• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸೋಮಾರಿ ಸುಖದ ಹೊರತು ಮತ್ತೇನು ಕಾರಣವಿರಲು ಸಾಧ್ಯ?

By Staff
|


ಈ ಹತ್ತು ವರ್ಷಗಳಲ್ಲಿ ಏನು ಮಾಡಿದೆಅಂತ ಹೇಳಿಕೊಳ್ಳಲಿಕ್ಕೆ ಅವರಲ್ಲಿ ಏನೆಂದರೆ ಏನೂ ಉಳಿದಿರುವುದಿಲ್ಲ. ಇವತ್ತೇನು ಮಾಡಿದೆ, ಹೇಳು ನೋಡೋಣಅಂತ ಕೂಡಿಸಿಕೊಂಡು ಕೇಳಿ. ಅದಕ್ಕೂಅವರ ಬಳಿ ಉತ್ತರ ಇರುವುದಿಲ್ಲ.

ನಮ್ಮ ನಿಮ್ಮಂಥವರ ಪಾಲಿಗೆ ಗರಗಸವೊಂದರ ಮೇಲೆ ನಡೆದಂತೆ ದಿನದ ಇಪ್ಪತ್ತನಾಲ್ಕು ಗಂಟೆ ಉರುಳಿರುತ್ತದೆ. ಚಕ್ತ ತಿರುಗಿದಂತೆ ದಣಿದಿರುತ್ತೇವೆ. ಭಯಂಕರ ಹೆಕ್ಟಿಕ್ ಅನ್ನಿಸುವಂತೆ ದಿನ ಮುಗಿದಿರುತ್ತದೆ. ಆದರೆ ನಮ್ಮ ಪಕ್ಕದಲ್ಲೇ ಇರುವ ಅವರು ಏನನ್ನೂ ಮಾಡಿರುವುದಿಲ್ಲ. ಮಾಡಬೇಕೆಂಬ ಸ್ಥಿರತೆ ಅವರಿಗಿರುವುದಿಲ್ಲ. ಹೆಚ್ಚೆಂದರೆ ತಿಂದು, ಕುಡಿದು, ನಿದ್ದೆ ಮಾಡಿ, ಹರಟಿ, ಸಿನಿಮಾ ನೋಡಿ, ತಿರುಗಾಡಿ ದಿನ ಕಳೆದಿರುತ್ತಾರೆ.

ಇವತ್ತು ನಾನು ಮಾಡುತ್ತಿರುವುದು ನಾಳೆಯ ನನ್ನ ಗುರಿ, ನನ್ನ ಕನಸು, ನನ್ನ ಉದ್ದೇಶ ಈಡೇರಿಸಿಕೊಳ್ಳಲು ಸಹಾಯ ಮಾಡುತ್ತಿದೆಯಾ ಅಂತ ಯೋಚಿಸಿ ಕೂಡ ಯೋಚಿಸುವುದಿಲ್ಲ. ಏಕೆಂದರೆ, ಈ ದಿನ ಹೀಗೇ ಕಳೆದರೆ ಸಾಕುಎಂಬಂಥ ಉದಾಸೀನ ಅವರಲ್ಲಿರುತ್ತದೆಯೇ ಹೊರತು, ನಾಳೆ ಹೊತ್ತಿಗೆ ಗುರಿ ತಲುಪಿಕೊಳ್ಳಬೇಕುಎಂಬ ತಪನೆ, ತುಡಿತ, ಧಾವಂತಗಳು ಅವರಿಗಿರುವುದೇ ಇಲ್ಲ. ಇಷ್ಟು ದಿನ, ಇಷ್ಟು ವರ್ಷ ಜೀವನ ಕಳೆಯಿತಲ್ಲ? ಸಾಕು ಬಿಡು -ಎಂಬಂಥ ಮರಣ ವೈರಾಗ್ಯ ಅವರದು.

ಅಂಥವರ ಬದುಕೂ ಒಂದು ಪವಾಡವೆಂಬಂತೆ ಯಾವತ್ತೋ ಬದಲಾಗಿ, ಅವರಿಗೂ ಒಂದು ಗುರಿ ಅಂತ ಸಿಕ್ಕು ಬಿಡಬಹುದು.ಅವರೂ ಯಶಸ್ಸು ಕಾಣಬಹುದು. ಆದರೆ ಅಷ್ಟು ಹೊತ್ತಿಗೆ ತುಂಬ ತಡವಾಗಿ ಬಿಟ್ಟಿರುತ್ತದೆ. ಕಣ್ಣಿನಂತೆ ಮನಸ್ಸೂ ಮುದಿಬಿದ್ದು ಯಾವುದರೆಡೆಗೂ ನಿಚ್ಚಳವಾಗಿ ಫೋಕಸ್ ಮಾಡಲಿಕ್ಕೆ ಆಗದಂತಾಗಿ ಬಿಡುತ್ತಾರೆ. ಅವತ್ತು ಕೂತು ಕೊಂಡು ಇಷ್ಟು ವರ್ಷ ವೇಸ್ಟಾದವಲ್ಲಅಂತ ಹಲುಬಿದರೆ ಪ್ರಯೋಜನವಿರುವುದಿಲ್ಲ. ಕಡೆಯ ಪಕ್ಷ, ವಯಸ್ಸು ಇಪ್ಪತ್ತರ ಆಸುಪಾಸಿಗೆ ಬರುವ ಹೊತ್ತಿಗೆ ನಮ್ಮ ಕಣ್ಣ ಮುಂದೆ ಒಂದು ನಿಚ್ಚಳ ಗುರಿ ಅಂತ ಇರಬೇಕು. ಆಗಿನಿಂದಲೇ ಒಂದು ಗಮ್ಯದೆಡೆಗೆ ಫೋಕಸ್ ಮಾಡತೊಡಗಬೇಕು.

ಗಮ್ಯವೆಂಬುದು ಕೂಡ ಒಂದು ರಾತ್ರಿಯಲ್ಲಿ ತಲುಪಿಕೊಳ್ಳಬಹುದಾದ ಸಂಗತಿಯಲ್ಲ. ಆದರೆ ಕೈ ತಪ್ಪಿ ಹೋದ ಒಂದೇ ಒಂದು ರಾತ್ರಿಯೂ ನಮಗೆ ವಾಪಸು ಸಿಗುವುದಿಲ್ಲ. ತುಂಬ ಚೆನ್ನಾಗಿ ನಿದ್ದೆ ಮಾಡಿ ಎದ್ದ ದಿನ ಎಲ್ಲರೂ ಫ್ರೆಷ್ ಆಗಿ, ಆನಂದದಿಂದ ಇರುತ್ತಾರೆ. ಆದರೆ, ಒಂದಿಡೀ ರಾತ್ರಿ ಮೈಮರೆತು ಕಳೆದುಬಿಟ್ಟೆ ಅಂತ ನಾನು ಕಳವಳಗೊಳ್ಳುತ್ತೇನೆ. ಕಳೆದುಕೊಂಡ ಹಕ್ಕೆ ಲೆಕ್ಕ ಬರೆಯುತ್ತ ಕುಳಿತು ಹಳಹಳಿ ಅನುಭವಿಸುವ ಕೆಟ್ಟ ವರ್ತಕನಂತೆ, ನಾನೂ ಗತಿಸಿ ಹೋದ ಸಮಯಕ್ಕಾಗಿ ಹಣೆ ಚಚ್ಚಿಕೊಳ್ಳುತ್ತೇನೆ. ಇನ್ನಷ್ಟು ಕಡಿಮೆ ನಿದ್ದೆ ಮಾಡಿದ್ದಿದ್ದರೆ ಮತ್ತಿಷ್ಟು ಪೇಜು ಓದಬಹುದಿತ್ತು, ಇನ್ನಷ್ಟು ಪುಟ ಬರೆಯಬಹುದಿತ್ತು, ಮತ್ತಿನ್ನೇನೋ ಮಾಡಬಹುದಿತ್ತು ಎಂಬ ವ್ಯರ್ಥ ಹಳಹಳಿ.

ಆದರೆ ಬದುಕಿನಲ್ಲಿ ಗುರಿಯೇ ಇಟ್ಟುಕೊಳ್ಳದವರಿಗೆ ಇಂಥ ಯಾವ ಹಳಹಳಿಯೂ ಇರುವುದಿಲ್ಲ. ಕಾಲ ತಮ್ಮನ್ನು ಕೊಂದು ಮುಂದಕ್ಕೆ ಸಾಗುತ್ತಿದೆ ಅಂತ ಅವರಿಗೆ ಗೊತ್ತಾಗಿಯೇ ಇಲ್ಲ. ಗುರಿ ತಲುಪಲಿಕ್ಕೆ ಆಗದಿದ್ದರೆ ಆ ಮಾತು ಬೇರೆ. ತಲುಪದೆ ಹೋಗುವುದಕ್ಕೆ ಸಾವಿರ ಕಾರಣಗಳಿರಬಹುದು. ಆದರೆ ಗುರಿಯನ್ನೇ ಇಟ್ಟುಕೊಳ್ಳದಿರುವುದಕ್ಕೆ ಮೂರ್ಖತನ, ದಡ್ಡತನ, ಸೋಮಾರಿತನ ಹಾಗೂ ಸೋಮಾರಿ ಸುಖದ ಆಸೆಯ ಹೊರತು ಮತ್ತೇನು ಕಾರಣವಿರಲು ಸಾಧ್ಯ?

ಸೋಮಾರಿ ಸುಖವೆಂಬುದು, ಮಧ್ಯಾಹ್ನದ ಹೊತ್ತು ಚಾಪೆಯ ಮೇಲೆ ಮಲಗಿ ನಿದ್ದೆ ಹೋದಾಗ ಕೆನ್ನೆಯ ಮೇಲೆ ಮೂಡುವ, ಚಾಪೆಯ ಕಡ್ಡಿ ಮೂಡಿಸುವ ಬಾಸುಂಡೆಯಂಥದ್ದು. ಅದನ್ನು ಕನ್ನಡಿಯಲ್ಲಿ ನೋಡಿ ಕೊಂಡರೇನೇ ಕಿರಿಕಿರಿಯಾಗುತ್ತದೆ. ಆದರೆ ಈ ಕಿರಿಕಿರಿ ಕೂಡ ಅಭ್ಯಾಸವಾಗಿ ಬಿಟ್ಟರೆ, ಮಧ್ಯಾಹ್ನದ ನಿದ್ದೆಯೆಂಬ ಸೋಮಾರಿ ಸುಖ ಕೂಡ ಅಭ್ಯಾಸವಾಗಿ ಬಿಡುತ್ತದೆ!

ಗುರಿಯೇ ಇಲ್ಲದಂತೆ ಬದುಕುವುದೆಂದರೆ, ಮಧ್ಯಾಹ್ನದ ಸುಖಕ್ಕೆ ಗಂಟು ಬಿದ್ದಂತೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more