• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬ್ರಾಹ್ಮಣರನ್ನು ಹಿಗ್ಗಾಮಗ್ಗಾ ಬೈಯುವ ಮಂದಿಗೆ ಕೆಲ ಪ್ರಶ್ನೆ!

By ರವಿ ಬೆಳಗೆರೆ
|
   ಜಾತಿ ಮತಗಳ ಬಗ್ಗೆ ರವಿ ಬೆಳಗೆರೆ ಬರೆದಿರುವ ಲೇಖನ | Oneindia Kannada

   ಏನೋ ಬ್ರಾಹ್ಮಣಾ.. ಪುಳಿಚಾರೂ! ಅಂದವರು ಒಂದೇ ಒಂದು ಸಲ ಮುಸ್ಲಿಮರ ಗಡ್ಡದ ಬಗ್ಗೆ, ತುಂಡರಿಸಿದ ಅಂಗದ ಬಗ್ಗೆ, ಮುಸ್ಲಿಂ ಮೌಢ್ಯದ ಬಗ್ಗೆ ಮಾತನಾಡಿದ್ದಿದ್ದರೆ ಇಷ್ಟೆಲ್ಲ ರಗಳೆಯಾಗುತ್ತಿರಲಿಲ್ಲ. ಜಾತಿ ನಾಶಬಯಸುವವರು ಎಲ್ಲ ಜಾತಿಗಳ ನಾಶವನ್ನೂ ಬಯಸಬೇಕು.

   ನಿಜ ಹೇಳಬೇಕೆಂದರೆ, ಮುಸ್ಲಿಮರು ಭಾರತದ ಮೇಲೆ ದಂಡೆತ್ತಿ ಬಂದು ನಾನಾ ನಗರ, ಊರು, ದೇಗುಲ, ವ್ಯಕ್ತಿಗಳ ಮೇಲೆ ಅನಾಚಾರ ಮತ್ತು ಅತ್ಯಾಚಾರ ಮಾಡಿದರು ಅಂದ ಇವತ್ತು ಅವರನ್ನು ಖಂಡಿಸಬೇಕಾಗಿಲ್ಲ. ಅದಕ್ಕೋಸ್ಕರ ಎಸ್.ಎಲ್.ಭೈರಪ್ಪ ಇಷ್ಟೆಲ್ಲ ಸಾಕ್ಷಿ ಹುಡುಕಿ ಮುಸ್ಲಿಂ ಅತಿರೇಕವನ್ನು ಓದುಗರಿಗೆ ಸಾಬೀತು ಮಾಡಬೇಕಿಲ್ಲ.[ಡಿಸೆಂಬರ್ 25ಕ್ಕೆ ರಾಜ್ ಲೀಲಾ ವಿನೋದ ಪುಸ್ತಕ ಬಿಡುಗಡೆ]

   ಇತಿಹಾಸದಿಂದ ಅವರು ಒಂದೇ ಒಂದು ಗರಿ ಎತ್ತಿಕೊಂಡು ಬರಬೇಕಿರಲಿಲ್ಲ. ಇವತ್ತು ಮುಸ್ಲಿಂ ಭಯೋತ್ಪಾದನೆ, ಇವತ್ತು ವಿಜ್ಞಾನದೆಡೆಗೆ ಮುಸ್ಲಿಂ ಕರ್ಮಠರ ನಿಲುವು, ಇವತ್ತು ಮುಸ್ಲಿಂ ರಾಷ್ಟ್ರಗಳು ಇತರರೆಡೆಗೆ ತಳೆದಿರುವ ರಾಜಕೀಯ ನಿಲುವುಗಳು, ಇವತ್ತು ಮುಲ್ಲಾಗಳು ಬೋಧಿಸುವ ಮಡಿವಂತ ಇಸ್ಲಾಂ-ಹೇಗಿದೆಯೆಂದು ವಿಶ್ಲೇಷಿಸಿದ್ದರೆ ಸಾಕಿತ್ತು.

   ಜಾತಿಗಳನ್ನು ಧಿಕ್ಕರಿಸುವುದೇ ನಿಮ್ಮ ನಿಲುವಾಗಿದ್ದರೆ ಮುಸ್ಲಿಂ ಮಡಿವಂತಿಕೆಯನ್ನೂ ಧಿಕ್ಕರಿಸಿ. ಇಕ್ರಲಾ ಅನ್ನಿ, ವದೀರಲಾ ಅನ್ನಿ. ನಮ್ಮ ಹಂದೀನ ಮನೆಯೊಳಕ್ಕೆ ಬಿಟ್ಕಂಡು, ಅದರ ತಲೆ ನೇವರಿಸರಪ್ಪಾ ಅನ್ನಿ!

   ಗೀತೇ ನೀನು ಹೇತೆ!

   ಉಹುಂ, ಯಾವ ಕ್ರಾಂತಿಕಾರಿಯೂ ಅನ್ನುವುದಿಲ್ಲ. ಭಗವದ್ಗೀತೇ, ನೀನು ಭಾರತದ ತುಂಬ ಹೇತೆ ಅಂತ ಪದ್ಯ ಬರೆದವರಿದ್ದಾರೆ. ಸೀತೆ ಹೋಗಿ ಲಕ್ಷ್ಮಣನ ಜೊತೆಗೆ ಮಲಗಬಯಸಿದ್ದಳು ಅಂತ ಬರೆದವರಿದ್ದಾರೆ. ಮಡಿವಂತ ಪ್ರಾಣೇಶಾಚಾರ್ಯರನ್ನು ಹೆಂಡತಿ ಸಾಯುತ್ತಿರುವ ಘಳಿಗೆಯಲ್ಲಿ ಶೂದ್ರ ಚಂದ್ರಿಯೊಂದಿಗೆ ಮಲಗಿಸಿದವರಿದ್ದಾರೆ.

   ಹಾಡಹಗಲೇ ಭಗವಂತನ ಫೋಟೋಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದವರಿದ್ದಾರೆ. ಶಂಕರಾಚಾರ್ಯರನ್ನು ರೌಡಿ ಷೀಟರ್ ಎಂಬಂತೆ ಚಿತ್ರಿಸಿದವರಿದ್ದಾರೆ. ಒಬ್ಬೇ ಒಬ್ಬ ಕ್ರಾಂತಿಕಾರಿ ತನ್ನ ಕೃತಿಯಲ್ಲಿ, ಕತೆಯಲ್ಲಿ, ಕವಿತೆಯಲ್ಲಿ ಭಗವದ್ಗೀತೆಗೆ ಅಂಥ ಮಾತುಗಳನ್ನ, ಪುರೋಹಿತನಿಗೆ ಬೈದ ಬೈಗುಳವನ್ನು, ಆರೆಸ್ಸೆಸ್ಸಿಗೆ ಮಾಡಿದ ಅವಹೇಳನವನ್ನು -ಕುರಾನ್‌ಗೆ, ಮುಲ್ಲಾಗೆ ಮತ್ತು ಜಮಾತ್-ಎ-ಇಸ್ಲಾಂಗೆ ಮಾಡಿದುದನ್ನು ತೋರಿಸುತ್ತೀರಾ?

   ಇವು ಪ್ರಶ್ನೆಗಳು.

   ಗೋಡ್ಸೆ ಎಂಬ ಹೆಸರು

   ಇವತ್ತು ನಾವು ಕೇಳದಿದ್ದರೂ, ಸಾವಿರ ವರ್ಷಗಳ ನಂತರ ಇತಿಹಾಸ ಓದುತ್ತಾ ಕುಳಿತವನೊಬ್ಬ ಎದ್ದು ಹೋಗಿ ಅವರಪ್ಪನನ್ನು ಕೇಳುವ ಪ್ರಶ್ನೆಗಳು ಸಾಕಷ್ಟಿವೆ. ಜಗತ್ತಿನ ಯಾವುದೋ ಮೂಲೆಯಲ್ಲಿ ಆಗುವ ಅತಿಚಿಕ್ಕ ಕದಲಿಕೆಯನ್ನೂ ಅರ್ಥಮಾಡಿಕೊಳ್ಳಬಲ್ಲ, ವಿಶ್ಲೇಷಿಸಬಲ್ಲ ನಮ್ಮ ಬುದ್ಧಿಜೀವಿಗಳು, ಕ್ರಾಂತಿಕಾರಿಗಳು -ಮುಸ್ಲಿಂ ಉಗ್ರವಾದದ ವಿಷಯಕ್ಕೆ ಬಂದ ಕೂಡಲೇ ಸುಮ್ಮನಾಗಿಬಿಡುತ್ತಾರೆ. ಕ್ರೈಸ್ತ, ಬೌದ್ಧ, ಜೈನ, ಸಿಖ್, ಇಸ್ಲಾಂ -ಎಲ್ಲ ಧರ್ಮಗಳೂ ಸರಿ. ಹಿಂದೂ ಧರ್ಮವೊಂದು ಮಾತ್ರ ಸರಿಯಿಲ್ಲ ಎಂಬಂತೆ ಮಾತನಾಡುತ್ತಾರೆ.

   ಶಂಭೂಕನಂತಹ ವಿದ್ಯಾವಂತ, ಶ್ರದ್ಧಾವಂತನನ್ನು ಕೊಂದದ್ದಕ್ಕೆ ಅವತ್ತಿನ ಕ್ಷತ್ರಿಯ ರಾಮನು ಕಾರಣನಾದರೂ, ಇವತ್ತಿನ ಬೈಗುಳ ತಿನ್ನಬೇಕಾದವನು ಆರೆಸ್ಸೆಸ್ಸಿಗ ಮತ್ತು ಬ್ರಾಹ್ಮಣ. ಆದರೆ ಕೆಲವೇ ನೂರು ವರ್ಷಗಳ ಹಿಂದೆ ಸೋಮಾನಾಥ ದೇಗುಲದ ಮೇಲೆ ದಾಳಿ ಮಾಡಿದ, ಹಿಂದೂ ರಾಣಿಯರನ್ನು ಹೊತ್ತೊಯ್ದು ಮದುವೆಯಾದ ಮುಸ್ಲಿಮ? ಅವನನ್ನು ಚರ್ಚೆಗೆ ಎಳೆಯುವಂತಿಲ್ಲ! ಅವನು ಅಲ್ಪಸಂಖ್ಯಾತ. ಅವನು ಶೋಷಿತ. ಹೇಳಿಕೊಂಡರೆ ಒದ್ದುಗಿದ್ದಾರು ಅಂತ ಹೆದರಿ,

   ತನಗೆ ಯಾವ ತಲೆಮಾರಿನಲ್ಲಿ ರಕ್ತ ಸಂಬಂಧಿಯಲ್ಲದಿದ್ದರೂ, ಗೋಡ್ಸೆ ಎಂಬ ಸರ್‌ನೇಮ್(ಅಡ್ಡ ಹೆಸರನ್ನು )ಬದಲಾಯಿಸಿಕೊಂಡ ಲಕ್ಷಾಂತರ ಚಿತ್ಪಾವನರಿದ್ದಾರೆ. ಅರವತ್ತು ವರ್ಷಗಳ ಹಿಂದೆ ಮಹಾತ್ಮಾ ಗಾಂಧಿಯನ್ನು ಕೊಂದ ನಾಥೂರಾಮನಿಗೂ ಅವರಿಗೂ ಸಂಬಂಧವೇ ಇಲ್ಲ. ಆದರೂ ಅವರು ಗೋಡ್ಸೆ ಎಂಬ ತಮ್ಮ ಸರ್‌ನೇಮ್ ಧರಿಸಲೊಲ್ಲರು.

   ಹೀಗೆ ಹೆದರಿಕೊಂಡ ಒಬ್ಬೆ ಒಬ್ಬ ಮುಸ್ಲಿಮನನ್ನು ತೋರಿಸುತ್ತೀರಾ?

   ಮುಸ್ಲಿಂ ಸಂವೇದನೆ

   ಮಹ್ಮದ್ ಘಜ್ನಿಯ ಮಾತು ಬಿಟ್ಟು ಬಿಡಿ, ಮೊನ್ನೆ ಮೊನ್ನೆ ಭಾರತದ ವಿಮಾನ ಎತ್ತಿಕೊಂಡು ಹೋದದ್ದಕ್ಕೆ, ಕಾಶ್ಮೀರದಲ್ಲಿ ಮಕ್ಕಳನ್ನು ಕೊಂದದ್ದಕ್ಕೆ, ಪಂಡಿತರ ಹೆಂಗಸರನ್ನು ದೋಚಿದ್ದಕ್ಕೆ, ಪಾರ್ಲಿಮೆಂಟಿಗೆ ನುಗ್ಗಿ ಕೊಂದದ್ದಕ್ಕೆ, ಹೈದರಾಬಾದಿನಲ್ಲಿ ಬಾಂಬು ಸಿಡಿಸಿದ್ದಕ್ಕೆ -ಅವಮಾನದಿಂದ, ನೋವಿನಿಂದ, ಅದೆಲ್ಲ ಜವಾಬ್ದಾರಿಯನ್ನು ನನ್ನವರ ಪರವಾಗಿ ನಾನು ಹೊರುತ್ತೇನೆ ಅಂತ ತಲೆ ತಗ್ಗಿಸಿ ನಿಂತ ಒಬ್ಬ ಲಿಬರೇಟೆಡ್ ಮುಸ್ಲಿಮನನ್ನು ನನಗೆ ತೋರಿಸುತ್ತೀರಾ?

   ನಿನ್ನ ತಾತ-ಮುತ್ತಾತ-ಎಂಟು ನೂರು ಸಾವಿರ ವರ್ಷಗಳ ಹಿಂದೆ ಬದುಕಿದ್ದ ನಿನ್ನ ತಾತನ ಮುತ್ತಾತನ ಮರಿತಾತ ಮಾಡಿದ ತಪ್ಪಿಗೆ, ಇವತ್ತು ನೀನು ಕಂದಾಯ ಕಟ್ಟಲೇ ಬೇಕು. ಹಾವು ಮತ್ತು ನೀನು ಒಟ್ಟಿಗೆ ಬಂದರೆ, ನಿನ್ನನ್ನು ಮೊದಲು ಕೊಂದು ಆನಂತರ ಹಾವನ್ನು ಕೊಲ್ಲುತ್ತೇವೆ : ಅಂಥ ನೀಚ ನೀನು ಎಂಬ ಮಾತನ್ನು ಅನ್ನಿಸಿಕೊಂಡವರು, ಆಹಾ ಅವರದು ಮುಸ್ಲಿಂ ಸಂವೇದನೆಯಿರುವ ಮನಸ್ಸು ಅಂತ ಹೊಗಳಿಸಿಕೊಳ್ಳುವುದನ್ನು ನೋಡಿದಾಗ ಸುಮ್ಮನೆ ಇರುವುದು ಕಷ್ಟವಾಗುತ್ತದೆ. ಅಷ್ಟೆ!

   ಏನೋ ಬ್ರಾಹ್ಮಣಾ.. ಪುಳಿಚಾರೂ! ಅಂದವರು ಒಂದೇ ಒಂದು ಸಲ ಮುಸ್ಲಿಮರ ಗಡ್ಡದ ಬಗ್ಗೆ, ತುಂಡರಿಸಿದ ಅಂಗದ ಬಗ್ಗೆ, ಮುಸ್ಲಿಂ ಮೌಢ್ಯದ ಬಗ್ಗೆ ಮಾತನಾಡಿದ್ದಿದ್ದರೆ ಇಷ್ಟೆಲ್ಲ ರಗಳೆಯಾಗುತ್ತಿರಲಿಲ್ಲ. ಜಾತಿ ನಾಶಬಯಸುವವರು ಎಲ್ಲ ಜಾತಿಗಳ ನಾಶವನ್ನೂ ಬಯಸಬೇಕು.

   ಕರ್ನಾಟಕದ ಮಟ್ಟಿಗೆ ಅದು ಆಗಲಿಲ್ಲ.

   ಲೇಖನದ ಮೊದಲ ಭಾಗ

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   True colors of Kannada literary stalwarts, intellectuals as seen in critical times for example : URA v/s SLB, 07.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more