• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒಂದು ಭಾನುವಾರ ಮನೆ ಮಂದಿಯಷ್ಟೇ ಒಂದಾಗಿ...

By Staff
|

‘ನಮ್ಮ ಮಕ್ಕಳು ನಮಗೆ ಅರ್ಥವಾಗೋದೇನು ಬಂತು, ಹೊಸದಾಗಿ?’ ಅನ್ನುತ್ತಿರೇನೋ? ಸರಿಯಾದ ಇಂಟರ್ಯಾಕ್ಷನ್‌ ಇಲ್ಲದೆ ಹೋದರೆ ನಮ್ಮ ಮಕ್ಕಳು, ನಮ್ಮ ಜೊತೆಯಲ್ಲಿ ಬೆಳೆಯುತ್ತಲೇ, ಆರೇ ತಿಂಗಳಲ್ಲಿ ಅಪರಿಚಿತರಾಗಿಬಿಡುತ್ತಾರೆ.

  • ರವಿ ಬೆಳಗೆರೆ

The magic of being togetherಈ ವಾರ ಎಲ್ಲ ಕೆಲಸಗಳನ್ನು ಬೇಗಬೇಗ ಮುಗಿಸಿ ಒಂದು ದಿವಸದ ಮಟ್ಟಿಗೆ ಎಲ್ಲಿಗಾದರೂ ಹೋಗಿ ಬಿಡೋಣ ಅಂತ ಅನ್ನಿಸಿದರೆ,ಆ ಒಂದು ದಿವಸವನ್ನು ನಾನು ಯಾರೊಂದಿಗೆ ಕಳೆಯಲು ಇಷ್ಟಪಡ್ತೀನಿ ಗೊತ್ತಾ?

ಸಾಮಾನ್ಯವಾಗಿ ಗಂಡಸರು ತಮ್ಮ Sunday ಕಳೆಯೋದಕ್ಕೆ ಗೆಳೆಯರನ್ನ ಆಯ್ಕೆ ಮಾಡಿಕೊಳ್ಳುತ್ತಾರೆ. ಗೆಳೆಯರೆಲ್ಲ ಸೇರಿ ಒಂದು ಕಡೆ ಇಸ್ಪೀಟಾಡಬಹುದು. ಎರಡು ಮೂರು ಕುಟುಂಬಗಳವರು ಒಟ್ಟಿಗೆ ಸೇರಿದರೂ, ಗಂಡಸರನೆಲ್ಲ ಇಸ್ಟೀಟಾಡುತ್ತ, ಹೆಂಗಸರೆಲ್ಲ ಹರಟುತ್ತ, ಮಕ್ಕಳೆಲ್ಲ ಆಡುತ್ತ -ಹೀಗೆ ತಾವು ತಾವೇ ಗ್ರೂಪುಗಳಾಗಿ ಕಾಲ ಕಳೆಯಬಹುದು. ವಾಪಸು ಬರುವ ದಾರಿಯಲ್ಲಿ ಹೆಂಡತಿಗೊಂದು ಸೀರೆ ಕೊಡಿಸಿ, ಮಕ್ಕಳಿಗೆ ಐಸ್‌ಕ್ರೀಮು ಕೊಡಿಸಿ ‘ಸಂಡೇ ಅದ್ಭುತವಾಗಿ ಕಳೆದೆವು’ ಅಂದುಕೊಂಡು ಹಿಂತಿರುಗಲೂಬಹುದು.

ಇದಲ್ಲ ಸಂತೋಷವಿಲ್ಲವೆಂದಲ್ಲ. ಆದರೆ ನನ್ನ ಸಂತೋಷವಿರೋದು-ಕೇವಲ ನಾನು, ನನ್ನ ಮನೆಯಾಕೆ ಮತ್ತು ಮೂವರು ಮಕ್ಕಳು-ಅಷ್ಟೇ ಒಟ್ಟಿಗೆ ಇರುವಂಥ ಒಂದು ಭಾನುವಾರದಲ್ಲಿ. ಅದೊಂದು ಚಿಕ್ಕ unit. ನಾವು ಐದೂ ಜನ ವಾರವಿಡೀ, ತಿಂಗಳಿಡೀ, ವರ್ಷವಿಡೀ ನಮ್ಮದೇ ಆದ ಪ್ರಪಂಚದಲ್ಲಿ ಕಳೆದುಹೋಗಿರುತ್ತೇವೆ. ಕೆಲವೊಮ್ಮೆ ದಿನಗಟ್ಟಲೆ ಒಬ್ಬರನ್ನೊಬ್ಬರು ಭೇಟಿಯಾಗಿರುವುದಿಲ್ಲ. ಮಾತು, ಬರೀ ಫೋನುಗಳಲ್ಲೇ ಮುಗಿದು ಹೋಗಿರುತ್ತದೆ.

ಹೀಗಾಗಿ ಅಪರೂಪಕ್ಕೊಮ್ಮೆ ಸಿಗುವ holiday, ಕೇವಲ ನಾವೇ ಐದು ಜನ ಒಟ್ಟಿಗಿರುವಂತಾಗಲಿ ಅಂತ ಬಯಸುತ್ತೇನೆ. ಅವತ್ತೇ ನಮಗೆ ನಿರಾತಂಕವಾಗಿ ಹರಟುವುದಕ್ಕೆ ಸಾಧ್ಯ. ಮೊಬೈಲ್‌ಗಳನ್ನು ಆಫ್‌ ಮಾಡಿಕೊಂಡಿರುತ್ತೇವೆ. ಅವತ್ತು ಪೇಪರು ಕೂಡ ಓದಬಾರದೆಂದು ದಿವ್ಯ ನಿರ್ಧಾರ. ಹಾಗೇನೇ ಅಮ್ಮನಿಗೆ ತಿಂಡಿ-ಊಟ ಮಾಡಿ ಬಡಿಸುವ ರಗಳೆಯಿಲ್ಲ. ಅಪ್ಪ-ಮಕ್ಕಳು ಆಫೀಸಿನ ವಿಷಯ ಮಾತನಾಡುವಂತಿಲ್ಲ. ಪತ್ರಿಕೋದ್ಯಮದ ಚರ್ಚೆ ನಿಷಿದ್ಧ.

ಅವತ್ತೇನಿದ್ದರೂ ನಮ್ಮ ನಮ್ಮ ಬಗ್ಗೆಯೇ ಮಾತು. ನಾವು ನೋಡಿದ ಸಿನೆಮಾದಿಂದ ಹಿಡಿದು ನಮ್ಮ ಮೊಬೈಲಿಗೆ ಬಂದ ಒಂದು ಕಳೆಪೆ ಜೋಕಿನ ತನಕ-ಏನು ಬೇಕಾದರೂ ಮಾತಾಡಬಹುದು. ಮಾತಾಡಬೇಕು.

ಹೀಗೆ ಒಂದು ದಿನ(ಮತ್ತೊಂದು ಅಂಥ ದಿನ ಮತ್ಯಾವ ಕಾಲಕ್ಕೆ ಸಿಗುತ್ತೋ?) ಕಳೆದು ಹಿಂತಿರುಗಿದ ಮೇಲೆ ಮತ್ತೆ ನಮ್ಮ ಗೂಡು ಬಿಟ್ಟು ದಿಕ್ಕಿಗೊಬ್ಬರಂತೆ ಹಾದು ಹೋಗಿರುತ್ತೇವಾದರೂ, ನಮ್ಮ ಮಧ್ಯದ ವ್ಯಕ್ತಿಗತ ಸಂಬಂಧಗಳು ಎಷ್ಟು ಇಂಪ್ರೂವ್‌ ಆಗಿರುತ್ತವೆ ಗೊತ್ತೆ? ಬೇರೆ ಗೆಳೆಯರ ಮನೆಗಳಿಗೆ ಹೋಗಿದಿದ್ದರೆ ಇನ್ನು ಮಜವಾಗಿ ಕಾಲ ಕಳೆಯುತ್ತಿದ್ದೆವೆಂಬುದು ನಿಜವಿರಬಹುದು. ಆದರೆ ನಮ್ಮ ಪುಟ್ಟ unitನ ಆರೋಗ್ಯ ಹೀಗೆ ವೃದ್ಧಿಸುತ್ತಿರಲಿಲ್ಲ.

‘ನಮ್ಮ ಮಕ್ಕಳು ನಮಗೆ ಅರ್ಥವಾಗೋದೇನು ಬಂತು, ಹೊಸದಾಗಿ?’ ಅನ್ನುತ್ತಿರೇನೋ? ಸರಿಯಾದ ಇಂಟರ್ಯಾಕ್ಷನ್‌ ಇಲ್ಲದೆ ಹೋದರೆ ನಮ್ಮ ಮಕ್ಕಳು, ನಮ್ಮ ಜೊತೆಯಲ್ಲಿ ಬೆಳೆಯುತ್ತಲೇ, ಆರೇ ತಿಂಗಳಲ್ಲಿ ಅಪರಿಚಿತರಾಗಿಬಿಡುತ್ತಾರೆ.

ಭಾನುವಾರಗಳ outgoingಗಳಿಗೆ ನಮ್ಮ ಜೊತೆಗೆ ಬೇರೆಯವರು, ಮಕ್ಕಳ ಗೆಳೆಯ-ಗೆಳತಿಯರು ಬಂದರೆ ಚೆನ್ನಾಗಿರುತ್ತದೆ ನಿಜ. ಆದರೆ ನಾವೇ ಐದು ಜನ ಇದ್ದಾಗ ಪರಸ್ಪರ ಮಾತಾಡಿಕೊಂಡಷ್ಟು, open up ಆದಷ್ಟು ಸಲೀಸಾಗಿ ಒಬ್ಬೇ ಒಬ್ಬ ಪರಕೀಯನಿದ್ದರೂ ಮಾತಾಡಿಕೊಳ್ಳಲು ಆಗುವುದಿಲ್ಲ. ಆಡಬೇಕಾದ ಮಾತು, ಜಗಳ, ಪ್ರೀತಿ, ಮನಸ್ತಾಪ ಎಲ್ಲವನ್ನೂ ಪೋಸ್ಟ್‌ಫೋನ್‌ ಮಾಡಿಬಿಡುತ್ತೇವೆ. ಇವ್ಯಾವು ಫೋಸ್ಟ್‌ಫೋನ್‌ಆಗಬಾರದು.

ಜಗಳ, ಮನಸ್ತಾಪ, ಅಸಹನೆ, ಅನುಮಾನಗಳು ಕೂಡ ಆಗಿಂದಾಗ್ಗೆ ಹೊರಬಿದ್ದು ಬಿಡಬೇಕು. ಅವು ನಾವೇ ಐದು ಜನರಿದ್ದಾಗಷ್ಟೆ ನಿರರ್ಗಳವಾಗಿ ಹೊರಬೀಳಲು ಸಾಧ್ಯ. ಹೀಗಾಗಿ ಒಂದೇ ಒಂದು ಚಿಕ್ಕ ಅವಕಾಶ ಸಿಕ್ಕರೂ ಐದೂ ಜನ ಎಲ್ಲಿಗಾದರೂ ಪರಾರಿಯಾಗಿರುತ್ತೇವೆ.

ಭಾನುವಾರದ ರಜೆ ಬಂದ ಕೂಡಲೇ ‘ಯಾರ ಮನೆಗಾದರೂ ಹೋಗೋಣ’ ಅಂತಲೋ ‘ಮನೆಗೆ ಯಾರನ್ನಾದರೂ ಕರೆಯೋಣ’ ಅಂತಲೋ ಪ್ಲಾನ್‌ ಮಾಡುವ ಬದಲು, ಎಲ್ಲರನ್ನೂ ಬಿಟ್ಟಾಕಿ ‘ನಾವಷ್ಟೆ ಎಲ್ಲಿಗಾದರೂ ಹೋಗಿ ದಿನವಿಡೀ ಒಟ್ಟಿಗಿಟ್ಟು ಬರೋಣ’ ಅಂತ ಪ್ಲಾನ್‌ ಮಾಡಿ ನೋಡಿ. ನಿಮ್ಮ ಮನೆಯಾಳಗಿನ ಮಂದಿಯ ಮಧ್ಯದ ಸಂಬಂಧಗಳು ತುಂಬ ಸರಿ ಹೋಗುತ್ತವೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more