• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯಾವ ಕ್ಯಾಮೆರಾ ಖರೀದಿಸಬೇಕು ಎಂಬುದರಿಂದ ಬಾಡಿಗೆ ಕ್ಯಾಮೆರಾವರೆಗೆ

By ಗಗನ್ ಪ್ರೀತ್
|

ಬೇಸಿಗೆ ರಜೆ ಶುರುವಾಗಿದೆ. ನೀವು ಪ್ರವಾಸಗಳಿಗೆ ಹೋಗುವ ಯೋಚನೆ ಮಾಡಿರಬಹುದು. ಹಾಗೆ ಪ್ರವಾಸಕ್ಕೆ ಹೋದಾಗ ನಿಮ್ಮ ಬಳಿ ಒಂದು ಕ್ಯಾಮೆರಾ ಇದ್ದರೆ ಆ ವಿಶೇಷ ಕ್ಷಣಗಳನ್ನು ಸೆರೆಹಿಡಿಯಬಹುದಲ್ಲವೇ? ಆ ಕ್ಷಣಗಳನ್ನು ಮೆಲಕುಹಾಕುತ್ತಾ, ಬಂಧುಗಳು- ಮಿತ್ರರೊಡನೆ ಆ ಚಿತ್ರಗಳನ್ನು ಹಂಚಿಕೊಳ್ಳಬಹುದು.

ಅಯ್ಯೋ ಫೋಟೋಗ್ರಫಿ ತುಂಬ ದುಬಾರಿ ಹವ್ಯಾಸ. ಅಷ್ಟೊಂದು ಹಣ ತೆತ್ತು ಕ್ಯಾಮೆರಾ ಖರೀದಿಸಿ, ಅದರ ಸಲಕರಣೆಗಳು ಕೊಂಡು, ಅದಾದ ಮೇಲೆ ಫೋಟೋಗ್ರಫಿ ಕ್ಲಾಸ್ ಗೆ ಹೋಗಿ, ಇವೆಲ್ಲ ಆಗುವ-ಹೋಗುವ ಕೆಲಸವೇ ಎಂದು ಯೋಚಿಸುತ್ತಿದ್ದೀರಾ? ಅಷ್ಟೆಲ್ಲ ಚಿಂತೆ ಹಚ್ಚಿಸಿಕೊಳ್ಳಬೇಡಿ ಏಕೆಂದರೆ, ಕಡಿಮೆ ಖರ್ಚಿನಲ್ಲೇ ಫೋಟೋಗ್ರಫಿ ಮಾಡಬಹುದು.[ಜಂಗಲ್ ಡೈರಿ: ಜಿಮ್ ಕಾರ್ಬೆಟ್ ಆ ನರಭಕ್ಷಕ ಪ್ರಾಣಿಗಳ ಕೊಲ್ಲದೆ ಇದ್ದಿದ್ದರೆ...]

ಇದಕ್ಕೆ ನೀವು ಕ್ಯಾಮೆರಾ ಕೊಂಡುಕೊಳ್ಳಲೇಬೇಕು ಅಂತೇನೂ ಇಲ್ಲ. ಕ್ಯಾಮೆರಾಗಳು ಈಗ ಬಾಡಿಗೆಗೂ ಸಿಗುತ್ತವೆ. ರಜಾ ದಿವಸಗಳಲ್ಲಿ ನೀವು ಫೋಟೋಗ್ರಫಿಗೆ ಏಕೆ ಪ್ರಯತ್ನಿಸಬಾರದು? ನಿಮಗೆ ಸಹಕಾರವಾಗುವಂತೆ ಛಾಯಾಗ್ರಹಣದ ಬಗ್ಗೆ ಸಾಮಾನ್ಯವಾಗಿ ಉದ್ಭವವಾಗುವ ಪ್ರಶ್ನೆಗಳಿಗೆ ಇಲ್ಲಿ ಉತ್ತರವಿದೆ.

ಇಲ್ಲಿರುವ ಸಲಹೆ-ಸೂಚನೆಗಳನ್ನು ಅನುಸರಿಸಿದರೂ ಸಾಕು, ನಿಮ್ಮ ಉದ್ದೇಶಕ್ಕೆ ಬಹುತೇಕ ನೆರವಾಗುತ್ತದೆ. ಜತೆಗೆ ಗೊಂದಲದಲ್ಲಿ ದಾರಿ ತಪ್ಪುವ ಸಾಧ್ಯತೆಗಳಿರುವುದಿಲ್ಲ.[ಪ್ರಾಣಿಗಳು ಮನುಷ್ಯರನ್ನು ತಿನ್ನುವುದೇಕೆ? ಜಂಗಲ್ ಡೈರಿಯ ಪುಟಗಳು]

ಡಿಎಸ್ಎಲ್ಆರ್ ಕ್ಯಾಮೆರಾ ಎಂದರೇನು?

ಡಿಎಸ್ಎಲ್ಆರ್ ಕ್ಯಾಮೆರಾ ಎಂದರೇನು?

ಡಿಎಸ್ಎಲ್ಆರ್ ಕ್ಯಾಮೆರಾ ಎಂದರೆ ಡಿಜಿಟಲ್ ಸಿಂಗಲ್ ಲೆನ್ಸ್ ರಿಫ್ಲೆಕ್ಸ್ ಕ್ಯಾಮೆರಾ. ಇಂತಹ ಕ್ಯಾಮೆರಾಗಳಲ್ಲಿ ಕನ್ನಡಿ ಇರುತ್ತದೆ. ಈ ಕನ್ನಡಿ ತಿರುಗುವ ಮೂಲಕ ಕ್ಯಾಮೆರಾದಲ್ಲಿನ ಸೆನ್ಸರ್ ಗೆ ಬೆಳಕು ಹೋಗಿ, ಚಿತ್ರಗಳನ್ನು ಸೆರೆಹಿಡಿಯಲಾಗುತ್ತದೆ. ಚಿತ್ರಗಳ ಗುಣಮಟ್ಟ ಇಂತಹ ಕ್ಯಾಮೆರಾಗಳಲ್ಲಿ ಉತ್ತಮವಾಗಿರುತ್ತವೆ.

ಡಿ ಎಸ್ ಎಲ್ ಆರ್ ಕ್ಯಾಮೆರಾ ಬಾಡಿಗೆಗೆ ಎಲ್ಲಿ ಸಿಗುತ್ತದೆ?

ಡಿ ಎಸ್ ಎಲ್ ಆರ್ ಕ್ಯಾಮೆರಾ ಬಾಡಿಗೆಗೆ ಎಲ್ಲಿ ಸಿಗುತ್ತದೆ?

ಹಲವಾರು ಕಡೆ ನಿಮಗೆ ಕ್ಯಾಮೆರಾಗಳು ಬಾಡಿಗೆಗೆ ಸಿಗುತ್ತವೆ. ಅದರಲ್ಲಿ ಟೋಹೋಲ್ಡ್ ಮತ್ತು ಬುಕ್ ಮೈ ಲೆನ್ಸ್ ಒಳ್ಳೆಯ ಸಂಸ್ಥೆಗಳು. ಅವರ ವೆಬ್ ಸೈಟ್ www.toehold.in ಮತ್ತು www.bookmylens.com ಮೂಲಕ ನಿಮಗೆ ಬೇಕಾದ ಕ್ಯಾಮೆರಾಗಳನ್ನು ಆಯ್ಕೆ ಮಾಡಿಕೊಂಡು, ಅವರ ಕಚೇರಿಗೆ ಹೋಗಿ ನಿಮ್ಮ ಆಧಾರ್ ಅಥವಾ ಪಾಸ್ ಪೋರ್ಟ್ ಕೊಟ್ಟು ನೋಂದಣಿ ಮಾಡಿಸಿ, ನೀವು ಬಾಡಿಗೆಗೆ ಪಡೆಯಬಹುದು. ಟೋಹೋಲ್ಡ್ ಕಚೇರಿ ಜಯನಗರದ 4ನೇ ಬ್ಲಾಕ್ ನಲ್ಲಿದೆ. ಅವರ ದೂರವಾಣಿ ಸಂಖ್ಯೆ- 1800 120 0901 . ಬುಕ್ ಮೈ ಲೆನ್ಸ್ ಕಚೇರಿ ಕೊರಮಂಗಲದಲ್ಲಿದೆ. ಅವರ ದೂರವಾಣಿ ಸಂಖ್ಯೆ- 1800 121 0446 .

ಕ್ಯಾಮೆರಾ ಸ್ವಂತಕ್ಕೆ ಕೊಳ್ಳುವುದಾದರೆ ಯಾವುದು ಸೂಕ್ತ ?

ಕ್ಯಾಮೆರಾ ಸ್ವಂತಕ್ಕೆ ಕೊಳ್ಳುವುದಾದರೆ ಯಾವುದು ಸೂಕ್ತ ?

ಕ್ಯಾಮೆರಾಗಳಲ್ಲಿ ಮೂರು ಥರ ಇವೆ. ಮೊದಲಿಗೆ ಪ್ರವೇಶ, ನಂತರ ಮಧ್ಯಮ, ಅನಂತರ ವೃತ್ತಿಪರ ವರ್ಗ. ಫೋಟೋಗ್ರಫಿಗೆ ಹೊಸಬರಾದರೆ ಎಂಟ್ರಿ ಲೆವೆಲ್ ಕ್ಯಾಮೆರಾ ಸೂಕ್ತ.

ಈ ವರ್ಗದಲ್ಲಿ ಪ್ರೊಫೆಷನಲ್ ಕ್ಯಾಮೆರಾದಲ್ಲಿರುವ ಎಲ್ಲ ವೈಶಿಷ್ಟ್ಯಗಳು ಇರುತ್ತವೆ. ಆದರೆ ಅದರಷ್ಟು ಅಡ್ವಾನ್ಸ್ ಡ್ ತಂತ್ರಜ್ಞಾನ ಇರುವುದಿಲ್ಲ ಅಷ್ಟೇ.

ಕ್ಯಾನನ್ 1200ಡಿ ಮತ್ತು ನಿಕಾನ್ 3200ಡಿ. ಇನ್ನೂ ಕೊಂಚ ಉತ್ತಮವಾದ ಕ್ಯಾಮೆರಾ ಬೇಕೆಂದರೆ ಕ್ಯಾನನ್ 700ಡಿ ಅಥವಾ ನಿಕಾನ್ 5500ಡಿ ಖರೀದಿಸಬಹುದು.

ಹೆಚ್ಚಾಗಿ ಕೇಳಿಬರುವ ಪ್ರಶ್ನೆಯೆಂದರೆ, ನಿಕಾನ್ ಕ್ಯಾಮೆರಾವೋ ಅಥವಾ ಕ್ಯಾನನ್ ಕ್ಯಾಮೆರಾ ಕೊಳ್ಳುವುದೋ? ಎರಡು ಕೂಡ ಉತ್ತಮವಾದ ಕ್ಯಾಮೆರಾಗಳೇ. ಸ್ವತಃ ಎರಡನ್ನು ಬಳಸಿದ್ದೇನೆ. ನಿಮಗೆ ಯಾವುದು ಬಳಸುವುದಕ್ಕೆ ಇಷ್ಟವಾಗುತ್ತದೋ ಅದನ್ನು ಖರೀದಿಸಿ.

ಯಾವ ಲೆನ್ಸ್ ಕೊಳ್ಳಬೇಕು ?

ಯಾವ ಲೆನ್ಸ್ ಕೊಳ್ಳಬೇಕು ?

ಕ್ಯಾಮೆರಾ ಕೊಳ್ಳುವಾಗ ಅದರ ಜೊತೆ ಎರಡು ಕಿಟ್ ಲೆನ್ಸ್ ಗಳನ್ನು ಕೊಡುತ್ತಾರೆ. ವೈಡ್ ಆಂಗಲ್ ಲೆನ್ಸ್ (18-55 mm ) ಮತ್ತು ಟೆಲಿಫೋಟೋ ಲೆನ್ಸ್ (55-250 mm ). ವೈಡ್ ಆಂಗಲ್ ಲೆನ್ಸ್ ಗಳಲ್ಲಿ ಜೂಮ್ ಕೊಂಚವಷ್ಟೇ ಮಾಡಬಹುದು.

ಇದನ್ನು ಬೆಟ್ಟ ಗುಡ್ಡ, ಮದುವೆ, ಹುಟ್ಟು ಹಬ್ಬದಂತಹ ಸಮಾರಂಭಗಳಲ್ಲಿ ಮತ್ತು ಕ್ಯಾಂಡಿಡ್ ಚಿತ್ರಗಳನ್ನು ಸೆರೆಹಿಡಿಯಲು ಬಳಸುತ್ತೇವೆ.

ವನ್ಯಜೀವಿ, ಚಂದಿರನ ಛಾಯಾಗ್ರಹಣ ಮಾಡಲು ಮತ್ತು ಇತರೆ ಸಂಧರ್ಭಗಳಲ್ಲಿ ಟೆಲಿಫೋಟೋ ಲೆನ್ಸ್ ಬಳಸುತ್ತೇವೆ.

ಇನ್ನು ಮ್ಯಾಕ್ರೋ ಲೆನ್ಸ್ ಗಳನ್ನು ಇರುವೆಯಂಥ ಸಣ್ಣ ಕೀಟ, ಹೂವಿನ ದಳಗಳು ತೆಗೆಯಲು ಬಳಸುತ್ತೇವೆ. ಇನ್ನು ಪ್ರೈಮ್ ಲೆನ್ಸ್ ಗಳು ಸ್ಥಿರವಾಗಿರುತ್ತವೆ. ಅದನ್ನು ಜೂಮ್ ಮಾಡಲು ಆಗುವುದಿಲ್ಲ.

ಈ ಲೆನ್ಸ್ ಗಳಿಂದ ಮೂಡಿಬರುವ ಚಿತ್ರಗಳು ಅತ್ಯದ್ಭುತವಾದ ಗುಣಮಟ್ಟದ್ದಾಗಿರುತ್ತವೆ.

ಕ್ಯಾಮೆರಾಗಳನ್ನು ಎಲ್ಲಿ ಖರೀಸುವುದು ಸೂಕ್ತ?

ಕ್ಯಾಮೆರಾಗಳನ್ನು ಎಲ್ಲಿ ಖರೀಸುವುದು ಸೂಕ್ತ?

ಕ್ಯಾಮೆರಾಗಳನ್ನು ಆನ್ ಲೈನ್ ನಲ್ಲಿ ಖರೀದಿಸುವುದನ್ನು ನಾನು ಸಲಹೆ ಮಾಡುವುದಿಲ್ಲ. ಜಿಕೆ ವ್ಯಾಲ್ಯೂ, ಫೋಟೋ ಸರ್ಕಲ್, ರಿಲಯನ್ಸ್ ಡಿಜಿಟಲ್ ಗಳಲ್ಲಿ ಖರೀದಿಸಿ. ಉತ್ತಮ ಸರ್ವೀಸ್ ಸಿಗುತ್ತದೆ.

ಉಪಯೋಗಿಸಿರುವ ಕ್ಯಾಮೆರಾಗಳನ್ನು ಕೂಡ ನೀವು ಕೊಳ್ಳಬಹುದು. ಫೇಸ್ ಬುಕ್ ನಲ್ಲಿ ಕ್ಯಾಮೆರಾ ಬೈಯಿಂಗ್ ಅಂಡ್ ಸೆಲ್ಲಿಂಗ್ ಎಂಬ ಪೇಜ್ ಇದೆ. ಅಲ್ಲಿ ಮಾರಲು ಬಯಸುವವರು ತಮ್ಮ ಕ್ಯಾಮೆರಾಗಳ ಬಗ್ಗೆ ಹಾಕಿರುತ್ತಾರೆ.

ಅವರನ್ನು ಭೇಟಿ ಮಾಡಿ, ಅಲ್ಲಿಂದಲೇ ಕೊಳ್ಳಬಹುದು. ಆದರೆ ಕ್ಯಾಮೆರಾಗಳ ಬಗ್ಗೆ ತಿಳಿದವರನ್ನು ಒಮ್ಮೆ ಸಂಪರ್ಕಿಸಿ, ಸಲಹೆಯನ್ನು ಪಡೆಯಿರಿ.

ಛಾಯಾಗ್ರಹಣದ ಮೊದಲ ಹೆಜ್ಜೆಗಳೇನು?

ಛಾಯಾಗ್ರಹಣದ ಮೊದಲ ಹೆಜ್ಜೆಗಳೇನು?

ಕ್ಯಾಮೆರಾ ಕೆಲಸ ಮಾಡುವುದು ನಮ್ಮ ಕಣ್ಣಿನ ಥರವೇ. ಒಳ್ಳೆಯ ಬೆಳಕಿನಲ್ಲಿ ಹೇಗೆ ನಮಗೆ ವಸ್ತುಗಳು ಕಾಣುತ್ತವೆಯೋ, ಅದೇ ರೀತಿ ಒಳ್ಳೆಯ ಬೆಳಕಿನಲ್ಲಿ ಉತ್ತಮವಾದ ಚಿತ್ರಗಳನ್ನು ತೆಗೆಯಬಹುದು.

ನೀವು ಬೆಳಕನ್ನು ಹೇಗೆ ಉಪಯೋಗಿಸಿಕೊಳ್ಳಬೇಕು ಎಂಬುದನ್ನು ಕಲಿತರೆ ಸಾಕು ಅದ್ಭುತ ಛಾಯಾಗ್ರಾಹಕರಾಗಿಬಿಡುತ್ತೀರಿ.

ಕ್ಯಾಮೆರಾದಲ್ಲಿ ಎರಡು ಬಗೆಯ ಮೋಡ್ ಗಳು ಇರುತ್ತವೆ. ಬೇಸಿಕ್ ಮತ್ತು ಪ್ರೋ. ಬೇಸಿಕ್ ಮೋಡ್ ಗಳೆಂದರೆ- ಆಟೋ, ಫ್ಲಾಷ್ ನಿಷಿದ್ಧ, ಪೋಟ್ರೈಟ್, ಲ್ಯಾಂಡ್ ಸ್ಕೇಪ್, ಸ್ಪೋರ್ಟ್, ಮ್ಯಾಕ್ರೋ ಮತ್ತು ಕತ್ತಲೆ. ಆಟೋ ಮೋಡ್ ನಲ್ಲಿ ನೀವು ಯಾವುದೇ ರೀತಿಯ ಕ್ಯಾಮೆರಾ ಬದಲಾವಣೆ ಮಾಡಬೇಕಾಗಿರುವುದಿಲ್ಲ.

ಕ್ಯಾಮೆರಾ ಅದರ ಬುದ್ಧಿವಂತಿಕೆಯಿಂದ ಚಿತ್ರವನ್ನು ತೆಗೆಯುತ್ತದೆ. ನೀವು ಕ್ಲಿಕ್ ಮಾಡಬೇಕು ಅಷ್ಟೇ.

ಆಟೋ ಮೋಡ್ ನಲ್ಲಿ ಫ್ಲಾಷ್ ಬೇಕೋ- ಬೇಡವೋ ಎಂದು ಅದೇ ನಿರ್ಧರಿಸುತ್ತದೆ. ಆದರೆ ಫ್ಲಾಷ್ ನಿಷಿದ್ಧ ಮೋಡ್ ನಲ್ಲಿ ಕ್ಯಾಮೆರಾ ಫ್ಲಾಷ್ ಉಪಯೋಗಿಸುವುದಿಲ್ಲ.

ಇನ್ನೆಲ್ಲ ಆಟೋ ಮೋಡ್ ನಂತೆಯೇ ಕೆಲಸ ಮಾಡುತ್ತದೆ. ವ್ಯಕ್ತಿಗಳ ಛಾಯಾಗ್ರಹಣ ಮಾಡಬೇಕಾದರೆ ಪೋಟ್ರೈಟ್ ಮೋಡ್ ಬಳಸಿ.

ಪರಿಸರ ಹಾಗೂ ಬೆಟ್ಟ- ಗುಡ್ಡಗಳನ್ನು ಚಿತ್ರಿಸಬೇಕಾದರೆ ಲ್ಯಾಂಡ್ ಸ್ಕೇಪ್ ಹಾಗೂ ಚಲಿಸುತ್ತಿರುವ ವಿಷಯಗಳನ್ನು ಚಿತ್ರಿಸಬೇಕಾದರೆ ಸ್ಪೋರ್ಟ್ ಮೋಡ್ ಬಳಸಿ.

ಹೂವಿನ ದಳದಂತಹದ್ದನ್ನು ಚಿತ್ರಿಸಬೇಕಾದರೆ ಮ್ಯಾಕ್ರೋ ಮತ್ತು ಕತ್ತಲಲ್ಲಿ ಚಿತ್ರಿಸಬೇಕಾದರೆ ಕತ್ತಲೆ ಮೋಡ್ ಬಳಸಿ.

ಒಟ್ಟಾರೆ ನೀವು ಯಾವ ಪರಿಸ್ಥಿತಿಯಲ್ಲಿ ಚಿತ್ರಣ ಮಾಡಬೇಕಾಗಿರುತ್ತದೆಯೋ ಅಂತಹ ಮೋಡ್ ಗಳನ್ನು ಬಳಸಿ. ಪ್ರೊಫೆಷನಲ್ ಮೋಡ್ ನ ಬಳಕೆಯನ್ನು ತರಬೇತಿಗಳಲ್ಲಿ ಕಲಿಸುತ್ತೇವೆ.

ಛಾಯಾಗ್ರಹಣ ಮಾಡುವಾಗ ಕೆಲವು ಎಚ್ಚರಿಕೆಗಳು

ಛಾಯಾಗ್ರಹಣ ಮಾಡುವಾಗ ಕೆಲವು ಎಚ್ಚರಿಕೆಗಳು

ಕ್ಯಾಮೆರಾಗಳಿಗೆ ನೀರು ತಗುಲಬಾರದು. ಮಳೆಯಲ್ಲಿ ಛಾಯಾಗ್ರಹಣ ಮಾಡುವುದು ಬೇಡ. ನೀರು ತಗುಲಿದಲ್ಲಿ ಫಂಗಸ್ ಉಂಟಾಗಿ ನಿಮ್ಮ ಕ್ಯಾಮೆರಾ ಹಾಳಾಗುತ್ತದೆ.

ಲೆನ್ಸ್ ಗಳನ್ನು ಬದಲಿಸುವಾಗ ದೂಳು ಹೋಗದಂತೆ ನೋಡಿಕೊಳ್ಳಿ. ಲೆನ್ಸ್ ಗಳು ಸ್ಕ್ರಾಚ್ ಆಗದಂತೆ ನೋಡಿಕೊಳ್ಳಿ. ಸ್ಕ್ರಾಚ್ ಆದರೆ ನಿಮ್ಮ ಚಿತ್ರಗಳ ಗುಣಮಟ್ಟ ಕಡಿಮೆಯಾಗುತ್ತದೆ. ಇದನ್ನು ತಡೆಯಲು ಫಿಲ್ಟರ್ ಗಳನ್ನು ಬಳಸಬಹುದು.

ಸಲಹೆ-ಸೂಚನೆ ಬೇಕಾದಲ್ಲಿ ಸಂಪರ್ಕಿಸಿ

ಸಲಹೆ-ಸೂಚನೆ ಬೇಕಾದಲ್ಲಿ ಸಂಪರ್ಕಿಸಿ

ನಾವು ಇಷ್ಟರಲ್ಲೇ ಉಚಿತವಾದ ಛಾಯಾಗ್ರಹಣ ತರಬೇತಿ ಹಾಗೂ ಕಾರ್ಯಾಗಾರವನ್ನು ನಡೆಸುತ್ತೇವೆ.

ಕ್ಯಾಮೆರಾ ಹಿಡಿದುಕೊಳ್ಳುವ ರೀತಿಯಿಂದ ಹಿಡಿಸು ಬಳಸುವವರೆಗೆ ಎಲ್ಲ ರೀತಿಯ ಪರಿಚಯ ಮಾಡಿಕೊಡುತ್ತೇವೆ.

ಲಾಲ್ ಬಾಗ್ ಮತ್ತು ಕಬ್ಬನ್ ಪಾರ್ಕ್ ನಲ್ಲಿ ಫೋಟೋ ನಡಿಗೆಯನ್ನು ಆಯೋಜಿಸುತ್ತೇವೆ. ನಿಮ್ಮ ಬಳಿ ಕ್ಯಾಮೆರಾ ಇರಬೇಕೆಂಬ ಅವಶ್ಯಕತೆ ಇಲ್ಲ.

ಪರಿಸರದ ಬಗ್ಗೆ ಕಾಳಜಿ ಅಥವಾ ಛಾಯಾಗ್ರಹಣದ ಬಗ್ಗೆ ಆಸಕ್ತಿ ಇರುವವರೆಲ್ಲರೂ ಪಾಲ್ಗೊಳ್ಳಬಹುದು.

ನೋಂದಣಿ ಮಾಡಿಕೊಳ್ಳಲು ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ- 9036862030 .ಈ ಮೇಲ್ ವಿಳಾಸ - gagan.ms36@gmail.com

ಹೊಸದಾಗಿ ಕ್ಯಾಮೆರಾ ಖರೀದಿಸಬೇಕು ಎಂದುಕೊಂಡವರು ಸಲಹೆ ಬೇಕಾದಲ್ಲಿ ನಮ್ಮನ್ನು ಸಂಪರ್ಕಿಸಬಹುದು.

English summary
Here is a complete guide to camera selection and photography by Oneindia columnist Gagan Preeth.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more