ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಲಸೆ ಎಂದರೆ 'ಹೊಲಸು 'ಎನ್ನುವಂತೆ ಮಾಡಿದ್ದು ವಲಸಿಗರು!

By ರಂಗಸ್ವಾಮಿ ಮೂಕನಹಳ್ಳಿ
|
Google Oneindia Kannada News

ಸ್ಪೇನ್ ಭೌಗೋಳಿಕವಾಗಿ ಯೂರೋಪಿನಲ್ಲಿದ್ದರೂ ಇತರ ಯೂರೋಪಿನ ದೇಶಗಳಷ್ಟು ಅಭಿವೃದ್ಧಿ ಹೊಂದಿದ ದೇಶವೇನೂ ಆಗಿರಲಿಲ್ಲ. ಸ್ಪೇನ್ ಕೂಡ ಬಹಳಷ್ಟು ದೇಶಗಳಂತೆ ಅಂತರಿಕ ಕಲಹದಿಂದ ಬಹಳಷ್ಟು ಹಿಂದುಳಿದಿತ್ತು. ಬಡತನ ಮತ್ತು ಹಸಿವು ಎಂದರೇನು ಎನ್ನುವುದನ್ನ ಈಗಿನ ಸ್ಪ್ಯಾನಿಷ್ ಜನತೆ ಮರೆತಿರಬಹದು , ಆದರೆ ಐವತ್ತು , ಅರವತ್ತರ ವಯೋಮಾನದ ನಾಗರಿಕರು ತಮ್ಮ ಬಾಲ್ಯವನ್ನ ನೆನೆದಾಗಲೆಲ್ಲ ಬಡತನದ ಮಾತನ್ನ ಆಡದೆ ಮುಗಿಸುತ್ತಲೇ ಇರಲಿಲ್ಲ.

ಯೂರೋಪಿಯನ್ ಒಕ್ಕೊಟದಿಂದ ಬರುವ ಅನುದಾನದಿಂದ ಸ್ಪೇನ್ ಬಹಳಷ್ಟು ಪ್ರಗತಿ ಕಂಡಿತು. 2011ರ ನಂತರ ಅತ್ಯಂತ ವೇಗವಾಗಿ ಸ್ಪೇನ್ ಯೂರೋಪಿನ ಇತರ ದೇಶಗಳಂತೆ ಬೆಳವಣಿಗೆಯನ್ನ ಕಂಡಿತು. ಸಹಜವಾಗಿಯೇ ಸ್ಪೇನ್ ನಾಗರಿಕರಲ್ಲಿ ವಲಸಿಗರ ಕಂಡರೆ ಒಂದು ರೀತಿಯ ಮೃದು ಭಾವನೆ ಇತ್ತು. ಅಂದಿನ ದಿನದಲ್ಲಿ ಸ್ಪೇನ್ ಗೆ ಇಂದಿನ ದಿನಗಳಂತೆ ವಲಸಿಗರ ದಂಡು ಬಂದಿರಲಿಲ್ಲ. 2003 ಇಸವಿಯ ನಂತರ ಸ್ಪೇನ್ ಗೆ ಅದರಲ್ಲೂ ಪ್ರಮುಖವಾಗಿ ಮ್ಯಾಡ್ರಿಡ್ ಮತ್ತು ಬಾರ್ಸಿಲೋನಾ ನಗರಗಳಿಗೆ ವಲಸಿಗರು ಹಿಂಡು ಹಿಂಡಾಗಿ ಬರತೊಡಗಿದರು.

ನಮ್ಮೆಲ್ಲಾ ಭಿನ್ನತೆಗಳ ನಡುವೆ ಕೂಡ ನಮ್ಮನ್ನ ಬೆಸೆಯುವ ಕೊಂಡಿಗಳು ಬೇಕಾದಷ್ಟಿವೆ! ನಮ್ಮೆಲ್ಲಾ ಭಿನ್ನತೆಗಳ ನಡುವೆ ಕೂಡ ನಮ್ಮನ್ನ ಬೆಸೆಯುವ ಕೊಂಡಿಗಳು ಬೇಕಾದಷ್ಟಿವೆ!

ಹೀಗೆ ಬಂದ ವಲಸಿಗರಲ್ಲಿ ಪ್ರಮುಖವಾಗಿ ಪಾಕಿಸ್ತಾನಿ , ಬಾಂಗ್ಲಾದೇಶಿ , ಮೊರೊಕ್ಕನ್ನರು ಮತ್ತು ಆಫ್ರಿಕಾ ದೇಶದವರು ಇದ್ದರು. ದಕ್ಷಿಣ ಅಮೇರಿಕಾ ದೇಶದಿಂದ ಕೂಡ ಬಹಳಷ್ಟು ಜನ ಇಲ್ಲಿಗೆ ವಲಸೆ ಬರುತ್ತಿದ್ದರು. ಆದರೆ ದಕ್ಷಿಣ ಅಮೆರಿಕನ್ನರು ಸ್ಪ್ಯಾನಿಷ್ ಭಾಷೆಯನ್ನ ಮಾತನಾಡುತ್ತಿದ್ದರು . ಹೆಚ್ಚು ಕಡಿಮೆ ಸ್ಪ್ಯಾನಿಷ್ ಸಂಸ್ಕೃತಿಯನ್ನ ಬಲ್ಲವರಾಗಿದ್ದರು . ಆದರೆ ಇತರೆ ದೇಶಗಳಿಂದ ಬಂದ ವಲಸಿಗರಿಗೆ ಇಲ್ಲಿನ ಸಂಸ್ಕೃತಿಯ ಲವಲೇಶ ಜ್ಞಾನವಿರುತ್ತಿರಲಿಲ್ಲ. ಅಲ್ಲದೆ ಇವರಲ್ಲಿ ಮುಕ್ಕಾಲು ಪಾಲು ಜನ ಅನಕ್ಷರಸ್ತರು.

Barcelona Memories Coloumn By Rangaswamy Mookanahalli Part 6

ಸ್ಪ್ಯಾನಿಷ್ ಭಾಷೆಯ ಗಂಧಗಾಳಿ ಇಲ್ಲದವರು. ಇಂತವಹರು ಜನದೊಂದಿಗೆ , ಸಮಾಜದೊಂದಿಗೆ ಬೆರೆಯುವುದಾದರೂ ಹೇಗೆ ? ಭಾಷೆ ಬಾರದ ಮೇಲೆ ಕೆಲಸ ಸಿಕ್ಕುವುದಾದರೂ ಹೇಗೆ ? ಸ್ಪ್ಯಾನಿಷ್ ಸಮಾಜ ನಿಧಾನಕ್ಕೆ ವಲಸಿಗರ ಬಗ್ಗೆ ಇದ್ದ ಮೃದು ಧೋರಣೆಯನ್ನ ಕಡಿಮೆ ಮಾಡಿಕೊಂಡಿತು. ಭಾರತೀಯನಾರು? ಪಾಕಿಸ್ತಾನಿ ಅಥವಾ ಬಾಂಗ್ಲಾದೇಶಿಯ ನಡುವಿನ ಅಂತರವನ್ನ ಈ ಸಮಾಜ ಗುರುತಿಸಲು ವಿಫಲವಾಯಿತು. ಅವರ ಕಣ್ಣಿನಲ್ಲಿ ನಾವೆಲ್ಲಾ ಒಂದೇ ! ವಲಸಿಗರು .., ಜಾಸ್ತಿಯೆಂದರೆ ಸೌತ್ ಏಷ್ಯನ್ ಅಷ್ಟೇ ಅದನ್ನ ಮೀರಿ ಯೋಚಿಸುವ ಶಕ್ತಿ ಇರಲಿಲ್ಲ.

ಹೀಗೆ ವಲಸೆ ಬಂದವರಲ್ಲಿ ಮತ್ತು ಸ್ಥಳೀಯರಲ್ಲಿ ಘರ್ಷಣೆಗೆ ಪ್ರಮುಖವಾಗಿ ವಲಸಿಗರು ಕೆಲಸ ಸಿಗದೇ ಇದ್ದಾಗ ಕಳ್ಳತನದಿಂದ ಹಿಡಿದು ಇತರ ಸಣ್ಣ ಪುಟ್ಟ ಕಾನೂನು ಬಾಹಿರ ಕೆಲಸಗಳಲ್ಲಿ ತೊಡಗಿಕೊಳ್ಳುವುದು. ರಸ್ತೆಯಲ್ಲಿ ವ್ಯಾಪಾರ ಮಾಡುವುದು , ರಾತ್ರಿ 12 ಅಥವಾ 2 ಅಥವಾ ಬೆಳಗಿನ ಜಾವ 3ರರಲ್ಲಿ ಡಿಸ್ಕೋ ಮುಗಿಸಿ ಮನೆಗೆ ಹೊರಟ ಹೆಣ್ಣು ಮಕ್ಕಳನ್ನ ಕಾಡುವುದು ಕಾರಣಗಳಾಗಿದ್ದವು. ಇಲ್ಲಿ ಪ್ರಮುಖವಾಗಿ ಒಂದು ವಿಷಯವನ್ನ ಪ್ರಸ್ತಾಪಿಸಲೇಬೇಕು. ಏಷ್ಯನ್ ಮೂಲದ ಗಂಡಸರಲ್ಲಿ ಒಂದು ಕೆಟ್ಟ ಗುಣವಿದೆ, ಯೂರೋಪಿಯನ್ ಮತ್ತು ಅಮೆರಿಕನ್ ಹೆಣ್ಣು ಮಕ್ಕಳು ಎಂದರೆ ಅವರು ಸುಲಭ ತುತ್ತು ಎನ್ನುವುದು ಅದಾಗಿದೆ.

ರವಿ ಬೆಳಗೆರೆ ಬರಹ ಎಷ್ಟು ಪವರ್ಫುಲ್ ಎಂದರೆ ಪಾಖಂಡಿಗಳನ್ನೂ ಹೀರೋ ಆಗಿಸುವಷ್ಟು ರವಿ ಬೆಳಗೆರೆ ಬರಹ ಎಷ್ಟು ಪವರ್ಫುಲ್ ಎಂದರೆ ಪಾಖಂಡಿಗಳನ್ನೂ ಹೀರೋ ಆಗಿಸುವಷ್ಟು

ಅಸಭ್ಯವಾಗಿ ನಡೆದುಕೊಳ್ಳುವುದು , ಇಲ್ಲಿನ ಹೆಣ್ಣು ಮಕ್ಕಳ್ಳಲ್ಲಿ ಕ್ಯಾರೆಕ್ಟರ್ ಸರಿ ಇಲ್ಲ , ಬಹಳ ಸುಲಭವಾಗಿ ನಮ್ಮಿಂದೇ ಬರುತ್ತಾರೆ ಎನ್ನುವುದು ಮುಕ್ಕಾಲು ಪಾಲು ಗಂಡಸರ ಭಾವನೆ. ಇದು ಶುದ್ಧ ಸುಳ್ಳು . ಇಲ್ಲಿನ ಹೆಣ್ಣು ಮಕ್ಕಳು ಕೂಡ ನಮ್ಮ ಭಾರತದ ಹೆಣ್ಣು ಮಕ್ಕಳಷ್ಟೇ ಸಂಸ್ಕಾರವಂತರು. ಇಲ್ಲಿಯೂ ಕೂಡ ನಮ್ಮಲ್ಲಿ ಇರುವಷ್ಟೇ ಪ್ರಬಲವಾದ ಕುಟುಂಬ ವ್ಯವಸ್ಥೆಯಿದೆ. ಎಲ್ಲೆಡೆ ಕೂಡ ಎಲ್ಲಾ ವಿಷಯದಲ್ಲೂ ಒಂದಷ್ಟು ಲೋಪದೋಷಗಳಿರುತ್ತವೆ. ಹಾಗೆಂದು ಎಲ್ಲರನ್ನೂ , ಎಲ್ಲವನ್ನೂ ನಾವು ಜನರಲೈಸ್ ಮಾಡಲು ಸಾಧ್ಯವಿಲ್ಲ.

ಹೀಗೆ ವಲಸೆ ಬಂದವರಲ್ಲಿ ಮುಕ್ಕಾಲು ಪಾಲು ಜನ ಕಾನೂನು ಬಾಹಿರವಾಗಿ ಸ್ಪೈನ್ಗೆ ಬಂದವರು. ಒಬ್ಬಬ್ಬರದು ಒಂದೊಂದು ಕಥೆ. ಮೂರು ವರ್ಷಗಳ ಕಾಲ ಪೊಲೀಸರಿಗೆ ಸಿಗದೇ ಸ್ಪೇನ್ ನಲ್ಲಿ ವಾಸವಿದ್ದು ನಂತರ ಅನುಕಂಪದ ಆಧಾರದ ಮೇಲೆ ನೀಡುವ ಅನುಮತಿ ಪತ್ರಕ್ಕೆ ಬಹಳಷ್ಟು ಜನ ಅರ್ಜಿಯನ್ನ ಹಾಕುತ್ತಿದ್ದರು. ಸ್ಪೇನ್ ನಲ್ಲಿ ಈ ರೀತಿ ಅನುಕಂಪದ ಆಧಾರದ ಮೇಲೆ ಅರ್ಜಿ ಸ್ವೀಕರಿಸುತ್ತಾರೆ ಎಂದು ತಿಳಿದು ಹೀಗೆ ಬಹಳಷ್ಟು ವಲಸಿಗರು ಬಂದಿದ್ದರು. ರಸ್ತೆಯಲ್ಲಿ ನಡೆಯುವಾಗ ಅವರಂತೆ ಇರುವ ನಾನು ಅವರಿಗೆ ಅಚ್ಚರಿಯಾಗಿ ಕಾಣುತ್ತಿದ್ದೆ. ಅರ್ಜಿ ಕೂಡ ಬರೆಯಲು ಬಾರದವರು ಅರ್ಜಿ ತುಂಬಿಕೊಡು ಎಂದು ದಂಬಾಲು ಬಿದ್ದದ್ದು ಇದೆ.

https://kannada.oneindia.com/news/karnataka/ravi-belagere-such-a-powerful-writer-article-by-rangaswamy-mookanahalli-207220.html

ಹತ್ತಾರು ಜನಕ್ಕೆ ಇಂತಹ ಕೆಲಸದಲ್ಲಿ ನೆರೆವಾದ ನೆನಪು ಕೂಡ ಹಸಿರಾಗಿದೆ. ಮುಂದಿನ ದಿನಗಳಲ್ಲಿ ಇಲ್ಲಿನ ಇಮ್ಮಿಗ್ರೇಷನ್ ಲಾಯರ್ ಗಳು ಇಲ್ಲಿರುವ ಅವಕಾಶವನ್ನ ಚನ್ನಾಗಿ ಬಳಸಿಕೊಂಡರು. ಬಾಂಗ್ಲಾದೇಶಿಗಳು ಸಿಕ್ಕ ಸಿಕ್ಕ ಕಡೆಯೆಲ್ಲ ಸಣ್ಣ ಪುಟ್ಟ ಸೂಪರ್ ಮರುಕಟ್ಟೆಗಳನ್ನ ಹಾಕಲು ಶುರು ಮಾಡಿದರೆ , ಪಾಕಿಸ್ತಾನಿಗಳು ಮೊಬೈಲ್ ಶಾಪ್ಗಳನ್ನ ಹಾಕತೊಡಗಿದರು. ಇಲ್ಲಿ ನೆಲೆ ನಿಂತ ಒಂದೆರೆಡು ವರ್ಷದಲ್ಲಿ ತಮ್ಮ ದೇಶದಿಂದ ಇಲ್ಲಿಗೆ ಜನರನ್ನ ಕರೆಸಿಕೊಳ್ಳಲು ಲಕ್ಷಾಂತರ ರೂಪಾಯಿ ಹಣವನ್ನ ಪೀಕತೊಡಗಿದರು.

ಹೀಗೆ ಹಣ ಖರ್ಚು ಮಾಡಿ ಬಂದವರಿಗೆ ಇಲ್ಲಿ ಯಾವುದೇ ಕೆಲಸ ಸಿಗುತ್ತಿರಲಿಲ್ಲ. ಒಪ್ಪತ್ತಿನ ಊಟಕ್ಕೂ ಪರದಾಡುವ ಜನರನ್ನ ನಾನು ಕಣ್ಣಾರೆ ಕಂಡಿದ್ದೇನೆ. ತಾವಿದ್ದ ದೇಶದಲ್ಲಿ ಇಷ್ಟೇ ಹಣವನ್ನ ಎಲ್ಲಾದರೂ ತೊಡಗಿಸಿ ನಿಷ್ಠೆಯಿಂದ ಕೆಲಸ ಮಾಡಿದ್ದರೆ ಸಾಕಾಗಿತ್ತು. ಆದರೆ ಪಾಕಿಸ್ತಾನಿ , ಭಾರತೀಯ ಪಂಜಾಬಿಗಳು ಮತ್ತು ಬಾಂಗ್ಲಾದೇಶಿಗಳಲ್ಲಿ ಯೂರೋಪು ಸೇರಬೇಕು ಎನ್ನುವುದು ಒಂದು ರೀತಿಯ ಹುಚ್ಚು . ಹೀಗೆ ಒಂದು ದಿನ ಭಾರತೀಯ ರೆಸ್ಟೋರೆಂಟ್ ಒಂದಕ್ಕೆ ರಾತ್ರಿ ಊಟಕ್ಕೆ ಹೋದಾಗ ಸಿಕ್ಕವನು ಕುಮಾರ್.

ತಮಿಳುನಾಡು ಮೂಲದ ಕುಮಾರ್ ಯೂರೋಪಿನ ಸೆಳೆತಕ್ಕೆ ಸಿಲುಕಿ ವಿಸಿಟ್ ವೀಸಾ ದಲ್ಲಿ ಬಂದವನು ವಾಪಸ್ಸು ಹೋಗಿರಲಿಲ್ಲ. ಇಂತಹ ತಪ್ಪುಗಳನ್ನ ಕೇವಲ ವಿದ್ಯಾಭ್ಯಾಸವಿಲ್ಲದ ಪಾಕಿಸ್ತಾನಿಗಳು ಮಾತ್ರ ಮಾಡುತ್ತಾರೆ ಎಂದು ಅಲ್ಲಿಯವರೆಗೂ ನಾನು ಬಲವಾಗಿ ನಂಬಿದ್ದೆ. ಆದರೆ ಕುಮಾರ ಆ ನನ್ನ ನಂಬಿಕೆಯನ್ನ ಹುಸಿ ಮಾಡಿಸಿದ ಮೊದಲ ಭಾರತೀಯ. ಕುಮಾರ ಟಿಸಿಎಸ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಟೆಕ್ಕಿ. ಅದ್ಯಾವುದೋ ಘಳಿಗೆಯಲ್ಲಿ ಇಂತಹ ಒಂದು ಕೆಟ್ಟ ನಿರ್ಧಾರ ತೆಗೆದುಕೊಂಡು ಬಳಲುತ್ತಿದ್ದ.

ಪಂಜಾಬಿ ರೆಸ್ಟೋರೆಂಟ್ ನಲ್ಲಿ ಸರ್ವರ್ ಆಗಿ ಕೆಲಸ ಮಾಡುತ್ತಿದ್ದ. ಯಾರಾದರೂ ಭಾರತೀಯರು ಕಂಡರೆ ಸಾಕು ತನ್ನ ಕತೆಯನ್ನ ಹೇಳಿಕೊಂಡು , ಏನಾದರೂ ಕೆಲಸ ಕೊಡಿಸಿ ಎನ್ನುತ್ತಿದ್ದ.ಈ ವಿಷಯವನ್ನ ಪ್ರಸ್ತಾಪಿಸಲು ಪ್ರಮುಖ ಕಾರಣ ಯೂರೋಪಿನ ದೇಶಗಳಲ್ಲಿ ಇಲ್ಲಿನ ಭಾಷೆಯನ್ನ ಮಾತನಾಡಲು ಬರದೇ ಇದ್ದರೆ ಕೆಲಸ ಸಿಕ್ಕುವುದಿಲ್ಲ ಎನ್ನುವುದನ್ನ ತಿಳಿಸಿ ಹೇಳುವುದು. ಸಿಕ್ಕರೂ ಭಾರತೀಯರು ನೆಡೆಸುವ ಸೂಪರ್ ಮಾರ್ಕೆಟ್ , ಹೋಟೆಲ್ , ಹಾಸ್ಟೆಲ್ ಗಳಲ್ಲಿ ಅಥವಾ ಸಿಂಧಿಗಳು ನೆಡೆಸುವ ಸೊವಿನೀರ್ ಶಾಪ್ಗಳಲ್ಲಿ ಮಾತ್ರ ಕೆಲಸ ಸಿಗುತ್ತದೆ. ಉತ್ತಮ ದರ್ಜೆಯ ಕೆಲಸಗಳು ಸಿಗಲು ಭಾಷೆ ಬಂದರೆ ಸಾಲದು ನೆಟ್ವರ್ಕ್ ಕೂಡ ಚನ್ನಗಿರಬೇಕು .

ಏಕೆಂದರೆ ಇಂದಿಗೂ ಯೂರೋಪು ಒಂದು ಪುಟಾಣಿ ಸಂಪ್ರದಾಯಸ್ಥ ಹಳ್ಳಿ ! ಕೆಲಸಕ್ಕೆ ಸೇರಿಸಿಕೊಳ್ಳಲು ರೆಫರೆನ್ಸ್ ಬಹಳ ಮುಖ್ಯ. ಇತ್ತೀಚಿಗೆ ಇದರಲ್ಲಿ ಒಂದಷ್ಟು ಬದಲಾವಣೆ ಇದೆ. ಅಂದ ಮಾತ್ರಕ್ಕೆ ಪೂರ್ಣ ಬದಲಾಗಿದೆ ಎಂದಲ್ಲ. ಒಂದತ್ತು ಪ್ರತಿಶತ ಪರವಾಗಿಲ್ಲ. ಹೀಗೆ ಸ್ಪೇನ್ ನಲ್ಲಿ ವಿಧ್ಯಾರ್ಥಿಗಳಾಗಿ ಬಂದು ವೀಸಾ ಅವಧಿ ಮುಗಿದರೂ ವಾಪಸ್ಸು ಹೋಗದೆ , ಮಾರುಕಟ್ಟೆಯಲ್ಲಿ ಹಣ್ಣು , ತರಕಾರಿ ಮಾರುತ್ತ , ಬೀದಿ ಬದಿಯಲ್ಲಿ ಸೊವಿನೀರ್ ಮಾರುತ್ತ ಇರುವ ಅನೇಕರನ್ನ ಇಂದು ಕಾಣಬಹದು. ಈ ನಿಟ್ಟಿನಲ್ಲಿ ಯೂರೋಪಿಗೆ ವಲಸೆ ಹೋಗುವ ಮುನ್ನ ಹತ್ತು ಬಾರಿ ಯೋಚಿಸುವುದು ಒಳ್ಳೆಯದು .

ಇನ್ನು ನನ್ನಂತಹ ಡೆಸ್ಟಿನಿ ಚೈಲ್ಡ್ ಗಳ ವಿಷಯ ಬೇರೆ. ಇಲ್ಲಿಗೆ ಹೋಗಬೇಕು ಎನ್ನುವ ಪೂರ್ವನಿರ್ಧಾರಿತವಲ್ಲದ ಬದುಕು ನೂಕಿದತ್ತ ಹೊರಟವರಿಗೆ ಸಿಕ್ಕಾದೆಲ್ಲಾ ಲಾಭವೇ ಅಲ್ಲವೇ ? ಸೌತ್ ಅಮೇರಿಕಾದಿಂದ ಬಂದವರಿಗೆ ಭಾಷೆ ಬರುತ್ತಿದ್ದ ಕಾರಣ ಮತ್ತು ಕೈ ಕೆಲಸ ಕಲಿತವರಿಗೆ ಉದಾಹರಣೆಗೆ ಪ್ಲಮ್ಬರ್ , ಎಲೆಕ್ಟ್ರಿಷಿಯನ್ ಇಂತಹ ವೃತ್ತಿಯವರಿಗೆ ಹೇಗೂ ಬದುಕು ಸಾಗುತ್ತಿತ್ತು . ಪಾಕಿಸ್ತಾನಿ ಮತ್ತು ಬಾಂಗ್ಲಾದೇಶಿಗಳು ಕೂಡ ಒಗ್ಗಟ್ಟು ಮತ್ತು ಮಸೀದಿಯಿಂದ ಸಿಗುತ್ತಿದ್ದ ಸಹಾಯದಿಂದ , ಕಮ್ಯುನಿಟಿ ಲಿವಿಂಗ್ ನಲ್ಲಿ ಬದುಕು ದೂಡುತ್ತಿದ್ದರು.

ಪಂಜಾಬಿಗಳು ಅಷ್ಟೇ ಗುರುದ್ವಾರ ಇವರಿಗೆ ಸಾಕಷ್ಟು ಸಹಾಯ ಮಾಡುತ್ತಿತ್ತು . ಈ ಕಮ್ಯುನಿಟಿ ಗಳನ್ನ ಗಮನಿಸಿ ಇಲ್ಲಿ ಒಗ್ಗಟ್ಟು ಬಹಳವಿದೆ. ಆದರೆ ಪಕ್ಕದ ಮೊರೊಕ್ಕೋ ಮತ್ತು ಯೂರೋಪಿಗೆ ಸೇರಿದ ರುಮೇನಿಯ ದೇಶದ ವಲಸಿಗರಿಗೆ ಈ ಸವಲತ್ತು ಇಲ್ಲ. ಬಾರ್ಸಿಲೋನಾ ಅಂದರೆ ಸಾಕು ಪಿಕ್ ಪ್ಯಾಕೆಟ್ ಎನ್ನುವ ಮಟ್ಟದ ಕುಖ್ಯಾತಿಯನ್ನ ತಂದು ಕೊಟ್ಟದ್ದು ಮಾತ್ರ ಮೊರಕ್ಕನ್ಸ್ ಮತ್ತು ರುಮೇನಿಯಾದ ವಲಸಿಗರು. ಒಮ್ಮೆ ಮೆಟ್ರೋದಲ್ಲಿ ಪ್ರಯಾಣ ಮಾಡುತ್ತಿದ್ದೆ. ನಾನು ಇಲ್ಲಿಯಬೇಕಾದ ಸ್ಥಳ ಬಂತು .

ನಾನು ಮೆಟ್ರೋದಿಂದ ಇಳಿದು ಹೊರಗೆ ಹೋಗಲು ಇದ್ದ ಯಂತ್ರಚಾಲಿತ ಮೆಟ್ಟಿಲನ್ನ ಬಳಸಾಲು ಶುರು ಮಾಡಿದೆ. ನನ್ನ ಮುಂದೆ ಇಬ್ಬರು ಮೊರೊಕ್ಕಿಗಳು , ಹಿಂದೆ ಇಬ್ಬರು . ನನಗೆ ಇಂತಹ ಅನುಭವಾಗಿರಲಿಲ್ಲ. ಅಲ್ಲದೆ ಇಂತಹ ಊರಿನಲ್ಲಿ ಹೀಗೆ ಆಗಬಹದು ಎನ್ನುವ ಆಲೋಚನೆ ಸಹ ಇರದೇ ಇದ್ದುದರಿಂದ ನಾನು ಸ್ವಲ್ಪ ಮೈಮರೆತಿದ್ದೆ ಎಂದು ಕೂಡ ಹೇಳಬಹದು. ನನ್ನ ಮೊಬೈಲ್ ಅನ್ನು ಜೇಬಿನಲ್ಲಿ ಇತ್ತು ಕೊಂಡಿದ್ದೆ. ಆದರೂ ಅದು ಒಂಡದಿಪ್ಪತ್ತೈದು ಪ್ರತಿಶತ ಹೊರಗೆ ಇಣುಕು ಹಾಕಿ ಜಗತ್ತಿನ ಆಗುಹೋಗುಗಳನ್ನ ತಾನು ಗಮನಸಿಸುತ್ತಿತ್ತು.

https://kannada.oneindia.com/column/rangaswamy/barcelona-memories-coloumn-by-rangaswamy-mookanahalli-part-4-206844.html
ನನ್ನ ಮುಂದಿದ್ದ ಇಬ್ಬರು ಹಠಾತ್ತನೆ ನಿಂತು ಬಿಟ್ಟರು. ನಾನು ಅವರಿಗೆ ಡಿಕ್ಕಿ ಹೊಡೆದೆ ಮುಂದಕ್ಕೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಹಿಂದೆ ಇದ್ದ ಇಬ್ಬರು ನನಗೆ ಡಿಕ್ಕಿ ಹೊಡೆದರು. ಗಮನಿಸಿ ನೋಡಿ ಮುಂದೆ ಮತ್ತು ಹಿಂದೆ ಇದ್ದವರು ವ್ಯವಸ್ಥಿತವಾಗಿ ಪ್ಲಾನ್ ಮಾಡಿ ನನ್ನ ಮಧ್ಯದಲ್ಲಿ ಸಿಕ್ಕಿಸಿ ಬಿಟ್ಟಿದ್ದರು. ಏನಾಗುತ್ತಿದೆ ಎನ್ನುವ ನನ್ನ ಧಾವಂತದ ನಡುವೆ ಮೊಬೈಲ್ ಎಗರಿಸಿ ಬಿಟ್ಟಿದ್ದರು. ಅರೆಕ್ಷಣದಲ್ಲಿ ನನಗೆ ಅದು ಗೊತ್ತಾಯ್ತು. ಆದರೇನು ಮೊಬೈಲ್ ನನ್ನ ಬಳಿ ಇಲ್ಲ. ಎದುರಿಗೆ ಸಿಕ್ಕವನನ್ನ ಹಿಡಿದು ಮೊಬೈಲ್ ಕೊಡು ಎಂದೆ , ಅವನನ್ನ ತಡಕಾಡಿದೆ. ಅವನ ಬಳಿ ಇರಲಿಲ್ಲ. ಅದಾಗಲೇ ಶರವೇಗದಲ್ಲಿ ನಾಲ್ಕಾರು ಕೈ ದಾಟಿ ಹೋಗಿತ್ತು.

ಕೈಗೆ ಸಿಕ್ಕಿದ್ದ ಮೊರೊಕ್ಕಿಯನ್ನ ನಾನು ಬಿಡದೆ ಹಾಗೆ ಗಟ್ಟಿಯಾಗಿ ಹಿಡಿದು ಕೊಂಡಿದ್ದೆ. ಇಂತಹ ಕೆಲಸವನ್ನ ಇವರು ಮಾಡುತ್ತಿದ್ದಾರೆ ಎನ್ನುವುದು ಗೊತ್ತಿತ್ತು. ಆದರೆ ನಾನೇ ಒಂದು ದಿನ ಹೀಗೆ ಇವರ ಕೈಗೆ ಹೀಗೆ ಸಿಕ್ಕಿ ಹಾಕಿಕೊಳ್ಳುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಅರೆಗಳಿಗೆಯಲ್ಲಿ ಅದೇನು ಜ್ಞಾನೋದಯ ಆಯ್ತೋ ಗೊತ್ತಿಲ್ಲ. ಅವನನ್ನ ಕುರಿತು ' ಹಬೀಬಿ ನೀನು ಮತ್ತು ನಾನು ಒಂದೇ ಧರ್ಮಕ್ಕೆ ಸೇರಿದವರು , ನೀನು ಈ ರೀತಿ ಮಾಡುವುದು ಸರಿಯೇ ? ಎಂದು ಅವನ ಭಾವನೆಯನ್ನ ಕೆಣಕಿದೆ. ನಂಬಿದರೆ ನಂಬಿ ಬಿಟ್ಟರೆ ಬಿಡಿ , ಅದು ವರ್ಕ್ ಆಯ್ತು. ಮೂರಕ್ಕಿಗಳಿಗೆ ಇಂಗ್ಲಿಷ್ ಬರುವುದಿಲ್ಲ. ಆದರೂ ನಾನು ಅರಬ್ಬಿಯ ಒಂದೆರೆಡು ಪದ ಸೇರಿಸಿ ಅತಿ ಸರಳವಾದ ಇಂಗ್ಲಿಷ್ ನಲ್ಲಿ ಹೇಳಿದ್ದು ಅವನಿಗೆ ಅರ್ಥವಾಗಿತ್ತು.

Recommended Video

Virat Kohli ಜೊತೆಗೆ ನಡೆದ ವಿವಾದದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ SuryaKumar Yadav | Oneindia Kannada

ಅವನು ದೂರದಲ್ಲಿದ್ದ ತನ್ನ ಸಹಚರನ್ನ ನೋಡಿ ಏನೋ ಸನ್ನೆ ಮಾಡಿದ. ಬಂದವನು ನನ್ನ ಮೊಬೈಲ್ ವಾಪಸ್ಸು ನೀಡಿದ. ಜೇಬಿನಿಂದ ಅರ್ಧ ಕಾಣುವಂತೆ ಇಡುತ್ತೀಯ ನಿನಗೆ ಬುದ್ದಿ ಇಲ್ಲವೇ ? ಎಚ್ಚರ ಎಂದು ಅವನ ಅರೆಬರೆ ಸ್ಪ್ಯಾನಿಷ್ ನಲ್ಲಿ ನನಗೆ ಎಚ್ಚರಿಸಿ ಜನಜಂಗುಳಿಯಲ್ಲಿ ಮಾಯವಾದರು. ನಿತ್ಯವೂ ಪ್ರವಾಸಿಗರ , ಸ್ಥಳೀಯರ ಕಾಡುವ ಇಂತಹ ವಲಸಿಗರಿಂದ ,ವಲಸಿಗರು ಎಂದರೆ ಸಾಕು ಹೊಲಸು ಎನ್ನುವಂತೆ ಪರಿಸ್ಥಿತಿ ಬದಲಾಗಿದೆ. ನಮ್ಮನ್ನ ಬಲ್ಲವರಿಗೆ ಬಿಟ್ಟು ಉಳಿದವರ ಕಣ್ಣಲ್ಲಿ ನಾವೆಷ್ಟೇ ಸಭ್ಯರಾಗಿದ್ದರೂ ನಾವು ವಲಸಿಗರು ಮಾತ್ರ !

English summary
Barcelona Memories Coloumn By Rangaswamy Mookanahalli Part 6,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X