ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅವನು ಭಯಂಕರ ಮನಿ ಮೈಂಡೆಡ್ಡು ಅನ್ನುವವರ ಬಗ್ಗೆ...

By Staff
|
Google Oneindia Kannada News


ದುಡ್ಡು ಎಲ್ಲವೂ ಅಲ್ಲ. ಆದರೆ ‘ದುಡ್ಡು ಏನೂ ಅಲ್ಲ’ ಅನ್ನುವುದು ಮೂರ್ಖತನ. ನೀವು ವಿಲಾಸಿಗಳನ್ನು ಗಮನಿಸಿ. ಕುಡುಕ, ಜುಗಾರಿ, ಸ್ತ್ರೀ ವ್ಯಸನಿ ಮುಂತಾದವರನ್ನು ಗಮನಿಸಿ. ಅವರು ಬೇಕಾಬಿಟ್ಟಿ ಖರ್ಚು ಮಾಡುತ್ತಿರುತ್ತಾರೆ. ಬೇಗ ಬೀದಿಗೆ ಬೀಳುತ್ತಾರೆ. ಇವೆಲ್ಲ ಚಟಗಳೂ ಇರುವ ಶ್ರೀಮಂತರನ್ನು ಗಮನಿಸಿ. ಅವರು ಈ ವಿಲಾಸಗಳಿಗೆ ಅಂತಲೇ ಒಂದಷ್ಟು ಹಣ ಎತ್ತಿಟ್ಟಿರುತ್ತಾರೆ. ಎತ್ತಿಟ್ಟ ಹಣ ಮುಗಿಯುತ್ತಿದ್ದಂತೆಯೇ ಮತ್ತಷ್ಟು ಹಣ ದುಡಿದು, ಅದರಲ್ಲಿ ಒಂದಷ್ಟನ್ನು ವಿಲಾಸಗಳಿಗೆ ಎತ್ತಿಡುತ್ತಾರೆ.

‘ದುಡ್ಡು ಮಾಡಲಿಕ್ಕಾಗಿಯೇ ಕೆಲವರು ಆರೋಗ್ಯ ಕಳೆದುಕೊಳ್ಳುತ್ತಾರೆ. ಆ ನಂತರ ಆರೋಗ್ಯಕ್ಕಾಗಿ ಅದಿಷ್ಟೂ ದುಡ್ಡು ಕಳೆದುಕೊಳ್ಳುತ್ತಾರೆ’ ಎಂಬಂಥ ಅಮೋಘ ವಾಕ್ಯವೊಂದನ್ನು ಗೆಳೆತಿಯಾಬ್ಬಳು ತನ್ನ ಮೊಬೈಲ್‌ನಲ್ಲಿ ಸ್ಟೋರ್‌ ಮಾಡಿಟ್ಟುಕೊಂಡಿದ್ದಳು. ಈ ಸಾಯಂಕಾಲಕ್ಕೆ ಅವಳು ಕಾಯಿಲೆ ಬಿದ್ದರೆ ಅವಳ ಹತ್ತಿರ ಔಷಧಕ್ಕೆ ದುಡ್ಡಿಲ್ಲ. ಆಕ್ಕದೊಂದು ಆ್ಯಕ್ಸಿಡೆಂಟಾದರೂ ಸಾವಿರಾರು ರೂಪಾಯಿ ಖರ್ಚಾಗುತ್ತದೆ ಎಂಬ ಸಂಗತಿ ಅವಳಿಗೆ ಅರ್ಥವಾಗಿಲ್ಲ. ಕೇಳಲು ಅಥವಾ ಓದಲು ಅಥವಾ ಎಸ್ಸೆಮ್ಮೆಸ್‌ ಕಳಿಸಲು ಇಂಥ ಅಮೋಘ ವಾಕ್ಯಗಳು ಚೆನ್ನಾಗಿರುತ್ತವೆಯೇ ಹೊರತು -ದುಡ್ಡೇ ದುಡಿಯದೆ ಆರೋಗ್ಯವಾಗಿರುತ್ತೇನೆ ಅಂದುಕೊಳ್ಳುವುದು ಶುದ್ಧ ಮೂರ್ಖತನವಾಗಿರುತ್ತದೆ.

ಖಂಡಿತವಾಗ್ಯೂ ಮನಿ ಮೈಂಡೆಡ್‌ ಆಗಿರಿ. ಆದರೆ ಮನಿ ಕೇವಲ ನಿಮ್ಮದಾಗಿರಲಿ. ದುಡಿಯುವ ವಯಸ್ಸು, ಅವಕಾಶ ಮತ್ತು ಅನೈತಿಕವಲ್ಲದ ಹಾದಿ ಸಾಥ್‌ ಕೊಟ್ಟಾಗ ಕೆಲಸಕ್ಕೆ ಬಾರದ ಸಿದ್ಧಾಂತಗಳಿಗೆ ಬೀಳದೆ, ಮೈಮುರಿಯೆ ದುಡಿದು ಹಣ ಗಳಿಸಿರಿ. ಅದನ್ನು ಅಷ್ಟೇ ಅಚ್ಚುಕಟ್ಟಾಗಿ ಬಳಸುವುದನ್ನು ರೂಢಿ ಮಾಡಿಕೊಳ್ಳಿರಿ. ‘ದಾನ’ವೆಂಬುದು, ನಿಮಗೆ ಜಾಸ್ತಿಯಾಗಿ ಉಳಿದದ್ದನ್ನ ಇನ್ನೊಬ್ಬರಿಗೆ ಕೊಡುವಂತಹುದಲ್ಲ. ಇನ್ನೊಬ್ಬರ ನೆಸೆಸಿಟಿಗೆ, ಕಷ್ಟಕ್ಕೆ, ಬೆಳವಣಿಗೆಗೆ ಸಹಾಯವಾಗಲಿ ಅಂತ ಕೊಡುವುದು ದಾನ.

‘ನನಗೆ ಪಠ್ಯ ಪುಸ್ತಕ ಕೊಡಿಸಿ’ ಅಂತ ಬರುವ ವಿದ್ಯಾರ್ಥಿಗಳಿಗೆ ನಾನು ತಪ್ಪದೆ ಕೊಡಿಸುತ್ತೇನೆ. ಆದರೆ ‘ನೀವು ಬರೆದಿರೋ ಪುಸ್ತಕ ಉಚಿತವಾಗಿ ಕಳಿಸಿ’ ಅಂತ ಕೇಳಿದರೆ ‘ಕೊಂಡುಕೊಂಡು ಓದು’ ಅನ್ನುತ್ತೇನೆ. ಏಕೆಂದರ, ಪಠ್ಯ ಪುಸ್ತಕ ಅವನ ನೆಸೆಸಿಟಿ. ನಾನು ಬರೆದ ಪುಸ್ತಕ ಮಾರುವುದು ನನ್ನ ನೆಸೆಸಿಟಿ.

ತಂದೆಗೆ ವಿಪರೀತ ಕಾಯಿಲೆ. ಆಪರೇಶನ್ನಿಗೆ ಐದು ಲಕ್ಷ ಬೇಕು. ಮಾಡಿಸಿದರೂ ಆತ ಉಳಿಯಲಾರ. ಆದರೆ ಮಾಡಿಸಿದೆನೆಂಬ ಸಮಾಧಾನ ನಿಮಗುಳಿಯುತ್ತದೆ. ನೀವು ಮಾಡಿಸುತ್ತೀರೋ , ಇಲ್ಲವೋ? ಅಲ್ಲಿ ನಿಮ್ಮ ಹೃದಯದ ಮಾತು ಕೇಳಿ.

ಒಬ್ಬ ಹುಡುಗಿ ಗಂಡನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅವಳ ಒಡವೆಗಳು ಆ ಮನೆಯಲ್ಲಿವೆ. ಅವುಗಳನ್ನು ಹುಡುಗಿಯ ಅಣ್ಣ ವಾಪಸು ತೆಗೆದುಕೊಂಡು ಹೋದರೆ ಸರಿಯೋ ತಪ್ಪೋ? ‘ತಂಗಿಯೇ ಹೋದ ಮೇಲೆ ಅವಳ ಒಡವೆಗಳ್ಯಾಕೆ?’ ಅಂತ ಅಂದರೆ ಆತನನ್ನು ನೀವು ಶ್ರೇಷ್ಠ ಜೀವಿ ಅನ್ನುತ್ತೀರಾ?

ಉಹುಂ, ಅಲ್ಲಿ ಬುದ್ಧಿಗೆ ಪ್ರಾಶಸ್ತ್ಯ ಕೊಡಿ. ಮನಸ್ಸಿನ ಮಾತು ಕೇಳಬೇಡಿ. ಬುದ್ಧಿಯ ಅಡ್ವೈಸನ್ನು ಅನುಸರಿಸಬೇಕು. ಮನೆಯಲ್ಲಿ ಮದುವೆಗೆ ಬಂದ ಇನ್ನೊಬ್ಬ ತಂಗಿಯಿರುತ್ತಾಳೆ.

ದುಡ್ಡು ಯಾವಾಗಲೂ ಸಂದಿಗ್ದಕ್ಕೆ ನೂಕುತ್ತದೆ ಮನುಷ್ಯನನ್ನು. ದುಡ್ಡು ಬೇಕೆ ಬೇಡವೆ? ಖರ್ಚು ಮಾಡಬೇಕೆ ಬೇಡವೆ? ದುಡ್ಡೇ ಇಲ್ಲದವನಿಗೆ ಸಂದಿಗ್ಧಗಳೂ ಇರುವುದಿಲ್ಲ. ಆತನ ಮನಸ್ಸು ವೇದಾಂತ ಮಾತಾಡುತ್ತಿರುತ್ತದೆ. ಬುದ್ಧಿ ನಿದ್ದೆ ಹೋಗಿರುತ್ತದೆ. ಮನೆಯಲ್ಲಿ ನಿವ್ವಳ ಬಡತನ!

ಉಳಿದದ್ದು ನಿಮಿಷ್ಟ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X