• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅವನು ಭಯಂಕರ ಮನಿ ಮೈಂಡೆಡ್ಡು ಅನ್ನುವವರ ಬಗ್ಗೆ...

By Staff
|

ಖಂಡಿತವಾಗ್ಯೂ ಮನಿ ಮೈಂಡೆಡ್‌ ಆಗಿರಿ. ಆದರೆ ಮನಿ ಕೇವಲ ನಿಮ್ಮದಾಗಿರಲಿ. ದುಡಿಯುವ ವಯಸ್ಸು, ಅವಕಾಶ ಮತ್ತು ಅನೈತಿಕವಲ್ಲದ ಹಾದಿ ಸಾಥ್‌ ಕೊಟ್ಟಾಗ ಕೆಲಸಕ್ಕೆ ಬಾರದ ಸಿದ್ಧಾಂತಗಳಿಗೆ ಬೀಳದೆ, ಮೈಮುರಿಯೆ ದುಡಿದು ಹಣ ಗಳಿಸಿರಿ.

Moneymindedness is the key for better lifeಅವನು ಬಿಡಿ, ಅವನು ತುಂಬ ಮನಿ ಮೈಂಡೆಡ್ಡು ಅಂತ ಯಾರಾದರೂ ನಿಮ್ಮ ಬಗ್ಗೆ ಮಾತಾಡಿದರೆ, ಆಡಿ ಕೊಂಡರೆ ಬೇಸರ ಮಾಡಿಕೊಳ್ಳಬೇಡಿ. ಹಾಗೇನೇ ಯಾರಾದರೂ ಬಂದು, ‘ತುಂಬ ನಂಬಿಬಿಟ್ಟೆ ಕಣ್ಣೀ. ಮೋಸ ಆಗ್ಹೋಯ್ತು. ಜೀವನದಲ್ಲಿ ನಾಲ್ಕು ಜನಾನ ಸಂಪಾದಿಸಿದೆನೇ ಹೊರತು, ದುಡ್ಡು ಸಂಪಾದಿಸಲಿಲ್ಲ...’ ಅಂತೆಲ್ಲ ಮಾತಾಡಿದರೆ ಅವರನ್ನು ತುಂಬ ‘ಅಯ್ಯೋ ಪಾಪ ’ಎಂಬಂತೆ ನೋಡಬೇಡಿ.

‘ನಾನು ಮೈಮರೆಯದ ಹೊರತು ಪಕ್ಕದವನು ಕಳ್ಳನಾಗಲಾರ’ ಅನ್ನೋದು ನಾನು ನಂಬಿದ ಬಲವಾದ ಸಿದ್ಧಾಂತ. ಅಮಾಯಕತೆ, ನಂಬಿಕೆ, ವಿಶ್ವಾಸ, ಲೋಕಾರೂಢಿ ಗೊತ್ತಿಲ್ಲದಿರುವಿಕೆ, ಒಳ್ಳೇತನವೇ ನಮಗೆ ಮುಳುವಾಯ್ತು -ಮುಂತಾದ ಮಾತುಗಳ ನಿಜವಾದ ಅರ್ಥ ಮತ್ತು ಸಾರಾಂಶ ಅಂದರೆ -‘ನಾವು ಮೈಮರೆತಿದ್ದೆವು’ ಎಂಬುದಷ್ಟೆ. ನಾವು ಮೈಮರೆತರೆ ಪಕ್ಕದಲ್ಲಿ ಕುಳಿತ ಎಂಥ ಪ್ರಾಮಾಣಿಕನೂ ಕಳ್ಳನಾಗುತ್ತಾನೆ. ಅದು ಮನುಷ್ಯ ಸ್ವಾಭಾವ.

‘ಅವನು ಒಂದು ಪೈಸೆ ದುಡೀಲಿಲ್ಲ. ದುಡ್ಡು ಮಾಡಿರಲಿಲ್ಲ. ಜನರನ್ನು ಸಂಪಾದಿಸಿದ್ದರು ಅಷ್ಟೆ. ಅದಕ್ಕೆ ಅವರು ತೀರಿಕೊಂಡಾಗ ಸೇರಿರೋ ಜನಾನೇ ಸಾಕ್ಷಿ. ನೀವೇ ನೋಡ್ತಿದೀರಲ್ಲ? ದುಡ್ಡು ತಗೊಂಡು ಏನು ಮಾಡೋದು? ದುಡ್ಡೇನು ಸತ್ಮೇಲೆ ನಮ್ಮ ಹಿಂದೆ ಬರುತ್ತಾ? ’ ಅಂತ ಮಾತಾಡುತ್ತಿರುತ್ತಾರೆ. ಅದು ಸ್ಮಶಾನ ವೈರಾಗ್ಯದ ಮಾತು. ಹಾಗೆ ಮಾತಾಡುವವರ ಕಾಲ ಹತ್ತಿರ ಐದು ರೂಪಾಯಿ ನೋಡು ಕೆಡವಿ ‘ನಿಮ್ಮ ದುಡ್ಡು ಬಿದ್ದಿದೆ’ ಅಂದು ನೋಡಿ? ತೆಪ್ಪಗೆ ಎತ್ತಿ ಜೇಬಲ್ಲಿಟ್ಟುಕೊಳ್ಳುತ್ತಾರೆ. ಅವರಿಗೆ ಗೊತ್ತು : ಸತ್ತ ಮೇಲೆ ನಮ್ಮ ಹಿಂದೆ ದುಡ್ಡು ಬರೋದಿಲ್ಲ. ಆದರೆ ಸಾಯೋತಂಕಾ ಅದು ಬರ್ತಿರಲೇಬೇಕು. ಅದರ ಬೆನ್ನತ್ತಿ ನಾವು ಹೋಗಬಾರದು: ಅಷ್ಟೆ.

‘ದುಡ್ಡು ಮಾಡೋದು ಹೇಗೆ’ ಅಂತ ನಾನು ಯಾವತ್ತೂ ಬರೆದಿಲ್ಲ. ಬರೆಯಲ್ಲ. ಆದರೆ ಹೇಗೆ ದುಡ್ಡು ಮಾಡಬಾರದು ಅನ್ನೋದರ ಬಗ್ಗೆ ನನಗೆ ನನ್ನದೇ ಆದ ಕಟ್ಟಳೆಗಳಿವೆ. ಗಳಿಸಿದ ದುಡ್ಡನ್ನು ಹೇಗೆ ಖರ್ಚು ಮಾಡಬೇಕು ಅನ್ನೋದರ ಬಗ್ಗೆಯೂ ನನ್ನದೇ ಆದ ಕರಾರುಗಳಿವೆ.

ನಾನು ಪುಗಸಟ್ಟೆ ಹರಟೆಗೆ ಕುಳಿತಾಗ ಕೂಡ ಲಕ್ಷಗಟ್ಟಲೆ, ಕೋಟಿಗಟ್ಟಲೆ ಅಂತ ಮಾತನಾಡುವುದಿಲ್ಲ. ಹಣದ ಬಗ್ಗೆ ನನಗೆ ನಿರ್ಲಕ್ಷ್ಯವಿಲ್ಲ. ವಿಪರೀತವಾದ ಆಸಕ್ತಿ ಅಥವಾ indulgence ಕೂಡಾ ಇಲ್ಲ. ದುಡ್ಡು ನನಗೆ ದವಲತ್ತು, ಅಹಂಕಾರ, ಕ್ರೌರ್ಯ -ಯಾವನ್ನೂ ತಂದುಕೊಟ್ಟಿಲ್ಲ. ಕೆಲವು comfortಗಳನ್ನು ಅದು ಕೊಡಮಾಡಿದೆ. ಅದಕ್ಕಿಂತ ಹೆಚ್ಚಾಗಿ ನನಗೆ confidence ಕೊಟ್ಟಿದೆ. ತುಂಬ ಶ್ರೀಮಂತರು ಪೈಸೆಗೆ ಪೈಸೆ ಎಣಿಸಿ ಖರ್ಚು ಮಾಡುವುದನ್ನು ನಾನು ನೋಡಿದ್ದೇನೆ. ಕೈಲಿದ್ದ ಅಷ್ಟೂ ಹಣವನ್ನು ಎಗ್ಗಿಲ್ಲದೆ ಸುರಿದು, ಕೈಬರಿದು ಮಾಡಿಕೊಳ್ಳುವ ಅವಿವೇಕಿ ಬಡವರನ್ನೂ ನೋಡಿದ್ದೇನೆ.

ಒಂದು ಮನೆಯನ್ನು ದಟ್ಟ ದಾರಿದ್ರ್ಯ ಆವರಿಸಿಕೊಳ್ಳಲು ಕಾರಣಗಳಿರುತ್ತವೆ. ಅವುಗಳಲ್ಲಿ ಅನಾರೋಗ್ಯ ಮೊದಲನೆಯದು. ಮನೆಯ ಯಜಮಾನ ರೋಗಿಯಾದರೆ ಕಷ್ಟ. ಆದರೆ ಮನೆಯ ಯಜಮಾನ ಸೋಮಾರಿಯಾದರೆ ವಿಪರೀತ ಕಷ್ಟ. ಅದೇ ಯಜಮಾನ ದುಡ್ಡಿನ ಕಿಮ್ಮತ್ತು ಗೊತ್ತಿಲ್ಲದವನಾದರೆ ಅದು ಪರಮ ಕಷ್ಟ. ಆತ ದಡ್ಡನಾದರೂ ಬಡತನ ಖಚಿತ. ಆತ ಜುಗಾರಿಯಾದರೆ ಆ ಮನೆಯನ್ನು ಯಾರೂ ಉದ್ಧರಿಸಲಾರರು. ಈ ಪೈಕಿ ಯಾವುದಾದರೊಂದು ಕಾರಣವಿರದ ಹೊರತು ಯಾವ ಮನೆಗೂ ದಾರಿದ್ರ್ಯ ಬರುವುದಿಲ್ಲ.

‘ಹಣದಿಂದ ಹಾಸಿಗೆ ಕೊಳ್ಳಬಹುದು, ನಿದ್ರೆಯನ್ನಲ್ಲ. ಮನೆಕಟ್ಟಿಸುವುದು ಸಾಧ್ಯ : ಸಂಸಾರವನ್ನಲ್ಲ. ಬಟ್ಟೆ ಕೊಳ್ಳುವುದು ಸಾಧ್ಯ : ಮಾನವನ್ನಲ್ಲ’ ಹೀಗೆ ಕೆಲವೆಡೆ ಬರೆಸಿ ಬೋರ್ಡ್‌ ಹಾಕಿರುತ್ತಾರೆ, ಗಮನಿಸಿದ್ದೀರಾ? ಅಂಥ wall hanging ಗಳನ್ನು ಪ್ರಿಂಟು ಮಾಡಿಸಿ ಮಾರಿದವನಿಗೆ ಚೆನ್ನಾಗಿ ಗೊತ್ತಿರುತ್ತದೆ : ಹೂಡಿದ ಬಂಡವಾಳ ವಾಪಸು ಬರದಿದ್ದರೆ ತಾನು ಇನ್ನೊಂದು ಸಲ ಇಂಥ ಬೋರ್ಡ್‌ಗಳನ್ನು ಪ್ರಿಂಟು ಮಾಡಿಸಿ ಮಾರಲಾಗುವುದಿಲ್ಲ -ಅಂತ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more