• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜೀವದ ಹಂಗನ್ನು ಮೀರಿದ್ದೇ ಜೀವನ ಪ್ರೀತಿ?

By Staff
|
ಡಾ. ಮೈ. ಶ್ರೀ. ನಟರಾಜು ಅವರು ಬರೆದ ಲೇಖನ ‘ಜೀವನ ಪ್ರೀತಿ ಮತ್ತು ಜೀವದ ಪ್ರೀತಿ’ ಬಹಳ ಗಮನೀಯವಾಗಿದೆ. ಅದು ಅವರ ವೈಯುಕ್ತಿಕ ಅನುಭವದ ಮತ್ತು ಅವರ ವೈದ್ಯಕೀಯ ವೃತ್ತಿಯ ಅನುಭವದ ಹಿರಿಮೆಯನ್ನು ಎತ್ತಿ ತೋರಿಸುತ್ತದೆ.

ಅವರ ತಂದೆಯವರಿಗಾದ ಕೊನೆಗಾಲದ ಅನುಭವದ ಹಾಗೆ ನಮ್ಮ ತಂದೆಯವರೂ ನೋವನ್ನು ಅನುಭವಿಸಿದರು. ತಮಗೇನಾದರೂ ಗುಣಪಡಿಸಲಾಗದ ಬೇನೆ ಬಂದಲ್ಲಿ, ಬೇನೆಯಿಂದ ಗುಣವಾದರೂ ತಾವು ಪರಾವಲಂಬಿಯಾಗುವ ಸಂಭವವಿದ್ದರೆ ಮತ್ತು ತಮಗೆ ಜ್ಞಾನವಿಲ್ಲದ ಅವಸ್ಥೆಯೇನಾದರು ಬಂದರೆ ಯಾವ ಕೃತಕವಿಧಾನಗಳಿಂದಲೂ ಜೀವಿತವಾಗಿಡುವ ಪ್ರಯತ್ನ ಸಲ್ಲದು ಎಂಬ ಇಚ್ಚೆಯನ್ನು ನಮ್ಮ ತಂದೆ ವ್ಯಕ್ತಪಡಿಸಿದ್ದರು. 84 ವರ್ಷ ವಯಸ್ಸಾಗಿದ್ದರೂ ತಮ್ಮ ವೈದ್ಯಕೀಯ ವೃತ್ತಿಯನ್ನು ಅವರು ಮುಂದುವರೆಸಿದ್ದರು. ಅವರು ನಮಗೆಲ್ಲರಿಗೂ ಯಾವಾಗಲೂ ತಮ್ಮ ಅಂತ್ಯಕಾಲದಲ್ಲಿ ಆಗಬಹುದಾದ ದುರಂತಗಳ ವಿಚಾರವಾಗಿ ಸ್ಪಷ್ಟವಾಗಿ ವಿವರಿಸಿದ್ದರು. ರಸ್ತೆಯನ್ನು ದಾಟುತ್ತಿದ್ದಾಗ ಅವರಿಗೆ ಒಂದು ವಾಹನದಿಂದ ತಲೆಗೆ ಪೆಟ್ಟಾಗಿ ಅವರು ‘ಕೋಮ’ದಲ್ಲಿ ಹತ್ತುದಿನಗಳನ್ನು ಕಳೆದಿದ್ದರು. ಆ ಪೆಟ್ಟಿನಿಂದ ಪಾರ್ಶ್ವವಾಯುವಿನ ಜೊತೆಗೆ ಸದಾಸೆಳೆತ ಅಂದರೆ ಸ್ಟೇಟಸ್‌ ಎಪಿಲೆಪ್ಟಿಕಸ್‌ಗೆ ಗುರಿಯಾಗಿದ್ದರು. ಹತ್ತು ದಿನಗಳ ನಂತರ ಅವರ ಇಚ್ಚೆಯ ಪ್ರಕಾರ ಅವರ ಮಕ್ಕಳಾದ ನಾವೆಲ್ಲರೂ ಆಸ್ಪತ್ರೆಯ ವೈದ್ಯರಿಗೆ ಕೃತಕ ಜೀವಪಾಲಕ ವಿಧಾನಗಳನ್ನು ನಿಲ್ಲಿಸಲು ಅನುಮತಿ ಕೊಟ್ಟೆವು.

ಡಾಕ್ಟರ್‌ ನಟರಾಜ ಅವರು ಹೇಳಿದ ಹಾಗೆ ಎಲ್ಲರೂ ಈ ವಿಚಾರವಾಗಿ ತಮ್ಮ ಅಂತ್ಯಕಾಲದ ಪರಿಸ್ಥಿತಿಯ ಬಗ್ಗೆ ತಮ್ಮ ಉಯಿಲಿನಲ್ಲಿ ಬರೆಯಬಹುದು. ಹಾಗೇನಾದರೂ ಆಗದಿದ್ದಲ್ಲಿ, ಈ ಇಚ್ಚೆಯನ್ನು ತಮ್ಮ ಮಕ್ಕಳ ಮತ್ತು ಹತ್ತಿರದ ಸಂಬಂಧಿಗಳೊಂದಿಗೆ ವ್ಯಕ್ತಪಡಿಸಬೇಕು. ಜೀವದ ಆಸೆ ಮತ್ತು ಜೀವನದ ಆಸೆಗಳೊಂದಿಗೆ, ಸಂಬಂಧಿಕರು ಹಣದ ಆಸೆಯನ್ನೂ ಬಿಡಬೇಕು.

- ಡಾ. ರಾಜಾರಾಮ್‌ ಕಾವಳೆ, ಹ್ಯಾಂಪ್‌ ಶೈರ್‌

*

ನಮಸ್ಕಾರ ನಟರಾಜ್‌ರವರೇ,

ನಿಮ್ಮ ಅಂಕಣ ಚೆನ್ನಾಗಿ ಮೂಡಿ ಬಂದಿದೆ. ನೀವು ಹೇಳಿದಂತೆ ಜೀವನವೇ ಇಲ್ಲದ ಜೀವದ ಮೇಲಿನ ಆಸೆ ಸಲ್ಲದು. ಇನ್ನೊಬ್ಬರಿಗೆ ಹೊರೆಯಾಗಿರುವ ಪರಿಸ್ಥಿತಿ ಯಾರಿಗೂ ಬರಬಾರದು. ಇದಕ್ಕೆ ಉಯಿಲೇ ಉತ್ತರ. ಎಲ್ಲರ ಬಾಯಲ್ಲೂ ಅದೇ ಮಾತು. ಉಯಿಲು ಬದಲಾಯಿಸಲು ವಕೀಲರುಗಳಿಗೆ ಸುಗ್ಗಿ.

- ವಲ್ಲೀಶ ಶಾಸ್ತ್ರಿ , ಚಿನೋ ಹಿಲ್ಸ್‌ , ಕ್ಯಾಲಿಫೋರ್ನಿಯಾ

*

ನಮಸ್ಕಾರ,

ನಿಮ್ಮ ಲೇಖನ ‘ಜೀವನ ಪ್ರೀತಿ ಮತ್ತು ಜೀವದ ಪ್ರೀತಿ’ ಮನವ ತಟ್ಟಿತು.

- ವಾಣಿ

*

ನಟರಾಜ್‌ ಸಾರ್‌,

ನಿಮ್ಮ ತಂದೆಯವರ ಪರಿಸ್ಥಿತಿ ಬಗೆಗೆ ಓದಿದೆ. ನನ್ನ ತಾಯಿಯವರ ಅಂತ್ಯ ಕೂಡ ಅದೇ ರೀತಿ ಆಯಿತು. ಮಾತು ನಿಂತ ಮೇಲೆ ಜೀವಂತ ಶವವಾಗಿ ಎರಡು ವರ್ಷ ಬದುಕಿದ್ದರು!

ಹೌದು ಸಾರ್‌! ಮರಣ ನಮ್ಮ ಕೈಯ್ಯಲ್ಲಿ ಲ್ಲ. ಅದು ವಿಧಾತನ ಇಚ್ಚೆ. ಜೀವನದಲ್ಲಿ ನಾನು ಈತನಕ ಮೂರು ಸಲ ವಿಲ್ಲು ಬರೆದೆ. ಮೂರು ವಿಲ್ಲು ಬರೆದರೂ, ಈತನಕ ಒಮ್ಮೆಯೂ ಸತ್ತಿಲ್ಲ! ಇದು ಭಗವಂತನ ದಯೆ ಎನ್ನಲೇ? ಅದೃಷ್ತ ಎನ್ನಲೇ?

ನನಗನ್ನಿಸುತ್ತಿದೆ ಇದೆಲ್ಲಾ ಆ ವಿಧಾತನ ಇಚ್ಚೆ!

- ಪೆಜತ್ತಾಯ

(ಸ್ವಾಮಿ ಪೆಜತ್ತಾಯ ಅವರೇ, ನಮಸ್ಕಾರ.

ಮೊದಲನೇಯದಾಗಿ ನೀವು ಹೊಸ ಕಣ್ಣಿನೊಂದಿಗೆ (ದಿವ್ಯದೃಷ್ಟಿಯಾಂದಿಗೆ?) ಮತ್ತೊಮ್ಮೆ ಓದುವ ಪ್ರಪಂಚಕ್ಕೆ ಕಾಲಿಟ್ಟಿದ್ದಕ್ಕಾಗಿ ಸಂತೋಷವನ್ನು ವ್ಯಕ್ತಪಡಿಸುತ್ತೇನೆ.

ನಮ್ಮ ತಾಯಿಯರ ಅಂತ್ಯವೂ ದುಃಖಮಯವಾಗಿತ್ತು. ಅವರಿಗೆ ‘ಆಲ್ಜೈಮರ್ಸ್‌’ ಬಂದು ನಮ್ಮನ್ನೆಲ್ಲ ಮರೆತುಬಿಟ್ಟರು. ಕೊನೆಗೆ ಮಾತೂ ನಿಂತು ಹೋಯಿತು. ಬೆಳಗಿನಿಂದ ಸಂಜೆಯವರೆಗೂ ದೇವರನಾಮವನ್ನು ಹಾಡುತ್ತಿದ್ದ ನಾಲಿಗೆಯನ್ನು ವಿಧಿ ಕಿತ್ತುಕೊಂಡದ್ದು ನಮ್ಮ ಸಂಸಾರದ ಮತ್ತೊಂದು ವಿಪರ್ಯಾಸ!

ನೀವು ಹೇಳಿದಂತೆ ಇವು ಯಾವುವೂ ನಮ್ಮ ಕೈಯಲ್ಲಿಲ್ಲ.

- ಮೈ.ಶ್ರೀ.ನಟರಾಜ್‌)

*

ನಟರಾಜ ಅವರೇ,

ನಿಮ್ಮ ಜಾಲತರಂಗ ಅಂಕಣದಲ್ಲಿ ಟೆರ್ರಿ ಶೈವೋ ಪ್ರಕರಣ ಓದಿದೆ. ಅನೇಕರ ಮನಸ್ಸಿನಲ್ಲಿದ್ದದ್ದನ್ನು ಅಭಿವ್ಯಕ್ತಿಸಿದ್ದೀರಿ. ನನಗೂ ನಮ್ಮ ಹಿರಿಯರ ಮರಣದ ಕಾಲ ನೆನಪಿಗೆ ಬಂದಿತು.

- ಹೆಚ್‌.ಕೆ. ಕೃಷ್ಣ ಪ್ರಿಯ

*

Dear Nataraj,

I liked your article very much and I am a regular reader of thatskannada.com. I like all your articles.

Thanks for giving such a wonderful message.

Thanks once again.

- Venukumari

*

Thanks a lot.....

First the title jeevana preethi and jeevada preethi is really...really a good one.

The incidents you have mentioned are also very much approching. Nijakku nimma lekhana jeevanmukhiyagide.

But I think It could still better if u would have given few words seperately on jeevana preethi and also jeevada preethi. Hope I have not given any wrong suggestion.

- Naveen

*

Namaskara Nataraja avare,

Thanks for expressing your views on this and opening up a debate on this. I endorse your views on Schiavos case.

But In general I am in a dilemma on such cases. My dilemma stems from the fact that we are basically valuating a human life.

We are saying when it is worth to live and when it is not. Also, what is the criteria for taking some one elses life. Is 1 day of coma OK or they have to be in that state for an year. What if they are not brain dead but completely paralyzed.

These are kind of difficult questions which I guess is difficult to answer. Living will make sense from that perspective as it puts the onus on the individual. But in todays world anything can be

left to the interpretations.

- vadi

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more