ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಹಾ ಇಡ್ಲಿ ವಡೆ ಸಾಂಬಾರ್, ನಾನೇ ಮಾಡೋ ಬಟ್ಲರ್!

|
Google Oneindia Kannada News

ನನಗಿನ್ನೂ ಚೆನ್ನಾಗಿ ನೆನಪಿದೆ. ಧಾರವಾಡದ ಶಾಲೆಯಿಂದ ನದಾಫ್ ಮಾಸ್ತರ್ ಅವರು ಒಂದಿಷ್ಟು ಹುಡುಗರ ಟೋಳಿಯನ್ನು ಕಟ್ಟಿಕೊಂಡು ಹಂಪಿ, ಹೊಸಪೇಟೆ ಟೂರಿಗೆ ಕರೆದುಕೊಂಡು ಹೋಗಿದ್ದರು. ನಾನಿನ್ನೂ ಮೂರನೇ ಕ್ಲಾಸು, ಖಾಕಿ ಚಡ್ಡಿ ಬಿಳಿ ಅಂಗಿ ತೊಡುತ್ತಿದ್ದ ಕಾಲವದು. ಸೊಂಟಕ್ಕೆ ಬೆಲ್ಟ್, ಕತ್ತಿಗೆ ಟೈ ಇರುತ್ತಿರಲಿಲ್ಲ. ಮನೆಯಲ್ಲಿ ಇಸ್ತ್ರಿಯಂತೂ ಇರಲೇಇಲ್ಲ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಭರ್ತಿ ಚಳಿಗಾಲದ ಸಂಜೆ ಯಾವುದೋ ಹೋಟೆಲಿಗೆ ಕರೆದುಕೊಂಡು ಹೋಗಿದ್ದರು. ಎಲ್ಲರೂ ಏನೇನೋ ತಗೊಂಡಿದ್ದರೆ ನನಗೆ ಇಡ್ಲಿ ಸಾಂಬಾರ್ ಕೊಡಿಸಿದ್ದರು. ಏಕೆಂದರೆ, ಅದೇನಾಗಿತ್ತೋ ಏನೋ ಹೊಟ್ಟೆ ಕೆಟ್ಟಿತ್ತು. ಸರಿಯಾಗಿ ನನ್ನ ಮುಂದೊಬ್ಬ ಘಡವ ಕುಳಿತಿದ್ದ ಆತನೂ ಹೊಟ್ಟೆಗೆ ತೆಗೆದುಕೊಂಡಿದ್ದು ನಾಲ್ಕು ಇಡ್ಲಿ. ನೋಡನೋಡುತ್ತಿದ್ದಂತೆ ಎಲ್ಲ ಇಡ್ಲಿಯನ್ನೂ ಕೈಯಿಂದ ಪುಡಿಪುಡಿ ಮಾಡಿ, ವೇಯ್ಟರ್ ನಿಂದ ಇನ್ನಷ್ಟು ಸಾಂಬಾರು, ಚಟ್ನಿ ತರಿಸಿಕೊಂಡು ಅನ್ನದಂತೆ ಕಲಿಸಿ ಇಳಿಸಲು ಆರಂಭಿಸಿದ ನೋಡಿ, ನಾನು ಅಸಹ್ಯ ಬಂದು ಇಡ್ಲಿ ತಿನ್ನುವುದನ್ನೇ ಬಿಟ್ಟಿದ್ದೆ.

ವಿಶ್ವಯುದ್ಧವನ್ನೆಲ್ಲ ನೋಡಿಬಂದ ಇಡ್ಲಿ, ನಿನ್ನ ಮಹಿಮೆ ನಾನೆಂತು ಪೇಳಲಿ! ವಿಶ್ವಯುದ್ಧವನ್ನೆಲ್ಲ ನೋಡಿಬಂದ ಇಡ್ಲಿ, ನಿನ್ನ ಮಹಿಮೆ ನಾನೆಂತು ಪೇಳಲಿ!

ಹಂಪಿ ಪ್ರವಾಸದಲ್ಲಿ ವಸತಿ, ಊಟ, ರೈಲು ಪ್ರಯಾಣ ಎಲ್ಲ ಸೇರಿ ಮೂರು ದಿನಗಳಲ್ಲಿ ಖರ್ಚಾಗಿದ್ದು ಹದಿನೆಂಟು ರುಪಾಯಿ. ಕೊಟ್ಟಿದ್ದ ಇಪ್ಪತ್ತು ರುಪಾಯಿಯಲ್ಲಿ ಎರಡನ್ನು, ನದಾಫ್ ಮಾಸ್ತರು ವಾಪಸ್ ಕೊಟ್ಟಿದ್ದರು! ಅದ್ಯಾವ ಕಾಲವೆಂದು ನೀವೇ ಊಹಿಸಿ! ನನ್ನ ಇಡ್ಲಿ ಪುರಾಣ ಅತ್ಲಾಗಿರಲಿ, ಭರ್ತಿ ಹರಿಯುತ್ತಿದ್ದ ತುಂಗಭದ್ರೆಯಲ್ಲಿ ಬನಿಯನ್ ಒಗೆಯಲು ಹೋಗಿ ನದಿಯ ಪಾಲಾಗುತ್ತಿದ್ದ ಹೊನಿಗ್ಯಾನನ್ನು ಉಪ್ಪಿಟ್ಟು ಚಹಾ ಪ್ರೇಮಿ ನದಾಫ್ ಮಾಸ್ತರು ಹಿಡಿದು ಹೊಡೆದಿದ್ದ ಸ್ವಾರಸ್ಯಕರ ಕಥೆಯನ್ನು ಇನ್ನೊಮ್ಮೆ ಹೇಳುತ್ತೇನೆ. ಮುಂದೆ ಓದಿ...

On World Idli Day, some Savouring memories about Karnataka dish Idli

ನಮ್ಮನೆ ಇಡ್ಲಿಗೆ ಪಕ್ಕದ್ಮನೆ ಗ್ರೈಂಡರ್ ಚಟ್ನಿ

ಇಡ್ಲಿ ಅಂದ್ರೇನೆ ನೆನಪುಗಳ ಮೆರವಣಿಗೆ. ಇಡ್ಲಿ ಜೊತೆ ಸವಿಯಾದ ಚಟ್ನಿ, ಹೋಟೆಲ್ ನಲ್ಲಿ ಮಾಡಿದಂತಿರುವ ಸಾಂಬಾರ್ ಇಲ್ಲದಿದ್ದರೆ ಇಡ್ಲಿಗೆ ಅಸ್ತಿತ್ವವೇ ಇಲ್ಲ. ಬಾಲ್ಯದಲ್ಲಿ ನಮ್ಮ ಮನೆಯಲ್ಲಿ ಮಾಡಿದ ಇಡ್ಲಿಗೆ ಪಕ್ಕದ ಮನೆಯಲ್ಲಿ ತಯಾರಿಸಿದ ಚಟ್ನಿಯೇ ಇರಬೇಕಿತ್ತು. ಏಕೆಂದರೆ, ನಮ್ಮ ಮನೆಯಲ್ಲಿ ರುಬ್ಬುಕಲ್ಲಿನಲ್ಲಿ ರುಬ್ಬಿದ ಚಟ್ನಿ ತಯಾರಾಗುತ್ತಿದ್ದರೆ, ಪಕ್ಕದ ಮನೆಯಲ್ಲಿ ಆಗತಾನೆ ಬಂದಿದ್ದ ಮಿಕ್ಸರ್ ಗ್ರೈಂಡರ್ ನಲ್ಲಿ ಸ್ವಾದಿಷ್ಟಕರವಾದ ಚಟ್ನಿ ರೆಡಿಯಾಗುತ್ತಿತ್ತು. ನಮ್ಮಮ್ಮ ಚಟ್ನಿಗೆ ಬೇಕಾದ ಸಾಮಗ್ರಿಗಳನ್ನೆಲ್ಲ ತೆಗೆದುಕೊಂಡು ಅವರ ಮನೆಗೇ ಹೋಗಿ ಗ್ರೈಂಡರಲ್ಲಿ ರುಬ್ಬಿಕೊಂಡು ಬರುತ್ತಿದ್ದರು. ಗ್ರೈಂಡರ್ ಆಗ ಸ್ವಲ್ಪ ಶ್ರೀಮಂತರ ಮನೆಯ ಸ್ವತ್ತಾಗಿರುತ್ತಿತ್ತು.

ಈಗ ಮಿಕ್ಸರ್ ಗ್ರೈಂಡರ್ ಮನೆಮನೆಗೆ ಬಂದ ಮೇಲೆ ರುಬ್ಬುಕಲ್ಲು ಮೂಲೆ ಸೇರಿದೆ. ಅದರಲ್ಲಿ ಚಟ್ನಿಯೂ ತರಾಯಾಗುವುದಿಲ್ಲ, ಕೈಗೆ ವ್ಯಾಯಾಮವೂ ಸಿಗುವುದಿಲ್ಲ. ಇನ್ನು ಅಪಾರ್ಟ್ಮೆಂಟುಗಳಲ್ಲಿ ರುಬ್ಬುಕಲ್ಲನ್ನು ಇಟ್ಟು ಚಟ್ನಿ ರುಬ್ಬಿದರೆ ಮೇಲಿನವರು ಬಂದು ನಮ್ಮನ್ನೇ ರುಬ್ಬಿ ಚಟ್ನಿ ಮಾಡಿಬಿಡುತ್ತಾರೆ. ಚಿಕ್ಕವರಿದ್ದಾಗ ಅದೇ ರುಬ್ಬಕಲ್ಲಿನಲ್ಲಿ ಹೊಸದಾಗಿ ಬಂದ ಹುಣಿಸೆಹಣ್ಣನ್ನು ಬಳಸಿ, ಅದಕ್ಕೆ ಬೆಲ್ಲ, ಇಂಗು, ಖಾರದ ಪುಡಿ, ಜೀರಿಗೆ, ಮೆಣಸು ಹಾಕಿ ರುಬ್ಬಿ ಚಿಗಳಿ ಮಾಡಿಕೊಡುತ್ತಿದ್ದರು ಅಮ್ಮ. ಯಪ್ಪಾ ಬಾಯಲ್ಲಿ ನೀರು!

On World Idli Day, some Savouring memories about Karnataka dish Idli

ಇಡ್ಲಿ ವರ್ಲ್ಡ್ ಫೇಮಸ್; ತಿನ್ನುವವರ ಸಂಖ್ಯೆಯಲ್ಲಿ ದೇಶಕ್ಕೆ ಬೆಂಗಳೂರು ನಂಬರ್ 1 ಇಡ್ಲಿ ವರ್ಲ್ಡ್ ಫೇಮಸ್; ತಿನ್ನುವವರ ಸಂಖ್ಯೆಯಲ್ಲಿ ದೇಶಕ್ಕೆ ಬೆಂಗಳೂರು ನಂಬರ್ 1

ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ ಇಡ್ಲಿ ಇಡ್ಲಿ ಇಡ್ಲಿ

ಬರಬರುತ್ತ ಇಡ್ಲಿ ಎಷ್ಟು ಇಷ್ಟವಾಗಿ ಹೋಯಿತು ಎಂದರೆ, ಬೆಳಗಿನ ತಿಂಡಿಗೆ, ಮಧ್ಯಾಹ್ನದ ಊಟಕ್ಕೆ, ರಾತ್ರಿ ಊಟಕ್ಕೂ ಇಡ್ಲಿ ಇದ್ದರೂ ನನಗೆ ಬೇಜಾರಾಗುತ್ತಿರಲಿಲ್ಲ. ಅದು ಏನನ್ನು ತಿಂದರೂ ಅರಗಿಸಿಕೊಳ್ಳುವ ಯೌವನದ ಸಮಯ. ಇಡ್ಲಿಯ ಮೈತುಂಬ ಮೆಣಸಿನಕಾಯಿ ಚಟ್ನಿ ಸವರಿ, ಅದಕ್ಕೊಂದಿಷ್ಟು ಶುಂಠಿ ಚಟ್ನಿಯನ್ನೂ ಮೆತ್ತಿ ತಿನ್ನುತ್ತಿದ್ದರೆ ಅದರ ಮಜವೇ ಬೇರೆ. ಜೊತೆಗೊಂದಿಷ್ಟು ಉಳ್ಳಾಗಡ್ಡಿ ಸಾಂಬಾರ್ ಇದ್ದರಂತೂ ಸ್ವರ್ಗ ಮೂರೇ ಗೇಣು.

ಇಂಥದೇ ಸಮಯದಲ್ಲಿ ಕಾಲೇಜಿನಿಂದ ಎನ್‌ಸಿಸಿ ಕ್ಯಾಂಪಿಗೆ ಹೋಗುವ ಅವಕಾಶ ಬಂದಿತ್ತು. ಹದಿನೈದು ದಿವಸ ಲೆಫ್ಟ್ ರೈಟ್ ಲೆಫ್ಟ್ ರೈಟ್. ಅಲ್ಲಿ ಸಿಗುತ್ತಿದ್ದುದು ಬೆಳಿಗ್ಗೆ ಒಂದೇ ದಪ್ಪಗಿನ ಪೂರಿ, ಅದರ ಮೇಲೆ ಚಿಟಿಕೆಯಷ್ಟು ಪಲ್ಯ, ಮಧ್ಯಾಹ್ನ ಅನ್ನ ಸಾಂಬಾರ್ ರೋಟಿ, ರಾತ್ರಿಯೂ ಅದೇ. ದೋಸೆ, ಇಡ್ಲಿಗೆ ಅಲ್ಲಿ ಅವಕಾಶವೇ ಇರಲಿಲ್ಲ. ನಾಲ್ಕೈದು ದಿನಕ್ಕೊಮ್ಮೆ ಸ್ನಾನ ಮಾಡಿ, ದಿನವೂ ಅದೇ ತಿಂದು ಯಾವಾಗ ಮನೆಗೆ ವಾಪಸ್ ಬರ್ತೀನೋ ಅನ್ನುವಂತಾಗಿತ್ತು. ಹದಿನೈದು ದಿನಗಳ ನಂತರ ಮನೆಗೆ ವಾಪಸ್ ಬಂದ ದಿನ ಮನೆಯಲ್ಲಿ ಬಿಸಿಬಿಸಿ ಇಡ್ಲಿ. ಸ್ವಚ್ಛವಾಗಿ ಸ್ನಾನ ಮಾಡಿ ಒಂದೇ ಏಟಿಗೆ ಭರ್ತಿ ಇಪ್ಪತ್ತೆರಡು ಇಡ್ಲಿ ಸ್ವಾಹಾ ಮಾಡಿದ್ದೆ. ಮುಂದೇನಾಯಿತೆಂದು ಹೇಳುವ ಅವಶ್ಯಕತೆಯಿಲ್ಲ.

ರವಾ ಇಡ್ಲಿಗೂ ವಿಶ್ವಯುದ್ಧಕ್ಕೂ ಎತ್ತಣಿಂದೆತ್ತಣ ಸಂಬಂಧವಯ್ಯ?ರವಾ ಇಡ್ಲಿಗೂ ವಿಶ್ವಯುದ್ಧಕ್ಕೂ ಎತ್ತಣಿಂದೆತ್ತಣ ಸಂಬಂಧವಯ್ಯ?

ಇಡ್ಲಿ ಹೆಸರು ಬಂದಿದ್ದು ಹೇಗೆ?

ಇಡ್ಲಿ ಎಂಬ ಹೆಸರು ಹೇಗೆ ಬಂತೋ ಕಾಣೆ. ಭಾಷಾ ಪಂಡಿತರೇ ಇದನ್ನು ವಿವರಿಸಬೇಕು. ಆದರೆ, ಕನ್ನಡದ ಮೊದಲ ಗದ್ಯವೆಂದು ಹೆಸರಾಗಿರುವ ಶಿವಕೋಟ್ಯಾಚಾರ್ಯರು ಬರೆದಿರುವ 'ವಡ್ಡಾರಾಧನೆ'ಯಲ್ಲಿ ಇಡ್ಲಿಯ ಬಗ್ಗೆ ಪ್ರಸ್ತಾಪವಿದೆ. ಅದನ್ನು 'ಇದ್ದಲಿಕಾ' ಎಂದು ಕರೆಯಲಾಗಿದೆ. ಪುರಾತನ ಕಾಲದಲ್ಲಿ ತಯಾರಿಸಲಾಗುತ್ತಿದ್ದ ಇಡ್ಲಿ ಹುಟ್ಟಿಕೊಂಡಿದ್ದು ಕರ್ನಾಟಕದಲ್ಲಿಯೇ ಎಂಬುದು ನಿರ್ವಿವಾದಿತ. ಆದರೆ, ಆಧುನಿಕ ಇಡ್ಲಿ, ಅಂದರೆ ಹಬೆಯಿಂದ ತಯಾರಿಸುವ ಇಡ್ಲಿ ಹುಟ್ಟಿಕೊಂಡಿದ್ದು ಇಂಡೋನೇಷ್ಯಾದಲ್ಲಿ ಎಂದು ಇತಿಹಾಸಕಾರರು ಬರೆಯುತ್ತಾರೆ. ಅದೇನೇ ಇರಲಿ ಬಿಡಿ, ಹೊಟ್ಟೆ ತುಂಬುತ್ತಿರುವ ಆರೋಗ್ಯಕರ ಇಡ್ಲಿ ಹೊಟ್ಟೆ ತಣ್ಣಗಿರಲಿ.

ಈಗಂತೂ ಉದ್ದಿನ ಬೇಳೆ, ಅಕ್ಕಿಯನ್ನು ನೆನೆಯಿಟ್ಟು, ಹಿಂದಿನ ರಾತ್ರಿಯೇ ರುಬ್ಬಿ, ಒಂದಿಷ್ಟು ಸೋಡಾ, ಉಪ್ಪು ಬೆರೆಸಿ ಇಡ್ಲಿ ಹಿಟ್ಟನ್ನು ತಯಾರಿಸುವ ಕಷ್ಟ ತೆಗೆದುಕೊಳ್ಳುವ ಅವಶ್ಯಕತೆಯಿಲ್ಲ. ಏಕೆಂದರೆ, ಇಡ್ಲಿ ಮತ್ತು ದೋಸೆ ತಯಾರಿಸುವ ಟೂ ಇನ್ ವನ್ ಹಿಟ್ಟು ಅಂಗಡಿಯಲ್ಲಿಯೇ ಸಿಗುತ್ತದೆ. ಹೆಂಡತಿ ಊರಿಗೆ ಹೋಗಿದ್ದರೆ, 'ಇಡ್ಲಿ ವಡೆ ಸಾಂಬಾರ್, ನಾನೇ ಮಾಡೋ ಬಟ್ಲರ್, ನಾನೇ ಆಲ್ಸೋ ಸಿಂಗರ್, ನಮ್ಮ ನಾಡಿಗೆ ನಾನೇ ಸೂಪರ್' ಎಂದು ಹಾಡು ಹೇಳಿಕೊಳ್ಳುವ ಬ್ರಹ್ಮಚಾರಿಗಳಿಗೆ ಈ ರೆಡಿಮೇಡ್ ಇಡ್ಲಿಹಿಟ್ಟು ವರದಾನವಾಗಿದೆ. ಪ್ಲೇಟಿಗೆ ಹಾಕಿ ಹಬೆಯಲ್ಲಿ ಹತ್ತು ನಿಮಿಷ ಬೇಯಿಸಿದರೆ ಇಡ್ಲಿ, ತವಾದ ಮೇಲೆ ಹುಯ್ದರೆ ದೋಸೆ.

On World Idli Day, some Savouring memories about Karnataka dish Idli

ಕರೆ ಇಡ್ಲಿ ಬಗ್ಗೆ ಕೇಳಿದ್ದೀರಾ? ಎಲ್ಲಿ ಸಿಗುತ್ತೆ?

ಇಡ್ಲಿಯಲ್ಲೂ ತರಹೇವಾರಿ ವೆರೈಟಿಗಳು ಹುಟ್ಟಿಕೊಂಡಿವೆ. ಮಲ್ಲಿಗೆ ಇಡ್ಲಿ, ರವೆ ಇಡ್ಲಿ, ತಟ್ಟೆ ಇಡ್ಲಿ, ಬಟನ್ ಇಡ್ಲಿ, ಕಡುಬು ಇಡ್ಲಿ, ಪುಟ್ಟು ಇಡ್ಲಿ, ರಾಗಿ ಇಡ್ಲಿ... ಇನ್ನೂ ಏನೇನೋ. ಇಡ್ಲಿ ಅಂದ್ರೇನೇ, ವಾಷಿಂಗ್ ಪೌಡರ್ ನಿರ್ಮಾ ಹಾಕಿ ಒಗೆದ ಬಟ್ಟೆಯಷ್ಟೇ ಬೆಳ್ಳಗಿರುವುದಾದರೂ, ಇತ್ತೀಚಿನ ವರ್ಷಗಳಲ್ಲಿ ಯಾವುದ್ಯಾವುದೋ ಬೆರಕೆಗಳಾಗಿ ಇಡ್ಲಿ ಕಲರ್ ಕಲರ್ ಇಡ್ಲಿಗಳು ಕೂಡ ಬಂದಿವೆಯಂತೆ. ಅದರಲ್ಲೂ, ಕರೆ ಇಡ್ಲಿಯ ಆಗಮನವಾಗಿದೆಯಂತೆ. ಅದ್ಯಾವುದು, ಎಲ್ಲಿ ಸಿಗುತ್ತದೆ, ನಿಮಗೇನಾದರೂ ಗೊತ್ತಾ? ಒಂದು ಕೈ ನೋಡೇಬಿಡೋಣ!

English summary
On World Idli Day, some Savouring memories about Karnataka dish Idli.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X