ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಂತ್ರಕ್ಕೆ ಶಾಸ್ತ್ರಬದ್ಧವಾಗಿ ಸಂಗೀತ ಕಲಿಸಿದರೆ ಹೇಗಿರತ್ತೆ!

By ಜಯನಗರದ ಹುಡುಗಿ
|
Google Oneindia Kannada News

ಮೊನ್ನೆ ಸಮಯ, ಮನೆಯ ಇಂಟರ್ನೆಟ್ ಜೊತೆ ಗುದ್ದಾಡಿ ನನ್ನ ಸ್ನಾತಕೋತ್ತರ ಪದವಿಯ ಪ್ರಬಂಧವನ್ನ ಸಂಪೂರ್ಣಗೊಳಿಸಿದೆ. ಬಾರ್ಸಿಲೋನಾದಿಂದ ಬೆಂಗಳೂರಿಗೆ ಬಂದಾಗ ಕೇಳಿದ ಮೊದಲ ಪ್ರಶ್ನೆ ಅಲ್ಲಿದ್ದಾಗ ಏನು ಓದ್ದಿದ್ದು, ಮುಂದೇನು ಕೆಲಸ ಎಂಬುದರ ಬಗ್ಗೆ ವಿವರಣೆ ಕೊಟ್ಟು ಕೊಟ್ಟು ಸಾಕಾಗಿ, ಇಂದು ನಾನು ಓದಿದ ವಿಶೇಷ ಕೋರ್ಸಿನ ಬಗ್ಗೆ ಬರೆಯೋಣ ಅಂತ ಅಂದುಕೊಂಡೆ. ಪಕ್ಕದ್ಮನೆ ಆಂಟಿಗೆ ಹೇಗೆ ವಿವರಿಸಿದ್ದೆನೋ ಹಾಗೆಯೇ ನಿಮಗೂ ವಿವರಣೆ.

ಜಯನಗರದ ನಮ್ ಏರಿಯಾದ ರೋಡ್ ಗಣೇಶ!ಜಯನಗರದ ನಮ್ ಏರಿಯಾದ ರೋಡ್ ಗಣೇಶ!

ಭಾರತೀಯ ಶಾಸ್ತ್ರೀಯ ಸಂಗೀತ ಪದ್ಧತಿಯಲ್ಲಿ ಕರ್ನಾಟಕ ಹಾಗೂ ಹಿಂದೂಸ್ತಾನಿ ಎಂಬ ವಿಶೇಷ ಪ್ರಕಾರಗಳಿವೆ. ಸಂಗೀತವನ್ನ ಸುಮಾರಾಗಿ ಒಂದು ಕಲೆಯಾಗಿಯೆ ನೋಡುತ್ತೇವೆ. ನಮ್ಮ ಸಂಸ್ಕೃತಿಯ ಒಂದು ಕುರುಹು ನಮ್ಮ ಸಂಗೀತ ಹಾಗೂ ಅದು ಮುಂದಿನ ಪೀಳಿಗೆಗೆ ನಮ್ಮತನವನ್ನ ಪರಿಚಯಿಸುತ್ತದೆ ಎಂಬುವುದು ಮಾತ್ರ ನಮಗೆ ಗೊತ್ತು.

The scientific way of studying music

ಆದರೆ ಸಂಗೀತದಲ್ಲಿರುವಷ್ಟು ಗಣಿತ ಎಲ್ಲೂ ಕಂಡಿಲ್ಲ. ಕ್ಲಿಷ್ಟವಾದ ಲೆಕ್ಕಾಚಾರ, optimization ಸಮಸ್ಯೆಯ ಪರಿಹಾರವನ್ನ ಇನ್ನೆಲ್ಲಿಯೂ ಕಾಣಲು ಸಾಧ್ಯವಿಲ್ಲ. ಇಂಜಿನಿಯರಿಂಗ್ ನಂತರ ಈ ಸಮಸ್ಯೆಯ ಪರಿಹಾರಕ್ಕೆ ಸಂಗೀತದಿಂದ ಉಪಯೋಗವಾಗುತ್ತದೆಯಾ ಎಂಬುದನ್ನ ಅರಿಯುವುದಕ್ಕೆ ದೂರದ ಬಾರ್ಸಿಲೋನಕ್ಕೆ ಹೋಗಿದ್ದೆ. ಅಲ್ಲಿ ನಮ್ಮ ಸಂಗೀತ, ಟರ್ಕಿಶ್ ಸಂಗೀತ, ಚೈನಾದ ಝಿಂಕ್ಷೂ ಸಂಗೀತ ಎಲ್ಲವನ್ನು ಕ್ರಮ ಬದ್ಧವಾಗಿ ವೈಜ್ಞಾನಿಕವಾಗಿ ಅಭ್ಯಾಸ ಮಾಡಲಾಗುತ್ತಿತ್ತು. ಅದಕ್ಕೆ ತಕ್ಕನಾದ ಪಠ್ಯಗಳನ್ನು ಅಭ್ಯಸಿಸಲು ಅನುವು ಮಾಡಿಕೊಡಲಾಗಿತ್ತು.

ಎಲೆಕ್ಟ್ರಾನಿಕ್ ಸಿಟಿಯ ಪುರಾತನ ಹೆಸರು ಏನಿತ್ತು ಗೊತ್ತಾ?ಎಲೆಕ್ಟ್ರಾನಿಕ್ ಸಿಟಿಯ ಪುರಾತನ ಹೆಸರು ಏನಿತ್ತು ಗೊತ್ತಾ?

ನಾನು ರಾಗವನ್ನು ಕಂಡು ಹಿಡಿಯುವ ಬಗೆಯನ್ನ ಆಳವಾಗಿ ಅಭ್ಯಾಸ ಮಾಡಲು ಹೋಗಿದ್ದೆ. ಶಾಸ್ತ್ರೀಯ ಸಂಗೀತವನ್ನ ಸುಮಾರು ವರ್ಷ ಅಭ್ಯಾಸ ಮಾಡಿದವರಿಗೆ ಮಾತ್ರ ಈ ಕಲೆ ಕರಗತವಾಗಿರುತ್ತದೆ. ಆದರೆ ಒಂದು ಯಂತ್ರಕ್ಕೆ ಒಂದು ಸಾಫ್ಟ್ವೇರನ್ನೋ ಅಥವಾ ನಮ್ಮ ದೂರವಾಣಿಗೆ app ಅನ್ನೋ ಅಳವಡಿಸಿದರೆ ಅದರಲ್ಲಾಗೋ ಖುಶಿಯೇ ಬೇರೆ. ಇಂಜಿನಿಯರಿಂಗ್ ಓದಿದವರಿಗೆ ಸಂಗೀತ ಸಹ ಒಂದು ಸಿಗ್ನಲ್, ಅದರಲ್ಲಿಯೂ ಸಹ ಸುಮಾರು ವಿಶೇಷಗಳು ಅಡಗಿರುತ್ತದೆ. ಅದರ ಕ್ರಿಯೆ ಪ್ರಕ್ರಿಯೆಗಳನ್ನ ತಿಳಿಯೋದು ತುಂಬಾ ತುಂಬಾ ಮುಖ್ಯ.

The scientific way of studying music

ಮುಖ್ಯವಾಗಿ ಅಲ್ಲಿನ ವಿಶ್ವವಿದ್ಯಾನಿಲಯದಲ್ಲಿ ಸುಮಾರು ಜನ ಅವರವರ ನೆಲದ ಸಂಗೀತ ಪರಂಪರೆಯನ್ನ ಚೆನ್ನಾಗಿ ಬಲ್ಲವರು ಹಾಗೂ ಇಂಜಿಯನಿಯರುಗಳು. ನನ್ನ ಎಲ್ಲ ಸಹಪಾಠಿಗಳು ಇವೆರೆಡರಲ್ಲೂ ಪರಿಣಿತಿ ಹೊಂದಿದ್ದರು. ನಮ್ಮ ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೂ ಟರ್ಕಿಶ್ ಮಾಕಾಮ್ ಸಂಗೀತಕ್ಕೂ ಸುಮಾರು ಸಾಮ್ಯತೆಗಳಿವೆ. ನಮ್ಮ ರಾಗವನ್ನು ಅವರು ಮಕಾಮ್ ಎನ್ನುತ್ತಾರೆ. ಪ್ರತಿ ಶಾಸ್ತ್ರೀಯವಾಗಿ ಅಭ್ಯಸಿಸಿದ ಹಾಡನ್ನು ಹಾಡುವಾಗಲೂ ನಾವು ಇದು ಈ ರಾಗ, ಈ ತಾಳ ಎಂಬುದನ್ನು ತಪ್ಪದೆ ತಿಳಿಸುತ್ತೇವೆ, ಹೀಗೆ ಅವರ ಸಂಗೀತಕ್ಕೂ ಮಕಾಮ್ ತಿಳಿಸುವುದು ಕಡ್ಡಾಯ.

ಒಂದೇ ದಿನದಲ್ಲಿ ಎಷ್ಟೊಂದು ಕಥೆ ಕೊಟ್ಟ ನಮ್ಮ ಮೆಟ್ರೋ!ಒಂದೇ ದಿನದಲ್ಲಿ ಎಷ್ಟೊಂದು ಕಥೆ ಕೊಟ್ಟ ನಮ್ಮ ಮೆಟ್ರೋ!

ನಮ್ಮ ಥರವೇ ಬಹಳ ಶಿಸ್ತಿನಿಂದ ಅಭ್ಯಾಸ ಮಾಡಿದರಷ್ಟೆ ಇವೆಲ್ಲವೂ ಒಬ್ಬ ಮನುಷ್ಯ ಹೇಳಲು ಸಾಧ್ಯ. ಆದರೆ ನಾವು ಸಂಗೀತವನ್ನ ಕಲಿತ ಬಗೆಯನ್ನ ಒಂದು ಯಂತ್ರಕ್ಕೆ ಕಲಿಸಿದರೆ ಅದೂ ಸಹ ಎಷ್ಟು ಕರಾರುವಕ್ಕಾಗಿ ರಾಗ/ಮಕಾಮ್ ನನ್ನು ಕಂಡು ಹಿಡಿಯತ್ತೆ, ಆರಭಿಗೂ, ದೇವಗಾಂಧಾರಿಗೂ ವ್ಯತ್ಯಾಸವನ್ನ ತಿಳಿಸುತ್ತಾ ಇಲ್ಲ್ವಾ, ಅಥವಾ ನಮ್ಮ ಹಾಗೆ ಅದನ್ನು ಒಂದೇ ಅನ್ನುತ್ತದೆಯಾ, ಯಾವ ಎರಡು ರಾಗಗಳಿಗೆ ತುಂಬಾ ಸಾಮ್ಯತೆ ಇದೆ, ಎಷ್ಟು ಶೇಕಡಾ ಸಾಮ್ಯತೆ ಇದೆ/ಇಲ್ಲ ಇವೆಲ್ಲವನ್ನ ವೈಜ್ಞಾನಿಕವಾಗಿ ತಿಳಿಯುವ ಒಂದು ಸಾಹಸವನ್ನ ಮಾಡುತ್ತಿದ್ದೆವು.

The scientific way of studying music

ಇಂತಹ ಸಂಶೋಧನೆ ಬೇರೆ ಸಂಗೀತ ಪ್ರಕಾರಗಳಲ್ಲಿ ತುಂಬಾ ಆಗಿದೆ. ನಮ್ಮಲ್ಲಿನ ಮಡಿವಂತಿಗೆಕೆ, ಆಲಸ್ಯಕ್ಕೆ ನಾವು ನಮ್ಮ ಅಪಾರವಾದ ಜ್ಞಾನವನ್ನ ತುಂಬಾ ತೆರೆಯದೆ ಅಥವಾ ಈ ಭಾಗವನ್ನ ಅರಿಯದೆ ಮುಂದುವರಿದೇ ಇಲ್ಲ. ಇದೆಲ್ಲ ಮಾಡುವುದರಿಂದ ಆಗುವ ಲಾಭಗಳು ನಮ್ಮ ಸಂಗೀತದ ಪ್ರಕಾರ ಎಷ್ಟು ವೈಜ್ಞಾನಿಕವಾಗಿದೆ ಎಂಬುದನ್ನ ಅರಿಯಬಹುದು. ಈ ಸಾಫ್ಟ್ವೇರಿಂದ ಕಲಿಕೆ ಸುಲಭ, ಮಕ್ಕಳಿಗೆ ಆಸಕ್ತಿದಾಯಕವಾಗಿರುತ್ತೆ ಮತ್ತು ನಮ್ಮ ಇಂಜಿನಿಯರಿಂಗ್ನಲ್ಲಿ ಕಾಡುವ optimization ಸಮಸ್ಯೆಯ ಪರಿಹಾರವನ್ನ ಸುಲಭವಾಗಿ ಕಂಡು ಹಿಡಿಯಬಹುದು.

ಈ optimization ಅನ್ನೋದು ಸೋಮಾರಿಗಳ ಹಾಗೆ. ಕಡಿಮೆ ಸಂಪನ್ಮೂಲದಲ್ಲಿ ಜಾಸ್ತಿ ಉತ್ಪಾದನೆಯನ್ನ ಮಾಡುವುದು. ನನ್ನಂತಹ ಸೋಮಾರಿಗಳಿಗೆ ಇದು ಹೇಳಿ ಮಾಡಿಸಿದ ಕೆಲಸ. ಕಡಿಮೆ ಸಮಯ, ಜನ ಇವೆಲ್ಲವನ್ನ ಇಟ್ಟುಕೊಂಡು ಎಷ್ಟು ಬೇಗ, ಒಳ್ಳೆಯ ಕೆಲಸವನ್ನ ಮುಗಿಸುತ್ತೇವೆ ಎಂದು ನಮ್ಮ ಸಂಶೋಧನೆಯ ಭಾಗವಾಗಿತ್ತು. ಯಾವುದೇ ಹಾಡನ್ನ ನೋಡಿದಾಗ ಅದು ಇದೇ ರಾಗ, ಇದೇ ತಾಳ, ಇಷ್ಟೇ ಸ್ವರಗಳನ್ನ ಇಟ್ಟುಕೊಂಡಾಗಲೇ ಅದಕ್ಕೊಂದು ಮಾಧುರ್ಯವಿರುವುದು ನಿಮಗೆ ಅರಿವಿರಬಹುದು. ನಮಗೆ ಗೊತ್ತಿಲ್ಲದೆ ಒಂದು ಸೂತ್ರವನ್ನ ಒಂದೊಂದು ಹಾಡುಗಳು ಅನುಸರಣೆ ಮಾಡುತ್ತಿದೆ. ಇವೆಲ್ಲವನ್ನ ತಿಳಿಯುವ ಪ್ರಯತ್ನವಾಗುತ್ತಿತ್ತು.

The scientific way of studying music

ನಮ್ಮ ಸಂಗೀತಕ್ಕೆ ವೈಜ್ಞಾನಿಕ ಸೂತ್ರಗಳನ್ನ ಅಳವಡಿಸಿ ನೋಡಿದಾಗ ನಮ್ಮದು ಎಷ್ಟು ಕರಾರುವಾಕ್ಕಾಗಿ ಸಮಸ್ಯೆಗಳನ್ನ ಬಗೆಹರಿಸುತ್ತಿದೆ, ಸಂಗೀತದಿಂದ ನಾವೆಷ್ಟೊಂದು ಹೊಸ ವೈಜ್ಞಾನಿಕ ಸೂತ್ರಗಳನ್ನ ಕಂಡುಹಿಡಿದ್ವಿ, ರಾಗಗಳನ್ನ ಗುರುತಿಸಿದ್ದರ ಗೆಲುವು ಇವೆಲ್ಲವನ್ನ ನಾ ಆಂಟಿಗೆ ತಿಳಿಸಿ ಹೇಳುತ್ತಿದ್ದೆ.

ಸುಮಾರು ಹೊತ್ತು ನಾನು ಹೀಗೆ ಮಾತಾಡೊದನ್ನ ಕೇಳಿ ಆಂಟಿಗೆ, "ಅಯ್ಯೊ ಸುಮ್ನೆ ಮನೆ ಮುಂದೆ ಶಾರದಾ ಸಂಗೀತ ಶಾಲೆ ಎಂದು ಬೋರ್ಡ್ ಹಾಕೊಂಡಿದ್ರೆ ಎಷ್ಟೊಂದು ಮಕ್ಕಳಿಗೆ ಸಂಗೀತ ಹೇಳಿಕೊಡ್ಬೋದಾಗಿತ್ತು, ಅದನ್ನ ಬಿಟ್ಟು ಸುಮ್ನೆ ಕಷ್ಟ ಪಟ್ಟುಕೊಂಡು ಅದ್ಯಾವ್ದೋ ಯಂತ್ರಕ್ಕೆ ಹೇಳಿಕೊಟ್ಟೂ ಬಂದಿದ್ಯಾ, ಶಿವ ಲೀಲೆ ಈಗಿನ ಕಾಲದ ಮಕ್ಕಳ್ಳದ್ದು" ಎಂದು ಹೋದರು. ನೀವು ಪಕ್ಕದ್ಮನೆ ಆಂಟಿ/ಅಂಕಲ್ ಆಗಬೇಡಿ ಆಯ್ತಾ!

English summary
Are you a student of music? What kind of music are you studying, Karnataka or Hindustani? Have you ever thought about studying it scientifically? Can a software be used to learn music? Meghana Sudhindra take you through a wonderful journey of music.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X