ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂದೂ ಮುಗಿಯದ ಮಧುಚಂದ್ರ

By Staff
|
Google Oneindia Kannada News
Dr.M.S.Nataraj ಡಾ.ಮೈ.ಶ್ರೀ.ನಟರಾಜ,
ಗೈಥಸ್‌ಬರ್ಗ್‌, ಮೇರಿಲ್ಯಾಂಡ್‌

[email protected]

    ಅದುವೆಕನ್ನಡದ ಬಿಂದುಕಾಮಿನಲಿ
    ಮದುವೆಯ ಮಾತನು ಕೇಳಪ್ಪ
    ಪದಗಳ ಜೋಡಿಸಿ ಪದ್ಯವ ಬರೆದನು
    ಮದುವೆಯಾಗಿರದ ಸಣ್ಣಪ್ಪ

    ಎದೆಯಾಳು ಹುದುಗಿದ ಮಧುರಭಾವಗಳ
    ಹೆದೆಗಿಟ್ಟನು ಮಲ್ಲಿಗೆ ಬಿಲ್ಲಪ್ಪ
    ಮುದದಿಂದೋದುತ ಮುಸಿಮುಸಿ ನಕ್ಕಳು
    ಮಧುಮತಿಯಾಬ್ಬಳು ಹೌದಪ್ಪ

    ದೂರದೇಶದಲಿ ದುಡಿಯಲು ಬಂದು
    ನೂರು ಕನಸುಗಳ ಕಾಣಪ್ಪ
    ಊರಿಂದೂರಿಗೆ ದೂರವಾದರೂ
    ಮೂರೇ ಶಬ್ದವು* ಸಾಕಪ್ಪ

    ಪದ್ಯವ ಪ್ರಕಟಿಸಿ ಪ್ರೀತಿಯ ತೋರುತ
    ಗದ್ಯದಿ ಘಮಘಮ ಸುದ್ದಿಯ ಸೂಸುತ
    ಮಧ್ಯಮಧ್ಯದಲಿ ಫೋನಲಿ ಹರಟುತ
    ಸದ್ಯಕೆ ಈ-ಮೇಲ್‌ ಸಾಕೆನುತ

    ಅಂತರಂಗವನು ಹಂಚುತ ಹರುಷದಿ
    ಒಲವಿನ ಓಲೆಯ ಪ್ರತಿದಿನ ಬರೆದರೂ
    ಹಿರಿಯರ ಒಪ್ಪಿಗೆ ತಪ್ಪದೆ ಪಡೆದರು
    ಮಾದರಿ ಪ್ರೇಮಿಗಳಿವರಪ್ಪ

    ಪ್ರೇಮಿಗಳ್‌ದಿನದ ಶುಭಮುಹೂರ್ತದಲಿ
    ಭೇಟಿಯ ವ್ಯವಸ್ಥೆ ಆಯ್ತಪ್ಪ
    ಗುಲಾಬಿಗುಚ್ಛವ ಕರದಲಿ ಪಿಡಿದು
    ಮಂಡಿಯೂರಿದನು ಸಣ್ಣಪ್ಪ

    ಕೆಂಪು ಗುಲಾಬಿಯ ರಂಗು ಕೆನ್ನೆಯಲಿ
    ಕಂಗೊಳಿಸಿತು ಜೇನಿನ ಬುದ್ಧಿಯಲಿ
    ಕೈಕೈಪಿಡಿದರು ಜಾಲಪ್ರೇಮಿಗಳು
    ಮುಗಿಯದ ಜೇನ್‌ಬೆಳದಿಂಗಳಲಿ !

(* ಮೂರು ಶಬ್ದಗಳು : I Love You)

ಮುಖಪುಟ

ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X