ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2 ಸಾವಿರ ನೋಟಿನಲ್ಲಿ ಆನೆ, ನವಿಲು, ತಾವರೆ ಏಕಿವೆ?

By ಗಗನ್ ಪ್ರೀತ್
|
Google Oneindia Kannada News

ಹೊಸ 2 ಸಾವಿರ ರುಪಾಯಿ ನೋಟಿನಲ್ಲಿ ನವಿಲು, ಆನೆ ಮತ್ತು ತಾವರೆ ಹೂವಿನ ಚಿತ್ರವಿದೆ. ಯಾಕೆ ಅದೇ ಚಿತ್ರಗಳನ್ನು ಹಾಕಬೇಕು ಅಂತ ಯೋಚಿಸಿದ್ದೀರಾ? ಅದು ಯಾವುದೇ ದೇಶದ ನೋಟಿರಬಹುದು, ಅದನ್ನು ವ್ಯಾಪಾರ- ವಹಿವಾಟುಗಳಿಗೆ ಬಳಸುತ್ತಾರೆ. ಅಂದರೆ ಜನರ ಮಧ್ಯೆ ಚಲಾವಣೆಯಾಗುವ ನೋಟಿನಲ್ಲಿ ದೇಶದ ಚರಿತ್ರೆ, ಪರಂಪರೆ ಹಾಗೂ ಸಂಸ್ಕೃತಿ ಬಿಂಬಿಸುವ ಪ್ರಯತ್ನ ಆಗಬೇಕು ಎಂಬುದೇ ಮುಖ್ಯ ಉದ್ದೇಶ.

ಅಂದ ಮೇಲೆ ಅತಿ ಹೆಚ್ಚು ಮುಖಬೆಲೆಯ 2 ಸಾವಿರ ರುಪಾಯಿ ನೋಟಿನಲ್ಲಿ ಅಚ್ಚಾಗಿರುವ ನವಿಲು, ಆನೆ ಮತ್ತು ತಾವರೆ ಹೂವುಗಳ ಚಿತ್ರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇರಲೇಬೇಕು, ಅಲ್ಲವೆ?[ಬಂಡೀಪುರದ 'ರಾಜಾ ಹುಲಿ' ಬಂದರೆ ಎಂಥ ಗಾಡಿಯೂ ಸೈಡಿಗೆ]

Why elephant, peacock printed in 2 thousand note?

ನವಿಲು ನಮ್ಮ ರಾಷ್ಟ್ರಪಕ್ಷಿ. ಸೌಂದರ್ಯಕ್ಕೆ ಮತ್ತೊಂದು ಹೆಸರೇ ನವಿಲು. ಅದು ಶುದ್ಧತೆ ಸಂಕೇತ, ಸರಸ್ವತಿಯ ವಾಹನವಾದ ನವಿಲಿಗೆ ಇಸ್ಲಾಮ್ ಹಾಗೂ ಕ್ರೈಸ್ತ ಧರ್ಮದಲ್ಲೂ ತುಂಬ ಪ್ರಾಮುಖ್ಯ ಇದೆ. ಅಂದ ಹಾಗೆ, ಗಂಡು ನವಿಲಿಗೆ ಮಾತ್ರವೇ ಗರಿ ಇರುತ್ತದೆ. ಹೆಣ್ಣು ನವಿಲನ್ನು ಆಕರ್ಷಿಸುವ ಸಲುವಾಗಿ ಅವುಗಳು ತಮ್ಮ ಗರಿಗಳನ್ನು ಬಿಚ್ಚಿ ಕುಣಿಯುತ್ತವೆ. ಹೆಣ್ಣು ನವಿಲಿನ ಎದೆ ಭಾಗ ಬಿಳಿ ಹಾಗೂ ಕೊಂಚ ಹಸಿರು ಮತ್ತು ಮೈಭಾಗದ ಬಣ್ಣ ಕಂದು.

ಇಲ್ಲಿ ಇನ್ನೊಂದು ಅಂಶ ಗಮನಿಸಬೇಕು. ನಮ್ಮ ದೇವಾದಿ ದೇವತೆಗಳಿಗೆಲ್ಲ ಒಂದೊಂದು ಪಕ್ಷಿ ವಾಹನವಿದೆ. ಅದೇ ವೇಳೆ ಅವುಗಳ ಶತ್ರು ಪ್ರಾಣಿಗಳು ಸಹ ಕಾಣುತ್ತೇವೆ. ಒಂದು ಸಣ್ಣ ಉದಾಹರಣೆ ಅಂದರೆ, ಆದಿ ಶೇಷನ ಮೇಲೆ ಮಲಗಿರುವ ಮಹಾ ವಿಷ್ಣುವಿಗೆ ಗರುಡ ವಾಹನ. ಗರುಡ ಹಾಗೂ ಹಾವು ಶತ್ರುಗಳೆನಿಸಿದರೂ ಅಲ್ಲೊಂದು ಸಾಮರಸ್ಯ ಇದೆ.['ಜಂಗಲ್ ಡೈರಿ'-ಇದು ಗಗನ್ ನ ಕನಸಿಗೆ ದಾರಿ]

Why elephant, peacock printed in 2 thousand note?

ಇನ್ನು ಪುರಾಣಗಳಲ್ಲೇ ತಾವರೆ ಹೂವಿಗೆ ಪ್ರಾಮುಖ್ಯ ಇದೆ. ಇದು ಲಕ್ಷಿದೇವಿಗೆ ನೆಚ್ಚಿನ ಹೂವು ಎಂಬುದು ಜನಜನಿತ ನಂಬಿಕೆ. ಅಷ್ಟೇ ಅಲ್ಲ, ಐಶ್ವರ್ಯ ಮತ್ತು ಸಂಪತ್ತಿನ ಸಂಕೇತ ಎಂಬುದು ಕೂಡ ಜನಪ್ರಿಯ ನಂಬಿಕೆ. ಈ ಹೂವು ಕೆಸರಿನಲ್ಲಿ ಬೆಳೆದರೂ ಒಂದಿಷ್ಟು ಕೆಸರು ಕೂಡ ಹೂವಿಗೆ ಅಂಟುವುದಿಲ್ಲ. ಇದು ಅದರ ವಿಶೇಷ.

ಹಾಗಂತ ತಾವರೆ ಹೂವನ್ನು ಯಾವಾಗ ಅಂದರೆ ಆವಾಗ ಕೊಯ್ಯುವುದಿಲ್ಲ. ಲಕ್ಷ್ಮಿಗೆ ಇಷ್ಟವಾದ ಹೂವು ಎಂಬ ನಂಬಿಕೆ ಹಿಂದೆ ಕೆಲಸ ಮಾಡಿರುವುದು ಅವುಗಳನ್ನು ಉಳಿಸುವ ಪ್ರಯತ್ನವೇ ಎಂಬುದು ಎದ್ದು ಕಾಣುತ್ತದೆ.

ಆನೆಯನ್ನು ಭಾರತದ ಪಾರಂಪರಿಕ ಪ್ರಾಣಿಯನ್ನಾಗಿ 2010ರ ಅಕ್ಟೋಬರ್ 22ರಂದು ಘೋಷಿಸಲಾಯಿತು. ಆ ವೇಳೆ ಇಡೀ ದೇಶದಲ್ಲಿ 29 ಸಾವಿರದಷ್ಟಿದ್ದ ಆನೆಗಳ ಸಂಖ್ಯೆಯನ್ನು ಹೆಚ್ಚಿಸಲು ಈ ನಿರ್ಧಾರ ಕೈಗೊಳ್ಳಲಾಯಿತು. ಶೇ 60ರಷ್ಟು ಏಷಿಯನ್ ಆನೆಗಳು ದೇಶದ 18 ರಾಜ್ಯಗಳಲ್ಲಿ ಕಂಡು ಬರುತ್ತವೆ.[ಹುಲಿ ಗಣತಿಗಾಗಿ ಬಂಡೀಪುರದಲ್ಲಿ 670 ಕ್ಯಾಮೆರಾ ಅಳವಡಿಕೆ]

Why elephant, peacock printed in 2 thousand note?

ಸದ್ಯಕ್ಕೆ ದೇಶದಲ್ಲಿ 26000 ಕಾಡಾನೆಗಳಿದ್ದು, 3500 ಸಾಕಾನೆಗಳಿವೆ. ಅದರೆ ದುರಂತ ಏನೆಂದರೆ ಸುಮಾರು ಆನೆಗಳು ವಿದ್ಯುತ್ ಸ್ಪರ್ಶದಿಂದ ಹಾಗೂ ರೈಲುಗಳಿಗೆ ಸಿಲುಕಿ ಸಾಯುತ್ತಿವೆ. ಅವುಗಳ ದಂತಕ್ಕಾಗಿ ಕೊಲ್ಲಲಾಗುತ್ತಿದೆ.

ಹುಲಿಗಳ ಸಂರಕ್ಷಣೆಗೆ ಹೇಗೆ ಪ್ರಾಜೆಕ್ಟ್ ಟೈಗರ್ ಇದೆಯೋ ಅದೇ ರೀತಿ ಆನೆಗಳ ಸಂರಕ್ಷಣೆಗೆ ಪ್ರಾಜೆಕ್ಟ್ ಎಲಿಫೆಂಟ್ ಇದೆ. ಈ ಯೋಜನೆ ಮುಂದಾಳತ್ವವನ್ನು ಇನ್ ಸ್ಪೆಕ್ಟರ್ ಜನರಲ್ ಆಫ್ ಫಾರೆಸ್ಟ್ ಹಾಗೂ ಪ್ರಾಜೆಕ್ಟ್ ಎಲಿಫೆಂಟ್ ನ ನಿರ್ದೇಶಕರಾದ ಎ.ಎನ್. ಪ್ರಸಾದ್ ಹೊತ್ತಿದ್ದಾರೆ.[ಜೀವನ್ಮರಣ ಮಧ್ಯೆ ಹೋರಾಡುತ್ತಿರುವ ಆನೆಯ ನೋಡಲು ನೂಕುನುಗ್ಗಲು]

ಆನೆಗಳ ಜೀವನ ಶೈಲಿ, ಅವುಗಳ ಸ್ವಭಾವ, ದಿನಕ್ಕೆ ಎಷ್ಟು ಆಹಾರ ಸೇವಿಸುತ್ತೆ ಇವೆಲ್ಲವನ್ನೂ ಮುಂದಿನ ಸಂಚಿಕೆಯಲ್ಲಿ ತಿಳಿಸ್ತೀನಿ.

English summary
Elephant, Peacock and Lotus flower printed in 2 thousand rupees new note. Do you know the reason? Gagan preeth explains in Jungle diary
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X