ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಸೋಮೇಶ್ವರ ಶತಕ ಹೇಳುತ್ತೆ- ಕಂಪ್ಯೂಟರ್‌ ಹೆಣ್ಣಲ್ಲ, ಗಂಡು!’

By Super
|
Google Oneindia Kannada News

ನಟರಾಜ್‌ ಅವರೆ,

ದಟ್ಸ್‌ಕನ್ನಡ.ಕಾಮ್‌ನಲ್ಲಿ ನೀವು ಗಣಕಯಂತ್ರ ಹೆಣ್ಣು ಎಂದುಕೊಂಡು ಬರೆದ ಲೇಖನ-ಕವನ ಮತ್ತು ಅದಕ್ಕೆ ಪ್ರತಿಕ್ರಿಯೆಯಾಗಿ ಬರೆದ ಪತ್ರಗಳನ್ನೂ ಓದಿದೆ. ಈ ಚರ್ಚೆಯಲ್ಲಿ ಕಂಡುಬಂದ ಒಂದು ಪ್ರಶ್ನೆ, ಗಣಕಯಂತ್ರ ಗಂಡೊ, ಹೆಣ್ಣೊ ಎನ್ನುವುದು. ಇದಕ್ಕೆ ನಿಸ್ಸಂಶಯವಾದ ಉತ್ತರ ಸೋಮೇಶ್ವರ ಶತಕದಲ್ಲಿ ದೊರಕುತ್ತದೆ. ಸುಮಾರು ಹನ್ನೆರಡರಿಂದ ಹದಿನಾಲ್ಕನೆಯ ಶತಮಾನದ ಕಾಲದಲ್ಲಿ ಬದುಕಿರಬಹುದಾದ ಈ ಶತಕದ ಕವಿ, ಇದರ 63ನೆಯ ಶ್ಲೋಕದಲ್ಲಿ 'ಗಣಕಂ ಹೆಗ್ಗಣಕಂ ಸಮಂ ಹರ ಹರಾ ಶ್ರೀ ಚೆನ್ನಸೋಮೇಶ್ವರಾ’ ಎನ್ನುತ್ತಾನೆ. ಇದರಿಂದ ಗಣಕಯಂತ್ರ ಗಂಡು ಎಂದು ನಿಸ್ಸಂಶಯವಾಗಿ ಸಿದ್ಧವಾಗುತ್ತದೆ. ಈ ವಿಚಾರದಲ್ಲಿ ಜಯಶ್ರೀ ಅವರ ನಿಲುವು ಸರಿ ಎಂದಾಗುತ್ತದೆ.

ನಮಗೆಲ್ಲಾ, ನಮ್ಮ ಪೂರ್ವೀಕರು ಆಟಂ ಬಾಂಬು, ರಾಕೆಟ್ಟು, ರಿಲೆಟಿವಿಟಿ, ಕ್ವಾಂಟಂ ಮೆಕಾನಿಕ್ಸ್‌ ಇಂತಹ ವಿಷಯಗಳಲ್ಲಿ ಪರಿಣತಿ ಪಡೆದಿದ್ದು ಗೊತ್ತೇ ಇದೆ. ಇವೆಲ್ಲಾ ಗಣಕಯಂತ್ರಗಳಿಲ್ಲದೆ ಪ್ರಗತಿ ಸಾಧಿಸುವ ವಿಷಯಗಳೇ? ಅಲ್ಲ. ಇದರಿಂದ ನಮ್ಮಲ್ಲಿ ಗಣಕಯಂತ್ರಗಳು ಬಳಕೆಯಲ್ಲಿದ್ದವು ಎಂದು ಊಹಿಸಬಹುದು. ಈ ಊಹೆಗೆ ಮೇಲೆ ಉದ್ಧರಿಸಿರುವ ಸಾಲು ಪುಷ್ಟಿ ಕೊಡುವುದನ್ನು ಗಮನಿಸಿ.

Someshwara Shathaka says computer is male

ಇನ್ನೊಂದು ಕುತೂಹಲಕರವಾದ ವಿಷಯ, ಕವಿ ಗಣಕಯಂತ್ರವನ್ನು ಇಲಿಯ ಜಾತಿಗೆ ಸೇರಿದ ಪ್ರಾಣಿಯನ್ನಾಗಿ ಪ್ರಸ್ತಾಪಿಸುತ್ತಿರುವುದು. ಇದರಿಂದಲೇ, ನಾವೀಗ ನಮ್ಮ ಕೈಯಲ್ಲಿ ಹಿಡಿದು ಮುದ್ದಿನಿಂದ ಸವರುತ್ತಾ, ಗಣಕಯಂತ್ರವನ್ನು ನಡೆಸುವ ಸಾಧನಕ್ಕೆ 'ಇಲಿ’ ಎಂಬ ಹೆಸರು ಬಂದಿತೇ ಎನ್ನುವುದು ವಿಚಾರಣೀಯ. ಹಿಂದಿನಿಂದ ಹೆಗ್ಗಣ ಎಂದು ಕರೆಸಿಕೊಂಡ ಯಂತ್ರಕ್ಕೆ ಕೊಟ್ಟ ಹೆಸರಿನಿಂದ ಅದನ್ನು ನಡೆಸುವ ಚಿಕ್ಕ ಸಾಧನಕ್ಕೆ ಹೇಗೆ ಇಲಿ ಎಂಬ ಹೆಸರು ಬಂತು ಎಂದು ನೀವು ಕೇಳಬಹುದು. ಆದರೆ ಭಾಷೆಯಿಂದ, ಭಾಷೆಗೆ, ಪದಗಳು, ಪದಾರ್ಥಗಳು ಹೋದಾಗ ಈ ರೀತಿ ಆಗುವುದು ಸಾಧ್ಯ. ಉದಾಹರಣೆಗೆ, ಹಳಿ ಎಂಬ ಅರ್ಥವುಳ್ಳ ಇಂಗ್ಲೀಷಿನ ರೇಲ್‌, ಕನ್ನಡದಲ್ಲಿ ಹಳಿಗಳ ಮೇಲೆ ಓಡುವ ರೈಲು ಆಗಿದೆ. ಅಥವಾ ಇಂಗ್ಲೀಷಿನಲ್ಲಿ ಇರುವ 'ಎ ಟೈಗರ್‌ ಬೈ ದ ಟೇಲ್‌’ ಎಂಬ ಪದಪುಂಜದ ಅರ್ಥ ಬರುವಂತೆ ಇರಲಿ ಎಂದು ಇದನ್ನು ಹೆಗ್ಗಣ ಎಂದು ಕರೆದಿರಬಹುದಲ್ಲವೇ? ಇಲಿಯನ್ನು ಹಿಡಿದು ಗಣಕಯಂತ್ರವನ್ನು ನಾವು ನಡೆಸುತ್ತೇವೆಯೋ, ಅದು ನಮ್ಮನ್ನು ನಡೆಸುತ್ತದೋ ಯೋಚನೆ ಮಾಡಿದರೆ ಈ ವಾದಕ್ಕೆ ಪುಷ್ಟಿ ದೊರಕುತ್ತದೆ.

ಇತಿ ತಮ್ಮವ,
- ಕೃಷ್ಣಪ್ರಿಯ

(ನಿಮಗೂ ಈ ವಿಷಯದಲ್ಲಿ ಏನಾದರೂ ಮಹತ್ತರವಾದದ್ದು ಗೊತ್ತಿದ್ದರೆ ಅಥವಾ ಹೊಳೆದರೆ ಹಂಚಿಕೊಳ್ಳುವಂತವರಾಗಿ.)

ಪೂರಕ ಓದಿಗೆ-

ಕಂಪ್ಯೂಟರ್‌ ಹೆಣ್ಣೆಂದಿರಾ, ಅನ್ಯಾಯ ಸಾರ್‌! (ಪ್ರತಿಕ್ರಿಯೆ)
ಗಣಕಾ-ಗಣಿಕಾ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X