• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೊದಲ ದಿನ ಮೌನ, ಅಳುವೇ ತುಟಿಗೆ ಬಂದಂತೆ...

By Staff
|
Ravi Belagere on Thatskannada.com ರವಿ ಬೆಳಗೆರೆ
‘ಗಂಡಿನ ಬಗ್ಗೆ, ಹೆಣ್ಣಿನ ಬಗ್ಗೆ, ಪ್ರೇಮದ ಬಗ್ಗೆ, ಬದುಕಿನ ಬಗ್ಗೆ, ಸಾವಿರಾರು ಪುಟ ಬರೆದ ನಂತರವೂ finaly, ಹೆಂಗಸಿಗೆ ಏನು ಬೇಕು ಎಂಬ ಪ್ರಶ್ನೆಗೆ ನನಗೆ ಉತ್ತರವೇ ಸಿಗಲಿಲ್ಲ ’ ಅಂತ ಒಬ್ಬ ದಾರ್ಶನಿಕ ಹೇಳಿದ್ದಾನಂತೆ.

ಇಂಥ ಮಾತುಗಳೆಲ್ಲ ಗಂಡು ಪ್ರಪಂಚದ ಎಕ್ಸಾಝರೇಶನ್ನುಗಳು, ಅಷ್ಟೆ. ಹೆಂಗಸು ತೀರ ಗಂಡಸು ಅಂದುಕೊಂಡಷ್ಟು ನಿಗೂಢವಲ್ಲ. ಗಂಡಸಿನಂತೆಯೇ ಆಕೆಯೂ ತನ್ನ ಅಹಂಕಾರ, ತನ್ನ ಐಡೆಂಟಿಟಿ, ತನ್ನ ಜಾಗ, ಸ್ಥಾನ, ಅನ್ನ ಮತ್ತು ಕಾಮಗಳಿಗೆ ಭಂಗ ಬಂದಾಗ ತನ್ನದೇ ಆದ ರೀತಿಯಲ್ಲಿ ಬಡಿದಾಡುತ್ತಾಳೆ. ‘ಹೆಂಗಸು ಮನಸು ಮಾಡಿದರೆ ಏನು ಬೇಕಾದರೂ ಮಾಡುತ್ತಾಳೆ’ ಅಂದುಕೊಳ್ಳುವುದು ಗಂಡಸಿನ ಭ್ರಮೆಗಳಲ್ಲಿ ಒಂದು. ‘ಗಂಡಸಿಗಿಂತ ಹೆಂಗಸಿಗೆ ಎಂಟು ಪಟ್ಟು ಕಾಮ ಹೆಚ್ಚು’ ಅಂದುಕೊಳ್ಳುವುದು ಗಂಡಸಿನ ಭಯಗಳ ಪೈಕಿ ಒಂದು.

ಆದರೆ ಹೆಣ್ಣು ಕೆಲವು ಸಂಗತಿಗಳಲ್ಲಿ, ವಿಷಯಗಳಲ್ಲಿ ಗಂಡಸಿಗಿಂತ ಕೊಂಚ ಭಿನ್ನ. ನೀವೇ ಗಮನಿಸಿ ನೋಡಿ. ಪ್ರತಿನಿತ್ಯ ಸೌಮ್ಯವಾಗಿ, ಸಂತೋಷವಾಗಿ ಪಕ್ಕದವರನ್ನು ಮಾತನಾಡಿಸುತ್ತ ಹರಟಿಕೊಂಡು ಕೆಲಸ ಮಾಡುವ ಉದ್ಯೋಗಿಯಾಬ್ಬಾಕೆ, ಇದ್ದಕ್ಕಿದ್ದಂತೆ ಒಂದು ದಿನ ಸರಕ್ಕನೆ ಸಿಡುಕುತ್ತಾಳೆ. ಸಣ್ಣ ಮಾತಿಗೂ ವಿಪರೀತ hurt ಆಗುತ್ತಾಳೆ. ಫಕ್ಕನೆ ಕಣ್ಣೀರಾಗುತ್ತಾಳೆ. ಪರಚಿ ಜಗಳವಾಡಿ ಬಿಡುತ್ತಾಳೆ. ಕೆಲಸದಲ್ಲಿ ತುಂಬ ತಪ್ಪು ಮಾಡುತ್ತಾಳೆ.

Be sure, ಆಕೆಯ ಮುಟ್ಟಿನ ದಿನಗಳು ಹತ್ತಿರದಲ್ಲಿವೆ. ದೇಹದಲ್ಲಿ ಈಸ್ಟ್ರೋಜೆನ್‌ ಎಂಬ ಹಾರ್ಮೋನು ಖಾಲಿಯಾಗಿದೆ. ಆಕೆ ಏನೂ ಒಲ್ಲಳು. ದೈಹಿಕವಾಗಿ ಬಲಹೀನೆ. ಮಾನಸಿಕವಾಗಿ ವಲ್ನರಬಲ್‌. ಆಕೆಯನ್ನು ಎಚ್ಚರಿಕೆಯಿಂದ ನೋಡಿಕೊಳ್ಳಿ. ಜಗಳ ಅವಾಯ್ಡ್‌ ಮಾಡಿ. ಪ್ರಯಾಣಕ್ಕೆ ಒತ್ತಾಯಿಸಬೇಡಿ. ಮನೆಗೆಲಸ ಮಾಡಿಸಬೇಡಿ. ನೆನಪಿರಲಿ, ಹಿಂದಿನವರು ಹೆಂಗಸರಿಗೆ ಇಂಥದೊಂದು ರಿಯಾಯಿತಿ, ರೆಸ್ಟು ಸಿಗಲೆಂದು-ಮೂರು ದಿನ ದೂರ ಕೂಡಿಸುತ್ತಿದ್ದರು. ಇನ್ನೂ ಐದಾರು ದಿನಗಳಿವೆ ಎನ್ನುವಾಗಲೇ ಆಕೆಯಲ್ಲಿ ಸೆಡವು, ಸಿಟ್ಟು, ಕಾಲುಸೆಳೆತ, ಬೆನ್ನಲ್ಲಿ ಛಳುಕು, ಸುಸ್ತು, ಗಂಡಲರ್ಜಿ(!) ಆರಂಭವಾಗಿರುತ್ತದೆ. ಅಂಥ ದಿನಗಳಲ್ಲಿ ಜಗಳವಾದರೆ, ನೀವೇ ಸೋತು ಬಿಡಿ. ಜಗಳದ ಅಂತ್ಯವನ್ನು(ಆ ದಿನಗಳಲ್ಲಿ) ಉಂಡು ಮುಗಿದ ನಂತರದ ಕ್ರಿಯೆಯಿಂದ ಸಾಧಿಸಬಹುದು ಅಂದುಕೊಂಡರೆ ಗಂಡಸು ದಡ್ಡ! ಹೆಚ್ಚಿನ ಹೆಂಗಸರ ಪಾಲಿಗೆ ಅದು ಏನೂ ಒಲ್ಲದ ಶೂನ್ಯ ಕಾಲ. ಅವರನ್ನು ಒತ್ತಾಯಿಸಬಾರದು.

ಹೆಂಗಸರಲ್ಲಿ oestrogen ಅಂತ ಕರೆಯಲ್ಪಡುವ ಈ ಹಾರ್ಮೋನೇ ವಿಚಿತ್ರ. ಅದು ಅವರ ಪಾಲಿನ ಸಂಜೀವಿನಿ. ಜೀವನ್ಮುಖಿ ಚೇತನ. ಈಸ್ಟ್ರೋಜಿನ್‌ ಬಿಡುಗಡೆಯಾಗುವುದರಿಂದಲೇ ಒಬ್ಬ ಹುಡುಗಿ, ಹೆಂಗಸಾಗುತ್ತಾಳೆ. ದೇಹಕ್ಕೆ ಒಂಪು ಸೊಂಪು, ಗಂಟಲಿನ ಮಾಧುರ್ಯ, ಕಣ್ಣಿಗೆ ಹೊಳಪು, ಸೊಂಟಕ್ಕೆ ಬಳುಕು, ಅಲ್ಲಿಷ್ಟು ಭಾರ, ಇಲ್ಲಿಷ್ಟು ಸಪೂರ! ಇದು ಪ್ರತಿ ತಿಂಗಳೂ ಉದ್ಭವವಾಗುವ, ಪ್ರತಿ ತಿಂಗಳೂ ಮುಗಿದು ಹೋಗುವ ನಿಸರ್ಗ ನಿರ್ಮಿತ ಸಂಜೀವಿನಿ.

ಸರಿಯಾಗಿ ಐದನೆಯ ದಿನ ಆಕೆಯಲ್ಲಿ ಈಸ್ಟ್ರೋಜೆನ್‌ ಬಿಡುಗಡೆಯಾಗುತ್ತದೆ. ಹದಿನಾಲ್ಕನೆಯ ದಿನದಿಂದ ಹದಿನಾರನೆಯ ದಿನದ ತನಕ, ಆಕೆಯ ಪಾಲಿಗದು ರಮ್ಯ ಚೈತ್ರ ಕಾಲ. ಗಂಡಸು ಮನೆಯಿಂದ ಹೊರಗಿರಬಾರದ ದಿನಗಳಿವೆ. ಆಕೆಗೆ ತಾಯಿಯಾಗುವ ಇಚ್ಛೆ ಮೂಡಿದರೆ, ಅದು ಆಕೆಯ ಸ್ವಂತ ಇಚ್ಛೆಯಲ್ಲ. ಅದು trick of the nature.

ಈ ದಿನಗಳಲ್ಲಿ ಹೆಂಗಸು ಉಲ್ಲಾಸಿತೆ. ಅದ್ಭುತ ಮಾತು. ಬೇಕಾದ ಅಡುಗೆ. ಏನೇ ಜವಾಬ್ದಾರಿಯಿದ್ದರೂ ನಿರ್ವಹಿಸಬಲ್ಲಳು. ಮನಸು ಪ್ರಫುಲ್ಲ. ಮನೆಗೆಲಸ ಕೂಡ ಬೇಗ ಬೇಗ ಮುಗಿಯುತ್ತದೆ. ಸೆಜ್ಜೆ ಮನೆಯಲ್ಲಿ ಆತ ತುಂಬ ಕಾಯಬೇಕಿಲ್ಲ. ಈ ಉತ್ಸಾಹ, ಉನ್ಮಾದ ಐದನೆಯ ದಿನದಿಂದ ಇಪ್ಪತ್ತೆೈದನೆಯ ದಿನದವರೆಗೂ ಜಾರಿಯಲ್ಲಿರುತ್ತದೆ. ಅನಂತರ ಶುರುವಾಗುವುದೇ ಶೂನ್ಯಕಾಲ. ಕೊನೆಯ ಐದು ದಿನ, ಮತ್ತೆ ಮೂರು ದಿನ. ಯಾಕೆ ಜೀವ ಹಿಂಡುತ್ತೀರಿ? ಯಾಕೆ ಕಾಡುತ್ತೀರಿ? ಚುಚ್ಚದಿರಿ ಮೊನೆಯಾದ ಮಾತನೆಸೆದು!

ಗಂಡಸಿಗೆ ಇಂಥ cycle ಪ್ರತಿನಿತ್ಯ ಇರುತ್ತದೆ. ಅವನ ಮುಂಜಾವಿಗೆ ಟಾರ್ಗೆಟ್ಟುಗಳ ಲಗುಬಗೆ. ಮಧ್ಯಾಹ್ನವಿಡೀ ದುಡಿಮೆಯ ನಾಗಾಲೋಟ. ಸಂಜೆಗಳಿಗೆ ರೋಮಾನ್ಸಿನ ಸಿಂಚನ. ರಾತ್ರಿಯ ಹೊತ್ತಿಗೆ ಆತ ಪುರುಷಸಿಂಹ! ಆದರೆ ಅಂಥ ಸಿಂಹಕ್ಕೂ ಕೆಲಬಾರಿ ಸುಸ್ತಾಗುತ್ತದೆ. ಬಾಸ್‌ ಕೈಲಿ ಬೈಯಿಸಿಕೊಂಡ ದಿನ, ಇಸ್ಪೀಟಿನಲ್ಲಿ ಸೋತ ಶುಕ್ರವಾರ, ತಿಂಗಳ ಕೊನೆಯ ಖಾಲಿ ಜೇಬು, ವಿಪರೀತ ಡ್ರೆೃವ್‌ ಮಾಡಿದ ಬೆನ್ನು ನೋವು, ಮನೆಗೆ ಹೆಂಡತಿ ಕಡೆಯವರು ಅನಿರೀಕ್ಷಿತವಾಗಿ ಬಂದಿಳಿಯುವಿಕೆ, ಟೀವಿ ನೋಡುತ್ತ ಕೂತು ಬಿಡುವ ಹೆಂಡತಿ, ಊಟಕ್ಕೆ ಕುಳಿತಾಗ ಕರೆಂಟ್‌ ಬಿಲ್ಲು ಕಟ್ಟಿಲ್ಲವೆಂಬ ಸುದ್ದಿ! ಈ ಪೈಕಿ ಯಾವುದು ಬೇಕಾದರೂ ಪುರುಷ ಸಿಂಹನನ್ನು ಆವತ್ತಿನ ರಾತ್ರಿಯ ನ್ಯಾಷನಲ್‌ ಸಫಾರಿಯಿಂದ ಆಚೆಗೆ ಓಡಿಸಿ ಬಿಡಬಹುದು.

ಮದುವೆಯಾದ ಹೊಸತರಲ್ಲಿ ಅಥವಾ ಹೊಸದಾಗಿ(?) ಮದುವೆಯಾದಾಗ(ಕೆಲವರಿಗೆ ಆ ಭಾಗ್ಯವೂ ಉಂಟು!) ಜಾರಿಯಲ್ಲಿರುವಂಥ ನಿತ್ಯ ಮಿಲನ ಮಹೋತ್ಸವಗಳು ಕ್ರಮೇಣ ಕ್ಷೀಣಿಸುತ್ತವೆ. ದಾಂಪತ್ಯವೆಂಬುದು ದಿನಪತ್ರಿಕೆಯಿಂದ ವಾರಪತ್ರಿಕೆಯಾಗುತ್ತದೆ. ತೀರ ದೀಪಾವಳಿ ವಿಶೇಷಾಂಕವಾಗದಂತೆ ನೋಡಿಕೊಳ್ಳುವುದು ಮುಖ್ಯ. ಆದರೆ ಸೆಕ್ಸ್‌ನ್ನು ಬಿಟ್ಟು ಮಾತನಾಡುವುದಾದರೂ, ಹೆಂಗಸರ ಮೂಡು-ದೇಹಸ್ಥಿತಿಗಳನ್ನು ಅರ್ಥಮಾಡಿಕೊಂಡು ವರ್ತಿಸುವ ಗಂಡಸು ಹೆಚ್ಚು ಸಂತೋಷದಿಂದ ಬದುಕುತ್ತಾನೆ. ತನ್ನ ಹೆಂಡತಿಯನ್ನು ಕಡಿಮೆ ಕಾಡುತ್ತಾನೆ.

ಕೊನೆಯ ಐದು ಮತ್ತು ನಂತರದ ಮೂರು ದಿನಗಳಲ್ಲಿ ಆಕೆಯಾಂದಿಗೆ ಆರ್ಗು ್ಯಮೆಂಟಿಗೆ ಇಳಿಯಬೇಡಿ. ಅಪ್ಪಿತಪ್ಪಿ ಕೂಡ ಕೈ ಮಾಡಬೇಡಿ. ಯಾವ ಪ್ರಮುಖ ನಿರ್ಣಯ ಕೈಗೊಳ್ಳುವಂತೆಯೂ ಆಕೆಯನ್ನು ಒತ್ತಾಯಿಸಬೇಡಿ. ಆಕೆ ಕೇಳಿದ ಟೀವಿ ಚಾನೆಲ್‌ ಬಿಟ್ಟು ಕೊಡಿ.

ಸಂಜೆ ಆಕೆ ಬರುತ್ತೇನೆಂದರೆ ಮಾತ್ರ ಚಿಕ್ಕದೊಂದು ವಾಕ್‌ ಓಕೆ. ಬಾರದಿದ್ದರೆ ಪೀಡಿಸಬೇಡಿ. ಹಾಗಂತ ವಿಪರೀತ ಡೆಲಿಕೇಟ್‌ ಆಗಿ ನೋಡಿಕೊಳ್ಳಬೇಕು ಅಂತಲ್ಲ. ಭರಿಸಲಾಗದ ಬೆನ್ನು ನೋವಿನಿಂದ ಒದ್ದಾಡುತ್ತಿರುವಾಕೆ ಒಳ ಮನೆಯಲ್ಲಿರುವಾಗ ಗೆಳೆಯರನ್ನು ಗುಂಡು ಪಾರ್ಟಿಗೆ ಕರೆದು, ‘ಸ್ವಲ್ಪ snacks ಮಾಡಿಬಿಟ್ಟು, ಆರು ಜನಕ್ಕೆ ಬಿರಿಯಾನಿ, ಒಂದಷ್ಟು ಚಪಾತೀ, ಜೊತೇಗೇನಾದರೂ ಡ್ರೆೃ ಐಟಂ ಇದ್ರೆ ಮಾಡಿಬಿಡ್ತೀಯಾ ?’ ಅಂತ ಕೇಳಬೇಡಿ.

ಹಳಬರು, ಹೆಣ್ಣುಮಕ್ಕಳನ್ನು ಕಡ್ಡಾಯವಾಗಿ ಆ ಮೂರು ದಿನ ದೂರವೇ ಕೂರಿಸುತ್ತಿದ್ದರು. ಅವರನ್ನು ಮುಟ್ಟಲೂ ಬೇಡಿ ಅಂತ ರೂಲು ಮಾಡಿದ್ದರು. ಮುಂದೆ ಅದು ಕೇವಲ ಸಂಪ್ರದಾಯವಾಗಿ ಉಳಿದು ಹೆಣ್ಣುಮಕ್ಕಳಿಗೇ ಮುಜುಗರವುಂಟು ಮಾಡುವ ಸಂಗತಿಯಾಯಿತು. ಹೆಚ್ಚಿನ ಮನೆಗಳಲ್ಲಿ ಆ ಸಂಪ್ರದಾಯ ಬಿಟ್ಟು ಹೋಗಿದೆ. ಆದರೆ ಅವರಿಗೊಂದು ರೆಸ್ಟು ಕೊಡಬೇಕು ಎಂಬುದನ್ನೂ ಮರೆತು ಹೋದರೆ ಹೇಗೆ?

‘ಮೊದಲ ದಿನ ಮೌನ... ಅಳುವೇ ತುಟಿಗೆ ಬಂದಂತೆ...’ ಅಂತ ಕವಿ ಕೆ.ಎಸ್‌.ನರಸಿಂಹಸ್ವಾಮಿ ಬರೆದದ್ದು ಇದರ ಬಗ್ಗೇನಾ?

ಏನೋ ಗೊತ್ತಿಲ್ಲಪ್ಪ!

(ಸ್ನೇಹ ಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more