂರ? ನಿನ್ನ ಕೂಡುವ ಸಮಯಕ್ಕೆ ಕಾಯ್ದಿಟ್ಟ ಭಾವಗಳು ಹರಿಯುವುವು ಮಳೆಗಾಲದ ಹೊಳೆಯಾಗಿ. ಎದೆಯಲ್ಲಿ ಸದಾ ವಸಂತಗಾನ.

Love letter series: Send me the horse to reach you with lightening speed

ದಿನವೊಂದಕ್ಕೆ ನಲವತ್ತೆಂಟು ಗಂಟೆ ಅನಿಸಿದ್ದು ಮುಹೂರ್ತ ನಿಶ್ಚಯವಾಗಿದೆಯೆಂದು ಅಪ್ಪ ತಿಳಿಸಿ, ನಿನ್ನ ಕಾಗದವೂ ಬಂದ ಮೇಲೆ. ಗೋಡೆಯಲಿ ದೊಡ್ಡ ಗಡಿಯಾರವಿದ್ದರೂ ಅಮ್ಮನನ್ನು ಕೇಳುವೆ 'ಟೈಂ ಎಷ್ಟಾಯಿತು?' ಎಂದು. ಅವಳದೂ ತುಂಟತನವೇ. ಗಡಿಯಾರ ನಿಂತಿದೆ. ಅದು ಚಲಿಸುವುದಿನ್ನು ನೀನು ಹಸೆಯೇರಿ ವಸಂತನ ಪಕ್ಕ ಕುಳಿತಾಗಲೇ.

ನಿಮ್ಮ ನೆನಪೇ ಹಿಂಡುವುದು ಹಗಲಿನಲಿ, ಇರುಳಿನಲಿ ಕಾಡುವುದು ನಿಮ್ಮ ಕನಸುನಿಮ್ಮ ನೆನಪೇ ಹಿಂಡುವುದು ಹಗಲಿನಲಿ, ಇರುಳಿನಲಿ ಕಾಡುವುದು ನಿಮ್ಮ ಕನಸು

ಅಪ್ಪನೇನು ಕಡಿಮೆಯಂತೀ. ಮದುವೆ ದಿನಕ್ಕಿನ್ನು ಆರು ತಿಂಗಳಿದೆ ಮಗಳೆ. ನೀನು ಹೂಂ ಅನ್ನು ಈಗಲೇ ಬಿಟ್ಟುಬರುವೆ ನಿನ್ನ ಅತ್ತೆ ಮನೆಗೆ. ವಾರವನ್ನು ತಿಂಗಳುಗಳಾಗಿಸುತ್ತಾನೆ ಅಪ್ಪ. ಅವರ ಮಾತು ನನ್ನ ಪಾಲಿಗಂತೂ ನಿಜವೇ ವಸಂತ. ಸಮಯ, ದಿನಗಳು ಅತಿ ಅತೀ ನಿಧಾನ ಚಲಿಸುತ್ತಿವೆ, ಚಲನೆ ಗೋಚರವಾಗದ ಭೂಮಿಯಂತೆ. ಹೀಗನಿಸುವಂತೆ ಮಾಡಿರುವವನು ನೀನೇ.

ಹಗಲು ಓದುವ ನಿನ್ನೋಲೆಗಳು ಇರುಳಲ್ಲಿ ಹಾಡುಗಳಾಗಿ ಕೇಳಿಸುವುವುವೆಂದರೆ ನಂಬು. ಸುಡು ಬಿಸಿಲಿನಂತೆ ಬೆಳದಿಂಗಳನ್ನು ಹರಡುವ ಚಂದ್ರನನ್ನು ಕಠಿಣಾತ್ಮನೆಂದು ನಿಂದಿಸಿದ್ದು ಅದೆಷ್ಟೋ ದಿನಗಳು. ಬೇಗ ಬೇಗ ಹೋಗಿ ಸೂರ್ಯನನ್ನು ಕಳಿಸು ಎಂದು ಬೇಡಿದ್ದೇನೆ. ಅಷ್ಟು ನಿಧಾನ ನಡೆಯುತ್ತೀಯಲ್ಲ, ನೀನೇನು ಕುಂಟನೇ? ಬಿರಬಿರ ಹೆಜ್ಜೆ ಹಾಕಿ ಚಂದ್ರನನ್ನು ಕಳಿಸಬಾರದೆ ಎಂದು ನಾನು ಸೂರ್ಯನ ನಿಂದಿಸದ ಹಗಲು ಇಲ್ಲವೆನ್ನು. ಅದರೆ ಅವರಿಬ್ಬರೂ ಕಿವುಡರೇ ನನ್ನ ಪಾಲಿಗೆ. ಹೀಗೆ ಕಳೆಯುತ್ತಿದೆ ಪ್ರಿಯ ವಸಂತ ಈಗ ನನ್ನ ದಿನಗಳು. ನಿನಗೆ ಈ ಸಂಕಟವಿಲ್ಲದಿದೆಯೆ?

ಬೆನ್ನ ಮೇಲೆ ದಿನಗಳ ಹೊತ್ತು

ಗಾಳಿ ವೇಗದಲ್ಲಿ ಓಡುವಂಥ

ಕುದುರೆಯ ಕಳಿಸೊ ಅರಸ ಬೇಗ

ತಾಳೆಲಾರೆನೊ ವಿರಹದ ನೋವ

English summary
This is the love letter series by Oneindia columnist Sa Raghunatha. Here lady love Shakuntala writes letter to Vasanta to send a horse to reach him at the earliest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X