• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾಡಿದರೆ ಯೋಗ,ಆಗುವುದೇ ಧರ್ಮ ವಿಯೋಗ?

By Staff
|

ನಾಗಾಲ್ಯಾಂಡ್, ಮಿಜೋರಾಮ್, ಮೇಘಾಲಯ, ಆಂಧ್ರ ಪ್ರದೇಶ ಹೀಗೆ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳು ಕ್ರೈಸ್ತ ಧರ್ಮೀಯರು. ಈ ಹಿಂದೆ ಕೇರಳದಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿಯಾಗಿದ್ದ ಉಮ್ಮನ್ ಚಾಂಡಿ ಕೂಡ ಕ್ರೈಸ್ತರೇ ಆಗಿದ್ದರು. ಇವರೆಲ್ಲರೂ ಸ್ವಂತ ಸಾಮರ್ಥ್ಯದಿಂದ ಅಂತಹ ಹುದ್ದೆಗೇರಿದ್ದರೆ ಆತಂಕಪಡಬೇಕಾದ ಅಗತ್ಯವಿರಲಿಲ್ಲ. ಆದರೆ ಸೋನಿಯಾ ಗಾಂಧಿ ತಂದು ಕೂರಿಸುತ್ತಿದ್ದಾರಷ್ಟೇ. ಜೊತೆಗೆ ತಮ್ಮ ಸುತ್ತ ಕ್ರಿಶ್ಚಿಯನ್ನರನ್ನೇ ಕೂರಿಸಿಕೊಂಡಿದ್ದಾರೆ. ಇಷ್ಟಕ್ಕೂ ದೇಶದಲ್ಲಿ ಏನಾಗುತ್ತಿದೆ?

  • ಪ್ರತಾಪ್ ಸಿಂಹ

ಅದು Un-Christian!

Religion is a material for saleಅಷ್ಟಕ್ಕೂ ಯೋಗದ ಮೂಲ ಹಿಂದೂ ಧರ್ಮದಲ್ಲಿದೆ. ಯೋಗದಿಂದ ಲಾಭವಿದೆ, ಯೋಗದಲ್ಲಿ ಯಾವುದೇ ಅಪಾಯಗಳಿಲ್ಲ, ಯೋಗದ ಮೂಲಕ ಮನಸ್ಸು ಮತ್ತು ದೇಹದ ಮೇಲೆ ಹಿಡಿತ, ಪರಿಪೂರ್ಣತೆ ಸಾಧಿಸಬಹುದು ಅಂತ ಜನರನ್ನು ನಂಬಿಸುತ್ತಿದ್ದಾರೆ. ಆದರೆ ಅಂತಹ ಹಿಡಿತ ಸಾಧಿಸಲು ಇರುವ ನೈಜ ಮಾರ್ಗವೆಂದರೆ ಜೀಸಸ್‌ನಲ್ಲಿ ನಂಬಿಕೆ ಇಡುವುದು. ಹಾಗೆ ನಂಬಿಕೆ ಇಡುವುದರಿಂದ ಮಾತ್ರ ಪರಿಪೂರ್ಣತೆ ಸಾಧಿಸಲು ಸಾಧ್ಯ. ಹಾಗೆಂದು ರೆವೆರೆಂಡ್ ಟಿಮ್ ಜೋನ್ಸ್ ಹೇಳಿದ್ದಾರೆ.

ಅದಕ್ಕೂ ಮೊದಲು ಇಂಗ್ಲೆಂಡ್‌ನ ಸಾಮರ್‌ಸೆಟ್‌ನಲ್ಲಿರುವ ಸೈಂಟ್ ಜೇಮ್ಸ್ ಚರ್ಚ್ ಹಾಗೂ ಸಿಲ್ವರ್ ಸ್ಟ್ರೀಟ್‌ನಲ್ಲಿರುವ ಬ್ಯಾಪ್ಟಿಸ್ಟ್ ಚರ್ಚ್‌ಗಳ ಆವರಣದಲ್ಲಿ ಎಳೆಯ ಮಕ್ಕಳಿಗೆ ನೀಡಲಾಗುತ್ತಿದ್ದ ಯೋಗ ತರಬೇತಿಯನ್ನು ನಿಷೇಧ ಮಾಡಲಾಗಿದೆ. ಅಷ್ಟೇ ಅಲ್ಲ, ಯೋಗವನ್ನು “ಕಪಟ ಹಾಗೂ ಹುಸಿ ತತ್ವ ಆಧಾರಿತ" ಎಂದು ಹೀಗಳೆದಿದ್ದಾರೆ. ಆದರೆ ಆರೋಗ್ಯ ವೃದ್ಧಿ ಮಾಡುವ ಯೋಗವನ್ನೇ ಕಪಟ ಅನ್ನುವುದಾದರೆ ಹಿಂದೂ ಧರ್ಮವನ್ನೂ ಕಪಟ ಎಂದಂತೆಯೇ ಅಲ್ಲವೆ? ಈ ಘಟನೆಯ ಬೆನ್ನಲ್ಲೇ ಅಮೃತ ಲಾಲ್‌ಜಿ ಎಂಬ 43 ವರ್ಷದ ಹಿಂದೂ ಮಹಿಳೆಯನ್ನು ಬ್ರಿಟಿಷ್ ಏರ್‌ವೇಸ್ ಕೆಲಸದಿಂದ ಕಿತ್ತುಹಾಕಿದೆ. ಮೂಗುತಿಯನ್ನು ಹಾಕಿದ್ದೇ ಆಕೆ ಮಾಡಿದ ತಪ್ಪು. ಅದು ನಮ್ಮ ಸಂಸ್ಕೃತಿಯ ಪ್ರತೀಕ ಎಂದು ಮೂಗುತಿ ತೆಗೆಯಲು ಆಕೆ ನಿರಾಕರಿಸಿದ್ದೇ ಆಕೆ ಮಾಡಿದ ಮಹಾಪರಾಧ!

"I like your Christ, I do not like your Christians. Your Christians are so unlike your Christ" ಎಂದಿದ್ದ ಗಾಂಧೀಜಿಯವರ ಮಾತಿನಲ್ಲಿ ಅದೆಂಥ ಸತ್ಯ ಅಡಗಿದೆ ಅಲ್ಲವೆ?! ಹಾಗಂತ ಸುಮ್ಮನಿರುವಂತೆಯೂ ಇಲ್ಲ.

ಇಂತಹ ಘಟನೆಗಳು ದೂರದ ಬ್ರಿಟನ್ ಅಥವಾ ಇನ್ನಾವುದೋ ದೇಶಗಳಲ್ಲಿ ಸಂಭವಿಸುತ್ತಿದ್ದರೆ ಸುಮ್ಮನಾಗಬಹುದಿತ್ತೇನೋ. ಆದರೆ 2004, ಮೇನಲ್ಲಿ ಕಾಂಗ್ರೆಸ್ ನೇತೃತ್ರದ ಸರಕಾರ ಕೇಂದ್ರದಲ್ಲಿ ಅಸ್ತಿತ್ರಕ್ಕೆ ಬಂದ ನಂತರ ನಮಗರಿವಿಲ್ಲದಂತೆ ಸಾಕಷ್ಟು ಅಪಾಯಕಾರಿ ಬೆಳವಣಿಗೆಗಳಾಗುತ್ತಿವೆ. 2001 ಜನಗಣತಿಯ ಪ್ರಕಾರ ಭಾರತದ ಒಟ್ಟು ಜನಸಂಖ್ಯೆಯಲ್ಲಿ ಕ್ರೈಸ್ತರ ಪ್ರಮಾಣ ಶೇ. 2.5ಕ್ಕೂ ಕಡಿಮೆ. ಆದರೆ ನಾಗಾಲ್ಯಾಂಡ್, ಮಿಜೋರಾಮ್, ಮೇಘಾಲಯ, ಆಂಧ್ರ ಪ್ರದೇಶ ಹೀಗೆ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳು ಕ್ರೈಸ್ತ ಧರ್ಮೀಯರು. ಈ ಹಿಂದೆ ಕೇರಳದಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿಯಾಗಿದ್ದ ಉಮ್ಮನ್ ಚಾಂಡಿ ಕೂಡ ಕ್ರೈಸ್ತರೇ ಆಗಿದ್ದರು. ಇವರೆಲ್ಲರೂ ಸ್ವಂತ ಸಾಮರ್ಥ್ಯದಿಂದ ಅಂತಹ ಹುದ್ದೆಗೇರಿದ್ದರೆ ಆತಂಕಪಡಬೇಕಾದ ಅಗತ್ಯವಿರಲಿಲ್ಲ. ಆದರೆ ಸೋನಿಯಾ ಗಾಂಧಿ ತಂದು ಕೂರಿಸುತ್ತಿದ್ದಾರಷ್ಟೇ.

ಇತ್ತ ಸೋನಿಯಾ ಅವರನ್ನು ಸುತ್ತುವರಿದಿರುವ ಆಸ್ಕರ್ ಫರ್ನಾಂಡಿಸ್, ಮಾರ್ಗರೆಟ್ ಆಳ್ವ, ವಿನ್ಸೆಂಟ್ ಜಾರ್ಜ್ ಕೂಡ ಕ್ರಿಶ್ಚಿಯನ್ನರೇ. ರಾಮನ ಅಸ್ತಿತ್ವವನ್ನೇ ಅಲ್ಲಗಳೆದ 'ಅಫಿಡವಿಟ್" ಅನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸುವ ಮೊದಲು ಅದಕ್ಕೆ ಅಂಗೀಕಾರ ನೀಡಿದ್ದು ಮತ್ತೊಬ್ಬ ಕ್ರೈಸ್ತಳಾದ ಅಂಬಿಕಾ ಸೋನಿ. ಇನ್ನು ಕ್ರೈಸ್ತಮತ ಪ್ರತಿಪಾದಕರಾದ ವಾಲ್ಸನ್ ಥಂಪೂ ಅವರನ್ನು NCERT ಪಠ್ಯ ಪರಾಮರ್ಶೆ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಲಾಗಿದ್ದರೆ, ಹಿಂದೂ ವಿರೋಧಿ ಜಾನ್ ದಯಾಳ್ ಅವರನ್ನು ನ್ಯಾಷನಲ್ ಇಂಟಿಗ್ರೇಶನ್ ಕೌನ್ಸಿಲ್‌ಗೆ ನೇಮಕ ಮಾಡಲಾಗಿದೆ. ಕಳೆದ ಹಲವಾರು ವರ್ಷಗಳಿಂದ ಕರ್ನಾಟಕ ಕಾಂಗ್ರೆಸ್‌ನ ಉಸ್ತುವಾರಿ ವಹಿಸಿಕೊಂಡು ಬಂದ ಆಂಟನಿ, ರವಿ, ಜೇಕಬ್ ಎಲ್ಲರೂ ಕ್ರೈಸ್ತರೇ. ಇತ್ತ ಮತಾಂತರಗೊಂಡಿರುವ ವೈ.ಎಸ್. ರಾಜಶೇಖರ ರೆಡ್ಡಿ ಅಧಿಕಾರಕ್ಕೆ ಬಂದ ನಂತರ ಆಂಧ್ರಪ್ರದೇಶದ ಹಳ್ಳಿಹಳ್ಳಿಗಳಲ್ಲೂ ನಾಯಿಕೊಡೆಗಳಂತೆ ಚರ್ಚ್‌ಗಳು ತಲೆಯೆತ್ತುತ್ತಿವೆ.

ಇವುಗಳಿಗಿಂತ ತೀರಾ ಅಪಹಾಸ್ಯಕಾರಿ ಸಂಗತಿಯೆಂದರೆ ಕೇರಳದ ಕಡಲ ತೀರದ ಜಿಲ್ಲೆಗಳಿಗೆ ಹೋದರೆ “ಮಿರಾಕಲ್ ಬಾಕ್ಸ್"ಗಳನ್ನು ಕಾಣಬಹುದು! ಅಲ್ಲಿನ ಬಡ ಹಿಂದೂ ಮೀನುಗಾರರು 'ನನಗೊಂದು ದೋಣಿ ಬೇಕು", 'ಮನೆ ಕಟ್ಟಲು ಸಾಲ ಬೇಕು", 'ಮಗನನ್ನು ಓದಿಸಲು ಹಣ ಬೇಕು"-ಹೀಗೆ ತಮ್ಮ ಆಸೆ-ಆಕಾಂಕ್ಷೆಗಳನ್ನು ಚೀಟಿಯಲ್ಲಿ ಬರೆದು ಮಿರಾಕಲ್ ಬಾಕ್ಸ್‌ಗೆ ಹಾಕಿ ಹೋದರೆ ಕೆಲವೇ ವಾರಗಳಲ್ಲಿ ಪವಾಡ ಸಂಭವಿಸುತ್ತದೆ!! ಆದರೆ ಹಣ, ದೋಣಿ ಸಿಕ್ಕಿದ ಮೇಲೆ ಕುಟುಂಬ ಸಮೇತ ಮತಾಂತರಗೊಳ್ಳಲೇಬೇಕು. ಇಂತಹ ಆಮಿಷಗಳಿಗೆ ಮರುಳಾಗಿ ಉಳಿದವರು ತಾವಾಗಿಯೇ ಮತಾಂತರಗೊಳ್ಳಲು ಮುಂದೆ ಬರುತ್ತಾರೆ.

ಹೇಗಿದೆ ನೋಡಿ, ಮತಾಂತರಿಗಳ ಪವಾಡ?!

ಎಲ್ಲಿ ಕಷ್ಟ-ಕಾರ್ಪಣ್ಯ, ಬಡತನ, ನಿರುದ್ಯೋಗ, ಅಸಮಾನತೆ, ಅನ್ಯಾಯಗಳಿರುತ್ತವೋ ಅಲ್ಲೆಲ್ಲ ಕಮ್ಯುನಿಸಮ್ ಇರುತ್ತದೆ ಎಂಬ ಮಾತಿತ್ತು. ಆದರೆ ಈಗ ಕಷ್ಟ-ಕಾರ್ಪಣ್ಯಗಳಿರುವ ಕಡೆಗಳಲ್ಲೆಲ್ಲ ಕಮ್ಯು ನಿಸ್ಟರ ಜತೆಗೆ ಕ್ರೈಸ್ತ ಮತಾಂತರಿಗಳೂ ಇರುತ್ತಾರೆ! 2004 ಡಿಸೆಂಬರ್ 26ರಂದು ಸುನಾಮಿ ಬಂದಪ್ಪಳಿಸಿದಾಗ ನತದೃಷ್ಟರಿಗೆ ಎಲ್ಲರೂ ನಿಸ್ವಾರ್ಥತೆಯಿಂದ ಸಹಾಯ ಮಾಡುತ್ತಿದ್ದರೆ ಕ್ರೈಸ್ತ ಮಿಷನರಿಗಳು ಸಹಾಯದ ನೆಪದಲ್ಲಿ ಮತಾಂತರಕ್ಕೆ ಮುಂದಾಗಿದ್ದವು. ಶ್ರೀಲಂಕಾ ಸರಕಾರವಂತೂ ಸುನಾಮಿ ಪರಿಹಾರದ ನೆಪದಲ್ಲಿ ನಡೆಯುತ್ತಿದ್ದ ಮತಾಂತರವನ್ನು ಆದೇಶ ಹೊರಡಿಸುವ ಮೂಲಕ ನಿಷೇಧ ಮಾಡಬೇಕಾಗಿ ಬಂತು. ಆದರೆ ಈ ಮಿಷನರಿಗಳು ಎಂತಹ ಬುದ್ಧಿವಂತರೆಂದರೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು 'ಮತಾಂತರ ನಿಷೇಧ ಕಾಯಿದೆ"ಯನ್ನು ಜಾರಿಗೆ ತಂದಾಗ, ಮದುರೈನ “ಮೈನಾರಿಟಿ ಗಾಸ್ಪೆಲ್ ರೈಟ್ಸ್ ಪೊಟೆಕ್ಷನ್ ಫೋರಮ್" ಎಂಬ ಕ್ರೈಸ್ತ ಸಂಘಟನೆ Approach to combat Anti Conversion Law'' ಹೆಸರಿನಲ್ಲಿ 56 ಪುಟಗಳ ಕೈಪಿಡಿಯನ್ನೇ ಪ್ರಕಟಿಸಿತು. ಅದರಲ್ಲಿನ 13 ಅಧ್ಯಾಯಗಳಲ್ಲಿ ಮತಾಂತರ ನಿಷೇಧ ಕಾಯಿದೆಯನ್ನು ಉಲ್ಲಂಘಿಸದೇ ಯಾವ ರೀತಿ ಮತಾಂತರ ಮಾಡಬಹುದು ಎಂಬುದನ್ನು ವಿವರಿಸಿ ಹೇಳಲಾಯಿತು.

ಇಂತಹ ಮಿಷನರಿಗಳು ಈಗ ನಮ್ಮೆಲ್ಲರ ಮನೆಯ ಡ್ರಾಯಿಂಗ್ ರೂಮ್‌ಗಳಿಗೂ ಬಂದಿದ್ದಾರೆ!

“ಪ್ರಸ್ತುತ ಜಗತ್ತು ಅಪರಾಧ, ಬಡತನ, ಅನ್ಯಾಯ, ಲೈಂಗಿಕತೆಗಳಿಂದ ಬಳಲುತ್ತಿದೆ. ಇದರಿಂದ ಜಗತ್ತನ್ನು ಮುಕ್ತಗೊಳಿಸಬೇಕಾದರೆ ಕ್ರೈಸ್ತರಾಗದೆ ಬೇರೆ ಮಾರ್ಗೋಪಾಯಗಳಿಲ್ಲ" ಎಂಬ ಪ್ರಚಾರಾಂದೋಲನವನ್ನು ಟೀವಿ ಚಾನೆಲ್‌ಗಳ ಮೂಲಕ ಆರಂಭಿಸಲಾಗಿದೆ. “Enjoy everyday life'' " ಎಂಬ ಕ್ರೈಸ್ತ ಮತಪ್ರಚಾರ ಕಾರ್ಯಕ್ರಮ 'ಸಹ್ಯಾದ್ರಿ" ಹಾಗೂ 'ಝೀ" ಮರಾಠಿ ಚಾನೆಲ್‌ಗಳಲ್ಲಿ ಸೋಮವಾರದಿಂದ ಶನಿವಾರದವರೆಗೂ ಪ್ರತಿನಿತ್ಯ ಪ್ರಸಾರವಾಗುತ್ತಿದೆ. ಆದರೆ ಭಯ ಹುಟ್ಟಿಸುವ ವಿಚಾರವೆಂದರೆ ನಿತ್ಯವೂ ಬೆಳಗ್ಗೆ ಕ್ರೈಸ್ತ ಮತಪ್ರಚಾರವನ್ನು ಬಿತ್ತರಿಸುತ್ತಿರುವ ಡಿಡಿ ಸಹ್ಯಾದ್ರಿ, ಡಿಡಿ ಜಲಂಧರ್, ಡಿಡಿ ಅಹ್ಮದಾಬಾದ್, ಡಿಡಿ ಭುವನೇಶ್ವರ, ಡಿಡಿ ಪಟನಾ ಮತ್ತು ಡಿಡಿ ಗುಜರಾತಿ ಚಾನೆಲ್‌ಗಳು ಕೇಂದ್ರ ಸರಕಾರದ ನಿಯಂತ್ರಣದಲ್ಲಿರುವ ಸರಕಾರಿ ಚಾನೆಲ್‌ಗಳಾಗಿವೆ.

ಹೀಗೆ ಸರಕಾರಿ ಚಾನೆಲ್‌ಗಳನ್ನೇ ಮತಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದರೆ ಸೋನಿಯಾ ಗಾಂಧಿಯವರ ಉದ್ದೇಶವೂ ಕ್ರೈಸ್ತ ಧರ್ಮಪ್ರಚಾರವೇ ಆಗಿದೆ ಎಂದಾಗಲಿಲ್ಲವೆ? ಹದಿನೇಳು ದೂರದರ್ಶನ ಚಾನೆಲ್‌ಗಳಲ್ಲಿ ಹತ್ತು ಭಾಷೆಗಳಲ್ಲಿ ಮತಪ್ರಚಾರ ಕಾರ್ಯ ನಡೆಯುತ್ತಿದೆ. ಇದಲ್ಲದೆ 18 ಖಾಸಗಿ ರೇಡಿಯೋ ಚಾನೆಲ್‌ಗಳಲ್ಲೂ ಇಂತಹ ಕಾರ್ಯಕ್ರಮ ಗಳನ್ನು ಪ್ರಸಾರ ಮಾಡಲಾಗುತ್ತಿದೆ. ಒಂದು ಕಡೆ ತಿರುಪತಿ, ರಾಮಸೇತು ವಿಷಯಗಳನ್ನೆತ್ತಿಕೊಂಡು ಹಿಂದೂಗಳ ನಂಬಿಕೆಯ ಬೇರುಗಳನ್ನೇ ಅಲುಗಾಡಿಸುತ್ತಿರುವ ಕೇಂದ್ರ ಸರಕಾರ ಮತ್ತೊಂದೆಡೆ ಸರಕಾರಿ ಚಾನೆಲ್‌ಗಳಲ್ಲಿ ಮತಪ್ರಚಾರಕ್ಕೆ ಅವಕಾಶ ನೀಡುತ್ತಿದೆ. ಕಾನ್ಪುರ, ಪಟನಾ, ಜಮ್‌ಷೆಡ್‌ಪುರ ಮತ್ತು ಹಿಂದಿ ಹಾಗೂ ತೆಲುಗು ಆಕಾಶವಾಣಿ ಕೇಂದ್ರಗಳಲ್ಲೂ ಇದೇ ಕಾರ್ಯ ನಡೆಯುತ್ತಿದೆ. ಆಂಧ್ರಪ್ರದೇಶದಲ್ಲಿರುವ 'Joyce Meyer Ministry' " ಎಂಬ ಸಂಸ್ಥೆ ಮತಪ್ರಚಾರಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ರೂಪಿಸಿ ಪೂರೈಸುತ್ತಿದೆ. ತಮಿಳನ್, ವಿಜಯ್, ರಾಜ್, ಸೂರ್ಯ, ಮಾ ಟೀವಿ, ಈ ಟೀವಿ(ತೆಲುಗು) ಮುಂತಾದ ಖಾಸಗಿ ಟೀವಿಗಳಲ್ಲೂ ಪ್ರಚೋದನಕಾರಿ ಮತ ಪ್ರಚಾರ ನಡೆಯುತ್ತಿದ್ದರೆ, 'ನ್ಯೂ ಹೋಪ್ ಟೀವಿ" ಚಾನೆಲ್‌ನಲ್ಲಿ ಕನ್ನಡದಲ್ಲೂ ಮತಪ್ರಚಾರ ಮಾಡಲಾಗುತ್ತಿದೆ.

ಅಷ್ಟೇಕೆ, ಎರಡು ರೂಪಾಯಿ ನಾಣ್ಯದ ಮೇಲೆ ಭಾರತದ ಭೂಪಟದ ಬದಲು 'ಕ್ರಾಸ್" ಬಂದಿದೆ ಎಂದರೆ ಈ ಕ್ರೈಸ್ತ ಮಿಷನರಿಗಳು ಎಷ್ಟು ಪ್ರಭಾವಶಾಲಿಗಳಿರಬಹುದು?

ಆದರೆ ಮಿಷನರಿಗಳು ಹೇಳುತ್ತಿರುವಂತೆ ಕ್ರೈಸ್ತ ಧರ್ಮ ಅಪರಾಧ, ಲೈಂಗಿಕತೆ, ಬಡತನಗಳಿಂದ ಮುಕ್ತಿ ಕೊಡುತ್ತದೆ ಎಂಬುದು ನಿಜವೇ ಆಗಿದ್ದರೆ ಪಾಶ್ಚಾತ್ಯ ಕ್ರೈಸ್ತ ರಾಷ್ಟ್ರಗಳೇಕೆ ಈ ಸಮಸ್ಯೆಗಳಿಂದ ಮುಕ್ತವಾಗಿಲ್ಲ? ಮತಾಂತರವೇ ಎಲ್ಲ ಸಮಸ್ಯೆಗಳಿಗೂ ಪರಿಹಾರವೆನ್ನುವುದಾದರೆ ಕ್ರೈಸ್ತ ರಾಷ್ಟ್ರಗಳಲ್ಲಿ ಯಾವುದೆ ಸಮಸ್ಯೆಗಳೇ ಇರಬಾರದಿತ್ತು ಅಲ್ಲವೆ? ಎಲ್ಲ ಸಮಸ್ಯೆಗಳನ್ನೂ ಪರಿಹರಿಸುವ ಶಕ್ತಿ ಕ್ರೈಸ್ತ ಧರ್ಮಕ್ಕೆ ಮಾತ್ರ ಇರುವುದಾದರೆ ಯೋಗದ ಬಗ್ಗೆ ಭಯಭೀತರಾಗುವ ಅಗತ್ಯವೇನಿದೆ? ಯೋಗವನ್ನು ಕಪಟ ಎನ್ನುವುದಾದರೆ ಅಂತಹ ಕಪಟದ ಬಗ್ಗೆಯೂ ಹೆದರಿಕೊಳ್ಳುವಷ್ಟು ದುರ್ಬಲವೇ ಕ್ರೈಸ್ತ ಧರ್ಮ? ಆರೋಗ್ಯ ವೃದ್ಧಿ ಮಾಡುವ ಯೋಗವನ್ನು ನಿಷೇಧ ಮಾಡಿದ್ದಾದರೂ ಏಕೆ? ಅಷ್ಟಕ್ಕೂ, ಧರ್ಮವನ್ನು ಮಾರುಕಟ್ಟೆ ಉತ್ಪನ್ನದ ಮಟ್ಟಕ್ಕೆ ಇಳಿಸಿ ಮಾರಾಟ ಮಾಡುತ್ತಿರುವ, ಮತಾಂತರವನ್ನೂ ಒಂದು ವೃತ್ತಿಯಾಗಿಸಿಕೊಂಡಿರುವ ಕ್ರೈಸ್ತ ಧರ್ಮ ಪ್ರತಿಪಾದಕರು ಹಾಗೂ ಮಿಷನರಿಗಳಿಂದ ಇದಕ್ಕಿಂತ ಬೇರೆ ಏನನ್ನು ನಿರೀಕ್ಷಿಸಲು ಸಾಧ್ಯ?

"Gandhi, The Man" ಪುಸ್ತಕ ಬರೆದ ಮಿಲ್ಲೀ ಗ್ರಹಂ ಪೋಲಾಕ್ ಬಗ್ಗೆ ನೀವು ಕೇಳಿರಬಹುದು.

ಗಾಂಧೀಜಿ ದಕ್ಷಿಣ ಆಫ್ರಿಕಾದಲ್ಲಿದ್ದಾಗ ಬ್ರಿಟನ್ ಮೂಲದ ಮಿಲ್ಲೀ ಗ್ರಹಂ ಹಾಗೂ ಅವರ ಪತಿ ಹೆನ್ರಿ ಪೋಲಾಕ್ ಗಾಂಧೀಜಿಯವರಿಗೆ ತೀರಾ ಆಪ್ತಮಿತ್ರರಾಗಿದ್ದರು. ಅಷ್ಟೇ ಅಲ್ಲ, ಜೋಹಾನೆಸ್‌ಬರ್ಗ್‌ನಲ್ಲಿ ಒಂದೇ ಮನೆಯಲ್ಲಿದ್ದರು. ಒಮ್ಮೆ ಮನೆಗೆ ಆಗಮಿಸಿದ ಅತಿಥಿ ಯೊಬ್ಬರು “ಗಾಂಧೀಜಿ ಕ್ರಿಶ್ಚಿಯನ್ನರೆ?" ಅಂತ ಮಿಲ್ಲಿಯನ್ನು ಪ್ರಶ್ನಿಸುತ್ತಾರೆ. ಆದರೆ ಹೇಗೆ ಉತ್ತರಿಸಬೇಕೆಂದು ಮಿಲ್ಲಿಗೆ ಗೊತ್ತಾಗಲಿಲ್ಲ. “ಗಾಂಧೀಜಿ ಮೂಲತಃ ಕ್ರೈಸ್ತರೇ ಅಥವಾ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದಾರೆಯೇ?"-ಇವುಗಳಲ್ಲಿ ಯಾವುದು ನಿನ್ನ ಪ್ರಶ್ನೆ ಎಂದು ಅತಿಥಿಯನ್ನೇ ಕೇಳುತ್ತಾರೆ. ಅದಕ್ಕೆ “ನಾನು ಸ್ನೇಹಿತರ ಜತೆ ಮಾತನಾಡುತ್ತಿದ್ದಾಗ ಗಾಂಧೀಜಿಯವರ ಬಗ್ಗೆ ಮಾತು ಬಂತು. ಗಾಂಧೀಜಿ ಆಗಾಗ ಜೀಸಸ್‌ನ ಮಾತುಗಳನ್ನು ಉಲ್ಲೇಖಿಸುತ್ತಿರುತ್ತಾರೆ. ಹಾಗಾಗಿ ಅವರು ಕ್ರಿಶ್ಚಿಯನ್ನರೇ ಇರಬೇಕು" ಎಂಬ ನಿರ್ಧಾರಕ್ಕೆ ಬಂದೆವು ಎಂದು ಅತಿಥಿ ಉತ್ತರಿಸುತ್ತಾರೆ.

ಅವರ ಅನುಮಾನಕ್ಕೆ ಇನ್ನೂ ಒಂದು ಕಾರಣವಿತ್ತು.ದಕ್ಷಿಣ ಆಫ್ರಿಕಾದಲ್ಲಿ ವಕೀಲಿ ವೃತ್ತಿ ಮಾಡುತ್ತಿದ್ದ ಗಾಂಧೀಜಿಯವರ ಕಚೇರಿಯಲ್ಲಿ ಬುದ್ಧ ಅಥವಾ ಕೃಷ್ಣನ ಬದಲು ಜೀಸಸ್‌ನ ಫೋಟೋವಿತ್ತು! ಆದರೂ ಗಾಂಧೀಜಿ ಕ್ರೈಸ್ತರಾಗಿರಲಿಲ್ಲ. ಮಿಲ್ಲಿಗೆ ಕುತೂಹಲವನ್ನು ತಡೆದುಕೊಳ್ಳಲಾಗಲಿಲ್ಲ. “ನೀವೇಕೆ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳಲಿಲ್ಲ?" ಎಂದು ಗಾಂಧೀಜಿಯನ್ನು ಪ್ರಶ್ನಿಸುತ್ತಾರೆ. ಆಗ “ನಾನು ಕ್ರೈಸ್ತ ಧರ್ಮಗ್ರಂಥಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿದ್ದೇನೆ. ಆಕರ್ಷಿತನೂ ಆಗಿದ್ದೇನೆ. ಆದರೆ ಕೊನೆಗೆ ಗೊತ್ತಾಯಿತು, ಹಿಂದೂ ಧರ್ಮದಲ್ಲಿ ಇಲ್ಲದೇ ಇರುವ ವಿಶೇಷತೆಗಳೇನೂ ಕ್ರೈಸ್ತ ಧರ್ಮದಲ್ಲಿಲ್ಲ ಅಂತ. ಒಬ್ಬ ಉದಾತ್ತ ಹಿಂದೂ ಉದಾತ್ತ ಕ್ರಿಶ್ಚಿಯನ್ ಕೂಡ ಆಗಬಲ್ಲ. ಕ್ರಿಸ್ತನ ಗುಣಗಾನ ಮಾಡಲು ಅಥವಾ ಆತನನ್ನು ಅನುಸರಿಸಲು ಕ್ರೈಸ್ತಮತವನ್ನೇ ಅಪ್ಪಿ ಕೊಳ್ಳಬೇಕೆಂದೇನೂ ಇಲ್ಲ" ಎನ್ನುತ್ತಾರೆ ಗಾಂಧೀಜಿ. ಅಷ್ಟಕ್ಕೇ ಸುಮ್ಮನಾಗಲಿಲ್ಲ, “ಕ್ರಿಶ್ಚಿಯಾನಿಟಿಯಿಂದ ಮನುಷ್ಯ ಕಲಿಯಬಹುದಾದ ಬಹುಮುಖ್ಯ ಪಾಠಗಳು ಯಾವುವು?" ಎಂದು ಗಾಂಧೀಜಿ ಮಿಲ್ಲಿಯನ್ನೂ ಪ್ರಶ್ನಿಸುತ್ತಾರೆ. ಒಂದೆರಡರ ಬಗ್ಗೆ ಹೇಳಬಲ್ಲೆ, 'ಕ್ರಿಸ್ತನೇ ಅಂತಿಮ ಮತ್ತು ಉಳಿದವರೆಲ್ಲರೂ ಆತನ ಸಹೋದರರು" ಎನ್ನುತ್ತಾಳೆ ಮಿಲ್ಲಿ.

ಅಷ್ಟರಲ್ಲಿ "Yes" ಎಂದು ಪ್ರತಿಕ್ರಿಯಿಸಿದ ಗಾಂಧೀಜಿ, “ಹಿಂದೂ ಧರ್ಮ ಕೂಡ ಇದನ್ನೇ ಹೇಳುತ್ತದೆ. ಇಸ್ಲಾಂ ಅಥವಾ ಜೋರಾಸ್ಟ್ರಿಯನ್ ಧರ್ಮಗಳು ಬೋಧಿಸುವುದೂ ಇದನ್ನೇ" ಎನ್ನುತ್ತಾರೆ. ಇಂತಹ ಸರಳ ಸತ್ಯವೂ ಕ್ರೈಸ್ತ ಮತಾಂತರಿಗಳಿಗೆ ಅರ್ಥವಾಗುವುದಿಲ್ಲವೆ? ಈ ಮಿಷನರಿಗಳು ಧರ್ಮವನ್ನು ಸರಕಿನಂತೆ ಮಾರಾಟ ಮಾಡುವುದನ್ನು ನಿಲ್ಲಿಸುವುದು ಯಾವಾಗ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more