• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಿತ್ಯೋತ್ಸವದ ನಿಸಾರರಿಗೆ ಪದ್ಮಶ್ರೀಯ ಸುಪ್ರಭಾತ

By Staff
|

"ನಿನ್ನ ಅನುರಾಗವೇ ಬೆಳಗಿರುವುದೆನ್ನೆಯ

ಇರುಳು ಬಾನಿನ ತುಂಬು ಬಿಂಬವಾಗಿ

ನಿನ್ನ ಸಹವಾಸವೇ ಸತತವೂ ಕಾದಿಹುದು

ಬಾಳದಾರಿಯ ತೋರುಗಂಬವಾಗಿ..."

  • ರವಿಬೆಳಗೆರೆ

ನಿತ್ಯೋತ್ಸವದ ನಿಸಾರರಿಗೆ ಪದ್ಮಶ್ರೀಯ ಸುಪ್ರಭಾತಹೀಗೆ ಬರೆದವರು ನನ್ನ ಪ್ರೀತಿಯ ಕವಿ ನಿಸಾರ್ ಅಹಮದ್,'ಹಾಯ್ ಬೆಂಗಳೂರು'ಪತ್ರಿಕೆಯ ಪಾಲಿಗೆ ಅವರು ಅಕ್ಕರೆಯ ಹಿರಿಯಣ್ಣ. ಪ್ರಾರ್ಥನಾ ಸ್ಕೂಲ್ ನ ಕಂದಮ್ಮಗಳ ಪಾಲಿಗೆ ಅವರು ಪ್ರೀತಿಯ ತಾತ. ಈಗ ಅವರನ್ನು ವಿಶೇಷವಾಗಿ ನೆನಪು ಮಾಡಿಕೊಳ್ಳಲಿಕ್ಕೆ ವಿಶೇಷ ಕಾರಣವಿದೆ. ಏನೆಂದರೆ ಪದ್ಮಶ್ರೀ ಪ್ರಶಸ್ತಿ ನಮ್ಮ ಪ್ರೀತಿಯ ನಿಸಾರ್ ರನ್ನು ಹುಡುಕಿಕೊಂಡು ಬಂದಿದೆ. ಆ ಮೂಲಕ ತನ್ನ ಗೌರವ ಹೆಚ್ಚಿಸಿಕೊಂಡಿದೆ.

ಬಹುಮಂದಿಗೆ ತಿಳಿದಿರಲಿಕ್ಕಿಲ್ಲ. ನಿಸಾರ ಅಹಮದ್ ಭೂ ವಿಜ್ಞಾನ ವಿಭಾಗದ ವಿದ್ಯಾರ್ಥಿ. ಅವರು ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ದಶಕಗಳ ಕಾಲ ಪಾಠ ಹೇಳಿದವರು. ಅದೆಷ್ಟೋ ಸಾವಿರ ವಿದ್ಯಾರ್ಥಿಗಳ ಪಾಲಿನ ಪ್ರೀತಿಯ ಮೇಷ್ಟ್ರು. ನಿಸಾರ್ ಸಾಹಿತ್ಯ ಕ್ಷೇತ್ರಕ್ಕೆ ನಡೆದು ಬಂದದ್ದೇ ಒಂದು ವಿಚಿತ್ರ, ಆಕಸ್ಮಿಕ ಸಂದರ್ಭದಲ್ಲಿ.

ಆ ದಿನಗಳಲ್ಲಿ ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಸಂಘವಿತ್ತು. ಜಿ.ಪಿ.ರಾಜರತ್ನಂ ಅದರ ಅಧ್ಯಕ್ಷರು. ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿ ಆಗುವುದೆಂದರೆ ಆಗ ಪ್ರತಿಯೊಬ್ಬ ವಿದ್ಯಾರ್ಥಿಗೂ ಬಹುದೊಡ್ಡ ಗೌರವ ಲಭಿಸಿದಂತೆ ಎಂದು ತಿಳಿಯಲಾಗುತ್ತಿತ್ತು. ಸ್ವಾರಸ್ಯವೆಂದರೆ, ಈ ಸ್ಥಾನ ಪಡೆಯಲು ಚುನಾವಣೆ ನಡೆಯುತ್ತಿರಲಿಲ್ಲ. ಬದಲಿಗೆ ಜಿ.ಪಿ.ರಾಜರತ್ನಂ ಏರ್ಪಡಿಸುವ ಪ್ರಬಂಧ ಸ್ಪರ್ಧೆಯಲ್ಲಿ ಗೆಲ್ಲಬೇಕಿತ್ತು.

ಅದೊಂದು ಬಾರಿ ಈ ಸ್ಪರ್ಧೆಯಲ್ಲಿ 'ಬಾಯಿ ಇದ್ದವ ಬದುಕಿದ 'ಎಂಬ ವಿಷಯದ ಬಗ್ಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಿದರು ರಾಜರತ್ನಂ. ಈ ಸ್ಪರ್ಧೆಗೆ ತುಂಬ ಹಿಂಜರಿಕೆಯಿಂದಲೇ ಲೇಖನ ಬರೆದು, ಅಳುಕುತ್ತಲೇ ಅದನ್ನು ಅಂಚೆಯ ಮೂಲಕ ಕಳಿಸಿದರಂತೆ ನಿಸಾರ್ ಅಹಮದ್. ಮುಂದೆ ಫಲಿತಾಂಶದ ಪ್ರಕಟಣೆಯ ದಿನ ಬಂದಾಗ ತುಂಬ ಹಿಂಜರಿಕೆಯಿಂದಲೇ ಅಲ್ಲಿಗೆ ಹೋದರೆ ನಿಸಾರ್ ಅಹಮದ್ ಎಂಬಾತನ ಪ್ರಬಂಧ ತುಂಬಾ ಸೊಗಸಾಗಿದೆ. ಅವರಿಗೆಒಳ್ಳೆಯ ಭವಿಷ್ಯವಿದೆ. ಅವರೇ ಇನ್ನು ಮುಂದೆ ಕನ್ನಡ ಸಂಘಕ್ಕೆ ಪ್ರಧಾನ ಕಾರ್ಯದರ್ಶಿ ಅಂದರಂತೆ.

ನಂತರದ ದಿನಗಳಲ್ಲಿ ನಿಸಾರ್ ಅಹಮದ್ ಒಂದೊಂದೇ ಚೆಲುವಿನ ಕವಿತೆಯ ರಂಗವಲ್ಲಿ ಬಿಡಿಸಿದರು. ಅವರ 'ನಿತ್ಯೋತ್ಸವ'ವಂತೂ ಮನೆ ಮನೆಯ ಮಾತಾಯಿತು. 'ನವೋಲ್ಲಾಸ'ದ ಒಲವು ಎಲ್ಲರ ಮನ ಮುಟ್ಟಿತು. ನಾಟಕ, ಅನುವಾದ, ವಿಜ್ಞಾನ ಬರಹ, ಪ್ರಬಂಧ....ಹೀಗೆ ಎಲ್ಲ ರಂಗದಲ್ಲೂ ಕೈಯಾಡಿಸಿದ ನಿಸಾರ್ ಅಲ್ಲೆಲ್ಲ ದಿ ಬೆಸ್ಟ್ ಎಂಬಂಥ ಬರಹವನ್ನೇ ಕೊಟ್ಟರು.

ಖ್ಯಾತಿಯ ಶಿಖರವೇರಿದ ನಂತರವೂ ಕಂದನ ಮುಗ್ಧತೆ, ಅಮ್ಮನ ಪ್ರೀತಿಯನ್ನು ಜತೆಗೇ ಇಟ್ಟುಕೊಂಡಿರುವ ನಿಸಾರ್ ಗೆ ಈಗ ಪದ್ಮಶ್ರೀ ಒಲಿದು ಬಂದಿದೆ. ಪ್ರಶಸ್ತಿಯ ಸಡಗರದಲ್ಲಿ ಆ ಕವಿಜೀವದ ಖುಷಿ ಇಮ್ಮಡಿಯಾಗಲಿ, ನೂರ್ಮಡಿಯಾಗಲಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more