• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಕ್ಕು ನಕ್ಕು ಹಗುರಾಗೋದಕ್ಕೆ ಒಂದೇ ಭಾಷೆ, ಅದೇ ಕಾರ್ಟೂನು!

|

ಹೋದ ವಾರ ಕಛೇರಿಯ ಕೆಲಸದಿಂದ ಬಾಲಕ್ಕೆ ಬೆಂಕಿ ಹತ್ತಿಕೊಂಡಿತ್ತು. ಈ ವರ್ಷ ಮುಗಿಯುತ್ತದೆ ಎಂದು ಆ ಕೆಲಸ, ಅದು ಇದು ಏನೆಲ್ಲಾ ಒಂದೇ ಸರ್ತಿ ತಲೆ ಮೇಲೆ ಹಾಕಿದಾಗ ಸ್ವಲ್ಪ ಸುಧಾರಿಸಿಕೊಳ್ಳಲು ನಾನು ಮೊರೆಹೊಕ್ಕಿದ್ದು ಟಾಮ್ ಅಂಡ್ ಜೆರಿ ಎಂಬ ಕಾರ್ಟೂನನ್ನ. ಅರ್ಧ ಘಂಟೆ ನೆಮ್ಮದಿಯಾಗಿ ನಕ್ಕು, ಮತ್ತೆ ಟಕಟಕ ಎಂದು ಕೀಬೋರ್ಡ್ ಕುಟ್ಟಿದಾಗ ಎಷ್ಟು ಆರಾಮಾಗಿತ್ತೆಂದರೆ ಅದಕ್ಕಿಂತ ಸಹಜ ಧ್ಯಾನ ಮತ್ತೊಂದಿಲ್ಲ ಅನ್ನಿಸುತ್ತಿತ್ತು.

ಒಂದೆರಡು ವರ್ಷದ ಹಿಂದೆ ಸ್ನಾತಕೋತ್ತರ ಪದವಿಯ ಥೀಸಿಸ್ ಒತ್ತಡದಲ್ಲಿದ್ದಾಗ ತಲೆ ಕೆಟ್ಟು ಸುಮ್ಮನೆ ಕೂತು 3 ಘಂಟೆ ಕಾರ್ಟೂನ್ ನೋಡಿ ಆಮೇಲೆ ಥೀಸಿಸ್ ಬರೆಯೋದಕ್ಕೆ ಶುರುಮಾಡಿದ್ದೆ. ಪಕ್ಕದ ರೂಮಿನಲ್ಲಿ ಕೂತಿದ್ದ ಕಝಾಕಿನ ಹುಡುಗಿಯೂ ಕಾರ್ಟೂನನ್ನ ಹಾಕಿಕೊಂಡು ಕೂತಿದ್ದಳು. ಹಾಲಿನಲ್ಲಿ ಎಂದಿನಂತೆ ಕಾರ್ಟೂನ್ ಸಮಾರಾಧನೆ ಮನೆಯೊಡತಿಯ ಮಗಳು ಮಾಡುತ್ತಿದ್ದಳು.

ಅಂದಿನ ಕಾಲದ ದೂರವಾಣಿ ಸಂಭಾಷಣೆಗಳಲ್ಲಿ ಏನು ಮಜವಿತ್ತು!

ನಾವು ಮೂವರು ಮಾತಾಡುವ ಭಾಷೆಗೆ ಒಂದು ಚೂರೂ ಸಂಬಂಧವಿರುತ್ತಿರಲ್ಲಿಲ್ಲ. ಆದರೂ ನಕ್ಕು ನಕ್ಕು ಹಗುರಾಗೋದಕ್ಕೆ ಅದೊಂದೇ ಬೇಕಾಗಿತ್ತು. ಒಂದೇ ಭಾಷೆ ಬರದಿದ್ದ ಮೂವರನ್ನ ನಕ್ಕು ನಲಿಸಿದ್ದು ಇದೊಂದೆ. ಜೀವನದ ಯಾವುದೋ ದುಃಖದ ಸನ್ನಿವೇಶವನ್ನ ಮರೆಯೋದಕ್ಕೆ ನಗೋದಕ್ಕೆ ಇರುವ ಏಕೈಕ ಮಾರ್ಗ ನನ್ನ ಪ್ರಕಾರ ಕಾರ್ಟೂನ್ ಒಂದೇ.

ಮಿಕಿ ಮೌಸ್

ಮಿಕಿ ಮೌಸ್

ಇದನ್ನೇ ಯೋಚಿಸುತ್ತಿದ್ದಾಗ ಅಚಾನಕ್ಕಾಗಿ ಯಾರದೋ ಮಗಳ ಹುಟ್ಟಿದ ಹಬ್ಬಕ್ಕೆ ಮಿಕಿ ಮೌಸಿನ ಹಾಗೆ ಕೇಕ್ ಮಾಡಿಸುವ ಉದ್ದೇಶ ಇತ್ತು ಎಂದು ಹೇಳುತ್ತಿದ್ದರು. ಆಕೆ ತಾನು ಚಿಕ್ಕವಳಿದ್ದಾಗ ತನ್ನ ಹುಟ್ಟಿದ ಹಬ್ಬಕ್ಕೂ ಹಾಗೆ ಕೇಕ್ ಮಾಡಿಸಿಕೊಂಡಿದ್ದಳು ಎಂಬ ವಿಷಯವನ್ನ ತಿಳಿಸುತ್ತಿದ್ದಳು. ಈ ಮಿಕಿ ಮೌಸ್ ನಮ್ಮಜ್ಜಿಗಿಂತ ಹಿರಿಯದು ಎಂದು ಗೊತ್ತಾದಾಗ ಒಂದು ನಿಮಿಷ ಅವಕ್ಕಾದೆ. ಎಷ್ಟೋ ಪೀಳಿಗೆಗಳನ್ನ ಹೀಗೆ ನಗುತ್ತಾ ಸಾಕುತ್ತಿರುವ ಜೀವವೇ ಇಲ್ಲದ ಈ ಕಾರ್ಟೂನುಗಳನ್ನ ಶುರು ಮಾಡಿದ್ದು ಯಾರು ಎಂಬ ಪ್ರಶ್ನೆ ಬಂದೇ ಬಂದಿರುತ್ತದೆ.

ಕಾರ್ಟೂನುಗಳನ್ನ ಶುರು ಮಾಡಿದ್ದು ಯಾರು?

ಕಾರ್ಟೂನುಗಳನ್ನ ಶುರು ಮಾಡಿದ್ದು ಯಾರು?

ವಾಲ್ಟ್ ಡಿಸ್ನಿ ಎಂಬ ಮಾಂತ್ರಿಕ ನಮ್ಮ, ನಮ್ಮ ಅಪ್ಪ ಅಮ್ಮನ ಬಾಲ್ಯವನ್ನ ಇಷ್ಟು ಚೆಂದಗಾಣಿಸಿದ್ದ ಎಂದು ತಿಳಿದು ಒಂದು ಥರ ಬಹಳ ಖುಷಿಯಾಯ್ತು.

ಈ ವಾಲ್ಟ್ ಡಿಸ್ನಿ ಎಂಬುವವನು ಅಮೆರಿಕಾದ ಮಿಲಿಟರಿಗೆ ಸೇರುವ ಯೋಚನೆ ಮಾಡಿದ್ದನಂತೆ. ಜರ್ಮನ್ನರ ವಿರುದ್ಧ ಹೋರಾಡಲು, ಬಹಳ ಚಿಕ್ಕವನಿದ್ದ ಕಾರಣ ಸೇರಲು ಸಾಧ್ಯವಾಗಲಿಲ್ಲವಂತೆ. ಹಂಗೂ ಆತನ ಹುಟ್ಟಿದ ದಿನಾಂಕವನ್ನ ತಿದ್ದಿ ರೆಡ್ ಕ್ರಾಸಿನ ಆಂಬುಲೆನ್ಸ್ ಚಾಲಕನಾಗಿ ಸೇರಿಕೊಂಡು ಫ್ರಾನ್ಸಿನಲ್ಲಿ ಕೆಲಸ ಮಾಡುತ್ತಿದ್ದ. ಆ ಆಂಬುಲೆನ್ಸ್ಗಳ ಮೇಲೆ ಅವನ ಕಾರ್ಟೂನಿನ ಸುಮಾರು ಕಲಾ ಪ್ರದರ್ಶನಗಳು ಆಗಿದ್ದವು.

ನ್ಯೂ ಮೆನ್ಸ್ ಲಾಫೋ ಗ್ರಾಮ್ಸ್

ನ್ಯೂ ಮೆನ್ಸ್ ಲಾಫೋ ಗ್ರಾಮ್ಸ್

ವಾಪಸ್ಸು ಬಂದು ಕಲೆಯೇ ಜೀವನ ಎಂದು ಒಂದು ಸ್ಟುಡಿಯೋಗೆ ಕೆಲಸಕ್ಕೆ ಸೇರಿಕೊಂಡ. ಅದೂ ದುಡ್ಡಿಲ್ಲದೆ ಮುಚ್ಚಿದ ನಂತರ ಅವನದ್ದೆ ಸ್ಟುಡಿಯೋ ಶುರು ಮಾಡಿದ. ನ್ಯೂ ಮೆನ್ಸ್ ಲಾಫೋ ಗ್ರಾಮ್ಸ್ ಅವನ ಕಂಪೆನಿಯ ಮೊದಲ ಕಾರ್ಟೂನ್. ನಂತರ ಬಂದದ್ದೆ ಅಲೈಸ್ ಇನ್ ವಂಡರ್ಲ್ಯಾಂಡ್. ಮುಂಚೆ ನ್ಯೂ ಯಾರ್ಕಿಲ್ಲಿದ್ದ ಕಾರ್ಟೂನಿನ ಪ್ರಪಂಚವನ್ನ ಲಾಸ್ ಏಂಜಲೀಸ್ ಗೆ ಶಿಫ್ಟ್ ಮಾಡಿದ್ದು ಡಿಸ್ನಿಯೇ. ಆಮೇಲೆ ಶುರುವಾದ ಓಸ್ವಾಲ್ಡ್ ಸೀರೀಸ್ ಒಂದಷ್ಟು ಪ್ರಾಮುಖ್ಯತೆಯನ್ನ ತಂದುಕೊಟ್ಟಿತ್ತು. ಆದರೂ ಓಸ್ವಾಲ್ಡಿನ ಬದಲಾಗಿ ಹೊಸ ಕಾರ್ಟೂನನ್ನ ತರಬೇಕೆಂದಾಗ ಬಂದ್ದದ್ದೇ ಮಿಕ್ಕಿ ಮೌಸ್. ಅದೂ 1928ರಲ್ಲಿ ಪ್ಲೇನ್ ಕ್ರೇಝಿ ಎಂಬ ಎಪಿಸೋಡಿನಲ್ಲಿ.

ಕೊಲಂಬಿಯಾ ಪಿಕ್ಚರ್ರ್ಸಿನವರು ಸಹಾಯ

ಕೊಲಂಬಿಯಾ ಪಿಕ್ಚರ್ರ್ಸಿನವರು ಸಹಾಯ

ನಂತರ ಬಂದ ಜಾಝ್ ಸಿಂಗರಿನಲ್ಲಿ ಸೌಂಡ್ ಹಾಕಿ ಮೊದಲ ಸಂಗೀತಮಯ ಕಾರ್ಟೂನ್ ಮಾಡಿದರು. ಕೊಲಂಬಿಯಾ ಪಿಕ್ಚರ್ರ್ಸಿನವರು ಸಹಾಯ ಮಾಡಿದ್ದ ಕಾರಣ ಡಿಸ್ನಿಯ ಮಿಕ್ಕಿ ಮೌಸ್ ಬಹು ಜನಪ್ರಿಯವಾಯಿತು. ಕೆಂಪು ಚಡ್ಡಿ, ಹಳದಿ ಚಪ್ಪಲಿ, ಬಿಳಿ ಗ್ಲೌಸಿನಲ್ಲಿ ಕಂಗೋಳಿಸಿ ನಮ್ಮನ್ನೆಲ್ಲ ನಗಿಸುವ ಈ ಇಲಿಗೆ ಒಂದು ಸಂಗಾತಿ ಮಿನ್ನಿ ಮೌಸ್. ಈ ಇಲಿಗೊಂದು ಸಾಕಿದ ನಾಯಿ ಪ್ಲೂಟೋ. ಅದರ ಗೆಳೆಯರು ಡೊನಾಲ್ಡ್ ಡಕ್ ಮತ್ತು ಗೂಫಿ. ಮನುಷ್ಯರ ಹಾಗೆ ಆಡುವ ಈ ಕಾರ್ಟೂನುಗಳು ಸಣ್ಣಗೆ ಅಲ್ಲಲ್ಲಿ ಕ್ರಾಂತಿಗಳನ್ನ ಸಹ ಮಾಡಿದ್ದವು. ಆಗಾಗ ರಾಜಕೀಯ ವಿಡಂಬನೆಗಳನ್ನ ಸಹ ತಣ್ಣಗೆ ಮಾಡುತ್ತಿದ್ದರು. ಇವೆಲ್ಲಾ ಒಂದು ಥರ ತಣ್ಣಗೆ ಚಿಕ್ಕ ಮಕ್ಕಳ, ದೊಡ್ಡವರ ಮೆದುಳಿಗೆ ಹೊಸ ಆಲೋಚನೆಯನ್ನ ಕೊಟ್ಟದ್ದು ಅಗಾಧವಾಗಿ ನಗಿಸಿದ್ದು ಈ ಕಾರ್ಟೂನುಗಳೇ.

ಕಾಡುವ ಕಾಪಾಡುವ ಮುದ್ದಿಸುವ ಮುದ್ದಿಸಿಕೊಳ್ಳುವ 'ಕಾಳ'! ಐ ಲವ್ ಯೂ!

ವಾಲ್ಟ್ ಡಿಸ್ನಿಯ ಹುಟ್ಟುಹಬ್ಬ

ವಾಲ್ಟ್ ಡಿಸ್ನಿಯ ಹುಟ್ಟುಹಬ್ಬ

ಇವೆಲ್ಲವನ್ನ ಬರೆಯೋದಕ್ಕೆ ಕಾರಣ 5ನೇ ಡಿಸೆಂಬರ್ ವಾಲ್ಟ್ ಡಿಸ್ನಿಯ ಹುಟ್ಟುಹಬ್ಬ. ನಮ್ಮ ಜೀವನವನ್ನ ಸುಗಮಗೊಳಿಸಿದ್ದಕ್ಕೆ, ನಗಿಸಿದ್ದಕ್ಕೆ ಅಜ್ಜನ ವಯಸ್ಸಿನ ಕಾರ್ಟೂನನ್ನ ನಮ್ಮ ಮೊಮ್ಮಕ್ಕಳಿಗೂ ತಲುಪುವ ಹಾಗೆ ಮಾಡಿದ್ದಕ್ಕೆ ಹ್ಯಾಪಿ ಹುಟ್ಟು ಹಬ್ಬ ಬಾಸ್!

ರೋಡಿನ ಜೀವಂತಿಕೆಯ ಸಂಕೇತವಾಗಿದ್ದ ಟೆಲಿಫೋನ್ ಬೂತ್ ಕಾಣೆಯಾಗಿವೆ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Walter Elias Disney was an American entrepreneur, animator, voice actor and film producer. A pioneer of the American animation industry. His cartoons have made us laugh for several generations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more