• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವರವ ಕೊಡಮ್ಮ ಅಕ್ಷರ ದೇವತೆ, ವರವ ಕೊಡು !

By Staff
|
  • ಮೈ.ಶ್ರೀ. ನಟರಾಜ

Mysreena@aol.com

An introduction to My Column, jAlataranga Dr. M.S. Nataraj‘ನೀವು ಬರೆದರೆಷ್ಟು , ಬಿಟ್ಟರೆಷ್ಟು’ ಎನ್ನುವ ಜನರೇ ಸುತ್ತಮುತ್ತ ಇರುವವರಲ್ಲಿ ಹೆಚ್ಚು ಮಂದಿ. ‘ನೀವು ಬರೆಯಿರಿ’ ಎಂದು ಹೇಳುವವರು ವಿರಳ, ‘ನೀವು ಬರೆದಿದ್ದನ್ನು ಓದಿದೆ’ ಎನ್ನುವವರು ಇನ್ನೂ ವಿರಳ. ‘ನೀವು ಬರೆದಿದ್ದನ್ನು ಓದಿದೆ, ಚೆನ್ನಾಗಿದೆ’ ಎನ್ನುವವರು ಬೆರಳೆಣಿಸುವಷ್ಟಾದರೂ ಇದ್ದರೆ ಅದು ಬರಹಗಾರನ ಪುಣ್ಯ.

ನನ್ನ ಬರಹದಲ್ಲಿ ಹೆಚ್ಚಿನ ಆಸಕ್ತಿ ತೋರಿ ನಾನು ಬರೆದದ್ದನ್ನು ಓದಿ, ಬೆನ್ನು ತಟ್ಟಬೇಕಾದಾಗ ಬೆನ್ನು ತಟ್ಟಿ , ಟೀಕಿಸಬೇಕಾದಾಗ ನಿರ್ದಾಕ್ಷಿಣ್ಯವಾಗಿ ವಿಮರ್ಶಿಸಿ, ಪ್ರೀತಿ ಸಲಿಗೆಗಳಿದ್ದಾಗ್ಯೂ ಗೌರವಕ್ಕೆ ಯಾವತ್ತೂ ಕುಂದು ಮಾಡದೇ ನನಗೆ ಒಳ್ಳಿತಾದಾಗ ಸಂತೋಷಪಟ್ಟು , ಮಾರ್ಗದರ್ಶನ ಮಾಡುತ್ತಿದ್ದ ಹರಿಹರೇಶ್ವರ ಮತ್ತು ನಾಗಲಕ್ಷ್ಮಿ ದೂರದ ಮೈಸೂರು ಸೇರಿಬಿಟ್ಟಿದ್ದಾರೆ. ಹರಿ ಅನೇಕಬಾರಿ ನನಗೆ ಹೇಳಿದ್ದಾರೆ ‘ನೀವೇಕೆ ಒಂದು ಅಂಕಣವನ್ನು ಬರೆಯಲು ಪ್ರಾರಂಭಿಸಬಾರದು?’ ಎಂದು. ‘ನಾನು ಶಿಸ್ತಿನ ಬರಹಗಾರನಲ್ಲ , ಬರೆಯಲೇಬೇಕೆಂಬ ಹಟದಲ್ಲಿ ಕುಳಿತರೆ ಬಲಾತ್ಕಾರದ ಮಾಘಸ್ನಾನವಾಗುತ್ತದೆ’ ಎಂದು ಹೇಳಿ ತಪ್ಪಿಸಿಕೊಂಡಿದ್ದೆ. ಈಗ ಅದೇ ರೀತಿಯ ಸಲಹೆ ದಟ್ಸ್‌ ಕನ್ನಡದ ಶಾಮಸುಂದರ್‌ ಕಡೆಯಿಂದ ಬಂದಾಗ ಮತ್ತದೇ ಸವಕಲು ನೆಪಹೇಳಿ ತಪ್ಪಿಸಿಕೊಳ್ಳಲು ಯತ್ನಿಸಿದೆ.

ಆದರೆ, ಕನ್ನಡದಲ್ಲಿ ಓದಿ ಬರೆದು ಮಾಡದಿದ್ದರೆ ನನಗೆ ತಿಂದ ಅನ್ನ ಜೀರ್ಣವಾಗುವುದಿಲ್ಲ. ಆಗಾಗ್ಗೆ ಬರೆಯುತ್ತಿರಲು ಒಂದು ಒಳ್ಳೆಯ ಕಾರಣವೂ ಸಿಕ್ಕರೆ ಯಾಕೆ ಉಪಯೋಗಿಸದೇ ಬಿಡಬೇಕು ಎಂಬ ತರ್ಕ ಈ ಸಾಹಸಕ್ಕೆ ನಾಂದಿಯಾಯಿತು. ವಿಚಿತ್ರಾನ್ನದ ಜೋಷಿಯವರ ಹಾಗೆ ಪ್ರತಿವಾರವೂ ಬರೆಯಲಾರೆ, ಆಗಿಂದಾಗ್ಗೆ, ಸ್ಫೂರ್ತಿಬಂದಾಗ ಸಮಯ ಒದಗಿದಾಗ ಬರೆಯುವುದೆಂದು ತೀರ್ಮಾನಕ್ಕೆ ಬಂದಾಗಿದೆ. ಸಿದ್ಧಿವಿನಾಯಕನನ್ನು ನೆನೆದು ಹೆಜ್ಜೆ ಇಟ್ಟೇ ಬಿಟ್ಟೆ!

ಇನ್ನು, ಅಂಕಣಕ್ಕೊಂದು ಹೆಸರು ಬೇಡವೇ? ಒಂದೆರಡು ದಿನ ಅದರ ಬಗ್ಗೆ ಯೋಚಿಸಿ ತಲೆಕೆಡಿಸಿಕೊಂಡೆ. ಕೊನೆಗೆ ಹೊಳೆದದ್ದು ‘ಜಾಲತರಂಗ.’ ಹೌದು, ನನಗೆ ಉಂಟಾದ ಭಾವತರಂಗವನ್ನ ಜಾಲದಮೇಲೆ ಓದುಗಮಿತ್ರರೊಂದಿಗೆ ಹಂಚಿಕೊಳ್ಳುವ ಅಂಕಣಕ್ಕೆ ಇದೇ ಸೂಕ್ತ ಹೆಸರು ಎಂದು ಮನಸ್ಸಿಗೆ ಖಾತ್ರಿಯಾದ ಕೂಡಲೆ ಅದನ್ನು ಶಾಮಸುಂದರ್‌ ಮತ್ತು ಶ್ರೀವತ್ಸ ಜೋಷಿಯವರೊಂದಿಗೆ ಹಂಚಿಕೊಂಡೆ. ಶಾಮ್‌ ಹೆಸರನ್ನು ಮೆಚ್ಚಿ ಒಪ್ಪಿಗೆ ಕೊಟ್ಟರು. ನನ್ನ ಕಿರಿಯ ಗೆಳೆಯ ಜೋಷಿಯಾದರೋ ಅದಕ್ಕೆ ಟಿಪ್ಪಣಿಯನ್ನೂ ಒದಗಿಸಿದರು, ಅದೂ ಕವನ ರೂಪದಲ್ಲಿ ! ಹೀಗಿದೆ ಆ ಕವನ :

ಅಂತರ್ಜಾಲದಲಿ ನಟರಾಜನ ನರ್ತನ

ಜಾಲತರಂಗದ ಮೋಹಕ ಆವರ್ತನ

ಕವನದ ಜತೆಗಿರೆ ರಸಭರಿತ ಕಥನ

ವಾಚಕಪ್ರಭುವಿಗೆ ಮನದಲ್ಲಿ ಮಥನ

ಈ ನಾಲ್ಕು ಸಾಲಿನ ಕವಿತೆ ಹೇಳಿದ್ದಕ್ಕಿಂತ ಹೆಚ್ಚೇನು ಹೇಳಬಹುದು ? ‘ಅಲ್ಲಿ ಸೂಚಿತವಾಗಿರುವ ಆಶಯವನ್ನು ನಿರಾಸೆಗೊಳಿಸದಿರುವಂತೆ ವರವ ಕೊಡಮ್ಮ ಅಕ್ಷರದೇವತೆ,’ ಎಂದು ಬೇಡುತ್ತ ‘ಆಗಾಗ್ಗೆ ನನ್ನ ಬರಹಕ್ಕೆ/ಕವನಕ್ಕೆ ಸಮಯ ಸಿಗಲಿ, ಸ್ಫೂರ್ತಿ ಸಿಗಲಿ’ ಎಂದು ಆಶಿಸುತ್ತಾ ವಿರಮಿಸುವೆ, ಮುಂದಿನ ಅಂಕಣ ಹೊರಬರುವತನಕ!

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more