ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಲ್ಯದ ಆಟ, ಆ ಹುಡುಗಾಟ, ಇನ್ನು ಮಾಸಿಲ್ಲ!

ಬೆಂಗಳೂರಲ್ಲಿ ಇದ್ದುಗೊಂಡು ಬಾಲ್ಯ ಚೆನ್ನಾಗಿತ್ತು ಅಂತ ಹೇಳುವ ಉದ್ದೇಶ ಸಹ ಈ ಲೇಖನದ್ದು. ನಮ್ಮ ಮನೆಯವರು, ನಮ್ಮ ಬಾಲ್ಯ ನಮ್ಮನ್ನು ರೂಪಿಸುತ್ತದೆ. ನಮ್ಮ ಜನ ನಮ್ಮನ್ನ ಒಳ್ಳೆಯವರು ಕೆಟ್ಟವರು ಮಾಡುತ್ತಾರೆ.

By ಜಯನಗರದ ಹುಡುಗಿ
|
Google Oneindia Kannada News

ಇಂದು ನಾವು 15 ವರ್ಷ ಕೆಳಗೆ ಹೋಗೋಣ. ಜಯನಗರದ ಹುಡುಗಿ ಇನ್ನೂ ಗರಿಗರಿ ಶಾಲೆಯ ಸಮವಸ್ತ್ರ ಹಾಕಿಕೊಂಡು ಊರೆಲ್ಲ ಗಿರಿಗಿರಿ ತಿರುಗುತ್ತಿದ್ದ ಕಾಲ. ರಸ್ತೆಯೇ ನಮ್ಮ ಮೈದಾನ. ಅಲ್ಲಿ ನಮ್ಮ ಎಲ್ಲ ತರಲೆ, ತಕರಾರು ವಿಪರೀತ ಚೇಷ್ಟೆಗಳು ನಡೆಯುತ್ತಿದ್ದಿದ್ದು. ಶಾಲೆಯಿಂದ ಬಂದ ನಂತರ homework ಮಾಡಿ, ರಸ್ತೆಗಿಳಿದರೆ ಅಮ್ಮ ಕೂಗಿ, ಕರೆದಾಗಲೆ ನಮಗೆಲ್ಲ ಸಮಯದ ಪರಿವಾಗುತ್ತಿದ್ದದ್ದು.

ನಾವು 5 ಜನ ಗೆಳತಿಯರು, ಹೇಗೆ ಸ್ನೇಹಿತರಾದೆವು ನಮಗೆ ಗೊತ್ತಿಲ್ಲ. ರಾಗಿಗುಡ್ಡದ ಆಸು ಪಾಸಿನ 6 ರಸ್ತೆಗಳಲ್ಲೆ ನಮ್ಮೆಲರ ಮನೆ. ಹೇಗೋ ಭೇಟಿಯಾದ್ವಿ, ಆಮೇಲೆ ಆಟಕ್ಕೆ ಬಾರೆ ಅಂತ ಹೇಳಿ, ಆಟ ಆಡೋದಕ್ಕೆ ಶುರು ಮಾಡಿದ್ವಿ. ಈವಾಗಲೂ ನನಗೆ ನಾವು ಹೇಗೆ ಸ್ನೇಹಿತೆಯರಾದ್ವಿ ಅನ್ನೋ ಕಥೆ ನಮಗೆ ಗೊತ್ತೇ ಇಲ್ಲ. ನಮ್ಮ ಜೊತೆಗೆ ನಮ್ಮ ತಂಗಿ, ತಮ್ಮಂದಿರು ಸಹ ಸೇರಿಕೊಂಡ್ರು.

ದಿನಾ ಸಂಜೆ ಜಯನಗರದ ರಸ್ತೆ ಮೇಲೆ ನಮ್ಮ ಆಟ. ಈಗಿನ ಮಕ್ಕಳು ಅದನ್ನು ಊಹಿಸೋದಕ್ಕೂ ಸಾಧ್ಯ ಇಲ್ಲ. ನಾನು ಚಿಕ್ಕೋಳಾದಾಗ ನನ್ನಪ್ಪ, ಅಮ್ಮ, ಅಜ್ಜಿ, ಚಿಕ್ಕಪ್ಪ ಅವರ ಚಿಕ್ಕಂದಿನ ಕಥೆಗಳೆಲ್ಲ ಹೇಳೋವಾಗ, ಅರೆ ನಾನು ದೊಡ್ಡೋಳಾದಾಗ ಈ ಥರ ಎಲ್ಲ scope ತಗೊಳ್ಳಲ್ಲ, ಬಾಲ್ಯದ ಕಥೆ ನಾನು ಮಾತ್ರ ಹೇಳಲ್ಲ, ಅದೆಲ್ಲ ಏನು ಮಹಾ ಅಂತ ಬಡಬಡಿಸುತ್ತಿದ್ದವಳಿಗೆ ಈವಾಗಿನ ಮಕ್ಕಳ ವ್ಯಥೆ ನೋಡಿ... ನಮ್ಮ ಸಕ್ಕತ್ ಕಥೆ ಹೇಳೋಣ ಅಂತ ಬರೆಯಕ್ಕೆ ಶುರು ಮಾಡಿದೆ. [ಕಳೆದುಹೋದ ಬಾಲ್ಯ ಮರಳಿದರೆ ಎಷ್ಟು ಚೆನ್ನǃ]

The ultimate childhood in Jayanagar Bengaluru

ನಮ್ಮ ಬಾಲ್ಯ ಅತಿ ಸುಂದರ. ಇದು ಎಲ್ಲರ ಸಾಲು. ಆದರು ನಮ್ಮ 90's ಮಕ್ಕಳೇ ಕೊನೆ generation ರಸ್ತೆ ಮೇಲೆ ಆಟ ಆಡಿದ್ದು. ನಮ್ಮ ಬಾಲ್ಯಕ್ಕೆ ಯಾವ gadget ಬಂದಿರಲಿಲ್ಲ. TV ನೋಡಬಾರದು ಅಂತಾನೆ ನಮ್ಮೆಲ್ಲರನ್ನು ಅಮ್ಮ ಸಂಗೀತ ಶಾಲೆಗೆ ಸೇರಿಸಿದ್ದಳು. ಹಾಗೂ ಹೀಗೂ ಅರ್ಧ ಘಂಟೆ ಕಣ್ಣು ತಪ್ಪಿಸಿ TV ನೋಡಲೆಬೇಕು ಅಂತ ಕಾಲು ನೋವು, ಕೈ ನೋವು ಅಂತ ನಾಟಕ ಮಾಡಿದ್ರೂ ಮನೇಲಿ ಓಡಿಸುತ್ತಿದ್ದರು.

ಎಲ್ಲರ ಮನೇಲಿ ಓದ್ಕೋ, ಓದ್ಕೋ ಅನ್ನೋವಾಗ ನಮ್ಮ ಅಮ್ಮ ಆಚೆ ಹೋಗಿ ಆಟ ಆಡು ಅಂತ ಹೇಳೋ ಸೂಪರ್ ಅಮ್ಮ. ಆದರೆ 7 ಘಂಟೆಗೆ ಮನೆಗೆ ಹಾಜರ್ ಆಗಬೇಕಿತ್ತು. ಆಮೇಲೆ ಓದು, ಆವತ್ತಿನ ಶಾಲೆ ಕಥೆ ಎಲ್ಲ ತಾತನ ಹತ್ತಿರ, ಅಮ್ಮನ ಹತ್ತಿರ ಪುರಾಣ ಹೋಡಿಯೋದು. ಅಜ್ಜಿ ಅಡಿಗೆ ಮನೆ ಡಿಪಾರ್ಟ್ಮೆಂಟು. ಅಪ್ಪ ಯಾವಾಗಲೂ ಲೇಟ್ ಆಗೆ ಮನೆಗೆ ಬರೋರು. ಅವರಿಗೆ ಏನೇನೊ ಕಥೆ ಎಲ್ಲ ಹೇಳಿಕೊಂಡು ಕೂತಿರೋದು. ಮನೇಲಿ ನನ್ನ ಬೊಂಬಾಯಿ ಅಂತ ಕರಿಯೋರು. ಬಾಯಿ ಬಿಟ್ರೆ ಮುಚ್ಚೋದೆ ಇಲ್ಲ ಅನ್ನೋದು ಎಲ್ಲರ ಮಾತು.

ಇನ್ನು ನಾವು ಸ್ನೇಹಿತೆಯರು ಸಹ ಎಲ್ಲ ಒಂದೆ ಥರ. 3 ಜನ ಸ್ನೇಹಿತೆಯರು ನನಗಿಂತ ದೊಡ್ಡೋರು, ಒಬ್ಬಳು ನನಗಿಂತ ಚಿಕ್ಕವಳು. ದಿನಾ ನಮ್ಮ ಆಟಗಳು ಚೆನ್ನಾಗಿ ನಡೀತಿದ್ದವು. ಬ್ಯಾಡ್ಮಿಂಟನ್, Ghost and the graveyard, dabba, cricket, ಜೂಟಾಟ, ಕಂಬ, ಅಳಗುಳಿಮನೆ , ಚೌಕಬಾರಾ, ಚೆಸ್ ಮುಂತಾದ ಆಟಗಳನ್ನ ಆಡುತ್ತಾಯಿದ್ವಿ. ಮಳೆ ಬಂದಾಗ ಎಲ್ಲಾರೂ ಒಬ್ಬರ ಮನೆಯಲ್ಲಿ ಕೂತು ನಮ್ಮ ಹರಟೆ ಹೊಡೆದುಕೊಂಡು, ಇರೊ ಬರೋ ಕಥೆ, ಕವನಗಳನ್ನ ವಿಚಾರ ಮಾಡಿದ ಮೇಲೆ ಹೊಳೆದ ವಿಷಯವೇ ಪ್ರೊಗ್ರಾಂ ಮಾಡೋದು. ನಾವೆ ಎಲ್ಲ ಹಾಡು ಹಾಡುತ್ತಿದ್ವಿ, ಇಬ್ಬರು ಗೆಳತಿಯರು ಹಾಡು, ಇನ್ನೊಬ್ಬಳು ನೃತ್ಯ, ಡ್ರಾಮಾ ಹೀಗೆಲ್ಲ ಮಾಡಲು ನಿರ್ಧಾರ ಮಾಡ್ತಿದ್ವಿ. [ಕಾಲಚಕ್ರದ ಯಂತ್ರದಲ್ಲಿ ಸ್ವಚ್ಛಂದದ ಬಾಲ್ಯದ ನೆನಪುಗಳು]

The ultimate childhood in Jayanagar Bengaluru

ಟಿಂಕಲ್ ಎಂಬ ಕಥೆಪುಸ್ತಕದ 'Suppandi' ಎಂಬ characterನ ಕಥೆಯನ್ನ ನಾಟಕ ಮಾಡುತ್ತಿದ್ವಿ. ಕಥಾನಾಯಕ ಬಹಳ ದಡ್ಡ, ಅವನಿಗೊಬ್ಬ ಮಾಸ್ಟರು. ಇಬ್ಬರ ನಡುವೆ ನಡೆಯುವ ತಮಾಷೆ ಪ್ರಸಂಗಗಳು ನಮ್ಮ ನಾಟಕದ ವಿಷಯ. ನನ್ನ ಗೆಳತಿ Suppandiಯನ್ನ ಚೆನ್ನಾಗಿ imitate ಮಾಡೋಳು. ಹೀಗೆ ಏನೇನೊ ತಮಾಷೆ ಮಾಡಿಕೊಂದು ಇದ್ವಿ. ನಮ್ಮ ಬಡಾವಣೆಯ ಎಲ್ಲರನ್ನೂ ಅಂದು ನಾವು ಕರೆದು ನಮ್ಮ 6 ಜನರಲ್ಲಿ ಒಬ್ಬರ ಮನೆಯ ಮಹಡಿಯ ಮೇಲೆ ಕಾರ್ಯಕ್ರಮ ಮಾಡ್ತಿದ್ವಿ. ಅವತ್ತಿನ ಸಂಜೆ ತಿಂಡಿ ಜೊತೆಗೆ ನಮ್ಮ ಮನೋರಂಜನೆ ಕಾರ್ಯಕ್ರಮ, ಆಟಗಳು ನಡೆಯುತ್ತಿದ್ದವು.

ನಾವೆ ದುಡ್ಡು ಹಾಕಿ Budget plan ಮಾಡಿ ರಾಗಿಗುಡ್ಡದ ಜಾತ್ರೆಯಲ್ಲಿ ಸಿಗುತ್ತಿದ್ದ ಸಾಮಾನುಗಳು ಆಟಗಳಲ್ಲಿ ಗೆದ್ದವರಿಗೆ ಬಹುಮಾನಗಳನ್ನು ನೀಡುತ್ತಿದ್ದೆವು. ನಮ್ಮ ಅಮ್ಮಂದಿರ ಕೈ ರುಚಿ, ಅಜ್ಜಿಯ ಎಲ್ಲ ಅಡಿಗೆಯ ರುಚಿ ನೋಡಿದ್ದೇವೆ. ಅಮ್ಮಂದರಿಗೆ ಮಕ್ಕಳ ಪ್ರತಿಭೆ ನೋಡಲು ಉತ್ಸಾಹ , ನಮಗೆ ನಾವೆ ರಾಜ್ಕುಮಾರ, ಭಾರತಿ, ವಿಷ್ಣುವರ್ಧನ, ಶಾರುಖ್ ಖಾನ್, ಅಂದುಕೊಂಡು ನೃತ್ಯ, ನಾಟಕ, ಇವೆಲ್ಲವನ್ನು ಪ್ರದರ್ಶಿಸಿ ಭೇಷ್ ಅನಿಸಿಕೊಳ್ಳುತ್ತಿದ್ವಿ. ಕೆಟ್ಟಭ್ಯಾಸಗಳೆಲ್ಲ ಹತ್ತಿರ ಸುಳಿಯದಂತೆ ಮನೆಯಲ್ಲಿ ಹಾಗೂ ಸ್ನೇಹಿತರು ನೋಡಿಕೊಳ್ಳುತ್ತಿದ್ದರು.

ನನ್ನ ತಂಗಿ ಚಿಕ್ಕವಳಾದರೂ ಬಹಳ ಧೈರ್ಯ. ನಾನು 3ನೇ ಕ್ಲಾಸ್ಗೆ ಬರೋವರ್ಗು ಸೈಕಲ್ ಕಲಿತೇ ಇರಲಿಲ್ಲ, ನಮ್ಮ ಮನೆ ರಸ್ತೆ ಉಬ್ಬು ತಗ್ಗು ಅಂತ ಕಾರಣ ಕೊಟ್ಟು. ಅವಳು ಹಾಗಲ್ಲ, ಸಮತಟ್ಟಾದ ರಸ್ತೆಯಲ್ಲಿ ನನಗಿಂತ ಚೆನ್ನಾಗಿ ಸೈಕಲ್ ಹೊಡೆದು, ಕತ್ರಿ ಥರ ಸೈಕಲ್ ಕೂಡ UKGಯಲ್ಲೆ ಹೊಡೆದು ತೋರಿಸಿದ್ದಳು. ನನಗೆ ನನ್ನ ತಂಗಿ ಸೈಕಲ್ ಹೊಡೆಯೋದು ನೋಡುವುದೆ ಚಂದ. ನಾ ಆರಾಮಾಗಿ ಮನೇಲಿ ಚಿಪ್ಸ್ ತಿಂದುಕೊಂಡು ಇರುತ್ತಿದ್ದೆ. ತಾತನಿಗೆ ಇವಳನ್ನ ಹಿಡಿಯುವುದೆ ಕೆಲಸ. ಒಂದು ದಿನ ಸೋದರ ಮಾವ ಮನೆಗೆ ಬಂದು, ನಿನಗಿಂತ ಚಿಕ್ಕವಳಿಗೆ ಸೈಕಲ್ ಬರತ್ತೆ ಎಂದು ಹೇಳಿದ ಮೇಲೆ, ನಾನು ಪ್ರಯತ್ನ ಪಟ್ಟು ಸೈಕಲ್ ಕಲಿತಿದ್ದು. [ಕಥೆ: ಗೆಳೆಯ 'ಮುಖ' ಪರಿಚಯ ಮಾಡಿಸಿದ ಫೇಸ್ ಬುಕ್]

The ultimate childhood in Jayanagar Bengaluru

ಎಲ್ಲರಿಗಿಂತ ಹೆಚ್ಚು ಸೋಂಬೇರಿ ನಾನೆ ಆಗಿದ್ದೆ. ಹಾಯಾಗಿ ಒಂದು ಕುರ್ಚಿಯ ಮೇಲೆ ಕೂತು ಹಾಡು ಕೇಳಿಕೊಂಡು, ಪುಸ್ತಕ ಓದುವುದು ನನ್ನ ಬಹಳ ಇಷ್ಟವಾದ ಕೆಲಸ. ಹೀಗೆ ಜಡವಾದ ನನ್ನ, ಅಮ್ಮ ಮನೆಯಿಂದ ಎಬ್ಬಿಸೋಕ್ಕೆ ಹರಸಾಹಸ ಪಡುತ್ತಿದ್ದಳು. ಇಲ್ಲಿ ಬಾರ್ಸಿಲೋನಾಗೆ ಬಂದ ಮೇಲಂತೂ ನಾವೆಲ್ಲ ಗೆಳಯ-ಗೆಳತಿಯರು ಸೇರೋದೆ ಯಾವುದಾದರು ಆಟ ಆಡೋಕ್ಕೆ. ಆವಗೆಲ್ಲ ಅಮ್ಮನ, ಗೆಳತಿಯರ ಮಾತು ಕೇಳಿದ್ದರೆ ಈವತ್ತು ಒಂದಾದರೂ ಆಟಗಳನ್ನ ಸರೀಗೆ ಆಡುತ್ತಿದ್ದನೇನೋ ಅನ್ನಿಸುತ್ತೆ.

ಇನ್ನು ಸ್ವಲ್ಪ ದೊಡ್ಡೋರಾದ ಮೇಲೆ ಎಲ್ಲ ಹುಡುಗಿಯರಿಗೆ ಸಮಯದ restriction ಶುರು ಆಯಿತು. ಚಿಕ್ಕ ಸ್ಕರ್ಟ್ ಹಾಕೋಬೇಡ, ಕತ್ತಲೆಯಲ್ಲಿ ಒಬ್ಬಳೆ ಹೋಗಬೇಡ, ಆ ಅಂಗಡಿಯವರೊಂದಿಗೆ ಏನು ನಿನ್ನ ಮಾತು ಅನ್ನೋ ಪ್ರಶ್ನೆಗಳು ಬಹಳ ಕೇಳುತ್ತಿದ್ದವು. ನಮ್ಮ ರಸ್ತೆಯಲ್ಲಿ ಗಂಡು ಮಕ್ಕಳು ಬಹಳಷ್ಟು ಇಲ್ಲದ ಕಾರಣ, ಇದು ಪ್ರಮೀಳಾ ರಾಜ್ಯವೆ ಆಗಿತ್ತು. ಗಂಡು ಮಕ್ಕಳು ಪಕ್ಕದ ಬಡಾವಣೆಯಿಂದ ನಮ್ಮ ಆಟ ನೋಡಲು ಬರುತ್ತಿದ್ದರು. ಆ ಸೂಕ್ಷ್ಮಗಳೆಲ್ಲ ನಮಗೆ ತಿಳಿತಿರಲಿಲ್ಲ. ನಮಗಿನ್ನು ನಾವು ಚಿಕ್ಕವರು, ಇಡೀ ಜಯನಗರವೆ ನಮ್ಮದು ಎಂಬ ಕಲ್ಪನೆ.

ದೇವಸ್ಥಾನದ ಹತ್ತಿರ ಒಂದು ಭೇಲ್ ಗಾಡಿ ಇತ್ತು. ಅಲ್ಲಿ ನಮ್ಮ ತಿಂಗಳ ಪಾರ್ಟಿ. ಅದೇ ನಮಗೆ ಸ್ವರ್ಗ. ಬೇರೆ ಯಾವ ಹವ್ಯಾಸವು ನಮಗೆ ಇರಲಿಲ್ಲ. ನಮ್ಮೆಲ್ಲರ ಮನೆಯಲ್ಲಿ ಯಾರೂ ರಜೆಗೆ ಬೇರೆ ಊರಿಗೆ ಹೋಗುತ್ತಿರಲಿಲ್ಲ. ಅಜ್ಜಿಯ ಮನೆ ಸಹ ಬೆಂಗಳೂರಲ್ಲೆ ಇದ್ದಿದ್ದರಿಂದ ಒಂದು ಎರಡು ದಿನ ರಜೆಗೆ ಹೋಗಿ ಬರುತ್ತಿದ್ದರಿಂದ ದಿನಾ ರಜಾದಲ್ಲಿ ಆಟ ಆಡುತ್ತಿದ್ದವು. ಬೇಸಿಗೆ ಶಿಬಿರಗಳನ್ನು ನಾವೇ ನಡೆಸುತ್ತಿದ್ದೆವು. ನಮ್ಮಿಂದ ನಮ್ಮ ಅಮ್ಮಂದಿರು ಸ್ನೇಹಿತೆಯರಾದರು. ಅಪ್ಪಂದಿರು ಸಹ. ಒಂದು ಥರ ಮನೆಯವರೆಲ್ಲ ಒಂದು ಕುಟುಂದವರ ಥರ ಆದೆವು.

The ultimate childhood in Jayanagar Bengaluru

ಈಗಲೂ ಸಿಕ್ಕಾಗ 'ಏನು ಅಮ್ಮಯ್ಯ' ಅಂತಾನೆ ಎಲ್ಲರೂ ಮಾತಾಡಿಸೋದು. ಅವರ ಮನೆ ಅಡಿಗೆ ನನಗೆ ಇಷ್ಟ, ನಮ್ಮ ಮನೆಯದ್ದು ಅವರಿಗೆ. ಹೀಗೆ ತೀರ ಹಳ್ಳ, ಕೊಳ್ಳ, ನದಿ ಅಂತ ಬಾಲ್ಯ ಇಲ್ಲದ್ದಿದ್ದರೂ ನಮಗೆ ರಾಗಿಗುಡ್ಡವೇ ಶ್ರೇಷ್ಠವಾಗಿತ್ತು. ಅದೇ ನಮಗೆ ಎಲ್ಲ. ದೇವರು ದಿಂಡರು ಅನ್ನೋದಕ್ಕಿಂತ ಅದು ನಮ್ಮ activity place ಆಗಿತ್ತು. ಗುಡ್ಡ, ಪ್ರಸಾದ ಇವೆಲ್ಲ ನಮ್ಮ ಪ್ರಿಯವಾದ ವಸ್ತುಗಳು. ಈಗಿನ ಮಕ್ಕಳು ಆಚೆ ಹೋಗೋದು ಬಿಟ್ಟು ಮನೇಲೆ ಎಲ್ಲ ತರಹದ ಆಟ ಆಡುಕೊಳ್ಳುತ್ತ ಕುಳಿತುಕೊಳ್ಳುತ್ತಾರೆ. ಒಮೊಮ್ಮೆ ಭಯವೂ ಆಗುತ್ತದೆ. ಮುಂದೊಮ್ಮೆ ಇವರು ಮಕ್ಕಳಿಗೆ ಏನು ಕಲಿಸುತ್ತಾರೆ ಅಂತ!

ಇಷ್ಟೆಲ್ಲ ಬರೆದಿದ್ದು ನನ್ನ ಸ್ನೇಹಿತೆಯೊಬ್ಬಳ ಮದುವೆಯ ವಿಡಿಯೋ facebookನಲ್ಲಿ ಕಾಣಿಸಿಕೊಂಡಾಗ. ನನ್ನ ನಾಲ್ವರು ಸ್ನೇಹಿತೆಯರು ಮದುವೆ ಮಾಡಿಕೊಂಡು ಜಯನಗರ ಬಿಟ್ಟಿದ್ದಾರೆ. ವಿಶ್ವದ ಮೂಲೆ ಮೂಲೆಯಲ್ಲಿ ನಮ್ಮ ವಾಸ. ಒಬ್ಬರು ಸಿಕ್ಕರೆ ಮತ್ತೊಬ್ಬರು ಸಿಗದಿರೋ ಅಂಥ ಪರಿಸ್ಥಿತಿ. ಒಮೊಮ್ಮೆ ಬಾಲ್ಯವೆ ಚೆಂದಿತ್ತು, ಅಲ್ಲೇ ಇರಬೇಕೆಂಬ ಹಂಬಲ ಇದ್ದರೂ ದೊಡ್ಡವರಾಗದೆ ಬೆಳೆಯಲು ಆಗುವುದಿಲ್ಲ ಎಂಬ ಸತ್ಯ ಕಣ್ಣಿಗೆ ಕಾಣುತ್ತದೆ.

ಬೆಂಗಳೂರಲ್ಲಿ ಇದ್ದುಗೊಂಡು ಬಾಲ್ಯ ಚೆನ್ನಾಗಿತ್ತು ಅಂತ ಹೇಳುವ ಉದ್ದೇಶ ಸಹ ಈ ಲೇಖನದ್ದು. ನಮ್ಮ ಮನೆಯವರು, ನಮ್ಮ ಬಾಲ್ಯ ನಮ್ಮನ್ನು ರೂಪಿಸುತ್ತದೆ. ನಮ್ಮ ಜನ ನಮ್ಮನ್ನ ಒಳ್ಳೆಯವರು ಕೆಟ್ಟವರು ಮಾಡುತ್ತಾರೆ. ಸರಿಯಾಗಿ ಯೋಚಿಸಿ ಮಕ್ಕಳಿಗೆ ಏನು ನೀಡಬೇಕೋ ನೀಡಿ. ಹಾಗೆಯೆ ಇದಕ್ಕೆ ಚೆಂದದ ಚಿತ್ರ ಬಿಡಿಸಿ ಕೊಟ್ಟವಳು ನನ್ನ ಮುದ್ದು ತಂಗಿ ಮಾಧುರ್ಯ. ನನ್ನ ಬೊಂಬಾಯಿಗೆ ತದ್ವಿರುದ್ಧ, ಆದರೆ ಬಲು ಜಾಣೆ, ಕಲಾವಿದೆ. ಅವಳ ಕಣ್ಣಲ್ಲಿ ನಾನು, ಅಮ್ಮ.

English summary
Childhood for everyone is always memorable. Everyone thinks their childhood was better than the present one. So, Meghana Sudhindra too recalls her evergreen childhood near Ragigudda Anjaneya Temple. Why present generation is not enjoying as much as they should?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X