• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಂಥವರನ್ನು ಅವರು ನಂಬಿದ ದೇವರೂ ಪ್ರೀತಿಸಲಾರ!

By Staff
|

ದೇವರು ಆಟಕ್ಕೇ ಬರದವರನ್ನು ಯಾವತ್ತೂ ಇಷ್ಟಪಡುವುದಿಲ್ಲ ಎಂಬುದನ್ನು ಮರೆಯಬೇಡಿ. ಏನೂ ಪ್ರಯತ್ನ ಮಾಡದೆ, ಗೆಲ್ಲುವ ಹಟವಾಗಲೀ, ಸೋಲುವ ಆತಂಕವಾಗಲೀ, ಪ್ರಯತ್ನ ಮಾಡೇನೆಂಬ ಮಿನಿಮಮ್‌ ನಿರ್ಧಾರವಾಗಲೀ ಇಲ್ಲದ ಮನುಷ್ಯನನ್ನು ಯಾವ ಭಗವಂತನೂ ಇಷ್ಟಪಡಲಾರ, ಮೆಚ್ಚಲಾರ, ಪೊರೆಯಲಾರ.

ನೀವು ದೇವರನ್ನು ನಂಬುತ್ತೀರಿ. ನಾನು ನಿಮ್ಮನ್ನು ನಂಬುತ್ತೇನೆ. ನಮ್ಮ ನಮ್ಮ ನಂಬಿಕೆಗಳು ಚಿರಾಯುವಾಗಲಿ. ಆದರೆ ದೇವರಿಗೂ ಒಂದಷ್ಟು ನಂಬಿಕೆಗಳಿರುತ್ತವಂತೆ; ಹಾಗಂತ ಆತನನ್ನು ನಂಬಿದವರು ಹೇಳುತ್ತಾರೆ.

ಒಂದೋಂದು ಸಲ ತುಂಬ ನಿರಾಸೆಯಾದಾಗ, ಪ್ರಯತ್ನ ಪಟ್ಟೂ ಸೋತು ಹೋದಾಗ, ಕೈಗೆ ಬಂದ ತುತ್ತು ಬಾಯಿಗೆಬಾರಾದಾದಾಗ ‘ದೇವರಿಗೆ ಅದು ಇಷ್ಟವಾಗಲಿಲ್ಲವೇನೋ?’ ಅಂತ ಸಮಾಧಾನ ಹೇಳಿಕೊಳ್ಳುತ್ತೇವೆ, ಗಮನಿಸಿದ್ದೀರಾ? ಹಾಗೇನೇ ‘ದೇವರಂಥ ದೇವರಿಗೂ ಕೇವಲ ಗೆದ್ದವರ ಮೇಲೆ, ಬುದ್ಧಿವಂತರ ಮೇಲೆ,

ಸ್ಫುರದ್ರೂಪಿಗಳ ಮೇಲೆ, ಶ್ರೀಮಂತರ ಮೇಲೆ, ಯಶಸ್ವಿಯಾದವರ ಮೇಲೆ ಮಾತ್ರ ಪ್ರೀತಿ ಇರುತ್ತೇನೋ?’ ಅಂತಾನೂ ಅಂದುಕೊಳ್ತಿರ್ತೀವಿ.

That is wrong. ನಿಜ ಹೇಳಬೇಕು ಅಂದ್ರೆ, ದೇವರು ಗೆದ್ದವರನ್ನು ಇಷ್ಟಪಡುತ್ತಾನೆ. ಆದರೆ ಸೋತವರನ್ನು ತುಂಬ ಪ್ರೀತಿಸುತ್ತಾನೆ! ಯಾವ ಪುರಾಣ-ಪುಣ್ಯಕಥೆ ಓದಿದರೂ, ದೇವರು ನಿಶ್ಯಕ್ತರ, ಸೋತವರ ಪಕ್ಷಪಾತಿ. ಅಂಥ ಬಲಿಷ್ಠ ಹಿರಣ್ಯಕಶಿಪುವನ್ನು ಬಿಟ್ಟು ಪ್ರಹ್ಲಾದನ ಸೈಡು ವಹಿಸಿಕೊಂಡ. ಪರಮ ಬಲಿಷ್ಠ ಮೊಸಳೆಯನ್ನು ಧಿಕ್ಕರಿಸಿ ಆತ ನೋವಿನಿಂದ ಬಳಲುತ್ತಿದ್ದ ಆನೆಯ ಡುಬ್ಬ ಚಪ್ಪರಿಸಿ ಬೆಂಬಲಕ್ಕೆ ನಿಂತ. ನೂರು ಮಂದಿ ಕುರು ಸೋದರರೆದುರು, ಅಂಥ ಹಟಮಾರಿ ಬಲಿಷ್ಠ ದುಶ್ಯಾಸನನ ಎದುರು-ಆತ ನಿಸ್ಸಹಾಯಕಳಾದ ಅರೆಬೆತ್ತಲೆ ದ್ರೌಪದಿಯನ್ನು ರಕ್ಷಿಸಿ, ಬೆನ್ನಿಗೆ ನಿಂತು ಪೊರೆದು ಬಿಟ್ಟ. ಜೂಜಿನಲ್ಲಿ ಗೆದ್ದವನು ಶಕುನಿಯೇ ಆದರೂ ಕೃಷ್ಣ ಪರಮಾತ್ಮ ನಿಂತು ಬೆಂಬಲಿಸಿದ್ದು ಸೋತ ಧರ್ಮರಾಯನನ್ನ.

ಅನುಮಾನವೇ ಬೇಡ : ನೀವು ದೇವರನ್ನು ನಂಬುತ್ತೀರಾದರೆ, ದೇವರು ಗೆದ್ದವರನ್ನು ಇಷ್ಟಪಡುತ್ತಾನೆ ಮತ್ತು ಸೋತವರನ್ನು ಪ್ರೀತಿಸುತ್ತಾನೆ ಅಂತ ಖಚಿತವಾಗಿ ನಿರ್ಧರಿಸಬಹುದು.

ಆದರೆ ದೇವರು ಆಟಕ್ಕೇ ಬರದವರನ್ನು ಯಾವತ್ತೂ ಇಷ್ಟಪಡುವುದಿಲ್ಲ ಎಂಬುದನ್ನು ಮರೆಯಬೇಡಿ. ಏನೂ ಪ್ರಯತ್ನ ಮಾಡದೆ, ಗೆಲ್ಲುವ ಹಟವಾಗಲೀ, ಸೋಲುವ ಆತಂಕವಾಗಲೀ, ಪ್ರಯತ್ನ ಮಾಡೇನೆಂಬ ಮಿನಿಮಮ್‌ ನಿರ್ಧಾರವಾಗಲೀ ಇಲ್ಲದ ಮನುಷ್ಯನನ್ನು ಯಾವ ಭಗವಂತನೂ ಇಷ್ಟಪಡಲಾರ, ಮೆಚ್ಚಲಾರ, ಪೊರೆಯಲಾರ.

ಅಂಥವರೂ ಇರ್ತಾರ ಅಂತ ಆಶ್ಚರ್ಯಪಡಬೇಡಿ. ಅಂಥವರು ತುಂಬ ಜನ ಇರ್ತಾರೆ. ಇರುವ ಚಿಕ್ಕ comfortನಲ್ಲೇ ಬದುಕಿ ಬಿಡುವ ಜನ. ಅವರಲ್ಲಿ ಮೂಲತಃ desireನ ಕೊರತೆ ಇರುತ್ತದೆ. ಇವತ್ತು ಇಷ್ಟರ ಮಟ್ಟಿಗಿದೆ. ಊಟವಿದೆ, ತಿಂಡಿಯಿದೆ, ಖರ್ಚಿಗೆ ಕಾಸು ಸಿಕ್ಕಿದೆ. ಇಷ್ಟು ಸಾಕಲ್ಲ? ಎಂಬಂತಹ ನೆಗೆಟಿವ್‌ ನಿಲುವು. ಬೆಳೆದು ಏನಾಗಬೇಕಿದೆ? ಯಾವ ಶ್ರೀಮಂತ ಸುಖವಾಗಿದ್ದಾನೆ? ಅಛೀವ್‌ಮೆಂಟ್‌ ಮಾಡಿ ಏನು ಮಾಡಬೇಕು? ಅಯ್ಯೋ, ಓದಿಕೊಂಡೋರೆಲ್ಲ ಹೋಟ್ಲುಗಳಲ್ಲಿ ಕಪ್ಪು ತೊಳಿಯೋದು ನೋಡಿಲ್ವಾ? ಯಾಕೆ ರಿಸ್ಕೂ? ಅಂತೆಲ್ಲ ಯೋಚಿಸುವವರದೊಂದು ಬೃಹತ್ತಾದ ಕ್ರೌಡೇ ನಮ್ಮ ಸಮಾಜದಲ್ಲಿದೆ. ಅವರು ಗೆಲ್ಲುವವರಲ್ಲ. ಅಂಥವರನ್ನು ಯಾವ ದೇವರೂ ಇಷ್ಟಪಡಲಾರ. They are non players.

ಅಕ್ಕ ದುಡಿದು ಹಾಕಿದ್ದನ್ನ ಕೂತು ತಿನ್ನುವ ತಮ್ಮಂದಿರು, ವಿಧವೆ ತಾಯಿಯ ದುಡಿಮೆ ತಿಂದು ಮುಗಿಸುವ ಮಕ್ಕಳು, ಹೆಂಡತಿಯ earningsನ ಮೇಲೆ ಮೋಜು ಮಾಡುತ್ತ ಕಾಲ ಕಳೆಯುವ ಗಂಡಂದಿರು-ಅವರನ್ನು ಯಾವ ದೇವರು ಇಷ್ಟಪಡಬಲ್ಲ?

ಈ ಪ್ರಪಂಚದಲ್ಲಿ ಕೆಲವು ಗ್ರೂಪುಗಳಿವೆ.

ಪ್ರತಿನಿತ್ಯ ಹೊಸದೇನನ್ನಾದರೂ ಮಾಡುತ್ತೇನೆಂದು ಹೊರಡುವವರ ಗ್ರೂಪು. ಅದು ಗೆದ್ದು ವಿಜೃಂಭಿಸಲೂಬಹುದು. ಸೋತು ಹಿಂತಿರುಗಲೂಬಹುದು. ಎರಡನೇ ಗುಂಪು: ಶುದ್ಧ ಶ್ರಮ ಜೀವಿಗಳದು. ಅವರು ಸೋಲು ಗೆಲುವಿನ ರಗಳೆಯಿಲ್ಲದೆ ತಮ್ಮ ಪಾಡಿಗೆ ತಾವು ಪ್ರತಿನಿತ್ಯ ದುಡಿಯುತ್ತಾರೆ. ಆವತ್ತಿನ ಅನ್ನದೊಂದಿಗೆ ಹಿಂತಿರುಗುತ್ತಾರೆ. ಮೂರನೆಯದು: ಮೇಲಿಂದ ಮೇಲೆ ಸೋತು ಹಿಂತಿರುಗುವವರ ಗ್ರೂಪು. ‘ದೇವರು’ ಅನ್ನಿಸಿಕೊಂಡವನು ಅವರಿಗೂ ಅನ್ನ ಕೊಡುತ್ತಾನೆ. ಮತ್ತೊಂದು ಆಟಕೋಸ್ಕರವಾದರೂ ಅವರನ್ನು ಜೀವಂತವಿಟ್ಟಿರುತ್ತಾನೆ.

ಆದರೆ ನಾಲ್ಕನೆಯ ಗುಂಪಿದೆ ನೋಡಿ? ಅವರದು ಆಟಕ್ಕೇ ಹೊರಡದ non player ಗುಂಪು. ನೀವು ಅದೊಂದು ಗುಂಪಿಗೆ ಸೇರದಿದ್ದರೆ ಸಾಕು!

(ಸ್ನೇಹ ಸೇತು : ಹಾಯ್‌ ಬೆಂಗಳೂರ್‌!)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X