ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಅಂದ ತಕ್ಷಣ ಎಲ್ಲವೂ ಕೆಟ್ಟದಲ್ಲ !ಅದು ವಿಶ್ವ ವ್ಯವಸ್ಥೆಯ ರಿಸೆಟ್ ಬಟನ್ !!

By ರಂಗಸ್ವಾಮಿ ಮೂಕನಹಳ್ಳಿ
|
Google Oneindia Kannada News

ಕೊರೊನಾ ವೈರಸ್ ಇಂದು ಜಗತ್ತಿಗೆಲ್ಲ ಗೊತ್ತಿರುವ ಹೆಸರು . ಈ ಶತಮಾನದಲ್ಲಿ ದೇಶಗಳನ್ನ ಹೀಗೆ ಲಾಕ್ ಡೌನ್ ಅಂದರೆ ಪೂರ್ಣ ವ್ಯಾಪಾರ ವಹಿವಾಟು ನಿಲ್ಲಿಸಿ ಮನುಷ್ಯರ ಓಡಾಟಕ್ಕೂ ನಿರ್ಬಂಧ ಹೇರಿದ ಉದಾಹರಣೆ ನಮ್ಮ ಮುಂದಿಲ್ಲ ಜಗತ್ತಿನ ಬಹುತೇಕ ರಾಷ್ಟ್ರಗಳು ಹೀಗೆ ತನ್ನ ಪ್ರಜೆಗಳನ್ನ ಗೃಹ ಬಂಧನದಲ್ಲಿರಲು ಸೂಚಿಸಿದೆ .

ಇಂತಹ ಒಂದು ಆದೇಶವನ್ನ ಸರಿಯಾಗಿ ಪಾಲಿಸದ ಅಮೆರಿಕಾ ಮತ್ತು ಯೂರೋಪಿನ ಹಲವಾರು ರಾಷ್ಟ್ರಗಳು ಇಂದು ಅತ್ಯಂತ ಹೆಚ್ಚು ನೋವುಗಳನ್ನ ದಾಖಲಿಸುತ್ತಿದೆ. ಜಗತ್ತಿನಾದ್ಯಂತ ಒಂದು ರೀತಿಯ ಸೂತಕದ ಛಾಯೆ ಆವರಿಸಿದೆ. ಇದೆಲ್ಲ ಗೊತ್ತಿರುವ ವಿಷಯ . ಹಾಗಾದರೆ ಮನುಷ್ಯನ ಬದುಕಿಗೆ ಭರವಸೆ ಇಲ್ಲವೇ ? ಬದುಕಿಗೆ ನಂಬಿಕೆಗಳು ಇರಲಾರವೇ ? ಎನ್ನುವ ಪ್ರಶ್ನೆ ಕೂಡ ಉದ್ಭವವಾಗುತ್ತದೆ.

ಗಮನಿಸಿ ಈ ಹಿಂದೆ ಅಂದರೆ 1918ರಲ್ಲಿ ಸ್ಪ್ಯಾನಿಷ್ ಫ್ಲೂ ಎನ್ನುವ ಹೆಸರಿನ ರೋಗ ಕೋಟ್ಯಂತರ ಜನರ ಸಾವಿಗೆ ಕಾರಣವಾಗಿತ್ತು . ಮನುಕುಲ ಅದನ್ನ ಮರೆತು ಬಹಳ ದೂರ ಬಂದಿದ್ದೇವೆ . ಅಂದಿನ ದಿನಗಳಲ್ಲಿ ಊಹಿಸಿಕೊಳ್ಳಲು ಆಗದ ತಂತ್ರಜ್ಞಾನ ಇಂದು ನಮ್ಮ ಮುಂದಿದೆ. ಇಷ್ಟೆಲ್ಲಾ ಆದದ್ದು ನಾಳೆ ನಮ್ಮದು ಎನ್ನುವ ಅಶಭಾವದಿಂದ !. ಅಂತಹುದೇ ಆಶಾಭಾವ ಚಿಗುರಿಸುವ ಹಲವಾರು ವಿಷಯಗಳು ನಮ್ಮ ಮುಂದಿವೆ. ಅವೇನು ಎನ್ನುವುದನ್ನ ವಿಶ್ಲೇಷಿಸೋಣ .

ಈ ಭೂಮಿ ಕೇವಲ ಮನುಷ್ಯ ಒಬ್ಬನ ಸ್ವತ್ತಲ್ಲ

ಈ ಭೂಮಿ ಕೇವಲ ಮನುಷ್ಯ ಒಬ್ಬನ ಸ್ವತ್ತಲ್ಲ

ಎಲ್ಲಕ್ಕೂ ಮೊದಲಿಗೆ ಈ ಭೂಮಿ ಕೇವಲ ಮನುಷ್ಯ ಒಬ್ಬನ ಸ್ವತ್ತಲ್ಲ . ಇಲ್ಲಿ ನಾವು ಸಾವಿರಾರು ಜೀವಜಂತುಗಳ ಜೊತೆ ಭೂಮಿಯನ್ನ ಹಂಚಿಕೊಂಡಿದ್ದೇವೆ . ಆದರೆ ನಮ್ಮ ಬೆಳವಣಿಗೆಯ ವೇಗ , ಭೂಮಿಯ ಮೇಲಿನ ಎಲ್ಲಾ ಸಂಪತ್ತು ಸೌಲಭ್ಯ ನನ್ನದು ಎನ್ನುವ ಭಾವನೆಯಲ್ಲಿ ಪ್ರಕೃತ್ತಿಯ ಮೇಲೆ ಆತ ಮಾಡಿದ ದಾಳಿಯಿಂದಾದ ಗಾಯ ಈ ದಿನಗಳಲ್ಲಿ ಸ್ವಲ್ಪ ವಾಸಿಯಾಗುತ್ತಿದೆ .

ಜಗತ್ತಿನಾದ್ಯಂತ ನೆಲ , ಜಲ ಮತ್ತು ವಾಯುವಿನಲ್ಲಿ ಜೀವ ಜಂತುಗಳು ಖುಷಿಯಿಂದ ವಿಹರಿಸುತ್ತಿರುವ ದೃಶ್ಯಗಳನ್ನ ನಾವೆಲ್ಲರೂ ನೋಡಿದ್ದೇವೆ . ಆ ಲೆಕ್ಕದಲ್ಲಿ ಕೊರೊನಾ ನಮ್ಮ ಅತಿ ವೇಗಕ್ಕೆ ಬಿದ್ದ ಬ್ರೇಕ್ ಅಷ್ಟೇ , ಇದರಿಂದ ವಾತಾವರಣದಲ್ಲಿ ಆಗುವ ಉತ್ತಮ ಬದಲಾವಣೆ ಇಂದ ಮನುಕುಲಕ್ಕೆ ಅನುಕೂಲ.

ಹೊಸ ವೈದ್ಯಕೀಯ ಸಾಧ್ಯತೆಗಳು

ಹೊಸ ವೈದ್ಯಕೀಯ ಸಾಧ್ಯತೆಗಳು

ಎರಡನೆಯದಾಗಿ ವೈದ್ಯಕೀಯ ವಿಜ್ಞಾನದಲ್ಲಿ ಕೆಲಸದ ಬೇಡಿಕೆಗಳು ಹೆಚ್ಚಾಗುತ್ತವೆ . ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ ಬಳಸಿ ಇಂತಹ ಸಮಯ ಮುಂದೆ ಎದುರಾದರೆ ರೋಗಿಗಳ ಬಳಿ ವೈದ್ಯರು ಹೋಗದೆ ಗುಣಪಡಿಸುವ ಅಥವಾ ಚಿಕಿತ್ಸೆ ನೀಡುವ ಸೌಲಭ್ಯವನ್ನ ತಯಾರಿಸಬಹುದು. ಕೊರೊನಾ ವೈರಸ್ಸಿನ ಕಾರಣ ಹಲವಾರು ಕೆಲಸಗಳು ಹೋಗುತ್ತವೆ. ಹಾಗೆಯೇ ಹಲವಾರು ಹೊಸ ಕೆಲಸಗಳು ಕೂಡ ಸೃಷ್ಟಿಯಾಗುತ್ತವೆ .

ಕೃಷಿ ಆಧಾರಿತ ಬದುಕು ಹೆಚ್ಚಾಗುವ ಸಾಧ್ಯತೆ

ಕೃಷಿ ಆಧಾರಿತ ಬದುಕು ಹೆಚ್ಚಾಗುವ ಸಾಧ್ಯತೆ

ನಗರ ಪ್ರದೇಶದಲ್ಲಿ ಜನ ಸಾಂದ್ರತೆ ಹೆಚ್ಚು. ಮನೆಗಳು ಗಗನದತ್ತ ಮುಖ ಮಾಡಿವೆ . ಇವುಗಳು ಈಗ ಅಗಲಕ್ಕೆ ಹರಡಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ . ಇದರ ಜೊತೆಯಲ್ಲಿ ನಗರ ಕೇಂದ್ರೀಕೃತ ಬದುಕು ಸ್ವಲ್ಪವಾದರೂ ಕಡಿಮೆಯಾಗುತ್ತದೆ. ನಗರದಲ್ಲಿ ಕೆಲಸ ಕಳೆದುಕೊಂಡ ಬಹಳಷ್ಟು ಜನ ಮರಳಿ ತಮ್ಮ ಮೂಲಕ್ಕೆ ಹೋಗುತ್ತಾರೆ . ಕೃಷಿ ಆಧಾರಿತ ಬದುಕನ್ನ ಕಂಡುಕೊಳ್ಳುತ್ತಾರೆ. ಉಳ್ಳವರು ಕೂಡ ಮುಂದಿನ ದಿನಗಳಲ್ಲಿ ಹಳ್ಳಿಯಲ್ಲಿ ಜಾಗ ಕೊಂಡು ವ್ಯವಸಾಯ ಮತ್ತು ಬದುಕು ಕಟ್ಟಿಕೊಳ್ಳುವ ಸಾಧ್ಯತೆಗಳನ್ನ ಅಲ್ಲಗೆಳೆಯಲು ಬರುವುದಿಲ್ಲ .

ಬದುಕಿನ ಮೌಲ್ಯ ನವೀಕರಣ

ಬದುಕಿನ ಮೌಲ್ಯ ನವೀಕರಣ

ಇನ್ನೊಂದೆರೆಡು ತಿಂಗಳು ಆಮೇಲೆ ಎಲ್ಲವೂ ಮೊದಲಿನ ಹಾಗೆ ಇರುತ್ತದೆ ಎನ್ನುವ ಆಗಿಲ್ಲ . ವರ್ಕ್ ಫ್ರಮ್ ಹೋಂ ಎನ್ನುವುದು ಇನ್ನು ಸಾಮಾನ್ಯ ಎನ್ನುವಂತಾಗುತ್ತದೆ . ಇದರಿಂದ ಪ್ರತಿ ನಿತ್ಯ ವಾಹನಗಳ ಓಡಾಟ ಕಡಿಮೆಯಾಗುತ್ತದೆ . ಇದು ನಮ್ಮ ಕಾರ್ಬನ್ ಉಗುಳುವಿಕೆ ಕಡಿಮೆ ಮಾಡುತ್ತದೆ . ಇದು ಅಪರೋಕ್ಷವಾಗಿ ನಮಗೆ ಒಳ್ಳೆಯದು .

ಇಂದು ಸಿಕ್ಕಿರುವ ಸಮಯ ಮನುಷ್ಯನಿಗೆ ಬದುಕಿನ ಮೌಲ್ಯಗಳನ್ನ ಮತ್ತೆ ನವೀಕರಿಸಲು ಒಂದು ನೋಟೀಸ್ ಕೊಟ್ಟಹಾಗಿದೆ . ಹೀಗಾಗಿ ಬೇಡವಾದ ವಸ್ತುಗಳ ಖರೀದಿ , ಅವುಗಳ ಬಳಕೆ ಎಲ್ಲಕ್ಕೂ ಕಡಿವಾಣ ಬೀಳಲಿದೆ . ಜಗತ್ತಿನಲ್ಲಿರುವ ನೈಸರ್ಗಿಕ ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಂಡರೆ ಹೆಚ್ಚು ದಿನ ಈ ಭೂಮಿಯ ಮೇಲೆ ನಾವು ವಾಸಿಸಲು ಸಾಧ್ಯ . ಆ ನಿಟ್ಟಿನಲ್ಲಿ ಕೊರೊನಾ ಶಾಪವಲ್ಲ , ವರದಾನ .

ಕೆಲ್ಸವಿಲ್ಲದಿದ್ದರೆ ಮುಂದೇನು ?

ಕೆಲ್ಸವಿಲ್ಲದಿದ್ದರೆ ಮುಂದೇನು ?

ಈ ನಗರೀಕರಣ , ಕೈಗಾರೀಕರಣಕ್ಕೆ ಮುಂಚೆ ಭಾರತದಲ್ಲಿ ಜನ ಬದುಕುತ್ತಿರಲಿಲ್ಲವೇ ? ಆಗ ಗೂಗಲ್ , ಮೈಕ್ರೋ ಸಾಫ್ಟ್ , ರಿಲಯನ್ಸ್ ಅಥವಾ ಇನ್ನ್ಯಾವುದೇ ಪ್ರಸಿದ್ಧ ಸಂಸ್ಥೆಗಳು ಇರಲಿಲ್ಲ . ನಮ್ಮ ತಾತ , ಮುತ್ತಾತರು ಇಂತಹ ಸಂಸ್ಥೆಗಳ ನೌಕರರಾಗಿರಲಿಲ್ಲ , ಅವರಿಗೆ ನಮಗೆ ಬಂದ ಹಾಗೆ ತಿಂಗಳ ಕೊನೆಗೆ ವೇತನ ಸಿಗುತ್ತಿರಲಿಲ್ಲ .

ಗಮನಿಸಿ ನೋಡಿ , ನಿಮ್ಮ ನೆನಪನ್ನ ಕೆದಕಿ ನೋಡಿ ಅವರೆಲ್ಲಾ ನಮಗಿಂತ ಖುಷಿಯಾಗಿ , ಆರೋಗ್ಯವಾಗಿ ಬದುಕಿ ಜೀವನ ಪಯಣ ಮುಗಿಸಿ ಹೋಗಲಿಲ್ಲವೇ ? ಅಂದರೇನರ್ಥ ? ನಾವು ನಗರಕ್ಕೆ ಬಂದೆವು , ನಮ್ಮಲ್ಲಿನ ಬದುಕುವ ಕಲೆಯನ್ನ ಮರೆತೆವು , ಕೆಲ್ಸವಿಲ್ಲದಿದ್ದರೆ ಮುಂದೇನು ? ಎನ್ನುವ ಆತಂಕ ಬಿಟ್ಟು ನಮಗೆ ಬೇರೆ ಯೋಚನೆ ಬರುವುದೇ ಇಲ್ಲ !

ನಮ್ಮ ಬದುಕಿನ ರೀತಿ ಬದಲಿಸಿಕೊಳ್ಳಲು ಅವಕಾಶ

ನಮ್ಮ ಬದುಕಿನ ರೀತಿ ಬದಲಿಸಿಕೊಳ್ಳಲು ಅವಕಾಶ

ಸುಲಭವಾಗಿ ಹೆಚ್ಚು ಕಷ್ಟ ಪಡದೆ ತಿಂಗಳಿಗೆ ಸಿಗುವ ವೇತನದ ಗುಲಾಮರಾದ ನಮಗೆ ಪರ್ಯಾಯ ಚಿಂತಿಸುವ ಶಕ್ತಿ ಎಲ್ಲಿಂದ ಬಂದಿತು ? ಈಗೇನು ಪ್ರಪಂಚ ಮುಳುಗಿ ಹೋಗಿಲ್ಲ. ಈಗಲೂ ಬದುಕು ನಮ್ಮ ಕೈಲಿದೆ . ನಮ್ಮ ಮೆದುಳಿನಲ್ಲಿ , ನಮ್ಮ ಚಿಂತನೆಯಲ್ಲಿ , ನಾವು ಬದುಕನ್ನ ನೋಡುವ ರೀತಿಯಲ್ಲಿ ಒಂದಷ್ಟು ಬದಲಾವಣೆ ಬೇಕಾಗಿದೆ . ಅಷ್ಟು ಮಾಡಿಕೊಂಡರೆ ಬದುಕು ಕಷ್ಟವೇನಲ್ಲ . ಅಷ್ಟರ ಮಟ್ಟಿಗೆ ಕರೋನ ನಮಗೆ ಒಂದು ಸಣ್ಣ ಅಲಾರಾಂ . ನಮ್ಮ ಬದುಕಿನ ರೀತಿ ಬದಲಿಸಿ ಕೊಳ್ಳಲು ಒಂದು ಪುಟ್ಟ ಧಮಕಿ !

ನಮ್ಮ ಕೈಲಿರುವ ಮೊಬೈಲ್ ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದರೆ ಅದನ್ನ ಮತ್ತೆ ಫ್ಯಾಕ್ಟರಿ ಸೆಟ್ಟಿಂಗ್ ಗೆ ಹೊಂದಿಸುತ್ತೆವೆ . ಅದೂ ಇಲ್ಲದಿದ್ದರೆ ? ರಿಸೆಟ್ ಎನ್ನುವ ಒಂದು ಬಟನ್ ಒತ್ತುತ್ತೇವೆ . ನಂತರ ಅದು ಹೊಸ ಮೊಬೈಲ್ ಮಟ್ಟಕ್ಕೆ ಬದಲಾಗಿರುತ್ತದೆ . ಅಂದರೆ ಹಳೆಯ ಯಾವ ವಿಷಯವೂ ಇರದೇ ಹೊಸದಾಗಿ ಬೇಕಾದದನ್ನ ತುಂಬಲು ಸಿದ್ಧವಾಗುತ್ತೆ ಅಲ್ಲವೇ ? ಈಗ ಆಗಿರುವುದು ಅದೇ ಕರೋನ ವಿಶ್ವ ವ್ಯವಸ್ಥೆಯ ರಿಸೆಟ್ ಬಟನ್ !!

ಹಾಸ್ಪಿಟಾಲಿಟಿ ವಲಯದಲ್ಲಿ ಒಂದಷ್ಟು ತಲ್ಲಣ

ಹಾಸ್ಪಿಟಾಲಿಟಿ ವಲಯದಲ್ಲಿ ಒಂದಷ್ಟು ತಲ್ಲಣ

ಮೊದಲೇ ಹೇಳಿದಂತೆ ಕರೋನ ತಾತ್ಕಾಲಿಕವಾಗಿ ಹತ್ತಾರು ನೋವುಗಳನ್ನ ನೀಡುತ್ತದೆ . ಏಕೆಂದರೆ ನಾವು ಕಟ್ಟಿಕೊಂಡಿರುವ ಬದುಕಿನ ವ್ಯವಸ್ಥೆ ಹಾಗಿದೆ .ಗಮನಿಸಿ ಎಲ್ಲೆಲ್ಲಿ ಸಮಸ್ಯೆ ಇರುತ್ತದೆ ಅಲ್ಲಿ ಅವಕಾಶಗಳೂ ಹೇರಳವಾಗಿ ತೆರೆದುಕೊಳ್ಳುತ್ತವೆ . ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೆಚ್ಚಿನ ಬೇಡಿಕೆ ಇರುತ್ತದೆ .

ಶ್ರಮ ವಹಿಸಿ ಮಾಡುವ ಕೆಲಸಗಳು , ಹಾಸ್ಪಿಟಾಲಿಟಿ ವಲಯ ಒಂದಷ್ಟು ತಲ್ಲಣಕ್ಕೆ ಒಳಗಾಗುತ್ತವೆ . ಆದರೆ ಮುಂಬರುವ ದಿನಗಳು ಯಾವ ಹೊಸ ಸಾದ್ಯತೆಯನ್ನ ಹೊತ್ತು ತರುತ್ತವೆ ಬಲ್ಲವರಾರು ? ನಾವು ಸಿದ್ದರಾಗಿ ಸರಿಯಾದ ಜಾಗದಲ್ಲಿ ನಿಂತಿರಬೇಕು ಸಮಯವೂ ಕೈ ಜೋಡಿಸಿದರೆ ಗೆಲುವು ನಮ್ಮದೆ .

ಭಾರತ ಬೇಗ ಚೇತರಿಸಿಕೊಳ್ಳುತ್ತದೆ ಏಕೆಂದರೆ :

ಭಾರತ ಬೇಗ ಚೇತರಿಸಿಕೊಳ್ಳುತ್ತದೆ ಏಕೆಂದರೆ :

# ಕುಸಿದ ಬಡ್ಡಿ ದರ ಉದ್ಯಮಗಳಿಗೆ ವರದಾನವಾಗಲಿದೆ . ಇದು ಹೆಚ್ಚಿನ ಉದ್ಯಗಾವಕಾಶ ಸೃಷ್ಟಿಸುವ ಸಾಧ್ಯತೆ ಕೂಡ ಇದೆ .

# ಜಗತ್ತಿಗೆ ಚೀನಾದ ಕುತಂತ್ರ ಅರಿವಾಗಿದೆ . ಹೀಗಾಗಿ ಮೇಕ್ ಇನ್ ಇಂಡಿಯಾ ಅಡಿಯಲ್ಲಿ ನಾವು ವಿಶ್ವಕ್ಕೆ ಬೇಕಾದ ಎಲ್ಲವನ್ನೂ ತಯಾರಿಸಿ ಮಾರುವ ಅವಕಾಶವಿದೆ .

#ಅಮೇರಿಕಾ , ಇಂಗ್ಲೆಂಡ್ ಮತ್ತು ಯೂರೋಪಿನಿಂದ ಭಾರತೀಯರು ಮರಳಿ ಭಾರತಕ್ಕೆ ಮರಳುವ ಸಾಧ್ಯತೆಯಿದೆ . ಅವರ ನೈಪುಣ್ಯತೆಯನ್ನ ಬಳಸಿಕೊಂಡು ನಮ್ಮ ಕಾರ್ಯ ಕ್ಷೇತ್ರವನ್ನ ವಿಸ್ತರಿಸಿಕೊಳ್ಳುವ ಅವಕಾಶ ನಮ್ಮ ಮುಂದಿದೆ .

# ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚಿನ ಸಂಶೋಧನೆ ನೆಡೆಸುವ ಸಾಧ್ಯತೆಗಳು ನಮ್ಮ ಮುಂದಿವೆ .

#ಕುಸಿದ ತೈಲ ಬೆಲೆಯನ್ನ ನಮ್ಮ ಅನುಕೂಲಕ್ಕೆ ಬಳಸಿಕೊಂಡು ಹಣದುಬ್ಬರವನ್ನ ತಡೆಯಬಹದು . ಇದು ಜನ ಸಾಮಾನ್ಯನಿಗೆ ಅನುಕೂಲ ಮಾಡಿಕೊಡುತ್ತದೆ .

# ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ ಹೆಚ್ಚಿನ ಮಹತ್ವ ಪಡೆಯಲಿದೆ . ಇದು ಶಿಕ್ಷಣ ಕ್ಷೇತ್ರದಲ್ಲಿ ಕೂಡ ಬದಲಾಣೆ ತರುವ ಸಾಧ್ಯತೆಯಿದೆ .

English summary
Coronavirus impact on Economy:Its a reset button to World System says economic expert Rangaswamy Mookanahalli.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X