ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮೆಲ್ಲಾ ಭಿನ್ನತೆಗಳ ನಡುವೆ ಕೂಡ ನಮ್ಮನ್ನ ಬೆಸೆಯುವ ಕೊಂಡಿಗಳು ಬೇಕಾದಷ್ಟಿವೆ!

By ರಂಗಸ್ವಾಮಿ ಮೂಕನಹಳ್ಳಿ
|
Google Oneindia Kannada News

ಬಾರ್ಸಿಲೋನಾದಲ್ಲಿ ಹೆಚ್ಚು ಸಮಯವನ್ನ ಕಳೆಯುತ್ತಾ ಹೋದಂತೆಲ್ಲ ಭಾಷೆಯ ಜೊತೆಗೆ ಅವರ ಹಾವಭಾವಗಳು, ಕೆಲವು ಸಾಮಾನ್ಯ ಉದ್ಘಾರಗಳು ತಿಳಿಯುಲು ಶುರುವಾಯ್ತು. ಮಾತಿನ ಮಧ್ಯದಲ್ಲಿ ' ಅವೆರ್ ' ಎನ್ನುವುದನ್ನ ಇಲ್ಲಿ ಬಹಳಷ್ಟು ಜನ ಬಳಸುತ್ತಾರೆ. ಈ ಪದಕ್ಕೆ ಡಿಕ್ಷನರಿ ಅರ್ಥ ಲೆಟ್ಸ್ ಸಿ ಎಂದಾಗುತ್ತದೆ. ಆದರೆ ಮಾತಿನ ಮಧ್ಯ ಬಹಳಷ್ಟು ಬಾರಿ ಇದು ಯಾವುದೇ ಅರ್ಥ ನೀಡದ ಉದ್ಘಾರ. ಇನ್ನು ಕೆಲವೊಮ್ಮೆ ಅವೆರ್ ನಂತರ ಏನು ಮಾತನಾಡುತ್ತೇವೆ ಆ ಸಂದರ್ಭಕ್ಕೆ ತಕ್ಕ ಅರ್ಥವನ್ನ ಈ ಪದ ನೀಡುತ್ತದೆ.

ಪ್ರವಾಸಿಯಾಗಿಯೂ ಅಥವಾ ಕೇವಲ ಒಂದಷ್ಟು ದಿನ ಅಲ್ಲಿದ್ದು ಬರುವುದಿದ್ದರೆ , ಕೆಲವೊಂದು ಸೂಕ್ಷ್ಮಗಳು ತಿಳಿಯುವುದಿಲ್ಲ. ಕನ್ನಡದಲ್ಲಿ ಬೇರೆ ಬೇರೆ ಅರ್ಥವನ್ನ ನೀಡುವ ಒಂದೇ ಪದಗಳು ಬೇಕಾದಷ್ಟಿವೆ ಅಲ್ಲವೇ , ಹಾಗೆಯೇ ಸ್ಪ್ಯಾನಿಷ್ ನಲ್ಲಿ ಕೂಡ ಬಹಳಷ್ಟಿವೆ. ಉಚ್ಚಾರಣೆಯಲ್ಲಿ ಒಂದಷ್ಟು ಬದಲಾದರೂ ಸಾಕು ಅದು ಪರಿಪೂರ್ಣ ಬೇರೆಯ ಅರ್ಥವನ್ನ ನೀಡುವ ಪದಗಳಿಗೂ ಕನ್ನಡದಲ್ಲಿ ಕೊರತೆಯಿಲ್ಲ . ಅಂತೆಯೇ ಸ್ಪ್ಯಾನಿಷ್ನಲ್ಲಿ ಕೂಡ ಇಂತಹ ಪದಗುಚ್ಛಗಳು ಬಹಳವಿವೆ. ಹಾಯ್ (HAY) ಎಂದರೆ ಇದೆ ಎಂದರ್ಥ. ಹೊಯ್ (HOY) ಎಂದರೆ ಇಂದು , ಟುಡೇ ಎನ್ನುವ ಅರ್ಥವನ್ನ ನೀಡುತ್ತದೆ.

ಬದುಕು ನಮ್ಮ ಅನುಭವಗಳ ಒಟ್ಟು ಮೊತ್ತ, ಇಂದಿಗೆ ನಿಷಿದ್ಧ ಅನ್ನಿಸಿದ್ದು ನಾಳೆ ಪ್ರಸಿದ್ಧವಾಗಬಹದು!ಬದುಕು ನಮ್ಮ ಅನುಭವಗಳ ಒಟ್ಟು ಮೊತ್ತ, ಇಂದಿಗೆ ನಿಷಿದ್ಧ ಅನ್ನಿಸಿದ್ದು ನಾಳೆ ಪ್ರಸಿದ್ಧವಾಗಬಹದು!

ಹೀಗೆ ನಾವು ಮಾತಿನಲ್ಲಿ ಹಲವಾರು ಗಾದೆ ಮಾತುಗಳನ್ನ , ಆಡುಮಾತುಗಳನ್ನ ಬಳಸುತ್ತೇವೆ ಅಲ್ಲವೇ ? ಇಲ್ಲಿನ ಜನರು ಕೂಡ ಮಾತಿನ ನಡುವೆ ಗಾದೆ ಮಾತುಗಳನ್ನ ಬಳಸುತ್ತಾರೆ. ಹೆಚ್ಚು ಸಮಯ ಇಲ್ಲಿ ಕಳೆಯುತ್ತಾ ಹೋದಂತೆ , ಆಫೀಸ್ ನಲ್ಲಿ ಕೆಲಸ ಮಾಡುವವರ ಹೊರತು ಪಡಿಸಿ ಕೂಡ ಅನೇಕೆ ಸ್ನೇಹಿತರು ಸಿಗುತ್ತಾ ಹೋದರು. ಹೆಚ್ಚು ಹೆಚ್ಚು ಇಲ್ಲಿನ ಜನರ ಜೊತೆ ಬೆರೆಯುತ್ತಾ ಹೋದಂತೆಲ್ಲ ಇವರಿಗೂ ನಮಗೂ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ ಅನ್ನಿಸತೊಡಗಿತು .

Barcelona Memories Coloumn By Rangaswamy Mookanahalli Part 5

ಹೀಗೆ ಅನ್ನಿಸಲು ಪ್ರಮುಖ ಕಾರಣ ಬಾರ್ಸಿಲೋನಾ ನಗರಕ್ಕೆ ನಮ್ಮಲ್ಲಿ ಊರ ಹಬ್ಬ , ಊರ ದೇವತೆ ಇದೆ . ಮೊನ್ಸರಾತ್ ಎನ್ನುವ ನಮ್ಮ ಚಾಮುಂಡಿ ಬೆಟ್ಟವನ್ನ ಹೋಲುವ ಒಂದು ಬೆಟ್ಟವಿದೆ. ಇಲ್ಲಿ ಸಂತ ಮಾರಿಯ ದೆ ಮೊನ್ಸರಾತ್ ಎನ್ನುವ ಚರ್ಚು ಇದೆ. ಸಂತ ಮಾರಿಯ ಬಾರ್ಸಿಲೋನಾ ನಗರವನ್ನ ಎಲ್ಲಾ ಕೆಟ್ಟ ಶಕ್ತಿಗಳಿಂದ ಕಾಪಾಡುತ್ತಾರೆ ಎನ್ನುವ ನಂಬಿಕೆ ಇಲ್ಲಿಯವರದು.

ಹೀಗೆ ಒಂದು ದಿನ ಪಕ್ಕದ ಲಂಡನ್ ನಗರಕ್ಕೆ ಹೋಗೋಣ ಎನ್ನುವ ಯೋಜನೆಯನ್ನ ಮಾಡಿಕೊಂಡು ಗೆಳೆಯ ಕಾರ್ಲೋಸ್ ನನ್ನ ಕೇಳಿದೆ. ನಾಲ್ಕೈದು ದಿನ ರಜಾ ಬೇರೆ ಇತ್ತು. ಅಂದಹಾಗೆ ಸ್ಪೇನ್ ನಲ್ಲಿ ಕೂಡ ಬಾರದಂತೆ ಬಹಳ ರಜಾ ಇರುತ್ತದೆ. ಆಯಾ ಪ್ರಾಂತ್ಯದಲ್ಲಿ ಅಲ್ಲಿನ ನಂಬಿಕೆಗಳಿಗೆ ಅನುಗುಣವಾಗಿ ಸಣ್ಣ ಪುಟ್ಟ ಹಬ್ಬಗಳಿಗೂ ರಜಾ ನೀಡುವುದು ಕೂಡ ಇಲ್ಲಿ ಸಾಮಾನ್ಯ. ನಾನು ಮಂಗಳವಾರ ಹೊರತು ಶುಕ್ರವಾರ ವಾಪಸ್ಸು ಬರುವುದು ಎಂದು ಕೊಂಡಿದ್ದೆ. ಕಾರ್ಲೋಸ್ ಹೆಚ್ಚು ಕಡಿಮೆ ನನ್ನ ವಯಸ್ಸಿನವನು ಅವನು ' ಮಾರ್ತೇಸ್ ನೀ ಕಾಸೆಸ್ , ನೀ ಎಂಬಾರ್ಕೇಸ್ ' ಎಂದ .

ಅಂದರೆ ಮಂಗಳವಾರ ಮದುವೆ ಆಗಬೇಡ , ವಿಮಾನವನ್ನ ಕೂಡ ಹತ್ತಬೇಡ' ಎನ್ನುವ ಅರ್ಥ. ಅಯ್ಯೋ ಇದೊಳ್ಳೆ ಪಜೀತಿ ಆಯ್ತಲ್ಲ ಎಂದು. ಏಕೆ ಕಾರ್ಲೋಸ್ ಏನಾಯ್ತು ? ಎಂದು ಪ್ರಶ್ನಿಸಿದ್ದೆ. ದಕ್ಕವನು ನಮ್ಮಜಿ , ನಮ್ಮಮ್ಮ ಎಲ್ಲರೂ ಇದನ್ನೇ ಹೇಳುತ್ತಾ ಬಂದಿದ್ದಾರೆ. ಮಂಗಳವಾರ ಶುಭ ಕೆಲಸ ಮಾಡುವಂತಿಲ್ಲ ಎಂದ. ಅದಕ್ಕೆ ಅಲ್ಲಿನ ಸಮಾಜದಲ್ಲಿ ಅಂದಿನ ಕಾಲಘಟ್ಟದಲ್ಲಿ ಏನೂ ಅರ್ಥ ಖಂಡಿತ ಇರುತ್ತದೆ. ಆದರೆ ಇಂದಿನವರಿಗೆ ಅದರ ಅರ್ಥ ತಿಳಿದಿಲ್ಲ. ಆದರೂ ಮಂಗಳವಾರ ಇಲ್ಲಿ ಅಶುಭ ಎನ್ನವುದು ಎಲ್ಲರ ಮನಸ್ಸಿನಲ್ಲಿ ಅಲ್ಲದಿದ್ದರೂ ಇನ್ನೂ ಹಲವಾರು ಜನರ ಮನದಲ್ಲಿ ಉಳಿದಿದೆ.

ಬದುಕೆಂದರೆ ಇಷ್ಟೇ.. ಎಲ್ಲವನ್ನ ಮೀರಿ ನಮ್ಮನ್ನ ಬೆಸೆಯುತ್ತದೆ ಯಾವುದೋ ಒಂದು ಶಕ್ತಿಬದುಕೆಂದರೆ ಇಷ್ಟೇ.. ಎಲ್ಲವನ್ನ ಮೀರಿ ನಮ್ಮನ್ನ ಬೆಸೆಯುತ್ತದೆ ಯಾವುದೋ ಒಂದು ಶಕ್ತಿ

ಉಳಿದಂತೆ ವಿಮಾನವನ್ನ ಏರಲು ಬಹಳಷ್ಟು ಜನ ಇಷ್ಟ ಪಡುವುದಿಲ್ಲ. ಯಾವುದೇ ದೃಢವಾದ ವಸ್ತುವಿನ ಆಸರೆಯಿಲ್ಲದೆ ಆಕಾಶದಲ್ಲಿ ತೇಲಾಡುವ ವಿಮಾನವನ್ನ ಅಪನಂಬಿಕೆಯಿಂದ ನೋಡುವರ ಸಂಖ್ಯೆಯೂ ಕಡಿಮೆಯಿಲ್ಲ. ಸಂಖ್ಯೆ 13 ಕುರಿತು ಕೂಡ ಬಹಳಷ್ಟು ಸ್ಪೇನ್ ಅಂತಲ್ಲ ಸಾಮಾನ್ಯವಾಗಿ ಯೂರೋಪಿನಲ್ಲಿ ಅದು ದುರದೃಷ್ಟದ ಸಂಖ್ಯೆ ಎನ್ನುವ ಭಾವನೆಯಿದೆ. ಹೀಗಾಗಿ ಹಲವಾರು ಕಟ್ಟಡದಲ್ಲಿ 12ನ ನಂತರ 12ಎ ಅಂತಲೋ ಅಥವಾ ನೇರವಾಗಿ 14 ಅಂತಲೋ ಉಲ್ಲೇಖಿಸುತ್ತಾರೆ. ಇನ್ನು ದೆವ್ವ , ಭೂತ , ಆತ್ಮಗಳಲ್ಲಿ , ಕರ್ಮ ದಲ್ಲಿ ಕೂಡ ನಂಬಿಕೆ ಉಂಟು , ಆದರೆ ಬಹುತೇಕ ಜನರು ಪುನರ್ಜನ್ಮವನ್ನ ನಂಬುವುದಿಲ್ಲ.

ದೂರದಿಂದ ನೋಡಿದಾಗ ಇವರಲ್ಲಿ ಕುಟುಂಬ ವ್ಯವಸ್ಥೆ ಬಹಳ ಕೆಟ್ಟದಾಗಿದೆ. ವಿಚ್ಛೇದನ ಜಾಸ್ತಿ ಎನ್ನುವಂತೆ ಕಾಣುತ್ತದೆ. ವಿಚ್ಚೇದನ ಎನ್ನುವುದು ಈಗ ಜಗತ್ತಿನಾದ್ಯಂತ ಸೇಮ್ ಎನ್ನುವಂತಾಗಿದೆ. ಸ್ಪೇನ್ ಮತ್ತು ಇಟಲಿಯಲ್ಲಿ ಬೇರೆ ದೇಶಗಳಿಗಿಂತ ಉತ್ತಮ ಕುಟುಂಬ ವ್ಯವಸ್ಥೆಯಿದೆ. ಕೆಲಸಕ್ಕೆ ಹೋಗುವ ಮಹಿಳೆಯರು ತಮ್ಮ ಮಕ್ಕಳನ್ನ ಅಮ್ಮನ ಬಳಿ ಅಂದರೆ ಮಗುವನ್ನ ಅಜ್ಜಿಯ ಮನೆಯಲ್ಲಿ ಬಿಟ್ಟು ಹೋಗುವುದು ಇಲ್ಲಿ ಅತ್ಯಂತ ಸಾಮಾನ್ಯ. ಮದುವೆ ಆಗುವವರೆಗೆ ಬಹಳಷ್ಟು ಕುಡಿತ -ಕುಣಿತ -ಓಡಾಟದಲ್ಲಿ ಸಮಯ ಕಳೆಯುವ ಜನ ಆ ನಂತರ ಬದುಕನ್ನ ಸೀರಿಯಸ್ಸಾಗಿ ತೆಗೆದುಕೊಳ್ಳುತ್ತಾರೆ. ಇದು ಮೆಜಾರಿಟಿ ಜನರ ಕಥೆ. ಅಪವಾದಗಳು ಎಲ್ಲಾ ವಿಷಯದಲ್ಲೂ ಇದ್ದೆ ಇರುತ್ತವೆ ಅಲ್ಲವೇ ?

ಹೀಗೆ ಸ್ಪ್ಯಾನಿಷ್ ಬದುಕನ್ನ ಹತ್ತಿರದಿಂದ ನೋಡುತ್ತಾ ಬಂದಂತೆ ಒಂದು ವಿಷಯ ಸ್ಪಷ್ಟವಾಯ್ತು . ನಮ್ಮೆಲ್ಲಾ ಭಿನ್ನತೆಗಳ ನಡುವೆ ಕೂಡ ನಮ್ಮನ್ನ ಬೆಸೆಯುವ ಕೊಂಡಿಗಳು ಬೇಕಾದಷ್ಟಿವೆ. ಈ ಅನುಭವ ವಿದೇಶಕ್ಕೆ ಹೋದವರ ಅಥವಾ ಬಹಳಷ್ಟು ವರ್ಷ ವಿದೇಶದಲ್ಲಿ ಇದ್ದವರು ಬದುಕನ್ನ ಕಾಣುವ ರೀತಿಯನ್ನ ಐದು ಹಂತಗಳನ್ನಾಗಿ ವಿಭಾಗಿಸಬಹುದು ಎನ್ನುವುದು ಕಲಿಸಿದೆ .

ಮೊದಲ ಹಂತದಲ್ಲಿ ನಾವು ಯಾವ ದೇಶಕ್ಕೆ ಹೋಗಿರುತ್ತೇವೆ ಅದು ತುಂಬಾ ಸುಂದರ , ಇಲ್ಲಿನ ವ್ಯವಸ್ಥೆ ಅತ್ಯಂತ ಪರ್ಫೆಕ್ಟ್. ಇಲ್ಲಿ ಎಲ್ಲವೂ ಚನ್ನಾಗಿದೆ ಎನ್ನುವುದು ಸಾಮಾನ್ಯವಾಗಿರುತ್ತದೆ. ಆದರೆ ನಾವು ಮೊದಲ ದಿನ ಆಡಿದ ಮಾತು , ಕಂಡ ನೋಟಗಳು ಕೊನೆಯ ತನಕ ಉಳಿದುಕೊಳ್ಳುವುದಿಲ್ಲ. ಬದುಕೆಂದರೆ ಅದು ಬದಲಾವಣೆ. ಎರಡನೇ ಹಂತದಲ್ಲಿ ಬಿಟ್ಟು ಬಂದ ದೇಶದಲ್ಲಿ ಯಾವುದೂ ಸರಿಯಿಲ್ಲ . ಅದು ದುರವಸ್ಥೆಯ ಕೂಪ. ಏನಾದರೂ ಸರಿಯೇ ಮತ್ತೆಂದೂ ಅಲ್ಲಿಗೆ ಮರಳಿ ಹೋಗಲಾರೆ ಎನ್ನುವ ಭಾವನೆ ಹೆಚ್ಚಾಗಿರುತ್ತದೆ.

ಮೂರನೇ ಹಂತದಲ್ಲಿ ನಿಧಾನವಾಗಿ ನಾವು ನೆಲೆ ಕಂಡುಕೊಂಡ ದೇಶದ ಲೋಪದೋಷಗಳು , ಇಲ್ಲಿನ ಸಮಾಜದಲ್ಲಿ ಇರುವ ಹುಳುಕುಗಳು ಕಾಣತೊಡಗುತ್ತದೆ. ಅಯ್ಯೋ ಇವರು ನಮ್ಮಂತೆ , ಅಂತಹ ವ್ಯತ್ಯಾಸವೇನೂ ಇಲ್ಲ ಎನ್ನುವ ಭಾವನೆ ಶುರುವಾಗುತ್ತದೆ. ನಾಲ್ಕನೇ ಹಂತದಲ್ಲಿ ತನ್ನ ಮೂಲ ದೇಶದಲ್ಲಿ ಸಿಗುತ್ತಿದ್ದ ಕೆಲವು ಸೇವೆ , ಸರುಕುಗಳ ಕೊರತೆ ಕಾಡಲು ಶುರುವಾಗುತ್ತದೆ. ಅದರಲ್ಲೂ ಮಕ್ಕಳ ವಿದ್ಯಾಭ್ಯಾಸದ ವಿಷಯ ಬಂದಾಗ ಯೂರೋಪಿನಲ್ಲಿ ನೆಲೆ ನಿಂತವರು ಯೋಚಿಸಲು ಶುರು ಮಾಡುತ್ತಾರೆ.

ಭಾಷೆ ಬಾರದ ದೇಶದಲ್ಲಿ ಶುರುವಾಯ್ತು ಬದುಕು !ಭಾಷೆ ಬಾರದ ದೇಶದಲ್ಲಿ ಶುರುವಾಯ್ತು ಬದುಕು !

ಐದನೇ ಹಂತದಲ್ಲಿ ಎಲ್ಲಿದ್ದರೇನು ? ನಾವು ಪ್ರಸ್ತುತರಾಗಿರಬೇಕು ಎನ್ನುವ ಮನಸ್ಥಿತಿ ಬರುತ್ತದೆ. ಮೇಲೆ ಹೇಳಿದ ಸ್ಥಿತಿ ಎಲ್ಲರಿಗೂ ಆಗಬೇಕೆಂದಿಲ್ಲ . ಬಹಳಷ್ಟು ಜನ ಐದನೆಯ ಹಂತವನ್ನ ತಲುಪಿ ಕೂಡ ಅಲ್ಲೇ ಉಳಿದುಕೊಳ್ಳುತ್ತಾರೆ. ಭಾರತಕ್ಕೆ ಮರಳಿ ಬರುವುದು ಮತ್ತು ಇಲ್ಲಿನ ವ್ಯವಸ್ಥೆಗೆ ಮತ್ತೆ ಹೊಂದಿಕೊಳ್ಳುವುದು ಬಹಳ ಕಷ್ಟದ ಕೆಲಸ.

ಅದು ಫೆಬ್ರವರಿ 2011ರ ಸಮಯ ಬೆಳೆಗ್ಗೆಯಿಂದ ಸ್ಪ್ಯಾನಿಷ್ ಮಿತ್ರರು ನ್ಯೂಸ್ ನೋಡಿ ಒಂದೇ ಸಮ ಏಕೆ ನಿಮ್ಮ ದೇಶ ಹೀಗೆ? ಎಂದು ಕೇಳಲು ಶುರು ಮಾಡಿದರು . ಕುಂಭಮೇಳದಲ್ಲಿ ಕಾಲ್ತುಳಿತ ಉಂಟಾಗಿ ನೂರಾರು ಜನ ಸತ್ತದ್ದು ಇಂಟೆರ್ನ್ಯಾಷನಲ್ ನ್ಯೂಸ್ ಆಗಿತ್ತು . ಈ ಸಮಯಕ್ಕಾಗಲೇ ನನ್ನ ಸ್ಪಾನಿಷ್ ಭಾಷೆಯ ಗ್ರಹಿಕೆ ಮಜಬೂತಾಗಿತ್ತು . ಅಲ್ಲಿನ ಗಾದೆಗಳು ಆಡುಮಾತುಗಳನ್ನ ಮಾತಿನ ಮಧ್ಯೆ ಉದಾಹರಿಸುವ ಮಟ್ಟಕ್ಕೆ ಅವರ ಸಂಸ್ಕಾರದಲ್ಲಿ ಒಂದಾಗಿ ಹೋಗಿದ್ದೆ.

ಅವರಿಗೆ ತಿಂಗಳ ಕೆಳಗೆ ಮ್ಯಾಡ್ರಿಡ್'ನ ಮ್ಯೂಸಿಕ್ ಕಾನ್ಸರ್ಟ್'ನಲ್ಲಿ ಹೀಗೆ ಕಾಲ್ತುಳಿತದಲ್ಲಿ 5/6 ಜನ ಸತ್ತದ್ದನ್ನೆ ಉದಾಹರಿಸಿ ಹೇಳಿದೆ. Cada uno habla de la feria segun le va en ella. (ಕಾದ ಉನೊ ಹಬ್ಲಾ ದೇ ಲ ಫೆರಿಯ ಸೆಗುನ್ ಲೇ ವ ಇನ್ ಯೆಯ್ಯಾ ) . ನನ್ನ ಸ್ಪಾನಿಷ್ ಮಿತ್ರರು ಸುಮ್ಮನಾದರು . ಈ ಗಾದೆಯ ಅರ್ಥ ಇಷ್ಟೇ ಪ್ರತಿಯೊಬ್ಬರೂ ತಾವು ಕಂಡ ಜಾತ್ರೆಯ ಚಿತ್ರಣ ತಮಗೆ ಕಂಡಂತೆ ಚಿತ್ರಿಸುತ್ತಾರೆ ಎನ್ನುವುದು . ಎಷ್ಟು ನಿಜ ಅಲ್ವಾ? ನಮ್ಮ ಅರ್ಥಕ್ಕೆ ನಮ್ಮ ಅನುಭವಕ್ಕೆ ದಕ್ಕಿದ್ದರ ಬಗ್ಗೆ ನಾವು ಬರೆಯುತ್ತೇವೆ , ಮಾತನಾಡುತ್ತೇವೆ . ವಸ್ತುಸ್ಥಿತಿ ಅದಕ್ಕಿಂತ ಭಿನ್ನವಿರಬಹುದಲ್ಲ ?

ವಸ್ತುಸ್ಥಿತಿಯನ್ನ ಯಥಾವತ್ತಾಗಿ ಚಿತ್ರಿಸುವುದು , ಇದ್ದದ್ದ ಇದ ಹಾಗೆ ಹೇಳುವುದು ಇಂದಿನ ದಿನದಲ್ಲಿ ಕಡಿಮೆ. ಎಲ್ಲರೂ ವಾರ ಮೂಗಿನ ನೇರಕ್ಕೆ ಮಾತನಾಡುತ್ತಾರೆ. ನಾವೇನೇ ಹೇಳಲಿ , ಬುದ್ದಿವಂತ ಓದುಗ ನಿಜ ಸ್ಥಿತಿಯನ್ನ ಬಹುಬೇಗ ಗ್ರಹಿಸುತ್ತಾನೆ. ಇರಲಿ. ದೇಶದಿಂದ ದೇಶಕ್ಕೆ ಬದುಕುವ ರೀತಿ ಬದಲಾಗುತ್ತಾ ಹೋಗುತ್ತದೆ. ಭಾಷೆ , ವೇಷ , ಆಹಾರ ಎಲ್ಲವೂ ಬದಲಾಗುತ್ತದೆ. ಒಂದಷ್ಟು ದಿನ ನೆಲೆ ನಿಂತು ಪ್ರೀತಿಯ ಕಣ್ಣಿಂದ ನೋಡಿದಾಗ ವ್ಯತ್ಯಾಸಗಳು ಕಡಿಮೆ ಎನಿಸತೊಡಗುತ್ತದೆ. ನಮ್ಮ ಪಲಾವ್ ಬಾರ್ಸಿಲೋನಾದ ' ಪೆಯೆಯ್ಯ ' ದಲ್ಲಿ ಕಾಣಿಸ ತೊಡಗುತ್ತದೆ. ಬದುಕು ಆಪ್ತವಾಗುತ್ತ ಹೋಗುತ್ತದೆ.

English summary
Barcelona Memories Coloumn By Rangaswamy Mookanahalli Part 5.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X