ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲರ ಅಡುಗೆಮನೆಯ ಸಾರ್ವಭೌಮ ಅವಗೂದೆ ಯಾನೆ ಟೊಮೆಟೊ ಹಣ್ಣು!

By ಜಯನಗರದ ಹುಡುಗಿ
|
Google Oneindia Kannada News

ನಾನು ಸ್ಪೇನಿಗೆ ಓದೋದಕ್ಕೆ ಹೋಗುತ್ತೇನೆಂದು ತಿಳಿಸಿದಾಗ ಗೆಳೆಯ ಗೆಳತಿಯರೆಲ್ಲ ಆಗ ತಾನೆ 'ಝಿಂದಗಿ ನಾ ಮಿಲೇಗಿ ದೊ ಬಾರ' ಸಿನೆಮಾವನ್ನ ನೋಡಿದ್ದರು. ಅಲ್ಲಿ ಲಾ ಟೋಮಾಟಿನಾ ಹಬ್ಬ ಆಗುತ್ತದೆ. ಅಲ್ಲಿ ಹೋಗಿ ಆ ಹಬ್ಬ ಆಚರಿಸು ಎಂದು ಹೇಳುತ್ತಿದ್ದರು. ಹೋಲಿ ಹಬ್ಬದ ಬಣ್ಣವೇ ನನಗಾಗುವುದಿಲ್ಲ ಇನ್ನೂ ತಿನ್ನೋ ವಸ್ತು ಬಗ್ಗೆ ಯಾಕೆ ಹೀಗೆಲ್ಲಾ ಅಸಹ್ಯ ಮಾಡೋದು ಎಂದು ನಾ ವಾದಿಸುತ್ತಿದ್ದೆ.

ನನ್ನಂತಹ ತರಕಾರಿಯನ್ನ ಸೋಕಿಸಿಯೂ ಸೋಕಿಸದವರಿಗೆ ಟೋಮ್ಯಾಟೋ ಅತೀ ಫೇವರೆಟ್ ತರಕಾರಿ ಅಲ್ಲಲ್ಲ ಹಣ್ಣು. ಸಾರಿಗೂ ಬೇಕು, ಗೊಜ್ಜಿಗೂ ಬೇಕು, ಅಥವಾ ಸುಮ್ಮನೆ ಹಶಿವಾದರೆ ಅದಕ್ಕೆ ಸಕ್ಕರೆ ಹಾಕಿಕೊಂಡು ತಿನ್ನುವಷ್ಟು ಗೆಳೆತನ. ಒಂದೊಮ್ಮೆ ಸಾರು ಮಾಡುವಾಗ ಬೇಳೆ ಜೊತೆ ಟೊಮ್ಯಾಟೋ ಇಡಬೇಕು ಕಣೆ ಎಂದು ತಂಗಿಗೆ ಹೇಳಿದ್ರೆ ನೀನು ಅಡಿಗೆ ಮನೆಗೆ ಬರುವ ಸಾಹಸವನ್ನೂ ಮಾಡಬಾರದೆಂದು ತಿಳಿಸಿದಳು. ಅವಳಿಗೆ ಅದು ಕಂಡರೆ ಆಗೋದಿಲ್ಲ. ಹಂಗೆಲ್ಲಾ ಇದ್ದಾಗ ಈ ಟೊಮ್ಯಾಟೋ ಎಲ್ಲಿಂದ ಬಂತು ಎಂದು ತಿಳಿಯೋದು ಬೇಡವೇ? ಮಡಿ ಮಾಡುವ, ಈರುಳ್ಳಿ, ಬೆಳ್ಳುಳ್ಳಿ ತಿನ್ನದ ಮನೆಯಲ್ಲಿಯೂ ಸಹ ಟೊಮ್ಯಾಟೋ ದಿನ ನಿತ್ಯ ಬಳಸುವ ತರಕಾರಿ ಅಲ್ಲಲ್ಲ ಹಣ್ಣು.

Tomato, the universal darling of all kitchens

ಇದು ಬ್ರಿಟೀಷರಿಂದ ಇಲ್ಲಿಗೆ 19ನೇ ಶತಮಾನದಲಿ ಬಂದದ್ದು. ಅವರಿಗೆ ಆಗುತ್ತಿದ್ದ ಹೋಂ ಸಿಕ್ ನೆಸ್ ಅನ್ನು ತಡೆಗಟ್ಟಲು ಊಟಿಯಲ್ಲಿ ಬೀಜಗಳನ್ನ ತಂದು ನೆಟ್ಟು ಬೆಳಸಿದರು. ಆದರೆ ನಮ್ಮವರಿಗೆ ಅದಷ್ಟು ಹಿಡಿಸಲ್ಲಿಲ್ಲ. ಹಿಸುಕಿದರೆ ಒಳಗಿನದು ಅಸಹ್ಯ ರೀತಿಯಲ್ಲಿ, ಅಸಹ್ಯ ರೂಪದಲ್ಲಿ ಪುಚಕ್ಕೆಂದು ಹೊರಬರುತ್ತಿದ್ದರಾದರಿಂದ ಅದಕ್ಕೆ ಅವಗೂದೆ ಹಣ್ಣು ಎಂಬ ಅಸಹ್ಯದ ಹೆಸರಿಂದಲೇ ಕರೆದರು. ಆದರೆ ಹಣ್ಣಿನ ಲಕ್ ಚೆನ್ನಾಗಿತ್ತು ನೋಡಿ, ಅನಕ್ಷರಸ್ಥರೆಲ್ಲರೂ ಅದನ್ನ ಟೊಮ್ಯಾಟೋ ಎಂಬ ಹೆಸರಿಂದಲೇ ಕರೆದರು.

ರಾಕ್ಷಸೀಯ ಖಾರದ ಗುಣವಿರುವ ಮೆಣಸಿನಕಾಯಿಯ ಪುರಾಣರಾಕ್ಷಸೀಯ ಖಾರದ ಗುಣವಿರುವ ಮೆಣಸಿನಕಾಯಿಯ ಪುರಾಣ

ನಮ್ಮ ಸಂಪ್ರದಾಯಸ್ಥ ಹಿಂದೂ ಸಮಾಜದಲ್ಲಿ ಇದು ನಿಷೇಧವಾಗಿತ್ತು. ಈಗ ಹಾಗಲ್ಲ. ಜಾತಿ ಭೇದವಿಲ್ಲದೆ, ಮೇಲು ಕೀಳು ಭೇದವಿಲ್ಲದೆ ನಮ್ಮ ಅಡುಗೆ ಮನೆಯನ್ನ ಆಳುತ್ತಿದೆ. ಪಶ್ಚಿಮದವರು ಕಾಯಿಯನ್ನ ಉಪಯೋಗಿಸುವುದಿಲ್ಲ. ಹಣ್ಣನ್ನು ಹಸಿಯಾಗಿ ಬಳಸುತ್ತಾರೆ. ಆದರೆ ನಾವು ಉಪ್ಪು, ಖಾರ, ಹುಳಿಗಳನ್ನ ಸುರಿದೆವು, ಕೊತ ಕೊತ ಕುದಿಸಿದೆವು. ಹುರಿದೆವು, ಚಟ್ನಿ ಮಾಡಿದೆವು, ಸಾರು ಮಾಡಿದೆವು, ತೊವ್ವೆ ಮಾಡಿದೆವು. ಕಾಯನ್ನ ಉಪಯೋಗಿಸ್ಕೊಂಡು ಕೋಸಂಬರಿ, ಪಳದ್ಯ, ಮೊಸರು ಬಜ್ಜಿಗಳನ್ನು ಮಾಡಿದೆವು. ಅವರು ಮಾಡುವ ಸೂಪ್ ತಯಾರಿಕೆಯ ಕ್ರಮವನ್ನ ಬಿಟ್ಟುಬಿಟ್ಟು ನಮ್ಮ ಸಂಪ್ರದಾಯದ ಸಾರಿನ ವಿಧಾನವನ್ನ ಅನುಸರಿಸಿ ಈ ನೀರನ್ನೇ ಅದೇ ಹೆಸರಿನಿಂದ ಕರೆದು ಕುಡಿದು ತೇಗಿಬಿಟ್ಟೆವು.

Tomato, the universal darling of all kitchens

ಈ ಹಣ್ಣು ದಕ್ಷಿಣ ಅಮೇರಿಕಾದ್ದೆ ಎಂದು ನಾವು ಸಾಬೀತು ಪಡಿಸಲು ಹೊರಟಾಗ ಇದರ ಬಗೆಗಿನ ಆಧಾರಗಳು ಮೆಕ್ಸಿಕೋ ದೇಶಕ್ಕೆ ಬೊಟ್ಟು ಮಾಡಿ ತೋರಿಸುತ್ತದೆ. ಇದರ ಹೆಸರೂ ಸಹ ಮೆಕ್ಸಿಕೋ ದೇಶದ ಭಾಷೆಯಾದ ನಹುಅಟ್ಲ್ ಪದ, - ಟೊಮೇಟ್ಸ್ ಇಂದ ಬಂದಿದೆ. ಮೊಟ್ಟ ಮೊದಲು ಯುರೋಪಿಗೆ ಹೋದದ್ದು ಮೆಕ್ಸಿಕೋದಿಂದ. ಕ್ರಿ. ಶ 1554 ವರ್ಷದಲ್ಲೇ ಇಟಲಿಯಲ್ಲಿ ಈ ಗಿಡದ ಚಿತ್ರ ಪ್ರಕಟವಾಯ್ತು. ಇದನ್ನ ಕೃಷಿಗೆ ಒಳಪಡಿಸಿದ ಪ್ರದೇಶವೂ ಮೆಕ್ಸಿಕೋನೇ ಇದ್ದಿರಬೇಕು.

ಅಡುಗೆಯೆಂಬ ಕಲೆಯನ್ನು ಕಲಿಯುವ ಅವಶ್ಯಕತೆ ಇದೆಯಾ?ಅಡುಗೆಯೆಂಬ ಕಲೆಯನ್ನು ಕಲಿಯುವ ಅವಶ್ಯಕತೆ ಇದೆಯಾ?

ಇದಕ್ಕೆ ಕಾಮಫಲ ಎಂದರು, ಬೀಜದಲ್ಲಿ ವಿಷವಿದೆ ಎಂದರು. ಇಷ್ಟೆಲ್ಲಾ ಆರೋಪಗಳನ್ನ ಹೊತ್ತು ಕೊಂಡಿದ್ದರೂ ಎಲ್ಲ ಆರೋಪಮುಕ್ತವಾಗಿ ನಮ್ಮ ನೆಲಕ್ಕೆ ಬಂದು ಕೂತಿತು, ಮೆಕ್ಸಿಕೋದಿಂದ. ಈಗ ಅದು ನಮ್ಮದೇ ಹಣ್ಣಾಗಿದೆ, ಸಾರಿಗೆ ಅದಿಲ್ಲದೇ ರುಚಿಯೇ ಇಲ್ಲ. ನಮ್ಮ ಹೊಟ್ಟೆಯ ಸುಮಾರು ಖಾಯಿಲೆಗಳು, ವಿಟಮಿನ್ ಗೆ ಇದೇ ಮದ್ದು. ಇನ್ನು ವಿಸ್ತೃತವಾಗಿ ಮುಂದಿನ ವಾರ ಬರೆಯುತ್ತೇನೆ, ಕಾಯುತ್ತೀರಲ್ವಾ?

English summary
How the Tomato fruit came to India? Why the vegetable, which has lot of health benefits, is so liked by everyone? Meghana Sudhindra writes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X