• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಂಡ್ಯದ ಜುಬಿಲಿಪಾರ್ಕ್‌ ಚಳವಳಿಯನ್ನು ಹುಡುಕಿ ಕೊಡುತ್ತೀರಾ?

By Staff
|

ಅತ್ತ ರೈತ ಸಂಘ ಇಬ್ಭಾಗವಾಗಿ ಪುಟ್ಟಣ್ಣಯ್ಯ, ನಂಜುಂಡಸ್ವಾಮಿ ಪರಸ್ಪರ ಮಕ ಕೆಡಿಸಿಕೊಂಡರು. ಕೊನೆಯ ಸುತ್ತಿನಲ್ಲಿ ದಲಿತ ನಾಯಕರೂ ಕಂಟ್ರಾಕ್ಟರ್‌ಗಳಾದರು. ಕಂಟ್ರಾಕ್ಟರುಗಳಿಂದ ವಸೂಲಿ ಮಾಡಿಕೊಂಡರು. ಇದೆಲ್ಲದರ ಪರಿಣಾಮವೇನಾಯಿತೆಂದರೆ, ಕಾವೇರಿಗೆ ಬೆಂಕಿಬಿದ್ದಾಗ ಮೊದಲೆಲ್ಲ ದನಿ ಎತ್ತುತ್ತಿದ್ದ ನಾಯಕರ ದನಿಯೇ ಅಡಗಿಹೋಯಿತು. ಅವರು ಕರೆದರೆ ನೂರಿನ್ನೂರು ಜನರೂ ಬಾರದಂತಾಗಿ ಹೋಯಿತು. ಕಿಕ್ಕಿರಿಯುತ್ತಿದ್ದ ಮಂಡ್ಯದ ಜುಬಿಲಿ ಪಾರ್ಕಿನಲ್ಲಿ ಆಗ ನಡೆದ ಸಭೆಗಳಿಗೂ, ಇವತ್ತಿನ ಕ್ಷೀಣ ಕೂಗಿಗೂ ಎಲ್ಲಿಂದೆಲ್ಲಿಯ ಸಂಬಂಧ? ಒಂದೇ ಸಲಕ್ಕೆ ಇಪ್ಪತ್ತೆೈದು ಸಾವಿರ ಟೈರುಗಾಡಿ ಬೀದಿಗಿಳಿಸಿ ಕಾವೇರಿ ನೀರಿಗಾಗಿ ತೋಳು ಚಾಚಿದವನು ನಮ್ಮ ರೈತ. ಇವತ್ತು ಆ ರೈತ ಎಲ್ಲಿದ್ದಾನೆ? ಭ್ರಷ್ಟಗೊಂಡ ನಾಯಕರೇ ಹೇಳಬೇಕು.

ಮೊನ್ನೆ ಅಂತಿಮ ತೀರ್ಪು ಹೊರಬಿದ್ದಾಗ ಸಾರ್ವಜನಿಕರ ಪ್ರತಿಕ್ರಿಯೆ ಕಂಡು ಮೊದಲು ಅಚ್ಚರಿಗೊಂಡವರು ತಮಿಳರು! ಅವರಾಗಲೇ ಬೆಂಗಳೂರಿನಿಂದ, ಚಾಮರಾಜನಗರದಿಂದ, ಮಂಡ್ಯದ ಆಸುಪಾಸಿನಿಂದ ಚಾಪೆ ಸುತ್ತಿಕೊಂಡು ಊರು ಬಿಟ್ಟಿದ್ದರು. ಯಾವಾಗ ನಮ್ಮ ನೆಲದ ರೈತ ಎದ್ದು ಕೂತು ಏನಾಯಿತೆಂದು ವಿಚಾರಿಸಲೂ ಇಲ್ಲವೋ, ಒಬ್ಬೊಬ್ಬರಾಗಿ ವಾಪಸು ಬರತೊಡಗಿದ್ದಾರೆ. ಸ್ವತಃ ಕರುಣಾನಿಧಿಯೇ ನಮ್ಮ ಮೌನ, ನಿರಾದರ ಕಂಡು ಆಶ್ಚರ್ಯಪಟ್ಟಿದ್ದಾನೆ.

ಎಲ್ಲರಿಗಿಂತ ಈ ವಿಷಯದಲ್ಲಿ ಪಾಕಡಾ ರಾಜಕಾರಣಿಯಂತೆ ವರ್ತಿಸಿದ್ದು ಮುಖ್ಯಮಂತ್ರಿ ಕುಮಾರಸ್ವಾಮಿ. ಅದನ್ನೊಂದು ಬ್ಯಾಲೆನ್ಸ್‌ಡ್‌ ಮೂವ್‌ಮೆಂಟ್‌ ಎಂಬಂತೆ ವಿವರಿಸಲಾಗುತ್ತಿದೆ. ‘ನಾಳೆ ತೀರ್ಪು ಬರಲಿ, ಎಲ್ಲ ಪಕ್ಷ ಸೇರಿ ಒಂದು ನಿರ್ಣಯಕ್ಕೆ ಬಂದು ಮುಂದಿನ ಹೆಜ್ಜೆಯಿಡೋಣ’ ಅಂತ ಕಾಂಗ್ರೆಸ್ಸಿಗರೂ ಸೇರಿದಂತೆ ಎಲ್ಲರನ್ನೂ ಕಮಿಟ್‌ ಮಾಡಿಸಿಕೊಂಡಿತು ಸರ್ಕಾರ. ನೀರಾವರಿ ಮಂತ್ರಿ ಈಶ್ವರಪ್ಪನಿಂದ ಪ್ರತಿಕ್ರಿಯೆ ನಿರೀಕ್ಷಿಸುವುದೇ ಅವಿವೇಕ. ಯಾವಾಗ ಸರ್ಕಾರವೂ ಸೇರಿದಂತೆ ಎಲ್ಲರೂ ನಿಧಾನ ನೀತಿ ಅಳವಡಿಸಿಕೊಂಡರೋ, ಕಾವೇರಿ ಬೆಲ್ಟಿನ ರೈತ ಕೂಡ ನಿರುಮ್ಮಳವಾಗಿ ಕುಂತುಬಿಟ್ಟ. ಪತ್ರಿಕೆಗಳೂ ತಕ್ಷಣಕ್ಕೊಂದು ನಿಲುವು ತಳೆಯಲಿಲ್ಲ. ಒಂದು ಸಾವಿರ ಪುಟಗಳ ತೀರ್ಪು ಓದುವುದರಲ್ಲೇ ಎಲ್ಲರೂ ಗರ್ಕರು. ‘ಇಲ್ಲವಂತೆ, ಕರ್ನಾಟಕಕ್ಕೆ ಅಂಥ ಅನ್ಯಾಯವಾಗಿಲ್ಲವಂತೆ’ಎಂಬ ಅೂೆಬೆಂದ ಹೇಳಿಕೆಗಳೂ ಉದುರಿದವರು.

ಇವತ್ತು ನ್ಯಾಯಾಧೀಕರಣದ ತೀರ್ಪಿಗೆ ನಾವು ತಲೆಬಾಗಿ, ಇದನ್ನೇ ನಾಳೆ ಗೆಝೆಟ್‌ನಲ್ಲಿ ನೋಟಿಫೈ ಆಗುವುದಕ್ಕೆ ಬಿಟ್ಟರೆ ಇಪ್ಪತ್ತು ವರ್ಷಗಳ ನಂತರ ಆಗಬಹುದಾದ ಅನಾಹುತವೇನು ಎಂಬ ದೂರದರ್ಶಿತ್ವ ನಮ್ಮ ಯಾವ ನಾಯಕನಿಗೂ ಇಲ್ಲದಂತಾಗಿದೆ. ದಿನಕ್ಕೆರಡು ಬಾರಿ ನಮ್ಮ ಸರ್ಕಾರ ‘ಗ್ರೇಟರ್‌ ಬೆಂಗಳೂರು!’ ಅಂತ ಮಾತನಾಡುತ್ತಿದೆಯಲ್ಲ ಊರಸುತ್ತ ಇಂಡಸ್ಟ್ರಿಗಳನ್ನೆಬ್ಬಿಸುತ್ತಿದೆಯಲ್ಲ? ಇದ್ಯಾವುದಕ್ಕೂ ನಮಗೆ ನೀರು ಉಳಿಯುವುದಿಲ್ಲ.

ತಮಿಳುನಾಡಿಗೆ ನೀರು ಕೊಡಲಾಗದೆ ಸಿಟ್ಟಿಗೆದ್ದ ಕನ್ನಡದ ರೈತ, ತಮಿಳಿಗನನ್ನು ಅಟ್ಟಿಸಿಕೊಂಡು ಹೋಗಿ ಬಡಿದನಲ್ಲ? ನಾಳೆ ಬೆಂಗಳೂರಿಗರು ಮಂಡ್ಯದ ರೈತನ ವಿರುದ್ಧ ಅಂಥದ್ದೊಂದು ಸಿಟ್ಟು ಮಾಡಿಕೊಳ್ಳಬೇಕಾಗುತ್ತದೆ. ಕುಡಿಯುವ ನೀರಿಗೂ, ನೀರಾವರಿ ಜಲಕ್ಕೂ ಕದನವೇರ್ಪಡುತ್ತದೆ. ಇವತ್ತು ಆ ಕಡೆ ಚಳವಳಿಯೂ ಆಗದೆ, ಆ ಕಡೆ ನ್ಯಾಯಾಲಯದಲ್ಲಿ ಹೋರಾಟವೂ ನಿಂತು ಹೋದರೆ, ಇಪ್ಪತ್ತು ವರ್ಷಗಳ ನಂತರ ಸ್ಥಿತಿ ನಿಜಕ್ಕೂ ಘೋರವಾದೀತು.

ಕೇಂದ್ರದಲ್ಲಿ ನಮಗೆ ಲಾಬಿಯಿಲ್ಲ. ನಮ್ಮ ಸಂಸದರು ಚುನಾಯಿತರಾದ ಮರುದಿನವೇ ಸತ್ತು ಮಲಗಿದ್ದಾರೆ. ಕರುಣಾನಿಧಿಗಿರುವ ಕಿಮ್ಮತ್ತು ಆ ಯಾವ ಮುಖಗಳಿಗೂ ಕಾಂಗ್ರೆಸ್‌ ಅಧಿನಾಯಕಿ ಕಣ್ಣುಗಳಲ್ಲಿ ಇಲ್ಲ. ಇವತ್ತು ನಮ್ಮನ್ನು ರಕ್ಷಿಸಬಹುದಾದ್ದು ಚಳವಳಿಯಾಂದೇ.

ಚಳವಳಿಯೆಂದರೆ ನಾಗರಾಜ ವಾಟಾಳನ ಜೋಕರಿಕೆ ಅಲ್ಲ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more