ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೋಬಿಗೆ ಭಾರವಿಲ್ಲ ಭಾರತಕ್ಕೂ ದೂರವಿಲ್ಲ : ವಿಯೆಟ್ನಾಮ್!

By ರಂಗಸ್ವಾಮಿ ಮೂಕನಹಳ್ಳಿ
|
Google Oneindia Kannada News

ಎರಡು ತಿಂಗಳ ಹಿಂದೆ ದಸರಾ ರಜಾದಲ್ಲಿ ಎಲ್ಲಿಗೆ ಹೋಗುವುದು ಎನ್ನುವ ವಿಷಯ ಪ್ರಸ್ತಾಪ ಆದಾಗ ಕಾಂಬೋಡಿಯಾ ಮತ್ತು ವಿಯೆಟ್ನಾಮ್ ದೇಶಗಳ ಹೆಸರು ಬಂದಿತು. ವಿಯೆಟ್ನಾಮ್ ಒಮ್ಮತದಿಂದ ಆಯ್ಕೆಯಾಗಿದ್ದು ಹನೋಯ್ ಮತ್ತು Ninh Bình ಎನ್ನುವ ಮನಮೋಹಕ ಹಳ್ಳಿಯನ್ನ ಕಾಣಬೇಕು ಎನ್ನುವ ಉದ್ದೇಶದಿಂದ. ವಿಯೆಟ್ನಾಮ್ ಎಂದ ತಕ್ಷಣ ನಮ್ಮ ನೆನಪಿಗೆ ಬರುವುದು ದೈತ್ಯ ಅಮೆರಿಕಾಕ್ಕೆ ಸೆಡ್ಡು ಹೊಡೆದು ಈ ದೇಶ ನಿಂತ ಪರಿ ಮತ್ತು ಗುಡ್ ಮಾರ್ನಿಂಗ್ ವಿಯೆಟ್ನಾಮ್ ಎನ್ನುವ ಹೆಸರಿನ ಚಲನಚಿತ್ರ. ಈಗ ಇದೆ ಹೆಸರನ್ನ ಟಿ ಶರ್ಟ್ಗಳ ಮೇಲೆ ಮುದ್ರಿಸಿ ಮಾರಲಾಗುತ್ತಿದೆ.

ಮೈನವಿರೇಳಿಸುವ ಝೆರ್ಮಾಟ್ ಹಿಮನದಿಗಳ ಮೇಲೆ ಚಾರಣಮೈನವಿರೇಳಿಸುವ ಝೆರ್ಮಾಟ್ ಹಿಮನದಿಗಳ ಮೇಲೆ ಚಾರಣ

ವಿಯೆಟ್ನಾಮ್ಗೆ ಪ್ರವಾಸ ಹೊರಡುವರಲ್ಲಿ ಎರಡು ಆಯ್ಕೆಗಳಿವೆ. ಒಂದು ಈ ದೇಶದ ರಾಜಧಾನಿ ಹನೋಯ್ ನಗರಕ್ಕೆ ಹೋಗುವುದು ಆ ನಗರವನ್ನ ಮೂಲವಾಗಿರಿಸಿಕೊಂಡು ಅಕ್ಕಪಕ್ಕದ ಹಲವಾರು ಸ್ಥಳಗಳನ್ನ ನೋಡುವುದು ಅಥವಾ ರಾಜಧಾನಿಯನ್ನೂ ಮೀರಿ ಬೆಳೆದಿರುವ ಹೊ ಚಿನ್ ಮಿನ್ ಸಿಟಿಯನ್ನ ಮೂಲವಾಗಿರಿಸಿಕೊಂಡು ಅಲ್ಲಿನ ಪ್ರಕ್ಷಣೀಯ ಸ್ಥಳಗಳನ್ನ ನೋಡುವುದು. ಎರಡನ್ನೂ ಒಟ್ಟಿಗೆ ಮಾಡಿ ಮುಗಿಸಲು ಸಮಯ ಮತ್ತು ಹಣ ಎರಡೂ ಹೆಚ್ಚಾಗುತ್ತದೆ. ಉತ್ತಮ ದರ್ಜೆಯ ಅನುಭವ ಪಡೆಯಲು ಈ ದೇಶಕ್ಕೆ ಎರಡು ಬಾರಿ ಭೇಟಿ ನೀಡುವುದು ಒಳ್ಳೆಯದು. ಇರಲಿ.

Why you should visit Vietnam

ಹನೋಯ್ ಮತ್ತು ಸುತ್ತಮುತ್ತಲ ಪ್ರದೇಶ ಆಯ್ಕೆ ಮಾಡಿಕೊಂಡರೆ ನೋಡಲು ಏನಿದೆ?

#ವಿಯೆಟ್ನಾಮ್ ಸ್ವತಂತ್ರ ಸಂಗ್ರಾಮದ ನಾಯಕ ಮತ್ತು ಸ್ವಾತಂತ್ರ್ಯದ ನಂತರ ಇಲ್ಲಿನ ಕಮ್ಯುನಿಸ್ಟ್ ಪಾರ್ಟಿಯ ಮೊದಲ ಅಧಿನಾಯಕನಾಗಿ ವಿಯೆಟ್ನಾಂ ದೇಶವನ್ನ 24 ವರ್ಷಗಳ ಕಾಲ ಮುನ್ನಡೆಸಿದ ಹೊ ಚಿನ್ ಮಿನ್ ಸಮಾಧಿ ಇದೆ. ವಿಶಾಲವಾದ ಜಾಗದಲ್ಲಿ ಇದನ್ನ ನಿರ್ಮಿಸಲಾಗಿದೆ. ಇದೊಂದು ಪ್ರವಾಸಿ ತಾಣವಾಗಿ ಮಾರ್ಪಾಟಾಗಿದೆ.

ಬದುಕಿನ ಬಗ್ಗೆ ಮತ್ತಷ್ಟು ಕನಸನ್ನು ಬಿತ್ತುವ ಕ್ರೆಮ್ಲಿನ್!ಬದುಕಿನ ಬಗ್ಗೆ ಮತ್ತಷ್ಟು ಕನಸನ್ನು ಬಿತ್ತುವ ಕ್ರೆಮ್ಲಿನ್!

#ಹಳೆ ನಗರ ಭಾಗಕ್ಕೆ ಹೊಕ್ಕರೆ ಸಾಧಾರಣ ವಿಯೆಟ್ನಾಮಿ ಹೇಗೆ ಬದುಕುತ್ತಿದ್ದಾನೆ ಎನ್ನುವುದರ ಅನಾವರಣವಾಗುತ್ತದೆ.

Why you should visit Vietnam

#ತಂಗ್ ಲಾಂಗ್ ನ ಇಂಪೀರಿಯಲ್ ಸಿಟಾಡೆಲ್, ಹಲವು ಮ್ಯೂಸಿಯಂಗಳು, ವಿಖ್ಯಾತ Tran Quoc Pagoda ಜೊತೆಗೆ ಹಲವಾರು ಪಗೋಡಾಗಳು. (ಪಗೋಡ ಅಂದರೆ ದೇವಸ್ಥಾನ ಅಥವಾ ಬುದ್ಧನ ಆಲಯ).

#ವಾಟರ್ ಪಪೆಟ್ ಶೋ, ಮತ್ತು ರಿವರ್ ಸೈಡ್ ನಡಿಗೆಗಳು, ಜೊತೆಗೆ ವಾರಾಂತ್ಯದಲ್ಲಿ ಪೂರ್ಣ ಪಾದಚಾರಿ ರಸ್ತೆಯಾಗಿ ಮಾರ್ಪಾಟಾಗುವ ರಸ್ತೆಗಳು.

#ಸ್ವರ್ಗವೇ ಭುವಿಗಿಳಿದಿದೆ ಎನ್ನುವಂತೆ ಕಾಣುವ ನಿನ್ಹ್ ಬಿನ್ಹ್ ಹಳ್ಳಿ. ಮತ್ತು ಯುನೆಸ್ಕೋ ಇಂದ ಮಾನ್ಯತೆ ಪಡೆದಿರುವ ಸಾವಯವ ಹಳ್ಳಿ.

#ಹ ಲಾಂಗ್ ಬೇ ಏರಿಯಾ ಮತ್ತು ಹಡಗು ಪಯಣ.

Why you should visit Vietnam

ಹೀಗೆ ಹನೋಯ್ ನಗರದಿಂದ ಒಂದು ದಿನದಲ್ಲಿ ನೋಡಬಹುದಾದ ಹತ್ತಾರು ಜಾಗಗಳಿವೆ. ಮೇಲೆ ಹೇಳಿದ ಜಾಗಗಳನ್ನ ನೋಡಲು ಸಮಯವೆಷ್ಟು ಬೇಕು ಹಣದ ಲೆಕ್ಕಾಚಾರವೇನು ಇನ್ನಷ್ಟು ಮೂಲಭೂತ ಮಾಹಿತಿಗಳು ಇಂತಿವೆ.

ಪ್ರವಾಸ ಹೋಗುವ ಜಾಗ : ಹನೋಯಿ ಮತ್ತು ಸುತ್ತ ಮುತ್ತ, ವಿಯೆಟ್ನಾಮ್

ಎಷ್ಟು ದಿನ ಬೇಕು? : ಮೇಲೆ ಹೇಳಿದ ಎಲ್ಲಾ ಜಾಗಗಳನ್ನು ನೋಡಲು ಕನಿಷ್ಠ ಒಂದು ವಾರವಾದರೂ ಬೇಕು.

ಹೊರಡುವ ಸ್ಥಳ : ಬೆಂಗಳೂರು.

Why you should visit Vietnam

ಖರ್ಚೆಷ್ಟಾಗುತ್ತೆ? : ವಿಮಾನದ ವೆಚ್ಚ ಮೂವತ್ತರಿಂದ ಮೂವತ್ತೈದು ಸಾವಿರ ಹೋಗಿಬರಲು. ಹೋಟೆಲ್ ಹದಿನೈದರಿಂದ ಇಪ್ಪತ್ತು ಸಾವಿರ ವಾರಕ್ಕೆ. ಊಟ ತಿಂಡಿ ಸಾವಿರ ಹತ್ತು ಸಾವಿರ ವಾರಕ್ಕೆ, ಲೋಕಲ್ ಓಡಾಟದ ಖರ್ಚು ಹದಿನೈದರಿಂದ ಇಪ್ಪತ್ತು ಸಾವಿರ. ಒಟ್ಟು ಒಬ್ಬ ವ್ಯಕ್ತಿ ಒಂದು ವಾರ ಮೇಲೆ ಹೇಳಿದ ಎಲ್ಲಾ ಜಾಗಗಳನ್ನು ನೋಡಿ ಬರಲು 75 ಸಾವಿರ ರೂಪಾಯಿ ಖರ್ಚು ಮಾಡಬೇಕಾಗುತ್ತೆ. ನೆನಪಿಡಿ, ಖರ್ಚು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತೆ. ಇದೆ ಪ್ರಯಾಣ ಇನ್ನೂ ಹತ್ತು ಸಾವಿರ ಕಡಿಮೆಯಲ್ಲೂ ಮಾಡಬಹುದು, ಲಕ್ಷಕ್ಕೂ ಹೆಚ್ಚು ಖರ್ಚು ಮಾಡಲೂಬಹುದು. ಇಲ್ಲಿನ ಲೆಕ್ಕಾಚಾರ ಮಧ್ಯಮ ವರ್ಗದ್ದು.

ಇಲ್ಲಿಗೆ ಭೇಟಿ ನೀಡಲು ಯಾವ ಸಮಯ ಬೆಸ್ಟ್ : ಸೆಪ್ಟೆಂಬರ್ - ನವೆಂಬರ್ ಅತ್ಯುತ್ತಮ ವೇಳೆ. ಮಾರ್ಚ್ ಮತ್ತು ಏಪ್ರಿಲ್ ಕೂಡ ಓಕೆ.

ವೀಸಾ ಕಥೆ ಏನು? ಭಾರತೀಯರಿಗೆ ವೀಸಾ ಬೇಕಾ? ಹೌದು ಭಾರತೀಯರಿಗೆ ವೀಸಾ ಬೇಕು ಆದರೆ ಇಲ್ಲಿಂದಲೆ ಪಡೆದು ಹೋಗಬೇಕು ಅಂತಿಲ್ಲ. ಆನ್ ಆರೈವಲ್ ಇದೆ. 25 ಡಾಲರ್ ಶುಲ್ಕ.

Why you should visit Vietnam

ವಿನಿಮಯ ದರ ಹೇಗೆ : ಒಂದು ಭಾರತೀಯ ರೂಪಾಯಿ ಕೊಟ್ಟರೆ 348 ವಿಯೆಟ್ನಾಮಿ ಡಾಂಗ್ ಕೊಡುತ್ತಾರೆ. ಹೆಚ್ಚು ಕಡಿಮೆ ಭಾರತದಲ್ಲಿ ಖರ್ಚಾದಷ್ಟೆ ಇಲ್ಲೂ ಖರ್ಚಾಗುತ್ತೆ. ಜೋಬಿನ ಆರೋಗ್ಯದಲ್ಲಿ ಏರುಪೇರು ಆಗುವುದಿಲ್ಲ.

ವೇಳೆ ವ್ಯತ್ಯಾಸ ಉಂಟಾ? : ಭಾರತಕ್ಕಿಂತ ಒಂದೂವರೆ ಗಂಟೆ ಮುಂದಿದ್ದಾರೆ.

ಭಾಷೆ ಯಾವುದು? ಭಾಷೆ ಸಮಸ್ಯೆ ಆಗುತ್ತಾ? : ಇಲ್ಲಿನ ಜನ ಆಡುವ ಭಾಷೆ ವಿಯೆಟ್ನಾಮೀಸ್. ಕೆಲವೇ ಕೆಲವು ಜನ ಮಾತ್ರ ಇಂಗ್ಲಿಷ್ ಮಾತಾಡಬಲ್ಲರು. ಭಾಷೆ ಸಮಸ್ಯೆ ಆಗುವುದಿಲ್ಲ. ಕೈ ಬಾಯಿ ಸನ್ನೆಯ ಮೂಲಕವೂ ವ್ಯವಹಾರ ನಡೆಸಬಹದು!

Why you should visit Vietnam

ಇಲ್ಲಿನ ಜನರ ಜೀವನ ಹೇಗಿದೆ? ಇಲ್ಲಿನ ಮನೆಯ ಬೆಲೆ ಎಷ್ಟಿರಬಹದು? ಆಹಾರ ವಿಚಾರವೇನು? ಭಾರತದ ಬಗ್ಗೆ ಇವರ ಅನಿಸಿಕೆ ಏನು? ಅಮೆರಿಕಾವನ್ನು ಇನ್ನೂ ದ್ವೇಷಿಸುತ್ತಾರಾ? ಚೀನಾ ಇವರ ಮಿತ್ರ ದೇಶವಾ ಅಥವಾ ಶತ್ರು ದೇಶವಾ? ಇಲ್ಲಿನ ಆರ್ಥಿಕತೆ ಕತೆ ಏನು? ಮುಖ್ಯ ಆದಾಯದ ಮೂಲವೇನು? ನಿನ್ಹ್ ಬಿನ್ಹ್ ಹಳ್ಳಿ ಸ್ವರ್ಗವೇ ಭೂಮಿಗಿಳಿದಂತಿದೆ ಎಂದಿರಲ್ಲ ಅಲ್ಲೇನಿದೆ? ಎನ್ನುವ ಹಲವು ನಿಮ್ಮ ಪ್ರಶ್ನೆಗಳ ಜೊತೆಗೆ ಅಲ್ಲಿನ ಜನರ ಜೊತೆ ಮಾತನಾಡುತ್ತ, ಅಲ್ಲಿ ಆದ ಹಲವು ಅನುಭವಗಳನ್ನ ಹೊತ್ತು ನಿಮ್ಮ ಮುಂದೆ ಮುಂದಿನವಾರ ಬರುವೆ. ಅಲ್ಲಿಯವರೆಗೆ ತಾಮ್ ಬಿಯೇತ್ (ಬೈ).

English summary
Are you planning to go out of India to spend holidays? You should make it a point to visit Vietnam in Southeast Asia. Rangaswamy Mookanahalli, the author, takes you for a tour of Hanoi and Ninh and Binh, beatutiful village. Enjoy Vietnam tour.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X