• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪರಿಪೂರ್ಣತಾ-ಪಿಶಾಚಿಗಳು!!!

By Staff
|


ಇದೋ ಓದಿಕೊಳ್ಳಿ, ನಿಮಗೂ ಪರಿಪೂರ್ಣತೆಯ ಭೂತ ಹಿಡಿದಿದ್ದರೆ ನಿವಾರಿಸಿಕೊಳ್ಳಿ. (ಸೂಚನೆ: ಇಲ್ಲಿ "ಪರ್ಫೆಕ್ಷನಿಸ್ಟ್" ಎಂಬ ಶಬ್ದವನ್ನು "ಪರಿಪೂರಣತಾ-ಪಿಶಾಚಿ" ಎಂದು ಕರೆದಿದ್ದೇನೆ, ಸಂಶಯ-ಪಿಶಾಚಿ ಇದ್ದಹಾಗೆ!)

Breaking the Perfection Habit ಪರಿಪೂರ್ಣತೆಯನ್ನು ಹುಡುಕುವುದು ಮನುಷ್ಯನ ಹಳೆಯ ಚಟಗಳಲ್ಲಿ ಒಂದು. ಆದರೆ ಪರಿಪೂರ್ಣತೆ ಎಂಬುದು ಒಂದು ಭ್ರಮೆ. ದೈವಸೃಷ್ಟಿ ಕೂಡ ಪರಿಪೂರ್ಣವಲ್ಲ, ಅಂದಮೇಲೆ ಹುಲುಮಾನವರ ಪಾಡೇನು? ಇದೆಲ್ಲ ಗೊತ್ತಿದ್ದರೂ ಮನುಷ್ಯರು ದೋಷರಹಿತರಾಗಿರಬೇಕೆಂದು ಬಯಸುತ್ತಾರೆ, ತಮ್ಮ ದೋಷಗಳನ್ನು ಕಡೆಗಣಿಸಿ ಇತರರು ಸಂಪೂರ್ಣ ದೋಷರಹಿತರಾಗಿರಬೇಕೆಂದು ಬಯಸಿ ಇತರರಿಗೆ ಹಿಂಸೆ ಕೊಡುತ್ತಾರೆ.

ಸಣ್ಣಪುಟ್ಟ ದೋಷಗಳನ್ನು ತಿದ್ದಲು ನಾವು ಕಳೆಯುವ ಸಮಯ ಮತ್ತು ಪಡುವ ಪಾಡುಗಳನ್ನು ನೆನೆಸಿಕೊಂಡರೆ ಪರಿಪೂರ್ಣತಾ ಪಿಶಾಚಿಗಳಿಗೆ ಯಾರಾದರೂ ಒಂದಿಷ್ಟು ಬುದ್ಧಿ ಹೇಳಬಾರದೇ ಎನ್ನಿಸುತ್ತದೆ. ಪಿನೋಲಪಿ ಟ್ರಂಕ್ ಎಂಬಾಕೆ ವೃತ್ತಿಯಲ್ಲಿ ಸಲಹೆಗಾರ್ತಿ. ಹಣಕಾಸಿನ ವ್ಯವಸ್ಥೆಯ ಬಗ್ಗೆ, ಮತ್ತು ನಾನಾ ವೃತ್ತಿಗಳಲ್ಲಿ ನಿರತರಾದವರಿಗೆ ಬುದ್ಧಿವಾದ ಹೇಳುವುದು ಅವಳ ವೃತ್ತಿ. ಇತ್ತೀಚೆಗೆ ಅಂತರ್ಜಾಲದಲ್ಲಿ ಆಕೆ ಬರೆದ ಒಂದು ಲೇಖನವನ್ನು ನನ್ನ ಮಗಳು ನನಗೆ ರವಾನಿಸಿದಳು. ಅದನ್ನು ಆಧರಿಸಿ ಜಾಲತರಂಗದ ಓದುಗರಿಗಾಗಿ ಹೆಚ್ಚುಕಮ್ಮಿ ಆಕೆಯ ಮಾತುಗಳನ್ನೇ ಕನ್ನಡಕ್ಕಿಳಿಸಿದ್ದೇನೆ. ಇದೋ ಓದಿಕೊಳ್ಳಿ, ನಿಮಗೂ ಪರಿಪೂರ್ಣತೆಯ ಭೂತ ಹಿಡಿದಿದ್ದರೆ ನಿವಾರಿಸಿಕೊಳ್ಳಿ. (ಸೂಚನೆ: ಇಲ್ಲಿ "ಪರ್ಫೆಕ್ಷನಿಸ್ಟ್" ಎಂಬ ಶಬ್ದವನ್ನು "ಪರಿಪೂರಣತಾ-ಪಿಶಾಚಿ" ಎಂದು ಕರೆದಿದ್ದೇನೆ, ಸಂಶಯ-ಪಿಶಾಚಿ ಇದ್ದಹಾಗೆ!)

ಪಿನೋಲಪಿ ಹೇಳುತ್ತಾಳೆ : "ನಾನೇನೂ ಪರಿಪೂರ್ಣತಾ-ಪಿಶಾಚಿಯಲ್ಲ. ನಿಜ ಹೇಳಬೇಕೆಂದರೆ, ಮನೆಯ ಗೋಡೆಗಳಿಗೆ ಬಣ್ಣ ಬಳಿಯುವಾಗ ಕಿಟಕಿಯ ಸುತ್ತ ಕುಂಚ ಆಡಿಸುವ ತಂಟೆಗೆ ನಾನು ಹೋಗುವುದಿಲ್ಲ. ಏಕೆಂದರೆ, ನವಿರಾಗಿ ಬಳಿಯುವಷ್ಟು ತಾಳ್ಮೆ ನನಗಿಲ್ಲ. ವಿಳಾಸ ಬರೆಯುವಾಗ ಅಕಸ್ಮಾತ್ ಲಕೋಟೆ ತಲೆಕೆಳಕಾಗಿ ವಿಳಾಸ ಕೆಳಮುಖವಾಗಿದ್ದರೂ ನಾನು ಹೊಸ ಲಕೋಟೆಯನ್ನು ಉಪಯೋಗಿಸುವ ಗೋಜಿಗೆ ಹೋಗುವುದಿಲ್ಲ. ಯಾಕೆ ಗೊತ್ತಾ? ಅಂಥ ಸಣ್ಣ ಪುಟ್ಟ ದೋಷಗಳಿಂದ ನನ್ನ ಜೀವನಕ್ಕೇನೂ ಕುಂದುಬಂದಿಲ್ಲ. ಅದರಿಂದ ನನಗೆ ಅಸಂತೋಷದ ಅನುಭವ ಆಗಿಲ್ಲ. ಅಷ್ಟೇ ಅಲ್ಲ, ಈ ನನ್ನ ಧೋರಣೆಯಿಂದ ನನಗೆ ಇತರ ಕೆಲಸಗಳಲ್ಲಿ ತೊಡಗಲು ಹೆಚ್ಚು ಸಮಯ ದೊರಕಿದೆ. ಈ ಪರಿಪೂರ್ಣತೆಯ ಹಿಂದೆ ತಲೆಕೆಡಿಸಿಕೊಳ್ಳಲು ನನಗೆ ವ್ಯವಧಾನವಿಲ್ಲ.

ಅಪರಿಪೂರ್ಣತೆಯಿಂದಲೇ ಪರಿಪೂರ್ಣತೆ :

ಏನಾದರೊಂದು ಕೆಲಸ ಮಾಡಿ ಮುಗಿಸುವ ಮುನ್ನ, ಫಲಿತಾಂಶದ ಗುಣಮಟ್ಟ ಹೇಗಿರಬೇಕು ಎಂಬುದನ್ನು ನಾನು ಚೆನ್ನಾಗಿ ಅರ್ಥ ಮಾಡಿಕೊಂಡಿರುತ್ತೇನೆ, ಇದು ನನ್ನ ಅತ್ಯಂತ ಮುಖ್ಯ ಬಲಗಳಲ್ಲಿ ಒಂದು. ನಾನು ಮಾಡುವ ಕೆಲಸ ಯಾವ ದೋಷವೂ ಇಲ್ಲದ ಅಪ್ಪಟ ಅಪರಂಜಿಯಷ್ಟು ಪರಿಪೂರ್ಣವಾಗಿರಬೇಕೆಂಬ ಹಟ ನನಗಿಲ್ಲವಾದ್ದರಿಂದ, ನಾನು ಮಾಡ ಹೊರಟಿರುವ ಕೆಲಸವನ್ನು ಸಕಾಲದಲ್ಲಿ ಮುಗಿಸುವ ಸಾಧ್ಯತೆ ಹೆಚ್ಚುತ್ತದೆ.

ನನಗೆ ಪರಿಪೂರ್ಣತಾ-ಪಿಶಾಚಿಗಳನ್ನು ಕಂಡರಾಗುವುದಿಲ್ಲ, ಅದಕ್ಕೆ ಕಾರಣಗಳುಂಟು :

  • ತಾವು ಪರಿಪೂರ್ಣರಲ್ಲವಲ್ಲ, ತಮ್ಮ ಕೆಲಸ ದೋಷರಹಿತವಾಗಿಲ್ಲವಲ್ಲ ಎಂಬ ಕಾರಣದಿಂದ ಅವರು ಕೊನೆಯನ್ನು ಮುಂದೂಡತ್ತಲೇ ಇರುತ್ತಾರೆ.
  • ಅವರು ಇತರರ ಕೆಲಸದಲ್ಲಿ ಸದಾ ದೋಷವನ್ನು ಕಂಡುಹಿಡಿಯುತ್ತಲೇ ಇರುತ್ತಾರಾದ್ದರಿಂದ, ತಮ್ಮ ಸುತ್ತಲ ಜನರಿಗೆ ಅವರು ಸಹಾಯಹಸ್ತ ನೀಡುವ ಮತ್ತು ಆಧಾರ ಒದಗಿಸುವ ಗೆಳೆಯರಾಗಲಾರರು.
  • ಯಾವುದೇ ಕೆಲಸವನ್ನು ಮತ್ತಷ್ಟು ಉತ್ತಮವಾಗಿ ಮಾಡುವ ಮಾರ್ಗಗಳಿದ್ದೇ ಇರುತ್ತವೆಯಾಗಿ, ಇನ್ನೇನು ಮುಗಿಯಲಿದೆ ಎನ್ನುವಾಗಲೂ ತಿದ್ದುವ ಹಟ ಅವರದ್ದು, ಹೀಗಾಗಿ ಯಾವ ಕೆಲಸಕ್ಕೂ ಕೊನೆ ಎಂಬುದೇ ಇಲ್ಲವಾಗುತ್ತದೆ.
  • ಪರಿಪೂರ್ಣತೆಯನ್ನು ಹುಡುಕುವವರು ಹೆಚ್ಚಾಗಿ ಸೋಗು ಹಾಕುತ್ತಾರೆ, ಏಕೆಂದರೆ ಯಾರೂ ಪರಿಪೂರ್ಣರಲ್ಲ ಎಂಬುದು ಅವರಿಗೂ ಗೊತ್ತಿರುತ್ತದೆ, ಆದರೂ ತಮ್ಮ ಅಪರಿಪೂರ್ಣತೆಯನ್ನು ಅವರು ಒಪ್ಪಿಕೊಳ್ಳಲು ನಿರಾಕರಿಸುತ್ತಾರೆ.
ಅನುಭವದ ಆಧಾರದಿಂದ ಪರಿಪೂರ್ಣತೆಯೆಡೆಗೆ ಏರಲು ಈ ಕೆಳಗಿನ ಮೆಟ್ಟಿಲುಗಳನ್ನು ಗಮನಿಸಿ

ಸೋಲಿನ ಭಯವಿದ್ದಾಗ ಗೆಲುವೆಲ್ಲಿ ಬಂದೀತು?

ನನ್ನ ಸುತ್ತಮುತ್ತಲಿರುವ ಜೀವನದಲ್ಲಿ ನಿರಾಸೆಹೊಂದಿದ ಮಂದಿಯೇ ಹೆಚ್ಚು. ಅವರಲ್ಲಿ ಹೆಚ್ಚಿನವರು, ತಮಗೆ ಪ್ರಿಯವಾದದ್ದನ್ನು ಮಾಡದೇ ಬಾಳುತ್ತಿರುವವರು. ಅವರು ತಮಗೆ ಇಷ್ಟವಾದದ್ದನ್ನು ಮಾಡದೇ ಇರಲು ಮುಖ್ಯವಾದ ಕಾರಣ -- ಸೋಲಿನ ಭಯ. ಹಲವರಂತೂ ತಾವು ಮಾಡಬೇಕೆಂದಿದ್ದ, ಆದರೆ ಮಾಡದೇ ಉಳಿದ ಯೋಜನೆಗಳ ಭಾರೀ ಪಟ್ಟಿಯನ್ನೇ ಶೇಖರಿಸಿಟ್ಟಿರುತ್ತಾರೆ. ಸೋಲಿಗೆ ಅವಕಾಶವೇ ಇಲ್ಲದ ಪರಿಸ್ಥಿತಿಯಿದ್ದಿದ್ದರೆ, ಜೀವನದಲ್ಲಿ ನೀವು ಏನುತಾನೇ ಸಾಧಿಸುವ ಸಾಧ್ಯತೆ ಇದ್ದೀತು? ಸೋಲಿನಬಗ್ಗೆ ತಲೆಕೆಡಿಸಿಕೊಳ್ಳದೇ ಮುನ್ನುಗ್ಗಿದಾಗಲೇ ನಮ್ಮ ಶಕ್ತಿಮೀರಿ ದುಡಿಯಲು ಸಾಧ್ಯ.

ಸಣ್ಣಪುಟ್ಟ ವಿವರಗಳಬಗ್ಗೆ (ಅತಿಯಾಗಿ) ತಲೆಕೆಡಿಸಿಕೊಳ್ಲದಿದ್ದರೆ ಎಲ್ಲವೂ ಸುಸೂತ್ರ

ವಿವರಗಳಬಗ್ಗೆ ನನಗೆ ಹೇಸಿಗೆ ಉಂಟಾಗಲು ಕಾರಣವೇನೆಂದರೆ, ಸಣ್ಣಪುಟ್ಟ ವಿವರಗಳಬಗ್ಗೆ ತಲೆಕೆಡಿಸಿಕೊಂಡಾಗ ಮೂಲ ಉದ್ದೇಶವೇ ಮರೆತುಹೋಗುವ ಸಾಧ್ಯತೆ ಇರುತ್ತದೆ. ಹೌದು, ನಾನು ಮಾಡುವುದೆಲ್ಲ ದೋಷರಹಿತವಲ್ಲ, ಹಲವು ವಿಷಯಗಳಲ್ಲಿ ಸುಧಾರಣೆ ಸಾಧ್ಯ. ಆದರೂ ಒಂದಿಷ್ಟು ಸಾಧಿಸಿದ ತೃಪ್ತಿ ಸಿಗಬೇಕಾದರೆ, ಸಣ್ಣಪುಟ್ಟ ವಿವರಗಳನ್ನು ಒತ್ತಟ್ಟಿಗಿಟ್ಟು ಸ್ಥೂಲವಾದ ದೊಡ್ಡ ಚಿತ್ರಗಳಬಗ್ಗೆ ಗಮನವಿಡಬೇಕಾಗುತ್ತದೆ.

ಇನ್ನೊಂದು ವಿಷಯ, ಎಲ್ಲವೂ ಪರಿಪೂರ್ಣವಾಗಿರಲೇಬೇಕೆಂಬ ಹಟವನ್ನು ಕೈಬಿಟ್ಟಾದಮೇಲೆ, ನಾನು ನಿರ್ಣಯಗಳನ್ನು ಮುಂದೂಡುವ ಅಗತ್ಯವೇ ಇರಲಿಲ್ಲ. ಕಾರ್ಯತತ್ಪರತೆಗೆ ಇದು ಮೊದಲ ಹೆಜ್ಜೆ. ನೂರಕ್ಕೆ ನೂರು ಬೇಕೆಂಬ ಅಸಾಧ್ಯ ಗುರಿಯತ್ತ ಹೆಣಗಿ ಒಂದು ಹೆಜ್ಜೆಯನ್ನೂ ಮುಂದಿಡಲಾಗದೇ ಕೊರಗುತ್ತ ಕೂರುವ ಬದಲು, ಶೇಕಡ 70 ಸಾಕು ಎಂದು ಕಾರ್ಯತತ್ಪರರಾದಾಗ ಸಾಧನೆ ಸುಲಭವಾಗಿ ತೋರುತ್ತದೆ. ನಂಬಿದರೆ ನಂಬಿ ಬಿಟ್ಟರೆ ಬಿಡಿ, ಶೇಕಡ 70 ನಮ್ಮ ಅನೇಕ ಕೆಲಸಗಳಿಗೆ ಸಾಕೋ ಸಾಕು. ನಿರ್ಭಯವಾಗಿ ಮುನ್ನುಗ್ಗುವಿಕೆ ಮತ್ತು ವಿವರಗಳ ಕಡೆಗೆ ಎಷ್ಟಿರಬೇಕೋ ಅಷ್ಟು ಗಮನ, ಇವೆರಡರ ಸಾಮರಸ್ಯ ಅತ್ಯಗತ್ಯ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more