ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗತ್ತಿನ ಒಂದು ಭಾಗ ಚೆನ್ನಾಗಿ ಬಾಳಬೇಕೆಂದರೆ ಉಳಿದರ್ಧವೇಕೆ ಸಾಯಬೇಕು? ಕ್ರೂಜ್ ಶಿಪ್ಪಿನ ಕಥೆ!

By ರಂಗಸ್ವಾಮಿ ಮೂಕನಹಳ್ಳಿ
|
Google Oneindia Kannada News

ಸ್ಪೇನ್ ನಲ್ಲಿ ಸರಕಾರಿ ಕೆಲಸಗಾರರಿಗೂ ಮತ್ತು ಖಾಸಗಿ ಸಂಸ್ಥೆಗಳಲ್ಲಿ ದುಡಿಯುವರಿಗೂ ಅಂತಹ ವ್ಯತ್ಯಾಸವೇನಿಲ್ಲ . ಇದಕ್ಕೆ ಮುಖ್ಯ ಕಾರಣ ಇಲ್ಲಿ ಎಲ್ಲರಿಗೂ ನಿವೃತ್ತಿ ಭತ್ಯೆಯಿದೆ . ಕೆಲಸ ಹೋದರೆ ಎರಡು ವರ್ಷದ ವರೆಗೆ ಆನ್ ಎಂಪ್ಲಾಯ್ಮೆಂಟ್ ಭತ್ಯೆ ಕೂಡ ಸಿಗುತ್ತೆ . ಎಲ್ಲಕೂ ಮುಖ್ಯವಾಗಿ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಒಂದು ತಿಂಗಳು ಎಲ್ಲರಿಗೂ ಕಡ್ಡಾಯ ರಜಾ ಸಿಗುತ್ತೆ . ಇದಕ್ಕಿಂತ ಖುಷಿಯ ವಿಷಯವೆಂದರೆ ಆ ತಿಂಗಳಲ್ಲಿ ವೇತನ ಕೂಡ ದುಪಟ್ಟು ಕೊಡುತ್ತಾರೆ .

ಗೋ ಔಟ್ ಅಂಡ್ ಸೀ ದಿ ವರ್ಲ್ಡ್ ಎನ್ನುವುದು ಧ್ಯೇಯಘೋಷ . ಇನ್ನು ಡಿಸೆಂಬರ್ ನಲ್ಲಿ ಕೂಡ ಹತ್ತು ಅಥವಾ ಹನ್ನೆರಡನೇ ತಾರೀಕಿನಿಂದ ರಜಾ ಶುರು ಮತ್ತೆ ಕೆಲಸಗಳು ಶುರುವಾಗುವುದು ಜನವರಿ 7ಕ್ಕೆ , ಅಂದರೆ ಬರೋಬ್ಬರಿ ಮೂರು ವಾರ ಮತ್ತೆ ರಜಾ . ಮತ್ತೆ ಖುಷಿಯ ಮತ್ತು ಆಶ್ಚರ್ಯದ ವಿಷಯವೆಂದರೆ ಸಂಬಳ ದುಪಟ್ಟು ಕೊಡುತ್ತಾರೆ . ಈ ಬಾರಿ ಕುಟುಂಬದೊಂದಿಗೆ ಉಳಿದುಕೊಳ್ಳಿ , ಕ್ರಿಸ್ಮಸ್ ಆಚರಿಸಿ ಎನ್ನುವುದು ಥೀಮ್ .

ನಾನು-ನೀವು -ಅವರು, ಯಾರಾದರೇನು? ಎಲ್ಲರೂ ಒಂದಲ್ಲ ಒಂದು ನಂಬಿಕೆಯಲ್ಲಿ ಬಂಧಿಗಳೇ ಅಲ್ಲವೇನು ? ನಾನು-ನೀವು -ಅವರು, ಯಾರಾದರೇನು? ಎಲ್ಲರೂ ಒಂದಲ್ಲ ಒಂದು ನಂಬಿಕೆಯಲ್ಲಿ ಬಂಧಿಗಳೇ ಅಲ್ಲವೇನು ?

ಇದು ಇಲ್ಲಿನ ಜನ ವೇದವಾಕ್ಯದಂತೆ ಪಾಲಿಸುತ್ತಾರೆ . ಅಂದರೆ ಎಫ್ಫೆಕ್ಟಿವ್ ಆಗಿ ಹತ್ತು ತಿಂಗಳು ದುಡಿದರೆ ಹದಿನಾಲ್ಕು ತಿಂಗಳ ಸಂಬಳ ಸಿಗುತ್ತದೆ . ಇದು ಸರಕಾರಿ ನೌಕರರಿಗೆ ಮಾತ್ರವಲ್ಲ ಎಲ್ಲರಿಗೂ ಸಿಗುತ್ತದೆ . ರಸ್ತೆ ಬದಿಯ ಕಸ ಬಾಚುವ ವ್ಯಕ್ತಿಗೂ ಈ ರೂಲ್ ಅಪ್ಲೈ ಆಗುತ್ತೆ . ಇಂಗ್ಲೆಂಡ್ ಇದಕ್ಕೆ ಹೊರತು . ಬೇರೆಯ ಯೂರೋಪಿಯನ್ ದೇಶಗಳು ಬಹುತೇಕ ಇದೆ ಆಚರಣೆಯನ್ನು ಅನುಸರಿಸುತ್ತವೆ .

Barcelona Memories Coloumn By Rangaswamy Mookanahalli Part 16

ಜೀವನ ಮಟ್ಟ ಯೂರೋಪಿನ ದೇಶಗಳಲ್ಲಿ ಅತ್ಯುನ್ನತ . ಇದೆ ಮಾತನ್ನ ಇಂಗ್ಲೆಂಡ್ ಮತ್ತು ಅಮೇರಿಕಾ ದೇಶಕ್ಕೆ ಅನ್ವಯಿಸಲು ಬರುವುದಿಲ್ಲ . ತಿಂಗಳು ಗಟ್ಟಲೆ ಯೂರೋಪ್ ನಂತೆ ಸಾಮಾನ್ಯರಿಗೂ ರಜಾ ಸಿಗುವುದು ಕಷ್ಟ . ಇರಲಿ . 2014ರ ಆಗಸ್ಟ್ ತಿಂಗಳು ಪೂರ್ತಿ ರಜಾ . ಅನನ್ಯ ಐದು ವರ್ಷದ ಕೂಸು , ಇವಳನ್ನ ಕರೆದು ಕೊಂಡು ವಿಮಾನದಲ್ಲಿ ಹೋಗುವುದು , ಜೊತೆಗೆ ಪ್ರವಾಸಿ ತಾಣವನ್ನ ಸುತ್ತುವುದು ಎಷ್ಟು ಕಷ್ಟ ಎನ್ನುವ ಅರಿವಾಗಿತ್ತು .

ಹೊರಗಿನಿಂದ ಎಷ್ಟೇ ಪ್ರೇರೇಪಣೆ ಸಿಕ್ಕರೂ ಅದು ಮನಸ್ಸಿನ ಕೂಗಿಗೆ ಸಮವಲ್ಲ! ಹೊರಗಿನಿಂದ ಎಷ್ಟೇ ಪ್ರೇರೇಪಣೆ ಸಿಕ್ಕರೂ ಅದು ಮನಸ್ಸಿನ ಕೂಗಿಗೆ ಸಮವಲ್ಲ!

ಅನನ್ಯ ಆರು ವಾರದ ಮಗುವಾಗಿದ್ದಾಗ ಅವಳನ್ನ ಸ್ಕಾಟ್ಲೆಂಡ್ ಗೆ ಕರೆದುಕೊಂಡು ಹೋಗಿದ್ದೆವು . ಮರಳಿ ಬರುವಾಗ ಅವಳು 400ಗ್ರಾಂ ತೂಕ ಕಳೆದುಕೊಂಡಿದ್ದಳು . ವೈದ್ಯರು ನಮಗೆ ಛೀಮಾರಿ ಕೂಡ ಹಾಕಿದ್ದರು . ನಮ್ಮ ಊರು ಸುತ್ತುವ ಹುಚ್ಚಿಗೆ ಮಗುವಿನ ಆರೋಗ್ಯ ಕೆಟ್ಟರೆ ? ಎನ್ನುವ ಭಯವಿತ್ತು . ಹೀಗಾಗಿ ಏಳು ದೇಶಗಳನ್ನ ಸುತ್ತುವ ಕ್ರೂಜ್ ನಲ್ಲಿ ಹೋಗುವುದು ಎಂದು ತೀರ್ಮಾನಿಸಿದೆವು .

ನಾವು ಆಯ್ಕೆ ಮಾಡಿದ್ದ ಕ್ರೂಜ್ ಅಂದಿಗೆ ವಿಶ್ವದ ಅತ್ಯಂತ ದೊಡ್ಡ ಕ್ರೂಜ್ ಎನ್ನುವ ಹಣೆಪಟ್ಟಿ ಹೊತ್ತಿತ್ತು . ಆ ಕ್ರೂಜ್ ಶಿಪ್ ಹನ್ನೆರೆಡು ಮಹಡಿಯ ಕಟ್ಟಡ ! .ಹೆಸರು ಲಿಬರ್ಟಿ ಆಫ್ ಸೀಸ್ . ಅದರಲ್ಲಿ 5200 ಜನ ಪ್ರಯಾಣಿಕರಿದ್ದೆವು . 3800 ಜನ ಗೆಸ್ಟ್ ಗಳು . ಉಳಿದ 1400 ಜನ ಆ ಶಿಪ್ ನಲ್ಲಿ ಕೆಲಸ ಮಾಡುವ ಜನ . ನಿಜ ಅದೊಂದು ಪುಟ್ಟ ನಗರವಿದ್ದಂತೆ . ಗೆಸ್ಟ್ ಗಳ ಬೇಕು ಬೇಡವನ್ನ ನೋಡಿಕೊಳ್ಳಲು ಅಷ್ಟೊಂದು ಜನ ಸಿಬ್ಬಂದಿ .

ಯಾವುದೇ ಕಾರಣಕ್ಕೂ ಗೆಸ್ಟ್ ಗೆ ಬೇಜಾರಾಗಬಾರದು ಎನ್ನುವುದು ಅವರ ಮೂಲಮಂತ್ರ . ಅದೊಂದು ಮಾಯಾನಗರಿ . ನಾವು ಪ್ರವೇಶ ಮಾಡುತ್ತಿದಂತೆ ಕೈಗೆ ಒಂದು ಬ್ಯಾಂಡ್ ತೊಡಿಸುತ್ತಾರೆ . ಅದು ನಮ್ಮ ದರ್ಜೆ ತೋರಿಸುವ ಬ್ಯಾಂಡ್ . ಇಲ್ಲಿ ರೂಮ್ ಕೂಡ ಕಾಸಿಗೆ ತಕ್ಕಂತೆ ಸಿಗುತ್ತವೆ .ಮಕ್ಕಳ ಕೈಗೂ ಬ್ಯಾಂಡ್ ಹಾಕುತ್ತಾರೆ . ಆಕಸ್ಮಾತ್ ಅವುಗಳು ನಮ್ಮಿಂದ ತಪ್ಪಿಸಿಕೊಂಡರೆ ಹೆದರುವ ಅವಶ್ಯಕತೆ ಇಲ್ಲ ! ಅವರನ್ನ ಸುಲಭವಾಗಿ ಟ್ರಾಕ್ ಮಾಡಬಹದು .

ಬಾಲ್ಕನಿ ಇರುವ ರೂಮ್ ಅತ್ಯಂತ ಹೆಚ್ಚಿನ ಬೆಲೆ ಉಳ್ಳದ್ದು . ಕಿಟಕಿ , ಹೊರಗಿನ ಯಾವುದೇ ವ್ಯೂ ಇಲ್ಲದ ಕೊಠಡಿಗೆ ಬೆಲೆ ಕಡಿಮೆ . ಅವರವರ ಜೇಬಿಗೆ ತಕ್ಕಂತೆ ಬುಕ್ ಮಾಡಿಕೊಳ್ಳಬಹದು . ನಾವು ಸಮುದ್ರದ ವ್ಯೂ ಇರುವ ಬಾಲ್ಕನಿ ರೂಮ್ ಬುಕ್ ಮಾಡಿದ್ದೆವು . ರಾತ್ರಿಯಲ್ಲಿ ಬಾಲ್ಕನಿಯಲ್ಲಿ ಕುಳಿತು ಸಮುದ್ರದ ಮೇಲಿನ ಹನ್ನೆರಡು ದಿನದ ಪ್ರಯಾಣ ಜೀವನದ ಅತ್ಯಂತ ಅಮೂಲ್ಯ ನೆನಪುಗಳಲ್ಲಿ ಒಂದು .

ನಮ್ಮ ಮಾತೃ ಭಾಷೆಯನ್ನ ಪ್ರೀತಿಸಬೇಕು, ಹಾಗೆಂದು ಬೇರೆ ಭಾಷೆಯನ್ನ ದ್ವೇಷಿಸಬಾರದು ನಮ್ಮ ಮಾತೃ ಭಾಷೆಯನ್ನ ಪ್ರೀತಿಸಬೇಕು, ಹಾಗೆಂದು ಬೇರೆ ಭಾಷೆಯನ್ನ ದ್ವೇಷಿಸಬಾರದು

ಕ್ರೂಜ್ ಬುಕ್ ಮಾಡುವವರು ಒಂದು ಅಂಶವನ್ನ ನೆನಪಿಡಬೇಕು . ಬುಕಿಂಗ್ ಮಾಡುವಾಗ ಟಿಪ್ಸ್ ಸೇರಿಸಿ ಬುಕ್ ಮಾಡುವುದು ಒಳ್ಳೆಯದು . ಇಲ್ಲಿ ಎಲ್ಲವೂ ಬಹಳ ದುಬಾರಿ . ಟಿಪ್ಸ್ ಸೇರಿಸಿ ಬುಕ್ ಮಾಡಿದ್ದರೂ ಅಲ್ಲಿನ ಕೆಲಸಗಾರರು ಟಿಪ್ಸ್ ಕೊಡುತ್ತೀರೇನೋ ಎನ್ನುವಂತೆ ನಿಮ್ಮನ್ನು ನೋಡುತ್ತಾರೆ . ನಾವಿದ್ದ ರೂಮಿಗೆ ಒಬ್ಬ ಆಫ್ರಿಕನ್ ಮಹಿಳೆ ಪರ್ಮನೆಂಟ್ ಆಗಿ ಹಾಕಿದ್ದರು . ನಮ್ಮೆಲ್ಲಾ ಬೇಕು ಬೇಡಗಳಿಗೆ ಆಕೆ ತಕ್ಷಣ ಸ್ಪಂದಿಸುತ್ತಿದ್ದಳು . ಹೊರಡುವ ದಿನ ಆಕೆಗೆ ನೂರು ಯುರೋ ಕೊಟ್ಟೆ ,ಆಕೆಯ ಹೊಳೆವ ಕಂಗಳ ಮರೆವುದೆಂತು ?

ನಾವಿದ್ದ ಲಿಬರ್ಟಿ ಆಫ್ ಸೀಸ್ ಶಿಪ್ ನಲ್ಲಿ ನಾಲ್ಕೈದು ಸಿನಿಮಾ ಥಿಯೇಟರ್ ಇತ್ತು . ಅಲ್ಲಿ ದಿನಕ್ಕೊಂದು ಹಿಂದಿ ಸಿನಿಮಾ ಕೂಡ ಹಾಕುತ್ತಿದ್ದರು . ಮ್ಯಾಜಿಕ್ ಷೋ , ಡಾಲ್ಪಿನ್ ಷೋ , ಟಾಕ್ ಷೋ , ಕಾಮಿಡಿ ಷೋ , ಡಾನ್ಸ್ ಷೋ ., ಓಹ್ ಒಂದೇ ಎರಡೇ ? ಗೆಸ್ಟ್ ಗಳ ಮನರಂಜನೆಗೆ ಅವರು ಮಾಡುವ ಕೆಸರತ್ತು ಮೆಚ್ಚಲೇ ಬೇಕು . ಈ ಶಿಪ್ ಹನ್ನೆರೆಡು ಮಹಡಿಯದ್ದು . ಎಲ್ಲಕ್ಕೂ ಮೇಲಿನ ಮಹಡಿಯನ್ನ ಆಕಾಶಕ್ಕೆ ತೆರೆದು ಬಿಟ್ಟಿರುತ್ತಾರೆ . ಅಲ್ಲಿ ಜಾಗಿಂಗ್ ಟ್ರ್ಯಾಕ್ ಕೂಡ ಇತ್ತು . ಎರಡು ಸುತ್ತು ಹೊಡೆದರೆ ಒಂದು ಕಿಲೋಮೀಟರ್ !

Barcelona Memories Coloumn By Rangaswamy Mookanahalli Part 16

ಅಲ್ಲಿನ ಜಾಗಿಂಗ್ ಅನುಭವ ಮರೆವುದಾದರೂ ಹೇಗೆ ? ಸುಸಜ್ಜಿತ ಜಿಮ್ ಕೂಡ ಇದೆ . ಅಲ್ಲೇ ಬಾರ್ ಕೂಡ ಇದೆ . ಕಾಫಿ , ಬಿಯರ್ ಅಥವಾ ನಿಮ್ಮಿಷ್ಟದ ಪೇಯ ಹಿಡಿದು ಕೂಡ ಕೂರಲು ಅವಕಾಶವಿದೆ . ಮೊದಲ ನಾಲ್ಕು ಮಹಡಿಯಲ್ಲಿ ಕೆಲಸಗಾರರು ಮತ್ತು ಆಹಾರ ಪದಾರ್ಥ ಶೇಖರಣೆ ಜೊತೆಗೆ ಇಂಜಿನಿಯರಿಂಗ್ ಡಿಪಾರ್ಟ್ಮೆಂಟ್ ಮತ್ತು 25 ಬೆಡ್ ನ ಪುಟ್ಟ ಸುಸಜ್ಜಿತ ಆಸ್ಪತ್ರೆ ಕೂಡ ಇರುತ್ತದೆ . ಇಲ್ಲಿಗೆ ಗೆಸ್ಟ್ ಗಳನ್ನ ಬಿಡುವುದಿಲ್ಲ . ನನಗೆ ಶಿಪ್ ನ ಇಂಚಿಂಚೂ ನೋಡಬೇಕೆಂಬ ಹಂಬಲ .

ಕ್ಯಾಪ್ಟನ್ ರಾತ್ರಿಯ ಡಿನ್ನರ್ ಸಮಯದಲ್ಲಿ ಆಯ್ದ ಊಟದ ಹಾಲ್ ಗೆ ಭೇಟಿ ನೀಡುತ್ತಿದ್ದರು . ಹೀಗೆ ಒಂದು ರಾತ್ರಿ ನನಗೆ ಮಾತಿಗೆ ಸಿಕ್ಕರು . ಅವರ ಬಳಿ ನನ್ನಾಸೆ ಹೇಳಿಕೊಂಡೆ . ಅವರು ಮೊದಲು ಸಾಧ್ಯವಿಲ್ಲವೆಂದರು . ನಾನೊಬ್ಬ ಬರಹಗಾರ ಈ ಅನುಭವಗಳು ನನಗೆ ಅತ್ಯಂತ ಅವಶ್ಯಕ ಎಂದು ಮನವಿ ಮಾಡಿಕೊಂಡೆ . ಆತ ಮರುದಿನ ಬೆಳಿಗ್ಗೆ ಏಳಕ್ಕೆ ಸಾಧ್ಯವೇ ಎಂದು ಕೇಳಿದರು ? ಗೆಸ್ಟ್ ಗಳು ಏಳುವುದಕ್ಕೆ ಮುಂಚೆ ವಿಸಿಟ್ ಮಾಡಿಬಿಡು .

ಎಲ್ಲರೂ ಕೇಳಲು ಶುರು ಮಾಡಿದರೆ ಕಷ್ಟ ಎಂದರು . ಬಹಳ ಖುಷಿಯಿಂದ ಸರಿಯೆಂದೆ . ಮಾರನೆ ದಿನ ಇಂಜಿನಿಯರಿಂಗ್ ಡಿಪಾರ್ಟ್ಮೆಂಟ್ ಹೊಕ್ಕರೆ ಅಲ್ಲಿನ ದೃಶ್ಯ ಕಂಡು ಒಂದು ಕ್ಷಣ ಮಾತೆ ಹೊರಡಲಿಲ್ಲ . ಪೀಣ್ಯ ಇಂಡಸ್ಟ್ರಿಯಲ್ ಏರಿಯದ ಯಾವುದೋ ಒಂದು ಕಾರ್ಖಾನೆಗೆ ಹೋದ ಅನುಭವವಾಯ್ತು . ಬೆಳಕಿನ ಕೆಳಗೆ ಕತ್ತಲೆ ಎನ್ನುವ ಮಾತು ಎಷ್ಟು ಸತ್ಯ ಎನ್ನಿಸುತು . ಮೇಲಿನ ಕೊಠಡಿಗಳಲ್ಲಿ ಕಾಣುವ ಐಷಾರಾಮದ ಜೀವನಕ್ಕೆ ಕೆಳಗಿನ ಕೊಠಡಿಗಳಲ್ಲಿ ಇವರು ಹಗಲು ರಾತ್ರಿ ದುಡಿಯಬೇಕು . ಬದುಕೇ ಹೀಗೆ ಜಗತ್ತಿನ ಒಂದು ಭಾಗ ಚನ್ನಾಗಿ ಬಾಳಬೇಕೆಂದರೆ ಉಳಿದರ್ಧ ಸಾಯಬೇಕು . ದುಡಿಯುತ್ತಲೇ ಇರಬೇಕು .

ಅನುಭವಕ್ಕಿಂತ ದೊಡ್ಡ ದೇವರಿಲ್ಲ , ಅನುಭವವೇ ಜೀವನ.. ಉಳಿದದ್ದೆಲ್ಲಾ ಶೂನ್ಯ! ಅನುಭವಕ್ಕಿಂತ ದೊಡ್ಡ ದೇವರಿಲ್ಲ , ಅನುಭವವೇ ಜೀವನ.. ಉಳಿದದ್ದೆಲ್ಲಾ ಶೂನ್ಯ!

ಇನ್ನು ನಾಲ್ಕೈದು ಸ್ವಿಮ್ಮಿಂಗ್ ಪೂಲ್ ಗಳು , ಜಾಕ್ಯೂಸಿ ಎಲ್ಲವೂ ಬಹಳಷ್ಟಿದೆ . ಗೆಸ್ಟ್ ಗಳನ್ನ ಹಾಳುಗೆಡುವಷ್ಟು ಸತ್ಕಾರ , ಊಟ ತಿಂಡಿ ಸಾಕು ಸಾಕೆನ್ನಿಸುವಷ್ಟು ಮನರಂಜನೆ , ಇವೆಲ್ಲವುಗಳ ಜೊತೆಗೆ ಶಿಪ್ ತನ್ನದೇ ಆದ ಟಿವಿ ಸ್ಟೇಷನ್ ಕೂಡ ಹೊಂದಿರುತ್ತದೆ . ಗೆಸ್ಟ್ ತನಗಿರುವ ಟ್ಯಾಲೆಂಟ್ ಕೂಡ ಅಲ್ಲಿ ತೋರಿಸಬಹದು . ರಾತ್ರಿಯೆಲ್ಲ ಪ್ರಯಾಣಿಸುವ ಶಿಪ್ ಬೆಳಿಗ್ಗೆ ಹೊಸ ಹೊಸ ದೇಶಗಳ ಸೇರುತ್ತಿತ್ತು . ದಿನ ಪೂರ್ತಿ ಗೆಸ್ಟ್ ಗಳನ್ನ ಸುತ್ತಾಡಲು ಅನುಮತಿ ನೀಡುತ್ತಿತ್ತು .

ಸಾಯಂಕಾಲ ಇಷ್ಟು ವೇಳೆಗೆ ಹಿಂತಿರುಗಿ ಎನ್ನುವ ವೇಳಾಪಟ್ಟಿ ನೀಡುತ್ತಿತ್ತು . ಕೆಲವು ಪ್ರಸಿದ್ಧ ಗೆಸ್ಟ್ ಗಳು ಅತ್ಯಂತ ಶ್ರೀಮಂತ ಗೆಸ್ಟ್ ಗಳು ತಮ್ಮ ಕಾರುಗಳನ್ನ ಕೂಡ ಶಿಪ್ ನಲ್ಲಿ ತಂದಿದ್ದರು . ಅವರು ತಮ್ಮ ಕಾರಲ್ಲಿ ಸುತ್ತಾಟಕ್ಕೆ ಹೊರಡುತ್ತಿದ್ದರು . ಶಿಪ್ ನವರು ಕೂಡ ಇಂತಹ ಸೌಲಭ್ಯ ನೀಡುತ್ತಾರೆ . ಕಾರು ಡ್ರೈವರ್ ನೀಡುತ್ತಾರೆ . ಅದಕ್ಕೆ ಅವರು ಹಾಕುವ ಬೆಲೆ ದುಬಾರಿ . ದಿನಕ್ಕೆ ಸಾವಿರ ಅಥವಾ ಒಂದೂವರೆ ಸಾವಿರ ಯುರೋ ! ಅಂದರೆ ಲಕ್ಷದಿಂದ ಒಂದೂಕಾಲು ಲಕ್ಷ ರೂಪಾಯಿ ದಿನಕ್ಕೆ !

ಅನ್ನಿಯನ್ನ ಕರೆದುಕೊಂಡು ದಿನಕ್ಕೆ ಇಷ್ಟೊಂದು ಖರ್ಚು ಮಾಡುವುದು ಬೇಕೇ ? ಎಂದು ನಾನು ರಮ್ಯ ಮಾತಾಡಿಕೊಳ್ಳುತ್ತಿದ್ದೆವು . ನಮ್ಮದು ಸ್ಪ್ಯಾನಿಷ್ -ಕನ್ನಡ -ಇಂಗ್ಲಿಷ್ ಮಿಶ್ರಿತ ಭಾಷೆ . ಇಂದಿಗೂ ನಮ್ಮದು ಕನ್ನಡ -ಸ್ಪ್ಯಾನಿಷ್ ಮಿಶ್ರಣ ಭಾಷೆ . ಇದನ್ನ ಕೇಳಿಸಿಕೊಂಡ ಇಬ್ಬರು ಬಿಳಿಯರು ನಮ್ಮ ಬಳಿ ಬಂದರು . ಅವರು ಇಸ್ರೇಲಿ ದಂಪತಿಗಳು . ಇವರು ವಿಧಿಸುತ್ತಿರುವ ಬೆಲೆ ಬಹಳ ಹೆಚ್ಚು , ನಾವೇಕೆ ಹೊರಗೆ ಹೋಗಿ ಕಾರ್ ರೆಂಟ್ ಮಾಡಿಕೊಳ್ಳಬಾರದು ? ಅಂಡ್ ವೀ ಕ್ಯಾನ್ ಶೇರ್ ದಿ ಚಾರ್ಜಸ್ ಎಂದರು .

ಅಂದಿಗೆ ಐವತ್ತರ ಆಸುಪಾಸಿನ ದಂಪತಿಗಳವರು . ಪುರುಷನಿಗೆ ಹರುಕು ಮುರುಕು ಸ್ಪ್ಯಾನಿಷ್ ಬರುತ್ತಿತ್ತು . ಮಹಿಳೆ ಸ್ವಚ್ಛವಾಗಿ ಇಂಗ್ಲಿಷ್ ಮಾತನಾಡುತ್ತಿದ್ದಳು . ಹತ್ತು ನಿಮಿಷದಲ್ಲಿ ನಮಗೆ ಅವರೊಂದಿಗೆ ಹೋಗಬಹದು ಎನ್ನಿಸುತು . 200 ಯೂರೋನಲ್ಲಿ ದಿನದ ಸುತ್ತಾಟ ಮುಗಿಯುತ್ತಿತ್ತು . ನಮ್ಮ ಪಾಲು ನೂರು ಯುರೋ , ಅಂದರೆ 8 ಸಾವಿರ ರೂಪಾಯಿ . ಲಕ್ಷವೆಲ್ಲಿ ? ಎಂಟು ಸಾವಿರವೆಲ್ಲಿ ? ಮುಂದಿನ ದಿನಗಳಲ್ಲಿ ಆ ಇಸ್ರೇಲಿ ದಂಪತಿಗಳು ಮನೆಗೆ ಬನ್ನಿ ಎಂದು ಆಹ್ವಾನಿಸಿವಷ್ಟು ಹತ್ತಿರವಾದದ್ದು ಬೇರೆಯ ಕಥೆ .

ಇಂತಹ ಶಿಪ್ ಗಳಲ್ಲಿ ಕೆಲಸ ಮಾಡುವರಿಗೆ ಕೈ ತುಂಬಾ ಹಣವೇನೂ ಸಿಗುತ್ತದೆ . ಆದರೆ ಅವರು ಆರೆಂಟು ತಿಂಗಳು ಶಿಪ್ ಬಿಟ್ಟು ಹೊರಬರುವಂತಿಲ್ಲ . ಅದೊಂದು ಪಂಜರ . ನಾವು ಅತಿಥಿಗಳಾಗಿ ಹೋದವರು ಹತ್ತನ್ನೆರೆಡು ದಿನವಿದ್ದು ಹೊರಟು ಬಿಡುತ್ತೇವೆ . ಅವರು ? ನಮ್ಮ ಶಿಪ್ ನಲ್ಲಿ ಹೀಗೆ ಪರಿಚಯವಾದ ಪಾಂಡಿಚೇರಿ ಮೂಲದ ಒಬ್ಬ ತಮಿಳು ಹುಡುಗ ಬೇಸತ್ತು ಹೋಗಿದ್ದ . ಅವನ ಸೀನಿಯರ್ ಬೆರಳು ಕತ್ತರಿಸಿಕೊಂಡರೆ ಒಂದೆರೆಡು ದಿನ ರಜಾ ನೀಡುತ್ತಾರೆ . ಹೊರಗೆ ಸುತ್ತಾಡಲು ಕೂಡ ಹೋಗಬಹದು ಎನ್ನುವ ಸಲಹೆ ನೀಡಿದ್ದಾನೆ .

ಇನ್ನೇನು ಮಾಡುವುದು ಹಾಗೆ ಮಾಡುತ್ತೇನೆ ಎಂದವನು , ಹಾಗೆ ಮಾಡಿ ರಜಾ ಪಡೆದು ಹೊಸಗಾಳಿ ಸವಿದು ಬಂದೆ ಎನ್ನುವುದನ್ನ ಹೇಳಿದಾಗ ಒಂದು ಕ್ಷಣಕ್ಕೆ ಬೇಸರವೆನಿಸಿದರೂ ಅಷ್ಟೊಂದು ಅದರ ಇಂಟೆನ್ಸಿಟಿ ಗೊತ್ತಗಿರಲಿಲ್ಲ . ಎಲ್ಲಾ ಗಾಳಿ ಬೆಳಕು ಇದ್ದೂ ಲಾಕ್ ಡೌನ್ ನಲ್ಲಿ ಮನೆಯಲ್ಲೇ ಇರಬೇಕಾದಾಗ ಬೇಡವೆಂದರೂ ಈ ತಮಿಳು ಹುಡುಗ ನೆನಪಾಗುತ್ತಾನೆ . ಅವನ ಮನಸ್ಥಿತಿ ಹೇಗಿದ್ದಿರಬಹದು ? ಉತ್ತರ ಸಿಗಬೇಕಾದರೆ ನಾವು ಆ ಹಾದಿಯಲ್ಲಿ ನೆಡೆದಿರಬೇಕು . ಇಲ್ಲದಿದ್ದರೆ ನಮ್ಮ ಪಾಲಿಗೆ ಅದೊಂದು ಕಥೆಯಷ್ಟೇ .

English summary
Barcelona Memories Coloumn By Rangaswamy Mookanahalli Part 16,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X