• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಲ್ಲಿ ಜನ ದಿಗಂಬರರು!, ಜಗತ್ತಿನ ಅರಿವೇ ಇಲ್ಲದೆ ಬಿಸಿಲು ಕಾಯಿಸುತ್ತಾ ಮಲಗಿ ಬಿಡುತ್ತಾರೆ

By ರಂಗಸ್ವಾಮಿ ಮೂಕನಹಳ್ಳಿ
|
Google Oneindia Kannada News

ಸೇಮನ ಸಾಂತ (semana santa ) ಅಂದರೆ ಹೋಲಿ ವೀಕ್ (holy week ) ಎಂದರ್ಥ . ಜಗತ್ತಿನ ವಿವಿಧ ಭಾಗ ಕ್ಯಾಥೊಲಿಕ್ ದೇಶಗಳು ಇದನ್ನು ಈಸ್ಟರ್ ಎನ್ನುವ ಹೆಸರಲ್ಲಿ ಹಬ್ಬವನ್ನ ಆಚರಿಸುತ್ತಾರೆ. ಇಲ್ಲಿ ನಾವು ಇದನ್ನು ಸೇಮನ ಸಾಂತ ಎನ್ನುತ್ತೇವೆ .

ಈ ವರ್ಷ ಇದೆ ತಿಂಗಳು 13 ರಿಂದ 21ನೇ ತಾರೀಕಿನವರೆಗೆ ಈ ಹಬ್ಬ ಆಚರಿಸಲಾಯಿತು , ಪ್ರತಿ ವರ್ಷ ಸೇಮ್ ಡೇಟಾ ? ಇಲ್ಲ . ಪ್ರತಿ ವರ್ಷ ಡೇಟ್ ಬದಲಾವಣೆ ಆಗುತ್ತೆ. ಏಕೆಂದರೆ ಇವರು ಕೂಡ ನಮ್ಮಂತೆ ಗ್ರಹಗತಿ ನಂಬುತ್ತಾರೆ. ಹೌದಾ? ಎನ್ನುವ ನಿಮ್ಮ ಪ್ರಶ್ನೆಗೆ ಹೌದು ಎನ್ನುವುದು ಉತ್ತರ. ನಮ್ಮಲ್ಲಿ ಹೇಗೆ ತಿಂಗಳುಗಳಿಗೆ ಪುಷ್ಯ ಮಾಸ , ಮಾಘ ಮಾಸ , ಹೀಗೆ ಬೇರೆ ಬೇರೆ ಹೆಸರುಗಳನ್ನ ಕೊಟ್ಟುಕೊಂಡಿದ್ದೇವೆ , ಹಾಗೆ ಸ್ಪೇನ್ ಮತ್ತಿತರ ಯೂರೋಪಿಯನ್ ದೇಶಗಳಲ್ಲಿ ಕೂಡ ಅವರದೇ ಆದ ತಿಂಗಳುಗಳಿವೆ.

ಸಾಲ ಪೂರ್ಣ ವಾಪಸ್ಸು ಸಿಗದ ತನಕ ನಕ್ಷತ್ರಿಕನಂತೆ ಅವರ ಹಿಂದೆ ಮುಂದೆ ಸುತ್ತುವ ವಸೂಲಿಗಾರರು!ಸಾಲ ಪೂರ್ಣ ವಾಪಸ್ಸು ಸಿಗದ ತನಕ ನಕ್ಷತ್ರಿಕನಂತೆ ಅವರ ಹಿಂದೆ ಮುಂದೆ ಸುತ್ತುವ ವಸೂಲಿಗಾರರು!

ಸಾರ್ವತ್ರಿಕವಾಗಿ ನಾವು ಬಳಸುತ್ತಿರುವ ಕ್ಯಾಲೆಂಡರ್ ಕೂಡ ಬಳಕೆಯಲ್ಲಿದೆ. ಅದು ವ್ಯವಹಾರಿಕವಾಗಿ ಬಳಕೆಯಲ್ಲಿದೆ. ಉಳಿದಂತೆ , ಹಬ್ಬ ಇತ್ಯಾದಿ ದಿನಗಳನ್ನ ಆಚರಣೆ ಮಾಡಲು ನಾವು ಹೇಗೆ ಗ್ರಹ ಗತಿಗಳ ಆಧಾರದ ಮೇಲಿನ ನಮ್ಮ ಕ್ಯಾಲೆಂಡರ್ ಅಥವಾ ಪಂಚಾಂಗವನ್ನ ನೋಡುತ್ತೇವೆ , ಹಾಗೆಯೇ ಇವರು ಕೂಡ ತಮ್ಮದೇ ಅದ ಕ್ಯಾಲೆಂಡರ್ ಬಳಸುತ್ತಾರೆ. ಹೀಗಾಗಿ ಹಬ್ಬಗಳು ಪ್ರತಿ ವರ್ಷ ಅದೇ ತಾರೀಕಿನಂದು ಬರುವುದಿಲ್ಲ.

oliva ಹಾಗೂ laurel ಎನ್ನುವ ಎರಡು ಗಿಡದ ಎಲೆಗಳನ್ನು ಚರ್ಚ್ ಮುಂದೆ , ಇನ್ನಿತರೇ ಸೆಲೆಕ್ಟೆಡ್ ಜಾಗದಲ್ಲಿ ಮಾರುತ್ತಾರೆ , ನಾವು ಮಾವಿನ ಸೊಪ್ಪು ಕೊಂಡಂತೆ ಇವರು ಈ ಸೊಪ್ಪನ್ನು ಕೊಳ್ಳುತ್ತಾರೆ . ವ್ಯತ್ಯಾಸ ಅಂದರೆ ಈ ಸೊಪ್ಪನ್ನು ವರ್ಷ ಪೂರ್ತಿ ಮನೆಯಲ್ಲಿ ಇಟ್ಟಿರುತ್ತಾರೆ , ಮರು ವರ್ಷ ಹೊಸತು ತಂದಾಗ , ಹಳೆಯದು ಬಿಸಾಕುತ್ತಾರೆ , ಈ ಪ್ರಕ್ರಿಯೆ ಶುಭ ತರುತ್ತದೆ ಎನ್ನುವುದು ಇಲ್ಲಿನ ಜನರ ನಂಬಿಕೆ .

ಸ್ಯಾನ್ ಫೆರ್ಮಿನ್ ಎನ್ನುವುದು ಇನ್ನೊಂದು ದೊಡ್ಡ ಹಬ್ಬ . ಅದೇ ಎತ್ತುಗಳ ಹಿಂದೆ -ಮುಂದೆ ಓಡುವ ಒಂದು ಸ್ಪೇನ್ನ ಹಬ್ಬ ಎನ್ನುವುದು ನಿಮ್ಮ ಮನಸ್ಸಿನಲ್ಲಿ ಹಾದು ಹೋಗಿರಬಹದು, ಜೊತೆಗೆ ಅಭಯ್ ಡಿಯೋಲ್ ,ಫಾರ್ಹನ್ ಅಕ್ತರ್ ,ಹೃತಿಕ್ ರೋಶನ್ ಒಟ್ಟಾಗಿ ನಟಿಸಿದ ಜಿಂದಗಿ ನ ಮಿಲೆಗ ದುಬಾರ ಎನ್ನುವ ಚಲನ ಚಿತ್ರದಲ್ಲಿ ಎತ್ತುಗಳ ಓಟ .., ಎಲ್ಲಾ ಮಸ್ತಕದಲ್ಲಿ ಮೂಡಿದವು ಅಲ್ವಾ ? ಈ ಹಬ್ಬದ ಹೆಸರೇ ಸ್ಯಾನ್ ಫೆರ್ಮಿನ್ ( San Fermín ) .

1592ರಿಂದ ಈ ಒಂದು ಹಬ್ಬ ಆಚರಣೆಯಲ್ಲಿದೆ , ಪ್ರತಿ ವರ್ಷ ಜುಲೈ 7-14 ಈ ಹಬ್ಬ ಆಚರಿಸಲಾಗುತ್ತದೆ , ಅಂದರೆ ಬರೋಬ್ಬರಿ 420 ವರ್ಷಕ್ಕೂ ಹೆಚ್ಚು ವರ್ಷದ ದಿಂದ ಅಭಾದಿತವಾಗಿ ನೆಡೆದು ಬರುತ್ತಿದೆ , 13ನೆ ಶತಮಾನದಲ್ಲೇ ಇದು ಶುರುವಾಯಿತು , ಆದರೆ 1592ರಿಂದ ಪ್ರತಿವರ್ಷ ತಪ್ಪದೆ ಆಚರಿಸಲಾಗುತ್ತಿದೆ . ಇದಕ್ಕೂ ಒಂದು ಕಾರಣ ಉಂಟು , ಏನಪ್ಪಾ ಅಂದ್ರೆ ., ಕೋಲಂಬಸ್ 1942ರಲ್ಲಿ ಅಮೇರಿಕಾ ಕಂಡು ಹಿಡಿದ , ಅದರ 100ನೆ ವರ್ಷದ ಆಚರಣೆ ವೈಭವದಿಂದ ನಡೆಸಲು ಇದು ಶುರುವಾಯಿತು .

 ಮುಂದಿನ ಕೆಲವು ದಿನಗಳಲ್ಲಿ ಚಿತ್ರ ಮಂದಿರಗಳು ಕೂಡ ಇಲ್ಲವಾಗಿ ಎಲ್ಲವನ್ನೂ ಒಟಿಟಿ ಆಕ್ರಮಿಸುತ್ತದೆ ಮುಂದಿನ ಕೆಲವು ದಿನಗಳಲ್ಲಿ ಚಿತ್ರ ಮಂದಿರಗಳು ಕೂಡ ಇಲ್ಲವಾಗಿ ಎಲ್ಲವನ್ನೂ ಒಟಿಟಿ ಆಕ್ರಮಿಸುತ್ತದೆ

ನವಾರ್ರ (navarra ) ಸ್ಪೇನ್ ನ ಮತ್ತೊಂದು ರಾಜ್ಯ , ಪಂಪ್ಲೋನ (pamplona ) ಇದರ ರಾಜಧಾನಿ . ಸ್ಯಾನ್ ಫೆರ್ಮಿನ್ ನಡೆಯುವುದು ಇಲ್ಲೇ . ಬುಲ್ ಫೈಟ್ ಬೇರೆ , ಬುಲ್ ರನ್ ಬೇರೆ , ಇಲ್ಲಿ ನಡೆಯುವುದು ಬುಲ್ ರನ್. ಇಲ್ಲಿ ಎತ್ತಿನ ಹತ್ಯೆ ಆಗುವುದಿಲ್ಲ . ಜಸ್ಟ್ ಫಾರ್ ಫನ್ ಹತ್ತಾರು ಗೂಳಿ ಗಳನ್ನೂ 3/4 ಕಿಲೋಮೀಟರ್ ಓಡಿಸಿಕೊಂಡು ಹೋಗುತ್ತಾರೆ, ದೊಡ್ಡ ಮೈದಾನ ತಲುಪುವುದರೊಂದಿಗೆ ಅಂತ್ಯವಾಗುತ್ತದೆ . ಇಷ್ಟೂ ಪ್ರಕ್ರಿಯೆ 4/5 ನಿಮಿಷದಲ್ಲಿ ಮುಗಿಯುತ್ತದೆ . ಮತ್ತೆ ಇಡಿ ವಾರ ಇದರ ಪುನರಾವರ್ಥನೆಯಾಗುತ್ತದೆ.

ಸ್ಪೇನ್ ಎಂದಾಕ್ಷಣ ಜನರ ಮನಸ್ಸಿನಲ್ಲಿ ಮೂಡುವುದು ಗೂಳಿಕಾಳಗ. ಹೀಗೆ ಅಖಾಡದಲ್ಲಿ ಗೂಳಿಯ ಜೋತೆಗೆ ಸೆಣಸಾಡಿ ಗೂಳಿಯನ್ನ ಕೊಲ್ಲುವ ವ್ಯಕ್ತಿಯನ್ನ ಇಲ್ಲಿ ಮಾತದೂರ್ ಎನ್ನುತ್ತಾರೆ. ಮತಾರ್ ಎಂದರೆ ಕೊಲ್ಲು ಎಂದರ್ಥ. ಮಾತದೂರ್ ಎಂದರೆ ಕೊಲ್ಲುವವನು ಎಂದರ್ಥ. ನೀವು ಭಾರತೀಯ ರಸ್ತೆಯಲ್ಲಿ ಒಂದು ವ್ಯಾನ್ ರೀತಿಯ ವಾಹನವನ್ನ ನೋಡಿರುತ್ತೀರಿ , ಅದನ್ನ ಮೆಟಡೋರ್ ಎನ್ನುತ್ತಿದ್ದ ನೆನಪಿದೆ ಎಂದು ಕೊಳ್ಳುವೆ.

ಇತ್ತೀಚಿನ ದಿನಗಳಲ್ಲಿ ಈ ವಾಹನ ಅಷ್ಟಾಗಿ ಕಾಣುತ್ತಿಲ್ಲ. ಇದನ್ನ ಮೆಟಾಡೋರ್ ಎನ್ನುವಂತಿಲ್ಲ , ಅದು ಮಾತದೂರ್. ನಮ್ಮ ಹೆಸರುಗಳು ಅವರ ಬಾಯಲ್ಲಿ ಸಿಕ್ಕಿ ಹೇಗೆ ಪಚ್ಚಡಿಯಾಗುತ್ತದೆ. ಹಾಗೆಯೇ ಅವರ ಹೆಸರುಗಳು ಕೂಡ ನಮ್ಮ ಉಚ್ಚಾರಣೆಯಲ್ಲಿ ನಲುಗಿವೆ. ಇದಕ್ಕೆ ಇನ್ನೊಂದು ತಾಜಾ ಉದಾಹರಣೆ ಎಂದರೆ ನಾವು ಬಳಸುವ 'ನಿಗ್ರೋ ' ಎನ್ನುವ ಪದ. ಅದು ನಿಗ್ರೋ ಅಲ್ಲ 'ನೆಗ್ರೋ' . ಅಂದರೆ ಕಪ್ಪು ಎನ್ನುವ ಅರ್ಥ. ಇರಲಿ

ನೀವು ಸ್ಪೇನ್ ಗೆ ಹೋಗುವುದಾದರೆ ಮತ್ತು ದೈಹಿಕವಾಗಿ ಗಟ್ಟಿಯಾಗಿದ್ದರೆ ಮಾತ್ರ ಇಂತಹ ಬುಲ್ ರನ್ ಸಾಹಸಕ್ಕೆ ಕೈ ಹಾಕಿ. ಇಲ್ಲವೇ ನಿಂತು ನೋಡುವುದು ಒಳ್ಳೆಯದು. ಹೀಗೆ ಹೇಳಲು ವಿಶೇಷ ಕಾರಣವೆಂದರೆ ಇದು ಜಗತ್ತಿನ ಡೇಂಜರ್ ಆಟಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿದೆ. ಪ್ರತಿ ವರ್ಷ ಒಂದಷ್ಟು ಸಾವುನೋವುಗಳು ಖಂಡಿತ ಇದರಿಂದ ಸಂಭವಿಸುತ್ತದೆ. ಈ ಓಟದಲ್ಲಿ ನೀವು ಪಾಲ್ಗೊಳ್ಳಲು ಇಚ್ಚಿಸುವುದಾದರೆ ಡ್ರೆಸ್ ಕೋಡ್ ಉಂಟು .

ಬಿಳಿ ಬಟ್ಟೆಯನ್ನ ಉಟ್ಟು ಕತ್ತಿಗೆ ಕೆಂಪು ಪಟ್ಟಿಯನ್ನ ಕಟ್ಟಿಕೊಳ್ಳಬೇಕು. ಇತ್ತೀಚಿಗೆ ಸ್ಪೇನ್ ನಲ್ಲಿ ಗೂಳಿಕಾಳಗ ಕಡಿಮೆಯಾಗಿದೆ. ಇದಕ್ಕೆ ಕಾರಣ ಜನರಲ್ಲಿ ಮೂಡುತ್ತಿರುವ ತಿಳುವಳಿಕೆ. ಈ ಹಿಂದೆ ಗೂಳಿಕಾಳಗವನ್ನ ಸ್ಪೇನ್ ದೇಶದ ಪ್ರತಿಷ್ಠೆ ಎನ್ನುವ ಮಟ್ಟಕ್ಕೆ ಜನರನ್ನ ನಂಬಿಸಲಾಗಿತ್ತು. ಇಂದಿಗೆ ಇದು ಎಲ್ಲಾ ರಾಜ್ಯಗಳಲ್ಲಿ ನಡೆಯುವುದಿಲ್ಲ. ಕತಲೋನ್ಯ ರಾಜ್ಯದಲ್ಲಿ ಇದನ್ನ ನಿರ್ಬಂಧಿಸಲಾಗಿದೆ. ಮ್ಯಾಡ್ರಿಡ್ ಒಳಗೊಂಡು ಇತರ ಕಡೆಯಲ್ಲಿ ಕೂಡ ಗೂಳಿಕಾಳಗ ಬಹಳ ಕಡಿಮೆಯಾಗಿದೆ. ಸ್ಯಾನ್ ಫೆರ್ಮಿನ್ ಮಾತ್ರ ಅಭಾದಿತವಾಗಿ ನಡೆದುಕೊಂಡು ಬಂದಿದೆ.

 ನೀನು ಮತ್ತು ನಿನ್ನ ಹೆಂಡತಿ ಸಸ್ಯಾಹಾರಿಗಳು ಓಕೆ. ಬಟ್ ನಿಮ್ಮ ಮಗಳು? ನೀನು ಮತ್ತು ನಿನ್ನ ಹೆಂಡತಿ ಸಸ್ಯಾಹಾರಿಗಳು ಓಕೆ. ಬಟ್ ನಿಮ್ಮ ಮಗಳು?

ಬಾರ್ಸಿಲೋನಾ ನಗರ ಯೂರೋಪಿಯನ್ನರ ನಡುವೆ ಬಹಳ ಪ್ರಸಿದ್ದಿ ಪಡೆದಿರುವ ನಗರವಾಗಿದೆ . ಐಫೆಲ್ ಟವರ್ ಎಂದ ತಕ್ಷಣ ಪ್ಯಾರಿಸ್ ಎನ್ನುತ್ತಾರೆ. ಸತ್ಯಏಕೆಂದರೆ ಐಫೆಲ್ ಟವರ್ ಇರುವುದು ಪ್ಯಾರಿಸ್ ನಲ್ಲಿ . ಬಟ್ ಬಹಳ ಜನರಿಗೆ ಗೊತ್ತಿಲ್ಲ ,ಐಫೆಲ್ ಟವರ್ ಮೊದಲು ಬಾರ್ಸಿಲೋನಾ , ಸ್ಪೇನ್ ನಲ್ಲಿ ನಿರ್ಮಿಸಲು ಐಫೆಲ್ ಬಯಸಿದ್ದ . ಬಾರ್ಸಿಲೋನಾ ಜನತೆ ಕಬ್ಬಿಣದ ಉದ್ದದ ಗರುಡ ಗಂಬ ನಿಲ್ಲಿಸುವುದರಿಂದ ಏನು ಪ್ರಯೋಜನ ಎಂದು ತಿರಸ್ಕರಿಸಿದರಂತೆ !

ಇಲ್ಲಿ ಸಾಮಾನ್ಯವಾಗಿ ಇಂತಹ ದೊಡ್ಡ ಖರ್ಚಿನ ಬಾಬತ್ತು ಬಂದಾಗೆಲ್ಲ ಜನರ ಅಭಿಪ್ರಾಯವನ್ನ ಕೇಳುತ್ತಾರೆ. ಕೊನೆಗೂ ಆ ಹಣ ಜನರಿಂದ ಬಂದದ್ದು ಅಲ್ಲವೇ ? ಅಷ್ಟರ ಮಟ್ಟಿನ ಬದ್ಧತೆಯನ್ನ ನಾವು ಇಲ್ಲಿ ಕಾಣಬಹದು. ಹೀಗೆ ಜನ ಮತವನ್ನ ಯಾಚಿಸಿದಾಗ ಬಾರ್ಸಿಲೋನಾ ಜನಕ್ಕೆ ಐಫೆಲ್ ಟವರ್ ವಿನ್ಯಾಸ ಇಷ್ಟವಾಗಲಿಲ್ಲ. ವೃಥಾ ಖರ್ಚು ಎಂದು ಅದನ್ನ ತಿರಸ್ಕರಿಸುತ್ತಾರೆ.

ಪ್ಯಾರಿಸಿನ ಜನತೆ ಕೂಡ ಜನ ಮತದಲ್ಲಿ ಒಂದಿಪ್ಪತ್ತು ವರ್ಷ ಇಟ್ಟು ನೋಡೋಣ ಅದು ಹೇಳಿದಂತೆ ವಿಶ್ವ ಪ್ರಸಿದ್ಧವಾದರೆ ಸರಿ ಇಲ್ಲದಿದ್ದರೆ ಅದನ್ನ ಕೆಡವೋಣ ಎಂದಿದ್ದರಂತೆ!! ಭಗವಂತನ ಇಚ್ಚೆ ಬೇರೆ ಇತ್ತು . ಉಳಿದದ್ದು ನಿಮಗೆಲ್ಲ ತಿಳಿದಿರುವ ಇತಿಹಾಸ. ಪ್ಯಾರಿಸ್ ಎಂದರೆ ಐಫೆಲ್ ಟವರ್ ಎನ್ನುವಂತಾಗಿದೆ.

ಸಗ್ರದ ಫ್ಯಾಮಿಲಿಯ (Sagrada Familia) ಬಾರಿಸಲೊನಾದ ಐಕಾನಿಕ್ ಕಟ್ಟಡ. ಇದೊಂದು ಚರ್ಚು. ಐಫೆಲ್ ಟವರ್ ಎಂದರೆ ಪ್ಯಾರಿಸ್ ಎನ್ನುವಂತೆ, ಸಗ್ರದ ಫ್ಯಾಮಿಲಿಯ ಎಂದರೆ ಬಾರ್ಸಿಲೋನಾ ಎನ್ನುವಷ್ಟರ ಮಟ್ಟಿಗೆ ಇದು ಪ್ರಸಿದ್ದಿ ಹೊಂದಿದೆ. ಭಾರತೀಯರು ಸ್ಪೇನ್ ನ ಅನ್ವೇಷಣೆ ಅಷ್ಟು ಮಾಡಿಲ್ಲ ., ಆದರೆ ಯುರೋಪಿನಲ್ಲಿ ಸಾಗ್ರದ ಫ್ಯಾಮಿಲಿಯ ತಿಳಿಯದವರು ಬಹಳ ಕಡಿಮೆ.

ಪ್ರಸಿದ್ದ ಅಂತೋನಿಯೂ ಗೌದಿ ಇದರ ರುವಾರಿ .., ಕಳೆದ 70೦ ವರ್ಷದಿಂದ ಇದನ್ನ ಕಟ್ಟುತ್ತಲೆ ಇದ್ದಾರೆ. ಸಗ್ರದ ಫ್ಯಾಮಿಲಿಯ ಎಂದರೆ ಪೂಜನೀಯ ಕುಟುಂಬ ಎಂದರ್ಥ . ಬಾರ್ಸಿಲೋನಾ ಜನ ಇಂದಿಗೂ ಐಫೆಲ್ ಟವರ್ ಫ್ರಾನ್ಸ್ ಗೆ ಬಿಟ್ಟು ಕೊಟ್ಟದಕ್ಕೆ ತಮ್ಮನ್ನೇ ಹಳಿದು ಕೊಳ್ಳುತ್ತಾರೆ. ಅವಕಾಶ ನಮ್ಮ ಮನೆಯ ಬಾಗಿಲನ್ನ ಬಡಿದಾಗ ಅದಕ್ಕೆ ಉತ್ತರಿಸಬೇಕು. ಇಲ್ಲದಿದ್ದರೆ ನಂತರ ಚಿಂತಿಸಿ ಫಲವಿಲ್ಲ. ಅವಕಾಶ ಎರಡನೇ ಬಾರಿ ಬಾಗಿಲು ಬಡಿಯುವುದಿಲ್ಲ ಎನ್ನುವುದು ನಂಬಿಕೆ.

ಬೀಚು ಎಂದ ತಕ್ಷಣ ಜನರಿಗೆ ನೆನಪಾಗುವುದು ಕೆರೆಬಿಯನ್ ಬೀಚುಗಳು . ಸಹಜವಾಗಿ ವಿಶ್ವ ಪ್ರಖ್ಯಾತ ಬೀಚುಗಳವು . ಸ್ಪೇನ್ ನಲ್ಲಿ ಕೋಸ್ಟಾ ಬ್ರಾವಾ (costa brava ) ಜಗತ್ತಿನ ಯಾವುದೇ ಬೀಚುಗಳನ್ನೂ ನಾಚಿಸ ಬಲ್ಲದು. ಲಾ ತೋರ್ದೆರ (la tordera ) ಎನ್ನುವ ನದಿಯ ತಟದಿಂದ ಶುರುವಾಗಿ ಫ್ರಾನ್ಸ್ ದೇಶದ ಗಡಿ , ಪೋರ್ತಬೌ (portbou ) ಎಂಬಲ್ಲಿ ಕೊನೆಯಾಗುತ್ತದೆ. ಸರಿಸುಮಾರು 214ಕಿಲೋ ಮೀಟರ್ ಬೀಚಿನದ್ದೆ ಸಾಮ್ರಾಜ್ಯ .

55ಕ್ಕೂ ಹೆಚ್ಚು ಕಿಲೋ ಮೀಟರ್ ತಡೆ ಇಲ್ಲದ ಉದ್ದನೆಯ ಬೀಚು!! . ಇಂತಹ ಬೀಚಿಗೆ ಕೇವಲ ಎರಡು ಕಿಲೋಮೀಟರ್ ದೂರದಲ್ಲಿ ಮನೆಯನ್ನ ಮಾಡಿ , ನಿತ್ಯವೂ ಈ ಬೀಚಿನಲ್ಲಿ ಓಡಿದ ಅನುಭವ ನನ್ನದು. ನಾನು ಇಲ್ಲಿಗೆ ಬಂದ ಹೊಸತರಲ್ಲಿ (1999) ಬೀಚಿನಲ್ಲಿರುವವರನ್ನ ನೋಡಿ ಆಶ್ಚರ್ಯ ಪಟ್ಟಿದ್ದೆ . ಇಲ್ಲಿ ಜನ ದಿಗಂಬರರು ! , ಜಗತ್ತಿನ ಅರಿವೇ ಇಲ್ಲದೆ ಬಿಸಿಲು ಕಾಯಿಸುತ್ತಾ ಮಲಗಿ ಬಿಡುತ್ತಾರೆ.

ಆ ನಂತರದ ದಿನಗಳಲ್ಲಿ ನನಗೆ ಇಲ್ಲಿನ ಜನರ ಮನಸ್ಥಿತಿ ಅರ್ಥವಾಯ್ತು. ನಾವು ಕೈ , ಕಾಲುಗಳ ಚರ್ಮವನ್ನ ಜಗತ್ತಿಗೆ ತೋರಿಸುವುದಿಲ್ಲವೇ ? ಹಾಗೆ ಉಳಿದ ದೇಶದ ಚರ್ಮವನ್ನ ತೋರಿಸುವುದಕ್ಕೆ ಅದೇಕೆ ಅಷ್ಟು ಸಂಕೋಚ ಎನ್ನುವುದು ಇವರ ಪ್ರಶ್ನೆ. ಅದೇನೇ ಇರಲಿ , ಮಕ್ಕಳಿಂದ , ವೃದ್ಧರವರಿಗೆ ಕುಟುಂಬದ ಎಲ್ಲರೂ ಸಾಮೂಹಿಕವಾಗಿ ಬೀಚಿನಲ್ಲಿ ಮಲಗುವುದು ಇಲ್ಲಿ ಅತ್ಯಂತ ಸಾಮಾನ್ಯ ವಿಷಯವಾಗಿದೆ.

ಅದು ೨೦೦೭ ರ ಒಂದು ದಿನ. ನಾನು ಆಫೀಸಿನಿಂದ ನೇರವಾಗಿ ಬೀಚಿಗೆ ಬರುತ್ತೇನೆ ಅಮ್ಮ -ಅಪ್ಪನನ್ನ ಬೀಚಿಗೆ ಕರೆದುಕೊಂಡು ಹೋಗಿರು ಎಂದು ರಮ್ಯಳಿಗೆ ಹೇಳಿಹೋಗಿದ್ದೆ. ಆಕೆ ಕರೆದುಕೊಂಡು ಹೋಗಿದ್ದಾಳೆ. ಬೀಚಿನಲ್ಲಿ ಎರಡು ವಿಭಾಗವಿದೆ . ಒಂದು ನಾರ್ಮಲ್ ಬೀಚ್ , ಇನ್ನೊಂದು ನ್ಯೂಡ್ ಬೀಚ್. ರಮ್ಯಳಿಗೆ ಗೊತ್ತಾಗದೆ ನ್ಯೂಡ್ ಬೀಚ್ ಕಡೆ ಪ್ರವೇಶ ಪಡೆದಿದ್ದಾಳೆ. ನಾವು ಕಂಡ ಎಲ್ಲಾ ಸ್ಥಳ ತೋರಿಸುವ ಹುಮ್ಮಸ್ಸಿನಲ್ಲಿ ಇಲ್ಲಿಗೂ ಕರೆದು ತಂದು 'ಪ್ರಾರಬ್ಧ' ಎಂದು ಅಮ್ಮನಿಂದ ಬೈಸಿ ಕೊಂಡೆವು. ಅದಿರಲಿ , ಸರ್ಫ್ ಪ್ರಿಯರಿಗೆ ಬೀಚ್ ಕಡೆಯಲ್ಲಿ ., ಈಜಾಡುವವರಿಗೆ ಇದು ಸ್ವರ್ಗ .

ಕೋಸ್ಟಾ ಬ್ರಾವಾ ಎಂದರೆ ಬ್ರೇವ್ ಕೋಸ್ಟ್ ಎಂದರ್ಥ ..,ಬಾರ್ಸಿಲೋನಾ ದಿಂದ ಕೇವಲ 40ಕಿಲೋಮೀಟರ್ ದೂರದಲ್ಲಿರುವ ತೊಸ್ಸ ದೇ ಮಾರ್ (tossa de mar )ನನ್ನು ಪೆರ್ಲ ದೇ ಕೋಸ್ಟಾ ಬ್ರಾವಾ ಎನ್ನುತ್ತಾರೆ . ( ಕೋಸ್ಟಾ ಬ್ರಾವದ ಮುಕುಟ ಮಣಿ ) mar ಎಂದರೆ ಸಮುದ್ರ.

English summary
Barcelona Memories C olumn By Rangaswamy Mookanahalli Part 23.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X