• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಮನಹುಣ್ಣಿಮೆಯ ಮರುದಿನ ಎರಡು ಪೋಲಿ ಪುಸ್ತಕ!

By Staff
|

ತಮ್ಮ ತೊಂಬತ್ತನಾಲ್ಕರ ವಯಸ್ಸಿನಲ್ಲಿ ಹಿರಿಯರಾದ ಖುಷ್ವಂತ್‌ ಸಿಂಗ್‌ ಇದನ್ನೆಲ್ಲ ಬರೆಯಬೇಕಿತ್ತಾ? ಇದನ್ನೆಲ್ಲ ಬರೆಯಲಿಕ್ಕೆ ಅವರೇ ಆಗಬೇಕಿತ್ತಾ-ಅಂತ ನೀವು ಕೇಳಿದರೆ, ಅದು ಬೇರೆಯೇ ಪ್ರಶ್ನೆ. ವಯಸ್ಸಾದಂತೆಲ್ಲ ಕಾಂಕ್ಷೆ -ಕಾಮನೆಗಳು ಹೊಕ್ಕಳಿನಿಂದ ಮೇಲಕ್ಕೆ ಪ್ರವಹಿಸುತ್ತವಂತೆ. ಅದನ್ನು ಅಜ್ಜನೇ ಹೇಳಿದ್ದಾನೆ.

Khushwants two naughty books in Kannada by Ravi Belagere‘‘ರ್ಯಾಸ್ಕಲ್‌! ಆ ಪುಸ್ತಕ ನಿನ್ನಂಥವರಿಗಲ್ಲ. ನಿಜಕ್ಕೂ ಒಳ್ಳೆಯವರಾಗಿದ್ದು, ಕೊಂಚ ವಯಸ್ಸುಆಗಿದ್ದು, ಯಾವುದೊ ಕಾರಣಕ್ಕೆ ಜೀವನ ಬೋರು ಹೊಡೆದು, ಸ್ವಲ್ಪ ಮಂಕಾಗಿರುತ್ತಾರಲ್ಲ? ಅಂಥ ಸಜ್ಜನರಿಗೋಸ್ಕರ ಬರೆದದ್ದು,‘‘ ನಿಂಗೆ ಪೋಲಿ ಪುಸ್ತಕ ಬೇರೆ ಬೇಕೇನು?‘‘ ಅಂತ ನಗೆಯಾಡಿದರು ಅಜ್ಜ ಖುಷ್ವಂತ್‌ ಸಿಂಗ್‌.

ನಿಜ ಹೇಳಬೇಕೆಂದರೆ, ಈಗೊಂದಾರೇಳು ದಿನಗಳಿಂದ ಬೋರು ಹೊಡೆದು ಮಂಕಾದಂತಾಗಿದ್ದೆ. ದಿಲ್ಲಿಯ ಎರಡು ನ್ಯಾಯಾಲಯಗಳಿಂದ ಪೆಂಡಿಗಟ್ಟಲೆ ಡಾಕ್ಯುಮೆಂಟುಗಳನ್ನು ತರಿಸಿ ಓದಿದ್ದಕ್ಕಿರಬೇಕು. ಜೊತೆಗೆ ಮೊದಲಿನ ನನ್ನ ಶುದ್ಧ ಅಶಿಸ್ತು ದೂರತಳ್ಳಿ, ಪ್ರತಿನಿತ್ಯ ವ್ಯಾಯಾಮ, ಒಂದಷ್ಟು ಬಿರುಸಾದ ವಾಕಿಂಗು, ಬೇಗ ಮಲಗುವುದು ಅಂತೆಲ್ಲ ರೂಢಿಸಿಕೊಂಡೆ. ಇದೆಲ್ಲದರಿಂದಾಗಿ ಮಂಕು ಕವಿದಂತಾಗಿ ಬಿಟ್ಟಿರಬೇಕು. ಹೀಗಾದ ಕೂಡಲೇ ಕೆಲವರು ಪ್ರವಾಸ ಹೊರಡುತ್ತಾರೆ. ಇಸ್ಪೀಟಾಡುತ್ತಾರೆ. ಇರುವುದನ್ನೆಲ್ಲ ಬಿಟ್ಟು ಇನ್ನೇನೋ ಮಾಡಲು ಹೊರಡುತ್ತಾರೆ. ಆದರೆ ಬರವಣಿಗೆಯಿಂದಲೇ ಅನ್ನ-ಆತ್ಮ ಸಂತೋಷ ಎರಡನ್ನೂ ಕಂಡುಕೊಂಡವನು ನಾನು.

‘ಎಲ್ಲಿ ಕಳೆದುಕೊಂಡಿರುತ್ತೇವೋ, ಅದನ್ನು ಅಲ್ಲೇ ಹುಡುಕಬೇಕು’ ಅನ್ನೋ ತಮಾಷೆಯ ಮಾತು ನೆನಪಾಗಿ, ನಗುತ್ತಾ ಪುಸ್ತಕದ ಅಲಮಾರಿನ ಮುಂದೆ ಹೋಗಿ ನಿಂತರೆ ಕೈಗೆ ಸಿಕ್ಕಿದ್ದು ಖುಷ್ವಂತಜ್ಜನ ಪೋಲಿ ಪುಸ್ತಕ Paradise and other Stories.

ಮಾರ್ಗರೇಟ್‌ ಬ್ಲೂಮ್‌ ಅನ್ನೊ ಅಮೆರಿಕನ್‌ ಹುಡುಗಿಯಾಬ್ಬಳು ಇದ್ದಕ್ಕಿದ್ದಂತೆ ತನ್ನ ಕುಡಿತ, ಬಾಯ್‌ ಫ್ರೆಂಡ್‌ಗಳು, ಗಾಂಜಾ, ದುಡ್ಡು, ಅಮ್ಮನ ಸುಖದ ರಾತ್ರಿಗಳು, ಅವಳನ್ನು ಹುಡುಕಿಕೊಂಡು ಬರುವ ಬಾಯ್‌ ಫ್ರೆಂಡ್‌ಗಳು ಮುಂತಾದವುಗಳಿಂದ ಬೋರೆದ್ದು ಹೋಗುತ್ತಾಳೆ.

ಒಂದು ರಾತ್ರಿ ಅವಳ ತಾಯಿಯನ್ನು ಹುಡುಕಿಕೊಂಡು ಬಂದ ಉನ್ಮತ್ತನೊಬ್ಬ ಅರೆಬರಿ ಮೈಯಲ್ಲಿ ಇವಳ ಕೋಣೆಗೆ ಹೊಕ್ಕು ‘ನೀನಾದರೂ ಸಿಕ್ತೀಯಾ? ಇದನ್ನೇನು ಮಾಡಬೇಕೋ ಗೊತ್ತಾಗ್ತಿಲ್ಲ’ ಅಂತ ಅಯುಧಧಾರಿಯಾಗಿ ನಿಂತುಬಿಟ್ಟಾಗಲೇ ಮಾರ್ಗರೆಟ್‌ ಬ್ಲೂಮ್‌ ಎಂಬ ಅಮೇರಿಕನ್‌ ತರುಣಿ‘ ಇವತ್ತಿಗೆ ಸಾಕು. ಈ ಜೀವನ ವಿಧಾನವನ್ನು ಬದಲಿಸಬೇಕು. ದುಡ್ಡು-ಸೆಕ್ಸು-ಕುಡಿತ ಮುಂತಾದವುಗಳ ಆಚೇಗಿರುವ ಯಾವುದೋ ನೆಮ್ಮದಿಯನ್ನು ಹುಡುಕಿಕೊಂಡು ಭಾರತಕ್ಕೆ ಹೋಗಬೇಕು‘ ಎಂದು ನಿರ್ಧರಿಸಿ ಹರಿದ್ವಾರದಲ್ಲಿರುವ ಮುಕ್ತಿಧಾಮ್‌ ಆಶ್ರಮಕ್ಕೆ ಬರುತ್ತಾಳೆ. ಹಾಗೆ ಬಂದ ಮಾರ್ಗರೆಟ್‌ ಬ್ಲೂಮ್‌ಳಿಗೆ ಸಹಾಯಕಿಯಾಗಿ ದೊರಕುವವಳೇ ಪುಟ್ಟ ಪುಟ್ಟ ಸ್ತನಗಳ, ಕಪ್ಪಗಿನ ಚಿಕ್ಕ ಆಕೃತಿಯವಳಾದ ಭಾರತೀಯ ಹುಡುಗಿ ಪುತಲಿ! ಅವರಿಬ್ಬರ ನಡುವೆ ಸಂಭವಿಸುವುದೇ paradise ಎಂಬ ಮೊದಲ ಸಣ್ಣ ಕಥೆ.

ಈಗಾಗಲೇ ಹೇಳಿದಂತೆ, ಕೆಲವೆಡೆ ಖುಷ್ವಂತ್‌ ಸಿಂಗ್‌ ಅವರೇ ಹೇಳಿರುವಂತೆ, ಅವರು ಜಡ್ಡುಗಟ್ಟಿದ ಮನಸುಗಳ ಮುದಗೊಂಡು ಅರಳಿಕೊಳ್ಳುವುದಕ್ಕಾಗಿ ಪೋಲಿ ಪುಸ್ತಕ ಬರೆಯುತ್ತಾರೆ. ಮತ್ತು ಅದ್ಭುತವಾಗಿ ಬರೆಯುತ್ತಾರೆ. ಈ ಕಥಾ ಸಂಕಲನದಲ್ಲಂತೂ ಸೆಕ್ಸ್‌ನ ಕುರಿತಂತೆ ಭಾರತೀಯರಿಗಿರುವ ಮೌಢ್ಯ, ಹಿಪಾಕ್ರಸಿ, ವಾತ್ಸಾಯನ ಕಾಮಸೂತ್ರದಲ್ಲಿ ವಿವರಿಸಲಾಗಿರುವ ನಖದ ಗುರುತುಗಳು, ಆ ಪಟ್ಟುಗಳು, ಆಸನಗಳು -ಭಗವಂತಾ! ತೊಂಬತ್ನಾಲ್ಕರ ಅಜ್ಜನಿಗೆ ಇದನ್ನೆಲ್ಲ ಬರೆಯುವ ಹುಕಿಯಾದರೂ ಎಂಥದ್ದು-ಅಂತ ಉದ್ಗರಿಸುವ ಮಟ್ಟದಲ್ಲಿವೆ.

ತಮ್ಮ ತೊಂಬತ್ತನಾಲ್ಕರ ವಯಸ್ಸಿನಲ್ಲಿ ಹಿರಿಯರಾದ ಖುಷ್ವಂತ್‌ ಸಿಂಗ್‌ ಇದನ್ನೆಲ್ಲ ಬರೆಯಬೇಕಿತ್ತಾ? ಇದನ್ನೆಲ್ಲ ಬರೆಯಲಿಕ್ಕೆ ಅವರೇ ಆಗಬೇಕಿತ್ತಾ-ಅಂತ ನೀವು ಕೇಳಿದರೆ , ಅದು ಬೇರೆಯೇ ಪ್ರಶ್ನೆ. ವಯಸ್ಸಾದಂತೆಲ್ಲ ಕಾಂಕ್ಷೆ -ಕಾಮನೆಗಳು ಹೊಕ್ಕಳಿನಿಂದ ಮೇಲಕ್ಕೆ ಪ್ರವಹಿಸುತ್ತವಂತೆ. ಅದನ್ನು ಅಜ್ಜನೇ ಹೇಳಿದ್ದಾನೆ.

ಅದೇನೆ ಇರಲಿ; ತಾಂತ್ರಿಕ ಕಾರಣಗಳಿಂದ ಅವರ Burial at sea ಕಾದಂಬರಿ ‘ಸಾಗರ ಸಮ್ಮುಖಂ’ ಕನ್ನಡಕ್ಕೆ ತರ್ಜುಮೆಯಾದ ನಂತರವೂ ಪ್ರಕಟಣೆ ಕಂಡಿರಲಿಲ್ಲ. ಮೊನ್ನೆ ಫೆಬ್ರವರಿ 14ರ ಸಂಜೆ ಬಿಡುಗಡೆ ಮಾಡಬೇಕೆಂದುಕೊಂಡಿದ್ದೆ: ಆ ಸಂಭ್ರಮವನ್ನು ಕಾವೇರಿಯ ದುಃಖ ಕೊಚ್ಚಿ ಒಯ್ದಿತ್ತು. ನಾಳೆ ಮಾರ್ಚ್‌ 3, 2007 ರಂದು ಕಾಮನ ಹುಣ್ಣಿಮೆ. ಮಾರನೆಯ ದಿನ ಅಂದರೆ ಮಾರ್ಚ್‌4, 2007ರ ಭಾನುವಾರ ಬೆಳಗ್ಗೆ ನನ್ನ ಆಫೀಸಿಗೆ ಬಂದರೆ ಖಷ್ವಂತ್‌ ಸಿಂಗ್‌ ಅವರ ‘ಸಾಗರ ಸಮ್ಮುಖಂ’ ಕಾದಂಬರಿ ಮತ್ತು ‘ವಾತ್ಸಾಯನ ಸ್ವರ್ಗ’ ಸಣ್ಣ ಕತೆಗಳ ಸಂಕಲನ ಎರಡನ್ನೂ ನಿಮ್ಮ ಸಮಕ್ಷಮಕ್ಕೆ ಒಪ್ಪಿಸುತ್ತೇನೆ. ಎರಡನ್ನೂ ನೀವೇ ಒಯ್ಯುವ, ನೀವೇ ಓದುವ, ನೀವಷ್ಟೇ ಆನಂದಿಸುವ ‘ಪ್ರಾಪ್ತ ವಯಸ್ಕ ಹೊಣೆ’ ನಿಮ್ಮದು. ಉಳಿದದ್ದನ್ನು ನಾನು ಹೇಳಬೇಕಿಲ್ಲ.

ವಿಶೇಷ ಸೂಚನೆ :

  • ಸಾಗರ ಸಮ್ಮುಖಂ : ನೂರು ರುಪಾಯಿಗಳುಗಳು.
  • ವಾತ್ಸಾಯನ ಸ್ವರ್ಗ : ನೂರ ಇಪ್ಪತ್ತೆೈದು ರುಪಾಯಿಗಳು.
  • ಮಾರ್ಚ್‌ 4, 2007ರಂದು ಇವೆರಡೂ ಪುಸ್ತಕ ಇನ್ನೂರು ರುಪಾಯಿಗಳಿಗೆ ನಮ್ಮ ಕಚೇರಿ(ಹಾಯ್‌ ಬೆಂಗಳೂರು, ನಂ.2, ಪೆಟ್ರೋಲ್‌ ಬಂಕ್‌ ಬಳಿ, 80 ಅಡಿ ರಸ್ತೆ, ಕದಿರೇನಹಳ್ಳಿ, ಪದ್ಮನಾಭನಗರ್‌, ಬನಶಂಕರಿ 2ನೇ ಹಂತ, ಬೆಂಗಳೂರು-560 070)ಯಲ್ಲಿ ಲಭ್ಯ.

(ಸ್ನೇಹ ಸೇತು : ಹಾಯ್‌ ಬೆಂಗಳೂರ್‌!)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X