• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಗತ್ತಿನಲ್ಲಿ ಕೆಟ್ಟದ್ದು ಎಷ್ಟಿದೆಯೋ ಅದರ 100 ಪಟ್ಟು ಒಳ್ಳೆಯದೂ ಇದೆ!

By ರಂಗಸ್ವಾಮಿ ಮೂಕನಹಳ್ಳಿ
|
Google Oneindia Kannada News

ನಮ್ಮಲ್ಲಿ ರಾಗಿ ಮುದ್ದೆ ಹೇಗೆ ಬಹುತೇಕರ ಉಪಹಾರವೋ ಹಾಗೆ ಇಲ್ಲಿ (ಬಾರ್ಸೆಲೋನಾ) ಮರದ ತುಂಡು ಹೋಲುವ ಬ್ರೆಡ್ಡನ್ನ (ಇಲ್ಲಿ ಇದಕ್ಕೆ ಪಾನ್ ಅಂತಾರೆ ) ಬೆಳಗಿನ ಉಪಹಾರವಾಗಿ ಸೇವಿಸುತ್ತಾರೆ . ಸಾಮಾನ್ಯವಾಗಿ ಈ ಪಾನ್ ಬಹಳ ಗಟ್ಟಿ . ತಿನ್ನುವುದಕ್ಕೆ ಗೊತ್ತಿರದಿದ್ದರೆ ವಸಡು ಕಿತ್ತು ಹೋಗುವುದು ಗ್ಯಾರಂಟಿ. ಇಂತಹ ಗಟ್ಟಿ ಬ್ರೆಡ್ಡನ್ನ ಮಧ್ಯದಲ್ಲಿ ಕತ್ತರಿಸಿ ಅಲ್ಲಿ ಮಾಂಸದ ತುಂಡು ಅಥವಾ ಚೀಸ್ ಅಥವಾ ಎರಡನ್ನೂ ಇಟ್ಟು , ಒಂದಷ್ಟು ಟೊಮೊಟೊ ತುಂಡು ಮತ್ತು ಎಲೆಕೋಸು ಹೋಲುವ ಲೆಟ್ಯುಸ್ ಎನ್ನುವ ಸೊಪ್ಪನ್ನ ಇರಿಸಿ ಸ್ಯಾಂಡ್ವಿಚ್ ತಯಾರಿಸುತ್ತಾರೆ.

ಇದು ಇಲ್ಲಿ ಬಹುತೇಕರು ಬೆಳಗಿನ ಉಪಹಾರಕ್ಕೆ ಸೇವಿಸುವ ತಿಂಡಿ. ಅನನ್ಯಳಿಗೆ ನಾವು ಈ ಬ್ರೆಡ್ಡು ಅಭ್ಯಾಸ ಮಾಡಿಸಿರಲಿಲ್ಲ. ಒಮ್ಮೆ ಮ್ಯಾಡ್ರಿಡ್ ಗೆ ತಮ್ಮ ಕಾಂತನ ಮನೆಗೆ ಹೋಗಿದ್ದಾಗ ಅಲ್ಲಿ ಬೇರೆ ಬ್ರೆಡ್ಡು ಇರದ ಕಾರಣ ಅವಳು ಪ್ರಥಮ ಬಾರಿಗೆ ಇದನ್ನ ತಿಂದಳು. ಅವಳಿಗೆ ಈ ಸ್ಯಾಂಡ್ವಿಚ್ ಇಷ್ಟವಾಯ್ತು. ಇಲ್ಲಿ ಇದಕ್ಕೆ 'ಬೋಕಾತ್ತ' ಎಂದು ಹೆಸರು. ಇತ್ತೀಚಿಗೆ ಇಲ್ಲಿ ವೆಜಿಟೇಬಲ್ ಸ್ಯಾಂಡ್ವಿಚ್ ಕೂಡ ದೊರೆಯುತ್ತದೆ. ಆದರೆ ಇವುಗಳ ಸಂಖ್ಯೆ ಕಡಿಮೆ. ಹೀಗಾಗಿ ಬೆಳಗಿನ ಒಂದಷ್ಟು ವೇಳೆ ನಂತರ ವೆಜ್ ಸ್ಯಾಂಡ್ವಿಚ್ ಎನ್ನುವುದು ಮರೀಚಿಕೆ.

 ನಮ್ಮ ನಂಬಿಕೆ ಇನ್ನೊಬ್ಬರ ನಂಬಿಕೆಯನ್ನ ಎಂದೂ ಕದಡಬಾರದು! ನಮ್ಮ ನಂಬಿಕೆ ಇನ್ನೊಬ್ಬರ ನಂಬಿಕೆಯನ್ನ ಎಂದೂ ಕದಡಬಾರದು!

ವರ್ಷಾನುಗಟ್ಟಲೆ ಒಂದು ನೆಲೆದಲ್ಲಿ ವಾಸಿಸಲು ಶುರು ಮಾಡಿದರೆ , ನಾವು ವಾಸಿಸುವ ಸುತ್ತಮುತ್ತಲ ಬಹಳ ಜನರ ಪರಿಚಯವಾಗುತ್ತದೆ. ಅದು ಸ್ನೇಹಕ್ಕೂ ತಿರುಗುತ್ತದೆ. ನಾನು ವಾಸವಿದ್ದ ಮನೆಯಿಂದ ಕೇವಲ ನೂರಿನ್ನೂರು ಮೀಟರ್ ದೂರದಲ್ಲಿ ಇದ್ದ 'ಬಾರ್ ಪೆದ್ರೋ' ಮಾಲೀಕ ಪೆದ್ರೋ ಸ್ನೇಹಿತನಾಗಿ ಯಾವಾಗ ಬದಲಾದ ಎನ್ನುವುದು ತಿಳಿಯದು. ಭಾಷೆಯೂ ಚನ್ನಾಗಿ ಬರಲು ಶುರುವಾದ ಮೇಲೆ ನನಗೆ ಇಲ್ಲಿ ಆಹಾರದ ತೊಂದರೆ ಮುಗಿದು ಹೋಯಿತು.

ಬೆಳಿಗ್ಗೆ ದೈನಂದಿನ ನಡಿಗೆ , ಸ್ನಾನ ಇತ್ಯಾದಿ ಮುಗಿಸಿ , ತಿಂಡಿ ಮಾಡಲು ಬೇಸರ ಎನ್ನಿಸಿದ ದಿನ ನೇರವಾಗಿ ಬಾರ್ ಪೆದ್ರೋ ಹೊಕ್ಕುತ್ತಿದ್ದೆ. ಪೆದ್ರೋ ಗೆ ನನಗೇನು ಬೇಕು ಎಂದು ಗೊತ್ತಾಗಿತ್ತು. ಓಲಾ ಅಮಿಗೋ , ತ್ರಾಯ್ಗೋ ದೆ ಸಿಯೆಮ್ಪ್ರೆ ? ( ಮಾಮೂಲಿ ತರುವುದಾ ?) ಎಂದು ಕೇಳುತ್ತಿದ್ದ.

ನಾನು ' ಸಿ, ಪರ್ ಫಾವೊರ್ ' (ಯಸ್ ಪ್ಲೀಸ್ ) ಎನ್ನುತ್ತಿದ್ದೆ. ನಿಮಗೆ ಗೊತ್ತೇ ? ಪೆದ್ರೋ ಈರುಳ್ಳಿಯನ್ನ ಉದ್ದುದ್ದ ಸೀಳಿ ಅದರ ಜೊತೆಗೆ ಪಿಮಿಯಂತೋಸ್ (ಮೆಣಸಿನಕಾಯಿ ) ತುಂಡು ಮಾಡಿ ಸೇರಿಸಿ ಎಣ್ಣೆಯಲ್ಲಿ ಚನ್ನಾಗಿ ಬಾಡಿಸಿ ಅದನ್ನ ಬ್ರೆಡ್ದ್ ಮಧ್ಯದಲ್ಲಿ ಇಟ್ಟು ಮೇಲೊಂದು ತುಂಡು ಒಣಗಿಸಿದ ಚೀಸ್ ತುಂಡನ್ನ ಸೇರಿಸಿ ಕೊಡುತ್ತಿದ್ದ . ಒಹ್ .. ಆ ರುಚಿ ಇಂದಿಗೂ ಮತ್ತೆ ನನ್ನ ಬಾರ್ಸಿಲೋನಾ ಗೆ ಸೆಳೆಯುತ್ತದೆ. ನಿತ್ಯ ತಿಂಡಿ ತಿನ್ನದಿದ್ದರೂ ಪೆದ್ರೋ ಬಾರಿಗೆ ನಿತ್ಯ ಎರಡು ಭೇಟಿ , ಎರಡು ಕಾಫಿ ತಪ್ಪಿಸುತ್ತಿರಲಿಲ್ಲ . ನನ್ನ ಸ್ಪ್ಯಾನಿಷ್ ಕಲಿಕೆಯ ಮೊದಲ ಪಾಠಶಾಲೆ ಕೂಡ ಇದೆ ಬಾರ್ .

 ಬದುಕೆಂದರೆ ಇಷ್ಟೇ? ತಾನೊಂದು ನೆನೆದರೆ ಮಾನವ, ಬೇರೊಂದು ಬಗೆಯುವುದು ದೈವ! ಬದುಕೆಂದರೆ ಇಷ್ಟೇ? ತಾನೊಂದು ನೆನೆದರೆ ಮಾನವ, ಬೇರೊಂದು ಬಗೆಯುವುದು ದೈವ!

ಬಾರ್ಸಿಲೋನಾ ನಗರವನ್ನ 2017ರಲ್ಲಿ ತೊರೆದು ಬೆಂಗಳೂರಿಗೆ ಶಿಫ್ಟ್ ಆಗಿದ್ದೆ. ಆದರೆ ಅಲ್ಲಿನ ನಂಟು ಮಾತ್ರ ಬಿಡಲು ಆಗಲಿಲ್ಲ. ಪ್ರತಿ ವರ್ಷ ಅನ್ನಿಗೆ ಬೇಸಿಗೆ ರಜ ಬಂದಾಗ ಏಪ್ರಿಲ್ ಮತ್ತು ಮೇ ತಿಂಗಳು ನಮ್ಮ ವಾಸ ಬಾರ್ಸಿಲೋನಾ . ಹೀಗೆ 2019ರ ಮೇ ತಿಂಗಳಲ್ಲಿ ಅನ್ನಿಯನ್ನ ಪಾನದೇರಿಯ ಒಂದಕ್ಕೆ ಕರೆದುಕೊಂಡು ಹೋಗಿದ್ದೆ. ನೀವು ಚಿತ್ರದಲ್ಲಿ ನೋಡುತ್ತಿರುವ ಬ್ರೆಡ್ ಸಾಫ್ಟ್ ಆಗಿದೆ . ಈ ಬ್ರೆಡ್ಡಿನ ಹೆಸರು "ಲೆಟಿಸಿಯ" ಅಂತ . ಅಂದಹಾಗೆ ಸ್ಪೇನ್ ನ ಈಗಿನ ಮಹಾರಾಣಿ ಹೆಸರು ಕೂಡ ಸೇಮ್ !!

ಪಾನದೇರಿಯ (ನಮ್ಮ ಬೇಕರಿ ಅಣ್ಣ್ತಮ್ಮ) ದಲ್ಲಿ ಕೆಲಸ ಮಾಡುವ ಮಹಿಳೆಯನ್ನ ಇಂತಹ ಹೆಸರೇಕೆ ಇಟ್ಟಿರಿ ? ಎಂದದ್ದಕ್ಕೆ ಮಹಾರಾಣಿ ಅಂದ ಮೇಲೆ ಕೋಮಲ , ಮೃದು ಎನ್ನುವ ಅರ್ಥ ಅಲ್ವಾ ? ಅದಕ್ಕೆ ಸಾಫ್ಟ್ ಪಾನ್ ಗೆ ಆ ಹೆಸರು ಎಂದಳು. ನಿಮಗೆ ತಿಳಿದಿರಲಿ ಇಂದಿನ ಸ್ಪೇನ್ ಮಹಾರಾಣಿ ಮೊದಲಿಗೆ ಟಿವಿಯಲ್ಲಿ ನ್ಯೂಸ್ ಓದುತ್ತಿದ್ದ ಒಬ್ಬ ಸಾಮಾನ್ಯ ಪ್ರಜೆ. ಇಂದಿನ ರಾಜ , ಅಂದಿನ ಯುವರಾಜ ಪಿಲಿಪ್ಪೆಗೆ ಈಕೆಯನ್ನ ಟಿವಿಯಲ್ಲಿ ನೋಡಿ ಪ್ರೀತಿ ಅಂಕುರವಾಗುತ್ತದೆ.

ಸಾಮಾನ್ಯವಾಗಿ ರಾಜ ಮನೆತನದವರು ರಾಜ ಮನೆತನದಲ್ಲೇ ಮದುವೆಯಾಗುತ್ತಾರೆ. ಇತ್ತೀಚಿಗೆ ಇದರಲ್ಲಿ ಒಂದಷ್ಟು ಬದಲಾವಣೆಗಳು ಆಗುತ್ತಿವೆ. ಹೀಗೆ ಯುವರಾಜನಿಗೆ ಈಕೆಯ ನೋಡಿ ಪ್ರೀತಿ ಹುಟ್ಟಿದ್ದಾಗ ಆಕೆಗೆ ಆಗಲೇ ಮದುವೆಯಾಗಿತ್ತು. ಯುವರಾಜನನ್ನ ಮದುವೆಯಾಗಲು ತನ್ನ ಗಂಡನಿಗೆ ಲೆಟಿಸಿಯ ವಿಚ್ಛೇದನ ನೀಡುತ್ತಾಳೆ. ಆಕೆಯ ಗಂಡ ಬಹಳ ಸಂತೋಷದಿಂದ ಒಪ್ಪಿ ಆಕೆಯ ವಿಚ್ಚೇದನಕ್ಕೆ ಸಮ್ಮತಿಯನ್ನ ನೀಡುತ್ತಾನೆ. ಇದೆಲ್ಲಾ ಹಿಂದಿನ ಕಥೆ. ಇಂದಿಗೆ ಈಕೆ ಸ್ಪೇನ್ ನ ಮಹಾರಾಣಿ . ದೋನ್ಯ ಲೆಟಿಸಿಯ .

ಎರಡು ವರ್ಷದ ಹಿಂದೆ ಇಲ್ಲಿನ (ಬಾರ್ಸಿಲೋನಾ-2019, ಮೇ 9) ಸರಕಾರಿ ಕಛೇರಿಯಲ್ಲಿ ಕೆಲಸವಿತ್ತು ., ಒಂದಲ್ಲ ಎರಡು ಕಛೇರಿ ಅಲೆಯಬೇಕಿತ್ತು . ಬೆಳಿಗ್ಗೆ ಹನ್ನೊಂದೂವರೆಗೆ ಒಂದು ಕಛೇರಿಯಲ್ಲಿ ಸಮಯ ಬೆಂಗಳೂರಿನಲ್ಲಿ ಕೂತು ತೆಗೆದುಕೊಂಡ್ಡಿದ್ದೆ . ಇನ್ನೊಂದು ಮಧ್ಯಾಹ್ನ ಮೂರು ಮೂವತ್ತಕ್ಕೆ . ಬೆಳಿಗ್ಗೆ ಬೇಗ ಎದ್ದು ಬಾರ್ಸಿಲೋನಾ ಕಡೆಗೆ ದೌಡಾಯಿಸಿದೆವು . ರಮ್ಯ , ಅನನ್ಯ ಜೊತೆಗಿದ್ದರು . ಬೆಳಗಿನ ಕೆಲಸ ಆರಾಮಾಗಿ ಮುಗಿಯಿತು . ಮಧ್ಯಾಹ್ನದ ಕಛೇರಿ ಬಾರ್ಸಿಲೋನಾ ನಗರದಿಂದ ಮೂವತ್ತು ಕಿಲೋಮೀಟರ್ ದೂರದಲ್ಲಿ .. ಸರಿ ಟ್ರೈನ್ ಹಿಡಿದು ಹೊರಟೆವು .

 ಎಲ್ಲರಿಗೂ ಕನಸಿನಲ್ಲಿ ಕನ್ಯೆಯರು ಬಂದರೆ ನನಗೆ ಮೊಸರನ್ನ ಬರುತ್ತಿತ್ತು!! ಎಲ್ಲರಿಗೂ ಕನಸಿನಲ್ಲಿ ಕನ್ಯೆಯರು ಬಂದರೆ ನನಗೆ ಮೊಸರನ್ನ ಬರುತ್ತಿತ್ತು!!

ದೇಶ ಯಾವುದೇ ಇರಲಿ ನನಗೆ ಡ್ರೈವ್ ಮಾಡುವುದು ಒಗ್ಗದ ಕೆಲಸ . ಜೊತೆಗೆ ಇಲ್ಲಿನ ನಂಟು ಬಿಟ್ಟಿದ್ದರಿಂದ ಕಾರು , ಚಾಲಕ ಇಬ್ಬರು ಇರದ ಸ್ಥಿತಿ ಬೇರೆ , ಇರಲಿ . ಕಛೇರಿಯಲ್ಲಿನ ಕೆಲಸ ಸುಸೂತ್ರವಾಗಿ ಆಯಿತು . ಮತ್ತೆ ಟ್ರೈನ್ ಸ್ಟೇಷನ್ ಗೆ ಹೋಗಬೇಕು ಟ್ರೈನ್ ಹಿಡಿಯಲು .., ಒಂದೆರಡು ಕಿಲೋಮೀಟರ್ ದೂರ ಮಧ್ಯಾಹ್ನದ ಸಮಯ ನಮ್ಮ ಸ್ಪಾನಿಷ್ ಜನತೆ ಸಿಯಾಸ್ತ ಇಂದ (ಮಧ್ಯಾಹ್ನದ ನಿದ್ದೆಗೆ ಸಿಯಾಸ್ತ ಎನ್ನುತ್ತಾರೆ ) ಇನ್ನು ಎದ್ದಿರಲಿಲ್ಲ . ರಸ್ತೆಯಲ್ಲಿ ಬೇಕೆಂದರೂ ಒಂದು ಟ್ಯಾಕ್ಸಿ ಸುಳಿವಿಲ್ಲ ! .

ನಮ್ಮ ಪುಣ್ಯಕ್ಕೆ ಬಸ್ ಒಂದು ಬಂದಿತು ತಕ್ಷಣ ಬಸ್ ಹತ್ತಿ ಇಪ್ಪತ್ತು ಯುರೋ ನೋಟು ಕೊಟ್ಟೆ ಟಿಕೆಟ್ ಮೂರು ಜನರಿಗೆ ಐದು ಯುರೋ ಹತ್ತು ಸೇಂಟ್ .., ಡ್ರೈವರ್ ಚಿಲ್ಲರೆ ಇಲ್ಲ .. ಮಿಗಿಲಾಗಿ ಹತ್ತು ಯುರೋ ನೋಟಿಗಿಂತ ಹೆಚ್ಚಿನ ಮೌಲ್ಯದ ನೋಟನ್ನ ತೆಗೆದುಕೊಳ್ಳುವುದಿಲ್ಲ ಎಂದ . ಬಸ್ ನಲ್ಲಿ ಹತ್ತರ ನೋಟಿಗಿಂತ ಹೆಚ್ಚಿನ ಮೌಲ್ಯದ ನೋಟನ್ನ ತೆಗೆದುಕೊಳ್ಳುವುದಿಲ್ಲ ಸರಿಯಾದ ಚಿಲ್ಲರೆ ಕೊಟ್ಟು ಸಹಕರಿಸಿ ಎನ್ನುವ ಮುಚ್ಚಳಿಕೆ ಕೂಡ ಹಾಕಿದ್ದರು . ಮುಂದಿನ ಇಪ್ಪತ್ತು ನಿಮಿಷದಲ್ಲಿ ಟ್ರೈನ್ ಇದೆ ಅದು ತಪ್ಪಿದರೆ ಸುಮ್ಮನೆ ಮತ್ತೊಂದು ಗಂಟೆ ಕಾಯಬೇಕು .

ಸ್ಪೇನ್ ನ ಬಸ್ಗಳಲ್ಲಿ ಇನ್ನೂ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳುವುದಿಲ್ಲ !! ಲೋಕಲ್ ಟ್ರಾವೆಲ್ ಕಾರ್ಡ್ ಇತ್ತು ಆದರೆ ಅದನ್ನ ಪುನಃ ಆಕ್ಟಿವೇಟ್ ಮಾಡಿಸದೆ ತಪ್ಪು ಮಾಡಿದ್ದೆ . ಸರಿ ಇನ್ನೇನು ಮಾಡುವುದು ವಿಧಿಯಿಲ್ಲದೇ ಬಸ್ನಿಂದ ಇಳಿದೆವು . ನಮ್ಮ ಹಿಂದೆ ಇದ್ದ ವ್ಯಕ್ತಿ ' ಪೇರ್ದೂನ .. ನೋ ತೆ ಪ್ರಕುಪೇಸ್ ಸುವ್ವೆ ಲ ಆತೋಬುಸ್ ' ಎಂದ . ನಾನು ಚಕಿತನಾಗಿ ' ದೇಸ್ಕುಲ್ಫೆ ' (ಎಸ್ಕ್ಯೂಸ್ ಮೀ ) ಎಂದೆ . ಆತ ಮತ್ತೆ ಬಸ್ ಏರುವಂತೆ ಹೇಳಿದ . ನಾವು ಬಸ್ ಹತ್ತಿದೆವು .

 ಪ್ರಕೃತ್ತಿ, ದೈವವೆನ್ನಿ ಬದುಕನ್ನ ಚೆನ್ನಾಗಿ ಕಟ್ಟಿಕೊಳ್ಳಲು ಒಂದು ಅವಕಾಶ ಕೊಟ್ಟೇ ಕೊಡುತ್ತದೆ ಪ್ರಕೃತ್ತಿ, ದೈವವೆನ್ನಿ ಬದುಕನ್ನ ಚೆನ್ನಾಗಿ ಕಟ್ಟಿಕೊಳ್ಳಲು ಒಂದು ಅವಕಾಶ ಕೊಟ್ಟೇ ಕೊಡುತ್ತದೆ

ಅನ್ನಿ , ರಮ್ಯ ಮತ್ತು ನನ್ನ ಟಿಕೆಟ್ ಅನ್ನು ತನ್ನ ಲೋಕಲ್ ಕಾರ್ಡ್ ಮೂಲಕ ಮಷೀನ್ ಮುಂದೆ ಹಿಡಿದು ' ಬೀಪ್ ' ಅನ್ನಿಸಿ ಪಾವತಿ ಮಾಡಿ ನನ್ನ ಧನ್ಯವಾದಕ್ಕೂ ನಿಲ್ಲದೆ ಏನೂ ಆಗಿಲ್ಲವೇನೂ ಎನ್ನುವಂತೆ ಹೋಗಿ ಹಿಂದಿನ ಸೀಟಿನಲ್ಲಿ ಕೂತ . ನಿಧಾನವಾಗಿ ಆತನನ್ನ ಸಮೀಪಿಸಿ ಧನ್ಯವಾದ ಹೇಳಿದೆ . ನೋ ಆಯ್ ದೆ ಕೆ (ಇದಕ್ಕೆಲ್ಲ ಧನ್ಯವಾದ ಏಕೆ ಬಿಡು) ಎಂದ . ಹತ್ತು ನಿಮಿಷದ ಹಿಂದೆ ಆತನಾರೋ ಗೊತ್ತಿರಲಿಲ್ಲ ಆದರೆ ಈಗ .....?? ಬದುಕೆಂದರೆ ಇಷ್ಟೇ ಅಲ್ವಾ ? ಆತನ ಇರುವಿಕೆಯ ಕಿಂಚಿತ್ತೂ ಅರಿವು ನಮಗಿರಲಿಲ್ಲ.

ನಮ್ಮ ಇರುವಿಕೆಯ ಕುರುಹು ಕೂಡ ಆತನಿಗಿರಲಿಲ್ಲ. ಆದರೂ ಆತ ನಮ್ಮ ಸಹಾಯಕ್ಕೆ ಬಂದಿದ್ದ. ನಾಲ್ಕಾರು ಸ್ಪ್ಯಾನಿಷ್ ಅಜ್ಜಿಯರು ಡ್ರೈವರ್ ನನ್ನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು . ಅವನು ಮಾಡಿದ್ದು ತಪ್ಪು ಬೇಜಾರು ಮಾಡಿಕೊಳ್ಳಬೇಡ ಎಂದು ನನ್ನ ಬಳಿ ಬಂದು ಸಮಾಧಾನ ಹೇಳಿದರು .ಇದು ಇಲ್ಲಿನ ಸಮಾಜ. ಬಹುತೇಕ ಸ್ಪ್ಯಾನಿಶರು ಇರುವುದು ಹೀಗೆ. ಇನ್ನೊಬ್ಬರ ಕಷ್ಟವನ್ನ ತಮ್ಮದು ಎನ್ನುವ ರೀತಿಯಲ್ಲಿ ಕಾಣುತ್ತಾರೆ.

ಎರಡು ವರ್ಷದ ಹಿಂದೆ ಹೀಗೆ ನನಗೆ ಸಾಂತ್ವನ ಹೇಳಿದ ಅಜ್ಜಿಯರಲ್ಲಿ ಎಷ್ಟು ಜನರನ್ನ ಕರೋನ ಬಲಿ ಪಡೆದಿದೆಯೋ ಬಲ್ಲವರಾರು ? ಇಲ್ಲಿ ನಮ್ಮ ಟೈಮ್ ಲಿಮಿಟೆಡ್ . ಇದನ್ನ ಸಂಪೂರ್ಣ ಉಪಯೋಗಿಸಿಕೊಂಡು ಸಾಧ್ಯವಾದರೆ ಒಳಿತನ್ನ ಮಾಡೋಣ .

English summary
Barcelona Memories Column By Rangaswamy Mookanahalli Part 30.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X