• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಫೀಸ್‌ನಲ್ಲಿ ನಂಬರ್‌ ಒನ್‌ ಆಗುವುದು ಹೇಗೆ?

By Staff
|

‘ವಿಜಯಕ್ಕೆ 5ಮೆಟ್ಟಿಲು’ ಪುಸ್ತಕದಿಂದ ಹಿಡಿದು, ‘ಒಂದೇ ದಿನದಲ್ಲಿ ಯಶಸ್ಸು’ವರೆಗೆ ನೂರಾರು ವ್ಯಕ್ತಿತ್ವ ವಿಕಸನದ ಪುಸ್ತಕಗಳು ಬಂದಿವೆ. ಅದರಲ್ಲೂ ಇಂಗ್ಲಿಷ್‌ನಲ್ಲಿ ಇಂತಹ ಪುಸ್ತಕಗಳು ರಾಶಿ ಬೀಳುತ್ತಿವೆ! ಇವುಗಳ ಪರಿಣಾಮ ನಮಗಂತೂ ಗೊತ್ತಿಲ್ಲ. ಆದರೆ ಈ ರಿಚರ್ಡ್‌ ಮೋರಾನ್‌ನ ಕೆಲ ವಿಚಾರಗಳು ಗಮನಸೆಳೆಯುವಂತಿವೆ. ಮಾಡೋ ಕೆಲಸದಲ್ಲಿ ಯಶಸ್ಸು ಬೇಕು ಅನ್ನುವವರು, ಆತನ ಸೂತ್ರಗಳ ಮೇಲೆ ಕಣ್ಣಾಡಿಸಬಹುದು.

Golden Rules for Career Successರಿಚರ್ಡ್‌ ಮೋರಾನ್‌ ವಾಣಿಜ್ಯಕ್ಷೇತ್ರದಲ್ಲಿ ತಜ್ಞ ಮತ್ತು ವಿಶ್ವದ ನಾನಾ ಭಾಗಗಳಲ್ಲಿ ಸಲಹೆಗಾರನಾಗಿ ದುಡಿದಿರುವವನು. ವೃತ್ತಿಗೆ ಸಂಬಂಧಪಟ್ಟಂತೆ ಹಲವು ನಿಯಮಗಳನ್ನು ಆತ ಕಲೆಹಾಕಿದ್ದಾನೆ. ಇವು ಪ್ರತಿಯಾಬ್ಬರೂ ಅನುಸರಿಸಬೇಕಾದವು, ಆದರೆ ಎಲ್ಲರಿಗೂ ಮನವರಿಕೆಯಾಗಿರುವುದಿಲ್ಲ.

ಆತ ಇಂಗ್ಲೀಷಿನಲ್ಲಿ ಪ್ರಕಟಿಸಿರುವ ಈ ಸೂತ್ರಗಳನ್ನು ನನ್ನ ಅವಗಾಹನೆಗೆ ತಂದವರು ‘ಜಾಲತರಂಗ’ದ ಅಭಿಮಾನಿ ಓದುಗರಲ್ಲಿ ಒಬ್ಬರಾದ ವೀಣಾ ಶಿವಣ್ಣ. ಅವುಗಳನ್ನು ಮೂಲಕ್ಕೆ ಧಕ್ಕೆಬಾರದಂತೆ ಸಾಧ್ಯವಾದಷ್ಟು ನಿಷ್ಠೆಯಿಂದ ಕನ್ನಡಕ್ಕೆ ಇಳಿಸಿದ್ದೇನೆ. ಇಗೋ ಓದಿ, ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ.

(1) ವಾಣಿಜ್ಯಕ್ಷೇತ್ರದಲ್ಲಿ ಗೆಲುವು ನಿಖರವಲ್ಲ, ಸೋಲು ಖಚಿತವಲ್ಲ. ಪರಿಣಾಮ ಏನೆಂಬುದರ ಬಗ್ಗೆ ಅನುಮಾನವಿದ್ದಾಗ ಗೆದ್ದೆವೆಂದು ಘೋಷಿಸಿಕೊಳ್ಳಿ.

(2) ನಿಮ್ಮ ಕೆಲಸದ ಎಲ್ಲ ವಿವರಗಳನ್ನು ಬರೆದು ದಾಖಲುಮಾಡಿ. ಏಕೆಂದರೆ, ಮುಂದೆ ಯಾರಾದರೋ ಅದಕ್ಕೆ ಸಂಬಂಧಪಟ್ಟ ವಿವರಗಳನ್ನು ಕೇಳಿಯೇ ಕೇಳುತ್ತಾರೆ.

(3) ನಿಮ್ಮ ಹಿರಿಯ ವ್ಯವಸ್ಥಾಪಕರ ಸಾನ್ನಿಧ್ಯದಲ್ಲಿ ಆರಾಮವಾಗಿರುವುದನ್ನು ಅಭ್ಯಾಸಮಾಡಿಕೊಳ್ಳಿ. ಅದು ಸಾಧ್ಯವಾಗದಿದ್ದರೆ, ಕೊನೇ ಪಕ್ಷ ಆರಾಮವಾಗಿರುವಂತೆ ನಟಿಸುವುದನ್ನು ಕಲಿಯಿರಿ.

(4) ನಿಮ್ಮ ಬಾಸಿನ ಬಳಿ ಸಮಸ್ಯೆಗಳನ್ನು ತರಬೇಡಿ, ತಂದರೆ ಅದಕ್ಕೆ ಪರಿಹಾರವನ್ನೂ ಜೊತೆಗೆ ತನ್ನಿ. ನಿಮಗೆ ಸಂಬಳ ಕೊಡುವುದು ನಿಮ್ಮ ಯೋಚನೆ ಮಾಡುವ ಶಕ್ತಿಗೆ, ಗೋಳಾಡುವ ಗುಣಕ್ಕಲ್ಲ.

(5) ಪ್ರತಿನಿತ್ಯ ಗಂಟೆಗಟ್ಟಳೆ ದುಡಿಯುವುದೇ ಮುಖ್ಯವಲ್ಲ. ಫಲಿತಾಂಶಗಳು ಮುಖ್ಯ, ಕೇವಲ ಶ್ರಮಕ್ಕೆ ಏನೇನೂ ಬೆಲೆಯಿಲ್ಲ.

(6) ಒಳ್ಳೆ ವಿಷಯಗಳು ಮನಸ್ಸಿಗೆ ಹೊಳೆದಾಗ ಅವುಗಳನ್ನು ಬರೆದಿಟ್ಟುಕೊಳ್ಳಲು ಮರೆಯಬೇಡಿ. ಒಳ್ಳೆಯ ಪೆನ್ನುಗಳಂತೆ ಒಳ್ಳೆ ಐಡಿಯಾಗಳೂ ಮಾಯವಾಗಿಬಿಡುತ್ತವೆ.

(7) ಬಾಸ್‌ ಕೆಲಸಕ್ಕೆ ಹಾಜರಾಗುವುದಕ್ಕಿಂತ 30 ನಿಮಿಷ ಮುಂಚಿತವಾಗಿ ಹಾಜರಾಗುವುದನ್ನು ಕಲಿಯಿರಿ.

(8) ಸಹೋದ್ಯೋಗಿಗಳಿಗೆ ಒಳ್ಳೊಳ್ಳೆ ಜಾಗಗಳಲ್ಲಿ ಅವಕಾಶಗಳ ಬಲೆಯನ್ನು ನಿರ್ಮಿಸಿ. ನಿಮಗೂ ಅಂಥಾ ಬಲೆಗಳ ಉಪಯೋಗ ಮುಂದೆ ಯಾವಾಗ ಬೇಕಾಗಬಹುದೋ ಯಾರಿಗೆ ಗೊತ್ತು.

(9) ನಿಜವಾಗಿಯೂ ಮೈಸರಿಯಿಲ್ಲದಿದ್ದಾಗ ಮಾತ್ರ ವೈದ್ಯಕೀಯ ರಜೆ ಹಾಕಿ.

(10) ರಹಸ್ಯವನ್ನು ಯಾರೂ ಮುಚ್ಚಿಡಲಾರರು ಅಥವಾ ಮುಚ್ಚಿಡುವುದಿಲ್ಲ ಎಂಬ ನಿಯಮವನ್ನು ಅರಿತು ನಡೆಯಿರಿ.

(11) ನೀವು ಕೆಲಸಮಾಡುವಾಗ ಯಾವಾಗ (ಅಂದರೆ, ಬೆಳಗ್ಗೆ, ಮಧ್ಯಾಹ್ನ, ಸಂಜೆ), ಎಂಥ ವಾತಾವರಣದಲ್ಲಿ (ಅಂದರೆ, ಒತ್ತಡ ಇದ್ದಾಗ, ಇಲ್ಲದಾಗ, ಇತ್ಯಾದಿ) ನಿಮ್ಮ ಸಾಮರ್ಥ್ಯ ಹೆಚ್ಚು ಎಂಬುದನ್ನು ಕಂಡುಕೊಳ್ಳಿ, ಅದೇ ಪ್ರಕಾರವಾಗಿ ಮಾಡಬೇಕಾದ ಕೆಲಸಗಳ ವೇಳೆ ಮತ್ತು ಕ್ರಮಗಳನ್ನು ತಯಾರಿಸಿ, ಅದಕ್ಕೆ ತಕ್ಕ ವಾತಾವರಣದಲ್ಲಿ ದುಡಿಯಿರಿ.

(12) ನಿಮ್ಮ ಕಛೇರಿಯಲ್ಲಿ ದುಡಿಯುವ ಎಲ್ಲರನ್ನೂ ಗೌರವದಿಂದ ಕಾಣಿ ಅವರು ಗುಮಾಸ್ತರಾಗಿರಲಿ, ಶುಚಿಮಾಡುವವರಾಗಿರಲೀ, ಇಡೀ ಕಂಪನಿಯ ಯಜಮಾನರಾಗಿರಲಿ ಯಾರನ್ನೂ ಕೀಳೆಂಬಂತೆ ಅಟ್ಟದ ಮೇಲೆ ನಿಂತು ಮಾತಾಡಿಸಬೇಡಿ.

(13) ನಿಮ್ಮ ಗಿರಾಕಿಗಳಮುಂದೆ ಅಥವಾ ಗ್ರಾಹಕರಮುಂದೆ ಎಷ್ಟೇ ಒತ್ತಡವಿದ್ದರೂ, ದಣಿದವರಂತೆ ವರ್ತಿಸಬೇಡಿ. ಒಂದು ದೀರ್ಘವಾದ ಉಸಿರು ತೆಗೆದುಕೊಂಡು, ‘‘ಇಡೀ ಮನುಜಕುಲದ ಚಟುವಟಿಕೆಗಳಲ್ಲಿ ಈ ಒಂದು ಚಟುವಟಿಕೆ ಎಷ್ಟು ಮುಖ್ಯ?’’ ಎಂದು ನಿಮ್ಮನ್ನು ನೀವೇ ಕೇಳಿಕೊಳ್ಳಿ.

(14) ನಿಮ್ಮದೇ ಆದ ಕಂಪನಿಯಾಂದನ್ನು ತೆರೆಯುವ ಮುನ್ನ ತನ್ನದೇ ಆದ ಕಂಪನಿಯನ್ನು ನಡೆಸಿತ್ತಿರುವ ಮಿತ್ರನಿಗೊಂದು ಭೇಟಿ ಕೊಡಿ. ನಿಮ್ಮ ಖಾಯಿಲೆ ಅಲ್ಲೇ ವಾಸಿ ಆದರೂ ಆದೀತು.

(15) ಮತ್ತೊಬ್ಬರ ಕೊಡುಗೆಯನ್ನು ಎಲ್ಲರೆದುರಿಗೆ ಅನುಮೋದಿಸಿದಾಗ ನಿಮ್ಮ ಲಾಭ ದ್ವಿಗುಣಗೊಳ್ಳುವ ಸಾಧ್ಯತೆಯಿದೆ ಎಂಬುದನ್ನು ನೆನಪಿನಲ್ಲಿಡಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more