ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೋಟ ಮಾಡಿದ ನೀವೇ ಬೇಲಿ ಸುತ್ತುವುದನ್ನು ಮರೆತರೆ ಹೇಗೆ?

By Staff
|
Google Oneindia Kannada News


(ಪ್ರಿಯ ಓದುಗರೇ, ಸೋಮವಾರ ಪ್ರಕಟವಾಗಬೇಕಿದ್ದ ‘ಸೂರ್ಯಶಿಕಾರಿ’ ಅಂಕಣ, ಕಾರಣಾಂತರಗಳಿಂದ ಬುಧವಾರ ಪ್ರಕಟಿಸುತ್ತಿದ್ದೇವೆ -ಸಂಪಾದಕ)

Parents should not force the children to study according to their wishಎದುರಿಗೆ ಕುಳಿತ ಮಿತ್ರನ ಕಣ್ಣಲ್ಲಿ ನೀರಿದ್ದವು, ದಿಗಿಲಿತ್ತು. ಅತನ ಮಗ ಮನೆ ಬಿಟ್ಟು ಹೋಗಿದ್ದ. ನನ್ನ ಮಿತ್ರ ಕಷ್ಟ ಜೀವಿ. ಬೆಳಗಿನ ಜಾವಕ್ಕೇ ಎದ್ದು ದುಡಿಯಲು ಹೋಗುತ್ತಾನೆ. ಇಡೀ ದಿನ ದುಡಿಯುತ್ತಾನೆ. ಹತ್ತು ವರ್ಷದ ಹಿಂದೆ ಇದ್ದುದಕ್ಕಿಂತ ಇವತ್ತು ತುಂಬಾನೇ ಚೆನ್ನಾಗಿದ್ದಾನೆ. ಸ್ವಂತ ಮನೆಯಾಗಿದೆ. ಎಸೆಸೆಲ್ಸಿಯಲ್ಲಿ ಮಗ ಕೈತುಂಬ ಮಾರ್ಕು ತಗೊಂಡು ಬಂದಾಗ ಸಂತೋಷದಿಂದ ಬಂದು ಹೇಳಿದ್ದ. ಪಿಯುಸಿಯಲ್ಲಿ ಮತ್ತೂ ಹೆಚ್ಚು ತರುತ್ತಾನೇನೋ? ನೀವೇ ಅವರಿವರಿಗೆ ಹೇಳಿ ಒಳ್ಳೆ ಕಡೆ ಸೀಟು ಕೊಡಿಸಬೇಕು ಅಂದಿದ್ದ.

ನನ್ನ ಮಿತ್ರ ಹೆಚ್ಚು ಓದಿದವನಲ್ಲ. ಅದರೆ ದುಡಿಮೆಗೆ ಹಿಂಜರಿದವನಲ್ಲ. ಮಗ ಚೆನ್ನಾಗಿ ಓದಲಿ ಅಂತ ಬಯಸಿದ್ದು ಕೂಡ ಅವನೇನೋ ಲಕ್ಷಗಟ್ಟಲೆ ದುಡಿದು ತಂದು ಹಾಕುತ್ತಾನೆ ಎಂಬ ಕಾರಣಕ್ಕಲ್ಲ. ರ್ಯಾಂಕು, ಡಿಸ್ಟಿಂಕ್ಷನ್ನು, ಸಾಫ್ಟ್‌ ವೇರು, ಅಮೆರಿಕಾ ಮುಂತಾದ ದುರಾಸೆಗಳೇನೂ ಮಗನಿಗೆ ಸಂಬಂಧಿಸಿದಂತೆ ಇಲ್ಲ. ‘ನಾವಂತೂ ಓದಲಿಲ್ಲ. ಮಕ್ಕಳು ಬುದ್ಧಿವಂತರಿದ್ದಾರೆ. ಓದಿ, ಅವರ ಬದುಕು ಚೆನ್ನಾಗಿ ಮಾಡಿಕೊಳ್ಳಲಿ’ ಎಂಬಂತಹ ನಿಸ್ಪೃಹ ಅಸೆ ನನ್ನ ಮಿತ್ರನದು. ಇವತ್ತಿಗೂ, ಇನ್ನು ಮುಂದೆಯೂ ಆತ ನನ್ನ ದುಡಿಮೆ, ತನ್ನ ಕಷ್ಟ ಭರಿಸಲು ಸಿದ್ಧನಿದ್ದಾನೆ.

ಅದರೆಪಿಯುಸಿಗೆ ಬಂದ ಮಗ ಕೊಂಚ ದಾರಿಬಿಟ್ಟ. ವಿಪರೀತ ಗೆಳೆಯರಾದರು. ಅವರೆಲ್ಲ ಶ್ರೀಮಂತರ ಮಕ್ಕಳು. ತೀರ ಗಾಬರಿಯಾಗುವಷ್ಟೇನೂ ಕೆಡಲಿಲ್ಲ ಹುಡುಗ. ಅದರೆ ಓದು ಒಗ್ಗಾಲಾಯಿತು. ಟ್ಯೂಷನ್ನು ತಪ್ಪಿಸಿದ. ಏನು ಕೇಳಿದರೂ ಸುಳ್ಳು. ಜೇಬಿನಲ್ಲಿ ಬೆಂಕಿ ಪೆಟ್ಟಿಗೆ ಸಿಕ್ಕಿತು. ಕೂಡಿಸಿ ಬುದ್ಧಿ ಹೇಳಿದರೆ ‘ಇನ್ನು ಮೇಲೆ ಮಾಡಲ್ಲ ಅಪ್ಪಾಜೀ’ ಅಂತಾನೆ. ಮಾರನೆಯ ದಿನವೇ ಕಾಲೇಜಿಗೆ ಹೋಗಿರುವುದಿಲ್ಲ. ಎರಡನೆಯ ಸಲ ಗದರಿಸಿ ಕೇಳಿದ್ದೇ ತಪ್ಪಾಯಿತು: ಹುಡುಗ ಮನೆಬಿಟ್ಟು ಹೋಗಿದ್ದ.

ನನ್ನ ಮಿತ್ರ ಎಷ್ಟು ಗಾಬರಿಯಾಗಿದ್ದನೆಂದರೆ, ಮಗ ಯಾರೋ ಮುಸ್ಲಿಮರ ಜೊತೆಗೆ ಹೋಗಿ ಬಿಟ್ಟಿದ್ದಾ ನೆ. ಅವನು ಸ್ವಭಾವತಃ ಅಂಥವನಲ್ಲ. ಅವನ ಗೆಳೆಯರಿಂದಾಗಿ ಅವನು ಕೆಟ್ಟಿದ್ದಾನೆ. ಇದಕ್ಕೆಲ್ಲ ಮುಸ್ಲಿಂ ಹುಡುಗರ ದೋಸ್ತಿಯೇ ಕಾರಣ. ಅವರಿಗೇನಂತೆ? ಅವರು ಶ್ರೀಮಂತರು. ನಾನು ಕಷ್ಟ ಪಟ್ಟು ಮನೆ ಮಾಡಿದೆ, ಕಷ್ಟ ಪಟ್ಟು ಗಾಡಿ ತಗೊಂಡೆ, ಕಷ್ಟ ಪಟ್ಟು ಮಗನಿಗೆ ಗಾಡಿ ಕೊಡಿಸಿದೆ, ಟ್ಯೂಷನ್ನಿಗೆ ಸೇರಿಸಿದೆ; ಮಗ ಹೀಗಾಗಿ ಬಿಟ್ಟ ನಲ್ಲ? ಹಾಗಂತ ತುಂಬ ನೊಂದು ಬಂದು ಕುಳಿತ ಗೆಳೆಯನಿಗೆ ಅಪ್ತ ದನಿಯಲ್ಲಿ ಹೇಳಿದೆ.

‘ ನೋಡು ಜಯಣ್ಣ, ನೀನು ತೋಟ ಮಾಡಿದೆ. ತುಂಬ ಕಷ್ಟ ಪಟ್ಟು,ಚೆನ್ನಾಗಿ ಮಾಡಿದೆ. ಆದರೆ ಬೇಲಿ ಹಾಕೋದು ಮರೆತೆ. ತೋಟಕ್ಕೆ ದನ ನುಗ್ಗಿವೆ. ಕಂಗಾಲಾಗಿದೀಯಾ.’ ಅಂದೆ. ಜಯಣ್ಣ ದಿಗ್ಭ್ರಾಂತನಾಗಿ ನನ್ನನ್ನೇ ನೋಡುತ್ತ ಕುಳಿತ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X