• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಧರ್ಮ ಸಂಕಟ’ ಪದ ಬಳಕೆ ಬಗೆಗೊಂದು ಜಿಜ್ಞಾಸೆ

By Super
|

ತವರು ತೊರೆದ ಎನ್‌ಆರ್‌ಐಗಳ ತಾಕಲಾಟ ಮತ್ತು ಗೊಂದಲಗಳು ಕಳೆದ ವಾರ ಇಲ್ಲಿ ಚರ್ಚೆಯಾಗಿತ್ತು. ಚರ್ಚೆಗೆ ಪ್ರತಿಕ್ರಿಯೆಯಾಗಿ ಬಂದ ಸೂರ್ಯನಾರಾಯಣ ಶರ್ಮಾರ ಪತ್ರ, ಅನೇಕ ಓದುಗರಿಗೆ ಉಪಯುಕ್ತವಾಗುವುದು ಎಂದು ನಂಬಿ ಅದನ್ನು ಯಥಾವತ್‌ ಈ ಕೆಳಗೆ ಪ್ರಸ್ತುತಪಡಿಸಿದ್ದೇನೆ. ಅದರ ನಂತರ ನನ್ನ ಎರಡು ಮಾತುಗಳೊಂದಿಗೆ ಈ ಲೇಖನವನ್ನು ಮುಕ್ತಾಯಗೊಳಿಸುತ್ತೇನೆ.

  • ಡಾ. ಮೈ. ಶ್ರೀ. ನಟರಾಜ, ಪೊಟೋಮೆಕ್‌, ಮೇರೀಲ್ಯಾಂಡ್‌

mysreena@aol.com

ಎರಡುವಾರಗಳ ಹಿಂದೆ ಜಾಲತರಂಗದಲ್ಲಿ ಪ್ರಕಟವಾದ ಒಂದು ಲೇಖನದಲ್ಲಿ, ನಾನು ಭಾಗವಹಿಸಿದ ಗಣರಾಜ್ಯೋತ್ಸವ ಸಮಾರಂಭವನ್ನೇ ಹಿನ್ನೆಲೆಯಾಗಿಟ್ಟುಕೊಂಡು ಕೆಲವು ಆತ್ಮಾವಲೋಕನದ ಮಾತುಗಳನ್ನು ಓದುಗರೊಂದಿಗೆ ಹಂಚಿಕೊಂಡಿದ್ದೆ. ಲೇಖನವನ್ನು ಹಲವು ಪ್ರಶ್ನೆಗಳೊಂದಿಗೆ ಮುಕ್ತಾಯಗೊಳಿಸಿದ್ದೆ ಎನ್ನುವುದನ್ನು ಓದುಗರು ಜ್ಞಾಪಿಸಿಕೊಳ್ಳಬಹುದು.

ಸಾರಾಂಶ ರೂಪದಲ್ಲಿ ಹೇಳುವುದಾದರೆ, ಆ ಪ್ರಶ್ನೆಗಳು ಹೀಗಿದ್ದವು: (1) ನಾವು (ಅಂದರೆ, ಇತರ ದೇಶಗಳಿಂದ ವಲಸೆ ಬಂದು ಇಲ್ಲಿನ ಪೌರತ್ವವನ್ನು ಸ್ವೀಕರಿಸಿರುವವರು) ಕಾನೂನಿನ ಪ್ರಕಾರ ಮಾತ್ರ ಅಮೆರಿಕನ್ನರೇ ಅಥವಾ ಕಾಯಾ-ವಾಚಾ-ಮನಸಾ ಅಮೆರಿಕನ್ನರೇ? (2) ಹುಟ್ಟಿದ ದೇಶದಬಗ್ಗೆ ಹೊಗಳಿಕೆ ಕೇಳಿದಾಗ ಉಬ್ಬುವಂತೆ, ಸ್ವೇಚ್ಛೆಯಿಂದ ಆಯ್ದು ಕಟ್ಟಿಕೊಂಡ ಅಮೆರಿಕದಬಗ್ಗೆ ಒಳ್ಳೆಯ ಮಾತನ್ನು ಕೇಳಿದಾಗಲೂ ಹಿಗ್ಗುತ್ತೇವೆಯೇ? (3) ‘ನಾವು’ ‘ನಮ್ಮದು’ ಎನ್ನುವ ಶಬ್ದಗಳ ಅರ್ಥವೇನು, ಅಮೆರಿಕನ್ನರು ಎಂದೋ ಅಥವಾ ಬಿಟ್ಟುಬಂದ ದೇಶದವರು ಎಂದೋ? (4) ನಮ್ಮ ದ್ವಂದ್ವ ನಮ್ಮ ತಲೆಗೇ ಮುಗಿಯುತ್ತದೆಯೋ ಅಥವಾ ಇಲ್ಲೇ ಹುಟ್ಟಿ ಬೆಳೆದ ನಮ್ಮ ಮಕ್ಕಳನ್ನೂ ಕಾಡುತ್ತದೋ? ಮತ್ತು (5) ಭಾರತೀಯತೆಯ ಭಾರ (ಬ್ಯಾಗೇಜು?) ಎಲ್ಲಿಯವರೆಗೆ ಮುಂದುವರೆಯಬಹುದು, ಒಂದೆರಡು ಪೀಳಿಗೆಗಳಾದಮೇಲೆ ಪರಿಸ್ಥಿತಿ ಏನಾಗಬಹುದು? ಓದುಗರ ಅಭಿಪ್ರಾಯವೇನು ಎಂಬ ಪ್ರಶ್ನೆಯಾಂದಿಗೆ ಅಂಕಣ ಮುಗಿದಿತ್ತು.

ಓದುಗರಿಂದ ಹಲವಾರು ಲೇಖನಗಳಿಗೆ ಪ್ರತಿಕ್ರಿಯೆ ಬರುತ್ತದಾದರೂ, ಬಂದ ಎಲ್ಲಾ ಪ್ರತಿಕ್ರಿಯೆಗಳನ್ನೂ ಇತರ ಓದುಗರಿಗೆ ತಲುಪಿಸುವುದು ಸಾಧುವೂ ಅಲ್ಲ, ಸಾಧ್ಯವೂ ಅಲ್ಲ. ಅಪರೂಪಕ್ಕೆ ಒಮ್ಮೊಮ್ಮೆ ಬೆಲೆಬಾಳುವ, ಇತರರೊಂದಿಗೆ ಹಂಚಿಕೊಳ್ಳಲೇಬೇಕಾದ ಪ್ರತಿಕ್ರಿಯೆಗಳು ಬರುತ್ತವೆ. ಅಂಥ ಒಂದು ಪ್ರತಿಕ್ರಿಯೆಯನ್ನು ಬೆಂಗಳೂರಿನಲ್ಲಿರುವ, ಜಾಲತರಂಗದ ಅಭಿಮಾನೀ ಓದುಗರೊಬ್ಬರು ಕಳಿಸಿದ್ದಾರೆ.

ಎಚ್‌. ವಿ. ಸೂರ್ಯನಾರಾಯಣ ಶರ್ಮಾ ಅವರ ಪತ್ರ ಅನೇಕ ಓದುಗರಿಗೆ ಉಪಯುಕ್ತವಾಗುವುದು ಹಾಗು ಈ ರೀತಿ ಓದುಗರೊಂದಿಗೆ ಹಂಚಿಕೊಳ್ಳಲು ಅವರ ಅಭ್ಯಂತರವಿಲ್ಲ ಎಂದು ನಂಬಿ ಅದನ್ನು ಯಥಾವತ್‌ ಈ ಕೆಳಗೆ ಪ್ರಸ್ತುತಪಡಿಸಿದ್ದೇನೆ. ಅದರ ನಂತರ ನನ್ನ ಎರಡು ಮಾತುಗಳೊಂದಿಗೆ ಈ ಲೇಖನವನ್ನು ಮುಕ್ತಾಯಗೊಳಿಸುತ್ತೇನೆ. ನಾನು ಶ್ರೀಯುತ ಶರ್ಮಾರೊಂದಿಗೆ ವಾದಕ್ಕೆ ಇಳಿಯುತ್ತಿಲ್ಲ ಎಂದು ಮೊದಲೇ ತಿಳಿಸಿಬಿಡುತ್ತೇನೆ.

ಶ್ರೀ ಶರ್ಮಾ ಅವರು ನಾನು ಉಪಯೋಗಿಸಿರುವ ‘ಧರ್ಮಸಂಕಟ’ ಎಂಬ ಶಬ್ದದಬಗ್ಗೆ ಅಭ್ಯಂತರವನ್ನು ತಮ್ಮ ಅಂಚೆಯಲ್ಲಿ ವ್ಯಕ್ತಪಡಿಸಿದ್ದಾರೆ, ಎಂಬುದನ್ನು ಓದುಗರು ಹಿನ್ನೆಲೆಯಲ್ಲಿ ಇಟ್ಟುಕೊಳ್ಳಬೇಕು.

ಈಗ ಅವರ ಪತ್ರ ನೋಡೋಣ...

ಶ್ರೀಯುತ ನಟರಾಜ ಅವರಿಗೆ ನಮಸ್ಕಾರ.

ವಿದೇಶಗಳಲ್ಲಿ ನೆಲೆಸಿರುವ ಭಾರತೀಯರ ದ್ವಂದ್ವಗಳಬಗ್ಗೆ ನಿಮ್ಮ ಲೇಖನ ಓದಿದೆ. ಇದು ದೊಡ್ಡ ಸಮಸ್ಯೆ ಏನಲ್ಲ.

ಒಂದು ನಾಣ್ನುಡಿ ಇದೆ- ‘ಆಧುನಿಕ ಸಮಸ್ಯೆಗಳೆಲ್ಲಕ್ಕೂ ಆಧ್ಯಾತ್ಮಿಕತೆಯಾಂದೇ ಪರಿಹಾರ’ (ದೇವರ ಪೂಜೆ ಇತ್ಯಾದಿ ರಿಚುಯಲ್ಸ್‌ ಅಲ್ಲ). ಶುದ್ಧ ಆಧ್ಯಾತ್ಮಿಕತೆಯೆಂದರೆ ಯಾವುದೇ ಭಾವೋನ್ಮಾದರಹಿತ ವೈಚಾರಿಕ ಶ್ರದ್ಧೆ. ಇದು ಮನಸ್ಸು ಬುದ್ಧಿಗಳಲ್ಲಿ ಸ್ಥಿರಗೊಂಡಲ್ಲಿ ‘ವಸುಧೈವ ಕುಟುಂಬಕಮ್‌’ ಸಾಧ್ಯವಾದಂತೆಯೇ. ಭಾರತೀಯತೆಯನ್ನು ಅಲ್ಲಿನ ಬಾವುಟಕ್ಕೋ, ಕೆಲವು ಆಚರಣೆಗಳಿಗೋ, ಆಹಾರಪದ್ಧತಿಗೋ, ವೇಷ-ಭೂಷಣ ಇತ್ಯಾದಿ ಬಾಹ್ಯವಿಚಾರಗಳಿಗೋ ಸೀಮಿತಗೊಳಿಸಿಕೊಳ್ಳದೇ, ಇವೆಲ್ಲಕ್ಕೂ ಮಿಗಿಲಾದ ಆಧ್ಯಾತ್ಮಿಕ ತತ್ವ ಅಂದರೆ, ಧರ್ಮ, ಅರ್ಥ, ಕಾಮ, ಮೋಕ್ಷ (ಜಜಿಛ್ಟಿಚ್ಟ್ಚಜಢ ಟ್ಛ ಡಚ್ಝ್ಠಛಿಠ) ಇವುಗಳ ಕಡೆ ಗಮನಹರಿಸಿ ಜೀವನದಲ್ಲಿ ಅನುಸರಿಸುವುದು ಸಾಧ್ಯವಾದರೆ ಭಾರತೀಯರು (ಹಿಂದೂಗಳು) ಎಲ್ಲಿದ್ದರೂ ಯಾವ ಗೊಂದಲಗಳಿಗೂ ಅವಕಾಶವಾಗುವುದಿಲ್ಲ.

ತಾವು ನೆಲೆಸಿರುವ ರಾಷ್ಟ್ರಹಾಗೂ ಅಲ್ಲಿನ ಸಂವಿಧಾನ ಕೊಡಮಾಡಿರುವ ಹಕ್ಕು/ಸ್ವಾತಂತ್ರ್ಯಗಳಿಗನುಸಾರವಾಗಿ ನಮ್ಮ ವ್ಯಾಪಾರ, ಉದ್ಯೋಗ ಅಥವಾ ವೃತ್ತಿಯಲ್ಲಿ ತೊಡಗಿಸಿಕೊಂಡು, ನಿಗದಿತ ತೆರಿಗೆ ನೀಡುತ್ತಾ ಅಲ್ಲಿನ ಆರ್ಥಿಕ ವ್ಯವಸ್ಥೆಗೆ ನಮ್ಮ ಕೊಡುಗೆ ನೀಡಿ ಪ್ರತಿಯಾಗಿ ಅಲ್ಲಿನ ಸುಖ ಸೌಲಭ್ಯಗಳನ್ನು ಅನುಭವಿಸುವುದರಲ್ಲಿ ಯಾವ ಗೊಂದಲವಿದೆ. ಕ್ರಿಕೆಟ್‌ ಅಥವಾ ಫುಟ್‌ಬಾಲ್‌ ಪಂದ್ಯಗಳಲ್ಲಿನ ಫಲಿತಾಂಶಗಳ ನಂತರ ಕಾಣಬರುವ ಉನ್ಮಾದ ಆವೇಶಗಳೇ ದೇಶಭಕ್ತಿಯ ಹೆಗ್ಗುರುತು ಎಂಬ ಅಪವ್ಯಾಖ್ಯಾನಗಳ ಹಿನ್ನೆಲೆಯಲ್ಲಿ ನೀವು ಗುರುತಿಸಿರುವ ರಾಷ್ಟ್ರನಿಷ್ಠೆಯ ಗೊಂದಲಗಳು ಏಳುತ್ತವೆ.

ಇನ್ನು ಯುದ್ಧಕಾಲದಲ್ಲಿ ಒಂದು ರಾಷ್ಟ್ರದಲ್ಲಿ ಅಲ್ಲಿನ ಜನರಲ್ಲೇ ಅಭಿಪ್ರಾಯಭೇದಗಳಿರುವಾಗ ವಲಸಿಗರಿಗೂ ತಮ್ಮ ಅಭಿಪ್ರಾಯ ಹೇಳುವ ಸ್ವಾತಂತ್ರ್ಯಕ್ಕೆ ಧಕ್ಕೆ ಇಲ್ಲವಲ್ಲ. ಅಮೆರಿಕನ್ನರೊಂದಿಗೆ ಸಂವಹನ ನಡೆಸುವಾಗ, ‘ನಾನು ಕನ್ನಡಿಗ’ ‘ಕನ್ನಡದಲ್ಲೇ ಮಾತನಾಡುವೆ’ ಎಂದರೆ ಅದನ್ನು ಕನ್ನಡಾಭಿಮಾನವೆನ್ನಲಾಗುವುದೇ? ಅಮೆರಿಕನ್ನ ಡರಾಗಿದ್ದುಕೊಂಡು ಭಾರತೀಯತೆಯನ್ನು ಉಳಿಸಿಕೊಳ್ಳುವ ರೀತಿ ವಿಶಿಷ್ಟವಾಗಿರುತ್ತದೆ. ಅಧ್ಯಯನ, ಆಚಾರ, ಹೊಂದಾಣಿಕೆ, ತಾಳ್ಮೆ, ಕುಶಲತೆ, ಎಲ್ಲವೂ ಮೇಳೈಸಿದರೆ ವಿಶ್ವಕುಟುಂಬಿ ಭಾರತೀಯ, ಇದೊಂದೇ ಭಾರತದ ಹೆಗ್ಗಳಿಕೆ ಕೂಡ.

ವಿಷಯ ನೇರವಾಗೇ ಅರ್ಥವಾಗುವ ಪ್ರೌಢಿಮೆಯುಳ್ಳ ನಿಮಗೆ ಉದಾಹರಣೆಗಳನ್ನು ನಾನು ಕೊಡಹೋಗಿಲ್ಲ. ನಿರ್ದಿಷ್ಟ ಸಮಸ್ಯೆಗಳಿದ್ದರೆ, ಸನ್ನಿವೇಶಗಳನ್ನು ವಿವರಿಸಿದಲ್ಲಿ ಸೂಕ್ತ ಸಮಾಧಾನ ಸೂಚಿಸಬಲ್ಲೆ.

ವಂದನೆಗಳು,

ವಿಶ್ವಾಸವಿರಲಿ

ಎಚ್‌. ವಿ. ಸೂರ್ಯನಾರಾಯಣ ಶರ್ಮಾ (ಸಂ. 38, ಎರಡನೇ ಮಹಡಿ, ಪೃಥ್ವೀ ಕಟ್ಟಡದ ಹಿಂಭಾಗ, ಕೆಂಪೇಗೌಡ ರಸ್ತೆ, ಬೆಂಗಳೂರು-560 009: 2226 0384, 94483 24971.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Dilemma of displaced Indians: an addendum by M.S. Nataraj, Jalataranga Columnist.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more