• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಂಡಿಯಾ ಟುಡೇ ಯಾವ ಮಟ್ಟಕ್ಕೆ ಇಳಿದಿದೆ ನೋಡಿ!?

By Staff
|
ಪ್ಲೇಬಾಯ್, ಪೆಂಟ್ ಹೌಸ್ ಮತ್ತು ಕನ್ನಡದಲ್ಲಿದ್ದು ಸತ್ತ ರತಿ ವಿಜ್ಞಾನದಂತಹ ಪತ್ರಿಕೆಗಳಲ್ಲಿ ಪ್ರಕಟವಾಗುವ ಫೋಟೊಗಳಿಗಿಂತಲೂ ಅಸಹ್ಯಕರವಾದ ಫೋಟೋಗಳನ್ನು ಪ್ರಕಟಿಸಲಿಕ್ಕೆ ರಾಷ್ಟ್ರದ ನಂಬರ್ ಒನ್ ವಾರಪತ್ರಿಕೆಯಾದ ಇಂಡಿಯಾ ಟುಡೇನೇ ಬೇಕಾ?

Spicy nicey India Todayಈ ವಾರ ನಿಮ್ಮ ಗಮನವನ್ನು ಭಾರತದ ನಂಬರ್ ಒನ್ ವಾರಪತ್ರಿಕೆಯಾದ ಇಂಡಿಯಾ ಟುಡೇಕಡೆಗೆ ಸೆಳೆಯ ಬಯಸುತ್ತೇನೆ.

ಸಾಮಾನ್ಯವಾಗಿ ದೇಶದ, ನಾನಾ ರಾಜ್ಯಗಳ ಸಮಸ್ಯೆಗಳ ಕುರಿತಾದ ಲೇಖನ,ವರದಿ ಪ್ರಕಟಿಸುವ ಇಂಡಿಯಾ ಟುಡೇನಾಲ್ಕು ವಾರಗಳಿಗೊಮ್ಮೆ ತನ್ನ ಸಂಚಿಕೆಯೊಂದಿಗೆ ಸ್ಪೈಸ್ಹೆಸರಿನದೊಂದು ಸಪ್ಲಿಮೆಂಟರಿ ಕೊಡುತ್ತದೆ. ಮೂಲ ಸಂಚಿಕೆ 72 ಪುಟಗಳದಾದರೆ ಈ ಉಪ ಸಂಚಿಕೆ 96ಪುಟಗಳದ್ದು. ಈ ಸಂಚಿಕೆಯನ್ನು ಇಂಡಿಯಾ ಟುಡೇತನ್ನೆಲ್ಲ ಓದುಗರಿಗೂ ಕೊಡುವುದಿಲ್ಲ. ವಿಮಾನಗಳಲ್ಲಿ, ಮುಂಬಯಿ, ದಿಲ್ಲಿ, ಚೆನ್ನೈ, ಬೆಂಗಳೂರು ಮತ್ತು ಕೊಲ್ಕತ್ತಾಗಳಲ್ಲಿ ಮಾತ್ರ ಉಚಿತವಾಗಿ ಹಂಚುತ್ತದೆ. ಶ್ರೀಸಾಮಾನ್ಯರಿಗೂ ಇಂಡಿಯಾ ಟುಡೇಸಪ್ಲಿಮೆಂಟಿಗೂ ಸಂಬಂಧವೇ ಇರುವುದಿಲ್ಲ.

ಕಾರು, ಬೈಕು, ಹಡಗು, ಹೆಲಿಕಾಪ್ಟರು ಮತ್ತು ವಿಮಾನಗಳನ್ನು ಕೊಳ್ಳ(!)ಬಯಸುವವರಿಗಾಗಿ ಈ ಭೂಪರು ಒಂದು ಸಪ್ಲಿಮೆಂಟು ತರುತ್ತಾರೆ.

ಒಂದು ಸಾವಿರದ ಹನ್ನೊಂದು ಕೋಟಿ ರೂಪಾಯಿಗಳ ವಿಮಾನವಿದೆ ಬೇಕಾ? ನೂರು ಕಿಲೋಮೀಟರು ಸ್ಪೀಡಿನಲ್ಲಿ ಓಡುತ್ತಿರುವ ಗಕ್ಕನೆ ಬ್ರೇಕು ಹಾಕಿದರೆ 3.8ಸೆಕೆಂಡುಗಳಲ್ಲಿ ಛಕ್ಕಂತ ನಿಂತು ಬಿಡುವ ಕಾರಿದೆ ಬೇಕಾ? ನಾಲ್ಕು ಲಕ್ಷ ಎಪ್ಪತ್ಮೂರು ಸಾವಿರ ರೂಪಾಯಿಗಳ, ಒಂದೇ ಸೀಟಿನ ಬೈಕಿದೆ ತಗೊಳ್ಳಿ! ಕೇವಲ 206ಕೋಟಿ ರೂಪಾಯಿಗಳ ಹಡಗಿದೆ : ಖರೀದಿಸಿ. ಅದು ದುಬಾರಿ ಅನಿಸಿದರೆ ಬರೀ 41ಲಕ್ಷದ ಹೆಲಿಕಾಪ್ಟರೊಂದಿದೆ : ಬುಕ್ ಮಾಡಿ ಎಂಬಂಥ ರಿಚ್ಚು(?) ಲೇಖನಗಳಿರುತ್ತವೆ, ಇಂಡಿಯಾ ಟುಡೇ ಎಂಬ ಮಹಾನ್ ಪತ್ರಿಕೆಯ ವಿಶೇಷ ಪುರವಣಿಯಲ್ಲಿ.

ಇವುಗಳನ್ನೆಲ್ಲ ಕಣ್ಣಾಡಿಸಿ ಕಸದ ಬುಡ್ಡಿಗೆ ಬಿಸಾಡಿ ಸುಮ್ಮನಾಗಿ ಬಿಡಬಹುದು. ಅವರದು ಅಪ್ಪಟ ವ್ಯಾಪಾರೀ ಕಸುಬು. ಆದರೆ ಇವತ್ತಿಗೆ ಸ್ಪೈಸ್ಯಾವ ಮಟ್ಟಕ್ಕೆ ಇಳಿದಿದೆ ಎಂಬುದನ್ನು ನೀವು ಸೆಪ್ಟೆಂಬರ್ 3ರ ಸಂಚಿಕೆಯನ್ನು ನೋಡಿಯೋ ನಿರ್ಧರಿಸಬೇಕು.

ಅದರಲ್ಲಿ ಕುದುರೆ ಸವಾರಿ-ಸಫಾರಿಗಳ ಬಗ್ಗೆ ಲೇಖನವಿದೆ. ಫ್ರೆಂಚ್ ಅಡುಗೆಯ ವಿವರಗಳಿವೆ. ಯಥಾ ಪ್ರಕಾರ ಗಜ ಶ್ರೀಮಂತರಿಗೆ ಮಾತ್ರ ದಕ್ಕಬಹುದಾದ ಪ್ರವಾಸಗಳು, ಮನೆಯ ಸೌಂದರ್ಯ ಸಾಧನಗಳು ಮುಂತಾದವುಗಳ ಕುರಿತು ಬರೆದಂಥ ಲೇಖನಗಳ ಮಧ್ಯೆ ಥಟ್ಟನೆ ಬ್ರಾಕುರಿತಾದ್ದೊಂದು ಲೇಖನವಿದೆ.

ಇದು ಹೊಸದೇನಲ್ಲ. ಕಟಿಬಂಧ, ಕುಚ ಬಂಧಗಳ ಬಗ್ಗೆ ರೀಮುಗಟ್ಟಲೆ ಬರೆದವರಿದ್ದಾರೆ. ಬ್ರಾ ಧರಿಸುವುದನ್ನು ನಮ್ಮ ಸ್ತ್ರೀ ಸಂಕುಲ ಆರಂಭಿಸಿಯೇ ನೂರು ವರ್ಷಗಳಾಗಿವೆ ಎಂಬುದನ್ನು ವಿವರಿಸುವಂತಹ ಲೇಖನವಿದು. ಆದರೆ ಲೇಖನದೊಂದಿಗೆ ಪ್ರಕಟವಾಗಿರುವ ಫೋಟೊಗಳೆಂಥವು? ನಾಗರಿಕ ಸಮಾಜದ ಅಸಹ್ಯಾತಿರೇಕಗಳೆಂದೇ ಪರಿಗಣಿಸಲಾದ ಪ್ಲೇಬಾಯ್, ಪೆಂಟ್ ಹೌಸ್ ಮತ್ತು ಕನ್ನಡದಲ್ಲಿದ್ದು ಸತ್ತ ರತಿ ವಿಜ್ಞಾನದಂತಹ ಪತ್ರಿಕೆಗಳಲ್ಲಿ ಪ್ರಕಟವಾಗುವ ಫೋಟೊಗಳಿಗಿಂತಲೂ ಅಸಹ್ಯಕರವಾದ ಫೋಟೋಗಳನ್ನು ಪ್ರಕಟಿಸಲಿಕ್ಕೆ ರಾಷ್ಟ್ರದ ನಂಬರ್ ಒನ್ ವಾರಪತ್ರಿಕೆಯಾದ ಇಂಡಿಯಾ ಟುಡೇನೇ ಬೇಕಾ?

ಅಸಹ್ಯವನ್ನು ಉಂಡು ಮಾಡುವ ಮನಸ್ಸುಗಳಿಗೆ ಪ್ರತಿಯೊಂದು ವ್ಯಾಪಾರವೇ. ಇನ್ನಷ್ಟು ಕಟಿ ಬಂಧದ ಫೋಟೊಗಳನ್ನು ಹಾಕಿದರೆ ಮತ್ತಷ್ಟು ಜಾಹಿರಾತು ಸಿಕ್ಕುತ್ತದೆ ಅನ್ನೋದಾದರೆ ಇಂಡಿಯಾ ಟುಡೇಪ್ರತ್ಯೇಕವಾಗಿ ಕಟಿ-ಕುಚ ಬಂಧವಿಶೇಷಾಂಕವನ್ನೇ ಹೊರತಂದೀತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X