ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನೆಗೆಲಸ ಹೆಣ್ಮಕ್ಕಳೇ ಯಾಕೆ ಮಾಡ್ಬೇಕು? ಸಮಾನತೆ ಮೈ ಫುಟ್!

By ಜಯನಗರದ ಹುಡುಗಿ
|
Google Oneindia Kannada News

ಒಂದು ವಾರದ ಹಿಂದೆ ಫೇಸ್ಬುಕ್ಕಿನಲ್ಲಿ ಬಿಸಿ ಬಿಸಿ ಚರ್ಚೆ. ಒಳ್ಳೆ ಬರಹಗಾರ್ತಿಯಾಗಬೇಕಾದರೆ ಏನೇನಿರಬೇಕು ಎಂದು?

ಪ್ರತಿಭೆ, ಭಾಷೆ, ಸಂಪಾದಕರ ಪರಿಚಯ ಇವೆಲ್ಲದರ ಜೊತೆ ಮನೆಗೆ ಮನೆ ಕೆಲಸದವಳು ನಿಯಮಿತವಾಗಿ ಬರಬೇಕು ಎಂಬುದು ಬಹು ಮುಖ್ಯ ಕಾರಣ ಎಂದು ಹೇಳಿದ್ದರು. ನನ್ನ ಪ್ರಿಯ ಲೇಖಕಿ ಹೀಗೆ ಬರೆದಿದ್ದರು. ನನಗೆ ಆಗಾಗ ಈ ಪ್ರಶ್ನೆ ಮೂಡುತ್ತಿರುತ್ತದೆ. ಈ ಸ್ಟೇಟಸ್ ಲೇಖಕಿಯಿಂದ ಬಂತೇ ಹೊರತು ಲೇಖಕನಿಂದ ಅಲ್ಲ. ಇಲ್ಲೂ ಲಿಂಗ ಭೇದವಿದೆ ನೋಡಿ.

ಅಡುಗೆಯೆಂಬ ಕಲೆಯನ್ನು ಕಲಿಯುವ ಅವಶ್ಯಕತೆ ಇದೆಯಾ?ಅಡುಗೆಯೆಂಬ ಕಲೆಯನ್ನು ಕಲಿಯುವ ಅವಶ್ಯಕತೆ ಇದೆಯಾ?

ಪ್ರಾಯಶಃ ನಮ್ಮ ಸಮಾಜದಲ್ಲಿ ಒಂದೇ ಏನೋ ಮನೆಕೆಲಸ, ಅಡಿಗೆ ಕೆಲಸ ಎಲ್ಲವನ್ನೂ ಬೇಕೋ ಬೇಡವೋ ಅವಳ ತಲೆಗೆ ಗಂಟು ಹಾಕಿ ಮಜಾ ನೋಡುವ ಪ್ರಕ್ರಿಯೆ. ಕೆಲವೊಮ್ಮೆ ಗಟ್ಟಿ ಧ್ವನಿಯಲ್ಲಿ ಮಾತಾಡಿದರೆ ಹೆಣ್ಣಿಗಿರುವ ಲಕ್ಷಣಗಳು ಇವು ಎಂದು ಹೆಣ್ಣೇ ಅವಳನ್ನು ಕೆಲಸ ಮಾಡಲು ಪ್ರೇರೇಪಿಸುತ್ತಾಳೆ ನೋಡಿ.

Why only women should work as domestic worker?

ನಾ ಚಿಕ್ಕವಳಿಂದ ಕೇಳಿಕೊಂಡು ಬಂದ ಪ್ರಶ್ನೆಗೆ ಈಗಲೂ ಉತ್ತರ ಸಿಕ್ಕಿಲ್ಲ! ಎಲ್ಲರೂ ತಿನ್ನುತ್ತಾರೆ ಎಂದರೇ ಎಲ್ಲರಿಗೂ ಅಡಿಗೆ ಯಾಕೆ ಮಾಡೋದು ಕಲಿಸಲ್ಲ? ಅದು ಒಂದು ಲಿಂಗಕ್ಕೆ ಮಾತ್ರ ಯಾಕೆ ಸೀಮಿತ ಮಾಡುತ್ತಾರೆ? ಎಂದು. ಪ್ರಾಯಶಃ ಯಾವ ಶಾಸ್ತ್ರ, ದೇವರಿಗೂ ಈ ಉತ್ತರ ಗೊತ್ತಿಲ್ಲವೇನೋ!

ಆದರೂ ಈ ಮನೆ ಕೆಲಸದವರ ಲೋಕ ಒಂದು ಬಹಳ ಆಸಕ್ತಿದಾಯಕ ಗುಂಪು. ಒಮ್ಮೊಮ್ಮೆ ನಗು, ಅಳು, ಕೋಪ ಇವೆಲ್ಲದರ ಅನುಭವ ನಮಗಾಗಿದೆ. ಮೈ ಬಗ್ಗಿಸಿ ಕೆಲಸ ಮಾಡದಿರೋರ ಮನೆಗೆ ಕೆಲಸದವರು ಬರುವುದು ಅನ್ನೋ ಮಾತಿಂದ ಹಿಡಿದು, ಅವಳಿಲ್ಲದಿದ್ದರೆ ಮನೆ ನಡೆಯುವುದಿಲ್ಲ ಎಂಬಷ್ಟು ಮಟ್ಟಿಗೆ ಅವರೆಲ್ಲಾ ನಮ್ಮನ್ನ ಆವರಿಸಿರುತ್ತಾರೆ.

ಮಹಿಳಾ ದಿನಾಚರಣೆ ವಿಶೇಷ ಲೇಖನ: ವರ್ಷಕ್ಕೊಮ್ಮೆ ಅವಳ ದಿವಸ!ಮಹಿಳಾ ದಿನಾಚರಣೆ ವಿಶೇಷ ಲೇಖನ: ವರ್ಷಕ್ಕೊಮ್ಮೆ ಅವಳ ದಿವಸ!

ಕೆಲವೊಮ್ಮೆ ಅವರ ಪ್ರಪಂಚದಲ್ಲಿ ಗಾಢ ಕತ್ತಲಿರುತ್ತದೆ. ಬಂದ ಕಡೆಯೆಲ್ಲಾ ನಕ್ಕೊಂಡು ಬರುವ ಅವರ ಮನಸ್ಸು ನಿಜಕ್ಕೂ ಆಶ್ಚರ್ಯಚಕಿತವಾದದ್ದು. ಒಮ್ಮೊಮ್ಮೆ ಅವರ ಕಥೆ ಕೇಳಿ ನನಗೊಂದಷ್ಟು ಆಘಾತ ಆದ್ದದ್ದು ಸುಳ್ಳಲ್ಲ.

Why only women should work as domestic worker?

ಸುಮಾರು ಜನ ಅವರ ಮನೆ ಮಕ್ಕಳನ್ನು ಸರಿದೂಗಿಸುವ ಸಾರಥಿಗಳಾಗಿರುತ್ತಾರೆ. ಕುಡಿದು ಬರುವ ಗಂಡನ್ನನ್ನ ವಾಚಾಮಗೋಚರ ಬೈದರೂ ಬೇರೆಯವರು ಅವರ ಬಗ್ಗೆ ಮಾತಾಡೋ ಹಾಗೆ ಮಾಡುವುದಿಲ್ಲ. ಮತ್ತೆ ಅವರ ಮಗಳನ್ನು ಅಂತಹವನಿಗೇ ಮದುವೆ ಮಾಡಿ ಕೊಡುವ ಗುಣದವರೆಂದರೇ ತಪ್ಪಾಗುವುದಿಲ್ಲ. ಓದಿಸೋದಿಲ್ಲವಾ ಎಂದು ಕೇಳಿದರೆ "ಅಯ್ಯೋ ಓದೇನು ಮಾಡಬೇಕು" ಎಂದು ಮರುಪ್ರಶ್ನೆ ಹಾಕುವವರು. ಹಾಗೇ ನಿಮ್ಮಗಳ ಥರ ಓದಿದ್ರೆ ನಮಗೆ ಈ ಪರಿಸ್ಥಿತಿ ಬರುತ್ತಿರಲ್ಲಿಲ್ಲ ನೋಡಿ ಎಂದು ಒಂದಷ್ಟು ಕಣ್ಣೀರು ಹಾಕಿ ನಡೆಯುವವರು.

ನಮ್ಮ ಮನೆಯಲ್ಲಿ ಕೆಲಸದವರು ಅಥವಾ ಹೌಸ್ ಮೇಡ್ ತುಂಬಾ ತಡವಾಗಿಯೇ ಬಂದ್ದದ್ದು. ತಾತ ಮನೆಯಲ್ಲಿ ಅವರವರ ಕೆಲಸವನ್ನ ಅವರೇ ಮಾಡಿಕೊಂಡರೆ ಇದೆಲ್ಲಾ ಅವಶ್ಯಕತೆ ಇಲ್ಲ ಎಂದು ಹೇಳಿ, ನಮ್ಮ ಕೆಲಸವನ್ನ ನಮಗೇ ಮಾಡಿಸುತ್ತಿದ್ದರು. ಈಗಲೂ ನಮ್ಮ ಮನೆಯ ಕಡೆ ಸುಮಾರು ಜನರು ಕೆಲಸದವರನ್ನ ಇಟ್ಟುಕೊಳ್ಳುವುದಿಲ್ಲ. ಇಲ್ಲಿ ಕೆಲಸದವರು ಎಂಬ ನಾಮಸೂಚಕವನ್ನ ಬಳಸಲು ಕಾರಣ ಎಲ್ಲರ ಮನೆಯಲ್ಲಿಯೂ ಹಾಗೆಯೇ ಕರೆಯುವುದು ಎಂಬರ್ಥವೇ ಹೊರತು ಬೇರೆ ಉದ್ದೇಶ ಅಲ್ಲ.

ಒಮ್ಮೊಮ್ಮೆ ಕನ್ನಡ ಓದೋಕೆ ಬರೆಯೋದಕ್ಕೆ ಬರೋಲ್ಲ, ಅಂಕಿಗಳು ಗೊತ್ತಾಗಲ್ಲ, ಹಿಂಗೆ ಏನೇನೋ ಕಷ್ಟಗಳು. ಮಕ್ಕಳನ್ನು ಆ ಬಡವಾಣೆಯ ಪ್ರತಿಷ್ಠಿತ ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸಿರುತ್ತಾರೆ. ಅಷ್ಟೊಂದು ಫೀಸ್ ಕಟ್ಟೋದು ಹೇಗೆ ಎಂದು ಯೋಚಿಸಿದರೆ "ಅಯ್ಯೋ ಅಕ್ಕ ಆರ್ ಟಿ ಐ ಅಯ್ತ್ಯಲ್ಲ" ಎಂದು ನಕ್ಕು ಸುಮ್ಮನಾಗುತ್ತಾರೆ. ಸರ್ಕಾರ ಜಾರಿ ಮಾಡುವ ಎಲ್ಲಾ ಬಡ್ಜೆಟ್ ಯೋಜನೆ ಇಲ್ಲಿ ಸಾಕಾರಗೊಳ್ಳುತ್ತದೆ ನೋಡಿ. ಹೊಸ ಹೊಸ ಕಾರ್ಯಕ್ರಮಗಳು ಇವರಿಗೇ ಗೊತ್ತು.

Why only women should work as domestic worker?

ಇನ್ನು ಇನ್ನೆಲ್ಲೋ ನಡೆಯುವ ಚೀಟಿ, ಗೋಲ್ಡ್ ಚೀಟಿ, ಮೀಟರ್ ಬಡ್ಡಿ ದಂಧೆ ಇವೆಲ್ಲ ಅವರ ಬಾಯಲ್ಲಿ ಪಕ್ಕಾ. ದುಡ್ಡು ಇದ್ದಾಗ ದಪ್ಪ ಮಾಂಗಲ್ಯ ಸರ, 4 ಜೊತೆ ಚಿನ್ನದ ಬಳೆ ಹಾಕಿಕೊಂಡು ಬರುವ ಇವರು ಇಲ್ಲದಿದ್ದಾಗ ಅಷ್ಟೆ ನಿರ್ಭಾವುಕತೆಯಿಂದ ಎಲ್ಲವನ್ನು ಮಾರುತ್ತಾರೆ. "ಜೀವನಾನೆ ಸಾಸ್ವತ ಅಲ್ಲ, ಇದೆಲ್ಲ ಏನ್ ಬಿಡ್ರಮ್ಮ" ಎಂದು ದೊಡ್ಡ ದೊಡ್ಡ ಸಿದ್ಧಾಂತ ಹೊಡೆಯುವವರು ನೋಡಿ.

ಬಡಾವಣೆಯ ಬಾನುಲಿ ಕೇಂದ್ರ ಒಮ್ಮೊಮ್ಮೆ ಇವರಾಗಿರುತ್ತಾರೆ. ಅಲ್ಲಿ ಹೊಸ ಮನೆ ಬಾಡಿಗೆ ಇದೆ, ಇವರ ಮನೆಯಲ್ಲಿ ಮದುವೆ, ಇವರ ಮನೆಯಲ್ಲಿ ಸೂತಕ, ಇವರ ಮಗಳು ಎದ್ದೇಳೋದೆ ಇಲ್ಲ, ಮಗ ನಾಲಾಯಕ್... ಇವೆಲ್ಲ ವಿಷಯ ಬೇಕೋ ಬೇಡವೋ ಮನೆಯಲ್ಲಿ ಎಲ್ಲರೂ ಕೇಳಿಸಿಕೊಳ್ಳಬೇಕು. ಜಾಸ್ತಿ ಮಾತಾಡಿದರೆ "ಇ ಸಾಫ್ಟೇರ್ ನೋರು ಏನ್ ಹೇಳೋಲ್ಲ, ನಿಮ್ಗಳ ಮನೇಲೆ ಎಲ್ಲ ಅನ್ನಿಸ್ಕೋಬೇಕು" ಎಂದು ಸಾಫ್ಟ್ ಜನರನ್ನ ಹೊಗಳಿ ಹೊರಡುತ್ತಾರೆ.

ನೋಟಿಸೇ ಇಲ್ಲದೆ ಕೆಲಸಕ್ಕೆ ಬರುವುದಿಲ್ಲ ಎಂಬ ಸ್ವಾತಂತ್ರ್ಯ ಇವರೊಬ್ಬರಿಗೆ ಇರೋದು ನೋಡಿ. ನಾವೇನಾದ್ರೂ ಒಂದು ಮಾತು ಹೆಚ್ಚಿಗೆ ಆಡಿದರೆ "ನಾಳೆಯಿಂದ ಬರಲ್ಲ" ಎಂದು ಮಗಮ್ಮಾಗಿ ನುಡಿದು ಹೋಗುತ್ತಾರೆ. ಮನೆಯಲ್ಲಿ ತಲ್ಲಣ ಶುರುವಾಗುತ್ತೆ ನೋಡಿ. 5 ಜನ ಅವರ ಕೆಲಸ ಮಾಡಬೇಕು, ಎದ್ದು ರೂಢಿ ಇಲ್ಲದಿದ್ದರೆ ಅಧೋಗತಿ ಅವತ್ತು. ನನ್ನ ಪರಿಚಯದವರ ಮನೆಯ ಪುಟಾಣಿ ಸ್ಪೇನ್ ಮತ್ತು ನಾಗರಭಾವಿಯಲ್ಲಿ ಅಷ್ಟೆ ನಿಕಟತೆಯಿಂದ ಓಡಾಡಿಕೊಂಡಿರುವವಳು. ನಾಗರಭಾವಿಯಲ್ಲಿ ಕೆಲಸ ಸರಾಗವಾಗಿ ಮಂಗಮ್ಮನಿಂದ ಸಾಗುತ್ತದೆ. ಅಲ್ಲಿ ಸ್ಪೇನ್ ಗೆ ಹೋದಾಗ ಆಕೆ ಬಾಯಲ್ಲಿ ಬರುವ ಮಾತು "ನಾವ್ಯಾಕಮ್ಮ ಇಲ್ಲಿ ಬಂದು ಮಂಗಮ್ಮ ಆಗ್ತಿದೀವಿ?" ಅಂದರೆ ಅಲ್ಲಿ ಮನೆಕೆಲಸ ಮಾಡಿಕೊಳ್ಳಬೇಕು ಎಂದರ್ಥ.

ಒಂದಷ್ಟು ವರ್ಷ ಫಾರಿನ್ ಗೆ ಹೋಗಿ ಬನ್ನಿ, ನೀವ್ ಅದೇನ್ ಕಲೀತೀರೋ ಬಿಡ್ತೀರೋ ಗೊತ್ತಿಲ್ಲ. ಮನೆಕೆಲಸ ಮತ್ತು ಅಡಿಗೆ ಪಕ್ಕಾ ಬರುತ್ತದೆ. ಅಲ್ಲಿ ಅವರನ್ನ ಮೈಡ್ ಅನ್ನುವ ಹಾಗೆ ಸಹ ಇಲ್ಲ. ಹೌಸ್ ಕೀಪೀಂಗ್ ಅನ್ನಬೇಕು. ಬಾರ್ಸಿಲೋನಾದ ಮನೆ ಒಡತಿ ಹಾಗೆಯೇ ಹೇಳುವುದಕ್ಕೆ ತಿಳಿಸಿದ್ದು.

ಒಟ್ಟಿನಲ್ಲಿ ಮನೆಕೆಲಸ ಎಂಬುದು ಮನೆಯಲ್ಲಿ ಅಮ್ಮನೋ, ಅಜ್ಜಿಯೋ ಅತ್ತೆಯೋ ಮಾಡುತ್ತಾರೆ. (ಈಗಲೂ ಬಹಳಷ್ಟು ಮನೆಯಲ್ಲಿ) ಮಾಡಿ ಮಾಡಿ ಕೈಲಾಗದೇ ಇದ್ದಾಗ ಅವರ ಜಾಗದಲ್ಲಿ ಹೌಸ್ ಕೀಪಿಂಗ್ ಬರುತ್ತಾರೆ. ಅಲ್ಲೂ ಹೆಣ್ಣು ಮಕ್ಕಳೇ ಮಾಡಬೇಕು ನೋಡಿ. ಸಮಾನತೆ ಮೈ ಫುಟ್!

English summary
Why only women should work as domestic worker? Why men are not asked to cook like women at home? Don't men eat like women? Why there is disparity? Does anyone have answers to these questions asked by Jayanagarada Hudugi?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X