• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇನ್ನು ಮೇಲೆ ನೀನು ಬಸವ, ನಾನು ಕಮಲ : ಚೆಂಡು ತಾ... ಚೆಂಡು ಹಿಡಿ!

By Super
|

ಇನ್ನು ಮೇಲೆ ನೀನು ಬಸವ, ನಾನು ಕಮಲ : ಚೆಂಡು ತಾ... ಚೆಂಡು ಹಿಡಿ! ಒಂದು ಕಡೆ ಬಿಜೆಪಿಯ ಮಂದಿ ಭಯಂಕರ ಹಸಿದುಕೊಂಡು ಅಧಿಕಾರಕ್ಕೆ ಬರುತ್ತಿದ್ದಾರೆ. ಇನ್ನೊಂದು ಕಡೆ ಡೀಲಿಂಗುಗಳ ಹೊರತಾಗಿ ಮತ್ತೇನೂ ಗೊತ್ತಿರದ ಕುಮಾರ ಪಡೆ ಅಧಿಕಾರಕ್ಕೆ ಬರುತ್ತಿದೆ. ಈ ಸರ್ಕಾರಕ್ಕೆ ಸಿಗಬಹುದಾಗಿದ್ದ ಏಕೈಕ ಟ್ಯೂಷನ್ನು, ಡೈರೆಕ್ಷನ್ನು-ದೇವೇಗೌಡರದು. ಆದರೆ ಸದ್ಯಕ್ಕೆ ಅವರು ಯಾರಿಗೂ ಬೇಡ...!?(ಮುಂದುವರಿದುದು)

ಒಂದು ಕಡೆ ಬಿಜೆಪಿಯ ಮಂದಿ ಭಯಂಕರ ಹಸಿದುಕೊಂಡು ಅಧಿಕಾರಕ್ಕೆ ಬರುತ್ತಿದ್ದಾರೆ. ಇನ್ನೊಂದು ಕಡೆ ಡೀಲಿಂಗುಗಳ ಹೊರತಾಗಿ ಮತ್ತೇನೂ ಗೊತ್ತಿರದ ಕುಮಾರ ಪಡೆ ಅಧಿಕಾರಕ್ಕೆ ಬರುತ್ತಿದೆ. ಈ ಸರ್ಕಾರಕ್ಕೆ ಸಿಗಬಹುದಾಗಿದ್ದ ಏಕೈಕ ಟ್ಯೂಷನ್ನು, ಡೈರೆಕ್ಷನ್ನು-ದೇವೇಗೌಡರದು. ಆದರೆ ಸದ್ಯಕ್ಕೆ ಅವರು ಯಾರಿಗೂ ಬೇಡ.

ಕುಮಾರಸ್ವಾಮಿಗೆ ಎಂಥ ಚಿಕ್ಕ ವಿಷಯಗಳಲ್ಲೂ ಅಜ್ಞಾನವಿದೆ ಎಂಬುದಕ್ಕೆ ಅವರ ಇಂಗ್ಲಿಷೇ ಸಾಕ್ಷಿ. ಹಿಂದಿ-ಇಂಗ್ಲಿಷ್‌ ಛಾನಲ್‌ಗಳವರೊಂದಿಗೆ ಇಂಗ್ಲಿಷಿನಲ್ಲಿ ಮಾತಾಡಲು ಹೊರಡುತ್ತಾರೆ ಕುಮಾರಸ್ವಾಮಿ. ಎಂಥ ಘೋರ, ಭಯಂಕರ. ಅದು ಸಾಲದೆಂಬಂತೆ ಪಕ್ಕದ ಗೆಳೆಯ ಚೆಲುವರಾಯ ಸ್ವಾಮಿ no chance, no chance, no chance ಅಂತ ಬುಡಬುಡಿಕೆಯವರ ಶೈಲಿಯಲ್ಲಿ ಟೀವಿಗಳಿಗೆ ಇಂಗ್ಲಿಷಿನಲ್ಲಿ ಮಾತನಾಡುತ್ತಾರೆ.

ಇವರಿಗೆ ಏನಾಗಿದೆ?

ಕನ್ನಡದ ಹೊರತು ಮತ್ತೇನೂ ಬಾರದ ಕುಮಾರ್‌, ಯಡಿಯೂರಿ, ಚೆಲುವ ರಾಯಸ್ವಾಮಿ ಮುಂತಾದವರು ಲಕ್ಷಣವಾಗಿ ಕನ್ನಡದಲ್ಲೇ ಮಾತನಾಡಬಹುದಲ್ಲ ?ಪ್ರಾಣ ಹೋದರೂ ಕರುಣಾನಿಧಿ ಹಿಂದಿ ಇಂಗ್ಲಿಷು ಮಾತಾಡುವುದಿಲ್ಲ. ತೀರ ಅಗತ್ಯ ಬಿದ್ದರೆ ದುಭಾಷಿಗಳನ್ನಿಟ್ಟು ಕೊಳ್ಳಲಿ. ದಿಲ್ಲಿಗೆ ಹೋಗುವಾಗ ಅವರನ್ನೇ ಜೊತೆಗೆ ಕರೆದೊಯ್ಯಲಿ. ಅಪದ್ಧ ಅಪದ್ಧ ಇಂಗ್ಲಿಷು ಮಾತನಾಡಿ MLAs are surrounding me... ಅಂತೆಲ್ಲ ಪಲುಕಿ ಅವಮಾನಕ್ಕೆ ಈಡಾಗುವುದೇಕೆ?

ಇದು ಕಮಲ-ಬಸವ ಸರ್ಕಾರದ ಅತ್ಯಂತ ಚಿಕ್ಕ ಸಮಸ್ಯೆ. ಅತಿ ಮುಖ್ಯವಾದ ಸಮಸ್ಯೆಗಳ ಸಾಲೇ ಇದೆ. ಮೊದಲನೆಯದಾಗಿ, ಕೈಗೆ ಸಿಕ್ಕ ನಲವತ್ತು ತಿಂಗಳಲ್ಲಿ ಜನಪರ ಕಾರ್ಯಕ್ರಮಗಳನ್ನು ಹಾಕಿಕೊಂಡು ತುಂಬ ಒಳ್ಳೆಯ ಸರ್ಕಾರ ಕೊಡುತ್ತೇನೆ ಅಂದುಕೊಂಡಿದ್ದಾರೆ ಇಬ್ಬರೂ. ಆದರೆ ಜನಪರ ಕಾರ್ಯಕ್ರಮಗಳಿಗೆ ಅಲ್ಲಿ ಅಸಲು ಹಣವೆಲ್ಲಿದೆ? ರೆವಿನ್ಯೂ, ಅಬಕಾರಿಯಂಥ ಟ್ರೆಡಿಷನಲ್‌-ಕನ್ನೆನ್ಷನಲ್‌ ವರಮಾನಗಳನ್ನು ನೆಚ್ಚಿಕೊಂಡು ಕೂತರೆ ಆಗುವುದೇ ಇಲ್ಲ.‘ ಸರ್ಕಾರ ರಚಿಸೋಕೆ ನೂರು ಕೋಟಿಯಾದರೂ ತಂದು ಸುರೀತೀವಿ' ಅನ್ನುತ್ತಿರುವ ಈ ಮ್ಯಾಂಗನೀಸ್‌ ಲಾಬಿ, ನಾಳೆ ಕಂದಾಯದ ವಿಷಯಕ್ಕೆ ಬಂದರೆ ಹೆಗಲು ಕೂಡ ಮುಟ್ಟಗೊಡುವುದಿಲ್ಲ.

ದಿಲ್ಲಿಗೆ ಹೋಗಿ ಹಣ ತರೋಣವೆಂದರೆ, ಅಲ್ಲಿ ಹಣವೆಲ್ಲಿದೆ ಅಂತ ಗೊತ್ತಿರುವ ಚಂದ್ರಬಾಬು ನಾಯ್ಡು ಥರದ CEOಗಳು ಎರಡೂ ಪಕ್ಷಗಳಲ್ಲಿ ಇಲ್ಲ. ಇವರಲ್ಲಿ ಕಾಗೇರಿ, ಆರಗ ಜ್ಞಾನೇಂದ್ರ, ಯೋಗೀಶ್‌ ಭಟ್‌ ಥರದ ವಾಗ್ಮಿಗಳು ಕೆಲವರಿದ್ದಾರೆ. ಆದರೆ ಬೊಕ್ಕಸದ ಮುಂದೆ ನಿಂತು ದೇಶ ಭಕ್ತಿಯ ಬಗ್ಗೆ ಮಾತನಾಡಿದರೆ,‘ನಮಸ್ತೇ ಸದಾವತ್ಸಲೇ...' ಹೇಳಿದರೆ ರೊಕ್ಕ ಹುಟ್ಟುವುದಿಲ್ಲ. Rhetoricನಿಂದ ಏನೇನೂ ಪ್ರಯೋಜನವಿಲ್ಲ.

ದುಡ್ಡಿಲ್ಲದ ಮೇಲೆ ಸರ್ಕಾರ ನಡೆಸುತ್ತಾರಾದರೂ ಹೇಗೆ? ಎರಡನೆಯ ಸಮಸ್ಯೆ ಮಾಧ್ಯಮಗಳವರದು. ಇವರನ್ನು ಯಾವ ಮಾಧ್ಯಮದವರೂ ನಂಬುವ ಸ್ಥಿತಿಯಲ್ಲಿಲ್ಲ. ಎಂಥ ಬುದ್ಧಿವಂತ, ಚತುರ press adviserನನ್ನಿಟ್ಟುಕೊಂಡರೂ ಪತ್ರಿಕೆಗಳಿಗೆ ಸಣ್ಣಗೆ ವಿಶ್ವಾಸ ಮೂಡುವ ಹೊತ್ತಿಗೆ ಇಪ್ಪತ್ತು ತಿಂಗಳು ಮಗುಚಿ ಬಿದ್ದಿರುತ್ತವೆ. ಕುಮಾರಸ್ವಾಮಿಯನ್ನು ವಿಧಾನಸಭೆಯಲ್ಲೇ ಎತ್ತಿಕೊಂಡು ಬಿಡೋದು, ಚುಂಬಿಸೋದು, ಅಣ್ಣಾ... ಅಂತ ಅರಚೋದು ಈ ತೆರನಾದ ಸೈಕೋಫ್ಯಾನ್ಸಿಗೆ ಬಿದ್ದ ಜಮೀರ್‌ ಥರದ ಎಲಿಮೆಂಟುಗಳಿವೆಯಲ್ಲ, ನಾಳೆ ಸಾಲು ಸಾಲು ಹಗರಣಗಳನ್ನು ಮಾಡಿ ಸರ್ಕಾರದ ಮಾನ ಕಳೆಯುವವರೇ ಈ ಮಂದಿ. ಇವರನ್ನು ನಿಯಂತ್ರಿಸಲಿಕ್ಕೆ ಒಬ್ಬ ದೇವೇಗೌಡ ಬೇಕಿತ್ತು. ಅವಯ್ಯ ಇಲ್ಲ.

ಮೂರನೆಯದು ಪ್ರಬಲ ವಿರೋಧ ಪಕ್ಷದವರ ಸಮಸ್ಯೆ. ಹಿಂದೆ ಯಾವ ಸರ್ಕಾರಕ್ಕೆ ಇರದಿದ್ದಂತಹ ಅರಿವೀರ ಭಯಂಕರರಿರುವ ವಿರೋಧ ಪಕ್ಷ ಕುಮಾರ್‌- ಯಡ್ಡಿ ಸರ್ಕಾರಕ್ಕೆ ಸೃಷ್ಟಿಯಾಗಿದೆ. ಮೊದಲಾದರೆ ಒಬ್ಬ ಯಡ್ಡಿಗೆ ಸೈಟು ಸವಲತ್ತು ಬಿಸಾಡಿದರೆ ಆತ ಬಾಯಿಮುಚ್ಚಿಕೊಂಡು ಬಿಡುತ್ತಿದ್ದ. ಪರಮ ಪೀಡಕ ದೇವೇಗೌಡರನ್ನು ಸಂಭಾಳಿಸಬಹುದಾಗಿತ್ತು. ಆದರೆ ಅಲ್ಲಿ ಅತಿರಥ ಮಹಾರಥಿಗಳ ಸಾಲೇ ಇದೆ. ಅವರನ್ನು ತಮಣಿ ಮಾಡುವವರ್ಯಾರು? ಅಸೆಂಬ್ಲಿಯಲ್ಲಿ ಚಪ್ಪಚಪ್ಪಲಿ ಹೊಡೆದಾಟಗಳಾದರೆ ಯಾರೂ ಆಶ್ಚರ್ಯಪಡಬೇಕಿಲ್ಲ.

ನಾಲ್ಕನೆಯದು: ಸರ್ಕಾರದ ಉದ್ದಗಲಕ್ಕೂ ಲಿಂಗಾಯತರು- ವಕ್ಕಲಿಗರೇ ಕಾಣುತ್ತಾರೆ. ಹೆಗಡೆ- ಬೊಮ್ಮಾಯಿ ನಂತರದ ತಲೆಮಾರಿನವರು ಯಾರೂ ಇಲ್ಲ. ಸಿಂಧ್ಯಾ- ಪ್ರಕಾಶ್‌ ಕೂಡ ದೂರ ಕುಂತು ಆಟ ನೋಡುತ್ತಾರೆ. ಇವರ ನೆರವಿಗೆ ಬರುವವರು ಯಾರು?

ಕೆಡವುವುದು ತುಂಬ ಸುಲಭ. ಕಟ್ಟಿ ತೋರಿಸುವ ಕೈಂಕರ್ಯ ಕಣ್ಣೆದುರಿಗಿದೆ. ಕುಮಾರ್‌ ಮುಖದ ಮೇಲೆ ಉತ್ಸಾಹವಿದೆ. ಯಡ್ಡಿ ಮುಖದಲ್ಲಿ ಭಯಂಕರ ಹಸಿವಿದೆ. ‘ನೀನು ಬಸವ- ನಾನು ಕಮಲ! ಚೆಂಡು ತಾ, ಚೆಂಡು ಹಿಡಿ!'

ಇದು ಎಷ್ಟು ದಿನ?

(ಸ್ನೇಹ ಸೇತು : ಹಾಯ್‌ ಬೆಂಗಳೂರ್‌!)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Thatskananda Suryashikari Columnist Ravi Belagere comments on New Coalition Government.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more