ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ ರಘುನಾಥ ಅಂಕಣ; ಸುನಂದಾಪಹರಣ...

By ಸ ರಘುನಾಥ, ಕೋಲಾರ
|
Google Oneindia Kannada News

ನಾಟಕಕ್ಕೆ ಮುಂಚೆ ನಡೆದುಕೊಂಡು ಬಂದ ಸಂಪ್ರಾಯದಂತೆ ಗೆಜ್ಜೆಪೂಜೆ. ಅದು ರಂಗಪ್ರವೇಶಕ್ಕೆ ಪೂರ್ವ ಸಿದ್ಧತೆ. ಎಲ್ಲ ನಟರ ಹಾಜರಿ ಕಡ್ಡಾಯ. ವಾದ್ಯಗಳ ಸಹಿತ ಓರೆಕೋರೆಗಳನ್ನು ತಿದ್ದಿಕೊಳ್ಳುವ ಪೂರ್ಣಪ್ರಮಾಣದ ಅಂತಿಮ ತಾಲೀಮು. ಅರೆಬರೆ ಮೇಕಪ್ಪು ಇರುವುದೂ ಉಂಟು. 'ಇಟ್ನೊತ್ತು' (ರಾತ್ರಿಯೂಟದ ಸಮಯ) ಮುಗಿದಾಗ ಶುರುವಾಗುವುದು. ಹಾಗೆಯೇ ಆಯಿತು.

ಗಣಪತಿ ಪೂಜೆ ಮುಗಿದು, ಸೂತ್ರದಾರ, ಸಖಿ ಪ್ರವೇಶವಾಯಿತು. ಕಥಾ ಸಂದರ್ಭದೊಂದಿಗೆ ಪಾತ್ರಗಳ ಪರಿಚಯ ಮುಗಿದು ಸರಿಯುತ್ತಿದ್ದಂತೆ ಶಕುಂತಲೆ ತನ್ನ ಸಖಿಯೊರಡನೆ ಪ್ರವೇಶಿಸುವಳು.

 Kidnap Of Sunanda After Drama Rehearsel

 ಸ ರಘುನಾಥ ಅಂಕಣ; ಶಿವರಾತ್ರಿ ದಿನ 'ಲೋಕಲ್' ಶಕುಂತಲೆ ಎಂಬ ನಾಟಕ ಸ ರಘುನಾಥ ಅಂಕಣ; ಶಿವರಾತ್ರಿ ದಿನ 'ಲೋಕಲ್' ಶಕುಂತಲೆ ಎಂಬ ನಾಟಕ

ಶಕುಂತಲೆ: ಪ್ರಿಯವ ನುಡಿವ ಪ್ರಿಯಂವದೆ
ಅನುಪಮ ಗುಣವತಿ ಅನಸೂಯೆ
ಕೊಳದ ಅಲೆಯ ಶ್ರುತಿಯ ಹಿಡಿದು
ಬನದ ಸುಮಕೆ ಭ್ರಮರ ಬರುವ ಗೀತೆ ಹಾಡಿರೆ

ಪ್ರಿಯಂವದೆ: ನೈದಿಲೆಯ ದಳದ ಮೇಲೆ
ಮಾಂದಳಿರ ಲೇಖನಿಯಲಿ
ಬೆಳದಿಂಗಳ ಶಾಹಿ ಮಾಡಿ
ಪ್ರಣಯ ಗೀತೆ ರಚಿಸುತಿರಲು ಚಂದಿರ

ಅನಸೂಯೆ: ಮೂರು ಗಿಳಿಯ ಬಂಡಿಯೇರಿ
ಜಲ್ಲೆಕಬ್ಬು ಬಿಲ್ಲು ಹಿಡಿದು
ಬಾಣವೆಸೆಯೆ ಪ್ರಣಯಗೀತೆ
ಆದುದಲ್ಲೆ ವಿರಹಗೀತೆ.

ಶಕುಂತಲೆ: ಭ್ರಮರ ಭ್ರಮಣ ನಾದ
ಯಾವ ಸುಮವು ಕರೆದುದೊ?

ಅನಸೂಯೆ: ಇರುಳು ಕಣೆ ಮರುಳು ಗೆಳತಿ
ಜೊನ್ನವೇನು ಜೇನೆ?

ಪ್ರಿಯಂವದೆ: ವಿಕಸಿತ ನಿನ್ನ ಎದೆಯ ಸುಮಗಂಧಕೆ
ಬಾನ ಕರಿಮುಗಿಲು ದುಂಬಿಯಾದುದೊ

ಅನಸೂಯೆ: ಇರುಳು ಕೂಡ ಹಗಲು ಎನಿಸಿತೊ
ಯಾರ ಎದೆಗೆ ನಿನ್ನ ಸುಳಿವು ಕೊಡುವುದೊ?

ಸ ರಘುನಾಥ ಅಂಕಣ; ಸುನಂದಾಳ ಸೊಂಟ ಬಳಸಿ ಕುಣಿವ ಆಸೆಗೆ ಬಿದ್ದು ಬಣ್ಣ ಕಳೆದುಕೊಂಡ ಕೆಂಪರಾಜಸ ರಘುನಾಥ ಅಂಕಣ; ಸುನಂದಾಳ ಸೊಂಟ ಬಳಸಿ ಕುಣಿವ ಆಸೆಗೆ ಬಿದ್ದು ಬಣ್ಣ ಕಳೆದುಕೊಂಡ ಕೆಂಪರಾಜ

ಸಖಿ ಸೂತ್ರಧಾರರ ಕಥನ ರೀತಿ, ಇವರ ಗಾನಭಾವ ಲಾಸ್ಯ ನರಸಿಂಗರಾಯನಿಗೆ ತೃಪ್ತಿ ತಂದಿತು. ರಾತ್ರಿ ಎರಡು ಗಂಟೆಯವರೆಗೆ ನಡೆದ ತಾಲೀಮಿನಿಂದ ನಾಟಕ ನಾಲ್ಕೂರಿನ ಮಾತಾಗುವುದು ನಿಜ ಎಂದು ನರಸಿಂಗರಾಯ ಮತ್ತು ಹಿರಿಯರಲ್ಲಿ ವಿಶ್ವಾಸ ಹುಟ್ಟಿಸಿತು. ಸುನಂದ ಮುನೆಕ್ಕನೊಡನೆ ಮನೆಯತ್ತ ಹೊರಟಳು.

ಅರ್ಧ ದಾರಿಯಲ್ಲಿರುವಾಗ ಕಾರೊಂದು ಬರ್ರನೆ ಬಂದು ಅವರ ಪಕ್ಕ ನಿಂತಿತು. ದಡಕ್ಕನೆ ಹೊರಬಂದ ಇಬ್ಬರು ಮುನೆಕ್ಕನನ್ನು ಜೋರಾಗಿ ದೂಡಿ, ಸುನಂದಳನ್ನು ಎಳೆದು ಕಾರಿಗೆ ತುಂಬಿಕೊಂಡ ಕೂಡಲೆ ಕಾರು ವೇಗವಾಗಿ ಹಿಂದಕ್ಕೆ ಹೋಗಿ ಉತ್ತರದ ದಾರಿಯಲ್ಲಿ ಹೊರಟಿತು. ಮುನೆಕ್ಕನ ಕೂಗಾಟ, ಕಾರಿನ ಸದ್ದು ಕೇಳಿ ಮನೆಗಳತ್ತ ಹೊರಟಿದ್ದವರು ಓಡಿ ಬಂದರು. ಮುನೆಕ್ಕ ಒಂದೇ ಉಸಿರಿನಲ್ಲಿ ನಡೆದುದನ್ನು ಹೇಳಿ ಬಿಕ್ಕತೊಡಗಿದಳು.

ಆ ದಾರಿಯಲ್ಲಿ ಕಾರು ಊರಿನಂಚಿನವರೆಗೆ ಹೋಗಬಹುದಿತ್ತು. ಅಲ್ಲಿಂದ ಪೂರ್ವಕ್ಕೆ ತಿರುವು ಪಡೆದು ಊರಿನ ಒಳಗಿನಿಂದಲೆ ರಸ್ತೆಗೆ ಹೋಗಬೇಕಿತ್ತು. ದಾರಿ ತಪ್ಪಿದರು ಹಲಾಲಕೋರರು. ಬೇಗ ಓಡಿ ಅಡ್ಡಗಟ್ಟಿ ಎಂದ ಬೀರಣ್ಣ. ಕೆಲವರು ಅತ್ತ ಓಡಿದರು. ಅಷ್ಟರಲ್ಲಿ ಉಳಿದವರು ದೊಣ್ಣೆಗಳನ್ನು ತರಲು ಓಡಿದರು. ಈ ಗದ್ದಲಕ್ಕೆ ಮನೆಗಳಲ್ಲಿದ್ದವರು ಹೊರಬಂದರು.

ಕಾರು ಜನರ ಮೇಲೆಯೇ ನುಗ್ಗುವಂತೆ ಬರುತ್ತಿತ್ತು. ಜನರ ದೊಡ್ಡ ಗುಂಪಾದನ್ನು ಕಂಡ ಡ್ರೈವರನ ತೊಡೆಯಲ್ಲಿ ನಡುಕ ಹುಟ್ಟಿ, ನಿಯಂತ್ರಣ ತಪ್ಪಿ, ಕಾರು ಮಲ್ಲಪ್ಪನ ಅಂಗಳದಲ್ಲಿದ್ದ ಗಾಣದ ಕಲ್ಲಿಗೆ ಡಿಕ್ಕಿ ಹೊಡೆದು ನಿಂತಿತು. ಜನರ ಗುಂಪಿನಿಂದ ತಪ್ಪಿಸಿಕೊಳ್ಳುವುದು ಕಾರಿನಲ್ಲಿದ್ದವರಿಗೆ ಸಾಧ್ಯವಾಗಲಿಲ್ಲ. ಸುನಂದಳನ್ನು ಮೋಟಪ್ಪ ಕಾರಿನಿಂದ ಇಳಿಸಿದ ಕೂಡಲೆ ಪಿಲ್ಲಣ್ಣ, ಬೋಡೆಪ್ಪ, ರಂಗ ಕೈಲಿದ್ದ ದೊಣ್ಣೆಗಳಿಂದ ಕಾರಿನ ಗಾಜುಗಳನ್ನು ಒಡೆಯಲು ಮುಂದಾದರು. ಅಪ್ಪಯ್ಯ ಅವರನ್ನು ತಡೆದ.

ಡ್ರೈವರು ಕುಕ್ಕರಗಾಲಿನಲ್ಲಿ ಕುಳಿತು, ಕೈ ಮುಗಿದು, ನನಗೆ ಇಂಥ ಕೆಲಸಕ್ಕೆಂದು ತಿಳಿಯದು. ಹುಡುಗಿಯೊಬ್ಬಳ ತಾಯಿ ಆಸ್ಪತ್ರೆಯಲ್ಲಿ ಸೀರಿಯಸ್ಸು. ಕರೆತರಬೇಕೆಂದು ಹೇಳಿದ್ದರಿಂದ ಬಂದೆ. ನನ್ನನ್ನು ಬಿಟ್ಟುಬಿಡಿ. ಕಾರಿಗಾಗಿರುವ ಡ್ಯಾಮೇಜಿನಿಂದ ನನ್ನ ಎರಡು ತಿಂಗಳ ಸಂಬಳ ಹೋಗುತ್ತೆ. ಹೆಂಡತಿ ಮಕ್ಕಳಿರುವ ಬಡವ ಎಂದು ತೆಲುಗಿನಲ್ಲಿ ಅಂಗಲಾಚಿದ. ಅದು ನಿಜ ಅನ್ನಿಸಿ ಹೋಗೆಂದು ಹೇಳಿದರು. ಪ್ರಯಾಸದಿಂದ ಕಾರನ್ನು ಚಾಲನೆಗೆ ತಂದು ಹೊರಟು ಹೋದ.

English summary
Two person kidnapped sunanda while coming with munekka after drama rehearsel
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X