• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒಂದನೇ ಕ್ಲಾಸೆಂದರೆ ಐದು ವರ್ಷ ಹತ್ತು ತಿಂಗಳು ಕಲಿತದ್ದರ ಮೊತ್ತ!

By Staff
|


ಒಂದು ಮಗುವಿನ ಕಲಿಕೆ ಪ್ರಕ್ರಿಯೆ ಹೇಗಿರುತ್ತದೆ ಅಂತ ಅರ್ಥ ಮಾಡಿಕೊಂಡರೆ ಅದಕ್ಕೆ ಯಾವ ವಯಸ್ಸಿನಿಂದ ಏನನ್ನು ಮತ್ತು ಎಷ್ಟನ್ನು ಕಲಿಸಲು ಸಾಧ್ಯ ಅಂತ ತೀರ್ಮಾನಿಸಬಹುದು. ಹೆಚ್ಚಿನ ಮಂದಿ ಕನ್ನಡಪರ ಹೋರಾಟಗಾರರು ಈ ಕಲಿಕೆಯ ಪ್ರಕ್ರಿಯೆ ಬಗ್ಗೆ ಯೋಚಿಸಿರುವುದಿಲ್ಲ.

  • ರವಿ ಬೆಳಗೆರೆ
ಒಂದನೇ ಕ್ಲಾಸಿನಿಂದ ಮಕ್ಕಳಿಗೆ ಇಂಗ್ಲಿಷ್‌ ಕಲಿಸಬೇಕು ಎಂಬ ನಿರ್ಧಾರ ತೆಗೆದುಕೊಂಡು ಹೊರಟ್ಟಿ ಒಳ್ಳೆ ಕೆಲಸ ಮಾಡಿದ್ದಾರೆ.

ಶಿಕ್ಷಣಕ್ಕೆ ಸಂಬಂಧಿಸಿದಂತೆ ಸರ್ಕಾರ ಏನು ಮಾಡಿದರೂ, ಯಾವ ಕ್ರಮ ಕೈಗೊಂಡರೂ ಅದನ್ನು ವಿರೋಧಿಸಲಿಕ್ಕೆ ಒಂದು ಗುಂಪು ಇದ್ದೇ ಇರುತ್ತದೆ. ಆ ಗುಂಪಿಗೆ ನಾನಾ ಕಾರಣಗಳೂ ಇರುತ್ತವೆ. ಹಾಗೆಯೇ ಒಂದನೇ ತರಗತಿಯಿಂದ ಬೇಡ ಮೂರನೇ ತರಗತಿಯಿಂದ ಕಲಿಸಿ, ಮೂರೂ ಬೇಡ, ಐದನೇ ತರಗತಿಯಿಂದ ಕಲಿಸಿ ಅಂತ ತಲೆಗೊಂದು ಮಾತನಾಡುವವರು ಕರ್ನಾಟಕದಲ್ಲೂ ಇದ್ದಾರೆ. ಅವರ ಪೈಕಿ ಸಾಹಿತಿಗಳು, ಪ್ರಾಥಮಿಕ ಮತ್ತು ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಸಂಬಂಧ ಪಡದವರು, ಸ್ವಚ್ಛವಾಗಿ ಒಂದೇ ಒಂದು ವಾಕ್ಯವನ್ನು ಸ್ಪಷ್ಟವಾಗಿ ಕನ್ನಡದಲ್ಲಿ ಮಾತನಾಡಲು ಬಾರದ ಕನ್ನಡ ಹೋರಾಟಗಾರರು, ಕೈ ತುಂಬ ಸಂಬಳ ತೆಗೆದುಕೊಂಡು ವರ್ಷಗಟ್ಟಲೆ ಪಾಠ ಮಾಡದ ಲೆಕ್ಚರರ್‌ಗಳು, ರೀಡರ್‌ಗಳು, ಪ್ರೊಫೆಸರುಗಳು- ಎಲ್ಲ ಇದ್ದಾರೆ. ಕೆಲವರ ಮಕ್ಕಳು ಕನ್ನಡವನ್ನೇ ಓದದೆ ದೊಡ್ಡ ಹುದ್ದೆಗಳಿಗೆ, ಗಾದಿಗಳಿಗೆ ತಲುಪಿದ್ದಾರೆ, ತಗುಲಿಕೊಂಡಿದ್ದಾರೆ. ಇರಲಿ.

ಒಂದು ಮಗುವಿನ ಕಲಿಕೆ ಪ್ರಕ್ರಿಯೆ ಹೇಗಿರುತ್ತದೆ ಅಂತ ಅರ್ಥ ಮಾಡಿಕೊಂಡರೆ ಅದಕ್ಕೆ ಯಾವ ವಯಸ್ಸಿನಿಂದ ಏನನ್ನು ಮತ್ತು ಎಷ್ಟನ್ನು ಕಲಿಸಲು ಸಾಧ್ಯ ಅಂತ ತೀರ್ಮಾನಿಸಬಹುದು. ಹೆಚ್ಚಿನ ಮಂದಿ ಕನ್ನಡಪರ ಹೋರಾಟಗಾರರು ಈ ಕಲಿಕೆಯ ಪ್ರಕ್ರಿಯೆ ಅಥವಾ ಪ್ರೋಸಸ್‌ ಬಗ್ಗೆ ಯೋಚಿಸಿರುವುದಿಲ್ಲ.

ನಾವು, ರಾಜ್ಯದಾದ್ಯಂತ ಶಾಲೆಗಳನ್ನು ನಡೆಸುವವರು. ಒಂದು ಮಗುವಿಗೆ ಎರಡು ವರ್ಷ ಹತ್ತು ತಿಂಗಳು ತುಂಬಿದ ತಕ್ಷಣ ಶಾಲೆಗೆ ಸೇರಿಸಿ ಅಂತ ಪೋಷಕರಿಗೆ ಹೇಳುತ್ತೇವೆ. ಹಾಗೆ ಬರುವ 2.10ರ ಮಗುವನ್ನು ಪ್ರೀ ನರ್ಸರಿ ಕ್ಲಾಸಿಗೆ ಸೇರಿಸಿಕೊಳ್ಳುತ್ತೇವೆ. ಅಲ್ಲಿಂದಲೇ ಮಗುವಿನ ಪ್ರೋಸಸ್‌ ಆಫ್‌ ಲರ್ನಿಂಗ್‌(ಕಲಿಕೆಯ ಪ್ರಕ್ರಿಯೆ) ಆರಂಭವಾಗುತ್ತದೆ. ಅಮ್ಮನನ್ನು ಬಿಟ್ಟು ಎರಡೂವರೆ ತಾಸು ಶಾಲೆಯಲ್ಲಿ ಇತರೆ ಮಕ್ಕಳೊಂದಿಗೆ ಇರುವುದು ಕೂಡ ಕಲಿಕೆಯ ಆರಂಭಿಕ ಭಾಗವೇ.

ಮನೆಗೂ ಶಾಲೆಗೂ ಇರುವ ಅಂತರ, ಅಮ್ಮನಿಗೂ ಶಿಕ್ಷಕಿಗೂ ಇರುವ ಅಂತರ, ತನ್ನ ತಮ್ಮ-ತಂಗಿ ಅಥವಾ ಅಕ್ಕ-ಅಣ್ಣನಿಗೂ ಕ್ಲಾಸಿನಲ್ಲಿರುವ ಇತರೆ ಮಕ್ಕಳಿಗೂ ಇರುವ ಅಂತರ -ಇತ್ಯಾದಿಗಳನ್ನು ಪ್ರೀ ನರ್ಸರಿ ಮಟ್ಟದಲ್ಲಿ ಅರ್ಥ ಮಾಡಿಕೊಳ್ಳುತ್ತ ಬೆಳೆಯುವ ಮಗು ಆ ಒಂದು ವರ್ಷದಲ್ಲಿ ಕಲಿಯಲಿಕ್ಕೆ ಬೇಕಾದ ವಿಲ್ಲಿಂಗ್‌ನೆಸ್‌ನ ಬೆಳೆಸಿಕೊಳ್ಳುತ್ತದೆ. ಸುಮ್ಮನೆ ಶಾಲೆಗೆ ಕರೆತಂದು, ಎರಡೂವರೆ ಮೂರು ತಾಸು ಅದಕ್ಕೆ ಆಟ-ಹಾಡು ಹೇಳಿಕೊಟ್ಟು ಅದನ್ನು ಮನೆಗೆ ಕಳಿಸಲಾಗುತ್ತದಾದರೂ ಒಂದು ವರ್ಷ ಹಾಗೆ ಆಡುವ ಮಗು 3ವರ್ಷ 10ತಿಂಗಳಿನ ಹೊತ್ತಿಗೆ ಎಲ್ಕೇಜಿಗೆ ಬರುವ ವೇಳೆಗೆ ಕಲಿಕೆಗೆ ಬೇಕಾದ ಸಂಪೂರ್ಣವಾದ ವಿಲ್ಲಿಂಗ್‌ನೆಸ್‌ ಪಡೆದಿರುತ್ತದೆ.

ಮೂರು ವರ್ಷ ಹತ್ತು ತಿಂಗಳು ಅಂದರೆ, ಮಗು ತೀರ ಚಿಕ್ಕದೇನಲ್ಲ. ಅದರ ಕಲಿಕೆಯ ತಾಕತ್ತೂ ಹಿಗ್ಗಿರುತ್ತದೆ. ಕ್ರಮೇಣ ಬಣ್ಣಗಳನ್ನು ಗುರುತಿಸುತ್ತದೆ. ಅಕ್ಷರಗಳನ್ನು ಗುರುತಿಸುತ್ತದೆ. ಅದಕ್ಕೆ ಮನೆಯ ಭಾಷೆ ಆಡಲು ಬರುತ್ತಿರುತ್ತದೆ. ನಮ್ಮ ಶಾಲೆಗಳಲ್ಲಿ ಎಲ್ಕೇಜಿಗೆ ಬರುವ ಮಗುವಿಗೆ ಅರ್ಧ ವರ್ಷ ಹೆಚ್ಚಿನದೇನನ್ನೂ ಕಲಿಸುವುದಿಲ್ಲ. ಇಂಗ್ಲಿಷಿನಲ್ಲಿ ಮಾತನಾಡುವಂತೆ ಒತ್ತಾಯಿಸುವುದಿಲ್ಲ. ಅಲ್ಲಿ ಕಲಿಕೆಗಿಂತ ಆಟದೆಡೆಗೆ ಗಮನವೇ ಜಾಸ್ತಿ. ಆಟವಾಡುತ್ತ ಒಂದು ಚಿಕ್ಕ ಕಲಿಕೆ, ಒಂದು ಬಿಡಿ ಅಕ್ಷರ, ಅಕ್ಷರದಿಂದ ಹುಟ್ಟುವ ಸ್ವರ ಕಲಿಸುತ್ತೇವೆ. ಅದೂ ಏನು, ಎಲ್ಕೇಜಿಗೆ ಸೇರಿದ ಆರು ತಿಂಗಳ ಮೇಲೆ.

ಆ ಘಟ್ಟದಲ್ಲಿ ಒಂದು ವರ್ಷ ಇದ್ದು, ನಾಲ್ಕು ವರ್ಷ ಹತ್ತನೇ ತಿಂಗಳಿಗೆ ಕಾಲಿಟ್ಟ ಮಗುವಿದೆಯಲ್ಲ? ನಮ್ಮ ದೃಷ್ಟಿಯಲ್ಲಿ ಅದು ಅಕ್ಷರ, ಸ್ಪೆಲಿಂಗ್‌ಗಳಷ್ಟೆ ಅಲ್ಲದೆ ಆಲ್ಭಬೆಟ್ಸ್‌ ಜೊತೆಗೆ ಒಂದು ಅಕ್ಷರ ಉತ್ಪತ್ತಿ ಮಾಡುವ ಸೌಂಡ್‌ನ ಕೂಡ ಅರ್ಥ ಮಾಡಿಕೊಳ್ಳಬಲ್ಲಷ್ಟು ಪ್ರಬುದ್ಧವಾದದ್ದು. ಕೇವಲ ಆಲ್ಫಬೆಟ್‌ ಕಲಿಸಿ, ಸ್ಪೆಲಿಂಗ್‌ ಕಂಠಪಾಠ ಮಾಡಿಸಿ ಇಂಗ್ಲಿಷ್‌ ಕಲಿಸುವ ಪ್ರಯತ್ನ ಮಾಡುವ ಕಾಲ -ಉಹುಂ, ಅದಾಗಲೇ ಹಳತಾಗಿದೆ.

ಈಗಿನದು ಆಲ್ಭಬೆಟ್‌ನ ಶಬ್ದವನ್ನು ಕಲಿಸುವ ಪದ್ಧತಿ. ಇದನ್ನು ಫೋನಿಕ್ಸ್‌ ನುತ್ತಾರೆ. ನಾವು ಕಲಿತ ಹಾಗೆ ಮಕ್ಕಳು ಈಗ ‘ ಎಬಿಸಿಡಿ’ ಕಲಿಯುವುದಿಲ್ಲ. ಬದಲಿಗೆ ಆಲ್ಫಬೆಟ್‌ಗಳು ಹೊರಡಿಸುವ ಧ್ವನಿಯನ್ನು ಕಲಿಯುತ್ತವೆ. ಎಬಿಸಿಡಿ ಬದಲಿಗೆ ಅಬ್‌ಕ್‌ಡ್‌ ಕಲಿಯುತ್ತವೆ. ಆ ಪದ್ಧತಿಯಲ್ಲಿ ಇಡೀ ವರ್ಣಮಾಲೆ ಕಲಿತು ಯುಕೇಜಿ ಮುಗಿಸಿ ಹೊರ ಬೀಳುವ ಹೊತ್ತಿಗೆ ಮಗುವಿಗೆ ಐದು ವರ್ಷಗಳಾಗಿರುತ್ತವೆ. ಆ ಮಗು 3 ಆಲ್ಫಬೆಟ್‌ಗಳನ್ನೊಳಗೊಂಡ ಒಂದು ಪದ ನಿರ್ಮಾಣ ಮಾಡಿರುವುದನ್ನು ಕಲಿತಿರುತ್ತದೆ. ಫೋನಿಕ್ಸ್‌ ಶಿಕ್ಷಣ ವಿಧಾನದ ಒಂದು ವೈಶಿಷ್ಟ್ಯವೆಂದರೆ, ಆ ವಿಧಾನದಲ್ಲಿ ಇಂಗ್ಲಿಷ್‌ ಕಲಿತ ಮಗು ಜನ್ಮದಲ್ಲಿ ಯಾವತ್ತಿಗೂ ತಪ್ಪಾಗಿ spell ಮಾಡುವುದಿಲ್ಲ. ಇನ್ನೂ ಒಂದು ವಿಶೇಷವೆಂದರೆ, ಒಂದಿಡೀ ಕ್ಲಾಸಿನ ಮಕ್ಕಳ ಕೈ ಬರಹ ಒಂದೇ ತೆರನಾದುದಾಗಿರುತ್ತದೆ!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more