ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದನೇ ಕ್ಲಾಸೆಂದರೆ ಐದು ವರ್ಷ ಹತ್ತು ತಿಂಗಳು ಕಲಿತದ್ದರ ಮೊತ್ತ!

By Staff
|
Google Oneindia Kannada News


ಬಿಡಿ, ಇವೆಲ್ಲವೂ ಪ್ರಿ ನರ್ಸರಿ-ಎಲ್ಕೇಜಿ-ಯುಕೇಜಿಯಂಥ ಪೂರ್ವ ಪ್ರಾಥಮಿಕ ತರಗತಿಗಳನ್ನು ಓದಲು ಅನುಕೂಲವಿರುವ ಮನೆಯ ಮಕ್ಕಳಿಗೆ ಸಂಬಂಧಿಸಿದ ಸಂಗತಿಗಳು. ಆದರೆ ಐದು ವರ್ಷ ಹತ್ತು ತಿಂಗಳು ಬೆಳೆದು ಒಂದನೇ ಕ್ಲಾಸಿಗೆ ಬರುವ ಮಗು ಆ ತನಕ ಎಲ್ಲಿ ಕಲಿತಿರುತ್ತದೆ? ಏನನ್ನು ಕಲಿತಿರುತ್ತದೆ?

ಒಂದು ಅಂದಾಜಿನ ಪ್ರಕಾರ, ಮನೋ ವಿಜ್ಞಾನಿಗಳೂ ಸಮ್ಮತಿಸುವ ಸಂಗತಿಯೆಂದರೆ 2ವರ್ಷ 10ತಿಂಗಳಿಂದ ಐದು ವರ್ಷ, ಹತ್ತನೇ ತಿಂಗಳ ಮಧ್ಯದ ಅವಧಿಯಲ್ಲೇ ಮಗುವು ಅತಿ ಹೆಚ್ಚಿನದನ್ನು, ಅತ್ಯಂತ ಸ್ಪಷ್ಟವಾಗಿ ಕಲಿಯಲು ಸಾಧ್ಯ. ಆ ವಯಸ್ಸಿನಲ್ಲಿ ಭಾಷೆಯಾಂದನ್ನೇ ಅಲ್ಲ, ಲೆಕ್ಕ(ಗಣಿತ) ಮತ್ತು ಮಗುವಿಗೆ ಆಸಕ್ತಿಯಿರುವಂಥ fine arts ಕೂಡ ಕಲಿಸಲು ಸಾಧ್ಯ. ಒಂದನೇ ಕ್ಲಾಸಿಗೆ ಬರುವ (5.10)ಹೊತ್ತಿಗೆ ಮಗುವನ್ನು ಮನೆಯಲ್ಲಿ, ಬಾಲವಾಡಿಗಳಲ್ಲಿ, ಶಿಶುವಿಹಾರ(ಬಿನ್ನೆತ್ತೆ)ಗಳಲ್ಲಿ ಕೊಂಚ ಮಟ್ಟಿಗೆ train up ಮಾಡಿದ್ದರೂ ಅದು ಸಲೀಸಾಗಿ ಇಂಗ್ಲಿಷ್‌ ಕಲಿಸುತ್ತದೆ.

ಇದರ ಚರ್ಚೆಯ ಮಧ್ಯೆಯೇ ನಾವು ಇಂಗ್ಲಿಷ್‌ ಕಲಿತದ್ದನ್ನು ನೆನಪು ಮಾಡಿಕೊಳ್ಳಿ? ನಾಲ್ಕನೇ ಕ್ಲಾಸಿಗೆ ನಮ್ಮ ಕೈಗೆ ಎಬಿಸಿಡಿ ಪುಸ್ತಕ ಕೊಟ್ಟರು. ಕ್ಲಾಸಿನಲ್ಲಿ ಅಪ್ಪಿತಪ್ಪಿ ಕೂಡ ಯಾರೂ ಇಂಗ್ಲಿಷ್‌ ಮಾತನಾಡುತ್ತಿರಲಿಲ್ಲ. ಸ್ಪೆಲಿಂಗ್‌ ಹೇಳಿಕೊಡುವಾಗ‘ could ಕುಲ್ಡ್‌ ಅಲ್ಲಲೇ, ಕುಡ್ಡು’ ಎಂದು ಎಂದು ತಮಾಷೆ ಮಾಡುತ್ತಿದ್ದರು. ಏಳನೇ ಕ್ಲಾಸಿನ ಹೊತ್ತಿಗೆ ರೆನ್‌ ಅಂಡ್‌ ಮಾರ್ಟಿನ್‌ ಗ್ರಾಮರ್‌ ಪುಸ್ತಕ ತಂದುಕೊಟ್ಟರೂ, ಹೇಗೋ ಒಂದು, ತಿಳಿದದ್ದು ಕಲಿತು, ಇದ್ದೂದರಲ್ಲಿ ನಾನೇ ಜಾಣ ಎಂಬಂತೆ ಕೈ ತುಂಬ ಅವರು ಕೊಟ್ಟ ಮಾರ್ಕುಗಳನ್ನು ಏಳನೇ ಕ್ಲಾಸಿನಲ್ಲಿ ತೆಗೆದುಕೊಂಡು ಎಂಟನೇ ಕ್ಲಾಸಿಗೆ ಇಂಗ್ಲಿಷ್‌ ಮೀಡಿಯಮ್ಮಿಗೆ ಸೇರಿಕೊಂಡರೆ -ಭಗವಂತಾ!

ಇಂಗ್ಲಿಷ್‌ ಮೀಡಿಯಮ್ಮು ಎಂಬ ಒಂದೇ ಕಾರಣಕ್ಕಾಗಿ ನಮಗೆ ಶಾಲೆಯೇ ಬೇಡವೆನ್ನಿಸುತ್ತಿತ್ತು. ಇನ್ನೊಂದು ಕಡೆ ಹಳೆಗನ್ನಡದ ನರಿಯುಂ ಬಿಲನುಂ, ಪರಮ ವಿಭೂತಿ ಶಿವಭೂತಿ, ನೀರೊಳಗಿರ್ದಂ ಬೆಮರ್ದನುರಗ ಪತಾಕಂ ತರಹದ ಪಾಠಗಳು, ಜೊತೆಗೆ ಮ್ಯಾಥಮೆಟಿಕ್ಸು.

ಎಂಟನೇ ವಯಸ್ಸಿಗೆ ಸೈಕಲ್‌ ತುಳಿಯುವುದನ್ನು ಕಲಿಸದೆ, ಯೂನಿವರ್ಸಿಟಿಗೆ ಬಂದ ಮೇಲೆ ಕಲಿಸುತ್ತೇನೆ ಎಂದು ಹೊರಟರೆ ಏನೆಲ್ಲ ಆಭಾಸಗಳಾಗುತ್ತದೆಯೋ, ಅದೆಲ್ಲ ಕಿರಿಕಿರಿ-ಆಭಾಸ ಐದನೇ ಕ್ಲಾಸಿಗೆ ಇಂಗ್ಲಿಷ್‌ ಕಲಿಸಿ, ಎಂಟನೇ ಕ್ಲಾಸಿಗೆ ಇಂಗ್ಲಿಷ್‌ ಮೀಡಿಯಮ್ಮಿಗೆ ಕಳಿಸಿದರೆ ಆಗುತ್ತದೆ.

ಮೊದಲು ಮಾತೃಭಾಷೆಯನ್ನು ಚೆನ್ನಾಗಿ ಕಲಿಸಿ, ಆಮೇಲೆ ಇಂಗ್ಲಿಷ್‌ ಕಲಿಸೋಣ ಎನ್ನುವವರಿದ್ದಾರೆ. ಮಾತೃಭಾಷೆಯ ಜೊತೆಯಲ್ಲೇ ಇಂಗ್ಲಿಷನ್ನೂ ಕಲಿಸಬೇಕಾದ ವಯಸ್ಸು ಅದು. ಹಲ್ಲುಜ್ಜುವುದು, ಇನ್‌ ಶರ್ಟ್‌ ಮಾಡಿಕೊಳ್ಳುವುದು, ದೇವರಿಗೆ ನಮಸ್ಕಾರ ಮಾಡುವುದು, ಹೊಸ ಆಟ ಆಡುವುದು, ಪ್ರಶ್ನೆ ಕೇಳುವುದು -ಇವೆಲ್ಲವನ್ನೂ ಒಟ್ಟೊಟ್ಟಿಗೆ ಕಲಿತ ಹಾಗೆಯೇ ಮಗುವು ಒಟ್ಟೊಟ್ಟಿಗೆ ಭಾಷೆಗಳನ್ನೂ ಕಲಿಯುತ್ತದೆ. ‘ ಸರಿಯಾಗಿ ಕನ್ನಡವೇ ಬಾರದಿರೋ ಮಗೂಗೆ ಇಂಗ್ಲಿಷ್‌ ಕಲಿಸ್ತೀರಲ್ರೀ’ ಎಂದು ಚೀರುವವರ ಮನೆಯ ಮಕ್ಕಳೇ, ಯಾರೂ ಹೇಳಿಕೊಡದೆ ಕೇವಲ ಟೀವಿ ನೋಡಿ ಹಿಂದಿ ಕಲಿತು ಬಿಟ್ಟಿರುತ್ತಾರೆ. ಇದಕ್ಕೇನಂತೀರಿ?

ಭಾಷೆಯ ವಿಷಯಕ್ಕೆ, ಮಕ್ಕಳ ಕಲಿಕೆಯ ವಿಷಯಕ್ಕೆ ಬಂದಾಗ ಎಲ್ಲರೂ ತಲೆಗೊಬ್ಬರಂತೆ ಮಾತಾಡುವವರೇ. ತನ್ನ ಮಗುವಿಗೆ ಏನನ್ನ ಕಲಿಸಬೇಕು ಎಂಬುದು ಅವರ ತಂದೆಯ-ತಾಯಿಯ ಹಕ್ಕು. ಅವರ ತೀರ್ಮಾನ ಅಂತಿಮವಾಗಬೇಕು.

ಆಕಸ್ಮಾತ್‌ ಸರ್ಕಾರಕ್ಕೆ ಅಥವಾ ಆಸಕ್ತರಿಗೆ, ಕನ್ನಡಕ್ಕೆ ಬಹುದೊಡ್ಡ ಸ್ಥಾನಮಾನ ಕಲ್ಪಿಸಬೇಕು ಎಂಬ ಇಚ್ಛೆ ಇದ್ದದ್ದೇ ಆದರೆ -ಇಂಥದ್ದೊಂದು ನಿರ್ದಿಷ್ಟ ಕನ್ನಡ ಪರೀಕ್ಷೆ ಪಾಸು ಮಾಡದಿದ್ದರೆ ಯಾವ ನೌಕರಿಯನ್ನೂ ಕೊಡುವುದಿಲ್ಲ ಅಂತ ಕಡ್ಡಾಯ ನಿಯಮ ಮಾಡಲಿ. ಎಲ್ಲರೂ ಬಾಯಿ ಮುಚ್ಚಿಕೊಂಡು ಕನ್ನಡ ಕಲಿಯುತ್ತಾರೆ.

ನಿಮಗೆ ಗೊತ್ತಿರಲಿ : ಅದೆಂಥ ಇಂಗ್ಲಿಷ್‌ ಕಲಿತಿದ್ದರೂ ಇಂಗ್ಲೆಂಡಿನಲ್ಲಿ ನೀವು ಉನ್ನತ ವ್ಯಾಸಂಗ ಮಾಡಬೇಕೆಂದು ಬಯಸಿದರೆ, ಅಲ್ಲಿ ಮತ್ತೊಂದು ಇಂಗ್ಲಿಷ್‌ ಪರೀಕ್ಷೆಗೆ ಕೂತು ಪಾಸಾಗಲೇ ಬೇಕು. ಇಲ್ಲದಿದ್ದರೆ ವಿದ್ಯಾರ್ಥಿಯಾಗಿ ಆ ದೇಶದೊಳಕ್ಕೆ ನಿಮಗೆ ಪ್ರವೇಶವೇ ಇಲ್ಲ!

ಕನ್ನಡಕ್ಕೆ ಜಯವಾಗಲಿ.


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X