• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒಂದು ಚೌಕ ನಾಲ್ಕು ದಿಕ್ಕು : ಜಿ. ಅಶ್ವತ್ಥನಾರಾಯಣ ವ್ಯಾಖ್ಯಾನ

By Staff
|

ಒಂದು ಚೌಕ ನಾಲ್ಕು ದಿಕ್ಕು : ಜಿ. ಅಶ್ವತ್ಥನಾರಾಯಣ ವ್ಯಾಖ್ಯಾನ
ಜಾಲತರಂಗದ ಅಂಕಣದಲ್ಲಿ ಪ್ರಕಟವಾದ ‘‘ನಾಲ್ಕು ವೃತ್ತಗಳ ವೃತ್ತಾಂತ’’ಕ್ಕೆ ನಿವೃತ್ತ ಪ್ರಾಧ್ಯಾಪಕರ ಪ್ರತಿಕ್ರಿಯೆ.

ದಟ್ಸ್‌ಕನ್ನಡ.ಕಾಮಿನ ಸಂಪಾದಕರೇ,

ಜಾಲತರಂಗದಲ್ಲಿ ಡಾ. ಮೈ.ಶ್ರೀ. ನಟರಾಜರ ‘‘ನಾಲ್ಕು ವೃತ್ತಗಳ ವೃತ್ತಾಂತ’’ವೆಂಬ ಜೀವನಶೈಲಿ ಚಿಂತಿಸುವ ಸರ್ಕಲ್‌ ಥಿಯರಿ ಲೇಖನ ಓದಿದೆ. ತುಂಬಾ ಉಪಯುಕ್ತವಾದ ಲೇಖನ. ಇದನ್ನು ಓದಿದವರು ತಂತಮ್ಮ ಬದುಕನ್ನು ವಿಶ್ಲೇಷಿಸಿಕೊಂಡರೆ ನಿಜಕ್ಕೂ ಉತ್ತಮ ಮಾರ್ಗದರ್ಶನ ಕಾಣುತ್ತಾರೆ. ಇಂಥ ಬರಹ ನೀಡಿದ್ದಕ್ಕೆ ಮೈಶ್ರೀನ ಅವರಿಗೆ ಅಭಿನಂದನೆಗಳು.

ಇದನ್ನು ಓದುವಾಗ ನನ್ನದೊಂದು ಅನುಭವ ನೆನಪಿಗೆಬಂದು ದಾಖಲಿಸುತ್ತಿರುವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅನೇಕ ವರ್ಷಗಳಿಂದ ಕನ್ನಡಬಲ್ಲ ಸರ್ಕಾರೀ ನೌಕರರಿಗೆ ಹಾಗೂ ಅಧಿಕಾರಿಗಳಿಗೆ ಆಡಳಿತದಲ್ಲಿ ಕನ್ನಡ ಬಳಸುವ ಬಗ್ಗೆ ಆಡಳಿತ ಕನ್ನಡ ಶಿಬಿರಗಳನ್ನು ವ್ಯವಸ್ಥಿತವಾಗಿ ನಡೆಸುತ್ತಿದೆ. ಒಂದು ವಾರದ ಕಾಲ ನಡೆಯುವ ಕನ್ನಡ ಕಾರ್ಯಾಗಾರ ಇದು. ಇಂಥ ಅನೇಕ ಕನ್ನಡ ಶಿಬಿರಗಳಿಗೆ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಪ್ರತಿ ಶಿಬಿರದಲ್ಲೂ 15 ರಿಂದ 30 ಜನ ಸರ್ಕಾರೀ ಅಧಿಕಾರಿಗಳು ಅಥವಾ ನೌಕರರು ಇರುತ್ತಿದ್ದರು. ವಿವಿಧ ಇಲಾಖೆಗಳಿಂದ ನಿಯೋಜಿತರಾಗಿರುತ್ತಿದ್ದರು. ಹೀಗೆ ಶಿಬಿರ ನಡೆಸುವಾಗ ಮೊದಲನೇ ದಿನ ಬಂದ ನೌಕರರ ಅಥವಾ ಅಧಿಕಾರಿಗಳ ಕನ್ನಡ ಹಿನ್ನೆಲೆಯನ್ನು ತಿಳಿಯಲು ಕನ್ನಡದಲ್ಲಿ ಒಂದು ಪತ್ರ ಬರೆಯಲು ತಿಳಿಸುತ್ತಿದ್ದೆ. (ಕಾಗುಣಿತದ ದೋಷಗಳೇ ಇಲ್ಲದ ಶಿಬಿರಾರ್ಥಿಗಳು ಒಬ್ಬರೋ ಇಬ್ಬರೋ ಇರುತ್ತಿದ್ದರು. ಉಳಿದವರು ಕನ್ನಡದಲ್ಲಿ ಎಷ್ಟು ಬಗೆಯ ಕಾಗುಣಿತ-ಒತ್ತಕ್ಷರ ದೋಷಗಳಿವೆಯೋ ಅಷ್ಟನ್ನೂ ಪತ್ರದಲ್ಲಿ ಕಾಣಿಸುತ್ತಿದ್ದರು. ಹತ್ತಾರು ವರ್ಷಗಳಿಂದ ಆ ದೋಷಯುಕ್ತವಾದ ಬರಹದಿಂದಲೇ ತಮ್ಮ ಸೇವಾವಧಿ ಕಳೆದಿದ್ದರು.

ಮತ್ತೊಂದು ಮೌಖಿಕ ಪರೀಕ್ಷೆ ಹೀಗಿರುತ್ತಿತ್ತು. ಈ ಶಿಬಿರದ ಕೊಠಡಿಗೆ ನೀವು ಪ್ರತಿಯೊಬ್ಬರೂ 4 ರಂಗದಿಂದ ಬರುತ್ತಿದ್ದೀರಿ. (ಇದನ್ನೇ ನಾನು ‘‘ಒಂದು ಚೌಕ ನಾಲ್ಕು ದಿಕ್ಕು’’ ಎಂದು ಕರೆದಿರುವುದು.) ಈ 4 ರಂಗಗಳಲ್ಲಿ ಎಷ್ಟರ ಮಟ್ಟಿಗೆ ಕನ್ನಡ ಶಿಕ್ಷಣ-ಹಿನ್ನೆಲೆ ನಿಮಗಿದೆ? (1) ಮನೆಯಲ್ಲಿ ಮಾತೃಭಾಷೆ ಕನ್ನಡವೇ? (2) ಶಾಲೆಯಲ್ಲಿ ಕನ್ನಡಮಾಧ್ಯಮದಲ್ಲಿ ಶಿಕ್ಷಣ ಅಥವಾ ಕನ್ನಡವನ್ನೇ ವಿಷಯವಾಗುಳ್ಳ ವ್ಯಾಸಂಗ ಆಗಿದೆಯೇ? (3) ನಿಮ್ಮ ಕಚೇರಿಯಲ್ಲಿ ಪತ್ರವ್ಯವಹಾರ ಮತ್ತು ಮಾತುಕತೆಗಳಲ್ಲಿ ಕನ್ನಡ ಬಳಸುತ್ತಾರೆಯೇ? (4) ಹೊರಗಡೆ ಸಾರ್ವಜನಿಕ ಪ್ರದೇಶದಲ್ಲಿ, ನಾಟಕ, ಸಿನಿಮಾ, ಸಂಗೀತ, ಪತ್ರಿಕೆ, ಪುಸ್ತಕ, ಸಭೆಗಳಲ್ಲಿ ಮತ್ತು ಮಿತ್ರರ ಭೇಟಿಗಳಲ್ಲಿ ಎಷ್ಟರಮಟ್ಟಿಗೆ ಕನ್ನಡ ಬಳಸುತ್ತೀರಿ? ಇವು ನಾಲಿಕ ದಿಕ್ಕಿನಿಂದ ಬರುವ ಹಿನ್ನೆಲೆಗೆ ಸಂಬಂಧಪಟ್ಟ ಪ್ರಶ್ನೆಗಳು. ಇವಲ್ಲದೇ, ಐದನೆಯ (ಬೋನಸ್‌) ಪ್ರಶ್ನೆ ಹೀಗಿರುತ್ತಿತ್ತು: ‘‘ನೂರು ಪುಟದ ಮೇಲಿರುವ ಯಾವುದೇ ವಿಷಯವನ್ನು ಕುರಿತದ್ದಾದರೂ ಸರಿ ಎಷ್ಟು ಪುಸ್ತಕಗಳನ್ನು ಓದಿದ್ದೀರಿ?’’

ಇಂಥಾ ಪ್ರಶ್ನೆಗಳನ್ನು ಮುಂದಿಟ್ಟಾಗ, ಮನೆ, ಶಾಲೆ ಮತ್ತು ಕಚೇರಿಗಳಲ್ಲಿ ಕನ್ನಡವಿಲ್ಲದೇ ಇಂಗ್ಲಿಷ್‌ ಅಥವಾ ಇತರ ಭಾಷೆಗಳನ್ನು ಬಳಸುತ್ತಿದ್ದವರೇ ಅಧಿಕವಾಗಿ ಇರುತ್ತಿದ್ದರು. ಕನ್ನಡ ನಿಘಂಟಿನ ಹೆಸರನ್ನೇ ಕೇಳಿರದ ಅಥವಾ ನೋಡಿರದ ಜನರಿದ್ದರು. ಕನ್ನಡದಲ್ಲಿ ಬಿಎ., ಎಂ.ಎ., ಪಿ.ಎಚ್‌.ಡಿ. ಮಾಡಿದವರು ಯಾವುದೋ ಒಂದೊಂದು ಶಿಬಿರದಲ್ಲಿ ಒಬ್ಬೊಬ್ಬರು ಅಪರೂಪಕ್ಕೆ ಇರುತ್ತಿದ್ದರು. ಪುಸ್ತಕ ಹಾಗೂ ಕನ್ನಡ ಪತ್ರಿಕೆಯನ್ನೇ ಕೊಳ್ಳದ, ಓದದ ಜನ 100ಕ್ಕೆ 90 ಜನ ಇದ್ದರು. ನಮ್ಮ ಸರ್ಕಾರೀ ಕಚೇರಿಗಳಲ್ಲಿ ಕನ್ನಡ ಆಡಳಿತ ಭಾಷೆಯಾಗಿ ಏಕೆ ಬಳಕೆಯಾಗಿಲ್ಲ ಎಂಬುದರ ಕಾರಣ ಇಲ್ಲಿದೆ. ನೌಕರರು ಕನ್ನಡ ಬಳಕೆಗೆ ಉತ್ಸಾಹಿತರಿದ್ದರೂ ಅಧಿಕಾರಿಗಳಿಗೆ ಉತ್ಸಾಹ ಇರುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ, ಮನೆ, ಶಾಲೆ/ಶಿಕ್ಷಣ, ಕಚೇರಿ/ಉದ್ಯೋಗ, ಮತ್ತು ಸಾರ್ವಜನಿಕ ರಂಗ ಈ ನಾಲ್ಕೂ ಕಡೆಗಳಿಂದ ಕನ್ನಡ ಮೌಲ್ಯಮಾಪನ ಮಾಡಿದಾಗ ಯಾವಾಗಲೂ ಫಲಿತಾಂಶ ಆಶಾದಾಯಕವಾಗಿರುತ್ತಿರಲಿಲ್ಲ. ಒಂದುವಾರದಲ್ಲಿ ಅವರಲ್ಲಿ ಕನ್ನಡವನ್ನು ಕನ್ನಡಾಭಿಮಾನವನ್ನು ತುಂಬುತ್ತಿದ್ದೆವು. ಈಗಲೂ ಅಷ್ಟೇನೂ ಪರಿಸ್ಥಿತಿ ಸುಧಾರಿಸಿದಹಾಗೆ ಕಾಣೆ. ಆಡಳಿತಯಂತ್ರದಲ್ಲಿ ನಾಲ್ಕು ವೃತ್ತಗಳ ವೃತ್ತಾಂತವನ್ನು ಕನ್ನಡದ ಹಿನ್ನೆಲೆಯಲ್ಲಿ ಆತ್ಮಾವಲೋಕನ ಮಾಡಿಕೊಂಡರೆ ಅಮೆರಿಕನ್ನಡಿಗರಿಗೂ, ಕರ್ನಾಟಕ-ಭಾರತದ ಕನ್ನಡಿಗರಿಗೂ ಆತ್ಮಸಾಕ್ಷಾತ್ಕಾರವಾದೀತು ಎಂದು ನನ್ನ ಎಣಿಕೆ.

- ಪ್ರೊ. ಜಿ. ಅಶ್ವತ್ಥನಾರಾಯಣ
ನಿವೃತ್ತ ಕನ್ನಡ ಪ್ರಾಧ್ಯಾಪಕ
ಬಿಡಾರ, ಕೊಲಂಬಿಯಾ, ಮೇರೀಲ್ಯಾಂಡ್‌

*

ಡಾ.ನಟರಾಜ್‌ ಅವರೆ,

ನಿಮ್ಮ ವೃತ್ತಗಳ ವೃತ್ತಾಂತವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

ಈ ವೃತ್ತಗಳನ್ನು ಪರಿಗಣಿಸಿದಾಗ ನನಗೆ ಎನಿಸಿದ್ದು - ಇವುಗಳ ಮೇಲೆ ನಮಗೆ ವೈಯಕ್ತಿಕ ಮಟ್ಟದಲ್ಲಿ ಸಂಪೂರ್ಣ ಹತೋಟಿ ಇಲ್ಲ. ಅಲ್ಲದೆ ನಮ್ಮ ವೃತ್ತ ಬದುಕಿನ ಅಥವ ಸಂಸಾರದ ವೃತ್ತಗಳ ಮೇಲಿನ ನಮ್ಮ ಅಂದಾಜನ್ನು ನಮ್ಮ ಭಾಗೀದಾರರು ಒಪ್ಪದೇ ಇರಬಹುದು. ಆದರೂ ನೀವು ಹೇಳಿದಂತೆ, ಈ ವೃತ್ತಗಳ ಅಳತೆಯನ್ನು ಆಗಾಗ ಪರಿಶೀಲಿಸುವುದು, ಹೊಂದಿಸುವುದು ಬಹಳ ಮುಖ್ಯ.ಈ ವೃತ್ತಗಳನ್ನು ವಿರ್ವಹಿಸಲು ಚಾತುರ್ಯ, ಯೋಜನೆಗಳ ಜೊತೆಗೆ ಈ ಭಾಗೀದಾರರ ಸಹಕಾರ ಬಲು ಮುಖ್ಯ ಅಲ್ಲವೆ?

ನಿಮ್ಮ ಲೇಖನ ಓದಿದ ಮೇಲೆ ನಮ್ಮ ಸಮಯದ ಬಳಕೆಯ ಅವಲೋಕನ ಮಾಡುವ ಸ್ಫೂರ್ತಿ ಬಂದುದರಿಂದ ಈ ಪ್ರತಿಕ್ರಿಯ ಸ್ವಲ್ಪ ತಡವಾಗಿ ಬರುತ್ತಿದೆ ಒ

ವಿಶ್ವಾಸದೊಂದಿಗೆ,

- ಮಧುಶಾಲಿನಿ

*

hello sir,

thanks it was a good article written by you in a local Kannada news paper vijaya karnataka about the importance of time and commitments. i could nt go through with evaluate reading. i went in a hurry. i felt better to congratulate you first and then read once again . i have kept it for my evening snack for my mind and brain. keep writing.

regards
- Sunilkumar S Honnungar
Lecturer SDM College of Engg. & Tech., Dharwad

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more