• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಫೀಸ್‌ನಲ್ಲಿ ನಂಬರ್‌ ಒನ್‌ ಆಗುವುದು ಹೇಗೆ?

By Staff
|

(16) ನಿಮ್ಮ ಕಾರ್ಯರಂಗವನ್ನು ಯೋಜಿಸಿ ರೂಪಿಸಿಕೊಳ್ಳುವುದು ಮುಖ್ಯವಿದ್ದರೂ, ಒಮ್ಮೊಮ್ಮೆ ಯಾವ ಯೋಜನೆಯೂ ಇಲ್ಲದೇ ಅನೇಕ ಅದ್ಭುತವಾದ ಅವಕಾಶಗಳು ಅನಿರೀಕ್ಷಿತವಾಗಿ ಮತ್ತು ಅಯೋಜಿತವಾಗಿ ಒದಗಿ ಬರುತ್ತವೆ ಎಂಬುದನ್ನು ಗಮನಿಸಿ.

(17) ಹತ್ತು ವರ್ಷಗಳನಂತರ ನೀವು ನೆನೆಸಿಕೊಂಡು ಸಂತಸಪಡಬಹುದಾದಂಥ ಚಟುವಟಿಕೆಗಳನ್ನು ಇಂದು ಮಾಡಿ.

(18) ನಿಮ್ಮ ಆಫೀಸಿನ ಉದ್ದಗಲ ಎಷ್ಟು ಮುಖ್ಯವೋ ಅದಕ್ಕಿಂತ ನಿಮ್ಮ ಸಂಬಳದ ಮೊಬಲಗೇ ಹೆಚ್ಚು ಮುಖ್ಯ.

(19) ಮಾಡಿ ಮುಗಿಸಿದ ಸರಕು ಯಾವರೀತಿ ಕಾಣುತ್ತದೆ ಎಂಬ ಕಲ್ಪನೆ ನಿಮಗಿರಬೇಕು. ಅರ್ಧಂಬರ್ಧ ಮಾಡಿ ಮುಗಿಸಿದ ಕೆಲಸವನ್ನು ಎಂದಿಗೂ ಬಾಸಿನ ಬಳಿ ಅಥವಾ ಗ್ರಾಹಕರಬಳಿ ಕೊಂಡೊಯ್ಯಬೇಡಿ.

(20) ತಮಗೆ ಲಭ್ಯವಿರುವ ಎಲ್ಲಾ ಸಮಯವನ್ನೂ ಕೆಲಸಕ್ಕಾಗಿಯೇ ಉಪಯೋಗಿಸಿಕೊಳ್ಳುವವರನ್ನು ಕಷ್ಟಪಟ್ಟು ಕೆಲಸಮಾಡುವ ಶ್ರಮಜೀವಿಗಳೆಂದು ಪರಿಗಣಿಸಬಹುದು, ನಿಜ. ಆದರೆ, ಅವರಷ್ಟು ನೀರಸ ಜನರು ಮತ್ತಾರೂ ಇಲ್ಲ.

(21) ಆಕರ್ಷಕವಾದ ವಾಣಿಜ್ಯ-ಪತ್ರಗಳನ್ನು, ಮನಃಪೂರ್ವಕವಾದ ಕೃತಜ್ಞತಾಪತ್ರಗಳನ್ನು, ಕಣ್‌ಸೆಳೆಯುವ ಪ್ರಸ್ತಾಪಪತ್ರಗಳನ್ನು (ಪ್ರಪೋಸಲ್‌ಗಳನ್ನು) ಬರೆಯುವುದನ್ನು ಅಭ್ಯಾಸಮಾಡಿಕೊಳ್ಳಿ.

(22) ಯಾರೋ ಬರೆದ ಒಕ್ಕಣೆಗಳೆಲ್ಲ ನಿಜಜೀವನದ ಪ್ರತೀಕವೆಂದು ಭ್ರಮಿಸಬೇಡಿ. ಅದರಲ್ಲೂ, ಮೇಲಧಿಕಾರಿಗಳಿಂದ ಇಳಿದುಬರುವ ಒಕ್ಕಣೆಗಳಂತೂ ರಾಜಕೀಯದಿಂದಕೂಡಿದ ಮನಸ್ಸಿನ ಮಂಡಿಗೆಗಳು ಎಂಬುದನ್ನು ಮನನಮಾಡಿಕೊಳ್ಳಿ.

(23) ಹಣಕಾಸಿನ ವಿಷಯದಲ್ಲಿ ಲೆಕ್ಕಾಚಾರ ಸರಿಯಿರಲಿ, ಮೋಸ ವಂಚನೆ ತಟವಟಕ್ಕೆ ಅವಕಾಶಕೊಡಬೇಡಿ. ಸುಂಕ, ಕರ, ತೆರಿಗೆ ಮುಂತಾದ ವಿಷಯಗಳಲ್ಲಿ ನಿಖರವಾಗಿದ್ದರೆ ತಪ್ಪು ಮಾಡಿದ ಭಾವನೆ ಇರುವುದಿಲ್ಲ.

(24) ಪುನರ್‌ವ್ಯವಸ್ಥೆ (ರೀ-ಆರ್ಗನೈಜೇಷನ್‌) ಅಂದರೆ ಯಾರದೋ ಕೆಲವರ ಕೆಲಸಕ್ಕೆ ಸಂಚಕಾರವುಂಟಾಗುತ್ತದೆ ಎಂದರ್ಥ. ಹಾಗಾಗುವ ಸಂದರ್ಭದಲ್ಲಿ ತೀರ್ಮಾನ ಮಾಡುವ ಗುಂಪಿಗೆ ಸೇರಿಕೊಳ್ಳಿ.

(25) ಖಾಯಂ ಕೆಲಸ ಎಂಬುದು ಒಂದು ಕಲ್ಪನೆ ಅಷ್ಟೆ, ನಿಜವಲ್ಲ ಎಂಬುದನ್ನು ಯಾವಾಗಲೂ ಮನಸ್ಸಿನಲ್ಲಿ ಇಟ್ಟುಕೊಳ್ಳಿ.

(26) ‘‘ನಾಳೆ ನಾನು ಕೆಲಸ ಕಳೆದುಕೊಂಡರೆ ಏನು ಮಾಡುವೆ’’ ಎಂಬ ಪ್ರಶ್ನೆಗೆ ನಿಮ್ಮ ಬಳಿ ಯಾವಾಗಲೂ ಜವಾಬು ಸಿದ್ಧವಾಗಿರಬೇಕು.

(27) ಕಂಪನಿ ನಡೆಸುವ ಕ್ರಿಸ್ಮಸ್‌ ಪಾರ್ಟಿಗೆ ಹೋಗದೇ ಇರಬೇಡಿ.

(28) ಕಂಪನಿ ನಡೆಸುವ ಕ್ರಿಸ್ಮಸ್‌ ಪಾರ್ಟಿಯಲ್ಲಿ ಕುಡಿದು ತೂರಾಡಬೇಡಿ.

(29) ವಾರಾಂತ್ಯದಲ್ಲಿ ಕೆಲಸಮಾಡಬೇಡಿ, ಎಲ್ಲ ಕೆಲಸವನ್ನೂ ವಾರದ ದಿನಗಳಲ್ಲೇ ಮಾಡಿ ಮುಗಿಸಿ (ಸಂಜೆ ಹಿಂದಿರುಗುವುದು ನಿಧಾನವಾದರೂ ಸರಿ).

(30) ವಾಣಿಜ್ಯದಲ್ಲಿ ಜಯಶಾಲಿಗಳಾದವರೆಲ್ಲ ಸ್ವಾರಸ್ಯಕರವಾದ ವ್ಯಕ್ತಿಗಳೇ ಎಂಬುದನ್ನು ಗಮನಿಸಿ.

(31) ಕೆಲವೊಮ್ಮೆ, ನೀವು ಮುಟ್ಟಿದ್ದೆಲ್ಲ ಚಿನ್ನ ಆಗುವ ಉತ್ತಮ ದಿನಗಳು ನಡೆಯುತ್ತಿರುತ್ತವೆ. ಅಂಥಾ ಸಂದರ್ಭದ ಸಂಪೂರ್ಣ ಉಪಯೋಗ ಪಡೆದುಕೊಳ್ಳಿ. ತದ್ವಿರುದ್ಧವಾದ ದಿನಗಳೂ ಬಂದೇ ಬರುತ್ತವೆ. ಮುಟ್ಟಿದ್ದೆಲ್ಲ ನಾಶವಾಗುತ್ತವೆ. ಅಂಥ ದಿನಗಳನ್ನು ತಾಳ್ಮೆಯಿಂದ ಕಳೆಯಿರಿ, ಉತ್ತಮ ದಿನಗಳು ಮತ್ತೆ ಬಂದೇ ಬರುತ್ತವೆ.

(32) ‘‘ಅದು ನನ್ನ ಕೆಲಸವಲ್ಲ’’ ಎಂಬ ಮಾತನ್ನು ಎಂದೂ ಆಡದಿರಿ.

(33) ನಿಮ್ಮ ನಿಷ್ಠೆ, ನಿಮ್ಮ ವೃತ್ತಿಯಮೇಲೆ, ನಿಮ್ಮ ಆಸಕ್ತಿಗಳ ಮೇಲೆ ಮತ್ತು ನಿಮ್ಮ ಮೇಲೆ ಯಾವಾಗಲೂ ಇರಲಿ.

(34) ಯಾವ ಪ್ರತಿಭೆ ಕಾರಣದಿಂದ ನೀವು ಇತರರಿಗಿಂತ ಭಿನ್ನವಾಗಿ ಎದ್ದುಕಾಣುತ್ತೀರಿ ಎಂಬುದನ್ನು ಗುರುತಿಸಿಕೊಳ್ಳಿ. ಅಂಥಾ ಪ್ರತಿಭೆಗಳನ್ನು ಅವಕಾಶ ಸಿಕ್ಕಲ್ಲೆಲ್ಲ ನಿಮ್ಮ ಅಭಿವೃದ್ಧಿಗಾಗಿ ಉಪಯೋಗಿಸಿಕೊಳ್ಳಿ.

(35) ಯಾವುದೇ ಒಂದು ಯೋಜನೆ ನಮ್ಮ ಮನಸ್ಸಿನಲ್ಲಿ ನಿಲ್ಲುವುದು ಅದರ ಮುಕ್ತಾಯದ ದೃಶ್ಯದೊಂದಿಗೆ. ಕುಸ್ತಿಯಲ್ಲಿ ಹೇಳುತ್ತಾರಲ್ಲ ಹಾಗೆ, ಪ್ರಾರಂಭದಲ್ಲಿ ಕಂಡದ್ದಕ್ಕಿಂತ ಗೆದ್ದು ಕೈ ಮೇಲಿತ್ತಿದಾಗ ಪೈಲ್ವಾನ ಶಕ್ತಿಶಾಲಿಯಾಗಿ ಕಾಣುತ್ತಾನೆ. ಆದ್ದರಿಂದ, ಪ್ರತಿ ಯೋಜನೆಯಲ್ಲೂ ನಿಮ್ಮ ಗೆಲುವಿನ ಕೈ ಮೇಲೆತ್ತಿಕೊಂಡಿರುವಂತೆ ಕೊನೆಯ ದೃಶ್ಯವನ್ನು ನಿರ್ಮಿಸಿಕೊಳ್ಳಿ.

ರಿಚರ್ಡ್‌ ಮೋರಾನ್‌ ಬರೆದಿಟ್ಟ ಮೇಲಿನ ಸೂತ್ರಗಳು ನಿಮ್ಮ ವೃತ್ತಿಜೀವನದಲ್ಲಿ ಉಪಯೋಗಕ್ಕೆ ಬರಲಿ ಎಂದು ಆಶಿಸುತ್ತ ವಿರಮಿಸುವೆ ಮುಂದಿನ ಕಂತಿನವರೆಗೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more