• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರಕೃತ್ತಿ, ದೈವವೆನ್ನಿ ಬದುಕನ್ನ ಚೆನ್ನಾಗಿ ಕಟ್ಟಿಕೊಳ್ಳಲು ಒಂದು ಅವಕಾಶ ಕೊಟ್ಟೇ ಕೊಡುತ್ತದೆ

By ರಂಗಸ್ವಾಮಿ ಮೂಕನಹಳ್ಳಿ
|
Google Oneindia Kannada News

ಒಂದೂವರೆ ದಶಕಕ್ಕೂ ಮೀರಿದ ಸ್ಪೇನ್ ಬದುಕಿನಲ್ಲಿ , ಚೀನಾ , ಬಾಂಗ್ಲಾದೇಶ , ಪಾಕಿಸ್ತಾನ ಮತ್ತು ಭಾರತದ ನೂರಾರು ಇಲ್-ಲೀಗಲ್ ಇಮ್ಮಿಗ್ರೆಂಟ್ಸ್ ಗಳನ್ನ ಕಂಡಿದ್ದೇನೆ . ಇವರಲ್ಲಿ 99 ಪ್ರತಿಶತ ಜನರಿಗೆ ಸ್ಪ್ಯಾನಿಷ್ ಬರೆಯಲು , ಓದಲು ಬರುತ್ತಿರಲಿಲ್ಲ . ಪಾಕಿಸ್ತಾನ , ಬಾಂಗ್ಲಾ ಮತ್ತು ಭಾರತದ ಅಂದರೆ ಹೆಚ್ಚಾಗಿ ಪಂಜಾಬಿ ಜನ ರಸ್ತೆಯಲ್ಲಿ ಓಡಾಡುವಾಗ ಸಿಕ್ಕರೆ ' ಭಾಯ್ ತೋಡಾ ಫಾರಂ ಬರ್ಕೆ ದೋ' ಅನ್ನುವುದು ಸಾಮಾನ್ಯವಾಗಿತ್ತು .

2003/2004/2005ರಲ್ಲಿ ಹೀಗೆ ಸ್ಪೇನ್ ಗೆ ಗುರುತಿನ ಪತ್ರವಿಲ್ಲದೆ ಬಂದ ವಲಸಿಗರ ಸಂಖ್ಯೆ ಬಹಳ . ಇಂತಹ ಲಕ್ಷಾಂತರ ಜನರಲ್ಲಿ 75 ರಿಂದ 80 ಜನಕ್ಕೆ ಸಹಾಯ ಮಾಡಿದ ತೃಪ್ತಿ ನನ್ನದು . ಇರಲಿ ಈಗ ಮುಖ್ಯ ವಿಷಯಕ್ಕೆ ಬರುತ್ತೇನೆ . ಹೀಗೆ ಬಂದ ವಲಸಿಗರಿಗೆ ಕೆಲಸ ಯಾರು ಕೊಡುತ್ತಾರೆ ? ಮತ್ತೆ ಅವರು ಹೇಗೆ ಬದುಕುತ್ತಾರೆ ? ಅವರ ಊಟ ವಸತಿಯ ಕಥೆಯೇನು ? ಇಂತವರನ್ನ ಕಂಡು ನಾನು ಕಂಡುಕೊಂಡ ಸತ್ಯ - ಬದುಕು ಜೀವನ್ಮುಖಿ ಎನ್ನುವುದು .

ಬೆಂಗಳೂರು ಬದಲಾಗಿರುವುದು ಕೇವಲ ಕೆಲವೇ ಕೆಲವರಿಗೆ, ಅವನಿಗಲ್ಲ!ಬೆಂಗಳೂರು ಬದಲಾಗಿರುವುದು ಕೇವಲ ಕೆಲವೇ ಕೆಲವರಿಗೆ, ಅವನಿಗಲ್ಲ!

ಬದುಕು ಯಾರನ್ನೂ ಅಷ್ಟು ಸುಲಭವಾಗಿ ನಾಶವಾಗಿ ಹೋಗಲು ಬಿಡುವುದಿಲ್ಲ . ಪ್ರಕೃತ್ತಿ ಎನ್ನಿ , ದೈವವೆನ್ನಿ , ನಿಮ್ಮ ಹಿರಿಯರು ಮಾಡಿದ ಪುಣ್ಯವೆನ್ನಿ ಹೇಗೂ ಅಂತೂ ಅದು ನಿಮಗೆ ಬದುಕಲು , ಬದುಕನ್ನ ಇನ್ನಷ್ಟು ಚನ್ನಾಗಿ ಕಟ್ಟಿಕೊಳ್ಳಲು ಒಂದು ಅವಕಾಶ ಕೊಟ್ಟೆ ಕೊಡುತ್ತದೆ . ನೋಡಿ ಇಂತಹ ವಲಸಿಗರು ಮಳೆಗಾಲದಲ್ಲಿ ರಸ್ತೆ ಬದಿಯಲ್ಲಿ ಕೊಡೆ ಮಾರುತ್ತಿದ್ದರು . ಜನಕ್ಕೆ ಮಳೆಯಲ್ಲಿ ನೆಡೆದು ಹೋಗಲು ಬೇಜಾರು ಎಂದು ತಿಳಿದು , ಹಣ್ಣಿನ , ತರಕಾರಿಯ ಪ್ಯಾಕೆಟ್ ಮಾರುತ್ತಿದ್ದರು .

ಬೇಸಿಗೆಯಲ್ಲಿ ಬೀಚ್ ನಲ್ಲಿ ಆರಾಮಾಗಿ ಮಲಗಿರುತ್ತಿದ್ದ ಸ್ಪ್ಯಾನಿಷ್ ಜನರಿಗೆ ಬಿಯರ್ ಮತ್ತು ಕೋಲ್ಡ್ ಡ್ರಿಂಕ್ ಮಾರುತ್ತಿದ್ದರು . ಪ್ರವಾಸಿಗರು ಹೆಚ್ಚಾದ ಸಮಯದಲ್ಲಿ ಪುಗ್ಗೆ . ಸೊವಿನೀರ್ , ಬೆಲ್ಟು , ಪರ್ಸು ಇತ್ಯಾದಿ ಮಾರುತ್ತಿದ್ದರು , ಚಳಿಗಾಲದಲ್ಲಿ ಮಫ್ಲರ್ , ಸ್ವೇಟ್ಟರ್ ... ಹೀಗೆ ಕಾಲ ಕಾಲಕ್ಕೆ ತಮ್ಮ ವೃತ್ತಿಯಲ್ಲಿ ಬದಲಾವಣೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಗಂಡಸರದು ಒಂದು ಕಥೆಯಾದರೆ , ಹೆಣ್ಣು ಮಕ್ಕಳದು ಇನ್ನೊಂದು ರೀತಿಯ ಗೋಳು.

ಸ್ಪ್ಯಾನಿಷ್ ಪ್ರಜೆಯನ್ನ ಮದುವೆಯಾದರೆ ಅಲ್ಲಿನ ಪೌರತ್ವ ಸಿಗುತ್ತದೆ. ಇದನ್ನ ತಿಳಿದುಕೊಂಡಿರುವ ವಲಸೆ ಬಂದಿರುವ ಹೆಂಗಸರು , ಸ್ಪ್ಯಾನಿಷ್ ಗಂಡಸಿನ ಭೇಟೆಯಲ್ಲಿ ತೊಡಗುತ್ತಾರೆ. ಅವರು ಭೇಟೆಯಾಡಲು ಹೋಗುತ್ತಾರೋ ಅಥವಾ ಅವರೇ ಆಹಾರವಾಗಲು ಹೋಗುತ್ತಾರೋ ಎನ್ನುವುದು ಚಿಂತಿಸಬೇಕಾಗಿರುವ ವಿಷಯ. 2003ರ ನಂತರ ಸ್ಪೇನ್ ನಲ್ಲಿ ಅತಿ ಹೆಚ್ಚು ವಲಸಿಗರು ಬರಲು ಶುರು ಮಾಡಿದರು.

ಹೀಗೆ ಬಂದ ಎಲ್ಲರಿಗೂ ಕೆಲಸ ಹೇಗೆ ಸಿಕ್ಕೀತು ? ಅದೂ ಅಲ್ಲದೆ ಅವರ ಬಳಿ ಇಲ್ಲಿ ಕೆಲಸ ಮಾಡಲು ಬೇಕಾಗುವ ವರ್ಕ್ ಪರ್ಮಿಟ್ ಇರುತ್ತಿರಲಿಲ್ಲ. ಇಂತಹ ಸಂದರ್ಭದಲ್ಲಿ ವಲಸಿಗ ಹೆಣ್ಣು ಮಕ್ಕಳು ವಯಸ್ಸಾದ ಸ್ಪ್ಯಾನಿಷ್ ಗಂಡಸರನ್ನ ಮದುವೆಯಾಗಲು ಹುಡುಕುತ್ತಿದ್ದರು. ಅಂದಿನ ಕಾಲಘಟ್ಟದಲ್ಲಿ ಇದೊಂದು ಅಲ್ಲಿ ಚರ್ಚಿತ ವಿಷಯವಾಗಿತ್ತು. ಬಹಳಷ್ಟು ಜನ ಸ್ಪ್ಯಾನಿಷ್ ಗಂಡಸರು ಎರಡರಿಂದ ಮೂರು ವರ್ಷಗಳ ವರೆಗೆ ಹೀಗೆ ವಲಸಿಗ ಹೆಣ್ಣು ಮಕ್ಕಳನ್ನ ತಮ್ಮ ಅನುಕೂಲಕ್ಕೆ ಬಳಸಿಕೊಂಡು ಬಿಟ್ಟ ಉದಾಹರಣೆಗಳು ಹೇರಳವಾಗಿವೆ.

ದಿನಾ ಉಪ್ಪಿಟ್ಟು ತಿನ್ನುವ ನಾನು ಆಕೆಗೆ ಅನ್ಯಗ್ರಹ ಜೀವಿಯಂತೆ ಕಂಡೆ!ದಿನಾ ಉಪ್ಪಿಟ್ಟು ತಿನ್ನುವ ನಾನು ಆಕೆಗೆ ಅನ್ಯಗ್ರಹ ಜೀವಿಯಂತೆ ಕಂಡೆ!

ಅಂತೆಯೇ ಮದುವೆಯಾಗಿ ಸುಖಿ ಕುಟುಂಬ ಹೊಂದಿದವರೂ ಇದ್ದಾರೆ. ಬಹಳಷ್ಟು ಜನ ವಿಧುರರು ತಮ್ಮ ಕೊನೆಯ ಕಾಲದಲ್ಲಿ ಆಸರೆಯಾಯ್ತು , ಅವರಿಗೂ ಒಂದು ಬಾಳು ಸಿಕ್ಕ ಹಾಗಾಯ್ತು ಎಂದು ಮದುವೆಯಾದ ಉದಾಹರಣೆಗಳು ಕೂಡ ಸಾಕಷ್ಟಿವೆ. ಜಗತ್ತಿಗೆ ತೊಂದರೆಯಿರುವುದು ಬುದ್ದಿವಂತರಿಂದ ಮಾತ್ರ ! ದಡ್ಡ ಅಥವಾ ಕನಿಷ್ಠ ಬುದ್ದಿಮತ್ತೆಯುಳ್ಳ ಮನುಷ್ಯನಿಗೆ ಬದುಕು ಮುಖ್ಯವಾಗುತ್ತದೆ ಅಷ್ಟೇ .

ಮಹತ್ವಾಕಾಂಕ್ಷೆ ಎನ್ನುವುದು ಅಭಿವೃದ್ಧಿಯ ಜನಕ , ಹಾಗೆಯೇ ಇವತ್ತಿನ ಎಲ್ಲಾ ಸಮಸ್ಯೆಗಳ ಮೂಲ ಕೂಡ. ಒಂದಷ್ಟು ಸ್ಪ್ಯಾನಿಷ್ ವಕೀಲರಿಗೆ ಇದರಲ್ಲಿ ಒಂದು ಅತ್ಯುತ್ತಮ ಬಿಸಿನೆಸ್ ಅಪರ್ಚುನಿಟಿ ಕಂಡಿತು. ಇಲ್ಲಿ ಇಬ್ಬರು ವ್ಯಕ್ತಿಗಳ ನಡುವೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ. ಇದೊಂದು ಪೂರ್ಣ ಪ್ರಮಾಣದ ವ್ಯಾವಹಾರಿಕ ಮದುವೆ. ವಲಸಿಗ ಹುಡುಗ ಅಥವಾ ಹುಡುಗಿಯನ್ನ ಮದುವೆಯಾಗಲು ಒಪ್ಪುವ ಸ್ಪ್ಯಾನಿಷ್ ಪ್ರಜೆಗೆ 3 ರಿಂದ 5 ಸಾವಿರ ಯುರೋ ನೀಡಬೇಕಾಗುತ್ತದೆ.

1 ರಿಂದ 2 ಸಾವಿರ ಲಾಯರ್ ಫೀಸ್ . ಹೀಗೆ ಹಣ ವ್ಯಯಿಸುವುದರಿಂದ ಮೊದಲಿಗೆ ಸ್ಪೇನ್ ನಲ್ಲಿ ಇರಲು ರೆಸಿಡೆನ್ಸಿ ಪರ್ಮಿಟ್ ಮತ್ತು ವರ್ಕ್ ಪರ್ಮಿಟ್ ಸಿಗುತ್ತದೆ. ಆ ನಂತರ ಎರಡು ವರ್ಷದ ನಂತರ ಇಲ್ಲಿನ ಪೌರತ್ವಕ್ಕೆ ಕೂಡ ಅರ್ಜಿ ಸಲ್ಲಿಸಬಹದು. ಈ ರೀತಿ ಮದುವೆ ಇತ್ಯಾದಿಗಳಲ್ಲಿ ತೊಡಗಿಕೊಂಡ ವಲಸಿಗರಲ್ಲಿ ಬಹಳ ಮುಖವಾಗಿ ಇದ್ದವರು ದಕ್ಷಿಣ ಅಮೆರಿಕನ್ನರು ಅಥವಾ ಆಫ್ರಿಕನ್ನರು . ರಷ್ಯನ್ ಮತ್ತು ಚೀನಾ ದೇಶದ ಪ್ರಜೆಗಳ ಕಥೆ ಇದಕ್ಕಿಂತ ದಾರುಣವಾದದ್ದು.

ಚೀನಾ ದೇಶದ ಪ್ರಜೆ ಗಂಡಸಾಗಿದ್ದರೆ , ಚೀನಾ ದೇಶದವರೇ ನಡೆಸುವ ಉದ್ದಿಮೆಗಳಲ್ಲಿ ಜೀತ ಮಾಡಿಕೊಂಡು ಇರಬೇಕು. ಹೆಣ್ಣು ಮಕ್ಕಳನ್ನ ವಯಸ್ಸಿರುವವರೆಗೆ ಜಗತ್ತಿನ ಅತ್ಯಂತ ಪುರಾತನ ವ್ಯಾಪಾರಕ್ಕೆ ದೂಡುತ್ತಾರೆ. ಒಂದಷ್ಟು ವರ್ಷದ ನಂತರ ಇವರಿಗೆ ಗ್ರಾಹಕ ದಕ್ಕುವುದಿಲ್ಲ ಎನ್ನಿಸಿದರೆ ಅವರನ್ನ ಹಣ್ಣು ತಕಾರಿ ಮಾರುವ ಅಂಗಡಿಯಲ್ಲಿ ದುಡಿಯಲು ಹಾಕುತ್ತಾರೆ. ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಚೀನಾ ದೇಶದಿಂದ ಜನ ವಲಸೆ ಬರಲು ಹೇಗೆ ಸಾಧ್ಯ ?

ಇಲ್ಲಿ ಜನ ದಿಗಂಬರರು!, ಜಗತ್ತಿನ ಅರಿವೇ ಇಲ್ಲದೆ ಬಿಸಿಲು ಕಾಯಿಸುತ್ತಾ ಮಲಗಿ ಬಿಡುತ್ತಾರೆಇಲ್ಲಿ ಜನ ದಿಗಂಬರರು!, ಜಗತ್ತಿನ ಅರಿವೇ ಇಲ್ಲದೆ ಬಿಸಿಲು ಕಾಯಿಸುತ್ತಾ ಮಲಗಿ ಬಿಡುತ್ತಾರೆ

ಬಾರ್ಸಿಲೋನಾ ಇರಬಹದು ಅಥವಾ ಮ್ಯಾಡ್ರಿಡ್ , ರಸ್ತೆಯಲ್ಲಿ ಇರುವ ಮುಕ್ಕಾಲು ಪಾಲು ಬಾರ್ ಗಳನ್ನ ನಡೆಸುವವರು ಚೀನಿಗಳು. ನಿಧಾನವಾಗಿ ಸಣ್ಣ ಪುಟ್ಟ ವ್ಯಾಪಾರಗಳ ಮೇಲಿನ ಹಿಡಿತವನ್ನ ಚೀನಿಯರು ಪಡೆದುಕೊಂಡಿದ್ದಾರೆ. ಅಲ್ಲದೆ ಜಗತ್ತಿನ ಹಳೆಯ ವ್ಯಾಪಾರದ ಗುಟ್ಟು ಕೂಡ ಅವರಿಗೆ ಗೊತ್ತಿದೆ. ರಷ್ಯನ್ , ಸ್ಪ್ಯಾನಿಷ್ , ಇತರೆ ದೇಶದವರು ತಾಸಿಗೆ ನೂರು ಯುರೋ ಬೇಡಿಕೆ ಇಟ್ಟರೆ , ಚೀನಿಯರು ತಾಸಿಗೆ ಅರವತ್ತು ಯುರೋ ಪಡೆಯುತ್ತಾರೆ.

ಚೀನಿಯರು ವ್ಯಾಪಾರ ಯಾವುದೇ ಇರಲಿ , ಬೆಲೆಯನ್ನ ಕಡಿಮೆ ಮಾಡಿ ಇತರರು ಮಾರುಕಟ್ಟೆಯಲ್ಲಿ ನಿಲ್ಲದಂತೆ ಮಾಡುತ್ತಾರೆ. ಆ ನಂತರ ಮಾರುಕಟ್ಟೆಯ ಮೇಲಿನ ಅಧಿಪತ್ಯ ಅವರದು. ಏನಪ್ಪಾ ಇಷ್ಟೆಲ್ಲಾ ರೇಟ್ ಸಮೇತ ಡೀಟೇಲ್ ಆಗಿ ಬರಿತ್ತಿದ್ದಾನೆ ಎಂದು ನನ್ನ ಮೇಲೆ ಸಂಶಯ ಪಡುವ ಮೊದಲು ಹೇಳಿ ಬಿಡುತ್ತೇನೆ. ಇಲ್ಲಿ ಎಲ್ಲವೂ ಓಪನ್. ಇಲ್ಲಿನ ಪ್ರಮುಖ ದಿನ ಪತ್ರಿಕೆಗಳು ರಾಜಾರೋಷವಾಗಿ ಫೋನ್ ನಂಬರ್ ಸಹಿತ ಎಲ್ಲಾ ವಿವರಗಳನ್ನ ಪ್ರಕಟಿಸುತ್ತದೆ.

Barcelona Memories Column By Rangaswamy Mookanahalli Part 26

ದಿನ ಪತ್ರಿಕೆಗಳಿಗೆ ಇಂತಹ ಜಾಹಿರಾತು ಚಿನ್ನದ ಮೊಟ್ಟೆ ಇಡುವ ಕೋಳಿಯಂತೆ . ಇಲ್ಲಿ ಯಾವುದು ಸರಿ ? ಯಾವುದು ತಪ್ಪು ? ಎನ್ನುವುದನ್ನ ಯೋಚಿಸಲು ಹೋಗುವುದಿಲ್ಲ. ಇಂದು ಬಹುತೇಕ ಜಗತ್ತು ಹೀಗೆ ಆಗಿದೆ. ಎಲ್ಲಿಯವರೆಗೆ ಹಣ ಬರುತ್ತಿರುತ್ತದೆ ಅಲ್ಲಿಯವರೆಗೆ ಎಲ್ಲವೂ ಸರಿ. ವಾರಾಂತ್ಯ ಬಂದರೆ ಸಾಕು ನಾನು ಮತ್ತು ರಮ್ಯ ಬ್ಯಾಗ್ ಹೆಗಲಿಗೇರಿಸಿ ಟ್ರಿಪ್ ಹೊರತು ಬಿಡುತ್ತಿದ್ದೆವು. ಅದು 2006ರ ಒಂದು ದಿನ. ಹೀಗೆ ಸುತ್ತಾಟಕ್ಕೆ ಎಂದು ಮ್ಯಾಡ್ರಿಡ್ ನಗರಕ್ಕೆ ಹೋಗಿದ್ದೆವು.

ಸ್ಪೇನ್ ದೇಶದಲ್ಲಿ ಹಣದ ಹರಿವು ಅತ್ಯಂತ ಹೆಚ್ಚಿದ ಸಮಯವದು. ಪಿಜ್ಜಾ ಡೆಲಿವರಿ ಮಾಡುವ ಹುಡುಗನ ಹೆಸರಲ್ಲಿ ಎರಡು ಲಕ್ಷ ಯುರೋ ಸಾಲ ಕೊಡಲು ಬ್ಯಾಂಕ್ ತಯಾರುತ್ತಿದ್ದ ಕಾಲಘಟ್ಟವದು . ಹಣದ ಹುಚ್ಚು ಹೊಳೆಯಲ್ಲಿ ನಾಗರೀಕತೆ ತನ್ನ ತಳಮಟ್ಟವನ್ನ ಮುಟ್ಟಿತ್ತು. ಬಾರ್ಸಿಲೋನಾ ನಗರದ ಹಲವಾರು ಗಲ್ಲಿಗಳಲ್ಲಿ ಗ್ರಾಹಕರನ್ನ ಸೆಳೆಯಲು ನಗ್ನ , ಅರೆನಗ್ನ ರಾಗಿ ರಸ್ತೆಯಲ್ಲಿ ವೇಶ್ಯೆಯರು ನಿಲ್ಲಲು ಶುರು ಮಾಡಿದ್ದರು.

ಮ್ಯಾಡ್ರಿಡ್ ಕೂಡ ಇದಕ್ಕಿಂತ ಭಿನ್ನವಾಗಿರಲಿಲ್ಲ. ಹೀಗೆ 'ಗ್ರಾನ್ ವಿಯ' ಎನ್ನುವ ದೊಡ್ಡ ರಸ್ತೆಯಲ್ಲಿ ಹೋಗುವಾಗಲೇ , ರಸ್ತೆಯಲ್ಲಿ ಹೋಗುವರ ಕೈ ಹಿಡಿದು ಜೊತೆಗೆ ಬರುವಂತೆ ಒತ್ತಾಯಿಸುವ ಮಟ್ಟಕ್ಕೆ ಈ ವ್ಯಾಪಾರ ಬೆಳದದ್ದು ನೋಡಿದಕ್ಕೆ ನಾನು ಸಾಕ್ಷಿಯಾಗಿದ್ದೇನೆ. ಇಂತಹ ವೃತ್ತಿಯಲ್ಲಿ ಅತ್ಯಂತ ಹೆಚ್ಚಾಗಿರುವುದು ರಷ್ಯನ್ , ಚೈನೀಸ್ , ಆಫ್ರಿಕನ್ ಮತ್ತು ಸೌತ್ ಅಮೇರಿಕನ್ಸ್. ಒಂದು ಹಂತದಲ್ಲಿ ಯಾವುದೇ ಚೀನಿ ಮಹಿಳೆ ಕಂಡರೂ ಆಕೆಯೊಬ್ಬ ವೇಶ್ಯೆ ಎನ್ನುವ ರೀತಿಯಲ್ಲಿ ಇಲ್ಲಿನ ಸಮಾಜ ಅವರನ್ನ ನೋಡುತ್ತಿತ್ತು . ಮುಕ್ಕಾಲು ಪಾಲು ಅದು ನಿಜವೂ ಆಗಿರುತ್ತಿತ್ತು .

ಅವರಿಗೆ ಯಾವ ನೋವಿತ್ತು ? ಅದ್ಯಾವ ಸಂಕಟವಿತ್ತು ? ಎನ್ನುವುದನ್ನ ಯಾರೂ ಕೇಳುವುದಿಲ್ಲ. ಮುಕ್ಕಾಲು ಪಾಲು ಮಹಿಳೆಯರಿಗೆ ಅದರಲ್ಲೂ ವಯಸ್ಸಿರುವ ಹೆಣ್ಣು ಮಕ್ಕಳಿಗೆ ಕ್ಲಬ್ ನಲ್ಲಿ ದುಡಿಯುವುದು ಅಲಿಖಿತ ನಿಯಮ. ನಿಮಗೆಲ್ಲಾ ಗೊತ್ತಿರಲಿ ವಿಶೇಷ ವಾಗಿ ಸ್ಪೋರ್ಟ್ಸ್ ಕ್ಲಬ್ ಅಥವಾ ಕಲ್ಚರಲ್ ಕ್ಲಬ್ ಎಂದು ಬರೆಯದೆ , ಕೇವಲ ಕ್ಲಬ್ ಎಂದು ಬರೆದರೆ ಅದು ಖಂಡಿತ ಎರೋಟಿಕ್ ಕ್ಲಬ್ ಆಗಿರುತ್ತದೆ. ಸ್ಪೇನ್ ನಲ್ಲಿ ಇದು ಯಾರೂ ಹೇಳುವುದಿಲ್ಲ ಆದರೆ ಇದು ಎಲ್ಲರಿಗೂ ಗೊತ್ತು.

ಸಾಲ ಪೂರ್ಣ ವಾಪಸ್ಸು ಸಿಗದ ತನಕ ನಕ್ಷತ್ರಿಕನಂತೆ ಅವರ ಹಿಂದೆ ಮುಂದೆ ಸುತ್ತುವ ವಸೂಲಿಗಾರರು!ಸಾಲ ಪೂರ್ಣ ವಾಪಸ್ಸು ಸಿಗದ ತನಕ ನಕ್ಷತ್ರಿಕನಂತೆ ಅವರ ಹಿಂದೆ ಮುಂದೆ ಸುತ್ತುವ ವಸೂಲಿಗಾರರು!

ಈ ರೀತಿಯ ಹೆಣ್ಣು ಮಕ್ಕಳನ್ನ ಕೀಳಾಗಿ ಕಾಣುವುದಕ್ಕೆ ನನ್ನ ವಿರೋಧವಿದೆ. ಇಂತವರನ್ನ ಹುಡುಕಿಕೊಂಡು ಬರುವ ಗಂಡಸರು ಇರುವ ವರೆಗೆ ಈ ರೀತಿಯ ವ್ಯಾಪಾರ ಇರುತ್ತದೆ ಅಲ್ಲವೇ ? ಇವರು ಒಂದು ರೀತಿಯ ಥೆರೆಪಿಸ್ಟ್ ಗಳು ಅಲ್ಲವೇ ? ಇವರನ್ನ ಹುಡಿಕಿಕೊಂಡು ಹೋಗುವ ಗಂಡಸರನ್ನ ಸಮಾಜ ಕೀಳಾಗಿ ಕಾಣುವುದಿಲ್ಲ ಆದರೆ ಮಹಿಳೆಯನ್ನ ಅದೇಕೆ ಅಷ್ಟೊಂದು ಹೀನಾಯವಾಗಿ ಕಾಣುತ್ತದೆ?

ಗಮನಿಸಿ ಶತಶತಮಾನಗಳಿಂದ ಮನಸ್ಸಿನಲ್ಲಿ ಬಿತ್ತಿರುವ ಕಾರಣ ' ಗಿಲ್ಟ್ ' ಕೇವಲ ಹೆಣ್ಣಿಗೆ ಮಾತ್ರ ಆಗುತ್ತದೆ. ಗಂಡಸಿಗಲ್ಲ ! ಅಂದಹಾಗೆ ಇಲ್ಲಿ ಕೂಡ ಇಂತಹ ವೃತ್ತಿಯಲ್ಲಿರುವ ಹೆಣ್ಣು ಮಕ್ಕಳನ್ನ ಅತ್ಯಂತ ಕೇವಲವಾಗಿ 'ಪೂತ' ಎಂದು ಕರೆಯುತ್ತಾರೆ. ಪೂತ ಎಂದರೆ ಸೂಳೆ ಎಂದರ್ಥ. ನನ್ನ ಪ್ರಕಾರ ಇವರು ಸೂಳೆಯರಲ್ಲ ಇವರು ಕೂಡ ಥೆರಪಿಸ್ಟ್ . ಇವರಿಲ್ಲದ ಸಮಾಜ ರಣರಂಗವಾಗುತ್ತಿತ್ತು. ತಾವು ಬೆಂದು ಸಮಾಜದ ಸ್ವಾಸ್ಥವನ್ನ ಕಾಪಾಡುವ ಇವರನ್ನ ಸಮಾಜ ಗೌರವದಿಂದ ನಡೆಸಿಕೊಳ್ಳಬೇಕು .

ದೇಶ , ಭಾಷೆ ಯಾವುದೇ ಇರಲಿ , ಯಾವ ಹೆಣ್ಣು ಕೂಡ ಖುಷಿಯಿಂದ ಈ ವೃತ್ತಿಗೆ ಬರುವುದಿಲ್ಲ. ಅಲ್ಲೊಂದು ಇಲ್ಲೊಂದು ಈ ವಿಷಯದಲ್ಲೂ ಅಪವಾದ ಇದ್ದೆ ಇರುತ್ತದೆ. ಕವಿ ನಿಸಾರ್ ಅಹಮದ್ ಅವರ ಕವನದ ಸಾಲುಗಳು ..

ಬತ್ತಿದರೊಂದು ತೆರೆವುದು ಚಿಲುಮೆ
ತುಂಬಿಯೇ ಇರುವುದು ಬಾಳಿನ ಒಲುಮೆ ..

ಎನ್ನುವುದನ್ನ ತಮ್ಮ ಬಾಳಿನ ಮಂತ್ರವಾಗಿಸಿಕೊಂಡು ಜೀವನ ಸಾಗಿಸುವ ಇಂತಹ ಹೆಣ್ಣು ಮಕ್ಕಳ ಬಾಳಿನಲ್ಲಿ 'ಬತ್ತಿದರೊಂದು ತೆರೆವುದು ಚಿಲುಮೆ' ಎನ್ನುವ ಮಾತು ನಿಜವಾಗಲಿ.

English summary
Barcelona Memories C olumn By Rangaswamy Mookanahalli Part 26.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X