ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾತಿ-ಧರ್ಮ ಮತ್ತು ಸಾಹಿತಿಗಳು(ಭಾಗ-3)ಅನಂತಮೂರ್ತಿ ಮತ್ತು ಭೈರಪ್ಪ : ಇವರಿಬ್ಬರ ರಾಗದ್ವೇಷಗಳ ಕತೆ!

By Staff
|
Google Oneindia Kannada News


ಇಷ್ಟು ಹಿರಿಯ ಬರಹಗಾರರು ತಂತಮ್ಮ ರಾಗದ್ವೇಷ ಮರೆಯದೆ ಒದ್ದಾಡುತ್ತಿರುವಾಗ ಶತಶತಮಾನಗಳಿಂದ ತಂತಮ್ಮ ಜಾತಿಗಳೊಂದಿಗೆ ಗುರುತಿಸಿಕೊಂಡಿರುವ ಜನ ಸಾಮಾನ್ಯರನ್ನು ಕ್ರಾಂತಿಕಾರಿ ರೀತಿಯಲ್ಲಿ ಜಾತಿ ಬಿಟ್ಟು ಬನ್ನಿ ಅಂತ ಕರೆಯುವುದರಲ್ಲಿ ಏನರ್ಥವಿದೆ?

Real Face of S.L.Bhyrappa and U.R.Ananthmurthy!ಅನಂತಮೂರ್ತಿಯವರು ಭೈರಪ್ಪನವರನ್ನು ಕಾದಂಬರಿಕಾರರೇ ಅಲ್ಲ. ಅವರೊಬ್ಬ ಡಿಬೇಟರ್ ಅಂದರು. ಗೃಹಭಂಗದ ಹೊರತಾಗಿ ಅವರು ಯಾವ ಒಳ್ಳೆಯ ಕಾದಂಬರಿಯನ್ನೂ ಬರೆದಿಲ್ಲ ಅಂದರು.

ಭೈರಪ್ಪನವರ ಗೃಹಭಂಗ ಕಾದಂಬರಿಯನ್ನು ಮಾತ್ರ ಅನಂತಮೂರ್ತಿ ಓದಿದಂತಿದೆ. ಸಮಗ್ರವಾಗಿ ಭೈರಪ್ಪನವರ ಕೃತಿಗಳನ್ನು ಓದಿದ್ದಿದ್ದರೆ ಮೂರ್ತಿಗಳು ಹಾಗೆ ಮಾತಾಡುತ್ತಿರಲಿಲ್ಲ. ಕನ್ನಡದ ಗಮನಾರ್ಹ ಗದ್ಯ ಬರಹಗಾರರು ಅಂತ ಗುರುತಿಸುವುದಾದರೆ ಅದು ಭೈರಪ್ಪ, ಅನಂತಮೂರ್ತಿ, ಲಂಕೇಶ್, ತೇಜಸ್ವಿ ಮುಂತಾದವರು. ಬೈರಪ್ಪ ಅತ್ಯುತ್ತಮ ಕಥನಕಾರರು ಎಂಬುದು ವಿವಾದಾತೀತ ಸಂಗತಿ. ಪಾತ್ರಗಳನ್ನು ಕಟ್ಟಿಕೊಡುವುದರಲ್ಲೂ ಅವರನ್ನು ಮೀರಿಸಿದವರಿಲ್ಲ.

ವಿಪರ್ಯಾಸವೆಂದರೆ ಆವರಣ ಕಾದಂಬರಿಯಲ್ಲಿ ಭೈರಪ್ಪ ಇದೇನನ್ನೂ ಮಾಡಿಲ್ಲ. ಅಮೀರ, ನಜೀರ, ಲಕ್ಷ್ಮಿ ಅಲಿಯಾಸ್ ರಜಿಯಾ, ಶಾಸ್ತ್ರಿ, ನರಸಿಂಹೇಗೌಡ -ಎಲ್ಲವೂ ತೆಳುವಾದ, ಅನ್ ಇಂಪ್ರೆಸಿವ್ ಪಾತ್ರಗಳೇ. ಅವರು ಸೃಷ್ಟಿಸಿದ ಖ್ಯಾಜಾ ಜಹಾನ್ ಎಂಬ ಹಿಜಡಾ ಪಾತ್ರ ಖುಷ್ವಂತ್ ಸಿಂಗ್ ಅವರ ದಿಲ್ಲಿ ಕಾದಂಬರಿಯಿಂದ ಕದ್ದ ಖೋಜಾ ಬಾಗಮತಿ ಪಾತ್ರದ ಕಳಪೆ ರೂಪದ್ದು.

ಒಬ್ಬ ಕಾದಂಬರಿಕಾರರಾಗಿ ಸಾಕ್ಷಿಯ ನಂತರ ಭೈರಪ್ಪ ಸತತವಾಗಿ ಸೋತಿದ್ದಾರೆ. ಅವರ ಮುಂಚಿನ ಕಾದಂಬರಿಗಳಲ್ಲಿನ ಹೃದಯಸ್ಪರ್ಶಿ ಶೈಲಿ, ಕಥನಕಲೆ, ಅವರು ಸೃಷ್ಟಿಸಿದ ಪಾತ್ರಗಳಾದ ಸತ್ಯ, ವೆಂಕಟರಮಣ, ನರಹರಿ, ಮಂಜಯ್ಯ, ಭೀಮಸೇನ, ದ್ರೌಪದಿ -ಆ ಮಟ್ಟದ ಯಾವ ಪಾತ್ರವೂ ಅವರ ಇತ್ತೀಚಿನ ಕೃತಿಗಳಲ್ಲಿ ಸೃಷ್ಟಿಯಾಗಿಲ್ಲ.

ಕಥೆ ಹೇಳುವವನು, ಅದರಲ್ಲಿ ತನ್ನ ಇಸಂ ಅಥವಾ ಸಿದ್ಧಾಂತ ತುಂಬಲು ಉತ್ಸುಕನಾದರೆ ಆಗುವ ಅನಾಹುತಗಳೇ ಭೈರಪ್ಪನವರ ಇತ್ತೀಚಿನ ಕೃತಿಗಳಲ್ಲಿ ಆಗಿವೆ. ಆ ಮಟ್ಟಿಗೆ ಅವರು ಡಿಬೇಟರ್ ಥರಾನೇ ಕಾಣುತ್ತಾರೆ. ಆದರೆ ಆ ಮಾತನ್ನು ಅನಂತಮೂರ್ತಿ ತುಂಬ ಒರಟಾಗಿ ಹೇಳಬಾರದಿತ್ತು.

ಪರೀಕ್ಷಿಸಿ ನೋಡಿದರೆ, ಮಾತೇ ಬಾರದ,ಆಡದ ಕೆಟ್ಟ ಭಾಷಣಕಾರರಾದ ಭೈರಪ್ಪನವರಿಗಿಂತ ಅನಂತಮೂರ್ತಿಯೇ ನಿಜವಾದ ಪ್ರೊಫೆಶನಲ್ ಡಿಬೇಟರ್! ಅವರನ್ನು ಮಾತಿನಲ್ಲಿ ಸೋಲಿಸಿದವರ್‍ಯಾರಿದ್ದಾರೆ?

ಆದರೆ, ಅನಂತಮೂರ್ತಿ ಹೇಳಿದ್ದು ಸರಿಯೋ-ತಪ್ಪೋ? ಭೈರಪ್ಪ ಅವರನ್ನು ಡಿಬೇಟರ್ ಅಂದಿದ್ದರ ಬಗ್ಗೆ ನಿಮ್ಮ ನಿಮ್ಮ ಅಭಿಪ್ರಾಯವೇನು? ನಮ್ಮ ಪತ್ರಿಕೆಗೆ ಎಸ್ಸೆಮ್ಮೆಸ್ ಕಳಿಸಿ ಅಂತ ವಿಜಯಕರ್ನಾಟಕ ಓದುಗರಿಂದ ಅಭಿಪ್ರಾಯ ಸ್ವಾಗತಿಸಿದ್ದು ನಿಜಕ್ಕೂ ಅನ್ಯಾಯ.

ಅನಂತಮೂರ್ತಿಯವರ ಮಾತಿಗೆ ಪ್ರತಿಕ್ರಿಯಿಸಬೇಕಾದದ್ದು ಸಾಹಿತಿವರ್ಗ, ವಿಮರ್ಶಕ ವರ್ಗವೇ ಹೊರತು ಓದುಗ ಸಮುದಾಯವಲ್ಲ. ಅನಂತಮೂರ್ತಿಗೆ ಜ್ಞಾನಪೀಠ ಕೊಟ್ಟವರು ‍ಯಾರು?ಎಂಬುದರಿಂದ ಹಿಡಿದು ಅವರನ್ನು ಗಡೀಪಾರು ಮಾಡಿ ಎಂಬುದರ ತನಕ ಬಾಯಿಗೆ ಬಂದಂತೆ ಓದುಗ ರಿಯಾಕ್ಟ್ ಮಾಡಿದರೆ ಅದನ್ನು ಪ್ರಕಟಿಸುವುದುಂಟೆ? ಇಬ್ಬರು ಹಿರಿಯ ಲೇಖಕರ ವಾದಕ್ಕೆ -ಜಗಳಕ್ಕೆ ನ್ಯಾಯ ಪಂಚಾಯ್ತಿ ಮಾಡುವ ಪ್ರಯತ್ನವೇ ತಪ್ಪು.

ಭೈರಪ್ಪ ಬಲಪಂಥೀಯರು. ಮೂರ್ತಿಗಳು ಎಥಪಂಥೀಯರು. ಇಬ್ಬರಿಗೂ ತಂತಮ್ಮ ನಿಲುವುಗಳ ಕುರಿತು ಸ್ಪಷ್ಟತೆಯಿದೆ, ಬದ್ಧತೆಯಿದೆ.

ಭೈರಪ್ಪನವರ ಕುರಿತು ಇನ್ನೊಂದು ಸಲ ಟೀಕೆ ಮಾಡಿದರೆ ಓದುಗರ ಕೈಲಿ ಒದಿಸೇ ಬಿಡ್ತೀವಿ ಎಂಬಂತೆ ವರ್ತಿಸಿದರೆ ಹೇಗೆ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X