ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರೆಂಟು ಕೈಕೊಟ್ಟಾಗ ಅಬ್ಬಾ, ಎಷ್ಟು ಮಜಾ ಅಲ್ವಾ?

By ಜಯನಗರದ ಹುಡುಗಿ
|
Google Oneindia Kannada News

ಮೊನ್ನೆ ಬಾರ್ಸಿಲೋನಾದಲ್ಲಿ ಥೀಸಿಸ್ ಬರೆಯುವ ಸಮಯಕ್ಕೆ ಪವರ್ ತೆಗೆದು ಬಿಟ್ಟಿದ್ದರು. ಇದೇನಪ್ಪ ಕಥೆ ಅಂತ ಯೋಚನೆ ಮಾಡಿಕೊಂಡು ಕೂತಿದ್ದೆ. ಅಪಾರ್ಟ್ಮೆಂಟ್ ನಲ್ಲಿ ಏನೋ ರಿಪೇರಿ ಅಂತ ಹೇಳಿದ್ದರು. ಮೋಂಬತ್ತಿ ಹಚ್ಚಿಕೊಂಡು ಥೀಸಿಸ್ ಬರೀತಾ ಕೂತಿದ್ದೆ. ಬೆಂಗಳೂರಿನ ಮನೆಯಲ್ಲಿ ಕರೆಂಟ್ ಹೋದಾಗ ಆಗುತ್ತಿದ್ದ ತರಲೆಗಳನ್ನ ನೆನಪಿಸಿಕೊಂಡೆ.

ಆವಾಗ ಸಿಕ್ಕಾಪಟ್ಟೆ ಕರೆಂಟ್ ತೆಗೀತ್ತಿದ್ರು. ದಿನಾಗಲೂ ಸಂಜೆ ಒಂದು ಘಂಟೆ ಮನೇಲಿ ಅದೇ ಗೋಳು. ನನಗೆ ಹೋಂವರ್ಕ್ ಮಾಡೋ ಎಲ್ಲಾ ಇಂಟರೆಸ್ಟ್ ಆವಾಗಲೇ ಬರುತ್ತಿತ್ತು. ತಾತನಿಗೆ ನನ್ನ ಪಾಡು ನೋಡೋಕಾಗದೆ, ಏನೇನೋ ಮಾಡಿ ಬೆಳಕು ಬರಿಸಲು ಪ್ರಯತ್ನ ಮಾಡುತ್ತಿದ್ದರು. ಕ್ಯಾಂಡಲ್ ನ ಒಂದು ರೀತಿಯಾಗಿ ಜೋಡಿಸಿ ಏನೆಲ್ಲಾ ಹರಸಾಹಸ ಮಾಡುತ್ತಿದ್ದರು.

ಮುದ್ದಾದ ನೆನಪುಗಳ ಬಿಚ್ಚಿಡುವ ಬೆಂಗಳೂರಿನ ಮಳೆ!ಮುದ್ದಾದ ನೆನಪುಗಳ ಬಿಚ್ಚಿಡುವ ಬೆಂಗಳೂರಿನ ಮಳೆ!

Thanks for load shedding, let's have some fun

ನಾನಂದ್ರೆ ಸುಮ್ನೇನಾ? ನಾನು ತಲೆಹರಟೆ ಮಾಡಿ ಕ್ಯಾಂಡಲ್ ನಲ್ಲಿ ಕಾಗದ ಸುಡುತ್ತಿದ್ದೆ. ತಾತನಿಗೆ ನನ್ನ ಕಾಯೋದೆ ದೊಡ್ಡ ಕೆಲಸವಾಗುತ್ತಿತ್ತು. ಮೇಣ ಕೈ ಮೇಲೆ ಬೀಳಬಾರದೆಂದು ದೊಡ್ಡ ಡಬ್ಬದ ಮೇಲೆ ಕ್ಯಾಂಡಲ್ ಇಡುತ್ತಿದ್ರು. ನಾ ಅದ್ರಲ್ಲೂ ಮೇಣವನ್ನ ಕೆಳಗೆ ಹಾಕಿ ನೆಲವನ್ನೆಲ್ಲ ಗಲೀಜು ಮಾಡುತ್ತಿದ್ದೆ. ಪರೀಕ್ಷೆಯ ಸಮಯದಲ್ಲಿಯೇ ಬೇಕೂ ಅಂತ ಇದು ತೆಗೀತಿದ್ರು.

ಸಿಕ್ಕಾಪಟ್ಟೆ ಕಷ್ಟ ಪಟ್ಟು ಓದುತ್ತಿದ್ದದ್ದು ನೆನಪಾಯಿತು. ದೀಪಾವಳಿಯಲ್ಲಿ ದೀಪ ಹಚ್ಚುವ ಸಂಭ್ರಮ ಕಾಣಿಸುತ್ತಿತ್ತು. ದೀಪದ ಹುಳುಗಳನ್ನ ನೋಡೋ ಅವಕಾಶ ಸಹ ಸಿಗುತ್ತಿತ್ತು. ಅದರ ರೆಕ್ಕೆಯ ವಿನ್ಯಾಸ, ಹಾರುವ ಬಗೆ ಎಲ್ಲವನ್ನು ತಿಳಿದುಕೊಂಡಿದ್ದೆ. ಆವಾಗ ಕರೆಂಟ್ ಹೋದ ಸಮಯದಲ್ಲಿ ಮನೆಯವರೆಲ್ಲ ಒಟ್ಟಿಗೆ ಕೂತುಕೊಂಡು ಮಾತಾಡುತ್ತಾ ಇರುತ್ತಿದ್ವಿ. ಒಮ್ಮೊಮ್ಮೆ ಗೆಳೆತಿಯರೆಲ್ಲ ಸೇರಿ ಅಂತ್ಯಾಕ್ಷರಿ ಆಡಿ, ಭೂತದ ಕಥೆಗಳನ್ನೆಲ್ಲಾ ಹೇಳಿ ಹೆದರಿಸುತ್ತಿದ್ವಿ. ನಾನೇ ದೆವ್ವ ಭೂತದ ಕಥೆ ಹೇಳಿ ನಾನೆ ಹೆದರಿಕೊಂಡು ಮಲಗಿದ್ದೂ ಇದೆ.

ನಾವು ಮೊದಲ ಬಾರಿಗೆ ಸ್ಯಾಂಟ್ರೋ ಕಾರು ಕೊಂಡ ಕಥೆ!ನಾವು ಮೊದಲ ಬಾರಿಗೆ ಸ್ಯಾಂಟ್ರೋ ಕಾರು ಕೊಂಡ ಕಥೆ!

Thanks for load shedding, let's have some fun

ನೆರಳಿನ ಆಟದಲ್ಲಿ ಪೂರ್ತಿ ಪುಣ್ಯಕೋಟಿಯ ಕಥೆಯನ್ನು ಬೆರಳಲ್ಲಿ ಆಡಿಸಿ (Shadwo art) ತೋರಿಸೋದಕ್ಕೆ ಪ್ರಯತ್ನ ಮಾಡಿದ್ವಿ. ತಾತನ ಪಂಚೆಯನ್ನ ಕಟ್ಟಿ ಪರದೆ ಮಾಡಿ ಅದನ್ನ ಹರಿದು ಸಹ ಮಾಡಿದ್ದೆ. ಜೋರಾಗಿ ಹಾಡಿ ಕುಣಿದ್ದದ್ದು ಸಹ ನೆನಪಿದೆ. ಇಂಥ ಕೆಲಸ ಮಾಡಿ ಬೈಸಿಕೊಂಡಿದ್ದಕ್ಕೆ ಲೆಕ್ಕವೇ ಇಲ್ಲ.

ಹತ್ತನೇ ತರಗತಿಗೆ ಬಂದಾಕ್ಷಣ ಚೆನ್ನಾಗಿ ಓದಬೇಕೆಂದು ಮನೆಗೆ ಯೂಪಿಎಸ್ ಹಾಕಿಸಿ ಕಗ್ಗತ್ತಲೆಯಿಂದ ಹೊರ ಬಂದ್ವಿ. ಆದ್ರೂ ಹಳ್ಳಿಗಳಲ್ಲಿ ಗಂಟೆಗಟ್ಟಲೆ ಪವರ್ ಇರಲ್ಲ, ರೈತರಿಗೆ ನೀರಿಲ್ಲ, ಕರೆಂಟ್ ಇಲ್ಲದೆ ಸಿಕ್ಕಾಪಟ್ಟೆ ಕಷ್ಟ ಎಂದು ಕೇಳಿದಾಗಲ್ಲೆಲ್ಲ, ಒಂದರ್ಧ ಘಂಟೆ ಕರೆಂಟ್ ಇಲ್ಲದಿದ್ದರೆ ಎಷ್ಟೆಲ್ಲಾ ತಲೆ ಕೆಡಿಸಿಕೊಳ್ಳುತ್ತೀವಿ ಎಂದು ನಾಚಿಕೆ ಪಡುತ್ತೇನೆ.

ಇಲ್ಲಿ ಸಹ ಕರೆಂಟ್ ಇಲ್ಲ, ಥೀಸಿಸ್ ಸಮಯದಲ್ಲಿ ನಿಜವಾಗ್ಲೂ ಅಳೋದೊಂದು ಬಾಕಿ ಇತ್ತು. ಇಲ್ಲಿ ಪವರ್ ಇಲ್ಲದೆ ಅಡಿಗೆ, ಸ್ನಾನ ಯಾವುದೂ ಆಗುವುದಿಲ್ಲ. ಪಕ್ಕದ ರೂಮಿನ ಹುಡುಗಿಗೆ ಮೇಕಪ್ ಚಿಂತೆ, ಮನೆ ಒಡತಿಗೆ ಅವಳ ಕೂದಲಿನ ಬಣ್ಣದ ಚಿಂತೆ. ನನಗಿಲ್ಲಿ ಕೆಲಸದ ಚಿಂತೆ. ಅಂತೂ ಇಂತೂ ಕಷ್ಟಪಟ್ಟು ಥೀಸೀಸ್ ಮುಗಿಸಿದೆ. ಇನ್ನು ನಿಟ್ಟುಸಿರಿನ ಸಮಯ....

English summary
For many people load shedding means invitation to many problems, but it was utter fun, says Meghana Sudhindra in her weekly Kannada column, Jayanagarada Hudugi. ಕರೆಂಟು ಕೈಕೊಟ್ಟಾಗ ಅಬ್ಬಾ, ಎಷ್ಟು ಮಜಾ ಅಲ್ವಾ?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X