ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೇನ್ ವಾರ್ನ್ ಎಂದರೆ ಅಣ್ಣನಿಗೆ ಉಸಿರು. ಅಣ್ಣ ಇಲ್ಲ , ಇನ್ನೊಂದು ಉಸಿರೂ ಇಲ್ಲದಾಗಿದೆ

By ರಂಗಸ್ವಾಮಿ ಮೂಕನಹಳ್ಳಿ
|
Google Oneindia Kannada News

ಶೇನ್ ವಾರ್ನ್ ಇನ್ನಿಲ್ಲ. ಜಗತ್ತಿನಾದ್ಯಂತ ಹೃದಯಘಾತದಿಂದ ವಯಸ್ಸಿಗೆ ಮೊದಲೇ ಸಾಯುವವರ ಸಂಖ್ಯೆ ಹೆಚ್ಚಾಗುತ್ತಿದೆ . ಕ್ರಿಕೆಟ್ ಎಂದರೆ ಅಣ್ಣನಿಗೆ (ತಂದೆ) ಪಂಚಪ್ರಾಣ, ವಾರ್ನ್ ಮತ್ತು ಕುಂಬ್ಳೆ ಎಂದರೆ ಅಣ್ಣನಿಗೆ ಉಸಿರು . ಅಣ್ಣ ಇಲ್ಲ , ಇನ್ನೊಂದು ಉಸಿರು ಕೂಡ ಇಲ್ಲವಾಗಿದೆ . ಆದರೇನು ನೆನಪುಗಳು ಮಾತ್ರ ಸದಾ ಜೀವಂತ - ಓಂ ಶಾಂತಿ.

ಅಣ್ಣನಿಗೆ ಸ್ಟ್ರೋಕ್ ಮತ್ತು ಹೃದಯಾಘಾತ ಎರಡೂ ಒಟ್ಟಿಗೆ ಆದಾಗ ಅವರಿಗೆ 59 ವರ್ಷ. ಹಾಗೆ ನೋಡಲು ಹೋದರೆ ಅಣ್ಣ ದಪ್ಪವೇನಿರಲಿಲ್ಲ . ಅವರದು ಆಕ್ಟಿವ್ ಲೈಫ್ ಸ್ಟೈಲ್ . ಹೀಗಿದ್ದೂ ಅವರಿಗೆ ಅಷ್ಟು ಸಣ್ಣ ವಯಸ್ಸಿಗೆ ಈ ರೀತಿ ಆಗಿದ್ದು ನಮ್ಮ ಮಟ್ಟಿಗೆ ಆಶ್ಚರ್ಯ ತರಿಸಿತ್ತು . ಅಣ್ಣನ ನಲವತ್ತನೇ ವಯಸ್ಸಿನಲ್ಲಿ ಅವರಿಗೆ ಟೈಫಾಯ್ಡ್ ಜ್ವರ ಬಂದಿತ್ತು . ಆಗ ರಕ್ತ ಪರೀಕ್ಷೆ ಸಮಯದಲ್ಲಿ ಅವರಿಗೆ ಸಕ್ಕರೆ ಖಾಯಿಲೆ ಇರುವ ಬಗ್ಗೆ ಗೊತ್ತಾಯಿತು.

ಆಸ್ಟ್ರೇಲಿಯಾ ಕ್ರಿಕೆಟ್ ದಿಗ್ಗಜ ಶೇನ್ ವಾರ್ನ್ ನಿಧನಆಸ್ಟ್ರೇಲಿಯಾ ಕ್ರಿಕೆಟ್ ದಿಗ್ಗಜ ಶೇನ್ ವಾರ್ನ್ ನಿಧನ

ವೈದ್ಯರು ಹೇಳಿದಂತೆ ನಿಯಮಿತವಾಗಿ ತಪಾಸಣೆ , ಮಾತ್ರೆ ಮತ್ತು ಆಹಾರದಲ್ಲಿ ಕಟ್ಟುನಿಟ್ಟು ಅಣ್ಣ ಪಾಲಿಸುತ್ತಿದ್ದರು. ಎರಡು ಇಡ್ಲಿ ಅಂದರೆ ಎರಡೇ, ಒಂದು ದಿನವೂ ಒಂದು ಹೆಚ್ಚು ತಿಂದದ್ದು ನೋಡಲಿಲ್ಲ . ಬೇರೆ ಯಾವುದೇ ತಿಂಡಿಗಳಿರಲಿ ಅದೆಷ್ಟೇ ರುಚಿಕರವಾಗಿರಲಿ ಅವರೆಂದೂ ತಮ್ಮ ಮಿತಿಯ ಮೀರಿ ತಿಂದವರಲ್ಲ.

ಶುಗರ್ ಬರುವುದಕ್ಕೆ ಮುಂಚೆ ಕೂಡ ಹೆಚ್ಚಿನ ಆಹಾರ ಸೇವಿಸದವರಲ್ಲ . ಎಲ್ಲವೂ ಹಿತ ಮಿತ. ಸಮಯ ಪಾಲನೆಯಲ್ಲಿ ಅವರಿಗೆ ಅವರೇ ಸಾಟಿ. ನಿತ್ಯವೂ 8.30ಕ್ಕೆ ಮನೆ ಬಿಡುತ್ತಿದ್ದರು. ಒಂದು ದಿನವೂ ಲೇಟಾಗಿ ಹೋಗಿದ್ದು ನನ್ನ ಅನುಭವಕ್ಕೆ ಬರಲಿಲ್ಲ. ಇದೆಲ್ಲ ಬಹುತೇಕರು ಪಾಲಿಸಿಕೊಂಡು ಬಂದ ವಿಷಯವೇ ಆಗಿರುತ್ತದೆ .

ಐಪಿಎಲ್ ಬೆಂಗಳೂರಿನಲ್ಲೂ ನಡೆಯಲಿ: ಅದಕ್ಕೆ ಕಾರಣ ಹತ್ತು ಹಲವುಐಪಿಎಲ್ ಬೆಂಗಳೂರಿನಲ್ಲೂ ನಡೆಯಲಿ: ಅದಕ್ಕೆ ಕಾರಣ ಹತ್ತು ಹಲವು

 ಸ್ಟ್ರೋಕ್ ಮತ್ತು ಹಾರ್ಟ್ ಅಟ್ಯಾಕ್

ಸ್ಟ್ರೋಕ್ ಮತ್ತು ಹಾರ್ಟ್ ಅಟ್ಯಾಕ್

ತಮ್ಮ ನಿವೃತ್ತಿವರೆಗೆ ಎಲ್ಲರೂ ಚನ್ನಾಗೇ ಇರುತ್ತಾರೆ . ಅಣ್ಣ ನನ್ನ ಮಟ್ಟಿಗೆ ವಾಹ್ ಎನ್ನಿಸಿಕೊಂಡದ್ದು ಕೆಲಸದ ದಿನಗಳ ನಂತರದ ಜೀವನ ನೆಡೆಸಿದ ರೀತಿಯಿಂದ. ಸ್ಟ್ರೋಕ್ ಮತ್ತು ಹಾರ್ಟ್ ಅಟ್ಯಾಕ್ ಅದ ನಂತರ ಅಣ್ಣ ಬರೋಬ್ಬರಿ ಇಪ್ಪತ್ತು ವರ್ಷ ಬದುಕಿದ್ದರು. ಆ ಇಪ್ಪತ್ತು ವರ್ಷ ಬದುಕಿದ ರೀತಿಯಿದೆಯಲ್ಲ ಅದು ನನ್ನ ಮಟ್ಟಿಗೆ ಅತ್ಯಂತ ಆಶ್ಚರ್ಯ ತರಿಸುವ ವಿಷಯ. ಆ ಇಪ್ಪತ್ತು ವರ್ಷದಲ್ಲಿ ನನ್ನ ,ಅಣ್ಣನ ಜೊತೆಗಿನ ಒಡನಾಟ ಬಹಳ ಕಡಿಮೆ. ಅವರ ಕೊನೆಯ ಮೂರುವರೆ ವರ್ಷ ಮಾತ್ರ ನಾನು ಅವರೊಂದಿಗೆ ಸೂರು ಹಂಚಿಕೊಂಡದ್ದು . (ಚಿತ್ರದಲ್ಲಿ ಅಣ್ಣ)

 ಅಣ್ಣನಿಗೆ ಕ್ರಿಕೆಟ್ ನೋಡುವುದು ಬಿಟ್ಟರೆ ಬೇರಾವ ಹವ್ಯಾಸವೂ ಇರಲಿಲ್ಲ

ಅಣ್ಣನಿಗೆ ಕ್ರಿಕೆಟ್ ನೋಡುವುದು ಬಿಟ್ಟರೆ ಬೇರಾವ ಹವ್ಯಾಸವೂ ಇರಲಿಲ್ಲ

ಈ ಮಾತನ್ನ ಹೇಳಲು ಪ್ರಮುಖ ಕಾರಣ ಬಹಳಷ್ಟು ಜನ ನಿವೃತ್ತಿ ನಂತರ ವೇಳೆ ಕಳೆಯಲು ಬಹಳಷ್ಟು ಪರದಾಡುತ್ತಾರೆ. ಜೀವನ ಪೂರ್ತಿ ಕೆಲಸ ಮತ್ತು ಬದುಕಿನ ಬಂಡಿ ಎಳೆಯುವುದರಲ್ಲಿ ಕಳೆದ ಜನ ಸಂಧ್ಯಾಕಾಲದಲ್ಲಿ ದೊರೆತ 'ತಮ್ಮ ವೇಳೆ ' ಯನ್ನ ಹೇಗೆ ವ್ಯಯಿಸಬೇಕು ಎನ್ನುವುದು ಗೊತ್ತಿಲ್ಲದೇ ಪರದಾಡುತ್ತಾರೆ . ಮುಕ್ಕಾಲು ಪಾಲು ಜನರಿಗೆ ಯಾವುದೇ ರೀತಿಯ ಹವ್ಯಾಸ ಕೂಡ ಇರುವುದಿಲ್ಲ . ಹೀಗಾಗಿ ನಿವೃತ್ತಿ ನಂತರದ ಬದುಕು ಬಹಳಷ್ಟು ಜನರಿಗೆ ಬರ್ಬರ . ಅಣ್ಣನಿಗೆ ಕ್ರಿಕೆಟ್ ನೋಡುವುದು ಬಿಟ್ಟರೆ ಬೇರಾವ ಹವ್ಯಾಸವೂ ಇರಲಿಲ್ಲ . ಟೆಸ್ಟ್ , ಒನ್ ಡೇ , ಟಿ ಟ್ವೆಂಟಿ , ಕೊನೆಗೆ ರಣಜಿ ಕೂಡ ಬಿಡದೆ ನೋಡುತ್ತಿದ್ದರು . (ಸಾಂದರ್ಭಿಕ ಚಿತ್ರ)

 ಉಪಹಾರ ನಿಧಾನವಾಗಿ ಸೇವಿಸುವುದು ಮಾಡುತ್ತಾರೆ

ಉಪಹಾರ ನಿಧಾನವಾಗಿ ಸೇವಿಸುವುದು ಮಾಡುತ್ತಾರೆ

ಎಲ್ಲಕ್ಕೂ ಮುಖ್ಯವಾಗಿ ಬೆಳಿಗ್ಗೆ ಐದಕ್ಕೆ ಎದ್ದು ನಿತ್ಯ ಕರ್ಮಗಳ ಮುಗಿಸಿ ಐದೂವರೆಗೆ ತಮ್ಮ ವಾಕಿಂಗ್ ಸ್ಟಿಕ್ ಹಿಡಿದು ವಾಕ್ ಹೊರಟು ಬಿಡುತ್ತಿದ್ದರು . ಅಣ್ಣ ಹೊರಟರೆಂದರೆ ಗಡಿಯಾರ ನೋಡುವುದೇ ಬೇಡ ಆಗ ಸಮಯ ಐದೂವರೆ ಖಂಡಿತ , ನಿಮಿಷ ಕೂಡ ಅತ್ತಿತ್ತ ಮಾಡುತ್ತಿರಲಿಲ್ಲ . ಸಾಮಾನ್ಯವಾಗಿ ನಿವೃತ್ತರಾದವರು ನಮಗೇನು ಕೆಲಸವಿಲ್ಲ ಎಂದು ನಿಧಾನವಾಗಿ ಏಳುವುದು , ಸ್ನಾನ ನಿಧಾನವಾಗಿ ಮಾಡುವುದು , ಉಪಹಾರ ನಿಧಾನವಾಗಿ ಸೇವಿಸುವುದು ಮಾಡುತ್ತಾರೆ . ಅಣ್ಣ ಅದಕ್ಕೆ ತದ್ವಿರುದ್ದ . ಎಂಟರೊಳಗೆ ಸ್ನಾನ , ಸಂಧ್ಯಾವಂದನೆ ಮುಗಿಸಿ ಎಂಟಕ್ಕೆ ಅನನ್ಯಳ ಜೊತೆಗೆ ತಿಂಡಿಗೆ ಕೂರುತ್ತಿದ್ದರು . (ಸಾಂದರ್ಭಿಕ ಚಿತ್ರ)

 ರಾತ್ರಿ ಎಂಟೂವರೆಗೆ ಮನೆಯ ಗೇಟ್ ಬೀಗ

ರಾತ್ರಿ ಎಂಟೂವರೆಗೆ ಮನೆಯ ಗೇಟ್ ಬೀಗ

ಒಂಬತ್ತಕ್ಕೆ ಮತ್ತೆ ವಾಕ್ , ಹತ್ತೂವರೆಗೆ ವಾಪಸ್ಸು . ಚೂರು ರೆಸ್ಟ್ , ಮತ್ತೆ ನಾನು ತಂದುಕೊಟ್ಟಿದ್ದ ಎಕ್ಸ್ ಬಾಕ್ಸ್ ನಲ್ಲಿ ಕ್ರಿಕೆಟ್ ಆಡುವುದು , ಊಟ , ನಿದ್ದೆ ಮತ್ತೆ ಸಂಜೆ ನಾಲ್ಕಕ್ಕೆ ವಾಕ್ ! ಆರುಗಂಟೆ ತನಕ ಮನೆಗೆ ವಾಪಸ್ಸು ಬರುತ್ತಿರಲಿಲ್ಲ . ಆಮೇಲೆ ಟಿವಿ ವೀಕ್ಷಣೆಯಲ್ಲಿ ಕಾಲ ಕಳೆಯುತ್ತಿದ್ದರು . ರಾತ್ರಿ ಎಂಟೂವರೆಗೆ ಮನೆಯ ಗೇಟ್ ಬೀಗ ಕೂಡ ಅಣ್ಣ ಕೊನೆಯ ದಿನದವರೆಗೆ ಹಾಕುತ್ತಿದ್ದರು .

ಇದೆಲ್ಲ ವಿಶೇಷ ಅಂತಲ್ಲ , ಆದರೆ ಏನೂ ಇಲ್ಲದ ಬದುಕಿನಲ್ಲಿ ಅಣ್ಣ ಒಂದು ರೂಟೀನ್ ಅವರಾಗೇ ಸೃಷ್ಟಿಸಿಕೊಂಡಿದ್ದರು . ಅವರಾಗೇ ಎಲ್ಲಕ್ಕೂ ಒಂದು ಟೈಮ್ ಫಿಕ್ಸ್ ಮಾಡಿಕೊಂಡಿದ್ದರು . (ಚಿತ್ರದಲ್ಲಿ ರಂಗಸ್ವಾಮಿ ಮೂಕನಹಳ್ಳಿ)
 ಪ್ರತಿ ವರ್ಷ ರಜಕ್ಕೆ ಬೆಂಗಳೂರಿಗೆ ಬರುವ ಮುನ್ನ ಏನು ಬೇಕು ?

ಪ್ರತಿ ವರ್ಷ ರಜಕ್ಕೆ ಬೆಂಗಳೂರಿಗೆ ಬರುವ ಮುನ್ನ ಏನು ಬೇಕು ?

ಬದುಕಿನ ಸುತ್ತಾ ಇಂತಹ ಸಣ್ಣ ಗೆರೆಗಳ ಎಳೆದುಕೊಳ್ಳದೆ ಸುಮ್ಮನೆ ಒಂದೆರೆಡು ದಿನ ಕಳೆದು ನೋಡಿ ಸಾಕು , ಆಗ ಅಣ್ಣನ ಜೀವನ ಗ್ರೇಟ್ ಅನ್ನಿಸಲು ಶುರುವಾಗುತ್ತೆ . ಅಣ್ಣ ಜೀವನದುದ್ದಕ್ಕೂ ಖಾಸಗಿ ಸಂಸ್ಥೆಗಳಲ್ಲಿ ಬೇರೆಯವರ ಕೆಳಗೆ ಕೆಲಸ ಮಾಡಿದ ಕಾರಣವೋ ಏನೋ ತಿಳಿಯದು ತನ್ನ ನಿವೃತ್ತಿ ಜೀವನವನ್ನ ಆಸ್ವಾದಿಸಿ ಜೀವಿಸಿ ಹೋದರು . ನಿವೃತ್ತ ಜೀವನದಲ್ಲೂ ಇಸ್ತ್ರಿ ಇಲ್ಲದೆ ಒಂದು ದಿನ ಕೂಡ ಬಟ್ಟೆ ಧರಿಸಿ ಹೊರಟವರಲ್ಲ . ಪ್ರತಿ ವರ್ಷ ರಜಕ್ಕೆ ಬೆಂಗಳೂರಿಗೆ ಬರುವ ಮುನ್ನ ಏನು ಬೇಕು ? ಎಂದು ಅಮ್ಮನನ್ನ ಮತ್ತು ಅಣ್ಣನನ್ನ ಕೇಳುತ್ತಿದ್ದೆವು . (ಚಿತ್ರದಲ್ಲಿ: ಅಣ್ಣ)

 ಸ್ವಿಸ್ ವಾಚ್ ತರುವಂತೆ ಹೇಳಿದರು. ಸ್ವಿಸ್ ವಾಚ್ ಸ್ಪೇನ್ ನಿಂದ ತರುವಂತಿಲ್ಲ

ಸ್ವಿಸ್ ವಾಚ್ ತರುವಂತೆ ಹೇಳಿದರು. ಸ್ವಿಸ್ ವಾಚ್ ಸ್ಪೇನ್ ನಿಂದ ತರುವಂತಿಲ್ಲ

ಅಮ್ಮ ಯಾವತ್ತೂ ಇಂತದು ಬೇಕು ಎಂದು ಬಾಯಿ ಬಿಟ್ಟು ಕೇಳಿದವಳಲ್ಲ. ಬಲವಂತದಿಂದ ಮೈಸೂರು ಸಿಲ್ಕ್ ಸೀರೆ ಕೊಡಿಸಿ ಹೋಗುತ್ತಿದ್ದೆವು. ಆದರೆ ಅಣ್ಣ ಹಾಗಲ್ಲ ಅವರ ಲಿಸ್ಟ್ ನಲ್ಲಿ ಏನಾದರೊಂದು ಬೇಕು ಇರುತ್ತಿತ್ತು . ಹಾಗೆಂದು ಡಿಮ್ಯಾಂಡಿಂಗ್ ಅಂತಲ್ಲ . ನನ್ನ ಮಕ್ಕಳಿಗೆ ತರಲು ಆಗುತ್ತೆ ಇದ್ದಾಗ ಯಾಕೆ ಅನುಭವಿಸಬಾರದು ? ಎನ್ನುವ ಮನೋಭಾವ. ಹೀಗೆ ಒಮ್ಮೆ( ಹತ್ತು ವರ್ಷದ ಹಿಂದೆ ) ಸ್ವಿಸ್ ವಾಚ್ ತರುವಂತೆ ಹೇಳಿದರು . ಸ್ವಿಸ್ ವಾಚ್ ಸ್ಪೇನ್ ನಿಂದ ತರುವಂತಿಲ್ಲ , ಅದು ಸ್ವಿಸ್ ನಲ್ಲೆ ಖರೀದಿಸಿರಬೇಕು ! ಅವರಾಸೆ ಪೂರೈಸಿದೆವು . ಅಣ್ಣ ಸಾಯುವ ದಿನ ಕೂಡ ತಮ್ಮ ಬಲಗೈಯಲ್ಲಿ ವಾಚ್ ಕಟ್ಟುವುದು ಮರೆತಿರಲಿಲ್ಲ! . (ಸಾಂದರ್ಭಿಕ ಚಿತ್ರ)

 ಶೇನ್ ವಾರ್ನ್ ಎಂದರೆ ಅಣ್ಣನಿಗೆ ಉಸಿರು. ಅಣ್ಣ ಇಲ್ಲ , ಇನ್ನೊಂದು ಉಸಿರೂ ಇಲ್ಲದಾಗಿದೆ

ಶೇನ್ ವಾರ್ನ್ ಎಂದರೆ ಅಣ್ಣನಿಗೆ ಉಸಿರು. ಅಣ್ಣ ಇಲ್ಲ , ಇನ್ನೊಂದು ಉಸಿರೂ ಇಲ್ಲದಾಗಿದೆ

ನೀನ್ಯಾಕೆ ಬಲಗೈಯಲ್ಲಿ ವಾಚ್ ಕಟ್ಟುತ್ತೀಯ ? ಇಡೀ ಜಗತ್ತೇ ಎಡಗೈಗೆ ವಾಚ್ ಕಟ್ಟುತ್ತೆ ಎನ್ನುವ ನನ್ನ ಪ್ರಶ್ನೆಗೆ ಅಣ್ಣ ನಕ್ಕು ನಾನು ಜಗತ್ತಲ್ಲ ಕಣ್ಣಯ್ಯಾ ಭಟ್ಟ ಎಂದಿದ್ದರು . ಆ ಮಾತಿನಲ್ಲಿರುವ ಅರ್ಥವನ್ನ ಇಲ್ಲಿಯವರೆಗೆ ಹತ್ತಾರು ರೀತಿಯಲ್ಲಿ ಅರ್ಥೈಸಿಕೊಂಡಿದ್ದೇನೆ . ಅವರ ಮಾತಿನಾರ್ಥ ಏನಿತ್ತೋ ? ಅವರಿದ್ದಾಗ ಕೇಳಬೇಕು ಎನ್ನುವುದು ಮರೆತು ಹೋಯ್ತು. ಶುಭವಾಗಲಿ .

Recommended Video

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ,ಮ್ಯಾಜಿಕ್‌ ಸ್ಪಿನ್ನರ್ ಶೇನ್ ವಾರ್ನ್ ನಿಧನ | Oneindia Kannada

English summary
Shane Warne No More And My Father Too: Article By Rangaswamy Mookanahalli. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X