ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೂರ್ಯಶಿಕಾರಿಯಲ್ಲಿ ಗುಬ್ಬಚ್ಚಿಯ ಹಾರಿಬಿಟ್ಟವರು!

By Staff
|
Google Oneindia Kannada News
‘ನಮ್ಮ ಮನೆಯಲೊಂದು ಗುಬ್ಬಿ ಗೂಡು ಕಟ್ಟಿತು
ಗೂಡಿನಲ್ಲಿ ಹುಲ್ಲು ಹಾಕಿ ಮೊಟ್ಟೆಯಿಟ್ಟಿತು’

ಈ ಸಾಲುಗಳು ನೆನಪಿವೆಯೆ? ಇದು ಬಿ.ಕೆ. ಸುಮಿತ್ರ ಅವರ ಮಕ್ಕಳ ಹಾಡುಗಳ ಕ್ಯಾಸೆಟ್‌ ಒಂದರ ಹಾಡು. ಇಂದಿನ ಮಕ್ಕಳ ಎದುರಿಗೆ ಈ ಹಾಡು ಹಾಡಿದರೆ, ಎಷ್ಟು ಪ್ರಸ್ತುತವೋ ಗೊತ್ತಿಲ್ಲ.

ರವಿ ಬೆಳಗೆರೆಯವರ ಲೇಖನ ಓದಿದ ನಂತರ ನನ್ನ ಬಾಲ್ಯದ ಗುಬ್ಬಚ್ಚಿಯ ನೆನಪುಗಳು ಮರುಕಳಿಸಿದವು. ಬಹುಶಃ ನನ್ನ ತಲೆಮಾರೇ ಗುಬ್ಬಿಯನ್ನು ಕಾಣುವ ಭಾಗ್ಯ ಹೊಂದಿದ ಕೊನೆಯ ತಲೆಮಾರಾಗುತ್ತದೇನೋ ಎಂದು ಭಯವಾಗುತ್ತಿದೆ.

Chinv Chinv Gubbiಬಹಳವೇನಲ್ಲ, ಕೇವಲ 10-15 ವರ್ಷಗಳ ಹಿಂದಿನ ಮಾತು.. ನೂರಾರು ಪುಂಡಾಟಿಕೆಗಳನ್ನು ಮಾಡಿ ಶಾಲೆಯಿಂದ ಸಂಜೆ ಮನೆಗೆ ಬರುವಷ್ಟರಲ್ಲಿ ಮನೆ ತುಂಬ ಕಸ ಕಡ್ಡಿ. ಅವನ್ನೆಲ್ಲ ತಂದಿದ್ದು ನಾನೇನೋ ಎಂಬ ಅಮ್ಮನ ಅನುಮಾನ ಗುಬ್ಬಿಯಾಂದು ಪುರ್‌ ಎಂದು ಹಾರಿ ಹೊದಾಗಲೇ ಪರಿಹಾರ. ನಂತರ ಗುಬ್ಬಿ ಮೊಟ್ಟೆ ಇಡುವುದನ್ನು, ಮೊಟ್ಟೆಗಳು ಒಡೆದು ಮರಿಗಳು ಹೊರಬರುವುದನ್ನು ನಿರೀಕ್ಷಿಸುವುದೇ ಕೆಲಸ. ರೆಕ್ಕೆ ಪುಕ್ಕಗಳೇನೂ ಇಲ್ಲದ ಮಾಂಸದ ಮುದ್ದೆಯಂತಿರುವ ಮರಿಗಳನ್ನು ಅವು ಬೆಳೆದು ಗುಬ್ಬಿಗಳಾಗುತ್ತವೆ ಎಂದು ನಂಬುವುದೇ ಕಷ್ಟವಾಗಿತ್ತು.

ಯಾವುದೋ ಕಾರಣಕ್ಕೆ ಕೆಳಗೆ ಬಿದ್ದ ಮರಿಯನ್ನು ಗೂಡಿಗೆ ಸೇರಿಸಿದ ತೃಪ್ತಿ, ತಾಯಿ ಗುಬ್ಬಿಯೆ ಆ ಮರಿಯನ್ನು ಕುಕ್ಕಿ ಕುಕ್ಕಿ ಕೊಂದಾಗ ಆದ ವ್ಯಥೆ, ಇವೆಲ್ಲವನ್ನು ಮರೆಯಲು ಸಾಧ್ಯವೆ?

ಕಾಡಿ ಬೇಡಿ ಅಮ್ಮನಿಂದ ತಂದ ಅಕ್ಕಿಯನ್ನು ಗುಬ್ಬಿಗಳಿಗೆ ಹಾಕಿದರೆ, ಕಾಗೆಗಳು ಅವನ್ನು ತಿನ್ನಲು ಬರುವುದು, ಅವನ್ನು ಓಡಿಸುವ ಭರದಲ್ಲಿ ಗುಬ್ಬಿಗಳನ್ನೂ ಓಡಿಸುವುದು...

ನಂತರ ವರ್ಷಗಳು ಉರುಳಿದವು, ಜೀವನದ ಗಾಲಿಗಳು ಉರುಳುರುಳಿ ನಗರಕ್ಕೆ ತಂದು ನಿಲ್ಲಿಸಿದವು. ನಾನು ‘ಕೆಟ್ಟು ಪಟ್ಟಣ’ ಸೇರಿದ ಕೆಲವು ವರ್ಷ ಕೂಡ ಗುಬ್ಬಿಗಳು ಅಲ್ಲೊಮ್ಮೆ, ಇಲ್ಲೊಮ್ಮೆ ಕಾಣಿಸಿಕೊಳ್ಳುತ್ತಿದ್ದವು. ನಂತರ ಕೆಲವೇ ವರ್ಷಗಳಲ್ಲಿ ಎಲ್ಲ ಗುಬ್ಬಿಗಳೂ ಮಾಯ. ಸ್ವಲ್ಪ ಸಮಯದ ಹಿಂದೆ ‘ಪ್ರಜಾವಾಣಿ’ಯ ವಾಚಕರ ವಾಣಿಯಲ್ಲಿ ಓದುಗರೊಬ್ಬರು ಗುಬ್ಬಿಯ ಬಗ್ಗೆ ಕಾಳಜಿ ತೋರಿಸಿದ್ದು ಬಿಟ್ಟರೆ, ಇನ್ನಾವುದೇ ವ್ಯಕ್ತಿ/ಸಂಸ್ಥೆಗಳು ಈ ವಿಷಯವನ್ನು ತಲೆಗೆ ಹಚ್ಚಿಕೊಂಡಂತೆ ಕಾಣುವುದಿಲ್ಲ.

ಇಷ್ಟೆಲ್ಲ ಕಥೆ-ವ್ಯಥೆ ಹೇಳಿದ ನಂತರ ಕಥೆಗೆ ಸುಖಾಂತ್ಯವಿಲ್ಲದಿದ್ದರೆ ಹೇಗೆ? ಉರುಳುತ್ತಿರುವ ಬದುಕಿನ ಗಾಲಿ ಸಿಂಗಪುರಕ್ಕೆ ತಂದು ನನ್ನನ್ನು ಬಿಟ್ಟಾಗ, ಇಲ್ಲಿನ ಉಳಿದೆಲ್ಲ ಆಕರ್ಷಣೆಗಳಿಗಿಂತ ನನ್ನನ್ನು ಖುಶಿಪಡಿಸಿದ್ದು ಗುಬ್ಬಿಗಳು.

ಅಂದಹಾಗೆ, ಇಲ್ಲಿ ಕೂಡ ಹಂಚಿನ ಮನೆಗಳಿಲ್ಲ. ಕಾಡೇನಿದ್ದರೂ ಕಾಂಕ್ರೀಟ್‌ ಕಾಡು ಮಾತ್ರ. ಅಸಂಖ್ಯಾತ ಜನ ಮೊಬೈಲ್‌ ಫೊನ್‌ ಬಳಸುತ್ತಾರೆ. ಆದರೂ ಇಲ್ಲಿ ಗುಬ್ಬಿಗಳು ಬದುಕಿವೆ. ಅಸಂಖ್ಯಾತವಲ್ಲದಿದ್ದರೂ ಸಾಕಷ್ಟು ಸಲ ಕಣ್ಣಿಗೆ ಬೀಳುತ್ತವೆ.

ಒಮ್ಮೆ ಎಲ್ಲಿಯೋ ಓದಿದಂತೆ, ಡಿಡಿಟಿ ಇತ್ಯಾದಿ ವಿಷಗಳು ಪಕ್ಷಿಗಳ ಮೊಟ್ಟೆಯ ಕವಚವನ್ನು ತೆಳುವಾಗುವಂತೆ ಮಾಡುತ್ತವಂತೆ. ಇಂದು ಬೆಂಗಳೂರಿನಲ್ಲಿ ಗುಬ್ಬಿಗಳು ನಾಮಾವಶೇಷ ಆಗುವುದಕ್ಕೆ ನಾವು ಗೊತ್ತು ಗುರಿಯಿಲ್ಲದೆ ಬಳಸಿದ ವಿಷಗಳೇ ಕಾರಣವೆನೊ? ಅಥವಾ ನಾವು ಬಹುಶಃ ಗುಬ್ಬಿಗೆ ಹೊಂದುಕೊಳ್ಳಲು ಸಾಕಷ್ಟು ಸಮಯ ಕೊಡಲಿಲ್ಲವೇ?

‘ಪುಟ್ಟ ಮರಿ(?) ಗೂಡುಬಿಟ್ಟು ಹಾರಿಹೋಯಿತು’

ನರಸಿಂಹ ಶಾಸ್ತ್ರಿ
ಸಿಂಗಪುರ

ರವಿಯವರಿಗೆ,

ವಂದನೆಗಳು. ‘ಗುಬ್ಬಚ್ಚಿಯೇ ಇಲ್ಲದ ಬೆಂಗಳೂರಿನಂತಾದರೆ ಬದುಕು ?’ ನಿಮ್ಮ ಈ ಲೇಖನವನ್ನು ಇಂಟರ್‌ನೆಟ್‌ನಲ್ಲಿ ಓದಿ ಸಂತೋಷಗೊಂಡು ಈ-ಪತ್ರಿಸುತ್ತಿದ್ದೇನೆ. ಬಹಳ ಸುಂದರವಾಗಿರುವ ಈ ಬರಹ ತುಕ್ಕು ಹಿಡಿದಿದ್ದ ಮನಸ್ಸನ್ನು, ಬದುಕನ್ನು ಉಜ್ಜಿ ಹೊಳಪುಗೊಳಿಸಿದೆ. ಥ್ಯಾಂಕ್‌ ಯೂ.

ನನ್ನ ಬದುಕಿನ ಹಲವಾರು ವರ್ಷಗಳಲ್ಲಿ ಜೊತೆಯಾಗಿ ಆತ್ಮೀಯ ಅನುಭವ ನೀಡಿದ್ದ, ಆದರೀಗ ಕಳೆದು ಹೋಗಿರುವ ಸ್ನೇಹಿತನೊಬ್ಬನಿಗೆ ನಿಮ್ಮ ಲೇಖನದ ಪ್ರಿಂಟ್‌ ಕೊರಿಯರ್‌ ಮಾಡಿ ಅವನ ಪ್ರತಿಕ್ರಿಯೆಗಾಗಿ ಕಾತುರದಿಂದ ಕಾಯುತ್ತಿದ್ದೇನೆ.

ಹೊಸ ಉತ್ಸಾಹದೊಂದಿಗೆ...
ವಂದನೆಗಳು.

ಮಹಾವೀರ ಕುಮಾರ್‌

ಪ್ರಿಯರೇ,

ಮನ ತಟ್ಟುವ ಲೇಖನ. ಬದುಕು ಬರೀ ಗುಬ್ಬಚ್ಚಿಯಷ್ಟೇ ಅಲ್ಲದೇ, ಕಾಗೆ, ಗೂಬೆ ಮತ್ತು ಜಿರಳೆಯನ್ನೂ ನೆನಪಿಸುವಂತಾಗಿರುವುದು. ಡಾರ್ವಿನನ ವಿಕಾಸವಾದಕ್ಕೊಂದು ಹೊಸ ವೇಷ ಬರುತ್ತಿರುವ ಮುನ್ಸೂಚನೆ ಇರಬಹುದೇ ?

ಪ್ರಕಾಶ ನಾಯಕ
ಬೆಂಗಳೂರು.

Hello,
This is an very impressive article on Gubbi(Sparrow). We were playing with this during Kana (after yield of paddy or raagi) in our village. I was very pity on this small bird which was seen since three - four years.
I would request bird watcher should take preventive action to SAVE GUBBI.
GOVIND

Dear Sir,

Gubbachi illada Bangalore.....Tumba Tumba Tumba Chennagide .
Girish Chitgopker.

Dear Sir,
Thank u very much for your(our)thats kannada.com and for the articles from Ravi Belagere(RB).
I am keen to know about the former DGP Dinakar case. I hope RB has published in "Hai Bangalore" but we can not read it in Germany, so please could u ask him to write on it in this site?
Thanking you
Sincerely
chandru


ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X