ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಬದಲಾಗಿರುವುದು ಕೇವಲ ಕೆಲವೇ ಕೆಲವರಿಗೆ, ಅವನಿಗಲ್ಲ!

By ರಂಗಸ್ವಾಮಿ ಮೂಕನಹಳ್ಳಿ
|
Google Oneindia Kannada News

ಕಾಸ ಮಿಲಾ (casa mila ) ಮನೆಯ ಹೆಸರು. ಇದೊಂದು ಕಲ್ಲಿನ ಕಟ್ಟಡ. ಹೀಗಾಗಿ ಬಾರ್ಸಿಲೋನಾದ ಜನ ಲ ಪೆದ್ರೆರ (la pedrera ) ಎಂದರು . ಇಂದಿಗೂ ಇದು ಲ ಪೆದ್ರೆರ ಎಂದೇ ಹೆಸರುವಾಸಿ , ಕಾಸ ಮಿಲಾ ಎಂದರೆ ಬಹು ಜನ ಏನದು ಎಂದರೆ ಆಶ್ಚರ್ಯವಿಲ್ಲ . ಭಾರತೀಯರು ಹೇಗೆ ಬೇರೆ ಬೇರೆ ದೇಶಗಳಿಗೆ ವಲಸೆ ಹೋಗುತ್ತಾರೋ ಹಾಗೆ ಸ್ಪ್ಯಾನಿಷ್ ಜನ ಕೂಡ ( ಕಳೆದ 30/40 ವರ್ಷಗಳ ಹಿಂದಿನವರೆಗೆ ) ಜರ್ಮನಿ , ಅಮೇರಿಕಾ ಗಳಿಗೆ ವಲಸೆ ಹೋಗುತ್ತಿದರು.

ತೀರಾ ಇತ್ತೀಚಿಗೆ ಅಂದರೆ ಕೊರೊನಾ ಬರುವುದಕ್ಕೆ ಸ್ವಲ್ಪ ವರ್ಷ ಮುಂಚೆ ಕೂಡ ಆರ್ಥಿಕ ಕುಸಿತದ ಪರಿಣಾಮವಾಗಿ ಬಹಳಷ್ಟು ಜನ ಮತ್ತೆ ಸ್ವಿಸ್ , ಜರ್ಮನಿ ಮತ್ತು ಅಮೇರಿಕಾ ದೇಶಗಳ ಕಡೆಗೆ ಮುಖ ಮಾಡಿದ್ದರು. ಜೋಸೆಪ್ ಗ್ವಾರ್ದಿಯೋಲ (Josep Guardiola) ಅಮೇರಿಕಾಗೆ ವಲಸೆ ಹೋಗಿ ಅಪಾರ ಹಣ ಸಂಗ್ರಹಿಸಿ ಮರಳಿ ಬಂದ ಆದರೆ ಅದನ್ನು ಅನುಭವಿಸಲಾಗದೇ ಸತ್ತ . ಆತನ ಹೆಂಡತಿ ರೋಸೆರ್ ಸೇಗಿಮೊನ್ (Roser Segimon) ಮರು ಮದುವೆಯನ್ನ ಪೆರೇ ಮಿಲ (Pere Milà) ಎನ್ನುವ ವ್ಯಕ್ತಿಯೊಂದಿಗೆ ಆಗುತ್ತಾಳೆ. ಇವರಿಬ್ಬರಿಗಾಗಿ ಕಟ್ಟಿದ ಮನೆಯೇ ಕಾಸ ಮಿಲಾ ಅಥವಾ ಲ ಪೆದ್ರೆರ . ಅಂತೋನಿ ಗೌದಿ ( Antoni Gaudi ) ಸ್ಪೇನ್ ನ ಪ್ರಖ್ಯಾತ ಆರ್ಕಿಟೆಕ್ಟ್ ಇದರ ವಿನ್ಯಾಸಗಾರ .

ದಿನಾ ಉಪ್ಪಿಟ್ಟು ತಿನ್ನುವ ನಾನು ಆಕೆಗೆ ಅನ್ಯಗ್ರಹ ಜೀವಿಯಂತೆ ಕಂಡೆ!ದಿನಾ ಉಪ್ಪಿಟ್ಟು ತಿನ್ನುವ ನಾನು ಆಕೆಗೆ ಅನ್ಯಗ್ರಹ ಜೀವಿಯಂತೆ ಕಂಡೆ!

ಈ ಮನೆಯನ್ನು ಸುತ್ತುವುದು ಒಂದು ಒಂದು ಅಮೋಘ ಅನುಭವ , ಬಾರ್ಸಿಲೋನಾ ಭೇಟಿ ಕೊಟ್ಟರೆ , ಲ ಪೆದ್ರೆರ ಮರೆಯಬೇಡಿ . 1906-1912ರಲ್ಲಿ ನಿರ್ಮಿತ ಈ ಮನೆಯಲ್ಲಿ ಏನಿಲ್ಲ ? ಅಬ್ಬಾ ಹೇಗೆ ಬದುಕಿದ್ದರು ಇವರು ಎಂದು ಹುಬ್ಬು ಮೇಲೆ ಏರಿದರೆ ಅದು ಉತ್ಪ್ರೇಕ್ಷೆ ಅಲ್ಲ ನಾರ್ಮಲ್ .

Barcelona Memories Column By Rangaswamy Mookanahalli Part 25

ತೊಮತಿನ ಕ್ರೀಡೆ ಹೇಗೆ ಉಗಮವಾಯ್ತು ಗೊತ್ತಾ ?

ತೊಮತಿನ (tomatina ) , ಸ್ಪೇನ್ ನ ಇನ್ನೊಂದು ಪ್ರಮುಖ ಊರು ವಲೆನ್ಸಿಯಾ (valencia ) ದಲ್ಲಿ ಆಚರಿಸುತ್ತಾರೆ . ಸಿಂದಗಿ ನ ಮಿಲೇಗ ದುಬಾರ ಚಲನಚಿತ್ರಕ್ಕಾಗಿ ಇಡಿ ವಾತಾವರಣ ಮರು ಸೃಷ್ಟಿ ಮಾಡಲಾಗಿತ್ತು , ಅದು ಇಲ್ಲಿ ನ್ಯೂಸ್ ಕೂಡ ಆಗಿತ್ತು. ಕಾರಣ ಇಷ್ಟೇ ಈ ಹಬ್ಬ ಆಚರಿಸುವುದು ಪ್ರತಿ ವರ್ಷ ಅಗಸ್ಟ್ ತಿಂಗಳ ಕೊನೆಯ ಬುಧವಾರ . ಈ ಹಬ್ಬ , ಅಥವಾ ಟಮೋಟ ಹಣ್ಣಿನಲ್ಲಿ ಹೊಡೆದಾಟ (ಖುಷಿಯಿಂದ ) ಶುರು ಹೇಗೆ , ಮತ್ತು ಏಕೆ ಆಯಿತು ? ಕಾರಣ ಹಲವು ಹತ್ತು ., ನನಗೆ ಲಾಜಿಕಲ್ ಅನಿಸುದ್ದು ಹೇಳುತ್ತೇನೆ .

ವಲೆನ್ಸಿಯಾ ನಗರದ ಹತ್ತಿರ ಇರುವ ಬುನ್ಯೋಲ್ ( Buñol) ಪಟ್ಟಣದಲ್ಲಿ ಒಮ್ಮೆ 1945ರ ಆಸುಪಾಸಿನಲ್ಲಿ ಟಮೋಟ ಬೆಳೆ ಬಹಳ ಹೆಚ್ಚಾಯಿತಂತೆ , ಬಿಸಾಕುವ ಬದಲು ಕೆಲವು ಪೆಡ್ಡೆ ಹುಡುಗರು ಒಬ್ಬರ ಮೇಲೊಬ್ಬರು ಎರಚಾಡ ಹತ್ತಿದರಂತೆ, ವರ್ಷದಿಂದ ವರ್ಷಕ್ಕೆ ಇದರ ಪುನರಾವರ್ತನೆಯಾಗಿ ಇದು ಇವರ ಒಂದು ಹಬ್ಬ , ಸಂಸ್ಕೃತಿಯ ಭಾಗವಾಯಿತು . ಜುಲೈ -ಸೆಪ್ಟೆಂಬರ್ ಸ್ಪೇನ್ ಗೆ ಬರಲು ಪ್ರಶಸ್ತ ಸಮಯ. ಹಾಗೇನಾದರೂ ನೀವು ಬಂದದ್ದೆ ಆದರೆ ನಿಮಗೆ ಗೊತ್ತು ಅಗಸ್ಟ್ ತಿಂಗಳ ಕೊನೆಯ ಬುಧವಾರ ಎಲ್ಲಿ ಇರಬೇಕು ಎನ್ನುವುದು ನಿಮಗೆ ಗೊತ್ತಾಯ್ತು ಎಂದುಕೊಳ್ಳುವೆ. ಜಗತ್ತಿನ ವಿವಿಧ ಭಾಗದಿಂದ ಜನ ಇಲ್ಲಿಗೆ ಬರುತ್ತಾರೆ ., ಮಕ್ಕಳಂತೆ ಕುಣಿದು ನಲಿಯಲು .

 ಇಲ್ಲಿ ಜನ ದಿಗಂಬರರು!, ಜಗತ್ತಿನ ಅರಿವೇ ಇಲ್ಲದೆ ಬಿಸಿಲು ಕಾಯಿಸುತ್ತಾ ಮಲಗಿ ಬಿಡುತ್ತಾರೆ ಇಲ್ಲಿ ಜನ ದಿಗಂಬರರು!, ಜಗತ್ತಿನ ಅರಿವೇ ಇಲ್ಲದೆ ಬಿಸಿಲು ಕಾಯಿಸುತ್ತಾ ಮಲಗಿ ಬಿಡುತ್ತಾರೆ

ಮನುಷ್ಯ -ಮನುಷ್ಯನ ನಡುವೆ ಏಕಿಷ್ಟು ಅಂತರ ?

ಜನತಾ ಹೋಟೆಲ್ ಮರೆಯೋದು ಅಸಾಧ್ಯ. ಕೆಲವೊಂದು ನೆನಪುಗಳು ಜೀವನದಲ್ಲಿ ಆ ರೀತಿ ಪ್ರಭಾವ ಬೀರುತ್ತವೆ. ಅಕಸ್ಮಾತ್ ಆ ನೆನಪು ಬಾಲ್ಯದೊಂದಿಗೆ ತಾಳೆ ಹಾಕಿಕೊಂಡಿದ್ದರೆ ಮುಗಿಯಿತು, ಮರೆಯುವ ಮಾತೇ ಇಲ್ಲ. 87 ರಿಂದ 89 ನನ್ನ ಹೈಸ್ಕೂಲು ದಿನಗಳು. ಒಂದೊಂದು ದಿನಗಳೂ ಒಂದೊಂದು ಮಹಕಾವ್ಯಗಳೇ ನನ್ನ ಪಾಲಿಗೆ. ಪಟ್ಟ ಆನಂದಕ್ಕೆ, ನಲಿದಾಡಿದ ಆ ದಿನಗಳಿಗೆ ಲೆಕ್ಕ ಮಾಡಿದ್ದರೆ ಕುವೆಂಪುರವರ ರಾಮಾಯಣ ದರ್ಶನಂನಷ್ಟೇ ದಪ್ಪ ಪುಸ್ತಕವಾಗುತ್ತಿತ್ತೇನೋ.

ಇರಲಿ, ಅಂದಿನ ಆ ನೆನಪುಗಳು, ಜನತಾ ಹೋಟೆಲ್ಲಿನ ರವೆ ಇಡ್ಲಿ, ಮಸಾಲ ದೋಸೆ ನನ್ನನ್ನು ಸರಿಸುಮಾರು 11,000 ಕಿಲೋ ಮೀಟರು ದೂರದಿಂದಲೂ ಇಂದಿಗೂ ಸೆಳೆಯುವ ಆಕರ್ಷಣೆ ಉಳಿಸಿಕೊಂಡಿದೆ. ಅಂದಮೇಲೆ 8-10 ಕಿಲೋ ಮೀಟರ್ ನಾಗರಬಾವಿ ಯಾವ ಮಹಾದೂರ..! ಸೆಳೆದೇ ಬಿಟ್ಟಿತು ಒಂದು ಶನಿವಾರ, ನನ್ನ ಜೊತೆಗೆ ಅಮ್ಮ-ರಮ್ಯ..! ಮಲ್ಲೇಶ್ವರಂನ ರಸ್ತೆ ಬದಿಗಳಲ್ಲಿ ಓಡಾಡುವುದೇ ಒಂದು ಆನಂದ.

ದೋಸೆ, ಕಾಫಿ ಹಿತವಾಗಿ ಬೆರತ ಸುವಾಸನೆ ಗಾಳಿಯಲ್ಲಿ ಪಸರಿಸಿ ನಡೆದಾಡುವವರ ಮೂಗಿನ ಹೊಳ್ಳೆಯ ಸೇರಿ ಎಂತಹವರನ್ನೂ ಹೋಟೆಲ್ಲಿಗೆ ಎಳೆದು ತರುವ ಅಗಾಧ ಶಕ್ತಿ. ಮೆಚ್ಚಿ ತಲೆದೂಗಲೇಬೇಕು. ತೂಕ ಹೆಚ್ಚಿದ ಮೇಲೆ ತಲೆ ಕೆರೆದುಕೊಳ್ಳುವುದು ಇದ್ದದ್ದೇ. ಅದು ಇಲ್ಲಿ ಸ್ಥಾನ ಪಡೆಯುವುದಿಲ್ಲ. ಹಾಗೆಯೇ ಹೂವುಗಳ ಸುವಾಸನೆ ಬಗ್ಗೆ ಹೇಳದಿದ್ದರೆ ಹೇಗೆ? ಒಟ್ಟಿನಲ್ಲಿ ಮಲ್ಲೇಶ್ವರಂನಲ್ಲಿ ಓಡಾಡಿ ಆನಂದ ಪಡಬೇಕು, ಆಸ್ವಾದಿಸಬೇಕು.

 ಸಾಲ ಪೂರ್ಣ ವಾಪಸ್ಸು ಸಿಗದ ತನಕ ನಕ್ಷತ್ರಿಕನಂತೆ ಅವರ ಹಿಂದೆ ಮುಂದೆ ಸುತ್ತುವ ವಸೂಲಿಗಾರರು! ಸಾಲ ಪೂರ್ಣ ವಾಪಸ್ಸು ಸಿಗದ ತನಕ ನಕ್ಷತ್ರಿಕನಂತೆ ಅವರ ಹಿಂದೆ ಮುಂದೆ ಸುತ್ತುವ ವಸೂಲಿಗಾರರು!

ಜನತಾ ಹೋಟೆಲ್ ಪ್ರವೇಶಿಸಿ, ಆರಾಮವಾಗಿ ವಿರಮಿಸಿ, ನಾನು ಇಡ್ಲಿಯನ್ನು, ಅಮ್ಮ ಮಸಾಲದೋಸೆಯನ್ನು, ರಮ್ಯ ಖಾಲಿ ದೋಸೆಯನ್ನು ತಿನ್ನಲು ಸಜ್ಜಾದೆವು. ನಮ್ಮ ಪಕ್ಕದ ಟೇಬಲ್ ಸರ್ವ್ ಮಾಡುವ ಮಾಣಿ ಕೈತಪ್ಪಿ ಏನೋ ಬೀಳಿಸಿದ. ಶುರುವಾಯ್ತು ನೋಡಿ ಸಹಸ್ರನಾಮ. ಗಲ್ಲಾ ಪೆಟ್ಟಿಗೆಯ ಮೇಲೆ ಕೂತ ಆಸಾಮಿ, ಬಹುಶಃ ಮಾಲೀಕನಿರಬಹುದು. ಏಯ್, ಸರಿಯಾಗೆ ಸರ್ವ್ ಮಾಡೋಕೆ ಬರಲ್ವಾ? ಇಲ್ಲೇನು ಶಾ. . . .ತರಿಯೋಕೆ ಬಂದಿದಿಯಾ?'

ಇನ್ನೂ ಏನೇನೋ ತೀರವೇ ತುಚ್ಚವಾದ ಪದಗಳಿಂದ ಆ ವ್ಯಕ್ತಿಯನ್ನು ನಿಂದಿಸತೊಡಗಿದ. ಸುತ್ತಲ ಜನರೆಲ್ಲಾ ಯಾವುದಕ್ಕೂ ಪ್ರತಿಕ್ರಿಯಿಸದೆ ತಮ್ಮಪಾಡಿಗೆ ತಾವು ತಿನ್ನುವುದರಲ್ಲಿ ಮಗ್ನರಾಗಿದ್ದರು.., ನನ್ನ ಮನಸ್ಸು ಮಾತ್ರ ಬಾರ್ಸಿಲೋನಾದ ನೆನಪುಗಳೊಂದಿಗೆ ಬೆಸುಗೆ ಹಾಕತೊಡಗಿತು. ಅಕಸ್ಮಾತ್ (ಈ ರೀತಿ ಆಗೋದೇ ಇಲ್ಲ, ಅದಕ್ಕೆ ಅಕಸ್ಮಾತ್ ಪದ ಬಳಸಿದೆ)ಬಾರ್ಸಿಲೋನಾದಲ್ಲಿ ಏನಾದ್ರೂ ಮಾಲೀಕ ಈ ರೀತಿ ಕಿರುಚಾಡಿದ್ರ್ರೆ, ಕಾರ್ಮಿಕ ಸರಾಸರಿ ವರ್ಷದ ವೇತನ ಪಡೆದು ಮನೆಯಲ್ಲಿ ವಿರಮಿಸುತ್ತಿದ್ದ.

ಸಾಲದ್ದಕ್ಕೆ ಸರ್ಕಾರ ಆತನ ಮನಸ್ಥಿತಿ ಬಗ್ಗೆ ವರದಿ ಒಪ್ಪಿಸಲು ತಿಂಗಳಿಗೊಮ್ಮೆ ಮನೋವೈದ್ಯರನ್ನು ಕಳಿಸುತ್ತಿದ್ದರು.. ಮಾಲೀಕನ ಅದೃಷ್ಟ ಕೆಟ್ಟು ಮನೋ ವೈದ್ಯನೇನಾದರೂ ಇನ್ನೊಂದು ವರ್ಷ ಈತ ಮಾನಸಿಕವಾಗಿ ಪೂರ್ಣ ಫಿಟ್ ಆಗಲ್ಲ ಕೆಲಸಮಾಡಲು ಅಂತ ಸರ್ಟಿಫಿಕೇಟ್ ಕೊಟ್ಟರೆ ಮುಗಿಯಿತು ಮಾಲೀಕನಿಗೆ ಸಜೆ, ಕಾರ್ಮಿಕನಿಗೆ ಭತ್ಯೆಯೊಂದಿಗೆ ರಜೆ.

ಅಷ್ಟೊಂದು ಗ್ರಾಹಕರೆದುರು ತನ್ನ ಕಾರ್ಮಿಕನನ್ನು ಈ ರೀತಿ ಹೀನಾಯ ಪದಗಳಿಂದ ನಿಂದಿಸುವ ಹಕ್ಕನ್ನು ಇವರಿಗೆ ಕೊಟ್ಟವರಾರು? ಬಡವನಾಗಿ ಹುಟ್ಟಿದ್ದೇ ಆತನ ಪಾಪವೆ? ಇಷ್ಟಕ್ಕೂ ಮಾಡಿದ ಮಹಾಪರಾಧವಾದರೂ ಏನು? ಮನಸ್ಸಿನಲ್ಲಿ ನೂರಾರು ಪ್ರಶ್ನೆಗಳು ಒಮ್ಮಲೇ ಮುತ್ತಿಗೆ ಹಾಕಿದ್ದರಿಂದಲೋ ಏನೋ ಇಡ್ಲಿ ರುಚಿಸಲಿಲ್ಲ. ಅಮ್ಮ, ರಮ್ಯರ ಸ್ಥಿತಿ ನನಗಿಂತ ಭಿನ್ನವಾಗಿರಲಿಲ್ಲ ಎಂಬುದು ಅವರ ಮುಖವೇ ಹೇಳುತ್ತಿತ್ತು.

ಅದು ಕನ್ನಡ, ನಮ್ಮ ಕರ್ನಾಟಕದಲ್ಲಿ ಬೆಂಗಳೂರಿನ ಬಗ್ಗೆ ಬಣ್ಣ ಬಣ್ಣದ ಚಿತ್ರಣಗಳ ಕಾಡು, ನಮ್ಮ ಬೆಂಗಳೂರು ಯಾರಿಗೂ ಕಮ್ಮಿ ಇಲ್ಲ ಅಂಥ ಬಾರ್ಸಿಲೋನದಲ್ಲಿ ಕೂತು ಉಬ್ಬುತ್ತಿದ್ದ ನನಗೆ ಒಮ್ಮಲೇ ಆಭಾಸವಾಯಿತು. ತೀರ ಇತ್ತೀಚಿನ ಘಟನೆ ಹೇಳ್ತೀನಿ, ಫೆಬ್ರವರಿ ಮಧ್ಯದಲ್ಲಿ ನನ್ನ ಕಚೇರಿಗೆ ಹೊಸದಾಗಿ ಫ್ರಾನಸೆಸಿಯ' ಎಂಬಾಕೆ ಕೆಲಸಕ್ಕೆ ಸೇರಿದಳು.

 ಮುಂದಿನ ಕೆಲವು ದಿನಗಳಲ್ಲಿ ಚಿತ್ರ ಮಂದಿರಗಳು ಕೂಡ ಇಲ್ಲವಾಗಿ ಎಲ್ಲವನ್ನೂ ಒಟಿಟಿ ಆಕ್ರಮಿಸುತ್ತದೆ ಮುಂದಿನ ಕೆಲವು ದಿನಗಳಲ್ಲಿ ಚಿತ್ರ ಮಂದಿರಗಳು ಕೂಡ ಇಲ್ಲವಾಗಿ ಎಲ್ಲವನ್ನೂ ಒಟಿಟಿ ಆಕ್ರಮಿಸುತ್ತದೆ

ಆಕೆಗೆ ಕೊಟ್ಟಿದ್ದು ಆರು ತಿಂಗಳ ವರ್ಕ್ ಕಾಂಟ್ರಾಕ್ಟ್'. ಈ ಭಾಗದಲ್ಲಿ ಬಹುಶಃ ಹೀಗೆ ಆರು ತಿಂಗಳು, ವರ್ಷ, ಎರಡು ವರ್ಷ, ಕೆಲಸಕ್ಕೆ ಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳುತ್ತಾರೆ. ಜೀವಾವಧಿ' ಕೆಲಸದ ಕಾಂಟ್ರಾಕ್ಟ್ ಇರುವವರ ಸಂಖ್ಯೆ ಬಹಳ ಕಡಿಮೆ. ವಾರ ಕೆಲಸ ಮಾಡಿದ ಆಕೆ, ಮರುವಾರ ಬಂದವಳೇ ತನಗೆ ಕೂರಲು ಆಗುತ್ತಿಲ್ಲ ತೊಡೆಯ ಭಾಗದಲ್ಲಿ ಸಣ್ಣ ಕುರುವಾಗಿದೆ ಎಂದು ಡಾಕ್ಟರ್ ಸರ್ಟಿಫಿಕೇಟ್ ಕೊಟ್ಟು ಹೋದವಳು ಮಾರ್ಚ್ 18ರವರೆಗೆ ಮುಖ ತೋರಿಸಿಲ್ಲ. ಆಗಾಗ ಫೋನ್ ಮಾಡಿ ವಿಚಾರಿಸಿದರೆ, ಆದಾಗ ಬರ್ತೀನಿ ಅಂತ ನವಿರಾಗಿ ನುಲಿಯುತ್ತಾಳೆ.

ಇದೂ - ಜನತಾ ಹೋಟೆಲ್ಲಿನ ಮಾಣಿಯ ಘಟನೆ ಎರಡೂ ಮನದಲ್ಲಿ ಭತ್ತ ಕುಟ್ಟಿದಂತೆ ಕುಟ್ಟುತ್ತಲೇ ಇದೆ. ಎಲ್ಲಾ ಮಾಧ್ಯಮಗಳಲ್ಲೂ ಅಮೆರಿಕಾದಿಂದ, ಯೂರೋಪಿನಿಂದ ಭಾರತೀಯರು ವಾಪಸ್ಸು ಬರುತ್ತಿದ್ದರೆ, ಅವರೆಲ್ಲರ ಕಣ್ಣು ಬೆಂಗಳೂರ ಮೇಲೆ' ಇನ್ನೂ ಏನೇನೋ ರಂಗು ರಂಗಾಗಿ ವರ್ಣಿಸಿ ಬರೆಯುತ್ತಾರೆ. ಹತ್ತು ಸಾವಿರ ವೇತನ ಬಂದರೆ ಸಾಕೆ? ಮಾನವತೆಯೇ ಇಲ್ಲದೆ ಮೇಲೆ?

ಗಾಳಿಪಟವನ್ನು, ಮುಂಗಾರು ಮಳೆಯನ್ನು ನೋಡಿ.. ಬೆಂಗಳೂರಿನ ಮಾಲ್‍ನಲ್ಲಿ ನಲಿದಾಡಿ, ಸೈಬರ್ ಕೂಲಿಗಳಾಗಿ ದುಡಿದು ಇಂಗ್ಲಿಷ್‍ನಲ್ಲಿ ಮಾತಾಡಿ, ವಾರಾಂತ್ಯದಲ್ಲಿ ಪಬ್‍ನಲ್ಲಿ ಲೇಟ್ ನೈಟ್ ಪಾರ್ಟಿ ಮಾಡಿ ಮನಸ್ಸಿನಲ್ಲಿ ಅಂತ್ಕೋತಾರೆ - ಬೆಂಗಳೂರಿನಲ್ಲಿ ಏನಿಲ್ಲಾ? ನಾವ್ಯಾರಿಗೂ ಕಮ್ಮಿ ಇಲ್ಲಾ..!

ಜನತಾ ಹೋಟೆಲ್ಲಿನ ಮಾಣಿ ಮಾತ್ರ ಅಷ್ಟೆಲ್ಲಾ ಉಗಿಸಿಕೊಂಡು ನಿಮಿಷ ಕೂಡ ಬ್ರೇಕ್ ತೆಗೆದುಕೊಳ್ಳದೆ ಕೆಲಸದಲ್ಲಿ ತೊಡಗುತ್ತಾನೆ..! ಯಾಕೆಂದರೆ, ಬೆಂಗಳೂರು ಬದಲಾಗಿರುವುದು ಕೇವಲ ಕೆಲವೇ ಕೆಲವರಿಗೆ, ಅವನಿಗಲ್ಲ .. ನೋಡಿ.

English summary
Barcelona Memories C olumn By Rangaswamy Mookanahalli Part 25.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X