ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದು ಸಿಂಹಗಳ ಜಗತ್ತು, ಎಷ್ಟೊಂದು ಇಂಟರೆಸ್ಟಿಂಗ್ ವಿಚಾರಗಳು!

ಭಾರತದಲ್ಲಿನ ಸಿಂಹಗಳ ಬಗ್ಗೆ ತುಂಬ ಸೊಗಸಾದ ವಿವರಗಳನ್ನು ಹಂಚಿಕೊಂಡಿದ್ದಾರೆ ಒನ್ಇಂಡಿಯಾ ಅಂಕಣಕಾರ ಗಗನ್ ಪ್ರೀತ್. ಅದರ ಜತೆಗೆ ಸಿಂಹಗಳ ಸಂಖ್ಯೆ ಹೆಚ್ಚಿರುವ ಗುಜರಾತ್ ನ ಗಿರ್ ಕಾಡಿನ ಬಗ್ಗೆ ಕೂಡ ಮಾಹಿತಿ ನೀಡಿದ್ದಾರೆ

By ಗಗನ್ ಪ್ರೀತ್
|
Google Oneindia Kannada News

ಭಾರತೀಯರು ನಾವು ಬಹಳ ಅದೃಷ್ಟವಂತರು. ವನ್ಯಜೀವಿಗಳ ವಿಚಾರದಲ್ಲಂತೂ ನಮಗೆ ಗರ್ವ ಪಡುವುದಕ್ಕೆ ಖಂಡಿತ ಕಾರಣಗಳಿವೆ. ಏಕೆಂದರೆ, ಹುಲಿ-ಸಿಂಹ ಎರಡನ್ನೂ ಕಾಣಲು ಸಾಧ್ಯವಿರುವ, ಎರಡೂ ವಾಸಿಸಲು ಯೋಗ್ಯವಾದ ಭೂ ಪ್ರದೇಶ ಇರುವುದು ಭಾರತದಲ್ಲಿ ಮಾತ್ರ.

ಇನ್ನು ಈ ವಾರ ನಾನು ಹೇಳಲು ಹೊರಟಿರುವ ಸಿಂಹದ ವಿಚಾರದ ಬಗ್ಗೆ ಹೇಳುವುದಾದರೆ, ಆಫ್ರಿಕಾ ಖಂಡದಲ್ಲಿ ಮಾತ್ರ ಸಿಂಹಗಳು ಕಂಡುಬರುತ್ತವೆ. ಅದನ್ನು ಹೊರತುಪಡಿಸಿದರೆ ಭಾರತದಲ್ಲಿ ಮಾತ್ರ ಸಿಂಹಗಳನ್ನು ನೋಡಬಹುದು. ನಾನಿಲ್ಲಿ ಮೃಗಾಲಯಗಳ ಬಗ್ಗೆ ಮಾತನಾಡ್ತಿಲ್ಲ. ಕಾಡುಗಳಲ್ಲಿ ಕಂಡುಬರುವ ಸಿಂಹದ ಬಗ್ಗೆ ಹೇಳ್ತಿದ್ದೀನಿ.[ವೀರಪ್ಪನ್ ಜೊತೆ ಸಫಾರಿ ಚಾಲಕ ಮುಖಾಮುಖಿಯಾದ ರೋಚಕ ಕಥೆ]

ನಮ್ಮ ಬಾಲ್ಯದ ದಿನಗಳೆಲ್ಲ ಪಂಚತಂತ್ರ, ಚಂದಮಾಮ, ಬೊಂಬೆಮನೆ, ಬಾಲಮಿತ್ರಗಳಲ್ಲಿ ಚಿತ್ರಿತವಾಗಿದ್ದ ಸಿಂಹದ ಗಾಂಭೀರ್ಯ, ಕ್ರೌರ್ಯ, ಶಕ್ತಿ ಇವುಗಳ ಬಗೆಗಿನ ಕುತೂಹಲದಲ್ಲಿ ಕಳೆದಿದೆ. ಅಂಥ ಸಿಂಹದ ಬಗ್ಗೆ ಒಂದಿಷ್ಟು ಆಸಕ್ತಿಕರ ವಿಚಾರಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ.

ಅಂದಹಾಗೆ, ಈ ಲೇಖನದ ಬಗ್ಗೆ ನಿಮಗೆ ಏನನ್ನಿಸಿತು ಎಂಬ ಬಗ್ಗೆ ನಾಲ್ಕು ಸಾಲು ಬರೆದರೆ ನನಗೆ ತುಂಬ ಅನುಕೂಲವಾಗುತ್ತದೆ. ಮುಂದಿನ ಲೇಖನಗಳು ಹೇಗಿರಬೇಕು ಎಂಬ ಬಗ್ಗೆ ಕೂಡ ನಿಮ್ಮ ಸಲಹೆ-ಸೂಚನೆಗಳಿದ್ದರೆ ತಿಳಿಸಿ. ನನ್ನ ಫೇಸ್ ಬುಕ್ ಪೇಜ್ ಗೆ ಇಲ್ಲಿ ಕ್ಲಿಕ್ ಮಾಡಿ.[ಹುಲಿ ಕೂಡ ಹೆದರುವ ಕಾಡು ನಾಯಿ ಅಂದ್ರೆ ಸುಮ್ನೇನಾ?]

ಗುಜರಾತಿನ ಗಿರ್ ನಲ್ಲಿ ಮಾತ್ರ ಇದೆ

ಗುಜರಾತಿನ ಗಿರ್ ನಲ್ಲಿ ಮಾತ್ರ ಇದೆ

ನಮ್ಮ ದೇಶದಲ್ಲಿ ಕಂಡುಬರುವುದು ಏಷಿಯಾಟಿಕ್ ಸಿಂಹ. ಈ ಬಗ್ಗೆ ಬೈಬಲ್ ನಲ್ಲೂ ಮಾಹಿತಿ ಇದೆ. ಏಷಿಯಾಟಿಕ್ ಸಿಂಹ ಗ್ರೀಕ್, ರೋಮ್ ಹಾಗೂ ಪಶ್ಚಿಮ ಏಷ್ಯಾದ ಕೆಲ ಭಾಗದಲ್ಲಿ ಇದ್ದವು. ಆದರೆ ಈಗ ಗುಜರಾತಿನ ಗಿರ್ ಕಾಡಿನಲ್ಲಿ ಮಾತ್ರವೇ ಕಾಣಬಹುದು.[ಫೋಟೋ-ಕೌಶಿಕ್ ಭಾರದ್ವಾಜ್]

ಒಂದು ಗುಂಪಿನಲ್ಲಿ ಹದಿನೈದು ಸಿಂಹ

ಒಂದು ಗುಂಪಿನಲ್ಲಿ ಹದಿನೈದು ಸಿಂಹ

ಸಿಂಹಗಳು ಸಾಮಾನ್ಯವಾಗಿ ಗುಂಪಿನಲ್ಲೇ ಇರುತ್ತವೆ. ಒಂದು ಗುಂಪಿನಲ್ಲಿ ಸುಮಾರು 15 ಸಿಂಹಗಳಿರುತ್ತವೆ. ಈ ಗುಂಪಿಗೆ ಒಂದು ಹೆಣ್ಣು ಸಿಂಹದ ನೇತೃತ್ವ ಇರುತ್ತದೆ. ಗಂಡು ಸಿಂಹಗಳು ಹೆಣ್ಣು ಸಿಂಹಗಳೊಡನೆ ಇರುವುದಿಲ್ಲ. ಕೂಡಿಕೆ ಕಾಲದಲ್ಲಿ ಮಾತ್ರ ಎರಡೂ ಜೊತೆಗಿರುತ್ತವೆ. ಅವುಗಳ ವ್ಯಾಪ್ತಿಯಲ್ಲಿ ಸುತ್ತಾಡುತ್ತ, ಬೇರೆ ಗಂಡು ಸಿಂಹಗಳಿಂದ ಕಾಪಾಡಿಕೊಳ್ಳುತ್ತವೆ. ಜೋಡಿ ಗಂಡು ಸಿಂಹಗಳು ಒಂದು ನಿರ್ದಿಷ್ಟವನ್ನು ತಮ್ಮದು ಎಂಬಂತೆ ಗುರುತಾಗಿ ಇರಿಸಿಕೊಂಡಿರುತ್ತವೆ.[ಫೋಟೋ-ಕೌಶಿಕ್ ಭಾರದ್ವಾಜ್]

ಹನ್ನೊಂದು ದಿವಸಕ್ಕೆ ಕಣ್ಣು ಬಿಡುವ ಸಿಂಹದ ಮರಿ

ಹನ್ನೊಂದು ದಿವಸಕ್ಕೆ ಕಣ್ಣು ಬಿಡುವ ಸಿಂಹದ ಮರಿ

ಏಷಿಯಾಟಿಕ್ ಸಿಂಹಗಳು ಆಫ್ರಿಕನ್ ಸಿಂಹಗಳಿಗಿಂತ ಗಾತ್ರದಲ್ಲಿ ಚಿಕ್ಕದಾಗಿರುತ್ತವೆ. ಮತ್ತು ಗಂಡು ಸಿಂಹಗಳಿಗೆ ಕೇಸರಿ (ಸ್ವಲ್ಪ ಮಟ್ಟಿಗೆ ಕಿತ್ತಳೆ ಬಣ್ಣದ ಗಡ್ಡ) ಕಮ್ಮಿ. ಬೆಳೆದ ಗಂಡು ಸಿಂಹ 160ರಿಂದ 190 ಕೆ.ಜಿ, ಹೆಣ್ಣು ಸಿಂಹ 100ರಿಂದ 120 ಕೆ.ಜಿವರೆಗೂ ಇರುತ್ತವೆ. ಹೆಣ್ಣು ಸಿಂಹಗಳು ಒಮ್ಮೆಗೆ 2ರಿಂದ 3 ಮರಿಗಳನ್ನು ಹಾಕುತ್ತವೆ. ಹುಟ್ಟಿದಾಗ ಆ ಮರಿಗಳಿಗೆ ಕಣ್ಣು ಕಾಣುವುದಿಲ್ಲ. 11 ದಿವಸಕ್ಕೆ ಕಣ್ಣು ಬಿಡುತ್ತವೆ. ಒಂದು ತಿಂಗಳಿಗೆ ಆಟವಾಡಲು ಶುರು ಮಾಡುತ್ತವೆ.[ಫೋಟೋ-ಕೌಶಿಕ್ ಭಾರದ್ವಾಜ್]

ಬೇಟೆ ಪ್ರಾಣಿಗಳಿವು

ಬೇಟೆ ಪ್ರಾಣಿಗಳಿವು

ಬೆಳವಣಿಗೆ ಆದ ನಂತರ ಹೆಣ್ಣು ಮರಿ ತಾಯಿಯೊಡನೆ ಉಳಿದರೆ, ಗಂಡು ಬೇರೆ ಆಗಿಬಿಡುತ್ತದೆ. ಇವುಗಳ ಬೇಟೆ ಪ್ರಾಣಿಗಳು ಜಿಂಕೆ, ನೀಲ್ ಘಾಯ್, ಸಾಂಬಾರ್ ಜಿಂಕೆ ಮತ್ತು ಕಾಡು ಹಂದಿ.[ಫೋಟೋ-ಕೌಶಿಕ್ ಭಾರದ್ವಾಜ್]

20ಕ್ಕೆ ಕುಸಿದಿದ್ದ ಸಿಂಹಗಳ ಸಂಖ್ಯೆ

20ಕ್ಕೆ ಕುಸಿದಿದ್ದ ಸಿಂಹಗಳ ಸಂಖ್ಯೆ

ಸಿಂಹಗಳು ಒಣ ಪ್ರದೇಶಗಳಲ್ಲಿ ಬದುಕುತ್ತವೆ. ಈಗ ಗುಜರಾತಿನ ಗಿರ್ ಕಾಡಿನಲ್ಲಿ ಮಾತ್ರವೇ ನಾವು ಕಾಣಬಹುದು. 1900ನೇ ಇಸವಿ ವೇಳೆ ಬ್ರಿಟಿಷರು ಮತ್ತು ಅಲ್ಲಿನ ನವಾಬರು ಬೇಟೆ ಆಡುತ್ತಿದ್ದ ಕಾರಣ ಸಿಂಹಗಳ ಸಂಖ್ಯೆ 20ಕ್ಕೆ ಕುಸಿದಿತ್ತು. ಅ ನಂತರ ನವಾಬರು ಹಾಗೂ ಬ್ರಿಟಿಷ್ ವೈಸ್ ರಾಯ್ ಗಳು ಇವುಗಳ ಸಂರಕ್ಷಣೆಗೆ ಮುಂದಾದರು.[ಫೋಟೋ-ಕೌಶಿಕ್ ಭಾರದ್ವಾಜ್]

ಅಸಮಾಧಾನ ಇಲ್ಲದ ಸಹಜೀವನ

ಅಸಮಾಧಾನ ಇಲ್ಲದ ಸಹಜೀವನ

1965ರಲ್ಲಿ ಗಿರ್ ನ 1942 ಚದರ ಕಿಲೋಮೀಟರ್ ಜಾಗದ ಕಾಡನ್ನು ಅಭಯಾರಣ್ಯ ಎಂದು ಮಾಡಲಾಯಿತು. 258 ಚದರ ಕಿಲೋಮೀಟರ್ ಜಾಗವನ್ನು ರಾಷ್ಟ್ರೀಯ ಉದ್ಯಾನವಾಗಿ ಮಾಡಲಾಯಿತು. ರಾಷ್ಟ್ರೀಯ ಉದ್ಯಾನಗಳಲ್ಲಿ ಮಾನವ ಚಟುವಟಿಕೆ ನಿಷಿದ್ಧ. ಅದರೆ ಅಭಯಾರಣ್ಯದಲ್ಲಿ ಅಲ್ಲಿನ ಬುಡಕಟ್ಟು ಗುಂಪು ಮಾಲ್ದಾರಿಗಳಿಗೆ ತಮ್ಮ ಚಟುವಟಿಕೆಗಳಿಗೆ ಅವಕಾಶವಿದೆ. ಮಾಲ್ದಾರಿಗಳ ಮುಖ್ಯ ಕಾರ್ಯವೆಂದರೆ ಜಾನುವಾರುಗಳನ್ನು ಕಾಯುವುದು. ಅದರಲ್ಲೂ ಎಮ್ಮೆಗಳನ್ನು ಸಾಕುತ್ತಾರೆ. ಇಲ್ಲಿನ ವಿಶೇಷತೆಯೆಂದರೆ, ಸಿಂಹಗಳು ಹಾಗೂ ಸ್ಥಳೀಯರ ಮಧ್ಯೆ ಸಂಘರ್ಷವಿಲ್ಲದ ಜೀವನ ನಡೆಯುತ್ತಿದೆ. ಒಂದು ವೇಳೆ ಸಿಂಹಗಳು ಇವರ ಜಾನುವಾರುಗಳನ್ನು ಕೊಂದರೂ ಸಿಂಹದ ಬಗ್ಗೆ ಇವರ ಆಕ್ಷೇಪ, ಅಸಮಾಧಾನ ಇರುವುದಿಲ್ಲ.[ಫೋಟೋ-ಕೌಶಿಕ್ ಭಾರದ್ವಾಜ್]

ಸಿಂಹಗಳ ಸ್ಥಳಾಂತರಕ್ಕೆ ನಿರ್ಧಾರ

ಸಿಂಹಗಳ ಸ್ಥಳಾಂತರಕ್ಕೆ ನಿರ್ಧಾರ

ಮಳೆಗಾಲದಲ್ಲಿ ಹಸಿರಾಗುವುದು ಬಿಟ್ಟರೆ ಗಿರ್ ಕಾಡು ವರ್ಷವಿಡೀ ಒಣಗಿರುತ್ತದೆ. ಸಿಂಹದ ಮೈ ಬಣ್ಣದ ಚಿನ್ನದಂತಿರುತ್ತದೆ. ಈ ಬಣ್ಣ ಅವುಗಳನ್ನು ಮರೆಮಾಚುತ್ತವೆ. ಈಗ ಸಿಂಹಗಳ ಸಂತತಿ 500ಕ್ಕೂ ಹೆಚ್ಚಿದೆ ಆದ್ದರಿಂದ ಕೆಲವು ಸಿಂಹಗಳನ್ನು ಮಧ್ಯಪ್ರದೇಶದ ಕುನೊ ಅಭಯಾರಣ್ಯಕ್ಕೆ ಸ್ಥಳಾಂತರಿಸಲು ಚಿಂತನೆ ನಡೆದಿದೆ.[ಫೋಟೋ-ಕೌಶಿಕ್ ಭಾರದ್ವಾಜ್]

ಗಿರ್ ನ ಆಕರ್ಷಣೆ ಮೌಲಾನಾ

ಗಿರ್ ನ ಆಕರ್ಷಣೆ ಮೌಲಾನಾ

ಗಿರ್ ಕಾಡಿನಲ್ಲಿ ಒಂದು ಸೆಲೆಬ್ರೆಟಿ ಗಂಡುಸಿಂಹವಿತ್ತು. ಅದರ ಹೆಸರು ಮೌಲಾನಾ. ಸಾಮಾನ್ಯವಾಗಿ ಕಾಡಿನಲ್ಲಿ ಗಂಡು ಸಿಂಹ 11 ರಿಂದ 12 ವರ್ಷ ಬದುಕುತ್ತದೆ. ಆದರೆ ಈ ಸಿಂಹ 17 ವರ್ಷ ಬದುಕಿತ್ತು. ಅಲ್ಲಿನ ಗೈಡ್ ಗಳ ಪ್ರಕಾರ ಗಿರ್ ನ ಶೇ 70ರಿಂದ 80ರಷ್ಟು ಸಿಂಹಗಳು ಇದರದೇ ಸಂತತಿ.[ಫೋಟೋ-ಪಿಟಿಐ]

ಪ್ರಯಾಣದ ಮಾಹಿತಿ

ಪ್ರಯಾಣದ ಮಾಹಿತಿ

ಅಂದಹಾಗೆ ಗಿರ್ ಗೆ ಹೋಗಲು ಅಹ್ಮದಾಬಾದ್ ಗೆ ರೈಲು ಅಥವಾ ವಿಮಾನದಲ್ಲಿ ಹೋಗಬಹುದು. ಅಲ್ಲಿಂದ ರಾತ್ರಿ ಸೋಮನಾಥ್ ಎಕ್ಸ್ ಪ್ರೆಸ್ ಸೌರಾಷ್ಟ್ರಕ್ಕೆ ಹೋಗುತ್ತದೆ. ಒಂದು ರಾತ್ರಿಯ ಪ್ರಯಾಣ ಆಗುತ್ತದೆ. ಅಲ್ಲಿಂದ 15 ಕಿಲೋಮೀಟರ್ ದೂರದಲ್ಲಿದೆ ಗಿರ್ ಕಾಡು . ಅಲ್ಲಿಗೆ ಆಟೋಗಳಲ್ಲಿ ಹೋಗಬಹುದು. ನವೆಂಬರ್ ನಿಂದ ಫೆಬ್ರವರಿ ಗಿರ್ ಗೆ ಭೇಟಿ ನೀಡಲು ತುಂಬ ಒಳ್ಳೆ ಸಮಯ.

English summary
Oneindia columnist Gagan Preeth explains intersting facts about Indian lions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X